Tag: cow

  • ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೋ ಮಾತೆ ಎಂಟ್ರಿ

    ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೋ ಮಾತೆ ಎಂಟ್ರಿ

    ಗದಗ: 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಆಕಳು ಪಾಲ್ಗೊಂಡು ನೆರೆದಿದ್ದ ಜನರನ್ನು ಆಶ್ಚರ್ಯಚಕಿತಗೊಳಿಸಿರುವ ಘಟನೆ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

    ಮುಳಗುಂದ ಪಟ್ಟಣದ ಗಾಂಧೀಜಿ ಕಟ್ಟೆ ಬಳಿ ಧ್ವಜಾರೋಹಣ ನಡೆಯುತ್ತಿತ್ತು. ಮುಳಗುಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಪಟ್ಟಣ ಪಂಚಾಯತ್ ಅಧಿಕಾರಿ, ಸಿಬ್ಬಂದಿ ಹಾಗೂ ನೂರಾರು ಜನ ಸಾರ್ವಜನಿಕರು ಪಾಲ್ಗೊಂಡಿದ್ದರು. ಅವರ ಮಧ್ಯೆಯೇ ನುಗ್ಗಿ ಧ್ವಜದ ಗಾಂಧೀಜಿ ಕಟ್ಟೆಗೆ ಆಕಳು ಬಂದಿದೆ. ಅಲ್ಲಿದ್ದ ಜವರು ಈ ಆಕಳು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಅಲ್ಲಿಂದ ಕದಲಲಿಲ್ಲ. ಸುಮಾರು ಅರ್ಧ ಗಂಟೆ ಆಕಳು ಓಡಿಸಲು ನೆರೆದವರು ಹರಸಾಹಸ ಪಟ್ಟರು. ಆದರೂ ಗೋ ಮಾತೆ ಮಾತ್ರ ಧ್ವಜಾರೋಹಣ ಮುಗಿಯುವವರೆಗೂ ಅಲ್ಲಿಂದ ಹೋಗಲಿಲ್ಲ. ಇದನ್ನೂ ಓದಿ: ಹರಿದ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಕಾರವಾರದ ನೌಕಾದಳ

    ಗೋ ಮಾತೆ ಕೂಡಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. ನೆರೆದವರನ್ನು ಗೋವಿನ ದೇಶ ಭಕ್ತಿ ಕಂಡು ಆಶ್ಚರ್ಯಚಕಿತರನ್ನಾಗಿ ಮಾಡಿತು. ನಂತರ ಎಲ್ಲರೂ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಗೋವಿಗೆ ನಮಸ್ಕರಿಸಿ ಹೊರಟರು.

  • ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

    ಮಂಡ್ಯ: ಗ್ರಾಮದಲ್ಲಿ ನಿರಂತರವಾಗಿ ಹಸು, ಕರು ಹಾಗೂ ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಜರುಗಿದೆ.

    ದಬ್ಬೇಘಟ್ಟ ಗ್ರಾಮದ ಜಮೀನಿನಲ್ಲಿ ಹಲವು ತಿಂಗಳಿನಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದಲ್ಲದೇ ಹಲವು ಹಸುವಿನ ಕರುಗಳು ಹಾಗೂ ನಾಯಿಗಳ ಮೇಲೆಯೂ ದಾಳಿ ನಡೆಸುತ್ತಿತ್ತು. ಒಮ್ಮೊಮ್ಮೆ ಚಿರತೆ ಗ್ರಾಮ ಸಮೀಪಕ್ಕೂ ಸಹ ಬರುತ್ತಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಮೊದಲ ಹಂತದಲ್ಲಿ ಬೋನ್‍ನನ್ನು ಇಟ್ಟು ಕಾರ್ಯಾಚರಣೆಗೆ ಮುಂದಾಗಿದ್ದರು. ದಬ್ಬೇಘಟ್ಟದ ಜಮೀನು ಒಂದರಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೋನ್ ಇರಿಸಿದ್ದರು. ಇದೀಗ ಇಂದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನ್‍ಗೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ:ಮೇಕೆದಾಟು ಯೋಜನೆಯಲ್ಲಿ ರಾಜಿ ಇಲ್ಲ, ನಮ್ಮ ಪಾಲಿನ ನೆಲ, ಜಲ ಕಬಳಿಸಲು ಪ್ರಯತ್ನ ಮಾಡಿದ್ರೆ ಸರ್ಕಾರ ಬಗ್ಗಲ್ಲ: ಗೋವಿಂದ್ ಕಾರಜೋಳ

  • ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಯಡಿಯೂರಪ್ಪ

    ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಯಡಿಯೂರಪ್ಪ

    ಚಿಕ್ಕಬಳ್ಳಾಪುರ: ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಭೂಮಿ ಕಾಡು ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ ನಾವೆಲ್ಲರು ಇದನ್ನು ಅರಿತುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಕ್ಷೇತ್ರದ ಬಳಿಯ ರಾಷ್ಟ್ರೋತ್ಥಾನ ಗೋಶಾಲೆ ಮಾಧವ ಸೃಷ್ಟಿಗೆ ಇಂದು ಯಡಿಯೂರಪ್ಪ ಭೇಟಿ ನೀಡಿದರು. ರಾಷ್ಟ್ರೋತ್ಥಾನ ಗೋ ಶಾಲೆಯಲ್ಲಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಎಸ್‍ವೈ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಗೋವಿಗೆ ಯಡಿಯೂರಪ್ಪನವರು ಪೂಜೆ ಸಲ್ಲಿಸಿದರು. ಗೋಶಾಲೆಯಲ್ಲಿ ದೇಶಿಯ ಗೋವುಗಳನ್ನು ಕಣ್ತುಂಬಿಕೊಂಡ ಯಡಿಯೂರಪ್ಪ ನವರು ಗೋವುಗಳಿಗೆ ಹಣ್ಣು ತಿನ್ನಿಸಿದರು.

    ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪನವರು, ರಾಷ್ಟ್ರೋತ್ಥಾನ ಗೋ ಶಾಲೆಗೆ ಭೇಟಿ ನೀಡಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತೋಷವಾಗಿದೆ. ಗೋವುಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಭೂಮಿ ಕಾಡು ಗೋವುಗಳ ನಡುವೆ ಅವಿನಾಭವ ಸಂಬಂಧ ಇದೆ. ರಾಷ್ಟ್ರೋತ್ಥಾನ ಪರಿಷತ್ ನ ಈ ಕಾರ್ಯ ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು. ದೇಶಿ ತಳಿಗಳ ಸಂರಕ್ಷಣೆ ಅಭಿವೃದ್ಧಿ ಮಾಡುತ್ತಿರುವ ರಾಷ್ಟ್ರೋತ್ಥಾನ ಗೋ ಶಾಲೆ ಇದರೊಂದಿಗೆ ಕಾಡು, ಗುಡ್ಡಗಾಡು ಮಧ್ಯೆ ಕೃಷಿ ಮಾಡುವ ಕಾಯಕ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಅಭಿನಂದಿಸಿದರು. ಇದನ್ನೂ ಓದಿ: ಬ್ಯಾನ್ ಕೇವಲ ಗಣೇಶ ಹಬ್ಬಕ್ಕೆ ಸೀಮಿತವಾದ್ರೆ ಸುಮ್ನಿರಲ್ಲ: ಸಿಎಂಗೆ ಯತ್ನಾಳ್ ಎಚ್ಚರಿಕೆ

