Tag: cow

  • ಐದು ಕಾಲಿನ ವಿಚಿತ್ರ ಕರು ಜನನ

    ಐದು ಕಾಲಿನ ವಿಚಿತ್ರ ಕರು ಜನನ

    ಬೆಂಗಳೂರು: ಐದು ಕಾಲು ಇರುವ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಳೆಸಂದ್ರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ರೈತ ರಾಜಣ್ಣ ಎಂಬುವರಿಗೆ ಸೇರಿದ ಹಸುವೊಂದು ಈ ರೀತಿಯ ವಿಚಿತ್ರ ರೀತಿಯಲ್ಲಿ ಇರುವ ಕರುವನ್ನು ಇಂದು ಮಧ್ಯಾಹ್ನ ಹಾಕಿದೆ. ಸಾಮಾನ್ಯ ಕರುವಿನಂತೆ ನಾಲ್ಕು ಕಾಲುಗಳಿದ್ದು, ಆದರೆ ಕರುವಿನ ಬೆನ್ನ ಮೇಲೆ ಮತ್ತೊಂದು ಕಾಲು ಮೂಡಿ ಬಂದಿದೆ. ಹೀಗಾಗಿ ವಿಚಿತ್ರವಾಗಿ ಜನಿಸಿರುವ ಕರುವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

    ಈ ಹಿಂದೆ ರಾಮನಗರದಲ್ಲಿ ಎರಡು ತಲೆ ಹಾಗೂ ಮೂರು ಕಣ್ಣು ಇರುವ ಕರು ಹುಟ್ಟಿರುವುದನ್ನು ನೋಡಿದ್ದೇವು. ಈಗ ಐದು ಕಾಲುಗಳನ್ನು ಹೊಂದಿರುವ ಕರು ಹುಟ್ಟಿದೆ.

    ಇದನ್ನು ಓದಿ: ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

  • ಜೊಲ್ಲು ಸುರಿಸುತ್ತಾ ಕಾಯಿಲೆಯಿಂದ ನರಳುತ್ತಿರುವ ಕಾಮಧೇನು- ಕೊಟ್ಟಿಗೆಯಲ್ಲೇ ಪ್ರಾಣಬಿಟ್ಟ ಹಸುಗಳು!

    ಜೊಲ್ಲು ಸುರಿಸುತ್ತಾ ಕಾಯಿಲೆಯಿಂದ ನರಳುತ್ತಿರುವ ಕಾಮಧೇನು- ಕೊಟ್ಟಿಗೆಯಲ್ಲೇ ಪ್ರಾಣಬಿಟ್ಟ ಹಸುಗಳು!

    ಕೋಲಾರ: ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕಾಲು ಬಾಯಿ ರೋಗ ಗೋಪಾಲಕರಿಗೆ ನಡುಕ ಹುಟ್ಟಿಸಿತ್ತು. ಹೀಗಿರುವಾಗ ಆ ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ಮತ್ತೆ ಗೋಪಾಲಕರನ್ನು ಆತಂಕಕ್ಕೆ ದೂಡಿದೆ. ಆ ಜಿಲ್ಲೆಯಲ್ಲಿ ಮಾರಕ ರೋಗ ಕಾಣಿಸಿಕೊಂಡಿರುವುದು ರೈತರ ನಿದ್ದೆಗೆಡಿಸಿದೆ.

    ಮೂರು ವರ್ಷಗಳ ಹಿಂದೆ ಕಾಲುಬಾಯಿ ರೋಗದ ರುದ್ರನರ್ತನಕ್ಕೆ ಕೋಲಾರ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಹಸುಗಳು ಪ್ರಾಣಬಿಟ್ಟಿದ್ದವು. ಆ ಕಹಿ ನೆನೆಪು ಮಾಸುವ ಮುನ್ನವೇ ಮೂರಾಂಡಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ರೋಗ ವಕ್ಕರಿಸಿಕೊಂಡಿದೆ. ಕಳೆದ ಒಂದು ತಿಂಗಳಲ್ಲಿ ಕಾಲುಬಾಯಿ ರೋಗಕ್ಕೆ 10 ಹಸುಗಳು ಸಾವನ್ನಪ್ಪಿವೆ. ಹತ್ತಾರು ಹಸುಗಳು ರೋಗದಿಂದ ನರಳುತ್ತಿವೆ. ಹೀಗಾಗಿ ಹೈನೋದ್ಯಮವನ್ನು ನಂಬಿರುವ ರೈತರು ಆತಂಕದಲ್ಲಿದ್ದಾರೆ.

