Tag: cow

  • ಹಸುವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಡಿಕ್ಕಿ – ಮೂತ್ರ ವಿಸರ್ಜನೆ ಮಾಡ್ತಿದ್ದಾಗ ಮೈಮೇಲೆ ಬಿದ್ದ ಹಸುವಿನೊಂದಿಗೆ ವ್ಯಕ್ತಿ ಸಾವು

    ಹಸುವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಡಿಕ್ಕಿ – ಮೂತ್ರ ವಿಸರ್ಜನೆ ಮಾಡ್ತಿದ್ದಾಗ ಮೈಮೇಲೆ ಬಿದ್ದ ಹಸುವಿನೊಂದಿಗೆ ವ್ಯಕ್ತಿ ಸಾವು

    ಜೈಪುರ: ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ರೈಲು ಡಿಕ್ಕಿ ಹೊಡೆದು, ಹಸು ಸಾವನ್ನಪ್ಪಿದ್ದಲ್ಲದೇ, ರೈಲ್ವೆ ಅಳಿ ಸಮೀಪದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಸು ಬಿದ್ದು ಆತನೂ ಸಾವಿಗೀಡಾದ ಘಟನೆ ರಾಜಸ್ಥಾನ (Rajasthan) ಅಲ್ವಾರ್ ಜಿಲ್ಲೆಯ ಅರಾವಳಿ ವಿಹಾರ್ ಪೊಲೀಸ್ (Aravali Vihar Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿ-ಜೈಪುರ-ಅಜ್ಮೀರ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದರು. ವೇಗವಾಗಿ ಚಲಿಸುತ್ತಿದ್ದ ರೈಲು ಅಡ್ಡ ಬಂದ ಹಸುವಿಗೆ ಬಡಿದಿದೆ. ರೈಲು ಬಡಿದ ರಭಸಕ್ಕೆ ಹಾರಿದ ಹಸು ಅಳಿಯ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದು, ಹಸುವಿನೊಂದಿಗೆ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮದುವೆಯಾಗುವಂತೆ ಕೇಳಿದ್ದಕ್ಕೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಕೊಂದೇಬಿಟ್ಟ – ಮುಂದೇನಾಯ್ತು?

    ಮೃತ ವ್ಯಕ್ತಿ ಭಾರತೀಯ ರೈಲ್ವೆಯ ನಿವೃತ್ತ ಎಲೆಕ್ಟ್ರಿಷಿಯನ್ ಶಿವದಯಾಳ್ ಶರ್ಮಾ ಎಂದು ಹೇಳಲಾಗಿದೆ. 23 ವರ್ಷಗಳ ಹಿಂದೆ ಶರ್ಮಾ ನಿವೃತ್ತರಾಗಿದ್ದರು. ಮೂತ್ರ ವಿಸರ್ಜನೆ ಮಾಡುವ ವೇಳೆ ಶರ್ಮಾ ಸಾವನ್ನಪ್ಪಿದ್ದಾರೆ ಎಂದು ಶಿವದಯಾಳ್ ಶರ್ಮ ಅವರ ಸಂಬಂಧಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಏನಿದು ಘಟನೆ?
    ಶುಕ್ರವಾರ ಬೆಳಗ್ಗೆ 8.30ರ ವೇಳೆ ಕಾಲಿಮೊರಿ ಗೇಟ್‌ನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪಾಸ್ ಆಗಿತ್ತು. ಈ ವೇಳೆ ಟ್ರೈನ್ ಬಹಳ ವೇಗದಲ್ಲಿದ್ದು, ಹಸುವಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಹಸು 30 ಮೀಟರ್ ದೂರಕ್ಕೆ ಹಾರಿ, ರೈಲ್ವೆ ಟ್ರ‍್ಯಾಕ್‌ನ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿವದಯಾಳ್ ಅವರ ಮೇಲೆ ಬಿದ್ದಿದೆ. ಹಸು ಇದ್ದ ಭಾರ ಹಾಗೂ ರೈಲು ಹೊಡೆದ ರಭಸ ಇವೆಲ್ಲವೂ ಶಿವದಯಾಳ್ ಅವರ ಸಾವಿಗೆ ಕಾರಣವಾಗಿದೆ. ವ್ಯಕ್ತಿಯ ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶಿವದಯಾಳ್ ಅವರ ಜೊತೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದ, ಆತನಿಗೆ ಘಟನೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