    ಸಿಎಂ ಆಗಿದ್ದಾಗ ಕೃಷಿ ಕಾಯಕಕ್ಕೆ ಜಮೀನು ಮಂಜೂರು ಮಾಡಿದ ಯಡಿಯೂರಪ್ಪನವರಿಗೆ ರಾಷ್ಟ್ರೋತ್ಥಾನ ಗೋ ಶಾಲೆಯ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಈ ಹಿಂದೆ ಬಂದಾಗ ಯಡಿಯೂರಪ್ಪ ನವರು ನೆಟ್ಟಿದ್ದ ಅರಳಿ ಮರವೊಂದು ಬೃಹತ್ ಆಗಿ ಬೆಳೆದು ನಿಂತಿದ್ದು, ಖುದ್ದು ಅರಳಿ ಮರದ ಬಳಿ ತೆರಳಿ ಅರಳಿ ಮರ ವೀಕ್ಷಣೆ ಮಾಡುವ ಮೂಲಕ ಯಡಿಯೂರಪ್ಪನವರು ಸಂತಸಗೊಂಡರು. ನೂರಾರು ಎಕರೆಯ ವಿಶಾಲ ಗುಡ್ಡುಗಾಡು ಪ್ರದೇಶದಲ್ಲಿ 6,500 ವಿವಿಧ ಜಾತಿಯ ಮರಗಳನ್ನು ಬೆಳೆಸಲು ಸಸಿ ನೆಡುವ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ಪರಿಷತ್ ಪ್ರಕಲ್ಪ ಹಮ್ಮಿಕೊಂಡಿದೆ.

    ಬಿಎಸ್‍ವೈ ಗೆ ಪುತ್ರ ವಿಜಯೇಂದ್ರ ಹಾಗೂ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದರು.

  • ಜಮೀನಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಕೆ- ಶಾಕ್‍ನಿಂದ ಮಹಿಳೆ, ಹಸು ಸ್ಥಳದಲ್ಲೇ ಸಾವು

    ಜಮೀನಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಕೆ- ಶಾಕ್‍ನಿಂದ ಮಹಿಳೆ, ಹಸು ಸ್ಥಳದಲ್ಲೇ ಸಾವು

    ಚಿಕ್ಕಮಗಳೂರು: ದನಕರುಗಳು ಬರಬಾರದು ಎಂದು ಜಮೀನಿಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಶಾಕ್‍ನಿಂದ ಮಹಿಳೆ ಹಾಗೂ ಹಸು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು 56 ವರ್ಷದ ಶಾರದಮ್ಮ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕಳೆ ಕೀಳುತ್ತಿದ್ದ ಮೃತ ಶಾರದಮ್ಮ ಹಸುವನ್ನ ಜಮೀನಿನ ಒಂದು ಭಾಗದ ಬದುವಿನಲ್ಲಿ ಕಟ್ಟಿಹಾಕಿದ್ದರು. ಮೇಯುತ್ತಾ ಹೊರಟ ಹಸು ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದೆ. ಹಸು ಬಿದ್ದಿರುವುದನ್ನ ಗಮನಿಸಿದ ಶಾರದಮ್ಮ ಹಸು ಕರೆಂಟ್ ಶಾಕ್‍ನಿಂದ ಸತ್ತಿದೆ ಎಂದು ತಿಳಿಯದೆ ಏಕೆ ಎಂದು ನೋಡಲು ಹೋದಾಗ ಆಕೆ ಕೂಡ ತಂತಿ ಬೇಲಿಯನ್ನ ಹಿಡಿದುಕೊಂಡು ವಿದ್ಯುತ್ ಶಾಕ್‍ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬೆಳಗ್ಗೆಯಿಂದ ತುಂತುರು ಮಳೆ ಬರುತ್ತಿದ್ದು ನೆಲ ಕೂಡ ಹಸಿ ಇತ್ತು. ವಿದ್ಯುತ್ ತಂತಿ ಮುಟ್ಟಿದ ಕೂಡಲೇ ಶಾಕ್ ನಿಂದ ಶಾರದಮ್ಮ ಹಾಗೂ ಹಸು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನ ಗಮನಿಸಿದ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು, ಕೂಡಲೇ ಓಡಿ ಬಂದು ವಿದ್ಯುತ್ ಸಂಪರ್ಕ ತೆಗೆದಿದ್ದಾರೆ. ವಿದ್ಯುತ್ ತಂತಿಯನ್ನು ಹಿಡಿದಿದ್ದ ಶಾರದಮ್ಮಗೆ ಕೋಲಿನಿಂದ ತಳ್ಳಿದ್ದಾರೆ. ಆದರೆ ಅಷ್ಟರಲ್ಲಿ ಶಾರದಮ್ಮ ಹಾಗೂ ಹಸು ಸಾವನ್ನಪ್ಪಿದ್ದರು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

