Tag: cow

  • ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ಗಾಂಧೀನಗರ: ‘ಹರ್ ಘರ್ ತಿರಂಗ’ ಯಾತ್ರೆಯ ರ‍್ಯಾಲಿ ವೇಳೆ ಗುಜರಾತ್‍ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ರಸ್ತೆಯಲ್ಲಿ ಬಿಡಾಡುತ್ತಿದ್ದ ಹಸುಗಳು ದಾಳಿ ನಡೆಸಿರುವ ಘಟನೆ ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ನಡೆದಿದೆ.

    ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಕಾರನ್‍ಪುರ ತರಕಾರಿ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಹಸು ನಿತಿನ್ ಪಟೇಲ್ ಅವರಿಗೆ ತಿವಿದಿದೆ. ಇದರಿಂದಾಗಿ ನಿತಿನ್ ಪಟೇಲ್ ಅವರ ಕಾಲಿಗೆ ಗಾಯವಾಗಿದ್ದು, ನಂತರ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಚಿಕಿತ್ಸೆ ನಂತರ ನಿತಿನ್ ಪಟೇಲ್ ಅವರು ಅಹಮದಾಬಾದ್‍ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಇದೀಗ ನಿತಿನ್ ಪಟೇಲ್ ಅವರು ವೀಲ್ ಚೇರ್ ಮೇಲೆ ಕುಳಿತುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜೈಲಿನ ಕೈದಿಗೆ ಚಿಕನ್ ಪೀಸ್‍ನಲ್ಲಿ ಗಾಂಜಾ ಸಾಗಾಟ- ಪೊಲೀಸರಿಂದ ಜಪ್ತಿ

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಆಕಳು ಸಾಕಿದರೆ ಒಬ್ಬ ವೈದ್ಯನನ್ನ ಸಾಕಿದಂತೆ: ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ

    ಮನೆಯಲ್ಲಿ ಆಕಳು ಸಾಕಿದರೆ ಒಬ್ಬ ವೈದ್ಯನನ್ನ ಸಾಕಿದಂತೆ: ಕಣೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ

    ಚಿಕ್ಕೋಡಿ(ಬೆಳಗಾವಿ): ಈಗ ಎಲ್ಲೆಲ್ಲೂ ಹೈ ಬ್ರೇಡ್ ಗೋ ತಳಿಗಳದ್ದೇ ಕಾರುಬಾರು ಜೋರಾಗಿದೆ. ಇದರ ನಡುವೆ ಸಿಲುಕಿ ನಲುಗುತ್ತಿರುವ ದೇಶಿ ತಳಿ ಸಂತತಿ ಅವಸಾನದತ್ತ ಸಾಗಿದೆ. ರೈತರ ಜೀವನಾಡಿ ದೇಶೀ ಗೋ ತಳಿ ಹೇಳ ಹೆಸರಿಲ್ಲದೆ ನೆಪ್ಪತ್ಯಕ್ಕೆ ಸರಿಯುತ್ತಿವೆ. ಹೀಗಾಗಿ ದೇಶಿ ಗೋ ತಳಿ ಸಂವರ್ಧನೆ ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಒಂದು ಒಳ್ಳೆಯ ಕಾರ್ಯವನ್ನ ಆಯೋಜಿಸಲಾಗಿತ್ತು.

    ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ಪ್ಯಾನ್ ಪೆನೆಲ್ ಶುಗರ್ಸ್ ಸಂಸ್ಥೆಯ ವತಿಯಿಂದ ಸಾವಯವ ಕೃಷಿ ಉತ್ಸವ, ದೇಶಿ ತಳಿ ಹಸು ಸಂವರ್ಧನೆ ಕಾರ್ಯಕ್ರಮ ಹಾಗೂ ಕೃಷಿ ಇಲಾಖೆಯಿಂದ ಕೃಷಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇಶಿ ಗೋ ಸಾಕಾಣಿಕೆ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮನೆಯಲ್ಲಿ ದೇಶಿ ಗೋವುಗಳ ಸಾಕಾಣಿಕೆ ಮಾಡಬೇಕು. ಅದರಿಂದ ಒಂದು ಕುಟುಂಬ ಜೀವನ ನಡೆಸಬಹುದು. ಅಲ್ಲದೇ ಗೋಮಯ, ಗೋಮೂತ್ರ ಹಾಲು ಮೊಸರು ಮಜ್ಜಿಗೆ ಮನುಷ್ಯನ ಆರೋಗ್ಯ ಪ್ರಕೃತಿ ಜೊತೆಗೆ ಕೃಷಿಯಲ್ಲೂ ಕೂಡ ಹಸುವಿನ ಸೆಗಣಿ, ಮೂತ್ರದಿಂದ ಗೋ ಕೃಪಾಮೃತ ತಯಾರಿಸಬಹುದು. ಪ್ರತಿಯೊಬ್ಬ ರೈತರು ತಮ್ಮ ಮನೆಯಲ್ಲಿ ಒಂದು ದೇಶಿ ಹಸು ಸಾಕಬೇಕು. ಇದರಿಂದ ಮನೆಯ ಜನರ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯ ಕಾಪಾಡುವುದಲ್ಲದೇ ಅಂತ ಕೋಲ್ಹಾಪುರ ಕಣೇರಿ ಮಠದ ಸ್ವಾಮೀಜಿ ಹೇಳಿದ್ರು.

