Tag: cow

  • ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

    ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

    ಬೆಂಗಳೂರು: ಕಿಡಿಗೇಡಿಗಳು ಮೂರು ಹಸುಗಳ (cows) ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ನಡೆದಿದೆ.

    ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ನಿರ್ದೇಶಕರ ಬಳಿ ಕ್ಷಮೆ ಕೋರಿದ ರಶ್ಮಿಕಾ ಮಂದಣ್ಣ

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಾಜ್ಯದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದರು.

    ಕಾಟನ್ ಪೇಟೆ ಠಾಣೆ ಇನ್ಸ್‌ಪೆಕ್ಟರ್‌, ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಶನಿವಾರ ರಾತ್ರಿ ನೈಟ್ ರೌಂಡ್ಸ್ ನಲ್ಲಿದ್ದರು.

     

  • ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಮುಂಬೈ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ (Eknath Shinde) ನೇತೃತ್ವದ ಸರ್ಕಾರವು ಸ್ಥಳೀಯ ಹಸುವಿಗೆ ‘ರಾಜಮಾತೆ’ (Rajyamata) ಸ್ಥಾನಮಾನ ನೀಡಿದೆ.

    ಸರ್ಕಾರದ ಈ ನಿರ್ಧಾರವು ಭಾರತೀಯ ಸಮಾಜದಲ್ಲಿ ಗೋವಿನ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಐತಿಹಾಸಿಕ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

    ವೇದಗಳ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ದೇಶಿ ಗೋವಿನ ಸ್ಥಾನಮಾನ, ಮಾನವನ ಆಹಾರದಲ್ಲಿ ದೇಶಿ ಗೋವಿನ ಹಾಲಿನ ಉಪಯುಕ್ತತೆ, ಆಯುರ್ವೇದ ಔಷಧದಲ್ಲಿ ಗೋಮೂತ್ರ ಮತ್ತು ಗೋಮೂತ್ರದ ಪ್ರಮುಖ ಸ್ಥಾನ, ಪಂಚಗವ್ಯ ಚಿಕಿತ್ಸಾ ವ್ಯವಸ್ಥೆ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇನ್ಮುಂದೆ ದೇಶಿ ಗೋವುಗಳನ್ನು ‘ರಾಜಮಾತಾ ಗೋಮಾತೆ’ ಎಂದು ಕರೆಯಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

    ಹಸುಗಳು ಪ್ರಾಚೀನ ಕಾಲದಿಂದಲೂ ಮಾನವ ಜೀವನದ ಪ್ರಮುಖ ಭಾಗವಾಗಿದೆ. ಅನಾದಿ ಕಾಲದಿಂದಲೂ, ಅದರ ಐತಿಹಾಸಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಗುರುತಿಸಿ ಗೋವಿಗೆ ‘ಕಮರ್ರೆಣು’ ಎಂಬ ಹೆಸರನ್ನು ನೀಡಲಾಯಿತು. ನಾವು ದೇಶಾದ್ಯಂತ ವಿವಿಧ ತಳಿಯ ಗೋವುಗಳನ್ನು ಕಾಣುತ್ತೇವೆ. ಆದಾಗ್ಯೂ, ದೇಶಿ ಹಸುಗಳ ಸಂಖ್ಯೆಯು ಶೀಘ್ರವಾಗಿ ಕ್ಷೀಣಿಸುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವಾಯುಪಡೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಏರ್ ಮಾರ್ಷಲ್ ಎಪಿ ಸಿಂಗ್

    ದೇಶಿ ಹಸುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಂಡು, ಜಾನುವಾರು ಸಾಕಣೆದಾರರು ದೇಶಿ ಹಸುಗಳನ್ನು ಸಾಕಲು ಒತ್ತಾಯಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ದೇಶಿ ಹಸುವನ್ನು ‘ರಾಜಮಾತಾ’ ಎಂದು ಘೋಷಿಸುತ್ತಿದೆ.

