Tag: cow

  • ಬೀದಿ ನಾಯಿ, ದನಗಳಿಗೆ ವಿಶೇಷ ಆರೈಕೆ ಮಾಡ್ತಾರೆ ತುಮಕೂರಿನ ವಕೀಲ ನಟರಾಜು

    ಬೀದಿ ನಾಯಿ, ದನಗಳಿಗೆ ವಿಶೇಷ ಆರೈಕೆ ಮಾಡ್ತಾರೆ ತುಮಕೂರಿನ ವಕೀಲ ನಟರಾಜು

    ತುಮಕೂರು: ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರೋ ನಟರಾಜು ಅವರಿಗೆ ಮೂಕಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇವರು ಅನಾರೋಗ್ಯಕ್ಕೀಡಾಗೋ ಹತ್ತಾರು ಹಸುಗಳು, ನೂರಾರು ಬೀದಿ ನಾಯಿಗಳ ರಕ್ಷಕರಾಗಿದ್ದಾರೆ.


    ವೃತ್ತಿಯಲ್ಲಿ ವಕೀಲರಾಗಿದ್ದರೂ ಇವರ ಪ್ರವೃತ್ತಿ ಮಾತ್ರ ಮೂಕ ಪ್ರಾಣಿಗಳ ರಕ್ಷಣೆ ಮಾಡುವುದು. ಹಸುಗಳು, ನಾಯಿಗಳು ಅಂದರೆ ಎಲ್ಲಿಲ್ಲದ ಅಕ್ಕರೆ. 8 ವರ್ಷಗಳಿಂದ ಸಾಕು ನಾಯಿ, ಬೀದಿ ನಾಯಿ ಎಂಬ ಬೇಧವಿಲ್ಲದೆ ಆರೈಕೆ ಮಾಡ್ತಿದ್ದಾರೆ. ಬೀದಿ ನಾಯಿಮರಿಗಳನ್ನ ಬೇರೆಯವರಿಗೆ ನೀಡಿ, ಅವುಗಳಿಗೆ ವಾರಕ್ಕೊಮೆ ವಿಶೇಷ ಆಹಾರ ಕೊಟ್ಟು ಬರ್ತಾರೆ. ನಟರಾಜು ಅವರು ಬಂದರೆ ಸಾಕು ನಾಯಿಗಳು ಓಡೋಡಿ ಬರ್ತವೆ.

    ಬಿಡಾಡಿ ದನಗಳು ಕಂಡರೂ ಮೈ ಸವರಿ ಮುದ್ದು ಮಾಡ್ತಾರೆ. ಹಸುಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವುಗಳಿಗೆ ವಿಶೇಷ ಆರೈಕೆ ಮಾಡ್ತಾರೆ. ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ್ತಾರೆ. ಮನುಷ್ಯರಿಗೆ ಮನುಷ್ಯರೇ ಶತ್ರುಗಳು ಅನ್ನೋ ಈ ಕಾಲದಲ್ಲಿ ಮೂಕ ಪ್ರಾಣಿಗಳಿಗಾಗಿ ಮಿಡಿಯುವ ಲಾಯರ್ ನಟರಾಜು ಕಾರ್ಯ ಶ್ಲಾಘನಾರ್ಹವಾಗಿದೆ.

    https://www.youtube.com/watch?v=8mygngfrIyw

  • ಆಕಸ್ಮಿಕ ಬೆಂಕಿ- ಎರಡು ಹಸುಗಳು ಸಜೀವ ದಹನ

    ಆಕಸ್ಮಿಕ ಬೆಂಕಿ- ಎರಡು ಹಸುಗಳು ಸಜೀವ ದಹನ

    ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.