    ಪಶುಸಂಗೋಪನಾ ಇಲಾಖೆ ಸರಿಯಾದ ಸಮಯಕ್ಕೆ ಲಸಿಕೆ ಹಾಕದೇ ಇರೋದು ಕಾಲುಬಾಯಿ ರೋಗಕ್ಕೆ ಕಾರಣ ಅನ್ನೋದು ರೈತರ ಆರೋಪ. ಸರ್ಕಾರ ಕೂಡ ಸರಿಯಾದ ಪರಿಹಾರ ನೀಡುತ್ತಿಲ್ಲ. ಲಕ್ಷಾಂತರ ಮೌಲ್ಯದ ಹಸುಗಳಿಗೆ ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಕರುಗಳು ಸತ್ತರೆ ಅದಕ್ಕೆ ಯಾವುದೇ ಪರಿಹಾರ ಕೊಡುತ್ತಿಲ್ಲ ಎಂದು ಗೋಪಾಲಕರು ತಮ್ಮ ಅಳಲುತೋಡಿಕೊಂಡಿದ್ದಾರೆ. ಆದರೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾತ್ರ ಎಲ್ಲ ಮಾಡಿದ್ದೀವಿ ಎಂದು ಹೇಳುತ್ತಾರೆ.

    ಒಟ್ಟಿನಲ್ಲಿ ಹಸುಗಳ ಮಾರಣಹೋಮ ನಡೆಯೋ ಮುನ್ನಾ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

     

  • ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ಬ್ರೆಜಿಲಿಯಾ: ಕೆರೆಯ ಕೆಸರಿನಲ್ಲಿ ರಾಶಿ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ವ್ಯಕ್ತಿಯೋರ್ವ ಬಹಳ ಜಾಗರೂಕತೆಯಿಂದ ರಕ್ಷಣೆ ಮಾಡಿದ ಘಟನೆ ನಡೆದಿದೆ.

    ವ್ಯಕ್ತಿ ಕರುವನ್ನು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಬ್ರೆಜಿಲ್ ನ ವ್ಯಕ್ತಿ ಸೆರೆಹಿಡಿದಿದ್ದಾರೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ.

    ಬನಾನಲ್ ದ್ವೀಪ ಎಂಬ ದೊಡ್ಡ ನದಿ ಈಗ ಬರಗಾಲದಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಹೀಗಾಗಿ ಮೊಸಳೆಗಳ ಹಿಂಡು ಕೆಸರಿನಲ್ಲಿ ಹೊರಳಾಡುತ್ತಿದ್ದವು. ಇವುಗಳ ಮಧ್ಯೆ ಕರುವೊಂದು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಮೊಸಳೆಗಳ ಹಿಂಡನ್ನು ಲೆಕ್ಕಿಸದೇ, ಭಯಪಡದೇ ಕರುವಿನ ಕಿವಿಯಲ್ಲಿ ಎಳೆದು ರಕ್ಷಿಸಿದ್ದಾರೆ. ಕಿವಿಯಲ್ಲಿ ಹಿಡಿದು ಎಳೆದಾಗ ನೋವಿನಿಂದ ನರಳಿತ್ತು. ಮೊಸಳೆಗಳಿಂದ ರಕ್ಷಿಸಿದ ತಕ್ಷಣವೇ ಕರು ಅಲ್ಲಿಂದ ಕಾಲ್ಕಿತ್ತಿದೆ.