  • ಆಕಳು ಮೈ ತೊಳೆಯಲು ನದಿಗೆ ಹೋಗಿದ್ದ ಯುವಕ ನೀರುಪಾಲು

    ಆಕಳು ಮೈ ತೊಳೆಯಲು ನದಿಗೆ ಹೋಗಿದ್ದ ಯುವಕ ನೀರುಪಾಲು

    ಹಾವೇರಿ: ಆಕಳು (Cow) ಮೈ ತೊಳೆಯಲು ಹೋಗಿದ್ದ ವೇಳೆ ಯುವಕನೋರ್ವ ವರದಾ ನದಿಯಲ್ಲಿ (River) ನೀರು ಪಾಲಾದ ಘಟನೆ ಹಾವೇರಿ (Haveri) ತಾಲೂಕಿನ ಹಂದಿಗನೂರು (Handiganur) ಗ್ರಾಮದ ಬಳಿ ನಡೆದಿದೆ.

    ನೀರು ಪಾಲಾದ ಯುವಕನನ್ನು ಗಾಳೆಪ್ಪ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ಗಾಳೆಪ್ಪ ಆಕಳು ಮೇಯಿಸಿಕೊಂಡು ನಂತರ ಆಕಳಿನ ಮೈ ತೊಳೆಯಲು ನದಿಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

    ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರು ಪಾಲಾದ ಗಾಳೆಪ್ಪನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    ಘಟನಾ ಸ್ಥಳದಲ್ಲಿ ಗಾಳೆಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್‌ – ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

  • ಫ್ರಿಡ್ಜ್‌ನಲ್ಲಿಟ್ಟಿದ್ದ ಗೋಮಾಂಸ ವಶ- ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳು ನೆಲಸಮ

    ಫ್ರಿಡ್ಜ್‌ನಲ್ಲಿಟ್ಟಿದ್ದ ಗೋಮಾಂಸ ವಶ- ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳು ನೆಲಸಮ

    ಭೋಪಾಲ್:‌ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಮಾಂಡ್ಲಾದಲ್ಲಿ (Madhyapradesh Mandla) ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ 11 ಮನೆಗಳನ್ನು ಸ್ಥಳೀಯ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಮಂಡ್ಲಾದ ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಗೋವುಗಳನ್ನು ಕೂಡಿಹಾಕಲಾಗಿದೆ ಎಂಬ ಸುಳಿಸು ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ತಿಳಿಸಿದ್ದಾರೆ.

    ಸುಳಿವು ದೊರೆಯುತಿದ್ದಂತೆಯೇ ಪೊಲೀಸ್‌ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದೆ. ಈ ವೇಳೆ ಮನೆಗಳ ಹಿತ್ತಲಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿತ್ತು. ಕೂಡಲೇ 150 ಗೋವುಗಳನ್ನು ವಶಕ್ಕೆ ಪಡೆದುಕೊಂಡೆವು. ಅಲ್ಲದೇ ಮನೆಗಳಲ್ಲಿ ಫ್ರಿಡ್ಜ್‌ನಲ್ಲಿನಲ್ಲಿಟ್ಟಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಗಳ ಕೊಬ್ಬು, ದನದ ಚರ್ಮ ಮತ್ತು ಮೂಳೆಗಳನ್ನು ಕೂಡ ಕೊಠಡಿಯಲ್ಲಿ ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

    ಸ್ಥಳೀಯ ಸರ್ಕಾರಿ ಪಶುವೈದ್ಯರು ವಶಪಡಿಸಿಕೊಂಡ ಮಾಂಸವು ದನದ ಮಾಂಸ ಎಂಬುದನ್ನು ದೃಢಪಡಿಸಿದ್ದಾರೆ. ಇನ್ನು ಡಿಎನ್‌ಎ ಟೆಸ್ಟ್‌ಗಾಗಿ ವಶಕ್ಕೆ ಪಡೆದ ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿರುವುದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ ಎಂದು ಎಸ್‌ಪಿ ವಿವರಿಸಿದ್ದಾರೆ. ಇದನ್ನೂ ಓದಿ: ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

    ಶುಕ್ರವಾರ ರಾತ್ರಿ ಹಸುಗಳು ಮತ್ತು ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 10 ಮಂದಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.