  • ಭೀಕರ ಸ್ಫೋಟ – ಡೈರಿ ಫಾರ್ಮ್‌ನಲ್ಲಿದ್ದ 18,000 ಹಸುಗಳು ಸಾವು

    ಭೀಕರ ಸ್ಫೋಟ – ಡೈರಿ ಫಾರ್ಮ್‌ನಲ್ಲಿದ್ದ 18,000 ಹಸುಗಳು ಸಾವು

    ವಾಷಿಂಗ್ಟನ್: ಡೈರಿ ಫಾರ್ಮ್ (Dairy Farm) ಒಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ (Explosion) ಅದರಲ್ಲಿದ್ದ ಬರೋಬ್ಬರಿ 18 ಸಾವಿರ ಹಸುಗಳು (Cows) ಸಾವನ್ನಪ್ಪಿರುವ ಭೀಕರ ಘಟನೆ ಅಮೆರಿಕದ (America) ಟೆಕ್ಸಾಸ್‌ನಲ್ಲಿ (Texas) ನಡೆದಿದೆ.

    ಸ್ಫೋಟ ಸ್ಥಳೀಯ ಕುಟುಂವೊಂದರ ಡೈರಿ ಫಾರ್ಮ್‌ನಲ್ಲಿ ನಡೆದಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

    ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರಿದಾಡಿವೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಉದ್ಭವವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಫಾರ್ಮ್‌ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್

    ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಫಾರ್ಮ್‌ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿಯಂತಹ ಘಟನೆಗಳು ನಡೆದಿರುವುದು ಮೊದಲೇನಲ್ಲ. 2013 ರಿಂದ ಇಂತಹ ಘಟನೆಗಳನ್ನು ಅಮೆರಿಕದಲ್ಲಿ ಪತ್ತೆಹಚ್ಚಲಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಕೋಳಿ ಫಾರ್ಮ್‌ಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗಿದೆ. ಆದರೆ ಟೆಕ್ಸಾಸ್‌ನಲ್ಲಿ ನಡೆದ ಸ್ಫೋಟ ಅಮೆರಿಕದ ಡೈರಿ ಫಾರ್ಮ್‌ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ನಿಯಮ ಉಲ್ಲಂಘನೆ – AAP ಅಭ್ಯರ್ಥಿ ವಿರುದ್ಧ ಮೊಕದ್ದಮೆ ದಾಖಲು

  • ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

    ಲಕ್ನೋ: ಗ್ಯಾಂಗ್‍ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್‍ನನ್ನು (Atiq Ahmed) ಉತ್ತರ ಪ್ರದೇಶಕ್ಕೆ (Uttar Pradesh) ಸ್ಥಳಾಂತರಿಸುವಾಗ ಬೆಂಗಾವಲು ವಾಹನಕ್ಕೆ (Vehicle) ಹಸುವೊಂದು (Cow) ಡಿಕ್ಕಿ ಹೊಡೆದ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಶಿವಪುರಿಯಲ್ಲಿ ಬೆಂಗಾವಲು ಪಡೆ ಪ್ರಯೋಜ್‍ರಾಜ್‍ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ನಂತರ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.

    ಅತಿಕ್ ಅಹ್ಮದ್ ಅವರನ್ನು ಗುಜರಾತ್‍ನ ಸಬರಮತಿ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ನಡುವೆ ಸೋಮವಾರ ಸಂಜೆಯೊಳಗೆ ಪ್ರಯಾಗ್‍ರಾಜ್ ತಲುಪಲಿದೆ.