    ದೇಶಿ ತಳಿ ಆಕಳು ಸಾಕುವುದರಿಂದ ತುಂಬ ಪ್ರಯೋಜನ ಇದೆ. ಗೋವಿನ ಸಂರಕ್ಷಣೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಲೂ ಸಹಕಾರಿಯಾಗುತ್ತದೆ. ಚಿಕ್ಕೋಡಿ ಉಪವಿಭಾಗದಲ್ಲಿ ಜನರು ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಮತ್ತು ಕೆಮಿಕಲ್ ಗೊಬ್ಬರ ಉಪಯೋಗ ಮಾಡುವುದರಿಂದ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಆದರೆ ಜನರು ಬೇಗನೆ ಬೆಳೆ ಲಾಭಕ್ಕಾಗಿ ಕೆಮಿಕಲ್ ಬಳಸಿ ಬೆಳೆ ಬೆಳೆಯುತ್ತಾರೆ. ಆದರೆ ಅದೇ ಗೋವಿನ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗುತ್ತದೆ. ಆದರೆ ಅದಕ್ಕೆ ಸ್ವಲ್ಪ ಸಮಯ ತಗೆದುಕೊಳ್ಳುತ್ತದೆ. ಅದರಿಂದ ಭವಿಷ್ಯದಲ್ಲಿ ತುಂಬಾ ಪ್ರಯೋಜನಗಳಿವೆ. ಹಾಗಾಗಿ ಈಗಿನ ರೈತಾಪಿ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅಂತ ಕಾರ್ಯಕ್ರಮ ಆಯೋಜಕ ವಿವೇಕರಾವ್ ಪಾಟೀಲ್ ಹೇಳಿದರು.

    ಒಟ್ಟಿನಲ್ಲಿ ದೇಶಿ ಗೋವುಗಳು ರೈತರಿಗೆ ವರದಾನವಿದ್ದಂತೆ. ಅವು ರೈತರಿಗೆ ಗೊಬ್ಬರ, ಉರುವಲು ಕೃಷಿ, ಔಷಧ, ಉಳುಮೆ.. ಹೀಗೆ ನಾನಾ ರೀತಿಯಲ್ಲಿ ಉಪಯುಕ್ತವಾಗಿವೆ. ಇಷ್ಟೆಲ್ಲಾ ಲಾಭವಿರುವ ಭಾರತೀಯ ಗೋವುಗಳ ಸಾಕಾಣಿಕೆ ಬಗ್ಗೆ ರೈತರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದರೆ ಇಂತಹ ಒಳ್ಳೆಯ ಕಾರ್ಯಕ್ರಮಗಳ ಮೂಲಕ ಈಗಿನ ರೈತಾಪಿ ವರ್ಗದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಅಲ್ಲದೇ ಸರ್ಕಾರ ಕೂಡ ದೇಶಿ ಗೋವುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಮುಂದೆ ಬರಬೇಕಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಹಸುವಿನ ಜೊತೆ ಸೆಕ್ಸ್ – ಸಿಸಿಟಿವಿಯಿಂದ ಸಿಕ್ಕಿ ಬಿದ್ದ ವಿಕೃತ ಕಾಮಿ