    ವಶಕ್ಕೆ ಪಡೆದ 150 ಗೋವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಗೋವು ಕಳ್ಳಸಾಗಣೆಯ ಕೇಂದ್ರವಾಗಿದೆ. ಗೋಹತ್ಯೆ ಮಾಡಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಕ್ಲೇಚಾ ಹೇಳಿದ್ದಾರೆ.

  • ಒಂದೂವರೆ ವರ್ಷದ ಹಿಂದೆ ಕಳವಾಗಿದ್ದ 1.70 ಲಕ್ಷ ಮೌಲ್ಯದ 2 ಸೀಮೆ ಹಸುಗಳು ಪತ್ತೆ!

    ಒಂದೂವರೆ ವರ್ಷದ ಹಿಂದೆ ಕಳವಾಗಿದ್ದ 1.70 ಲಕ್ಷ ಮೌಲ್ಯದ 2 ಸೀಮೆ ಹಸುಗಳು ಪತ್ತೆ!

    ಕೋಲಾರ: ಹಸುಗಳನ್ನು ಕದ್ದಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಜಾರಕಲ ಹಟ್ಟಿ ಗ್ರಾಮದ ಎ.ಮುನಿರಾಜು ಎಂಬುದಾಗಿ ಗುರುತಿಸಲಾಗಿದೆ.

    ಒಂದೂವರೆ ವರ್ಷಗಳ ಹಿಂದೆ ಈ ಘಟನೆ ಬೂದಿಕೋಟೆ ಸಮೀಪದ ಶ್ರೀರಂಗಬಂ- ಡಹಳ್ಳಿಯಲ್ಲಿ ನಡೆದಿತ್ತು. ಚನ್ನಕೇಶವ ಎಂಬವರ ಶೆಡ್‌ನಲ್ಲಿದ್ದ ಸುಮಾರು 1.70 ಲಕ್ಷ ಮೌಲ್ಯದ ಎರಡು ಸೀಮೆ ಹಸುಗಳು ಕಳವಾಗಿದ್ದವು. ಈ ಸಂಬಂಧ ಹಸುಗಳ ಮಾಲೀಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಕಳವಾಗಿದ್ದ ಹಸುಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.

    ಮಾಲೀಕನ ದೂರು ಸ್ವೀಕರಿಸಿದ ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಆರೋಪಿ ಹಾಗೂ ಹಸುಗಳನ್ನು ಪತ್ತೆ ಮಾಡಿದ್ದಾರೆ.

  • ಗೋವುಗಳನ್ನು ಹಿಡಿದ ಪೊಲೀಸರು- ಹಿಂದೂ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ

    ಗೋವುಗಳನ್ನು ಹಿಡಿದ ಪೊಲೀಸರು- ಹಿಂದೂ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಭಟ್ಕಳ ಭಾಗಕ್ಕೆ ಸಾಗಾಟವಾಗುತಿದ್ದ ಮೂರು ಎಮ್ಮೆಗಳನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ. ಆದರೆ ಭಟ್ಕಳಕ್ಕೆ ಅಕ್ರಮ ಗೋವುಗಳ ಸಾಗಾಟ ಹೆಚ್ಚಾಗುತ್ತಿದೆ ಎಂದು ಹಿಂದೂಪರ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಚೆಕ್ ಪೋಸ್ಟ್ ಅನ್ನು ಹೆಚ್ಚು ತಪಾಸಣೆ ನಡೆಸುವಂತೆ ಠಾಣೆಯ ಸಿಪಿಐ ಚಂದನ್ ಗೋಪಾಲ್ ರವರಿಗೆ ಆಗ್ರಹಿಸಿದ್ದಾರೆ.

    ಈ ವೇಳೆ ಪೊಲೀಸರು ಹಾಗೂ ಹಿಂದೂಪರ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳದಿದ್ದು ಶ್ರೀನಿವಾಸ ನಾಯ್ಕ ಎಂಬಾತನ ನನ್ನು ಸಿಪಿಐ ಎಳೆದಾಡಿದ್ದಾರೆ ಎಂದು ಹಿಂದೂಪರ ಕಾರ್ಯಕರ್ತರು ಆರೋಪಿಸಿದ್ದಾರೆ. ಬಕ್ರೀದ್ ಹತ್ತಿರ ಬರುತಿದ್ದಂತೆ ಗೋ ಸಾಗಾಟ ಭಟ್ಕಳದಲ್ಲಿ ಹೆಚ್ಚಾಗುತ್ತದೆ. ಹೀಗಾಗಿ ಕಠಿಣ ಕ್ರಮ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಗೋವುಗಳ ವಧೆ ಯಾಗುತ್ತದೆ ಎಂಬುದು ಹಿಂದೂಪರ ಹೋರಾಟಗಾರರ ಆರೋಪವಾಗಿದ್ದು, ಕೆಲವು ಸಮಯ ಠಾಣೆ ಎದುರು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

    ಸಾಗರ ರಸ್ತೆ ಕ್ರಾಸ್ ನಲ್ಲಿ ವಶಪಡಿಸಿಕೊಂಡ ಮಹೇಂದ್ರ ಮ್ಯಾಕ್ಸಿ ವಾಹನ, ಮೂರು ಕೋಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಬಾನಕುಳಿಯ ಮಂಜು ನಾಯ್ಕ, ಚಾಲಕ ಚಂದ್ರಪ್ಪ ಹಾಗೂ ಭಟ್ಕಳದ ಜಟ್ಟಪ್ಪ ನಾಯ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

  • 1 ಕೆ.ಜಿ ತುಪ್ಪವನ್ನು 5,000 ರೂ.ಗೆ ಮಾರುತ್ತಿದ್ದೇನೆ: ಯತ್ನಾಳ್

    1 ಕೆ.ಜಿ ತುಪ್ಪವನ್ನು 5,000 ರೂ.ಗೆ ಮಾರುತ್ತಿದ್ದೇನೆ: ಯತ್ನಾಳ್

    ಬೆಳಗಾವಿ: ನಾನು ದೇಶೀಯ ಆಕಳಿನ ತುಪ್ಪವನ್ನು (Ghee) ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ. ನನ್ನ ಬಳಿ ಗಿರ್ ತಳಿಯ 250 ಹಸುಗಳಿವೆ. ಅದರ ತುಪ್ಪವನ್ನು ಕೆಜಿಗೆ 2,500 ರೂ. ನಂತೆ ಮಾರುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಜೋಳ ಬೆಳೆದರೆ ಗೋ ಸಂಪತ್ತು ಉಳಿಯುತ್ತದೆ. ತೊಗರಿಯಿಂದ ಗೋ ಸಂಪತ್ತು ಉಳಿಯುವುದಿಲ್ಲ. ನನ್ನದೇ ಒಂದು ಗೋಶಾಲೆ ಇದೆ. ತುಪ್ಪ ಮಾರುವುದರೊಂದಿಗೆ ವಿಭೂತಿ, ಕರ್ಪೂರ ಹಾಗೂ ಕುಂಕುಮವನ್ನು ತಯಾರಿಸುತ್ತಿದ್ದೇನೆ. ಅಲ್ಲದೇ ಸಾಬೂನು ಕೂಡಾ ತಯಾರು ಮಾಡುತ್ತಿದ್ದೇನೆ. ಗೋಮೂತ್ರವನ್ನು ಸಹ 130 ರೂ.ಗೆ ಮಾರುತ್ತಿದ್ದೇನೆ. ಆಕಳಿನ ಮಜ್ಜಿಗೆಯನ್ನು 30 ರೂ.ಗೆ ಹಾಗೂ ದೇಶೀಯ ಆಕಳಿನ ಹಾಲನ್ನು 100 ರೂ.ಗೆ ಮಾರುತ್ತಿದ್ದೇನೆ. ನಮ್ಮಲ್ಲಿ ಗೋ ಸಂಪತ್ತು ಉಳಿಯ ಬೇಕಾದರೆ ಜೋಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಡಲೆಕಾಯಿ ಪರಿಷೆಯಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಕ್ರಮ: ರಾಮಲಿಂಗಾ ರೆಡ್ಡಿ ಭರವಸೆ