    ಬಳಿಕ ವ್ಯಕ್ತಿಯ ತಂಡ ಆ ಕೆರೆಯಲ್ಲಿ ಏನೇನಿರಬಹುದೆಮದು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಒಂದು ಕಡೆ ಸತ್ತು ಬಿದ್ದಿರುವ ಮೊಸಳೆಗಳು ಕಾಣಸಿಗುತ್ತವೆ. ಇನ್ನೊಂದೆಡೆ ಹಸುವೊಂದು ಕೆಸರಿನಲ್ಲಿ ಸಿಲುಕಿರುವುದು ಕಂಡಿದೆ. ಅಂತೆಯೇ ಅದನ್ನು ಕೂಡ ಅವರು ಅಪಾಯದಿಂದ ರಕ್ಷಿಸಿದ್ದಾರೆ.

    https://www.youtube.com/watch?v=oFAtu8_QNQ4

  • ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಭಾರೀ ಮಳೆಗೆ ಕುಸಿದ ಮನೆಯ ಮೇಲ್ಛಾವಣಿ- 4 ಎತ್ತು, 1 ಆಕಳು ಸಾವು

    ಹುಬ್ಬಳ್ಳಿ: ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಜಾನುವಾರಗಳು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗಣೇಶ ಪೇಟೆಯ ಬಡಾವಣೆಯಲ್ಲಿ ನಡೆದಿದೆ.

    ನಗರದ ಗಣೇಶ ಪೇಟೆ ಶೆಟ್ಟರ್ ಓಣಿಯಲ್ಲಿ ಮಲ್ಲಿಕಾರ್ಜುನ್ ಕೊರವಿ ಅವರ ಶಿಥಿಲಾವಸ್ಥೆಯಲ್ಲಿದ್ದ, ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದಿದೆ. ಈ ಪರಿಣಾಮ ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿವೆ.

    ಎತ್ತುಗಳನ್ನು ಕಳೆದುಕೊಂಡಿದ್ದರಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಮಲ್ಲಿಕಾರ್ಜುನ್ ಅವರ ಮಗಳು ವನಜಾ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಯಂತ್ರ ಬಳಸಿ ಎತ್ತುಗಳನ್ನು ಹೊರ ತೆಗೆಯಲು ಗ್ರಾಮಸ್ಥರ ಸಹಾಯದಿಂದ ಪೊಲೀಸ್ ಸಿಬ್ಬಂದಿ ಹೊರ ತೆಗೆದಿದ್ದಾರೆ.

  • ವಾಕಿಂಗ್ ಹೋಗೋವ್ರೇ ಎಚ್ಚರ, ವೈಯಾಲಿಕಾವಲ್‍ನಲ್ಲಿ ಭೂಕುಸಿತ- ಮನೆ ಗೋಡೆ ಕುಸಿದು ಮಹಿಳೆ ಗಂಭೀರ

    ವಾಕಿಂಗ್ ಹೋಗೋವ್ರೇ ಎಚ್ಚರ, ವೈಯಾಲಿಕಾವಲ್‍ನಲ್ಲಿ ಭೂಕುಸಿತ- ಮನೆ ಗೋಡೆ ಕುಸಿದು ಮಹಿಳೆ ಗಂಭೀರ

    ಬೆಂಗಳೂರು: ನಗರದಲ್ಲಿ ರಾತ್ರೀ ಸುರಿದ ರಣಭೀಕರ ಮಳೆಗೆ ಸಿಲಿಕಾನ್‍ಸಿಟಿ ನಲುಗಿ ಹೋಗಿದೆ. ಭಾರೀ ಮಳೆಗೆ ನಗರದಲ್ಲಿ ಐವರು ಬಲಿಯಾಗಿದ್ದು, ರಾಜರಾಜೇಶ್ವರಿ ನಗರದಲ್ಲಿ ಜಾನುವಾರುಗಳು ಕೂಡ ಬಲಿಯಾಗಿವೆ.

    ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರ ಪಾಡು ಅಂತೂ ಹೇಳತೀರದು. ವೈಯಾಲಿಕಾವಲ್ 18ನೇ ಕ್ರಾಸ್‍ನಲ್ಲಿ ಮನೆ ಕುಸಿತವಾಗಿದೆ. ಪರಿಣಾಮ ಮನೆಯಲ್ಲಿದ್ದ ತಸಿಂಭಾನು ಎಂಬ ಮಹಿಳೆಗೆ ಗಂಭೀರಗಾಯವಾಗಿದೆ.