    ಮೃತ ಶಾರದಮ್ಮಗೆ 20 ವರ್ಷದ ಮಗನಿದ್ದಾನೆ. ಕಳೆದ ಏಳು ವರ್ಷದ ಹಿಂದೆ ಶಾರದಮ್ಮ ಪತಿ ಕೂಡ ಅಪಘಾತದಿಂದ ಸಾವನ್ನಪ್ಪಿದ್ದರು. ಇಂದು ತಾಯಿ ಕೂಡ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನನ್ನ ಕಳೆದುಕೊಂಡ ಮಗ ಅನಾಥನಾಗಿದ್ದಾನೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ಗೋವು ಸಾಗಾಟ- ಓರ್ವನ ಬಂಧನ, ಪಿಕಪ್ ಜಪ್ತಿ

    ಅಕ್ರಮ ಗೋವು ಸಾಗಾಟ- ಓರ್ವನ ಬಂಧನ, ಪಿಕಪ್ ಜಪ್ತಿ

    ಉಡುಪಿ: ಆರು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬಂಧಿಸಲಾಗಿದೆ. ಕುಂದಾಪುರ ತಾಲೂಕಿನಿಂದ ಭಟ್ಕಳಕ್ಕೆ ಪಿಕ್ ಅಪ್ ನಲ್ಲಿ ತುಂಬಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಶಬ್ಬೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೈಂದೂರು ಪೋಲಿಸರ ಮಿಂಚಿನ ಕಾರ್ಯಚರಣೆ ಮಾಡಿದ್ದು, ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿ ನೇತ್ರತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಖಚಿತ ಮಾಹಿತಿಯೊಂದಿಗೆ ಭಟ್ಕಳದಲ್ಲಿ ಕಾರ್ಯಚರಣೆ ನಡೆಸಿದ ಪೋಲಿಸರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ತಪಾಸಣೆ ನಡೆಸಿದಾಗ ಆರು ಗೋವುಗಳು ಇರುವುದು ಕಂಡು ಬಂದಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಉಡುಪಿ ಪ್ರವಾಸ- ಜಿಲ್ಲಾಸ್ಪತ್ರೆಗೆ ಗುದ್ದಲಿ ಪೂಜೆ

    ಉಡುಪಿ ಜಿಲ್ಲೆಯ ಬೈಂದೂರಿನಿಂದಲೇ ಗೋವು ಸಾಗಾಟದ ವಾಹನವನ್ನು ಪೋಲಿಸರು ಹಿಂಬಾಲಿಸಿದ್ದಾರೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಬಂಧನ ಪ್ರಕ್ರಿಯೆ ನಡೆದಿದೆ. ಪಿಕಪ್ ನಲ್ಲಿದ್ದ ಆರು ಗೋವನ್ನು ರಕ್ಷಣೆ ಮಾಡಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ

  • ರಸ್ತೆ ಪಕ್ಕದದಲ್ಲಿ ಮಲಗಿದ್ದ ಹಸು ಕಳ್ಳತನ- ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

    ರಸ್ತೆ ಪಕ್ಕದದಲ್ಲಿ ಮಲಗಿದ್ದ ಹಸು ಕಳ್ಳತನ- ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

    – ನೈತಿಕ ಪೊಲೀಸ್ ಗಿರಿಯ ಎಚ್ಚರಿಕೆ ನೀಡಿದ ಭಜರಂಗದಳ

    ಚಿಕ್ಕಮಗಳೂರು: ಮಳ್ಳನಂತೆ ಬಂದು ಹಸುವಿಗೆ ತಿನ್ನಲು ತಿನಿಸು ನೀಡಿ ಅದೇ ಹಸುವನ್ನು ಕದ್ದು ಗಾಡಿಯಲ್ಲಿ ತುಂಬಿಕೊಂಡು ಹೋದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೊರವಲಯದ ಹುಲ್ಲುಮಕ್ಕಿ ಸ್ವದೇಶಿ ಭಂಡಾರದ ಬಳಿ ನಡೆದಿದೆ.

