Tag: cow

  • ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಯ ಮೇಲೆ ಹಸು ದಾಳಿ

    ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಯ ಮೇಲೆ ಹಸು ದಾಳಿ

    ನವದೆಹಲಿ: ವ್ಯಕ್ತಿಯೊಬ್ಬ ನಾಯಿಯೊಂದಕ್ಕೆ ಕಿರುಕುಳ ನೀಡುತ್ತಿದ್ದು, ಅದನ್ನು ನೋಡಿದ ಹಸು ನಾಯಿಯನ್ನು ರಕ್ಷಿಸಿದ್ದು, ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಲಾಗಿದ್ದು, ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ನಾಯಿಯನ್ನು ವ್ಯಕ್ತಿಯೊಬ್ಬ ತನ್ನ ಮೋಜಿಗಾಗಿ ಕಿರುಕುಳ ಕೊಡುತ್ತಿದ್ದ. ನಾಯಿ ನೋವಿನಿಂದ ಕಿರುಚಿ, ನರಳುತ್ತಿದ್ದರೂ ಮನಸ್ಸು ಕರಗದೆ ಹಿಂಸಿಸುತ್ತಿದ್ದನು. ಇದನ್ನೂ ಓದಿ: ತಾಲಿಬಾನ್ ಭಾರತದತ್ತ ಬಂದರೆ ಏರ್ ಸ್ಟ್ರೈಕ್: ಯೋಗಿ ಆದಿತ್ಯನಾಥ್

    ವ್ಯಕ್ತಿಯು ನಾಯಿಯ ಕುತ್ತಿಗೆಯನ್ನು ಮೇಲಕ್ಕೆ ಎತ್ತಿ ಎಳೆದಾಡುತ್ತಿದ್ದನು. ಈ ವೇಳೆ ಇದ್ದಕ್ಕಿದ್ದಂತೆ ಹಸುವೊಂದು ಸ್ಥಳಕ್ಕೆ ನುಗ್ಗಿ ಅಸಹಾಯಕ ನಾಯಿಯನ್ನು ಆ ವ್ಯಕ್ತಿಯಿಂದ ದೂರ ತಳ್ಳಿದೆ. ನಂತರ, ಆ ಹಸು ವ್ಯಕ್ತಿಯ ಮೇಲೆ ದಾಳಿ ನಡೆಸಿ ಬೀಳಿಸಿದೆ.

    ಈ ವೀಡಿಯೋವನ್ನು ಸುಸಂತ ನಂದಾ ಎಎಫ್‍ಎಸ್ ಅವರು ಟ್ವಟ್ಟರ್ ನಲ್ಲಿ ‘ಕರ್ಮ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋವನ್ನು 1.2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದು, 3,000ಕ್ಕೂ ಹೆಚ್ಚು ರೀ ಟ್ವೀಟ್ ಆಗಿದೆ. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ವೀಡಿಯೋಗೆ ನೆಟ್ಟಿಗರು ನಾಯಿಯನ್ನು ಹಿಂಸಿಸುತ್ತಿದ್ದ ವ್ಯಕ್ತಿಗಿಂತ, ಈ ವೀಡಿಯೋ ಮಾಡಿದವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೋ ಮಾಡಿದವರಿಗಿಂತ ಆ ಹಸುವೇ ಉತ್ತಮ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಬಾಬಾ ರಾಮದೇವ್‌

    ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಬಾಬಾ ರಾಮದೇವ್‌

    ತಿರುಪತಿ: ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಲು ಯೋಗ ಗುರು ಬಾಬಾ ರಾಮದೇವ್‌ ಒತ್ತಾಯಿಸಿದ್ದಾರೆ.