    ಹಸುವಿನ ಜೊತೆ ಸೆಕ್ಸ್ – ಸಿಸಿಟಿವಿಯಿಂದ ಸಿಕ್ಕಿ ಬಿದ್ದ ವಿಕೃತ ಕಾಮಿ

    ಭೋಪಾಲ್: ಮನುಷ್ಯನು ಯಾವುದೇ ರೀತಿಯ ಪ್ರಾಣಿಗಳ ಜೊತೆ ಸೆಕ್ಸ್ ಮಾಡುವುದು ಕಾನೂನು ಬಾಹಿರವಾಗಿರುತ್ತೆ. ಒಂದು ವೇಳೆ ಒಬ್ಬ ಮನುಷ್ಯ ಏನಾದ್ರೂ ಪ್ರಾಣಿಗಳ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡ್ರೆ ಅದಕ್ಕೆ ಕಾನೂನಿನ ಅಡಿಯಲ್ಲಿ ಶಿಕ್ಷೆಗಳಿವೆ. ಆದರೆ ಮತ್ತೆ-ಮತ್ತೆ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು, ಮಧ್ಯಪ್ರದೇಶದಲ್ಲಿಯೂ ಈ ರೀತಿಯ ಕೃತ್ಯವೊಂದು ಸಿಸಿಟಿವಿ ಮೂಲಕ ಬೆಳಕಿಗೆ ಬಂದಿದೆ.

    ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಹಸುವಿನ ಜೊತೆ ಅಸಹಜ ಕೃತ್ಯ ಎಸಗಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 4 ರಂದು ನಡೆದ ದೀನದಯಾಳ್ ನಗರದ ಮನೆಯೊಂದರಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ವಿಕೃತ ಕಾಮಿ ಮಾಡಿದ ಕೃತ್ಯ ಸೆರೆಯಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ರವಿ ಭಡೋರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: RX100 ಬೈಕಿನ ಹುಟ್ಟುಹಬ್ಬ – ಗೆಳೆಯರಿಗೆ ಬಿಂದಾಸ್ ಪಾರ್ಟಿ ಕೊಟ್ಟ 

    ಸೋಶಿಯಲ್ ಮಿಡಿಯಾದಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ವ್ಯಕ್ತಿ ಹಸುವಿನ ಜೊತೆ ಅಸ್ವಾಭಾವಿಕ ಸಂಭೋಗ ನಡೆಸುತ್ತಿರುವುದು ಕಂಡುಬಂದಿದೆ. ಬಳಿಕ ಗೋಸಂರಕ್ಷಣಾ ಸಂಘಟನೆ ರಾಷ್ಟ್ರೀಯ ಗೌರಕ್ಷಾ ವಾಹಿನಿಯ ವಿಭಾಗೀಯ ಅಧ್ಯಕ್ಷ ನಿರ್ಪತ್ ಸಿಂಗ್ ತೋಮರ್ ಪೊಲೀಸರಿಗೆ ದೂರು ನೀಡಿದ್ದರು.

    ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377(ಅಸ್ವಾಭಾವಿಕ ಅಪರಾಧಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ಹುಡುಕಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂಢನಂಬಿಕೆಗೆ ಮಗಳು ಬಲಿ – ಹೊಡೆದು ಕೊಂದ ಪೋಷಕರು ಈಗ ಅಂದರ್‌ 

    Live Tv
    [brid partner=56869869 player=32851 video=960834 autoplay=true]

  • ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಜೈಪುರ: ರಾಜಾಸ್ಥಾನದ 16 ಜಿಲ್ಲೆಗಳು ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚಮರೋಗ (LSD) ವೈರಸ್ ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಹಸುಗಳ ಮಾರಣಹೋಮ ನಡೆದಿದೆ.

    ಲಿಂಪಿ ವೈರಸ್ (ಲಿಂಪಿ ಚರ್ಮರೋಗ) ಹರಡುತ್ತಿರುವ ಹಿನ್ನೆಲೆಯಲ್ಲಿ, ಸತ್ತ ದನಗಳ ಮೃತದೇಹಗಳಿಂದ ವಿಪರೀತ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸಲು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ರಾಜಾಸ್ಥಾನದ 16 ಜಿಲ್ಲೆಗಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದ್ದು ಸುಮಾರು 4,000 ಹಸುಗಳು ಮೃತಪಟ್ಟಿವೆ. ಗುಜರಾತ್ 20 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, 1,431 ಹಸುಗಳು ಮೃತಪಟ್ಟಿವೆ. 54,161 ಹಸುಗಳು ವೈರಸ್ ಭೀತಿ ಎದುರಿಸುತ್ತಿವೆ. ಕಾಯಿಲೆ ವಿರುದ್ಧ ಹೋರಾಡಲು ಹಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 8 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