    ನಮ್ಮ ಭಾಗದಲ್ಲಿ ಅಕ್ಕಿಯ ಬದಲಾಗಿ ಜೋಳ ಕೊಡಿ. 10 ಕೆಜಿ ಅಕ್ಕಿ ಇನ್ನೂ ಬಂದಿಲ್ಲ. ನರೇಂದ್ರ ಮೋದಿ 5 ವರ್ಷ 5 ಕಿಲೋ ಅಕ್ಕಿಯನ್ನು ಈ ದೇಶದ ಬಡವರಿಗೆ ಕೊಡುವಂತಹ ಕೆಲಸ ಮಾಡಿದ್ದಾರೆ. 5 ಕಿಲೋ ಅಕ್ಕಿಯ ಬದಲು ಜೋಳ ಕೊಡಿ ಎಂದು ನಾನು ಆಹಾರ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇವತ್ತು ವಿದೇಶಕ್ಕೆ ಹೋದರೂ ಜೋಳದ ರೊಟ್ಟಿ ಸಿಗುತ್ತದೆ. ಕೆಲವರು ಜೋಳದ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದು ಬರಗಾಲದಿಂದ ರೈತರು ಹಸುಗಳನ್ನು (Cow) ಸಾಕಲಾಗದೆ ಗೋಶಾಲೆಗೆ ಅಥವಾ ರಸ್ತೆಯ ಬದಿಯಲ್ಲಿ ಬಿಡುತ್ತಾರೆ. ಇನ್ನೂ ಕೆಲವರು ಕಟುಕರ ಕೈಗೆ ಕೊಡುತ್ತಾರೆ. ಆದ್ದರಿಂದ ಜೋಳಕ್ಕೆ ಬೆಂಬಲ ಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಹೋಗಲ್ಲ: ಎಸ್‌ಆರ್ ವಿಶ್ವನಾಥ್ ಮುನಿಸು

  • ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು – ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು

    ಗೋಪೂಜೆ ವೇಳೆ ಬಂಗಾರದ ಸರ ನುಂಗಿದ ಹಸು – ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು

    ಶಿವಮೊಗ್ಗ: ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು (Gold Chain) ಹಸುವೊಂದು (Cow) ನುಂಗಿದ್ದು, ಬಳಿಕ ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಬಂಗಾರದ ಸರವನ್ನು ಹೊರ ತೆಗೆದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ನಡೆದಿದೆ.

    ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಹಸು ಬಂಗಾರದ ಸರವನ್ನು ನುಂಗಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ಗೋಪೂಜೆ ವೇಳೆ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ನಂತರ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂಬುದನ್ನು ಕುಟುಂಬಸ್ಥರು ಖಚಿತಪಡಿಸಿಕೊಂಡಿದ್ದಾರೆ.

    ಬಂಗಾರದ ಸರ ಹೋದರೆ ಹೋಗಲಿ ಎಂದು ಕುಟುಂಬಸ್ಥರು ಮೊದಲಿಗೆ ಸುಮ್ಮನಿದ್ದರು. ಆದರೆ ಬಳಿಕ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿ ಅಸ್ವಸ್ಥಗೊಳ್ಳುತ್ತಿದ್ದುದು ಗಮನಕ್ಕೆ ಬಂದಿತ್ತು. ನಂತರ ಹಸುವಿನ ಪ್ರಾಣಕ್ಕೆ ಕುತ್ತಾಗಬಹುದು ಎಂಬ ಆತಂಕದಿಂದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಬಲಿ ಪಡೆದಿದ್ದ ಹುಲಿ ಸೆರೆ

    ಪಶು ವೈದ್ಯ ಡಾ. ಆನಂದ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಹಸುವಿನ ದೇಹದಿಂದ ಸರ ಹೊರ ತೆಗೆದಿದ್ದಾರೆ. ಸದ್ಯ ಹಸು ಈಗ ಆರೋಗ್ಯವಾಗಿದೆ. ಇದನ್ನೂ ಓದಿ: ಒಟ್ಟಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ; ಮಂಗಳೂರಲ್ಲಿ ಇಬ್ಬರ ಬಂಧನ