    GOVU POOJA

    ಟಿಟಿಡಿ ವತಿಯಿಂದ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಆಯೋಜಿಸಿದ್ದ “ಗೋ ಮಹಾ ಸಮ್ಮೇಳನ”ದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಮಸೂದೆಯನ್ನು ತರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

    ಈ ಸಂಬಂಧ ಟಿಟಿಡಿ ಟ್ರಸ್ಟ್‌ ಬೋರ್ಡ್‌ ಪ್ರಸ್ತಾಪ ಹೊರಡಿಸಿದೆ ಎಂದು ಹೇಳಿದರು.

    ಪತಂಜಲಿ ಪೀಠವು ಈಗಾಗಲೇ ಗೋ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ಗೋವು ಮಹಾ ಸಮ್ಮೇಳನದ ನಿರ್ಣಯಗಳು ಎಲ್ಲ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸುತ್ತಿದೆ ಎಂದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಗೋವು ಮಹಾ ಸಮ್ಮೇಳನ ಕಾರ್ಯಕ್ರಮ ಕುರಿತು ಟಿಟಿಡಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಮಾಹಿತಿ ನೀಡಿತ್ತು. ಈ ವೇಳೆ ಹಿಂದೂ ಧಾರ್ಮಿಕ ಪ್ರಚಾರಕ್ಕಾಗಿ ಇತರ ಟಿಟಿಡಿ ಕಾರ್ಯಕ್ರಮಗಳನ್ನು ಸಿಎಂ ಶ್ಲಾಘಿಸಿದರು. ವಿಶೇಷವಾಗಿ ಟಿಟಿಡಿ ಅಧ್ಯಕ್ಷ ವೈ.ಬಿ.ಸುಬ್ಬಾ ರೆಡ್ಡಿ ಅವರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಬಾಬಾ ರಾಮದೇವ್‌ ತಿಳಿಸಿದರು.

  • 75 ಕೆಜಿ ಪ್ಲಾಸ್ಟಿಕ್ ತಿಂದು ಮೃತಪಟ್ಟ ಹಸು

    75 ಕೆಜಿ ಪ್ಲಾಸ್ಟಿಕ್ ತಿಂದು ಮೃತಪಟ್ಟ ಹಸು

    ಧಾರವಾಡ: ಪ್ಲಾಸ್ಟಿಕ್ ಜೀವ ಸಂಕುಲಕ್ಕೆ ಮಾರಕ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರದ ಜೊತೆಗೆ ಪ್ರತಿಯೊಬ್ಬರ ಜೀವವನ್ನೂ ಉಳಿಸಿ ಎಂಬೆಲ್ಲ ಜಾಗೃತಿಯ ಮಾತುಗಳನ್ನು ಕೇಳುತ್ತಲೇ ಇದ್ದೆವೆ. ಆದರೂ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವ ಬುದ್ಧಿ ಮಾತ್ರ ಜನ ಇನ್ನು ಬಿಟ್ಟಿಲ್ಲ. ಹೀಗೆ ಜನ ಎಸೆದ ಪ್ಲಾಸ್ಟಿಕ್ ಸೇವಿಸಿ ಹಸುವೊಂದು ಧಾರವಾಡದಲ್ಲಿ ಜೀವ ಬಿಟ್ಟಿದೆ.