    ಇಲ್ಲಿನ ಜೋಧ್‌ಪುರದ ಸಮೀಪದಲ್ಲಿರುವ ಹಲವು ಹಳ್ಳಿಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಲಿಂಪಿ ವೈರಸ್ ಹರಡುವಿಕೆಯಿಂದ ಹಲವಾರು ಹಸುಗಳು, ಎತ್ತುಗಳು ಮತ್ತು ಎಮ್ಮೆಗಳೂ ಸಾವನ್ನಪ್ಪಿವೆ, ಅವುಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

    ಮಳೆಗಾಲ ಇರುವುದರಿಂದ ಇದು ಕೃಷಿಗೆ ಸೂಕ್ತವಾದ ಸಮಯ. ಆದರೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹೊರಗಿನಿಂದ ಯುವಕರನ್ನು ಕೆಲಸ ಮಾಡಲು ಕರೆಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡುತ್ತಿದ್ದಂತೆ ತಾವೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಆತಂಕದಿಂದ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

    ಹಸುವಿನ ಹಾಲನ್ನೂ ಕುಡಿಯುತ್ತಿಲ್ಲ: ಹಸುಗಳಲ್ಲಿ ಲಿಂಪಿ ವೈರಸ್ ಕಂಡುಬರುತ್ತಿರುವುದರಿಂದ ಇಲ್ಲಿನ ಜನ ಹಸುವಿನ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಇದರಿಂದ ಪ್ಯಾಕೆಟ್ ಹಾಲಿನ ಪೌಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳಿಗೂ ಇದನ್ನೇ ಕುಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ ಹಸು!

    ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ ಹಸು!

    ಮಂಡ್ಯ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ತಾಯಿ ಹಸುವೊಂದು ಪತ್ತೆ ಹಚ್ಚಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

    ಈ ಘಟನೆ ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಮನಕಲಕುವ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ತಡರಾತ್ರಿ ಚಿರತೆ ಹೊತ್ತೊಯ್ದಿದೆ. ಹೀಗಾಗಿ ಕರುವನ್ನು ಮಾಲೀಕ ಕೊನ್ನಾಪುರ ಚಂದ್ರಶೇಖರ್ ಹುಡುಕಾಡುತ್ತಿದ್ದರು. ಇದನ್ನೂ ಓದಿ: ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

    ಕರು ಎಲ್ಲೂ ಸಿಗದಿದ್ದಾಗ ಚಂದ್ರಶೇಖರ್ ಅವರು ತಾಯಿ ಹಸುವಿನ ಹಗ್ಗ ಬಿಚ್ಚಿ ಬಿಟ್ಟಿದ್ದರು. ಅಂತೆಯೇ ತಾಯಿ ಹಸು ತನ್ನ ಕರುವಿಗಾಗಿ ಹುಡುಕುತ್ತಾ ಸಾಗಿತ್ತು. ಕೊಟ್ಟಿಗೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದ ಗದ್ದೆ ಬಯಲಿನಲ್ಲಿ ಕರುವನ್ನು ಹಸು ಪತ್ತೆ ಹಚ್ಚಿದೆ.

    ಚಿರತೆ ದಾಳಿಯಿಂದ ಕರು ಪ್ರಾಣಬಿಟ್ಟಿತ್ತು. ಒಟ್ಟಿನಲ್ಲಿ ತನ್ನ ಕರುವಿನ ಮೃತದೇಹ ಪತ್ತೆ ಹಚ್ಚುವ ಮೂಲಕ ತಾಯಿ ಎಲ್ಲರ ಗಮನಸೆಳೆಯುವಂತೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜುನ್ ಸರ್ಜಾ ತಮ್ಮ ಆಕಳು ಕರುವಿಗೆ ಇಟ್ಟ ಹೆಸರು ‘ರಾಧೆ-ಕೃಷ್ಣ’

    ಅರ್ಜುನ್ ಸರ್ಜಾ ತಮ್ಮ ಆಕಳು ಕರುವಿಗೆ ಇಟ್ಟ ಹೆಸರು ‘ರಾಧೆ-ಕೃಷ್ಣ’

