Tag: cow

  • ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ್ವು ಕರುಗಳು- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ್ವು ಕರುಗಳು- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ಬಳ್ಳಾರಿ: ತಾಯಿ ಪ್ರೀತಿ ಅಂದ್ರೆನೇ ಹಾಗೆ. ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಹೊಂದಿರುತ್ತಾಳೋ ತಾಯಿಯ ಮೇಲೆ ಕರುಗಳೂ ಸಹ ಅಷ್ಟೇ ಪ್ರೀತಿ ಹೊಂದಿರುತ್ತವೆ.

    ಇದಕ್ಕೆ ಸಾಕ್ಷಿ ಎನ್ನುವಂತೆ ಆಕಳೊಂದು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನು ಮೇಲೆ ಎಬ್ಬಿಸಲು ಪ್ರಯತ್ನಿಸಿದ ಮನಕಲಕುವ ಘಟನೆವೊಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನಡೆದಿದೆ.

    ಇಂದು ಬೆಳೆಗ್ಗೆ ಕಮಾಲಾಪುರದಲ್ಲಿ ವಿದ್ಯುತ್ ಶಾಕ್ ನಿಂದ ಆಕಳೊಂದು ಮೃತಪಟ್ಟಿದೆ. ನಂತರ ಆಕಳ ಕರುಗಳು ಸತ್ತು ಬಿದ್ದ ತಾಯಿ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ ದೃಶ್ಯ ಮನಕಲಕುವಂತಿತ್ತು.

    ಕೆಇಬಿ ಕಚೇರಿ ಮುಂದಿನ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸ್ಪರ್ಶವಾಗಿ ಆಕಳು ಮೃತಪಟ್ಟ ನಂತರ ಕರುಗಳು ತಾಯಿ ಆಕಳನ್ನ ಎಬ್ಬಿಸಲು ಪ್ರಯತ್ನಿಸಿದವು.

    ಇದನ್ನೂ ಓದಿ:  ತನ್ನ ಮರಿ ಸತ್ತಿದ್ರೂ, ಮುತ್ತು ಕೊಡುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

    https://youtu.be/cpIQaFGtHvY

     

  • ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಬೊಲೆರೋ ಪಿಕಪ್ ವಾಹನದಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಜಿಲ್ಲೆಯ ಕುಂದಾಪುರ ಪೊಲೀಸರು ತಡೆಯೊಡ್ಡಿದ್ದಾರೆ.

    27 ಗೋವುಗಳನ್ನು ಕುಂದಾಪುರದ ಮಾವಿನಕಟ್ಟೆಲ್ಲಿಂದ ಮಂಗಳೂರು ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಬೆಳಕಿಗೆ ಬಂದಿದೆ.

    ಪಿಕಪ್ ವಾಹನದಲ್ಲಿ ನಾಲ್ಕೈದು ಹಸುಗಳನ್ನು ಸಾಗಾಟ ಮಾಡುವುದು ಕಷ್ಟಸಾಧ್ಯ. ಆದರೆ ಹಸುಗಳ ಕೈಕಾಲು ಕಟ್ಟಿ ಅಮಾನವೀಯವಾಗಿ 27 ಹಸುಗಳನ್ನು ತುಂಬಿಸಲಾಗಿತ್ತು. ಈ ನಡುವೆ ಉಸಿರುಗಟ್ಟಿ ಒಂದು ಹಸು ಟೆಂಪೋದೊಳಗೆ ಸಾವನ್ನಪ್ಪಿದೆ. ಪೊಲೀಸರು ಆ ವಾಹನ ನಿಲ್ಲಿಸುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಮತ್ತು ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದಾರೆ.

    ಕುಂದಾಪುರದಿಂದ ಮಂಗಳೂರಿಗೆ ಗೋವುಗಳ ಅಕ್ರಮ ಸಾಗಾಟವಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಪಿಕಪ್ ವಾಹನ ಮಂಗಳೂರು ರಿಜಿಸ್ಟ್ರೇಷನ್‍ದಾಗಿದ್ದು, ಹುಸೇನ್ ಎಂಬವರಿಗೆ ಈ ವಾಹನ ಸೇರಿದೆ.

    ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮಾರಾಟ ಮಾಡಿದ ಹಸುಗಳೋ ಅಥವಾ ಕದ್ದ ಹಸುಗಳೋ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕೊಟ್ಟಿಗೆಯಲ್ಲಿದ್ದ ಹಸುಗಳ ಕಿಡ್ನಿ ತೆಗೆದು ಹತ್ಯೆ- ಹಾವೇರಿಯಲ್ಲಿ ಅಮಾನವೀಯ ಕೃತ್ಯ

    ಕೊಟ್ಟಿಗೆಯಲ್ಲಿದ್ದ ಹಸುಗಳ ಕಿಡ್ನಿ ತೆಗೆದು ಹತ್ಯೆ- ಹಾವೇರಿಯಲ್ಲಿ ಅಮಾನವೀಯ ಕೃತ್ಯ

    ಹಾವೇರಿ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಿಡ್ನಿಗಳನ್ನು ತೆಗೆದು ಹತ್ಯೆ ಮಾಡಿದ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ದಂಡಿನ ಪೇಟೆಯಲ್ಲಿ ನಡೆದಿದೆ.

    ರೈತ ಕಲ್ಲಪ್ಪ ಪೂಜಾರಿ ಎಂಬವರಿಗೆ ಸೇರಿದ ಎರಡು ಹಸುಗಳನ್ನು ಮನೆಯ ಹಿಂಭಾಗದಲ್ಲಿರೋ ದನದ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಆದ್ರೆ ದುರ್ಷ್ಕಮಿಗಳು ಎರಡು ಹಸುಗಳ ಕಿಡ್ನಿ ಕಿತ್ತು ಹಾಕಿ ಹತ್ಯೆ ಮಾಡಿದ್ದಾರೆ. ಅತಿ ಹೆಚ್ಚು ಹಾಲು ನೀಡುತ್ತಿದ್ದ ಕಾರಣಕ್ಕೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

    ನುರಿತ ವ್ಯಕ್ತಿಗಳು ಹಸುಗಳನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪಶುವೈದ್ಯರು ಪರಿಶೀಲನೆ ನಡೆಸಿ, ಹಸುಗಳ ಕಿಡ್ನಿ ಯಾವುದೇ ಕೆಲಸಕ್ಕೆ ಮರು ಬಳಕೆ ಆಗುವುದಿಲ್ಲ. ಆದ್ರೆ ಕಿಡ್ನಿ ತೆಗೆದು ಹತ್ಯೆ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ.

    ಈ ಕುರಿತಂತೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಇಲ್ಲಿನ ಜನರು ಆಗ್ರಹಿಸಿದ್ದಾರೆ.

     

  • ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಮೇವಿಲ್ಲದೇ ಎರಡೇ ದಿನದಲ್ಲಿ 9 ಕರುಗಳ ಸಾವು

    ಚಿಕ್ಕಮಗಳೂರು: ತಿನ್ನೋಕೆ ಮೇವು ಇಲ್ಲದೆ ಎರಡೇ ದಿನದಲ್ಲಿ 9 ಕರುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ರವಿವಾರ ಐದು ಹಾಗೂ ಇಂದು ನಾಲ್ಕು ಕರುಗಳು ಹಸಿವಿನ ಬೇಗೆಯಿಂದ ಪ್ರಾಣಬಿಟ್ಟಿವೆ. ಕಡೂರು ತಾಲೂಕು ಎರಡು ದಶಕಗಳಿಂದ ಶಾಶ್ವತ ಬರಗಾಲಕ್ಕೆ ತುತ್ತಾಗಿದೆ. ಇಲ್ಲಿನ ಜನ-ಜಾನುವಾರುಗಳು ನೀರು, ಮೇವಿಗಾಗಿ ಹಾಹಾಕಾರ ಅನುಭವಿಸುವಂತಾಗಿದೆ.

    ಗೋಶಾಲೆ ತೆರೆಯಿರಿ ಎಂದು ಎಷ್ಟೇ ಬಾರಿ ಅಂಗಲಾಚಿದ್ದರೂ ಜಿಲ್ಲಾಡಳಿತ ಎನ್.ಜಿ.ಓ ಗಾಗಿ ಕಾದು ಕೂತಿರೋದು ಜಾನುವಾರುಗಳ ಮಾರಣಹೋಮಕ್ಕೆ ಕಾರಣವಾಗಿದೆ. ಈಗಾಗಲೇ ಪಂಚನಹಳ್ಳಿಯಲ್ಲಿ ಒಂದು ಗೋಶಾಲೆ ತೆರೆದಿರೋ ಜಿಲ್ಲಾಡಳಿತ ಅದನ್ನೂ ಮುಚ್ಚೋಕೆ ಮುಂದಾಗಿದ್ರು. ಆದ್ರೆ ಸ್ಥಳೀಯರ ಹೋರಾಟದಿಂದ ಮತ್ತೆ ಮುಂದುವರೆಯುತ್ತಿದೆ.