    ಹೊನ್ನೂರು ಗ್ರಾಮದ ಚಿಕ್ಕಣ್ಣ ಎಂಬವರು ಬುಧವಾರ ರಾತ್ರಿ ತಮ್ಮ ಕೊಟ್ಟಿಗೆಯಲ್ಲಿ ಐದು ಹಸುಗಳನ್ನು ಕಟ್ಟಿ ಹಾಕಿದ್ದರು. ಈ ವೇಳೆ ಕೊಟ್ಟಿಗೆಗೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಹಸುಗಳು ಕೂಗಿಕೊಂಡಿವೆ. ಹಸುಗಳ ಕೂಗಾಟ ಕೇಳಿಸಿಕೊಂಡು ಚಿಕ್ಕಣ್ಣ ಮನೆಯಿಂದ ಬಂದು ನೋಡಿದ್ದು, ತಕ್ಷಣ ಕೊಟ್ಟಿಗೆಗೆ ನುಗ್ಗಿ ಮೂರು ಹಸುಗಳನ್ನು ರಕ್ಷಣೆ ಮಾಡಿದ್ದರೆ. ಆದರೆ ಎರಡು ಹಸುಗಳು ಬೆಂಕಿಯಲ್ಲಿ ಸಜೀವ ದಹನಗೊಂಡಿದ್ದವು.

    ಹಸುಗಳನ್ನು ರಕ್ಷಣೆ ಮಾಡುವ ವೇಳೆ ಚಿಕ್ಕಣ್ಣಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಯಳಂದೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊಟ್ಟಿಗೆಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

  • ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮೂಲಮಠದ ಹಟ್ಟಿಯಿಂದ ಗಬ್ಬದ (ಗರ್ಭಿಣಿ) ಹಸುವಿನ ಕಳ್ಳತನವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕನೇ ಬಾರಿಗೆ ಗೋಶಾಲೆಗೆ ನುಗ್ಗಿದ್ದಾರೆ.

    ಉಡುಪಿ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮಠದ ಮೂಲ ಸಂಸ್ಥಾನ ಉಡುಪಿಯ ಹೊರವಲಯದಲ್ಲಿರುವ ಹಿರಿಯಡ್ಕದಲ್ಲಿದೆ. ಇಲ್ಲಿಗೆ ಭಾನುವಾರ ರಾತ್ರಿ ನಾಲ್ಕು ಮಂದಿ ಕಳ್ಳರು ಕಾರಿನಲ್ಲಿ ಬಂದಿದ್ದಾರೆ. ಟಾರ್ಚ್ ಹಿಡಿದು ಮಠದ ಕಡೆ ಬಂದ ಇಬ್ಬರು ಗೋಶಾಲೆಗೆ ನುಗ್ಗಿದ್ದಾರೆ.

    ಕೆಲವೇ ಕ್ಷಣಗಳಲ್ಲಿ ಒಂದು ಹಸುವನ್ನು ಹಗ್ಗ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಠದ ಸಿಬ್ಬಂದಿಗೆ ಕಳ್ಳತನದ ಶಬ್ದ ಕೇಳಿ ಎದ್ದು ಬಂದಿದ್ದಾರೆ. ಅಷ್ಟರಲ್ಲಿ ಒಂದು ಹಸುವನ್ನು ಕಾರಿಗೆ ತುಂಬಿಕೊಂಡಾಗಿತ್ತು. ಸಿಬ್ಬಂದಿ ತಕ್ಷಣ ಸೈರನ್ ಮೊಳಗಿಸಿದ್ದಾರೆ. ಬಂದ ದುಷ್ಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಶೀರೂರು ಮಠದಲ್ಲಿ ಇದು ಮೂರನೇ ಬಾರಿ ಕಳ್ಳತನ ಆಗುತ್ತಿರೋದು. ಒಂದು ಬಾರಿ ಖಾಲಿ ಕೈಯಲ್ಲಿ ಪರಾರಿಯಾದ ಕಳ್ಳರು, ಮತ್ತೊಮ್ಮೆ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಇದೀಗ ಮೂರನೇ ಬಾರಿ ಒಂದು ಹಸುವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಹಿಂದೆ ಒಮ್ಮೆ ಕಳ್ಳತನ ಮಾಡುತ್ತಿದ್ದ ವಾಹನವನ್ನು ಸ್ವತಃ ಶೀರೂರು ಸ್ವಾಮೀಜಿಯೆ ಕಾರಿನಲ್ಲಿ ಬೆನ್ನಟ್ಟಿ ಹೋಗಿದ್ದರು. ಈ ಸಂದರ್ಭ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿತ್ತು. ಈ ಸಂದರ್ಭ ಕೂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

  • ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಂಗಳೂರು: ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ.