    ತಕ್ಷಣವೇ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಮಧ್ಯೆ ವೈಯಾಲಿಕಾವಲ್‍ನ ಪೊಲೀಸ್ ಠಾಣೆ ಪಕ್ಕದಲ್ಲೇ ಭೂಮಿ ಬಾಯ್ಬಿಟ್ಟಿದೆ. ರಾಜಕಾಲುವೆ ಪಕ್ಕದಲ್ಲೇ ಈ ಕುಸಿತವಾಗಿದ್ದು, ಸುಮಾರು 6 ಅಡಿಯಷ್ಟು ಉದ್ದ ಮತ್ತು 5 ಅಡಿಯಷ್ಟು ಅಗಲ ಭೂಮಿ ಬಾಯ್ಬಿಟ್ಟಿದೆ. ಘಟನೆ ನಡೆಯುತ್ತಿದ್ದಂತೆ ಜನ ಭಯಭೀತರಾಗಿದ್ದು, ಮನೆಯಿಂದ ಹೊರಗಡೆ ಓಡಿಬಂದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಧಾರಾಕಾರ ಮಳೆಯಾಗಿದೆ.. ಎಂ.ಜಿ ರಸ್ತೆ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು ರಸ್ತೆಯಲ್ಲಿ ಚಲಿಸಲು ವಾಹನ ಸವಾರರು ಪರದಾಡಿದ್ರು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ಪಟ್ಣಣದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

    ಇನ್ನು ಭಾರೀ ಮಳೆಗೆ ನಗರದಲ್ಲಿ ಜನರು ಮಾತ್ರವಲ್ಲದೇ ಜಾನುವಾರುಗಳು ಕೂಡ ಬಲಿಯಾಗಿವೆ. ರಾಜರಾಜೇಶ್ವರಿ ನಗರದಲ್ಲಿರುವ ಫಾರ್ಮ್‍ಹೌಸ್‍ವೊಂದಕ್ಕೆ ನೀರು ನುಗ್ಗಿ ಒಳಗೆ ಕಟ್ಟಿಹಾಕಿದ್ದ 15 ಹಸುಗಳು, 6 ಎಮ್ಮೆಗಳು ಮೃತಪಟ್ಟಿವೆ. ಒಟ್ಟು 30 ಜಾನುವಾರುಗಳನ್ನು ಕಟ್ಟಿ ಹಾಕಲಾಗಿತ್ತು. ಅದರಲ್ಲಿ 9 ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಾರ್ಮ್‍ಹೌಸ್ ಒಳಗೆ ಮಳೆ ನೀರು ನುಗ್ಗಿದ್ದರಿಂದ ಜಾನುವಾರುಗಳು ಮುಳುಗಿ ಮೃತಪಟ್ಟಿವೆ ಎಂಬುವುದಾಗಿ ತಿಳಿದುಬಂದಿದೆ.

  • ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

    ಮಂಡ್ಯ: ಮೊದಲೇ ಸಾಲಬಾಧೆಯಿಂದ ಕಂಗಾಲಾಗಿದ್ದ ರೈತ ಜೀವನಾಧಾರವಾಗಿದ್ದ ಹಸು ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 55 ವರ್ಷದ ರೈತ ವೆಂಕಟಾಚಲ ಆತ್ಮಹತ್ಯೆಗೆ ಶರಣಾದವರು. ವೆಂಕಟಾಚಲ ಅವರಿಗೆ 15 ಗುಂಟೆ ಜಮೀನಿತ್ತು. ಒಂದೂವರೆ ಎಕರೆ ಜಮೀನನ್ನು ಬೇರೆ ರೈತರಿಂದ ಭೋಗ್ಯಕ್ಕೆ ಪಡೆದು ಭತ್ತ ಬೆಳೆದಿದ್ರು. ಆದ್ರೆ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆ ಒಣಗಿತ್ತು. ಇದರ ನಡುವೆ ಜೀವನಾಧಾರವಾಗಿದ್ದ ಹಸುವೂ ಕೂಡ ಕಳೆದ ವಾರ ಮೃತಪಟ್ಟಿತ್ತು.

