Tag: Cowin

  • ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ನವದೆಹಲಿ: ಕೋವಿನ್ (CoWIN) ಪೋರ್ಟಲ್‌ನಿಂದ ಡೇಟಾ ಸೋರಿಕೆ (Date Leak) ಆರೋಪದ ಮೇಲೆ ಬಿಹಾರ ಮೂಲದ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

    ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಸಂಬಂಧಿಸಿದ ಮಾಹಿತಿಗಳು ಕೋವಿನ್ ಪೋರ್ಟಲ್‌ನಲ್ಲಿ ಸೋರಿಕೆಯಾಗಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಜನರ ಡೇಟಾ ಸೋರಿಕೆಯನ್ನು ಟೆಲಿಗ್ರಾಂ ಆ್ಯಪ್ ಬಳಸಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ನಾಗರಿಕರ ಡೇಟಾ ಸೋರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಕೇಳಿಕೊಂಡಿವೆ. ಆದರೆ ಸರ್ಕಾರ ಕೋವಿನ್ ಪೋರ್ಟಲ್‌ನಲ್ಲಿ ಡೇಟಾ ಗೌಪ್ಯತೆಗೆ ಸಾಕಷ್ಟು ಸುರಕ್ಷತೆಯಿದ್ದು, ಅಂತಹ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಈ ವಿಷಯವನ್ನು ದೇಶದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್ ಪರಿಶೀಲನೆಗೆ ಕಳುಹಿಸಿದ್ದು, ಅದು ತನ್ನ ಆರಂಭಿಕ ವರದಿಯಲ್ಲಿ ಡೇಟಾ ಸೋರಿಕೆ ಟೆಲಿಗ್ರಾಂ ಆ್ಯಪ್ ಮೂಲಕ ಮಾಡಲಾಗಿದೆ ಎಂಬುದನ್ನು ತಿಳಿಸಿದೆ. ಇದೀಗ ಕೋವಿನ್ ಡೇಟಾ ಲೀಕ್ ಆರೋಪದ ಮೇಲೆ ಬಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ 16,200 KG ಅಕ್ಕಿ ವಶಕ್ಕೆ

  • ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?

    ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?

    ನವದೆಹಲಿ: ಕೊರೊನಾ ಅವಧಿಯಲ್ಲಿ ಫೋನ್‌ನಲ್ಲಿ ಇರುತ್ತಿದ್ದ ಹಲವು ಅಪ್ಲಿಕೇಶನ್‌ಗಳ ಗುಂಪಿನಲ್ಲಿ ಆರೋಗ್ಯ ಸೇತು ಆಪ್ ಕೂಡಾ ಒಂದಾಗಿತ್ತು. ಕೊರೊನಾ ಸಮಯದಲ್ಲಿ ರೈಲು ಅಥವಾ ವಿಮಾನಗಳಲ್ಲಿ ಪ್ರಯಾಣಿಸಲು ಈ ಅಪ್ಲಿಕೇಶನ್ ಅತ್ಯಗತ್ಯವಾಗಿತ್ತು. ಈ ಅಪ್ಲಿಕೇಶನ್ ಅನ್ನು ತೋರಿಸುವ ಮೂಲಕವೂ, ಕಚೇರಿ, ಸಂಸ್ಥೆಗಳು ಸೇರಿದಂತೆ ನಮಗೆ ಬೇಕಾದ ಸ್ಥಳಕ್ಕೆ ಹೋಗಲು ಅನುಮತಿ ಸಿಗುತ್ತಿತ್ತು.

    ಆದರೆ ಕೊರೊನಾ ಕ್ರಮೇಣ ಕಡಿಮೆಯಾದ ನಂತರ ಅಪ್ಲಿಕೇಶನ್ ಬಳಕೆ ಕಡಿಮೆಯಾಯಿತು. ಇದೀಗ ಕೇಂದ್ರ ಸರ್ಕಾರ ಆರೋಗ್ಯ ಸೇತುವಿನ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ನಿಲ್ಲಿಸಿದೆ. ಅಂದರೆ ಇನ್ನು ಮುಂದೆ ಈ ಆಪ್ ಮೂಲಕ ಯಾವುದೇ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.