    ಫೆಬ್ರವರಿ 16 ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಸ್ಕಾರ್ಪಿಯೋ ಮತ್ತು ಮಾರುತಿ 800 ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಓಡಿಸಿಕೊಂಡು ಹೋಗಿ ಅಪಹರಿಸಿ ಕಾರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಳ್ಯ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿಯೇ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ.

    ಬಿಡಾಡಿ ದನಗಳನ್ನು ಮಾರುತಿ 800 ಕಾರ್ ನಲ್ಲಿ ಅಮಾನುಷವಾಗಿ ತುಂಬಿಕೊಂಡು ಹೋಗಿ ಹತ್ಯೆ ಮಾಡುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೂ ಕಳ್ಳತನ ಮಾತ್ರ ನಿಂತಿಲ್ಲ. ರಸ್ತೆ ಬದಿಯ ದನಗಳ ಸ್ಥಿತಿ ಈ ರೀತಿಯಾದ್ರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲೂ ಕಳ್ಳರು ಅಟ್ಟಹಾಸ ಮೆರೆಯುತ್ತಿದ್ದರು. ಅಲ್ಲದೇ ಕೊಟ್ಟಿಗೆಗೆ ನುಗ್ಗಿ ದನಕಳ್ಳತನ ನಡೆಸುತ್ತಿದ್ದಾರೆ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

    https://www.youtube.com/watch?v=jBR9MhxRPEQ

  • ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ – ಎತ್ತಿನ ಕಾಲು ಮುರಿತ

    ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ – ಎತ್ತಿನ ಕಾಲು ಮುರಿತ

    ಮಂಡ್ಯ: ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತಿಗೆ ಕಾಲು ಮುರಿದಿದ್ದು, ಮತ್ತೊಂದು ಎತ್ತಿಗೆ ಗಾಯವಾಗಿರುವ ಘಟನೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗೇಟ್ ಬಳಿ ನಡೆದಿದೆ.

    ಇಂದು ಮುಂಜಾನೆ ಕೆಎಂ ದೊಡ್ಡಿ ಮದ್ದೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಎತ್ತಿನಗಾಡಿ ಕಬ್ಬು ತುಂಬಿಕೊಂಡು ಕೆ.ಎಂ ದೊಡ್ಡಿಯಲ್ಲಿದ್ದ ಸಕ್ಕರೆ ಕಾರ್ಖಾನೆಗೆ ಹೋಗುತ್ತಿತ್ತು. ಕಾರು ಚಾಲಕ ಮದ್ದೂರಿನಿಂದ ವೇಗವಾಗಿ ದೊಡ್ಡಿ ಕಡೆ ಹೋಗುತ್ತಿದ್ದನು. ಆದರೆ ಕಾರು ಚಾಲಕನ ನಿಯಂತ್ರಣ ತಪ್ಪಿ ಎತ್ತಿನಗಾಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

    ಅಪಘಾತದಲ್ಲಿ ಎತ್ತಿನಗಾಡಿ ಓಡಿಸುತ್ತಿದ್ದ ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಸಂಬಂಧ ಕೆ.ಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟವಾಡುತ್ತಿದ್ದಾಗ ಏಕಾಏಕಿ ಬಂದು ಮೇಲೆರಗಿದ ಹಸುವಿನಿಂದ ತಮ್ಮನನ್ನು ರಕ್ಷಿಸಿದ ಅಕ್ಕ!

    ಆಟವಾಡುತ್ತಿದ್ದಾಗ ಏಕಾಏಕಿ ಬಂದು ಮೇಲೆರಗಿದ ಹಸುವಿನಿಂದ ತಮ್ಮನನ್ನು ರಕ್ಷಿಸಿದ ಅಕ್ಕ!

    ಕಾರವಾರ: ಮನೆಯ ಮುಂದೆ ಆಟವಾಡುತ್ತಿದ್ದಾಗ ಹಸುವೊಂದು ಬಂದು ತಮ್ಮನ ಮೇಲೆ ಎಗರಿದ್ದು, ಕೂಡಲೇ ತನ್ನ ತಮ್ಮನ್ನು ಅಕ್ಕ ರಕ್ಷಣೆ ಮಾಡಿ ಜೀವ ಉಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲ್ ಗೋಣ್ ನಲ್ಲಿ ನಡೆದಿದೆ.