    ಇನ್ನೆರಡು ಗೋಶಾಲೆ ತೆರೆಯೋದಕ್ಕೆ ಅವಕಾಶವಿದ್ರೂ ಜಿಲ್ಲಾಡಳಿತ ಮೀನಾಮೇಷ ಏಣಿಸ್ತಿರೋದು ಕರುಗಳ ಮಾರಣಹೋಮಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದವರ ಬಂಧನ

    ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದವರ ಬಂಧನ

    ಬೆಂಗಳೂರು: ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

    ಸನಾ(28), ನಯಾಜ್(30), ಇಬ್ರಾಹಿಂ(32) ಬಂಧಿತ ಆರೋಪಿಗಳು. ಇವರನ್ನು ಏರ್‍ಪೋರ್ಟ್ ರಸ್ತೆಯ ನವಯುಗ ಟೋಲ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಬಳ್ಳಾರಿಯಿಂದ ಶಿವಾಜಿನಗರಕ್ಕೆ ಗೋವುಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ತಡ ರಾತ್ರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ 18 ಗೋವುಗಳನ್ನು ರಕ್ಷಿಸಿ ದೇವನಹಳ್ಳಿಯ ವಿಜಯಪುರ ಗೋಶಾಲೆಗೆ ರವಾನೆ ಮಾಡಲಾಗಿದೆ.

    ಘಟಬೆ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿರತೆ ದಾಳಿಯಿಂದ 60 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಸಾವು

    ಚಿರತೆ ದಾಳಿಯಿಂದ 60 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಸಾವು

    ರಾಮನಗರ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿರುವ ಘಟನೆ ರಾಮನಗರ ತಾಲೂಕಿನ ಚೌಡೇಶ್ವರಿ ಹಳ್ಳಿಯಲ್ಲಿ ನಡೆದಿದೆ.

    ಚೌಡೇಶ್ವರಿಹಳ್ಳಿ ನಿವಾಸಿ ಪ್ರತಾಪ್ ಎಂಬವರಿಗೆ ಸೇರಿದ ಸುಮಾರು 60 ಸಾವಿರ ಮೌಲ್ಯದ ಮಿಶ್ರತಳಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ತಡರಾತ್ರಿ ಚಿರತೆ ದಾಳಿ ನಡೆಸಿದೆ.

    ಚಿರತೆ ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಿಡಗೋಡಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕಣ್ಣು ಹಾಗೂ ಎರಡು ತಲೆಯ ಕರುವೊಂದಕ್ಕೆ ಜನ್ಮ ನೀಡಿದೆ.

    ನಿಡಗೋಡಿ ಗ್ರಾಮದ ನಿವಾಸಿ ಪುಟ್ಟೇಗೌಡ ಹಾಗೂ ಗುಂಡಮ್ಮ ಎಂಬವರಿಗೆ ಸೇರಿದ ಸೀಮೆಹಸು ಮೂರು ಕಣ್ಣು ಹಾಗು ಎರಡು ತಲೆಯ ಕರುವಿಗೆ ಜನ್ಮ ನೀಡಿದ್ದು ಕರು ಸದ್ಯಕ್ಕೆ ಆರೋಗ್ಯವಾಗಿದೆ.