    ಅತಿಕ್ ಅಹ್ಮದ್‍ನ ಜೈಲಿನಲ್ಲಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅವರನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ʻಫುಟ್ಬಾಲ್ʼ ಚಿಹ್ನೆ ತೆಗೆದುಕೊಂಡ ಕಥೆ ವಿವರಿಸಿದ ಜನಾರ್ದನ ರೆಡ್ಡಿ

    ಇತ್ತೀಚೆಗೆ ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ಹೆಸರಿದೆ. ಈ ವರ್ಷ ಫೆಬ್ರವರಿ 24 ರಂದು ಪ್ರಯಾಗ್‍ರಾಜ್‍ನಲ್ಲಿರುವ ಅವರ ನಿವಾಸದ ಹೊರಗೆ ಉಮೇಶ್ ಪಾಲ್‍ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನ

  • ಗೋವಾಕ್ಕೆ ಗೋ ಮಾಂಸ ರಫ್ತು ಮಾಡುತ್ತಿದ್ದರೆ ಕಾನೂನು ಕ್ರಮ: ಪ್ರಭು ಚೌಹಾಣ್

    ಗೋವಾಕ್ಕೆ ಗೋ ಮಾಂಸ ರಫ್ತು ಮಾಡುತ್ತಿದ್ದರೆ ಕಾನೂನು ಕ್ರಮ: ಪ್ರಭು ಚೌಹಾಣ್

    ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ 1,329 ಕೇಸು ದಾಖಲಿಸಿದ್ದು, 10 ಸಾವಿರ ಹಸು (Cow) ಗಳ ರಕ್ಷಣೆ ಮಾಡಲಾಗಿದೆ. ಗೋವಾಗೆ ದನದ ಮಾಂಸ ಕಳಿಸುತ್ತಿರುವ ಆರೋಪದ ಕುರಿತು ಪರಿಶೀಲನೆ ನಡೆಸಿ ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan) ತಿಳಿಸಿದ್ದಾರೆ.

    ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಕೇಳಿದರು. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಗೋವಾಕ್ಕೆ ಪ್ರತಿದಿನ ರಫ್ತು ಮಾಡಲಾಗುವ ದನ ಮತ್ತು ಎಮ್ಮೆ ಮಾಂಸದ ಪ್ರಮಾಣದ ಕುರಿತು ಪ್ರಶ್ನೆ ಕೇಳಿದರು. ಇದನ್ನೂ ಓದಿ: ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್

    ಇದಕ್ಕೆ ಉತ್ತರಿಸಿದ ಸಚಿವ ಪ್ರಭು ಚೌಹಾಣ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲೂ ಜಾನುವಾರುಗಳ ಮಾಂಸದ ರಫ್ತು ಮಾಡುವ ಅಂಕಿ-ಅಂಶಗಳ ಮಾಹಿತಿಯನ್ನು ಇಲಾಖೆ ನಿರ್ವಹಿಸುವುದಿಲ್ಲ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರಲ್ಲ. ಆದರೂ ನಗರಾಭಿವೃದ್ಧಿ ಇಲಾಖೆ, ವಾಣಿಜ್ಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಮತ್ತು ಆರ್ಥಿಕ ಇಲಾಖೆ (ಜಿಎಸ್‌ಟಿ ವಿಭಾಗ) ಗಳಿಂದ ಮಾಹಿತಿ ಕೋರಲಾಗಿತ್ತು.

    ನಗರಾಭಿವೃದ್ಧಿ ಇಲಾಖೆಯು ಈ ಪ್ರಶ್ನೆ ಅನ್ವಯವಾಗಲ್ಲ ಎಂದು ಉತ್ತರಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸದರಿ ಪ್ರಶ್ನೆಯು ಕರ್ನಾಟಕ ರಾಜ್ಯದಿಂದ ಗೋವಾಕ್ಕೆ ಕಳುಹಿಸಲಾಗುತ್ತಿರುವ ಮಾಂಸದ ಬಗ್ಗೆ ಇದ್ದು, ರಫ್ತಿಗೆ ಸಂಬಂಧಿಸಿರುವುದಿಲ್ಲ ಎಂದು ವರದಿ ನೀಡಿದೆ. ಗೋವಾಕ್ಕೆ ದನ ಮತ್ತು ಎಮ್ಮೆ ಮಾಂಸ ರಫ್ತು ಮಾಹಿತಿಯು ಶೂನ್ಯ ಎಂದು ಆರ್ಥಿಕ ಇಲಾಖೆಯು ವರದಿ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕು, ಶೀಘ್ರವೇ ಪ್ರಕರಣದ ವಿಚಾರಣೆ ನಡೆಸಿ- ಸುಪ್ರೀಂಗೆ ವಕೀಲರ ಮನವಿ

    ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ದನದ ಮಾಂಸ ಸಾಗಾಣಿಕೆ ಅಕ್ರಮವಾಗಲಿದೆ. ಎಲ್ಲಿಯೂ ಸಾಗಾಣಿಕೆ ಮಾಡುತ್ತಿಲ್ಲ. ಒಂದು ವೇಳೆ ಗೋವಾಕ್ಕೆ ನಮ್ಮ ರಾಜ್ಯದಿಂದ ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಬೆಂಗಳೂರು: ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ಹಸು, ಎಮ್ಮೆಗಳದ್ದೇ ದೊಡ್ಡ ಟೆನ್ಶನ್ ಆಗಿದೆ. ಕಚೇರಿಗೆ ಹೋಗಬೇಕು ಅಂತ ಕಾರು, ಬೈಕ್ ಹತ್ತಿದ್ರೆ, ರಸ್ತೆಯಲ್ಲಿ ಅವುಗಳನ್ನ ಓಡಿಸೋದೆ ನಿತ್ಯ ಕಾಯಕವಾಗ್ತಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಹಸು, ಎಮ್ಮೆಗಳನ್ನ ಮುಕ್ತಿ ಕೊಡಿಸಿ ಸರ್ ಅಂತ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಗೆ ಟೆಕ್ಕಿಗಳು ರಿಕ್ವೆಸ್ಟ್ ಮಾಡ್ತಿದ್ದಾರೆ.

    ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆ (Buffalo), ಹಸುಗಳು ವಾಹನಗಳಿಗೆ ಅಡ್ಡ ಬರುತ್ತಿವೆ. ಇದರಿಂದ ಆಫೀಸ್‍ಗೆ ಹೋಗಲು ನಿತ್ಯ 40 ರಿಂದ 50 ನಿಮಿಷ ಲೇಟಾಗ್ತಿದೆ. ಸರಿಯಾದ ಸಮಯಕ್ಕೆ ಆಫೀಸ್‍ಗೆ ಹೊಗಲು ಆಗ್ತಿಲ್ಲ ಅಂತ ಎಮ್ಮೆ, ಹಸುಗಳ ಮೇಲೆ ಟೆಕ್ಕಿಗಳು ದೂರು ನೀಡಿದ್ದಾರೆ.‌ ಇದನ್ನೂ ಓದಿ: ಹೆಚ್‌ಡಿಕೆ ಮೇಲೆ ಡಿಕೆಗೆ, ರೇವಣ್ಣ ಮೇಲೆ‌ ಸಿದ್ರಾಮಣ್ಣಗೆ ಸಾಫ್ಟ್ ಕಾರ್ನರಾ?

    ಪ್ರತಿದಿನ ಬೆಳಗ್ಗೆ ಆಫೀಸ್‍ (Office) ಗೆ ಹೋಗೋ ಹೊತ್ತಲ್ಲೇ, ಮಾರ್ಚ್ ಫಾಸ್ಟ್ ಮಾಡೋ ರೀತಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆ, ಹಸುಗಳು ಹೋಗ್ತಿರುತ್ತೆ. ಸರ್ಜಾಪುರ ರಸ್ತೆಯಲ್ಲಿ ಹಲವು ಐಟಿ ಕಂಪನಿಗಳಿದ್ದು, ವಿಪ್ರೋ, ರೇನೋ ಬೋ ಮೂಲಕ ಸರ್ಜಾಪುರ ಮುಖ್ಯ ರಸ್ತೆಯ 2 ಕಿಲೋ ಮೀಟರ್ ವರೆಗೂ ಗುಂಪು ಗುಂಪಾಗಿ ಎಮ್ಮೆ, ಹಸುಗಳು ರಸ್ತೆಗಿಳಿಯುತ್ತಿವೆ. ಇವುಗಳಿಗೆ ಎಷ್ಟೇ ಹಾರ್ನ್ ಮಾಡಿದ್ರೂ ಪಕ್ಕಕ್ಕೇ ಸರಿಯೋದೆ ಇಲ್ಲ. ಕಳೆದ ಆರು ತಿಂಗಳಿನಿಂದ ಈ ರಗಳೆ ಇದ್ದು, ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಕಮಿಷನರ್ (BBMP Commissioner), ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಗೆ ಟ್ಯಾಗ್ ಮಾಡಿ ಎಂಎನ್‍ಸಿ ಟೆಕ್ಕಿಗಳು ಸಾಲು ಸಾಲು ದೂರು ನೀಡಿದ್ದಾರೆ.

    ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಎಮ್ಮೆ, ಹಸುಗಳಿಂದ ಟ್ರಾಫಿಕ್ ಆದಾಗ ಅಲ್ಲಿರುವ ಟ್ರಾಫಿಕ್ ಪೊಲೀಸರೇ ಅವುಗಳನ್ನ ಓಡಿಸ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೆಕ್ಕಿಗಳು ದೂರಿನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರುವಿನ ಮೇಲೆ ಅತ್ಯಾಚಾರ- ವೃದ್ಧ ಪೊಲೀಸ್ ವಶಕ್ಕೆ

    ಕರುವಿನ ಮೇಲೆ ಅತ್ಯಾಚಾರ- ವೃದ್ಧ ಪೊಲೀಸ್ ವಶಕ್ಕೆ

    ಕೋಲಾರ: ಹಸುವಿನ ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಯುವಕನೊಬ್ಬ ಪೊಲೀಸರ ವಶವಾದ ಘಟನೆ ಕೋಲಾರ (Kolar) ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಡಾವಣೆಯಲ್ಲಿ ನಡೆದಿದೆ.

    ಕರು ರಾಮರೆಡ್ಡಿ ಎಂಬವರಿಗೆ ಸೇರಿದ್ದಾಗಿದೆ. 50 ವರ್ಷದ ಶಫೀ ಉಲ್ಲಾ ಕರು (Rape On Calf) ವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಶಫಿ ಈ ಹಿಂದೆಯೂ ಹಸುವಿನ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದಿದ್ದನು. ಆ ಸಂದರ್ಭದಲ್ಲಿ ಗ್ರಾಮಸ್ಥರೇ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೆ ಇದೀಗ ಆತ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್ ಸುಂದರಿಗಾಗಿ ಪತ್ನಿಗೆ ವಿಷವಿಟ್ಟ ಪತಿರಾಯ!

    ಅತ್ಯಾಚಾರಕ್ಕೆ ಒಳಗಾದ ಕರು ಅಸ್ವಸ್ಥಗೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿದ್ದಾರೆ. ಇತ್ತ ಬೇತಮಂಗಲ ಪೊಲೀಸರು ಅರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ

    ಕೃಷಿ ಭೂಮಿಯಲ್ಲಿ ಮೇಯುತ್ತಿದ್ದ ಹಸುಗಳನ್ನು ಗುಂಡಿಟ್ಟು ಕೊಂದ ಎಸ್ಟೇಟ್ ಮಾಲೀಕ

    ಮಡಿಕೇರಿ: ಹುಲ್ಲು ಮೇಯುತ್ತಾ ತನ್ನ ಭೂಮಿಯೊಳಗೆ ನುಗ್ಗಿದ ಕಾರಣಕ್ಕೇ ಎಸ್ಟೇಟ್ ಮಾಲೀಕ 2 ಹಸುಗಳನ್ನು (Cow) ಗುಂಡಿಟ್ಟು (Gunshot) ಕೊಂದಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಎಸ್ಟೇಟ್ ಮಾಲೀಕ ನರೇಂದ್ರ ನಾಯ್ಡು 2 ಹಸುಗಳನ್ನು ಗುಂಡಿಕ್ಕಿ ಕೊಂದಿರುವ ಆರೋಪಿ. ಹಸುಗಳ ಮಾಲೀಕ ಮಣಿ ಹಲವು ಹಸುಗಳನ್ನು ಸಾಕಿದ್ದು, ಹಾಲು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ಮಣಿಯವರ 3 ಹಸುಗಳು ಮೇಯ್ದು ಮನೆಗೆ ಹಿಂತಿರುಗಿರಲಿಲ್ಲ. ಆದರೆ ಒಂದು ಹಸು ತಡರಾತ್ರಿ ಮನೆಗೆ ಮರಳಿದ್ದು, ಅದು ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿ, ಮರುದಿನ ಇತರ 2 ಹಸುಗಳ ಹುಡುಕಾಟಕ್ಕೆ ಮಣಿ ತೆರಳಿದ್ದಾರೆ. ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಹೆಚ್‍ಡಿಕೆಯನ್ನು ಬರಮಾಡಿಕೊಂಡ ಗ್ರಾಮಸ್ಥರು

    ಮಣಿ ತನ್ನ ಇತರ 2 ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಣಿ ಹುಡುಕಾಟಕ್ಕೆ ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ಮೃತದೇಹ ಪತ್ತೆಯಾಗಿದೆ. ಹಸುಗಳ ದೇಹದ ಮೇಲೆ ಗುಂಡೇಟಿನ ಗುರುತುಗಳು ಕಂಡುಬಂದಿದ್ದು, ನರೇಂದ್ರ ನಾಯ್ಡು ತನ್ನ ಹಸುಗಳನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಮಣಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    ಘಟನೆಗೆ ಸಂಬಂಧಿಸಿದಂತೆ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್ಟೇಟ್ ಮಾಲೀಕ ಆರೋಪಿ ನರೇಂದ್ರ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸುವಿನೊಂದಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಪಾಪಿ ಜೈಲುಪಾಲು

    ಹಸುವಿನೊಂದಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಪಾಪಿ ಜೈಲುಪಾಲು

    ಮಡಿಕೇರಿ: ಮೇಯಲು ಕಟ್ಟಿಹಾಕಿದ್ದ ಹಸುವಿನ (Cow) ಮೇಲೆ ಲೈಂಗಿಕ ತೃಷೆ (Sexual Assault) ತೀರಿಸಿಕೊಂಡು ಹೇಯ ಕೃತ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಡಗು (Kodagu) ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಎಂಬಲ್ಲಿ ನಡೆದಿದೆ.

    ನವೆಂಬರ್ 27ರಂದು ಈ ಒಂದು ಹೇಯ್ಯ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು ತಾವು ಸಂತೆಗೆ ಹೋಗಿ ವಾಪಸ್ ಬರುವ ಸಂದರ್ಭ ತಮ್ಮ ಗದ್ದೆಯ ದಾರಿಯಲ್ಲಿ ಮೋಟಾರ್ ಬೈಕ್ ನಿಂತಿದ್ದನ್ನು ಗಮನಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ಎಟಿಎಂಗೆ ಪೂಜೆ – ಕಳ್ಳತನಕ್ಕೆ ಯತ್ನವೋ, ವಾಮಾಚಾರವೋ!?

    ದೇವಯ್ಯ ಮನೆ ಹೋಗಿ ಮೇಯಲು ಬಿಟ್ಟಿದ್ದ ಹಸುವನ್ನು ವಾಪಸ್ ಕೊಟ್ಟಿಗೆಗೆ ತರಲು ಹೋದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿಕ ಕೃತ್ಯ ಎಸಗುತ್ತಿರುವುದನ್ನು ನೋಡಿ ಆತನನ್ನು ಹಿಡಿದು ವಿಚಾರಿಸಿದ್ದಾರೆ. ಆರೋಪಿ ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬಕ್ಕರ್ ಸಿದ್ಧಿಕ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹನಿಟ್ರ್ಯಾಪ್ ಚಕ್ರವ್ಯೂಹ- ಸಂಸಾರ, ಕೆಲಸ, ಎಲ್ಲವೂ ಕಳೆದುಕೊಂಡ ಟೆಕ್ಕಿ!