    ಸೋಮವಾರ ಬೆಳಗ್ಗೆ ಮನೆಯ ಮುಂದೆ ಕಿರಣ್ ಎಂಬವರ ಮಕ್ಕಳಾದ ಕಾರ್ತಿಕ್ ಹಾಗೂ ಆರತಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹಸುವೊಂದು ಬಂದು ಎರಗಿದೆ. ತಕ್ಷಣದಲ್ಲೇ ಆ ಪುಟ್ಟ ಹುಡುಗಿ ಚಿಕ್ಕ ಸೈಕಲ್‍ನಲ್ಲಿ ಕುಳಿತಿದ್ದ ತಮ್ಮನನ್ನು ತನ್ನ ಕೈಗಳಿಂದ ಬಾಚಿ ಹೆದರದೇ ರಕ್ಷಿಸಿದ್ದಾಳೆ. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೇ ಇಬ್ಬರೂ ಸುರಕ್ಷಿತವಾಗಿದ್ದಾರೆ.

    ಸ್ವಲ್ಪ ಸಮಯದ ನಂತರ ಮನೆಯವರು ಬಂದು ಹಸುವನ್ನು ಓಡಿಸಿದ್ದಾರೆ. ಈಕೆಯ ಧೈರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಕ್ಕ ತನ್ನ ತಮ್ಮನನ್ನು ಹಸುವಿನಿಂದ ರಕ್ಷಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    https://www.youtube.com/watch?v=tY7SmCyRt3s

  • ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

    ಚಿಕಿತ್ಸೆಗಾಗಿ ಕರುವನ್ನು ವಾಹನದಲ್ಲಿ ಕರೆದೊಯ್ದರೆ, ಆಸ್ಪತ್ರೆವರೆಗೂ ಓಡೋಡಿ ಬಂತು ತಾಯಿ ಹಸು

    ಹಾವೇರಿ: ಗಾಯದ ಸಮಸ್ಯೆಯಿಂದ ನಿತ್ರಾಣಗೊಂಡು ಬಳಲುತ್ತಿದ್ದ ಕರುವನ್ನು ಪಶು ಆಸ್ಪತ್ರೆಗೆ ಸಾಗಿಸುತ್ತಿದ್ದರೆ ತಾಯಿ ಹಸು ಆಸ್ಪತ್ರೆವರೆಗೂ ವಾಹನದ ಹಿಂದೆಯೇ ಓಡೋ ಬಂದಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

    ಹಾವೇರಿ ನಗರದ ಜೆ.ಪಿ.ವೃತ್ತದ ಬಳಿ ಬೀದಿ ಹಸುವಿನ ಕರುವೊಂದು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅನಾರೋಗ್ಯದಿಂದ ಅಸ್ವಸ್ಥವಾಗಿದ್ದ ಕರುವನ್ನು ಸ್ಥಳೀಯರು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ತನ್ನ ಕಂದನನ್ನು ಯಾರೋ ಕರೆದುಕೊಂಡು ಹೋಗುತ್ತಿದ್ದನ್ನು ಕಂಡ ತಾಯಿ ಹಸು ವಾಹನದ ಹಿಂದೆಯೇ ಬೆನ್ನತ್ತಿ ಹೋಗಿದೆ.

    ಕರುವಿಗೆ ಚಿಕಿತ್ಸೆ ನೀಡುವವರೆಗೂ ತಾಯಿ ಹಸು ಮಾತ್ರ ಆಸ್ಪತ್ರೆಯ ಎದುರುಗಡೆಯೇ ನಿಂತಿತ್ತು. ವೈದ್ಯರ ಚಿಕಿತ್ಸೆ ನಂತರ ಕರುವನ್ನು ಕಂಡು ಮುದ್ದಾಡಿದ ಹಾಲು ಉಣಿಸಿ ಹೆತ್ತತಾಯಿ ಪ್ರೀತಿಗಿಂತ ಮಿಗಿಲಾಗಿದ್ದು ಯಾವುದು ಇಲ್ಲ ಅನ್ನೋದನ್ನ ಹಸು ಸಾಬೀತು ಮಾಡಿತು. ಈ ತಾಯಿ ಮಮತೆ ಕಂಡು ಜನರು ಬೆರಗಾಗಿ ನೋಡಿ ಒಂದು ಕ್ಷಣ ಭಾವುಕರಾದರು.