    ಹುಲ್ಲುಮಕ್ಕಿ ಗ್ರಾಮದಲ್ಲಿ ರಸ್ತೆ ಬದಿ ಎರಡು ಹಸುಗಳು ಮಲಗಿದ್ದವು. ಹಸುಗಳು ಮಲಗಿದ್ದ ಜಾಗಕ್ಕೆ ಮಳ್ಳನಂತೆ ಬಂದ ಕಳ್ಳ ಎರಡು ಹಸುಗಳಿಗೂ ತಿನ್ನಲು ಆಹಾರ ಹಾಕಿದ್ದಾನೆ. ಈ ವೇಳೆ ಒಂದು ಹಸುವಿಗೆ ಕೊರಳಿಗೆ ಹಗ್ಗ ಹಾಕಿ ಏಕಾಏಕಿ ಕಾರಿನ ಬಳಿ ಎಳೆದೊಯ್ದು ಕಾರಿಗೆ ತುಂಬಿಕೊಂಡಿದ್ದಾರೆ. ಗೋಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಕೊಪ್ಪ ತಾಲೂಕಿನಲ್ಲಿ ಆಗಾಗ್ಗೆ ಗೋ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದೆ. ಪೊಲೀಸರು ಅಲ್ಲೊಂದು-ಇಲ್ಲೊಂದು ಗೋ ಕಳ್ಳತನ ಪ್ರಕರಣವನ್ನು ಬೇಧಿಸಿದರೂ ಸಂಪೂರ್ಣ ಲಗಾಮು ಬಿದ್ದಿಲ್ಲ. ರೈತರು, ಜನಸಾಮಾನ್ಯರು ರಾಸುಗಳನ್ನ ಸಾಕುವುದೇ ದುಸ್ತರವಾಗಿದೆ. ಜಿಲ್ಲೆಯಲ್ಲಿ ಕೊಟ್ಟಿಗೆಯಲ್ಲಿದ್ದ ಹಸುಗಳನ್ನೂ ಕದ್ದ ಉದಾಹರಣೆಗಳಿವೆ. ಮನೆಯವರಿಗೆ ಗಮನಕ್ಕೆ ಬಂದರೂ ಮಧ್ಯರಾತ್ರಿ ಏನೂ ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾರೆ. ಯಾಕೆಂದರೆ ಕಳ್ಳತನಕ್ಕೆ ಬಂದವರು ಎಲ್ಲಾ ರೀತಿಯಲ್ಲೂ ಸಿದ್ಧರಾಗೇ ಬಂದಿರುತ್ತಾರೆ. ಹಾಗಾಗಿ, ಮನೆಯವರು ಹೊರಬರಲು ಹೆದರುತ್ತಾರೆ.

    ಈ ಕೃತ್ಯವನ್ನು ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆ ತೀವ್ರವಾಗಿ ಖಂಡಿಸಿದೆ. ಭಜರಂಗದಳ ತಾಲೂಕು ಘಟದ ಕಾರ್ಯಕರ್ತರು ಪೊಲೀಸ್ ಇಲಾಖೆ ಗೋ ಕಳ್ಳತನಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಜರಂಗದಳ ಕಾರ್ಯಕರ್ತರೇ ನೈತಿಕ ಪೊಲೀಸ್ ಗಿರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾತ್ರಿ ವೇಳೆ ತಾಲೂಕಿನ ಎಲ್ಲ ಗಡಿಯಲ್ಲೂ ಪೊಲೀಸರು ಸರ್ಪಗಾವಲು ಹಾಕಿ. ಓಡಾಡುವ ಪ್ರತಿಯೊಂದು ಗಾಡಿಯನ್ನೂ ಕೂಲಂಕುಷವಾಗಿ ಪರಿಶೀಲಿಸಿದರೆ ಗೋಕಳ್ಳನಕ್ಕೆ ಸಂಪೂರ್ಣ ಬ್ರೇಕ್ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಗ್ರಹಿಸಿದ್ದಾರೆ.