    ಸಿದ್ಧಿಕ್‌ನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಈ ಸಂದರ್ಭ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ನವದೆಹಲಿ: ಗೋವನ್ನು (Cow) ರಾಷ್ಟ್ರೀಯ ಪ್ರಾಣಿ (National Animal) ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.

    ಇದು ನ್ಯಾಯಲಯದ ಕೆಲಸವಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಅಭಯ್ ಎಸ್.ಓಕಾ ಪೀಠ ಖಾರವಾಗಿ ಪ್ರತಿಕ್ರಿಯಿಸಿದೆ. ಗೋವಂಶ್ ಸೇವಾ ಸದನ್ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಪೀಠ, ಇದು ನ್ಯಾಯಾಲಯದ ಕೆಲಸವೇ? ನೀವು ಇಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ? ಇಂತಹ ವಿಷಯಗಳನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಲ್ಲ ಮತ್ತು ಅರ್ಜಿದಾರರ ಯಾವ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಹೇಳಿ ಎಂದು ಅರ್ಜಿದಾರರಿಗೆ ಕೇಳಿತು. ಇದನ್ನೂ ಓದಿ: ಮಗಳ ಹೆರಿಗೆಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

    ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಗೋಸಂರಕ್ಷಣೆ ಬಹಳ ಮುಖ್ಯವಾದ ವಿಷಯ. ಸರ್ಕಾರವು ಇದನ್ನು ಪರಿಗಣಿಸಲಿ. ನಾನು ಒತ್ತಾಯಿಸುವುದಿಲ್ಲ, ನಾವು ಗೋವುಗಳಿಂದ ಎಲ್ಲವನ್ನೂ ಪಡೆಯುತ್ತೇವೆ ಎಂದು ಹೇಳಿದರು. ಆದಾಗ್ಯೂ, ನ್ಯಾಯಾಲಯವು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು. ಈ ಹಿನ್ನೆಲೆ ಅರ್ಜಿದಾರರು ಅದನ್ನು ಹಿಂಪಡೆಯಲು ನಿರ್ಧರಿಸಿದರು. ಇದನ್ನೂ ಓದಿ:  ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ – ಪೊಲೀಸ್ ಮಹಾಸಂಘ ಸೇರಿ ಎಲ್ಲ ಅರ್ಜಿಗಳು ವಜಾ

    Live Tv
    [brid partner=56869869 player=32851 video=960834 autoplay=true]

  • 60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ

    60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ

    ಚಿಕ್ಕಬಳ್ಳಾಪುರ: ರಾಜಸ್ಥಾನದಲ್ಲಿ (Rajasthana) 60 ಸಾವಿರಕ್ಕೂ ಹೆಚ್ಚು ಹಸುಗಳನ್ನು ಬಲಿ ಪಡೆದಿದ್ದ ಲಂಪಿ ವೈರಸ್ (Lumpy virus) ಇದೀಗ ಕರ್ನಾಟಕಕ್ಕೂ (Karnataka) ಲಗ್ಗೆಯಿಟ್ಟಿದೆ.

    ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯೊಂದರಲ್ಲೇ ನೂರಾರು ಹಸುಗಳಿಗೆ (Cow) ರೋಗ ಕಾಣಿಸಿಕೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಜಾನುವಾರು ಜಾತ್ರೆಯನ್ನೇ ನಿಷೇಧಿಸಿದೆ. ಇದನ್ನೂ ಓದಿ: ಜಗತ್ತನ್ನು ಅಚ್ಚರಿಗೊಳಿಸಿದ ISRO – ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಪ್ರಮಾಣದ ಸೋಡಿಯಂ ಪತ್ತೆಹಚ್ಚಿದ ಚಂದ್ರಯಾನ-2