    ರೈತ ವೆಂಕಟಾಚಲ ಅವರು ಸುಮಾರು ಎರಡು ಲಕ್ಷ ರೂ. ಕೈಸಾಲ ಮಾಡಿದ್ರು. ಒಡವೆ ಅಡವಿಟ್ಟು 15 ಸಾವಿರ ರೂ. ಸಾಲ ಪಡೆದಿದ್ರು. ಸ್ವಸಹಾಯ ಸಂಘಗಳಿಂದಲೂ 50 ಸಾವಿರ ರೂ. ಸಾಲ ಮಾಡಿದ್ರು. ಇವೆಲ್ಲದ್ದರಿಂದ ಮನನೊಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾತ್ರೋ ರಾತ್ರಿ ಕಣ್ಮರೆಯಾಗ್ತಿವೆ ಹತ್ತಾರು ಗೋವುಗಳು – ಪೊಲೀಸರಿಗೆ ಗೋವುಗಳ್ಳರ ಸಾಕ್ಷಿ ನೀಡಿದ್ರೂ ನೋ ಯೂಸ್

    ರಾತ್ರೋ ರಾತ್ರಿ ಕಣ್ಮರೆಯಾಗ್ತಿವೆ ಹತ್ತಾರು ಗೋವುಗಳು – ಪೊಲೀಸರಿಗೆ ಗೋವುಗಳ್ಳರ ಸಾಕ್ಷಿ ನೀಡಿದ್ರೂ ನೋ ಯೂಸ್

    ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಪ್ರತಿನಿತ್ಯ ಹತ್ತಾರು ಗೋವುಗಳ ಕಳ್ಳತನವಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೆ ಪೊಲೀಸರು ಸೂಕ್ತ ಕ್ರಮ ಕೈಗೊಳುತ್ತಿಲ್ಲ. ಗೋವುಗಳನ್ನು ರಾತ್ರಿ ವೇಳೆ ಕದ್ದು ಕಸಾಯಿಖಾನೆಗೆ ಕೊಂಡೊಯ್ಯುವ ದೃಶ್ಯ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಹೌದು. ಮಂಗಳೂರಿನ ಮೂಡಬಿದ್ರೆಯ ಕೋಟೆ ಬಾಗಿಲು ಎಂಬಲ್ಲಿ ರಾತೋ ರಾತ್ರಿ 2 ಗೋವುಗಳನ್ನು ಕಾರಿನಲ್ಲಿ ಕದ್ದು ಕೊಂಡೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಟೆಬಾಗಿಲಿನ ರಸ್ತೆ ಬದಿಯಲ್ಲಿ ಮಲಗಿದ್ದ ಗೋವನ್ನು ಇಬ್ಬರು ಕಳ್ಳರು ಕೈ ಕಾಲು ಕಟ್ಟುತ್ತಾರೆ. ನಂತರ ಇನ್ನಿಬ್ಬರು ಕಳ್ಳರು ಸ್ಕಾರ್ಪಿಯೋ ಕಾರಿನಲ್ಲಿ ಬಂದು ಕಾರಿನಲ್ಲಿ ಗೋವುಗಳನ್ನ ಎತ್ತಾಕ್ಕೊಂಡು ಪರಾರಿಯಾಗುತ್ತಾರೆ.

    ಸೆಪ್ಟೆಂಬರ್ 28ರಂದು ಗೋ ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಿಸಿಟಿವಿ ಕ್ಯಾಮರಾ ವಿಡಿಯೋ ಸಮೇತ ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಅಸಡ್ಡೆ ತೋರಿದ್ದಾರೆ. ಕಸಾಯಿಖಾನೆಗೆ ಕೊಡೊಯ್ಯುವ ಗೋಹಂತಕರ ವಿರುದ್ಧ ಕ್ರಮ ಕೈಗೊಳ್ಳದೆಯಿರುವ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೀದರ್ ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ: ಜನ್ರ ಆಕ್ರೋಶ

    ಬೀದರ್ ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ: ಜನ್ರ ಆಕ್ರೋಶ

    ಬೀದರ್: ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ? ಜನರು ಪ್ರತಿ ದಿನ ನಾಯಿಗಳ ಹಾವಳಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೆ?