  • ಐಷಾರಾಮಿ ಕಾರಿನಲ್ಲಿ ಗೋವುಗಳ ಕಳ್ಳತನ- ಆರೋಪಿಗಳು ಅರೆಸ್ಟ್

    ಐಷಾರಾಮಿ ಕಾರಿನಲ್ಲಿ ಗೋವುಗಳ ಕಳ್ಳತನ- ಆರೋಪಿಗಳು ಅರೆಸ್ಟ್

    ಕಾರವಾರ: ಐಷಾರಾಮಿ ವಾಹನದಲ್ಲಿ ಗೋವುಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಗೋಕಳ್ಳರನ್ನು ಶಿರಸಿ ಪೊಲೀಸರು ಬಂಧಿಸಿದ ಘಟನೆ ಕೋಟೆಕೆರೆ ಬಳಿ ನಡೆದಿದೆ.

    ಶಿವಮೊಗ್ಗದ ಮತ್ತೂರು ರಸ್ತೆಯ ಈದ್ಗಾನಗರದ ಅಬ್ದುಲ್ ಅಜೀಜ್, ತಂದೆ ಅಬ್ದುಲ್ ಗಫಾರ (29) ಹಾಗೂ ದಕ್ಷಿಣ ಕನ್ನಡ ಬಜಪೆಯ ಕೊಳಂಜೆ, ಕೊಂಚೂರಿನ ಫೈಜಲ್ ಅಬ್ದುಲ್ ರಜಾಕ್ (36) ಬಂಧಿತ ಆರೋಪಿಗಳು. ಬಂಧನದ ಸಮಯದಲ್ಲಿ ಶಿವಮೊಗ್ಗದ ಇಮ್ರಾನ್, ಅಯಾಸ್ ಹಾಗೂ ರೆಹೆಮಾನ್ ಮೂವರು ಪರಾರಿಯಾಗಿದ್ದು, ಹುಡುಕಾಟ ನಡೆದಿದೆ.

    ಕೋಟೆಕೆರೆ ಜಂಕ್ಷನ್ ಬಳಿ ಪೊಲೀಸರು ನಾಕಾಬಂದಿ ಮಾಡಿ ವಾಹನಗಳನ್ನು ಚಕ್ ಮಾಡುತ್ತಿರುವಾಗ ಫಾರ್ಚುನರ್ ಹಾಗೂ ಕ್ರೇಟಾ ಕಾರನ್ನು ತಡೆದು ನಿಲ್ಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ವಾಹವನ್ನು ಬಿಟ್ಟು ಓಡಿ ಹೊಗಿದ್ದು, ಕ್ರೇಟಾ ಕಾರಿನಲ್ಲಿದ್ದ ಇಬ್ಬರು ಓಡಲು ಪ್ರಯತ್ನಿಸಿದಾಗ ಪೊಲೀಸರು ಹಿಡಿದು ವಿಚಾರಿಸಿದ್ದಾರೆ. ಆರೋಪಿಗಳು ಶಿರಸಿಗೆ ದನಗಳ್ಳತನ ಮಾಡಲು ಬಂದಿದ್ದೇವೆ, ಈ ಹಿಂದೆ ಸಹ ಶಿರಸಿಯಲ್ಲಿ ದನಗಳ್ಳತನ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರೀ ಮಳೆ- ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಆಕಳು, ಕರು ರಕ್ಷಣೆ

    ಭಾರೀ ಮಳೆ- ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಆಕಳು, ಕರು ರಕ್ಷಣೆ

    ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಧರ್ಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪ್ರವಾಹ ಉಂಟಾಗಿ ಜಮೀನಿನ ಕೊಟ್ಟಿಗೆಯಲ್ಲಿ ಸಿಲುಕಿದ್ದ ಒಂದು ಆಕಳು ಮತ್ತು ಕರುವನ್ನು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಸಿರಾಜ್ ಹಳೆಕೋಟಿ ಅವರಿಗೆ ಸೇರಿದ ಆಕಳು ಮತ್ತು ಕರುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ನೀರಿನಲ್ಲಿ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ನೀರಿನಿಂದ ಹೊರಬಂದ ತಕ್ಷಣ ಆಕಳು ಮತ್ತು ಕರು ಮನೆಯತ್ತ ಓಡಿದವು.

    ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

  • ಅಕ್ರಮವಾಗಿ ಸಾಗಿಸುತ್ತಿದ್ದ 71 ಗೋವು, ಕರುಗಳ ರಕ್ಷಣೆ

    ಅಕ್ರಮವಾಗಿ ಸಾಗಿಸುತ್ತಿದ್ದ 71 ಗೋವು, ಕರುಗಳ ರಕ್ಷಣೆ

    ವಿಜಯಪುರ: ಅಕ್ರಮವಾಗಿ ಸಾಗಿಸುತ್ತಿದ್ದ 71 ಆಕಳು ಹಾಗೂ ಕರುಗಳನ್ನು ರಕ್ಷಿಸಿದ ಘಟನೆ ನಗರದ ಇಟ್ಟಂಗಿಹಾಳ ಗ್ರಾಮದಲ್ಲಿಂದು ನಡೆದಿದೆ.

    ಜಿಲ್ಲಾಧಿಕಾರಿ .ಪಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ಎಲ್ಲ ಆಕಳು, ಆಕಳು ಕರುಗಳನ್ನು ವಿಜಯಪುರದಲ್ಲಿನ ಕಗ್ಗೋಡ ಗೋಶಾಲೆಗೆ ಸಾಗಿಸಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಪ್ರಾಣೇಶ್ ಜಹಗೀರ್ ದಾರ್, ಸಹಾಯಕ ನಿರ್ದೇಶಕ ಎಂ.ಸಿ.ಅರಕೇರಿ, ಡಾ.ಉಮೇಶ್ ನಾಲಾ, ಡಾ.ಪ್ರಕಾಶ್ ಗೂಳಪ್ಪ ಗೋಳ್, ಆನಂದ್ ದೇವರ ನಾವದಗಿ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬೆಂಗಳೂರು: ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಹತ್ತಾರು ಗೋವುಗಳನ್ನು ಬಲಿ ಕೊಡಲು ಸಿಲಿಕಾನ್ ಸಿಟಿಗೆ ತರಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆಮುಂದೆ ಕಟ್ಟಿಹಾಕಿದ್ದ ನೂರಾರು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ವಯಸ್ಸಾಗಿರುವ ಎತ್ತುಗಳು ಮತ್ತು ಎಮ್ಮೆಗಳನ್ನು ಮಾತ್ರ ವಧೆ ಮಾಡಲು ರಾಜ್ಯದಲ್ಲಿ ಅವಕಾಶವಿದೆ. ಆದರೆ ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ, ಪೊಲೀಸರ ಕಣ್ತಪ್ಪಿಸಿ ಹತ್ತಾರು ಗೋವುಗಳನ್ನು ತಂದು ಮನೆ ಮುಂದೆ ಕಟ್ಟಿಕೊಂಡಿದ್ದಾರೆ. ದೇವರ ಜೀವನಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆ ಮುಂದೆ ಎತ್ತುಗಳನ್ನು ತಂದು ಕಟ್ಟಿ ಹಾಕಿರುವ ಬಗ್ಗೆ ಸ್ವಯಂ ಸೇವಾ ಸಂಘಟನೆಯ ಸದಸ್ಯರೊಬ್ಬರು ದೂರು ಕೊಟ್ಟಿದ್ದರು. ಇದರ ಅನ್ವಯ ಕಾರ್ಯಚರಣೆಗೆ ಇಳಿದ ಪೊಲೀಸರು ಬಕ್ರೀದ್ ಹಬ್ಬಕ್ಕೆಂದು ಕಡಿಯಲು ತಂದಿದ್ದ ನೂರಾರು ಎತ್ತುಗಳು, ಹಸುಗಳನ್ನು ರಕ್ಷಣೆ ಮಾಡಿದ್ದಾರೆ.  ಇದನ್ನೂ ಓದಿ: ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ

    ಗೋವುಗಳನ್ನು ರಕ್ಷಣೆ ಮಾಡಿದ ಪೊಲೀಸರು, ಸ್ಟೇಷನ್ ಬಳಿ ತಂದಿದ್ದಾರೆ. ಸದ್ಯ ಗೋವುಗಳ ರಕ್ಷಣೆ ಮಾಡಲಾಗಿದ್ದು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಗೋವುಗಳನ್ನು ವಧೆ ಮಾಡಲು ತಂದವರ ಹುಡುಕಾಟ ನಡೆಯುತ್ತಿದೆ.