Tag: cow

  • ಹುಬ್ಬಳ್ಳಿ: ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದ ಹಸು

    ಹುಬ್ಬಳ್ಳಿ: ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದ ಹಸು

    ಹುಬ್ಬಳ್ಳಿ: ಹಸುವೊಂದು ಕಾಲುಗಳೇ ಇಲ್ಲದ ಕರುವಿಗೆ ಜನ್ಮ ನೀಡುವ ಮೂಲಕ ನೋಡುಗರಲ್ಲಿ ಅಚ್ಚರಿ ಮಾಡಿಸಿದೆ.

    ಹುಬ್ಬಳ್ಳಿ ತಾಲೂಕಿನ ಹಳಿಯಾಳ ಗ್ರಾಮದ ಸೋಮಲಿಂಗಪ್ಪ ಹೂಗಾರ ಎಂಬವರ ಹಸು ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದೆ. ಇದನ್ನು ನೋಡಿ ಸೋಮಲಿಂಗಪ್ಪ ಅವರಿಗೆ ಅಚ್ಚರಿಯಾಗಿದೆ. ಕರುವಿಗೆ ಕಾಲುಗಳಿಲ್ಲವಾದ್ದರಿಂದ ಇದು ಬದುಕುವುದು ಕಷ್ಟ ಎಂದು ಭಾವಿಸಿದ್ದರು. ಆದರೆ ಕರು ಮಾತ್ರ ಎರಡು ದಿನಗಳಿಂದ ಆರೋಗ್ಯವಾಗಿದೆ. ಕರುವಿನ ಎಲ್ಲಾ ಅಂಗಾಂಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿವೆ.

    ಕರುವಿಗೆ ಕಾಲುಗಳು ಇಲ್ಲದಿರುವ ಕಾರಣ ಹಾಲುಣಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ಸೋಮಲಿಂಗಪ್ಪ ಹೇಳುತ್ತಾರೆ. ಕರುವಿಗೆ ಅಂಗವೈಕಲ್ಯ ಬಿಟ್ಟರೆ ಮತ್ತೇನೂ ಬದಲಾವಣೆ ಇಲ್ಲ ಎನ್ನಲಾಗಿದೆ. ಕರುವನ್ನು ನೋಡಲು ಹಳಿಯಾಳ ಗ್ರಾಮದ ಸುತ್ತಲಿನ ಜನರು ಸೊಮಲಿಂಗಪ್ಪ ಅವರ ಮನೆಗೆ ಬರುತ್ತಿದ್ದಾರೆ.

  • ವೀಡಿಯೋ: ಮೇಕೆ ಮರಿಗಳಿಗೆ ಹಾಲುಣಿಸುವ ಹಸು

    ವೀಡಿಯೋ: ಮೇಕೆ ಮರಿಗಳಿಗೆ ಹಾಲುಣಿಸುವ ಹಸು

    ಮಂಡ್ಯ: ಬೇರೆ ಬೇರೆ ಜಾತಿಗೆ ಸೇರಿದ ಎರಡು ಪ್ರಾಣಿಗಳ ನಡುವಿನ ಸ್ನೇಹದ ಕಥೆಯನ್ನು ನೀವು ಕೇಳಿರಬಹುದು. ಅಂತಹುದೇ ಇನ್ನೊಂದು ಕಥೆಯಿಲ್ಲಿದ್ದು, ಮಂಡ್ಯ ತಾಲೂಕಿನ ಸೌದೇನಹಳ್ಳಿ ಗ್ರಾಮದಲ್ಲಿ ಹಸುವೊಂದು ಎರಡು ಮೇಕೆ ಮರಿಗಳಿಗೆ ಹಾಲು ಕುಡಿಸುತ್ತದೆ.

    ಗ್ರಾಮದ ಯೋಗೇಶ್ ಎಂಬವರ ಮೇಕೆ ಎರಡು ಮರಿಗಳಿಗೆ ಜನ್ಮ ನೀಡಿತ್ತು. ಮೇಕೆ ಮರಿಗಳಿಗೆ ತಾಯಿ ಇದ್ರೂ ಮನೆಯಲ್ಲಿರುವ ಕೆಂಬಣ್ಣದ ಹಸು ಕಂಡ್ರೆ ವಿಶೇಷ ಪ್ರೀತಿ. ಆ ಹಸುವಿಗೂ ಅಷ್ಟೇ ಮೇಕೆ ಮರಿಗಳೆಂದರೆ ಅಕ್ಕರೆ. ಎರಡು ಮರಿಗಳು ತಮಗೆ ಹಸಿವಾದಾಗಲೆಲ್ಲ ಹಸುವಿನ ಹಾಲನ್ನು ಕುಡಿಯುತ್ತವೆ.

    ಹಸುವಿನ ಮೈ ಮೇಲೆ ಮರಿಗಳು ಹತ್ತಿ ಓಡಾಡುತ್ತವೆ. ಖುಷಿಯಿಂದ ಆಟ ಆಡುತ್ತವೆ. ಹಸು ಕೂಡ ಅಷ್ಟೇ ಮೇಕೆ ಮರಿಗಳ ಮೇಲೆ ಕೋಪಿಸಿಕೊಳ್ಳದೇ ಹಾಲುಣಿಸಿ ಸಲಹುತ್ತಿದೆ. ಹಸು ಮತ್ತು ಮೇಕೆ ಮರಿಗಳ ತಾಯಿ, ಮಕ್ಕಳ ವಾತ್ಸಲ್ಯ ಗ್ರಾಮದ ಜನರ ಕುತೂಹಲಕ್ಕೆ ಕಾರಣವಾಗಿದೆ.

    https://www.youtube.com/watch?v=TirP_9uFSwc

     

  • ಚಿಕ್ಕಮಗಳೂರು: ಮೇವಿನಲ್ಲಿ ವಿಷಾಹಾರ ಸೇವನೆ ಆರು ಹಸು ಸಾವು

    ಚಿಕ್ಕಮಗಳೂರು: ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ 6 ಹಸುಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರೈತ ರೇಣುಕಪ್ಪ ಎಂಬುವರಿಗೆ ಸೇರಿದ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಆರು ಹಸುಗಳು ಸಾವನ್ನಪ್ಪಿವೆ. ಶುಕ್ರವಾರ ರಾತ್ರಿ ಹಸುಗಳು ಮೇವು ತಿಂದ ನಂತರ ಏಕಾಏಕಿ ಹಸುಗಳು ಸಾವಿಗೀಡಾಗಿದ್ದು, ತನಗಾಗದೇ ಇರುವರು ಮೇವಿನಲ್ಲಿ ವಿಷ ಬೆರೆಸಿದ್ದಾರೆಂದು ರೇಣುಕಪ್ಪ ದುಃಖದಿಂದ ಹೇಳುತ್ತಾರೆ.

    ಮನೆಗೆ ಆಸರೆಯಾಗಿದ್ದ ಹಸುಗಳು ಏಕಾಏಕಿ ಸಾವನನಪ್ಪಿದ ಪರಿಣಾಮ ರೈತ ರೇಣುಕಪ್ಪ ದಿಕ್ಕು ತೋಚದಂತಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.