    ಕರು ಜನನವಾಗುವ ವೇಳೆ ಎರಡು ತಲೆ ಒಳಗೊಂಡಿದ್ರಿಂದ ಹೆರಿಗೆ ಮಾಡಿಸಲು ಸ್ವಲ್ಪ ಕಷ್ಟವಾಯ್ತು. ಇಂತಹ ವಿಚಿತ್ರ ಕರುವನ್ನು ನಾವು ನೋಡಿರಲಿಲ್ಲ. ಸದ್ಯಕ್ಕೆ ಕರುವಿಗೆ ಬಾಟಲ್ ಮೂಲಕ ಹಾಲು ನೀಡಲಾಗ್ತಿದ್ದು ಮುಂದಿನ ದಿನಗಳಲ್ಲಿ ಅದು ಬೆಳೆದಂತೆ ಬೆಳೆಯಲಿ ಎಂದು ಹಸುವಿನ ಮಾಲೀಕರಾದ ಗುಂಡಮ್ಮ ತಿಳಿಸಿದ್ದಾರೆ.

    ಮೂರು ಕಣ್ಣು, ಎರಡು ತಲೆಯ ಕರುವನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ರು. ಮೂರು ಕಣ್ಣು ಒಳಗೊಂಡಿದ್ರಿಂದ ಪರಶಿವನಾದ ಮುಕ್ಕಣ್ಣನ ಸ್ವರೂಪಿ ಎಂದು ಸಾರ್ವಜನಿಕರು ಕರುವನ್ನು ವೀಕ್ಷಣೆ ಮಾಡಿದ್ರು. ಮೂರು ಕಣ್ಣು ಹಾಗು ಎರಡು ತಲೆ ಹೊಂದಿರುವ ಕರು ಆರೋಗ್ಯವಾಗಿ ಬೆಳೆದ್ರೆ ಚೆನ್ನಾಗಿ ಸಾಕಿ ಅದನ್ನು ಯಾವುದಾದ್ರೂ ದೇವಾಲಯಕ್ಕೆ ನೀಡುವುದಾಗಿ ಮಾಲೀಕ ಪುಟ್ಟೇಗೌಡ ಹೇಳಿದ್ದಾರೆ.

    ಈ ವಿಚಿತ್ರ ಕರುವನ್ನ ಗ್ರಾಮದ ಮಹಿಳೆಯರು ಪೂಜೆ ಸಹ ಮಾಡಿದ್ದಾರೆ.

     

  • ಹಸು ಮೃತಪಟ್ಟಿದ್ದಕ್ಕೆ ವ್ಯಕ್ತಿಯ ಮನೆಗೇ ಬೆಂಕಿ ಹಚ್ಚಿದ್ರು!

    ಹಸು ಮೃತಪಟ್ಟಿದ್ದಕ್ಕೆ ವ್ಯಕ್ತಿಯ ಮನೆಗೇ ಬೆಂಕಿ ಹಚ್ಚಿದ್ರು!

    ರಾಂಚಿ: ವ್ಯಕ್ತಿಯೊಬ್ಬರ ಮನೆಯ ಮುಂದೆ ಹಸು ಸತ್ತಿರುವುದನ್ನು ನೋಡಿ ಸಿಟ್ಟಾದ ಸಾರ್ವಜನಿಕರು ಆ ವ್ಯಕ್ತಿಯನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಮನೆಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್‍ನ ಗಿರಿದಿಹ್ ಜಿಲ್ಲೆಯ ಡಿಯೋರಿ ಪ್ರದೇಶದಲ್ಲಿರೋ ಬೆರಿಯಾ ಹತಿಯಾಂಡ್ ಎಂಬ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ನಡೆದಿದೆ. ಉಸ್ಮಾನ್ ಅನ್ಸಾರಿ ಎಂಬವರ ಮನೆಯ ಮುಂದೆ ಹಸುವೊಂದು ಸತ್ತು ಬಿದ್ದಿತ್ತು. ಇದರಿಂದ ಕೆಂಡಾಮಂಡಲರಾದ ಸುಮಾರು 200 ಮಂದಿ ಸಾರ್ವಜನಿಕರು ಅನ್ಸಾರಿಯನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಮನೆಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಂತಾ ಜಾರ್ಖಂಡ್ ಪೊಲಿಸ್ ವಕ್ತಾರ ಹಾಗೂ ಎಡಿಜಿ ಆರ್ ಕೆ ಮುಲ್ಲಿಕ್ ತಿಳಿಸಿದ್ದಾರೆ.

    ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅನ್ಸಾರಿ ಹಾಗೂ ಕುಟುಂಬದವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅನ್ಸಾರಿ ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ವರದಿಯಾಗಿದೆ.