  • ಅಕ್ರಮ ಸಾಗಾಣಿಕೆ ಮಾಡ್ತಿದ್ದ 11 ಗೋವುಗಳ ರಕ್ಷಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

    ಅಕ್ರಮ ಸಾಗಾಣಿಕೆ ಮಾಡ್ತಿದ್ದ 11 ಗೋವುಗಳ ರಕ್ಷಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ (Expressway) ವೇಯಲ್ಲಿ ಅಕ್ರಮ ಗೋ ಸಾಗಾಟ (Cow Trafficking) ಮಾಡುತ್ತಿದ್ದ 11 ಗೋವುಗಳನ್ನು ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

    ಆರೋಪಿಗಳು 11 ಹಸುಗಳನ್ನು ಕ್ಯಾಂಟರ್ ಮೂಲಕ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ರಾಮನಗರ (Ramanagara) ತಾಲೂಕಿನ ಜಯಪುರ ಗೇಟ್ ಬಳಿ ಶ್ರೀರಾಮ ಸೇನೆ ಹಸುಗಳ ರಕ್ಷಣೆ ಮಾಡಿದೆ. ಖಚಿತ ಮಾಹಿತಿಯ ಮೇರೆಗೆ ವಾಹನ ಅಡ್ಡಗಟ್ಟಿದ್ದು, ಬಳಿಕ ರಾಮನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಾಕು ನಾಯಿ, ಬೀದಿ ನಾಯಿ ಕಚ್ಚಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ 2 ಕುಟುಂಬಗಳು

    ಕೆಎಂ ದೊಡ್ಡಿಯಿಂದ ಚಿಂತಾಮಣಿಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭ ಸ್ಥಳಕ್ಕೆ ಬಂದ ಪೊಲೀಸರು ಕ್ಯಾಂಟರ್ ವಾಹನವನ್ನು ಸೀಜ್ ಮಾಡಿ ಅದರಲ್ಲಿದ್ದ 11 ಹಸುಗಳ ರಕ್ಷಣೆ ಮಾಡಿದ್ದಾರೆ. ಅಲ್ಲದೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಲಗಿದ್ದಲ್ಲೇ ಅಸುನೀಗಿದ ಲಾರಿ ಚಾಲಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೃತ ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು ಲಂಚ ಕೇಳಿದ ಪಶುವೈದ್ಯಾಧಿಕಾರಿ!

    ಮೃತ ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು ಲಂಚ ಕೇಳಿದ ಪಶುವೈದ್ಯಾಧಿಕಾರಿ!

    ಚಿತ್ರದುರ್ಗ: ಪಶು ವೈದ್ಯಾಧಿಕಾರಿ (Veterinarian)ಯೊಬ್ಬ ಮೃತ ಹಸುವಿನ ಪೋಸ್ಟ್ ಮಾರ್ಟ್‍ಂ ರಿಪೋರ್ಟ್ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಸಂಗವೊಂದು ಚಿತ್ರದುರ್ಗ (Chitradurga) ದಲ್ಲಿ ನಡೆದಿದೆ.

    ಡಾ.ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಪಶು ವೈದ್ಯಾಧಿಕಾರಿ. ಈತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿರುವ ಪಶು ಆಸ್ಪತ್ರೆಯ ವೈದ್ಯಾಧಿಕಾರಿ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    ಕಾಗಳಗೆರೆ ಗ್ರಾಮದ ಎಸ್.ಸ್ವಾಮಿ ಎಂಬವರ ಬಳಿಯಿಂದ ಡಾ. ತಿಪ್ಪೇಸ್ವಾಮಿ 2 ಸಾವಿ ರೂ. ಲಂಚ ಸ್ವೀಕಾರ ಮಾಡಿದ್ದಾನೆ. ಈ ಬಗ್ಗೆ ಮೊದಲೇ ಮಾಹಿತಿ ಅರಿತ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತ ಲಂಚ ಸ್ವೀಕಾರ ವೇಳೆ ವೈದ್ಯಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.