    ಈ ಆಪ್‌ನಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ವಿವಿಧ ಮಾಹಿತಿ ಲಭ್ಯವಿತ್ತು. ಇದಲ್ಲದೇ, ಈ ಆಪ್ ಯಾರಾದರೂ ಕೊರೊನಾ ಸೋಂಕಿತ ವ್ಯಕ್ತಿ ಹತ್ತಿರದಲ್ಲಿ ಇದ್ದಾರೋ ಇಲ್ಲವೋ ಎಂದು ತಿಳಿಸುತ್ತದೆ ಎಂದು ಕೇಂದ್ರ ಹೇಳಿಕೊಂಡಿತ್ತು. ಆಪ್‌ನಲ್ಲಿ ಬಳಕೆದಾರರು ಕೊರೊನಾ ರೋಗಲಕ್ಷಣಗಳು ಇದ್ದರೂ ಇಲ್ಲದಿದ್ದರೂ, ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಅಥವಾ ಇಲ್ಲದಿದ್ದರೂ ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿತ್ತು. ಈ ಮೂಲಕ ಆಪ್ ಬಳಕೆದಾರರಿಗೆ ತಾವು ಹೋಗುವ ಪ್ರದೇಶ ಸುರಕ್ಷಿತವಾಗಿದೇಯೇ ಇಲ್ಲವೇ ಎಂಬುದನ್ನು ತಿಳಿಸುತ್ತಿತ್ತು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಆರೋಗ್ಯ ಸೇತು ಇದೀಗ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ಸ್ಥಗಿತಗೊಳಿಸಿರುವುದರಿಂದ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಏಪ್ರಿಲ್ 2020 ರಿಂದ, ಅಪ್ಲಿಕೇಶನ್‌ನ ಬಳಕೆದಾರರಿಂದ ಸಂಗ್ರಹಿಸಲಾದ ಡೇಟಾದ ಸುರಕ್ಷತೆಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

    ಇಂಟರ್ನೆಟ್ ಫ್ರೀಡಂ ಫೌಂಡೇಶನ್(ಐಎಫ್‌ಎಫ್) ಆರೋಗ್ಯ ಸೇತು ಅಪ್ಲಿಕೇಶನ್ ಬಗ್ಗೆ ಆರ್‌ಟಿಐ(ಮಾಹಿತಿ ಹಕ್ಕು ಕಾಯ್ದೆ) ಮೂಲಕ ಸರ್ಕಾರದಿಂದ ಮಾಹಿತಿಯನ್ನು ಕೇಳಿದೆ. ಈ ಹಿನ್ನೆಲೆ ಮೇ 10, 2022 ರಿಂದ ಆರೋಗ್ಯ ಸೇತುವಿನ ‘ಡೇಟಾ ಆಕ್ಸೆಸ್ ಮತ್ತು ಶೇರಿಂಗ್ ಪ್ರೋಟೋಕಾಲ್’ ಅನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ಆರೋಗ್ಯ ಸೇತು ತಯಾರಕ ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ) ವಕ್ತಾರರು, ಆರೋಗ್ಯ ಸೇತು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವುದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: 725.7 ಕೋಟಿ ಡೀಲ್‌ – ಗುಜರಾತ್‌ನ ಫೋರ್ಡ್‌ ಘಟಕ ಖರೀದಿಸಿದ ಟಾಟಾ

    ಕೊರೊನಾ ಹಾವಳಿ ಕಡಿಮೆಯಾದ ನಂತರವೂ ಅನೇಕ ಜನರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ವರ್ಷದ ಏಪ್ರಿಲ್ ಮತ್ತು ಜೂನ್ ನಲ್ಲಿ ಒಟ್ಟು 5 ಲಕ್ಷ ಮಂದಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು 10 ಕೋಟಿಗೂ ಹೆಚ್ಚು ಮಂದಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕೋವಿನ್ ಪೋರ್ಟಲ್ ಅನ್ನು ಆರೋಗ್ಯ ಸೇತು ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಅನೇಕ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಆದರೆ ಅಪ್ಲಿಕೇಶನ್‌ನಲ್ಲಿ ಸಂಗ್ರಹವಾಗಿರುವ ಡೇಟಾ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