    ಟ ಅರ್ಜುನ್ ಸರ್ಜಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಅದರಲ್ಲೂ ದೇಸಿ ಹಸುಗಳನ್ನು ಸಾಕುವುದೆಂದರೆ ಪ್ರಾಣ. ಅವರ ಮನೆಯಲ್ಲಿ ದೇಸಿ ಗೋವುಗಳನ್ನು ಸಾಕಲಾಗಿದೆ. ಅಲ್ಲದೇ, ನಿತ್ಯವೂ ಅವುಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಾರಂತೆ ಅರ್ಜುನ್ ಸರ್ಜಾ. ಇವರು ಮಾತ್ರವಲ್ಲ, ಮಕ್ಕಳು ಕೂಡ ಮೂಕ ಪ್ರಾಣಿಗಳ ಜೊತೆ ತಮ್ಮದೇ ಆದ ಭಾಷೆಯಲ್ಲೂ ಮಾತನಾಡುತ್ತಾರಂತೆ.

    ಅರ್ಜುನ್ ಸರ್ಜಾ ಮನೆಯಲ್ಲಿ ಎರಡು ಪುಟಾಣಿ ಕರುಗಳಿದ್ದು. ಒಂದು ಕರುವಿಗೆ ರಾಧೆ ಮತ್ತು ಕರುವಿಗೆ ಕೃಷ್ಣ ಎಂದು ಹೆಸರಿಟ್ಟು ಪ್ರೀತಿ ತೋರುತ್ತಿದ್ದಾರೆ. ಸರ್ಜಾ ಕುಟುಂಬ ದೈವಭಕ್ತರು ಆಗಿರುವುದರಿಂದ ಗೌರವದಿಂದ ಆ ಕರುಗಳಿಗೆ ಅಂತಹ ಹೆಸರು ಇಟ್ಟಿದ್ದಾರಂತೆ. ಅರ್ಜುನ್ ಪುತ್ರಿ, ನಟಿಯೂ ಆಗಿರುವ ಐಶ್ವರ್ಯಗೆ ಆ ಕರುಗಳೆಂದರೆ, ಎಲ್ಲಿಲ್ಲದ ಪ್ರೀತಿಯಂತೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ದಕ್ಷಿಣ ಸಿನಿಮಾ ರಂಗದ ಖ್ಯಾತ ಈ ನಟ ಕೃಷಿ ಭೂಮಿಯಲ್ಲೂ ಕಾಯಕ ಮಾಡುತ್ತಾರಂತೆ. ಅಲ್ಲದೇ, ಮಕ್ಕಳಿಗೆ ಅದನ್ನು ಹೇಳಿಕೊಟ್ಟಿದ್ದಾರಂತೆ. ಒಂದು ಕಡೆ ಆಂಜನೇಯನ ಭಕ್ತರಾಗಿ ಮತ್ತೊಂದು ಕಡೆ ಪ್ರಾಣಿಗಳ ಪ್ರಿಯರಾಗಿ ಅರ್ಜುನ್ ಅನೇಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಅದರಲ್ಲೂ ಅವರು ನಿರ್ಮಾಣ ಮಾಡಿರುವ ಆಂಜನೇಯನ ದೇವಸ್ಥಾನವನ್ನು ಅಭಿಮಾನಿಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲವಂತೆ.

  • ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಮುಂಬೈ: ಹಸುವಿನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ ಆರೋಪದಡಿ ವಿಕೃತ ಕಾಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು 22 ವರ್ಷದ ದೀಪಕ್ ರಾಜವಾಡೆ ಎಂದು ಗುರುತಿಸಲಾಗಿದ್ದು, ಈತ ಪುಣೆಯ ಕುಸ್ಗಾಂವ್ ನಿವಾಸಿಯಾಗಿದ್ದಾನೆ. ಇದೀಗ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ಮೇ 31 ರಂದು ಈ ಘಟನೆ ನಡೆದಿದ್ದು, ದೂರುದಾರರಾದ ಸತೀಶ್ ದಗ್ದು ಕೊಕರೆ ಅವರು ಹಸು ಏಕಾಏಕಿ ಚಿರಾಡುತ್ತಿರುವುದನ್ನು ಕೇಳಿಸಿಕೊಂಡು ದನದ ಕೊಟ್ಟಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಯುವಕನೋರ್ವ ಬಟ್ಟೆ ಬಿಚ್ಚಿ ಹಸುವಿನ ಮೇಲೆ ಹಲ್ಲೆ ನಡೆಸಿ ಸೆಕ್ಸ್ ಮಾಡುತ್ತಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ- ಮೂವರು ಸಾವು

    police (1)