    ರಾಜಸ್ಥಾನದಲ್ಲಿ (Rajastana) 11 ಲಕ್ಷ ಹಸುಗಳಿಗೆ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ 60 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಹಾಕಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42 ಗ್ರಾಮಗಳಿಗೆ ವೈರಸ್ ಎಂಟ್ರಿ ಕೊಟ್ಟಿದ್ದು, ಕಳೆದ 20 ದಿನಗಳಲ್ಲಿ 184 ಹಸುಗಳಿಗೆ ಕಾಯಿಲೆ ಕಾಣಿಸಿಕೊಂಡಿದೆ. ರೋಗಬಾಧೆಗೆ ತುತ್ತಾಗಿರುವ ಹಸುಗಳು ವಿಲವಿಲ ಒದ್ದಾಡುತ್ತಿವೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಹೈನುಗಾರಿಕೆಯೇ ಕುಲ ಕಸುಬು, ದೈನಂದಿನ ಆರ್ಥಿಕ ಸಂಪನ್ಮೂಲವೂ ಸಹ ಅದೇ ಆಗಿದೆ. ಆದರೀಗ ಹಸುಗಳಿಗೆ ಚರ್ಮಗಂಟು ರೋಗ (Lumpy virus) ಕಾಣಿಸಿಕೊಂಡಿದ್ದು, ಹೈನುಗಾರಿಕೋದ್ಯಮಕ್ಕೆ ಪೆಟ್ಟು ನೀಡುತ್ತಿದೆ. ಇದನ್ನೂ ಓದಿ: ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ

    ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ 20 ದಿನಗಳಿಂದ 184ಕ್ಕೂ ಹೆಚ್ಚು ಹಸುಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. 42 ಗ್ರಾಮಗಳಲ್ಲಿ ಈ ಡೆಡ್ಲಿ ಖಾಯಿಲೆ ಕಾಣಿಸಿಕೊಂಡಿದ್ದು ರೋಗಬಾಧೆಗೆ ತುತ್ತಾಗಿರೋ ಜಾನುವಾರುಗಳು ವಿಲವಿಲ ಒದ್ದಾಡುತ್ತಿವೆ. ರಾಸುಗಳು ವೀಪರೀತ ಜ್ವರಕ್ಕೆ ಒಳಗಾಗುತ್ತಿವೆ. ಮೇವು ತಿನ್ನದೆ, ನೀರು ಕುಡಿಯದೇ ನಿತ್ರಾಣ ಸ್ಥಿತಿಗೆ ತಲುಪಿ ಸಾವನ್ನಪ್ಪುತ್ತಿವೆ. ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ರೋಗಪೀಡಿದ ಹಸುವನ್ನು ಕಚ್ಚಿದ ಸೊಳ್ಳೆ, ನೊಣಗಳಿಂದ ಆರೋಗ್ಯವಂತ ಹಸುಗಳಿಗೂ ಕಾಯಿಲೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಜಾನುವಾರು ಜಾತ್ರೆ ನಿಷೇಧಿಸಿ ಆದೇಶ ಹೊರಡಿಸಿದೆ.

    ಅಕ್ಟೋಬರ್ 1 ರಿಂದ 30ರ ವರೆಗೆ ಜಾನುವಾರು ಜಾತ್ರೆಗಳನ್ನು ಮಾಡುವಂತಿಲ್ಲ ಎಂದು ಆದೇಶಿಸಿದೆ. ಪಶುಪಾಲನಾ ಸೇವಾ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ರೋಗಬಾಧೆಗೆ ಒಳಗಾದ ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿನ ಮತ್ತೆ ಬೆಸೆದ ‘ಲೈಗರ್’ ಸೋಲು

    ಈ ಮಾರಣಾಂತಿಕ ಕಾಯಿಲೆಗೆ ಇನ್ನೂ ನಿಖರವಾದ ಲಸಿಕೆ ಕಂಡುಹಿಡಿದಿಲ್ಲ. ಆದರೂ ಸೋಂಕಿಗೆ ಒಳಗಾದ ಗ್ರಾಮಗಳ 5 ಕಿಮೀ ವ್ಯಾಪ್ತಿಯಲ್ಲೇ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಈ ಮಾರಣಾಂತಿಕ ಕಾಯಿಲೆಯಿಂದ ಹೈನುಗಾರಿಕೋದ್ಯಮಕ್ಕೆ ಪೆಟ್ಟುಬಿದ್ದಂತಾಗಿದೆ.

    Live Tv
    [brid partner=56869869 player=32851 video=960834 autoplay=true]