    Live Tv
    [brid partner=56869869 player=32851 video=960834 autoplay=true]

  • ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ  CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

    ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

    ನವದೆಹಲಿ: ಈಗ ನಿಮ್ಮ ಲಸಿಕೆ ಮಾಹಿತಿಯ ಜೊತೆಗೆ ಬೇರೆಯವರು ಲಸಿಕೆ ಪಡೆದಿದ್ದಾರಾ ಇಲ್ಲವೋ ಎಂಬ ವಿವರವನ್ನು ನೀವು ಕೋವಿನ್ ವೆಬ್‍ಸೈಟ್‍ನಲ್ಲಿ ಪರಿಶೀಲಿಸಬಹುದು.

    ವ್ಯಾಕ್ಸಿನೇಷನ್ ಮಾಹಿತಿಯನ್ನು ತಿಳಿದುಕೊಳ್ಳಲು CoWIN ಪೋರ್ಟಲ್ ಅನ್ನು ಮತ್ತಷ್ಟು ಅಪ್ಡೇಟ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

    ಕೋವಿನ್ ಪೋರ್ಟಲ್ ನಲ್ಲಿ ವ್ಯಕ್ತಿಯ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಹೆಸರಿನೊಂದಿಗೆ ವ್ಯಕ್ತಿಯ ವ್ಯಾಕ್ಸಿನೇಷನ್ ಸ್ಥಿತಿಯನ್ನು ಪರಿಶೀಲಿಸಲು ಒಟಿಪಿ ಬರುತ್ತದೆ. ಆ ಮೂಲಕ ನೀವು ನಿಮ್ಮ ವ್ಯಾಕ್ಸಿನೇಷನ್ ಬಗ್ಗೆ ತಿಳಿದುಕೊಳ್ಳಬಹುದು. ಇದನ್ನೂ ಓದಿ:  1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    CoWIN ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ‘ನಿಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ತಿಳಿಯಿರಿ’ ಎಂಬ ಹೊಸ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗಿದೆ. Co-WIN/MoHFW ಮೂಲಕ ನಿಮ್ಮ ವ್ಯಾಕ್ಸಿನೇಷನ್ ಬಗ್ಗೆ ಮಾತ್ರವಲ್ಲ ನಿಮ್ಮ ನೆರೆಯವರ ವ್ಯಾಕ್ಸಿನೇಷನ್ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳಬೇಕು. ಅದು ಅವರು ಓಟಿಪಿಯನ್ನು ಶೇರ್ ಮಾಡಿದರೆ ಮಾತ್ರ ಸಾಧ್ಯವಾಗುತ್ತೆ. ಈ ಪರಿಶೀಲಿಸುವ ಘಟಕದ ಅಧಿಕೃತ ಹಕ್ಕುಗಳ ಪ್ರಕಾರ ನಾಗರಿಕರ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ವಿವರಗಳನ್ನು ಪರಿಶೀಲಿಸಲು ಅಥವಾ ಹಿಂಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.

    ಟ್ರಾವೆಲಿಂಗ್ ಏಜೆನ್ಸಿಗಳು, ಕಚೇರಿಗಳು, ಉದ್ಯೋಗದಾತರು, ಮನರಂಜನಾ ಏಜೆನ್ಸಿಗಳು ಅಥವಾ IRCTC  ಎಂತಹ ಸರ್ಕಾರಿ ಏಜೆನ್ಸಿಗಳಂತಹ ಖಾಸಗಿ ಸಂಸ್ಥೆಗಳಿಗೆ ವ್ಯಕ್ತಿಯ ವ್ಯಾಕ್ಸಿನೇಷನ್ ಸ್ಥಿತಿಯನ್ನು ಪರಿಶೀಲಿಸಲು ಈ ಸೇವೆ ಸುಲಭವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ. ಇದನ್ನೂ ಓದಿ: ಸ್ವಚ್ಛ ಸರ್ವೇಕ್ಷಣೆ 2021- ಸತತ 5ನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದ ಇಂದೋರ್