    ಸಾರ್ವಜನಿಕರ ಕಲ್ಲು ತೂರಾಟದಿಂದ ಸುಮಾರು 50 ಪೊಲೀಸರಿಗೆ ಗಾಯಗಳಾಗಿವೆ. ಅಲ್ಲದೇ ಈ ವೇಳೆ ಗಲಭೆ ನಿಯಂತ್ರಣಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದು, ಪರಿಣಾಮ ಓರ್ವ ಪೊಲೀಸ್ ಪೇದೆ ಕೂಡ ಗಾಯಗೊಂಡಿದ್ದಾರೆ ಅಂತಾ ಎಡಿಜಿ ಆಂಗ್ಲ ಪತ್ರಿಕೆಯೊಂದಕ್ಕೆ ವಿವರಿಸಿದ್ದಾರೆ.

    ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಹರಿಯಾಣದಲ್ಲಿ ದನದ ಮಾಂಸ ತೆಗೆದುಕೊಂಡು ಹೋಗುತ್ತಿದ್ದಾನೆ ಎಂದು ಆರೋಪಿಸಿ ರೈಲಿನಲ್ಲೇ 16 ವರ್ಷದ ಹುಡುಗನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದರು.

  • ಜಾನುವಾರು ಮಾರಾಟ ನಿಷೇಧ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

    ಜಾನುವಾರು ಮಾರಾಟ ನಿಷೇಧ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ಮಾಂಸದ ಉದ್ದೇಶದಿಂದ ಜಾನುವಾರು ಮಾರಾಟವನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನಲ್ಲಿ ಎರಡು ವಾರಗಳಲ್ಲಿ ಉತ್ತರಿಸಬೇಕೆಂದು ಸೂಚಿಸಿದ್ದು, ಜುಲೈ 11ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    ನ್ಯಾ.ಆರ್‍ಕೆ ಅಗರ್‍ವಾಲ್ ಮತ್ತು ನ್ಯಾ, ಎಸ್‍ಕೆ ಕೌಲ್ ಅವರಿದ್ದ ರಜಾಕಾಲದ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

    ಮಾಂಸ ಉದ್ದೇಶದಿಂದ ಜಾನುವಾರು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

  • ಆಕಳ ಕರುವನ್ನ ಕದ್ದು ಕೊಂದ ಯುವಕರಿಗೆ ಸಾರ್ವಜನಿಕರಿಂದ ಧರ್ಮದೇಟು

    ಆಕಳ ಕರುವನ್ನ ಕದ್ದು ಕೊಂದ ಯುವಕರಿಗೆ ಸಾರ್ವಜನಿಕರಿಂದ ಧರ್ಮದೇಟು

    ರಾಯಚೂರು: ನಗರದ ನಂದೀಶ್ವರ ದೇವಾಲಯದ ಬಳಿ ಆಕಳ ಕರುವನ್ನು ಕೊಂದು ಹೊತ್ತೊಯ್ಯುತ್ತಿದ್ದ ಯುವಕರನ್ನ ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

    ನಗರದ ತಿಮ್ಮಾಪುರಪೇಟೆಯ ಸಾಧಿಕ್ ಹಾಗೂ ಖಲಂದರ್ ಆಕಳ ಕರುವನ್ನ ಕದ್ದು ಕೊಂದಿದ್ದಾರೆ. ಸಂಗಮೇಶಸ್ವಾಮಿ ಎಂಬವರ ಆಕಳು ಇತ್ತೀಚಗಷ್ಟೇ ಗಂಡು ಕರುವಿಗೆ ಜನ್ಮ ನೀಡಿತ್ತು. ದೇವಸ್ಥಾನದ ಬಳಿ ಹುಲ್ಲು ಮೇಯುತ್ತಿದ್ದ ಕರುವನ್ನ ಕದ್ದು ಕೊಂದಿದ್ದಾರೆ.

    ನಂತರ ಚೀಲದಲ್ಲಿ ಎತ್ತಿಕೊಂಡು ಹೋಗುವಾಗ ಸಾರ್ವಜನಿಕರಿಗೆ ಅನುಮಾನ ಬಂದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಯುವಕರು ಈ ಕರುವನ್ನು ಮಾಂಸದಂಗಡಿಗೆ ಕರುವನ್ನ ಮಾರಾಟ ಮಾಡಲು ಒಯ್ಯುತ್ತಿದ್ದರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.