    ನಗರದ ಕಲ್ಯಾಣ ನಗರ ಬಡಾವಣೆಯಲ್ಲಿ ನಿನ್ನೆ ಹಸುವೊಂದು ಅಸ್ವಸ್ಥಗೊಂಡು ಬಿದ್ದಿತ್ತು. ಅದರ ಹೊಟ್ಟೆಯೂ ಊದಿಕೊಂಡಿತ್ತು. ಆಗ ಸ್ಥಳೀಯರು, ಪ್ರಾಣಿ ಪಕ್ಷಿ ರಕ್ಷಕ ಸೋಮಶೇಖರ್ ಚನ್ನಶೆಟ್ಟಿಯವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅವರು ಬಂದು ನೋಡಿದಾಗ, ಗ್ಯಾಸ್ ಹಿಡಿದು ಹೊಟ್ಟೆ ಹೀಗೆ ಆಗಿರಬಹುದು ಅಂತಾನೇ ತಿಳಿದಿದ್ದರು. ಆದರೆ ಹಸು ಸಾಕಷ್ಟು ಒದ್ದಾಡುತ್ತಿದ್ದಾಗ, ಪಶು ವೈದ್ಯರನ್ನು ಕರೆಸಿದ್ದಾರೆ. ಅವರು ಬಂದು ಪರಿಶೀಲಿಸಿದಾಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ಹಸುವಿನ ಹೊಟ್ಟೆ ಬಗೆದು ಪ್ಲಾಸ್ಟಿಕ್ ಹೊರತೆಗೆದು ಅಪರೇಷನ್ ಸಕ್ಸಸ್ ಮಾಡಿದರಾದರೂ ಹಸು ಮಾತ್ರ ಬದುಕುಳಿದಿಲ್ಲ. ಇದನ್ನೂ ಓದಿ: ಅಪ್ಪು ಅಂತ್ಯಕ್ರಿಯೆ ರಹಸ್ಯ ಪ್ಲ್ಯಾನ್‌ – ಸುರ್ಯೋದಯಕ್ಕೂ ಮುನ್ನ ಅಂತಿಮಯಾನ

    ಹಸುವಿನ ಹೊಟ್ಟೆಯಿಂದ 75 ಕೆಜಿ ಪ್ಲಾಸ್ಟಿಕ್ ತೆಗೆಯಲಾಗಿದೆ. ಇದೇ ಪ್ರದೇಶಗಳಲ್ಲಿ ಅನೇಕ ರೂಮ್ ಗಳಲ್ಲಿ ವಿದ್ಯಾರ್ಥಿಗಳಿದ್ದು, ಪಾರ್ಸಲ್ ಊಟ ತರಿಸುವವರೆಲ್ಲರೂ ಅಳಿದುಳಿದ ಆಹಾರವನ್ನೆಲ್ಲ ಹಾಗೆಯೇ ಪ್ಲಾಸ್ಟಿಕ್ ಸಮೇತ ರಸ್ತೆಗೆ ಎಸೆದು ಬಿಡುತ್ತಿದ್ದಾರೆ. ಹೀಗಾಗಿ ಆಹಾರ ಅರಸಿ ಬರೋ ಹಸುಗಳು, ಬಿಡಾಡಿ ದನಗಳು ಪ್ಲಾಸ್ಟಿಕ್ ಸಮೇತವೇ ಅದನ್ನು ತಿಂದು ಬಿಡುತ್ತಿದ್ದು, ಎಷ್ಟೊ ಬಿಡಾಡಿ ದನಗಳು ಇತ್ತೀಚೆಗೆ  ಪ್ಲಾಸ್ಟಿಕ್ ನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬಿಟ್ಟಿವೆ. ಇಂದು ಅಸುನಿಗೀರೋ ಹಸುವಿನಂತೆಯೇ ನೂರಾರು ಹಸುಗಳು ಧಾರವಾಡದಲ್ಲಿ ಹೊಟ್ಟೆ ಊದಿಸಿಕೊಂಡು ಓಡಾಡುತ್ತಿದ್ದು, ಅವುಗಳ ಪರಿಸ್ಥಿತಿಯೂ ಹೀಗೆ ಆಗುತ್ತದೆ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಎಲ್ಲಿ ಬೇಕಾದಲ್ಲಿ ಎಸೆಯಬೇಡಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.  ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ

  • ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ದಾವಣಗೆರೆ: ಪ್ರೀತಿಯಿಂದ ಸಾಕಿ ಸಲಹಿದ್ದ ಜಾನುವಾರುಗಳು ಶಾರ್ಟ್ ಸರ್ಕ್ಯೂಟ್ ಗೆ ಬಲಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ನವಲೇಹಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಹಸು ಹಾಗೂ ಎಮ್ಮೆ ಮಂಜುನಾಥ್ ಎಂಬವರಿಗೆ ಸೇರಿದ್ದಾಗಿವೆ.

    ಮಂಜುನಾಥ್ ಕುಟುಂಬ ಹಸುಗಳನ್ನು ಕೊಟ್ಟಿಗೆಯಲ್ಲಿ ಬಿಟ್ಟು ಊರಿಗೆ ಹೋಗಿತ್ತು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ 1 ಲಕ್ಷ 40 ಸಾವಿರ ಬೆಲೆಯ 2 ಜರ್ಸಿ ಆಕಳು, 10 ಸಾವಿರ 1 ಕರು, 50 ಸಾವಿರದ 1 ಎಮ್ಮೆ ಸಾವನ್ನಪ್ಪಿವೆ. ಇದನ್ನೂ ಓದಿ: ಇಂದಿನಿಂದ ಹಾಸನಾಂಬೆಯ ದರ್ಶನ ಆರಂಭ

    ಊರಿಂದ ವಾಪಸ್ ಬರುವಷ್ಟರಲ್ಲಿ ಎಮ್ಮೆ ಹಾಗೂ ಹಸು ಕೊಟ್ಟಿಗೆಯಲ್ಲಿ ಸತ್ತು ಬಿದ್ದಿದ್ದವು. ಪ್ರೀತಿಯಿಂದ ಸಾಕಿದ್ದ ಜಾನುವಾರು ಸಾವು ಕಂಡು ಮಂಜುನಾಥ್ ಕುಟುಂಬ ಕಣ್ಣೀರಿಟ್ಟಿದೆ.

  • ಹೃದಯಾಘಾತದಿಂದ ಇನ್ಸ್‌ಪೆಕ್ಟರ್‌ ನಿಧನ

    ಹೃದಯಾಘಾತದಿಂದ ಇನ್ಸ್‌ಪೆಕ್ಟರ್‌ ನಿಧನ

    ಬೆಂಗಳೂರು: ನಗರದ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದ ಇನ್ಸ್‌ಪೆಕ್ಟರ್‌ ಒಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ.

    ಬೆಂಗಳೂರಿನ ಠಾಣೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಮ್ಮದ್ ರಫೀಕ್ ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಇಂದು ರಫೀಕ್ ಎಂದಿನಂತೆ ಬೆಳಗ್ಗೆ ಎದ್ದು ಸ್ಥಾನಕ್ಕೆ ತೆರಳಿದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ವೈದ್ಯರನ್ನು ಮನೆಗೆ ಕರೆಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ರಫೀಕ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಎಸ್‍ಪಿ ವರ್ಗಾವಣೆ ವಾರ್ – ರಾಜಕೀಯ ಪ್ರಭಾವಿಗಳ ಒತ್ತಡ ಆರೋಪ

    ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್ ಸ್ನೇಹ ಜೀವಿಯಾಗಿದ್ದರು. ರಫೀಕ್ ಇತ್ತೀಚೆಗೆ ಖಾಸಗಿ ಚಾನಲ್ ಒಂದರಲ್ಲಿ ಹಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಸುಬ್ರಹ್ಮಣಿ ಜೊತೆ ಶೋ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಅವುಗಳಿಗೆ ಆಹಾರ ನೀಡಿ ಆರೈಕೆ ಮಾಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕರುವೊಂದನ್ನು ಸಾಕುತ್ತಿದ್ದರು. ಆ ಬಳಿಕ ವರ್ಗಾವಣೆಗೊಂಡಾಗ ಆ ಕರುವನ್ನು ಜೊತೆಯಲ್ಲೇ ಕರೆದೊಯ್ದು ಪ್ರಾಣಿ ಪ್ರೀತಿ ತೋರಿಸಿದ್ದರು. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

  • ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    ಅಕ್ರಮವಾಗಿ ಹಸುಗಳ ಸಾಗಣೆ- 5 ಸಾವು, 15 ಗೋವುಗಳ ರಕ್ಷಣೆ

    – ಉಸಿರುಗಟ್ಟಿ ಲಾರಿಯಲ್ಲೇ 5 ಹಸು ಸಾವು

    ಕೋಲಾರ: ಕಳೆದ ರಾತ್ರಿ ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಲಾರಿಯಲ್ಲಿದ್ದ 20ಕ್ಕೂ ಹೆಚ್ಚು ಹಸುಗಳಲ್ಲಿ 5 ಗೋವುಗಳು ಸಾವನ್ನಪ್ಪಿವೆ.

    ಕೋಲಾರ ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕೋಲಾರ ತಾಲೂಕಿನ ವಕ್ಕಲೇರಿ ವೆಂಕಟೇಶ್ ಗೌಡ ಎಂಬುವರ ಫಾರ್ಮ್ ಹೌಸ್ ಗೆ ಕರೆತರಲಾಗಿತ್ತು ಎನ್ನಲಾಗಿದೆ. ಹಸುಗಳಿಗೆ ಮೇವು ನೀಡದೆ ಕೊಲೆ ಮಾಡಿದ ಹಿನ್ನೆಲೆ ಮಾಲೀಕ ವೆಂಕಟೇಶ ಗೌಡ ಹಾಗೂ ಲಾರಿ ಚಾಲಕರಾದ ಇದಾಯಿತ್, ಕಂಸ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತಂದೆ ತಾಲಿಬಾನ್ ವಿರೋಧಿಯಾಗಿದ್ದಕ್ಕೆ ಮಗುವನ್ನು ಗಲ್ಲಿಗೇರಿಸಿದ್ರು

    ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದೆ. ಲಾರಿಗಳಲ್ಲಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಕುರಿತು ತಿಳಿಯುತ್ತಿದ್ದಂದೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.  ಇದನ್ನೂ ಓದಿ:  ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ಲಾರಿಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೋವುಗಳಿದ್ದ ಹಿನ್ನೆಲೆ ಉಸಿರಾಡಲಾಗದೆ, ಕಳೆದೆರಡು ದಿನಗಳಿಂದ ಸರಿಯಾದ ಮೇವು ಇಲ್ಲದೆ ಸುಮಾರು ಐದು ಹಸುಗಳು ಲಾರಿಯಲ್ಲೇ ಸಾವನ್ನಪ್ಪಿವೆ. ಇದರಿಂದ ಲಾರಿಗಳಿಂದ ದುರ್ವಾಸನೆ ಬರುತ್ತಿದ್ದು, ಗೋವುಗಳ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಗ್ರಾಮಸ್ಥರ ಸಹಾಯದಿಂದ ವೇಮಗಲ್ ಪೊಲೀಸರು ಎರಡು ಲಾರಿಗಳನ್ನ ವಶಕ್ಕೆ ಪಡೆದು ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

  • ಖಸಾಯಿಖಾನೆ ಪಾಲಾಗುತ್ತಿದ್ದ  45 ಜಾನುವಾರುಗಳ ರಕ್ಷಣೆ

    ಖಸಾಯಿಖಾನೆ ಪಾಲಾಗುತ್ತಿದ್ದ 45 ಜಾನುವಾರುಗಳ ರಕ್ಷಣೆ

    ನೆಲಮಂಗಲ: ಬೆಳಗಾವಿಯಿಂದ ಬೆಂಗಳೂರಿನ ಖಸಾಯಿಖಾನೆಗೆ ಸಾಗಾಟ ಆಗ್ತಿದ್ದ ಜಾನುವಾರುಗಳನ್ನು ಭಜರಂಗದಳದವರು ರಕ್ಷಣೆ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ನವಯುಗ ಟೋಲ್ ಬಳಿ ಜಾನುವಾರುಗಳ ತುಂಬಿದ ಲಾರಿ ಸಂಚಾರ ಮಾಡುವ ನಿಖರ ಮಾಹಿತಿ ಮೇರೆಗೆ ಭಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.  ಇದನ್ನೂ ಓದಿ: ಬಸ್ ಪಲ್ಟಿ- ಪ್ರಯಾಣಿಕರಿಗೆ ಗಂಭೀರ ಗಾಯ

    ವಾಹನದಲ್ಲಿ ಸುಮಾರು 45 ಜಾನುವಾರುಗಳು ಪತ್ತೆಯಾಗಿವೆ. ಲಾರಿಯಲ್ಲಿದ್ದ ಜಾನುವಾರುಗಳನ್ನು ಲಾರಿ ಸಹಿತ ನೆಲಮಂಗಲ ಟೌನ್ ಪೊಲೀಸರ ವಶಕ್ಕೆ ನೀಡಲಾಗಿದೆ.  ಪೊಲೀಸರ ವಶದಲ್ಲಿದ್ದ ಲಾರಿ ಕೆಲ ಹೊತ್ತಲ್ಲೆ ಹಾಸನ ರಸ್ತೆಯ ಟೋಲ್ ಬಳಿ ಪ್ರತ್ಯಕ್ಷವಾಗಿದ್ದು, ಪೊಲೀಸ್ ಇಲಾಖೆಯೇ ಜಾನುವಾರುಗಳನ್ನು ಸಾಗಾಣೆ ಮಾಡಲು ಸಾಥ್ ಕೊಟ್ಟಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

     

  • 30 ಟನ್ ಗೋವುಗಳ ಕೊಂಬು, ಮೂಳೆ ವಶ – ಮೂರು ಲಾರಿ ಲೋಡ್ ಜಪ್ತಿ

    30 ಟನ್ ಗೋವುಗಳ ಕೊಂಬು, ಮೂಳೆ ವಶ – ಮೂರು ಲಾರಿ ಲೋಡ್ ಜಪ್ತಿ

    ಚಿಕ್ಕಬಳ್ಳಾಪುರ: ಬರೋಬ್ಬರಿ ಮೂರು ಲಾರಿ ಲೋಡ್‍ನಷ್ಟು ಜಾನುವಾರುಗಳ ಕೊಂಬು ಹಾಗೂ ಮೂಳೆಗಳನ್ನು ತುಂಬಿದ್ದ ಬೃಹತ್ ಗಾತ್ರದ ಕಂಟೈನರ್ ಲಾರಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಹೈದರಾಬಾದ್ ಕಡೆಯಿಂದ ಯುಪಿ ನೊಂದಣಿಯ ಬೃಹತ್ ಗಾತ್ರದ ಕಂಟೈನರ್ ಲಾರಿ, ಕ್ಯಾಂಟರ್ ಸೇರಿದಂತೆ ಅಶೋಕ್ ಲೈಲಾಂಡ್‍ನ ಮತ್ತೊಂದು ಗಾಡಿ ಮೂಲಕ ಜಾನುವಾರುಗಳ ಕೊಂಬು, ಮೂಳೆಗಳನ್ನು ಹೊತ್ತು ಮೂರು ವಾಹನಗಳು ಬಾಗೇಪಲ್ಲಿಯಿಂದ ಚಿಕ್ಕ, ಚಿಕ್ಕ ವಾಹನಗಳ ಮೂಲಕ ಅಜ್ಞಾತ ಸ್ಥಳಕ್ಕೆ ರವಾನೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಸಿಪಿಐ ನಾಗರಾಜು ಹಾಗೂ ಎಸ್‍ಐ ಗೋಪಾಲ್ ರೆಡ್ಡಿ ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಂದಾಜು 30 ಟನ್ ಕೊಂಬು ಮೂಳೆಗಳನ್ನು ಜಪ್ತಿ ಮಾಡಿದ್ದಾರೆ.

    ಸದ್ಯ ಲಾರಿ ಚಾಲಕರಾದ ಸದಾಖತ್ ಆಲಿ, ತೌಸಿಫ್, ಮಹಮ್ ಬಷೀರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಬಂಧಿತರ ವಿಚಾರಣೆ ನಡೆಸಿರುವ ಪೊಲೀಸರು, ಬಾಗೇಪಲ್ಲಿಯ ಸ್ಥಳೀಯ ವ್ಯಕ್ತಿಯೋರ್ವ ಈ ಗೋವಿನ ಮೂಳೆ ಕೊಂಬುಗಳನ್ನು ಹೈದರಾಬಾದ್ ನಿಂದ ಎಕ್ಸ್‌ಪೋರ್ಟ್ ಮಾಡಿಕೊಂಡು, ಈ ಮೂಳೆ ಕೊಂಬುಗಳನ್ನು ಪುಡಿ ಮಾಡಿ ಬೇರೆ ಕಡೆಗೆ ರವಾನೆ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಆ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಆತನ ಬಂಧನಕ್ಕೂ ಬಲೆ ಬೀಸಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್

    chikkaballapura cow

    ಇಷ್ಟೊಂದು ಪ್ರಮಾಣದ ಮೂಳೆ, ಕೊಂಬುಗಳು ಸಿಕ್ಕಿದ್ದು ಎಷ್ಟೊಂದು ಗೋವುಗಳ ಹತ್ಯೆ ಆಗಿರಬೇಕು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ. ಸದ್ಯ ಜಾನುವಾರಗಳ ಹತ್ಯಾ ಪ್ರತಿಬಂಧಕ ಹಾಗೂ ಗೋ ಸಂರಕ್ಷಣ ಕಾಯ್ದೆಯಡಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್

  • ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ – ಅಲಹಾಬಾದ್ ಹೈಕೋರ್ಟ್

    ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ – ಅಲಹಾಬಾದ್ ಹೈಕೋರ್ಟ್

    ಅಲಹಾಬಾದ್: ಗೋವುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಗೋಹತ್ಯೆ ತಡೆ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾಗಿದ್ದ ಜಾವೇದ್ ಎಂಬಾತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಶೇಖರ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಗೋವಿನ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕುಗಳ ಪೈಕಿ ಒಂದು ಎಂದು ಪರಿಗಣಿಸಬೇಕು. ಒಂದು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆ ಉಂಟಾದರೆ ದೇಶ ದುರ್ಬಲವಾಗುತ್ತದೆ ಎನ್ನುವುದು ನಮಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟಿದೆ.

    ಆದೇಶದಲ್ಲಿ ಏನಿದೆ?
    ಹಸುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಪ್ರಾಚೀನ ಗ್ರಂಥಗಳಾದ ವೇದ ಮತ್ತು ಮಹಾಭಾರತಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ವಿವರಿಸುವ ಪ್ರಮುಖ ಭಾಗವಾಗಿ ಗೋವನ್ನು ತೋರಿಸಲಾಗಿದೆ ಎಂದು 12 ಪುಟಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : 157 ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ

    ಗೋಮಾಂಸ ತಿನ್ನುವವರಿಗೆ ಮಾತ್ರ ಮೂಲಭೂತ ಹಕ್ಕು ಅನ್ವಯಿಸುವುದಿಲ್ಲ. ಗೋವನ್ನು ಪೂಜಿಸುವವರು, ಆರ್ಥಿಕವಾಗಿ ಹಸುಗಳ ಮೇಲೆ ಅವಲಂಬಿತರಾಗಿರುವವರು ಸಹ ಅರ್ಥಪೂರ್ಣವಾದ ಜೀವನವನ್ನು ನಡೆಸುವರೂ ಹಕ್ಕನ್ನು ಹೊಂದಿದ್ದಾರೆ.