    https://youtu.be/7f6RWSSVRaQ

  • 3 ಹಸುಗಳ ಜೊತೆ ಸೆಕ್ಸ್, ಒಂದು ಹಸು ಸಾವು – ಆರೋಪಿ ಅರೆಸ್ಟ್

    3 ಹಸುಗಳ ಜೊತೆ ಸೆಕ್ಸ್, ಒಂದು ಹಸು ಸಾವು – ಆರೋಪಿ ಅರೆಸ್ಟ್

    ಗಾಂಧಿನಗರ: ಮಾನಸಿಕ ಅಸ್ವಸ್ಥನೊಬ್ಬ ಮೂರು ಹಸುಗಳ ಜೊತೆ ಅಸ್ವಾಭವಿಕವಾಗಿ ಲೈಂಗಿಕ ಕ್ರಿಯೆ ಮಾಡಿದ್ದು, ಒಂದು ಹಸು ಸಾವನ್ನಪ್ಪಿರುವ ಘಟನೆ ಗುಜರಾತ್‍ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ನಡೆದಿದೆ.

    ಆರೋಪಿಯನ್ನು ರಥೋಡಿಯಾ ಎಂದು ಗುರುತಿಸಿದ್ದು, ವರ್ನಾಮಾ ಪೊಲೀಸರು ಈಗ ಆತನನ್ನು ಬಂಧಿಸಿದ್ದಾರೆ. ಈತ ಭಾನುವಾರ ಹಾಗೂ ಸೋಮವಾರದ ಮಧ್ಯರಾತ್ರಿ ಮೂರು ಹಸುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಹಸುಗಳ ಮಾಲೀಕ ಲಾಲ್‍ಜಿ ರಾಬಾರಿ ಸೋಮವಾರ ಮುಂಜಾನೆ ಹಸುಗಳ ಕೊಟ್ಟಿಗೆಗೆ ಬಂದು ನೋಡಿದಾಗ ಅನುಮಾನಗೊಂಡಿದ್ದರು.

    ಮೂರು ಹಸುಗಳ ಕಾಲುಗಳನ್ನು ಕಟ್ಟಲಾಗಿತ್ತು. ನಾಲ್ಕನೇ ಹಸು ಸಾವನ್ನಪ್ಪಿತ್ತು ಎಂದು ಮಾಲೀಕ ಲಾಲ್‍ಜೀ ಹೇಳಿದ್ದಾರೆ. ಘಟನೆಯಿಂದ ಲಾಲ್‍ಜೀಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆದಿದೆ ಎಂಬ ಶಂಕೆ ಮೂಡಿತ್ತು. ತನ್ನ ಕೆಲಸಗಾರ ರಥೋಡಿಯಾ ಮೇಲೆ ಅನುಮಾನ ಬಂದಿತ್ತು. ಯಾಕಂದ್ರೆ ಎರಡು ವರ್ಷಗಳ ಹಿಂದೆ ರಥೋಡಿಯಾ ಕರುವಿನ ಮೇಲೆ ಇದೇ ರೀತಿಯ ಕೃತ್ಯವೆಸಗಿದ್ದನ್ನು ಲಾಲ್‍ಜೀ ನೆನಪಿಸಿಕೊಂಡಿದ್ದರು.

    ಮಾಲೀಕ ಲಾಲ್‍ಜೀ ಅವರೇ ಪೊಲೀಸರಿಗೆ ರಥೋಡಿಯಾನನ್ನು ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈಗ ವರ್ನಾಮಾ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಕೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿ ರಥೋಡಿಯಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

  • ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಒದ್ದಾಡಿದ ಹಸು – ಗೋಮಾತೆ ರಕ್ಷಿಸಿದ ಮೈಸೂರು ಪಾಲಿಕೆ ಸಿಬ್ಬಂದಿ

    ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಒದ್ದಾಡಿದ ಹಸು – ಗೋಮಾತೆ ರಕ್ಷಿಸಿದ ಮೈಸೂರು ಪಾಲಿಕೆ ಸಿಬ್ಬಂದಿ

    ಮೈಸೂರು: ಆಕಸ್ಮಿಕವಾಗಿ ಚರಂಡಿಗೆ ಬಿದ್ದ ಹಸುವನ್ನು ಮೈಸೂರು ನಗರ ಪಾಲಿಕೆಯ ಸಿಬ್ಬಂದಿ ರಕ್ಷಿಸಿದ್ದಾರೆ.

    ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿನ ದೊಡ್ಡ ಚರಂಡಿಗೆ ಹಸು ಬಿದ್ದಿದೆ. ಚರಂಡಿಯಲ್ಲಿ ಬೆಳೆದಿದ್ದ ಹುಲ್ಲನ್ನು ತಿನ್ನಲು ಹಸು ಮುಂದಾಗಿ ಚರಂಡಿ ಒಳಗೆ ಬಿದ್ದು, ಮೇಲೆ ಬರಲು ಸಾಧ್ಯವಾಗದೇ ಪರದಾಡುತ್ತಿತ್ತು.

    ಇದನ್ನು ಕಂಡ ಸಾರ್ವಜನಿಕರು ಮೈಸೂರು ನಗರ ಪಾಲಿಕೆಯ ಅಭಯ ತಂಡಕ್ಕೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಚರಂಡಿಯಿಂದ ಮೇಲೆ ಎತ್ತಿದ್ದಾರೆ.

  • ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

    ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

    ದಾವಣಗೆರೆ/ಬೆಂಗಳೂರು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವದಿಂದ ಕಾಡಾನೆಗಳು ದಾಂಧಲೆ ನಡೆಸಿದ್ದು, ಹೊನ್ನಾಳಿ ಸಮೀಪ ಹಸುಗಳನ್ನ ತಿವಿದು ಗಾಯಗೊಳಿಸಿವೆ.

    ದೇವರಹೊನ್ನಾಳಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳು ಎರಡು ಹಸುಗಳಿಗೆ ತೀವ್ರವಾಗಿ ಇರಿದಿವೆ. ಇದರಿಂದ ಹಸುವಿನ ಕರುಳು ಹೊರಬಂದಿದ್ದು, ಒದ್ದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

    ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವರಹೊನ್ನಾಳಿ ಗ್ರಾಮದ ಭರಮಪ್ಪ, ಬೆನಕನಹಳ್ಳಿ ಗ್ರಾಮದ ಮಳಲಿ ರಾಜಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ.

    ಗಾಯಾಳುಗಳನ್ನ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಹೊನ್ನಾಳಿ ತಾಲೂಕಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸುಗ್ಗಿ ಕಾಲ ಬಂತೆಂದರೆ ಸಾಕು ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಗುಂಪು ಪ್ರತ್ಯಕ್ಷವಾಗುತ್ತವೆ. ಇಂದು ಮುಂಜಾನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ, ಡೆಂಕಣಿಕೋಟೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ 30 ಆನೆಗಳು ಗುಂಪು ಕರ್ನಾಟಕ ಗಡಿ ಪ್ರದೇಶವಾದ ಆನೇಕಲ್ ತಾಲೂಕಿನ ಮುತ್ಯಾಲಮಡುವು ಅರಣ್ಯ ಪ್ರದೇಶದತ್ತ ಮುಖ ಮಾಡಿವೆ. ಈ ಕಾಡಾನೆಗಳು ಇಷ್ಟು ದಿನ ಡೆಂಕಣಿಕೋಟೆ ಗ್ರಾಮದ ಸುತ್ತ ಮುತ್ತ ಹಾವಳಿ ನೀಡಿ, ಬೆಳೆಹಾನಿ ಮಾಡಿ ರೈತರಲ್ಲಿ ಅತಂಕ ಮೂಡಿಸಿದ್ದವು.

    ಆನೆಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ತಮಿಳುನಾಡು ಅರಣ್ಯ ಸಿಬ್ಬಂದಿ ಆನೆಗಳನ್ನು ಕರ್ನಾಟಕದತ್ತ ಒಡಿಸಿದ್ದು ಸದ್ಯ ಮುತ್ಯಾಲಮಡುವು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಗುಂಪು ಬೀಡು ಬಿಟ್ಟಿವೆ. ಇದರಲ್ಲಿ ಮರಿ ಆನೆಗಳು ಇರಿವುದು ವಿಶೇಷವಾಗಿದೆ.