    ಇದು ಬೀದರ್ ನಗರದ ಮಂದಿ ಬೀದಿ ನಾಯಿ ನಿಯಂತ್ರಿಸಲು ವಿಫಲರಾದ ನಗರ ಸಭೆ ಅಧಿಕಾರಿಗಳಿಗೆ ಕೇಳುತ್ತಿರುವ ಪ್ರಶ್ನೆ.

    ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗೋವುಗಳು ಮತ್ತು ಮನುಷ್ಯರಿಗೆ ನಾಯಿ ಭಯ ಶುರುವಾಗಿದ್ದು ಸಂಜೆಯಾಗುತ್ತಿದ್ದಂತೆ ಸಂಚಾರ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನಾಯಿಗಳದ್ದೇ ದರ್ಬಾರ್ ಶುರುವಾಗಿದ್ದು 20 ರಿಂದ 30 ನಾಯಿಗಳು ಒಟ್ಟಿಗೆ ಸೇರಿ ಅಟ್ಯಾಕ್ ಮಾಡಿ ಗೋವುಗಳನ್ನು ಹಿಗ್ಗಾಮಗ್ಗಾ ಕಚ್ಚುತ್ತಿರುವ ದೃಶ್ಯ ನೋಡಿದ್ದರೆ ಎಂಥವರಿಗೂ ಮೈಜುಂ ಎನ್ನುತ್ತೆ.

    ಬೀದರ್ ನಗರದ ಬಹುತೇಕ ಸ್ಥಳಗಳಲ್ಲಿ ನಾಯಿಗಳ ಸ್ವರಾಜ್ಯವಾಗಿದ್ದು 50 ರಿಂದ 100 ನಾಯಿಗಳ ಗುಂಪಿನ ದೃಶ್ಯ ನೋಡಿದರೆ ಎಂಥವರಿಗೆ ಈ ಕಡೆ ಹೋಗದೆ ಬೇಡಪ್ಪಾ ಎಂಬ ಭಯ ಶುರುವಾಗಿದೆ. ಈಗಾಗಲ್ಲೇ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ ಗಂಭೀರವಾಗಿ ಕಚ್ಚಿದ್ದು ಈಗಲೇ ನಿಯಂತ್ರಣ ಹೇರದೇ ಇದ್ದರೆ ಮತ್ತಷ್ಟು ಮಂದಿ ನಾಯಿಗಳಿಗೆ ತುತ್ತಾಗುವ ಸಾಧ್ಯತೆಯಿದೆ.

    ಸಮಸ್ಯೆಯ ಬಗ್ಗೆ ಶಾರ್ಹೇದ್ ಅಲಿ ಎಂಬುವರು ನಗರಸಭೆ ದೂರು ನೀಡಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ ನಾಯಿಗಳ ಹಾವಳಿ ಮಾತ್ರ ದಿನೇ ದಿನೇ ಹೆಚ್ಚುತ್ತಿದ್ದು, ನಗರಸಭೆ ಅಧಿಕಾರಿಗಳ ನಕಲಿ ಮಾಹಿತಿ ನೀಡಿ ನಿರ್ಲಕ್ಷ್ಯ ತೋರಿದ್ದಾರೆ.

  • ದೇವಾಲಯದ ಪ್ರವೇಶ ದ್ವಾರಕ್ಕೆ ಕತ್ತರಿಸಿದ ಗೋವಿನ ಕಾಲುಗಳನ್ನು ಕಟ್ಟಿದ ಕಿಡಿಗೇಡಿಗಳು!

    ದೇವಾಲಯದ ಪ್ರವೇಶ ದ್ವಾರಕ್ಕೆ ಕತ್ತರಿಸಿದ ಗೋವಿನ ಕಾಲುಗಳನ್ನು ಕಟ್ಟಿದ ಕಿಡಿಗೇಡಿಗಳು!