    ಡಿಜಿಟಲ್ ಅಥವಾ ಕಾಗದದ ರೂಪದಲ್ಲಿ ಲಸಿಕೆ ಪ್ರಮಾಣಪತ್ರವನ್ನು ಹೊಂದಿರದ ನಾಗರಿಕರಿಗೆ ಸಹಾಯ ಮಾಡಲು ಹೊಸ ವಿಶೇಷತೆಯನ್ನು ಸೇರಿಸಲಾಗಿದೆ.

  • ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ

    ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ

    ಬೆಂಗಳೂರು: ಲಸಿಕೆ ಪಡೆಯಲು ಆನ್‍ಲೈನ್ ರಿಜಿಸ್ಟ್ರೇಶನ್ ಕಡ್ಡಾಯವಲ್ಲ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಪೂರ್ವ ನೋಂದಣಿ ಅಥವಾ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ. ಗ್ರಾಮೀಣ ಭಾಗದ ಜನರಿಗೆ ಆನ್‍ಲೈನ್ ಕಷ್ಟವಾದ ಹಿನ್ನೆಲೆ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ.

    ಆನ್‍ಲೈನ್ ನೋಂದಣಿ ಸಮಸ್ಯೆ ಹಿನ್ನೆಲೆ ಗ್ರಾಮೀಣ ಭಾಗದ ಜನರಿಗೆ ವ್ಯಾಕ್ಸಿನೇಷನ್ ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಹೊಸ ಆದೇಶದನ್ವಯ 18 ವರ್ಷ ಮೇಲ್ಪಟ್ಟವರು ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ವ್ಯಾಕ್ಸಿನ್ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಲಸಿಕಾ ಕೇಂದ್ರದಲ್ಲಿಯೇ ನೋಂದಣಿ ವ್ಯವಸ್ಥೆ ಇರಲಿದೆ. ಜನರು ನೇರವಾಗಿ ನೋಂದಣಿ ಮಾಡಿಕೊಂಡು ಅದೇ ದಿನ ಲಸಿಕೆ ಪಡೆಯಬಹುದಾಗಿದೆ.

    ಆನ್‍ಲೈನ್ ರಿಜಿಸ್ಟ್ರೇಶನ್ ಇಲ್ಲದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳುವ ಪ್ರಕ್ರಿಯೆ ಯನ್ನು ವಾಕ್ ಇನ್ ಅಂತಾ ಕರೆಯುತ್ತಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕೋ-ವಿನ್‍ನಲ್ಲಿ ರಾಜ್ಯಗಳು ಗ್ರಾಮೀಣ ಅಥವಾ ನಗರ ಎಂದು ವರ್ಗೀಕರಿಸಿದ್ದು, ಒಟ್ಟು 69,995 ವ್ಯಾಕ್ಸಿನೇಷನ್ ಕೇಂದ್ರಗಳು ಇವೆ.

    49,883 ವ್ಯಾಕ್ಸಿನೇಷನ್ ಕೇಂದ್ರಗಳು, ಅಂದರೆ 71% ಗ್ರಾಮೀಣ ಪ್ರದೇಶಗಳಲ್ಲಿವೆ. ಅತಿ ಹೆಚ್ಚು ವ್ಯಾಕ್ಸಿನೇಷನ್ ಸೆಂಟರ್ ಗ್ರಾಮೀಣ ಭಾಗದ ಕಡೆ ಇರುವುದರಿಂದ ಆನ್ ರಿಜಿಸ್ಟ್ರೇಶನ್ ದೊಡ್ಡ ಸಮಸ್ಯೆ ಆಗ್ತಿದೆ ಎಂಬುದು ವರದಿಯಾಗಿದೆ. ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗುತ್ತೆ ಅಂತಾ ಆನ್‍ಲೈನ್ ನೋಂದಣಿ ರದ್ದುಗೊಳಿಸಿ ನೇರವಾಗಿ ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

  • ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ – ಕೋವಿನ್ ಆಪ್‍ನಲ್ಲಿ ನೋಂದಣಿ ಹೇಗೆ?

    ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ – ಕೋವಿನ್ ಆಪ್‍ನಲ್ಲಿ ನೋಂದಣಿ ಹೇಗೆ?

    ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಚಿಸುವವರು ನಾಳೆ ಸಂಜೆ 4 ಗಂಟೆಯಿಂದ ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    ಮೊದಲಿಗೆ www.cowin.gov.in ವೆಬ್‍ಸೈಟ್ ಗೆ  ಹೋಗಿ ನಿಮ್ಮ ಮೊಬೈಲ್ ನಂಬರ್ ನಮೂದು ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‍ಗೆ ವನ್ ಟೈಮ್ ಪಾಸ್‍ವರ್ಡ್ ಬಂದ ಕೂಡಲೇ ಅದನ್ನು ಕೋವಿನ್ ವೆಬ್‍ಸೈಟ್‍ನಲ್ಲಿ ಇರುವ ಓಟಿಪಿ ಬಾಕ್ಸ್ ಗೆ ತುಂಬಬೇಕು. ನಂತರ ನೋಂದಣಿ ಪೇಜ್ ಓಪನ್ ಆಗಲಿದೆ. ಅದರಲ್ಲಿ ನಿಮ್ಮ ಮಾಹಿತಿ ಮತ್ತು ಫೋಟೋ ಐಡಿ ನೀಡಬೇಕಾಗುತ್ತದೆ.

    ನಿಮಗೆ ಶುಗರ್, ಬಿಪಿ ಹಾಗೂ ಇನ್ನಿತರೆ ಕಾಯಿಲೆ ಇದ್ದರೆ ಅದರ ಮಾಹಿತಿಯನ್ನು ಅಲ್ಲಿ ನಮೂದಿಸಬೇಕಾಗುತ್ತದೆ. ಎಲ್ಲವನ್ನು ತುಂಬಿದ ಬಳಿಕ ರಿಜಿಸ್ಟ್ರೇಷನ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಅಕೌಂಟ್ ವಿವರಗಳು ಸ್ಕ್ರೀನ್ ಮೇಲೆ ಕಾಣುತ್ತದೆ. ನಿಗದಿಯಾದ ದಿನದಂದು ಲಸಿಕೆ ಪಡೆಯಬೇಕಾಗುತ್ತದೆ.

    ಕರ್ನಾಟಕ ಸೇರಿ ಹಲವು ರಾಜ್ಯಗಳು ಈಗಾಗಲೇ ವ್ಯಾಕ್ಸಿನ್ ಖರೀದಿ ಮಾಡಿವೆ. ನಾಳೆ ಅಥವಾ ನಾಡಿದ್ದರಲ್ಲಿ ರಾಜ್ಯಕ್ಕೆ ಒಂದು ಕೋಟಿ ಲಸಿಕೆ ಬರಲಿದ್ದು, ರಾಜ್ಯದಲ್ಲಿ ನಿಗದಿಯಂತೆ ಮೇ 1ರಿಂದಲೇ ವ್ಯಾಕ್ಸಿನೇಷನ್ ಶುರುವಾಗಲಿದೆ. ಆದರೆ ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ ತಿಂಗಳಲ್ಲಿ ಲಸಿಕೆ ಸಿಗುವುದು ಅನುಮಾನ. ಈ ಮಧ್ಯೆ, ಮೇ 1ಕ್ಕೆ ರಷ್ಯಾದ ಸ್ಪುಟ್ನಿಕ್ V ಲಸಿಕೆ ಭಾರತ ತಲುಪುವುದು ಬಹುತೇಕ ಪಕ್ಕಾ ಆಗಿದೆ. ಲಸಿಕೆಗಳನ್ನು ಮೊದಲ ಹಡಗು ಭಾರತ ತಲುಪಲಿದೆ. ಆದರೆ ಅವುಗಳ ಸಂಖ್ಯೆ ಎಷ್ಟು ಎನ್ನುವುದು ತಿಳಿದುಬಂದಿಲ್ಲ.