    ನಂತರ ಆರೋಪಿಯನ್ನು ದೀಪಕ್ ಎಂದು ಸತೀಶ್ ಗುರುತಿಸುತ್ತಿದ್ದಂತೆ, ದನದ ಕೊಟ್ಟಿಗೆ ಬಳಿ ಸತೀಶ್ ಕುಟುಂಬಸ್ಥರು ಜಮಾಯಿಸಿದ್ದಾರೆ. ಬಳಿಕ ತಕ್ಷಣ ದೀಪಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಕೊಟ್ಟಿಗೆ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಕೃತ್ಯ ಸೆರೆಯಾಗಿದೆ.

  • ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ

    ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – ಎರಡು ಹಸುಗಳು ಸಜೀವ ದಹನ

    ಚಿಕ್ಕಮಗಳೂರು: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ರಾಸುಗಳು ಜೀವಂತವಾಗಿ ಸುಟ್ಟು ಹೋಗಿರುವ ಘಟನೆ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ನಡೆದಿದೆ.

    ರೈತ ನಾಗೇಶ್ ಅವರಿಗೆ ಸೇರಿದ ಎರಡು ಹಸುಗಳು ಸಜೀವ ದಹನವಾಗಿದೆ. ಶನಿವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿದೆ. ಶುಕ್ರವಾರ ರಾತ್ರಿ ಶಿವಪುರ ಗ್ರಾಮದ ನಾಗೇಶ್ ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಎರಡು ರಾಸುಗಳನ್ನು ಕಟ್ಟಿದ್ದರು. ಈ ವೇಳೆ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ.

    ರಾಸುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಉಸಿರು ಬಿಟ್ಟಿವೆ. ಮನೆ ಮೇಲೆ ಹಾಗೂ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಬೆಂಕಿ ತಗುಲಿರುವುದು ತಿಳಿದುಬಂದಿದೆ. ಸ್ಥಳೀಯರು ರಾಸುಗಳನ್ನ ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜ

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ವೇಳೆಗಾಗಲೇ ರಾಸುಗಳು ಬೆಂಕಿಯಲ್ಲಿ ಬೆಂದು ಉಸಿರು ಚೆಲ್ಲಿದ್ದವು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅಭಿಷೇಕ್, ಕೊಪ್ಪ ಪಿ.ಎಸ್.ಐ.ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

    ಚಂಡೀಗಢ: ಯಾವುದೇ ಧರ್ಮದ ಬಗ್ಗೆ ಅಗೌರವವನ್ನು ತೋರಿದರೆ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಹೋಶಿಯಾರ್‍ಪುರದಲ್ಲಿ ನಡೆದ ಗೋವುಗಳ ಹತ್ಯೆಯನ್ನು ಪಂಜಾಬ್‍ನ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಖಂಡಿಸಿದ್ದಾರೆ.

    ಹೋಶಿಯಾರ್‍ಪುರದಿಂದ ಸುಮಾರು 36 ಕಿಮೀ ದೂರದಲ್ಲಿರುವ ಜಾನ್ಸ್ ಹಳ್ಳಿಯ ಸಮೀಪದಲ್ಲಿರುವ ರೈಲ್ವೆ ಹಳಿ ಬಳಿ ಶನಿವಾರ ಬೆಳಗ್ಗೆ ಸುಮಾರು 19 ಹಸುಗಳ ಮೃತದೇಹಗಳು ಪತ್ತೆಯಾಗಿವೆ.