    ಗೋವುಗಳು ಕಲ್ಯಾಣವಾದಾಗ ಮಾತ್ರ ದೇಶವು ಸುರಕ್ಷಿತವಾಗಿರುತ್ತದೆ ಮತ್ತು ಆಗ ದೇಶವು ಏಳಿಗೆಯಾಗುತ್ತದೆ. ಜೀವಿಸುವ ಹಕ್ಕು, ಹತ್ಯೆಗೈಯುವ ಹಕ್ಕಿಗಿಂತಲೂ ದೊಡ್ಡದು. ಗೋಮಾಂಸ ಸೇವನೆಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಗೋಶಾಲೆಗಳ ಹೆಸರಿನಲ್ಲಿ ಮೋಸ ಮಾಡುತ್ತಿರುವವರ ವಿರುದ್ಧ ಕಾನೂನು ಜಾರಿ ಮಾಡಬೇಕು. ಇದನ್ನೂ ಓದಿ : ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

    ಜಾವೇದ್ (59) ಮಾಂಸಕ್ಕಾಗಿ ಹಸುವನ್ನು ಕದ್ದು ಹತ್ಯೆ ಮಾಡಿದ್ದ. ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಹಿಂದೆಯೂ ಈತ ಗೋಹತ್ಯೆಯನ್ನು ಎಸಗಿ ಸಮಾಜದ ಸಾಮರಸ್ಯವನ್ನು ಕದಡಿದ್ದ ಎಂದು ನ್ಯಾಯಮೂರ್ತಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

  • ಅಕ್ರಮ ಸಾಗಾಟದ ವೇಳೆ ಅಪಘಾತವಾಗಿ 20 ಕರುಗಳ ಸಾವು ಪ್ರಕರಣ – 10 ಮಂದಿಯ ಬಂಧನ

    ಅಕ್ರಮ ಸಾಗಾಟದ ವೇಳೆ ಅಪಘಾತವಾಗಿ 20 ಕರುಗಳ ಸಾವು ಪ್ರಕರಣ – 10 ಮಂದಿಯ ಬಂಧನ

    ಹಾಸನ: ಅಕ್ರಮ ಸಾಗಾಟದ ವೇಳೆ ಅಪಘಾತವಾಗಿ 20 ಎಳೆ ಕರುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್, ಪುರುಷೋತ್ತಮ್ ಬಂಧಿತರ ಆರೋಪಿಗಳು.

    ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆಗಸ್ಟ್ 19 ರಂದು ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ರಾತ್ರಿ ಗೂಡ್ಸ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಕರುಗಳಲ್ಲಿ, ಸುಮಾರು 20 ಕರುಗಳು ಮೃತಪಟ್ಟಿದ್ದವು. ಇದನ್ನೂ ಓದಿ: ಪಾಕ್‍ಗೆ ಹಣದ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲಿ: ಅಫ್ಘಾನ್ ಪಾಪ್ ತಾರೆ

    ಅಕ್ರಮ ಸಾಗಾಟದ ವೇಳೆ ಕರುಗಳ ಕಾಲಿಗೆ, ಬಾಯಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡಲಾಗಿತ್ತು. ಈ ಘಟನೆ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಲಿಂಗೇಶ್, ಡಿಸಿ ಆರ್.ಗಿರೀಶ್, ಎಸ್‍ಪಿ ಆರ್. ಶ್ರೀನಿವಾಸ್ ಗೌಡ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಇದೀಗ ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಘಾತದಲ್ಲಿ ಬದುಕುಳಿದಿದ್ದ 20ಕ್ಕೂ ಹೆಚ್ಚು ಕರುಗಳನ್ನು ಪಶು ಇಲಾಖೆ ಅಧಿಕಾರಿಗಳು ಗೋಶಾಲೆಗೆ ಬಿಟ್ಟಿದ್ದಾರೆ.