    ಮಡಿಕೇರಿ: ಕಿಡಿಗೇಡಿಗಳು ದೇವಾಲಯದ ಪ್ರವೇಶ ದ್ವಾರಕ್ಕೆ ಕತ್ತರಿಸಿದ ಗೋವಿನ ಕಾಲುಗಳನ್ನು ಕಟ್ಟಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ನಟ್ಟುಮಾಡುವಿನಲ್ಲಿ ನಡೆದಿದೆ.

    ಕಕ್ಕಬ್ಬೆ ಪಟ್ಟಣದ ವಿರಾಜಪೇಟೆ ರಸ್ತೆಯ ಬದಿಯಲ್ಲಿ ಇರುವ ಭಗವತಿ ದೇವಾಲಯದಲ್ಲಿ ಕಿಡಿಗೇಡಿಗಳು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ 4 ಕಾಲುಗಳನ್ನು ಹಾಕಿ ದೇವಾಲಯದ ಪ್ರವೇಶ ದ್ವಾರದಲ್ಲಿ ಇಟ್ಟಿದ್ದಾರೆ.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗೋವಿನ ಕಾಲುಗಳು ತುಂಬಿದ್ದ ಚೀಲವನ್ನ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಜಿಪಂ ಅಧ್ಯಕ್ಷ ಬಿಎ ಹರೀಶ್, ಸದಸ್ಯ ಮುರಳಿ ಕರುಂಬಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಆರೋಪಿಗಳನ್ನು ತಕ್ಷಣ ಬಂಧಿಸದಿದ್ದಲ್ಲಿ ಕೊಡಗು ಬಂದ್ ಮಾಡುವ ಬಗ್ಗೆ ಎಚ್ಚರಿಕೆಯನ್ನ ನೀಡಿದ್ದಾರೆ.

    ಈ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕರು ಮೇಲೆ ಹರಿದ ಟಾಟಾ ಸುಮೋ- ಕಂದಮ್ಮನ ಕಂಡು ತಾಯಿ ಆಕಳಿನ ಮೂಕರೋಧನೆ

    ಕರು ಮೇಲೆ ಹರಿದ ಟಾಟಾ ಸುಮೋ- ಕಂದಮ್ಮನ ಕಂಡು ತಾಯಿ ಆಕಳಿನ ಮೂಕರೋಧನೆ

    ಬಳ್ಳಾರಿ: ತಾಯಿ ಹಸುವಿನ ಜೊತೆ ಮೇಯಲು ಹೋಗಿದ್ದ ಕರುವಿನ ಮೇಲೆ ಟಾಟಾ ಸುಮೋ ವಾಹನವೊಂದು ಹರಿದು ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೊಸಪೇಟೆ ನಗರದ ಬೈಪಾಸ್ ರಸ್ತೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಕರು ಮೃತಪಟ್ಟಿತ್ತು. ತನ್ನ ಕರುಳ ಕುಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ತಾಯಿ ಹಸು, ಕರುವನ್ನು ಎಬ್ಬಿಸುವ ಪ್ರಯತ್ನ ಮಾಡಿದ ದೃಶ್ಯ ಎಂತವರಿಗೂ ಕರುಳು ಕಿವುಚುವಂತಿತ್ತು.

    ಅಪಘಾತದಲ್ಲಿ ಕರು ಸ್ಥಳದಲ್ಲೇ ಮೃತಪಟ್ಟ ನಂತರ ತಾಯಿ ಹಸು ಕರುವನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನಪಟ್ಟಿತು. ಅಲ್ಲದೇ ಬೇರೆಯವರು ಸಹ ಕರುವಿನ ಬಳಿ ಬರದಂತೆ ಕೆಲ ಕಾಲ ಚೀರಾಟ ನಡೆಸಿ ಮೂಕರೋಧನೆ ಇಟ್ಟ ದೃಶ್ಯ ನೋಡುಗರ ಮನಕಲಕುವಂತೆ ಮಾಡಿತು.

    https://youtu.be/5XIXJnLbOMY