    ಈ ಕುರಿತಂತೆ ಪ್ರತಿಕ್ರಿಯಿಸಿದ ಭಗವಂತ್ ಮಾನ್ ಅವರು, ಯಾವುದೇ ಬೆಲೆ ತೆತ್ತಾದರೂ ಪಂಜಾಬ್‍ನಲ್ಲಿ ಶಾಂತಿ ಮತ್ತು ಸಹೋದರತ್ವ ಹದಗೆಡಲು ನಾವು ಬಿಡುವುದಿಲ್ಲ. ಪಂಜಾಬ್‍ನಲ್ಲಿ ಶಾಂತಿ ಕದಡುವ ಸಮಾಜ ವಿರೋಧಿಗಳ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ರಾಜ್ಯದಲ್ಲಿ ಶಾಂತಿ ಮತ್ತು ಭ್ರಾತೃತ್ವವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    ಘಟನೆಯ ತನಿಖೆಗಾಗಿ ಪಂಜಾಬ್ ಗೋವು ಸೇವಾ ಆಯೋಗವು ದ್ವಿಸದಸ್ಯ ಸಮಿತಿಯನ್ನು ರಚಿಸಿದ್ದು, ಈ ವಿಚಾರವಾಗಿ ಏಳು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಪೊಲೀಸ್ ವರಿಷ್ಠಾಧಿಕಾರಿ (ತನಿಖೆ) ಮುಖ್ತಿಯಾರ್ ರೈ ಅವರು, ಜಾನ್ಸ್ ಹಳ್ಳಿಯ ಸಮೀಪದಲ್ಲಿ ರೈಲ್ವೇ ಹಳಿ ಬಳಿ ಕೈಬಿಟ್ಟ ಸ್ಥಳದಲ್ಲಿ ತಲೆ ಇಲ್ಲದ ಕನಿಷ್ಠ 19 ಹಸುಗಳ ಶವಗಳು ಪತ್ತೆಯಾಗಿದ್ದು, ಜೊತೆಗೆ ಆಲೂಗಡ್ಡೆ ತುಂಬಿದ ಸುಮಾರು 12 ಗೋಣಿ ಚೀಲಗಳು ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಸುಗಳನ್ನು ಮತ್ತು ಆಲೂಗಡ್ಡೆ ತುಂಬಿದ ಗೋಣಿ ಚೀಲಗಳನ್ನು ಎಸೆದಿದ್ದಾರೆ. ಗೋಹತ್ಯೆ ಮಾಡಿದ ಬಳಿಕ ಅವುಗಳ ಚರ್ಮವನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಬೆಳಗ್ಗೆ ಸ್ಥಳೀಯರು ಹಸುಗಳು ಸತ್ತಿರುವುದನ್ನು ಕಂಡು ತಾಂಡಾ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

  • ಅಕ್ರಮವಾಗಿ ಎಮ್ಮೆ, ಹಸುಗಳನ್ನ ಸಾಗಿಸುತ್ತಿದ್ದ ವಾಹನ ಲಾಕ್!

    ಅಕ್ರಮವಾಗಿ ಎಮ್ಮೆ, ಹಸುಗಳನ್ನ ಸಾಗಿಸುತ್ತಿದ್ದ ವಾಹನ ಲಾಕ್!

    ಬೆಂಗಳೂರು: ಅಕ್ರಮವಾಗಿ ಹಸು ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಹಿಂದೂ ಸಂಘಟನೆಗಳು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನೈಸ್ ರಸ್ತೆಯಲ್ಲಿ ವಾಹನವೊಂದರಲ್ಲಿ ಹಸು ಮತ್ತು ಎಮ್ಮೆಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಹನ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಎಂಟಕ್ಕೂ ಹೆಚ್ಚು ಎಮ್ಮೆಗಳು ಒದ್ದಾಡುತ್ತಿರುವುದು ಪತ್ತೆಯಾಗಿದೆ. ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದು, ಹಸುಗಳನ್ನು ತುಂಬಿದ್ದ ಮತ್ತೊಂದು ವಾಹನ ಕೂಡಾ ಪರಾರಿಯಾಗಿದೆ. ಇದನ್ನೂ ಓದಿ: ದಾವೂದ್‌ ಇಬ್ರಾಹಿಂ ಸಹೋದರಿ ಮನೆಯಲ್ಲಿ ED ಶೋಧ

    ಅಕ್ರಮವಾಗಿ ನೈಸ್ ರೋಡ್ ಮತ್ತು ನೆಲಮಂಗಲಕ್ಕೆ ಸಂಪರ್ಕಿಸುವ ರಸ್ತೆಯ ಮೂಲಕ ಸಾಗಿಸಲಾಗುತ್ತಿತ್ತು. ಸದ್ಯ ವಾಹನವನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದು ಎಂಟು ಎಮ್ಮೆಗಳನ್ನು ರಕ್ಷಿಸಿದ್ದಾರೆ. ಹಸುಗಳನ್ನು ತುಂಬಿದ್ದ ಮತ್ತೊಂದು ವಾಹನ ಕೂಡ ಪರಾರಿಯಾಗಿದ್ದು, ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ಕ್ಯಾಂಟೇನರ್ ಮೂಲಕ 30ಕ್ಕೂ ಹೆಚ್ಚು ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಕೆಂಗೇರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು