Tag: cow

  • ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

    ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

    – ಮಂಗಳೂರಿನಲ್ಲೊಂದು ಮನಕಲಕುವ ಘಟನೆ

    ಮಂಗಳೂರು: ತಾಯಿ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯ ಇಲ್ಲ ಅನ್ನುವುದಕ್ಕೆ ಈ ಗೋವಿನ ಕಥೆಯೇ ನಿದರ್ಶನ. ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದೆ.

    ಆಗ ಅದು ಆರು ತಿಂಗಳ ಗರ್ಭಿಣಿಯಾಗಿದ್ದ ಗೋವು. ತನ್ನ ಪಾಡಿಗೆ ಅಡ್ಡಾಡುತ್ತ, ಕಂದನ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಕಟುಕರು ರಾತ್ರೋರಾತ್ರಿ ಹೊತ್ತೊಯ್ದಿದ್ದರು. ಅಲ್ಲದೆ ವಾಹನಕ್ಕೆ ತುಂಬುವಾಗಲೇ ಗೋವಿನ ಎರಡು ಕಾಲನ್ನು ಕಡಿದು ಹಾಕಿದ್ದರು. ಆದರೆ ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಆಕೆ ಕಳ್ಳರ ಕೈಯಿಂದ ಬಿಡಿಸಿ ವಾಹನದಿಂದ ಹೊರಕ್ಕೆ ನೆಗೆದು ಪ್ರಾಣ ಕಾಪಾಡಿಕೊಂಡಿದ್ದಳು ಗೋಮಾತೆ.

    ಹೀಗೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವನ್ನು ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ತನ್ನ ಮುಂಗಾಲುಗಳನ್ನು ಕಳೆದುಕೊಂಡ ಗೋಮಾತೆ ಮತ್ತೆ ಮೂರು ತಿಂಗಳು ನಿಲ್ಲಲೂ ಆಗದೆ, ಮಲಗಲೂ ಆಗದೆ ಕಷ್ಟ ಪಟ್ಟು ಕೊನೆಗೂ ಗಂಡು ಕರುವಿಗೆ ಜನ್ಮ ನೀಡಿದ್ದಾಳೆ. ದುರಂತ ಏನಂದರೆ ತಾನು ಸತ್ತು ಕರುವನ್ನು ಬದುಕಿಸಿದ ಆ ಗೋವು ಕರುವಿಗೆ ಜನ್ಮ ನೀಡಿದ ಹತ್ತೇ ದಿನದಲ್ಲಿ ಸಾವನ್ನಪ್ಪಿದೆ. ಹೀಗಾಗಿ ಹತ್ತು ದಿನದಲ್ಲಿ ಕರು ತಬ್ಬಲಿಯಾಗಿದೆ.

    ಈ ಪುಣ್ಯಕೋಟಿಗೆ ಟ್ರಸ್ಟ್ ಸಿಬ್ಬಂದಿ ರಾಧೆ ಎಂದು ಹೆಸರಿಟ್ಟಿದ್ದರೆ. ತಬ್ಬಲಿ ಗಂಡು ಕರುವಿಗೆ ಚೋಟಾ ಭೀಮ್ ಎಂದು ಹೆಸರಿಟ್ಟಿದ್ದಾರೆ. ಚೋಟಾ ಭೀಮ್ ಈಗ ತಾಯಿ ಇಲ್ಲದ ತಬ್ಬಲಿಯಾಗಿದ್ದು, ಟ್ರಸ್ಟ್ ಸಿಬ್ಬಂದಿ ಬಾಟಲಿ ಹಾಲುಣಿಸಿ ಸಾಕುತ್ತಿದ್ದಾರೆ. ತನ್ನ ಮಗುವನ್ನು ಉಳಿಸಲು ಮೂರು ತಿಂಗಳು ಸಾವು ಬದುಕಿನ ನಡುವೆ ಹೋರಾಡಿ ಕರು ಜನನವಾದ ಕೂಡಲೇ ಮರಣ ಹೊಂದಿದ ರಾಧೆಯ ತಾಯಿ ಪ್ರೇಮಕ್ಕೆ ಟ್ರಸ್ಟ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕುಂದಾಪುರದಲ್ಲಿ ಗೋವು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

    ಕುಂದಾಪುರದಲ್ಲಿ ಗೋವು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

    ಉಡುಪಿ: ಜಿಲ್ಲೆಯಾದ್ಯಂತ ಗೋವು ಕಳ್ಳರ ಅಟ್ಟಹಾಸ ಜಾಸ್ತಿಯಾಗಿದೆ. ರಸ್ತೆ ಬದಿ ಮಲಗುವ ಹಸುಗಳನ್ನೆಲ್ಲ ಕಳ್ಳತನ ಮಾಡುತ್ತಿರುವ ಕಳ್ಳರು ಕೊಟ್ಟಿಗೆಗೂ ನುಗ್ಗಿ ಹಸುಗಳ ಕಳ್ಳತನ ಮಾಡುತ್ತಿದ್ದಾರೆ. ಈ ನಡುವೆ ಕುಂದಾಪುರ ತಾಲೂಕಿನಲ್ಲಿ ನಡೆದ ಗೋವು ಕಳ್ಳತನದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕುಂದಾಪುರ ತಾಲೂಕಿನ ಸಿದ್ದಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಬಸ್ರೂರು ಮಹಾಲಿಂಗೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಗೋವು ಕಳ್ಳತನ ನಡೆಸಲು ದುಷ್ಕರ್ಮಿಗಳು ವಿಫಲ ಯತ್ನಿ ನಡೆಸಿದ್ದಾರೆ. ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲೇನಿದೆ?:
    ತಡರಾತ್ರಿ 1 ಗಂಟೆ 45 ಸುಮಾರಿಗೆ ಹೆದ್ದಾರಿಯಲ್ಲಿ ಬಿಳಿಬಣ್ಣದ ರಿಟ್ಜ್ ಕಾರು ಬಂದು ನಿಲ್ಲುತ್ತದೆ. ಕಾರಿನಿಂದ ಒಬ್ಬೊಬ್ಬರಾಗಿ ನಾಲ್ವರು ಮುಸುಕುಧಾರಿಗಳು ಇಳಿದು ಬರುತ್ತಾರೆ. ಪೆಟ್ರೋಲ್ ಬಂಕಿನೊಳಗೆ ಬಂದು ಅಲ್ಲಿದ್ದ ಬಿಡಾಡಿ ಗೋವುಗಳನ್ನು ಹಿಡಿಯಲು ಯತ್ನ ನಡೆಸುತ್ತಾರೆ. ಕೊನೆಗೆ ಕರುವೊಂದು ಕೈಗೆ ಸಿಗಬೇಕೆನ್ನುವ ಹೊತ್ತಲ್ಲಿ ಯಾವುದೋ ವಾಹನದ ಬರುವಿಕೆಗೆ ಬೆದರಿ ನಾಲ್ವರು ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗುತ್ತಾರೆ.

    ಇದೇ ಜಾಗದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎರಡು ಹಸುಗಳನ್ನು ಕಾರಲ್ಲಿ ತುಂಬಿ ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಕಳೆದ 10 ವರ್ಷದಿಂದ ಗೋವು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

    ವಿಶ್ವ ಹಿಂದೂ ಪರಿಷದ್ ಮುಖಂಡ ಸುನೀಲ್ ಮಾತನಾಡಿ, ಈ ಒಂದು ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿರಬಹುದು. ಇಂತಹ ಸಾವಿರ ಕಳ್ಳತನ ನಡೆಯುತ್ತಿದ್ದರೂ ಕಾನೂನಾತ್ಮಕ ಕ್ರಮ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಟ್ಟಿಯಿಂದ ಹಸು ಕಳ್ಳತನ ಆಗುತ್ತಿದೆ. ಕೃಷಿಕರು ಹಸು ಸಾಕಣೆಗೆ ಹಿಂದೇಟು ಹಾಕುವ ಪರಿಸ್ಥಿತಿ ಕರಾವಳಿಯಲ್ಲಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

    https://www.youtube.com/watch?v=10DMOxtJCiY

  • ಒಂದು ಹಸುವಿನಿಂದ ಪಶುಸಂಗೋಪನೆ ಆರಂಭ- ಇಂದು ಬಿಎಂಡಬ್ಲ್ಯೂ ಕಾರಲ್ಲೇ ಓಡಾಟ

    ಒಂದು ಹಸುವಿನಿಂದ ಪಶುಸಂಗೋಪನೆ ಆರಂಭ- ಇಂದು ಬಿಎಂಡಬ್ಲ್ಯೂ ಕಾರಲ್ಲೇ ಓಡಾಟ

    ಬೆಂಗಳೂರು: ವ್ಯಕ್ತಿಯೊಬ್ಬರು ಒಂದು ಹಸುವಿನ ಮೂಲಕ ಪಶುಸಂಗೋಪನೆ ಆರಂಭಿಸಿ ಈಗ ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಟ ಮಾಡುತ್ತಿದ್ದಾರೆ.

    ಬೆಂಗಳೂರಿನ ರಾಜಾಜಿನಗರ ನಿವಾಸಿ ರಾಘವೇಂದ್ರ ಅವರು ಇಂದು ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಡುತ್ತಿದ್ದಾರೆ. ರಾಘವೇಂದ್ರ ಅವರು ದನ ಸಾಕುತ್ತಾ ಕೇವಲ ನಾಲ್ಕೇ ವರ್ಷದಲ್ಲಿ ಬಿಎಂಡಬ್ಲ್ಯೂ ಕಾರಲ್ಲಿ ಓಡಾಡುವಷ್ಟು ಸಂಪಾದಿಸಿದ್ದಾರೆ. ನಾಲ್ಕು ವರ್ಷದ ಹಿಂದೆ ಮನೆಗೆ ಅಂತ ತಂದ ಒಂದೇ ಒಂದು ಹಸುವಿನ ಸಾಕಾಣೆಯಿಂದ ಆರಂಭವಾದ ಕೆಲಸ ಈಗ ಹಿರಿಯೂರಿನಲ್ಲಿ ಗೋಶಾಲೆ ನಿರ್ಮಿಸಿ 200 ಹಸುಗಳನ್ನು ಸಾಕುತ್ತಿದ್ದಾರೆ.

    ರಾಘವೇಂದ್ರ ಅವರು ನಾಟಿ ಹಸುವಿನ ಹಾಲು, ತುಪ್ಪ, ಸಗಣಿ, ಬೆರಣಿ, ವಿಭೂತಿ ಮತ್ತು ಗೋ ಮೂತ್ರದಿಂದ ವಿವಿಧ ಔಷಧಿಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸೊಳ್ಳೆ ಔಷಧಿ, ಹಲ್ಲಿನ ಪುಡಿ, ಕುಡಿಯಲು ಉಪಯೋಗವಾಗುವಂತ ತರಹೇವಾರಿ ಗೋ ಮೂತ್ರದಿಂದ ಒಟ್ಟು 30 ಉತ್ಪನ್ನಗಳನ್ನ ತಯಾರಿಸುತ್ತಾರೆ. ವಿದೇಶಗಳಿಗೂ ರಫ್ತು ಮಾಡುತ್ತಾರೆ. ಇದೇ ಪ್ರಮುಖ ಆದಾಯವಾಗಿದ್ದು, ಗೋ ಮಾತೆಯನ್ನ ನಂಬಿದರೆ ಯಾವುದೇ ತೊಂದರೆ ಇಲ್ಲ ಅನ್ನೋದು ರಾಘವೇಂದ್ರ ಅವರ ಅನುಭವದ ಮಾತಾಗಿದೆ.

    ಕಾರು ಖರೀದಿಸಲು ಬೆಂಗಳೂರಿನ ಶೋ ರೂಂಗೆ ಹೋದಾಗ ನಮ್ಮನ್ನ ಯಾರೂ ಮಾತನಾಡಿಸಲಿಲ್ಲ. ನಾವೇ ಈ ಕಾರಿನ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಬೇಕಾಯಿತು. ಇದು ನನಗೆ ಬೇಸರ ತರಿಸಿತು. ನಂತರ 68 ಲಕ್ಷ ಫುಲ್ ಪೇಮೆಂಟ್ ಮಾಡಿ ಒಂದು ತಿಂಗಳು ಡೆಲಿವರಿಗಾಗಿ ಕಾದೆ. ಕೊನೆಗೆ ಶೋರೂಂ ಅವರು ಕಾಲ್ ಮಾಡಿ ಸರ್ ಯಾವಾಗ ಕಾರು ಡೆಲಿವರಿ ತಗೊತೀರಾ ಅಂತ ಕೇಳಿದ್ದಾರೆ. ಅದಕ್ಕೆ ನಾನು ದನ ಕಾಯೋನು ಅಂತ ನಮ್ಮನ್ನ ಕೀಳಾಗಿ ಕಾಣಬೇಡಿ ಅಂತ ಹೇಳಿದೆ ಎಂದು ರಾಘವೇಂದ್ರ ಅವರು ಬೇಸರ ವ್ಯಕ್ತಪಡಿಸಿದ್ರು. ನಮ್ಮ ದೇಶದ ಹಾಗೂ ರಾಜ್ಯದ ತಳಿಗಳನ್ನ ಮಾತ್ರ ಇವರು ಸಾಕುತ್ತಿದ್ದು, ಈ ಮೂಲಕ ದೇಸಿ ತಳಿಗಳನ್ನು ಉಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

    ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

    ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.

  • ಮೇಕೆ ಮರಿಗಳಿಗೆ ಹಾಲುಣಿಸುವ ಆಕಳು!

    ಮೇಕೆ ಮರಿಗಳಿಗೆ ಹಾಲುಣಿಸುವ ಆಕಳು!

    ರಾಯಚೂರು: ಲಿಂಗಸಗೂರು ತಾಲೂಕಿನ ಕನ್ನಾಪುರಹಟ್ಟಿ ಗ್ರಾಮದಲ್ಲಿ ಹಸುವೊಂದು ನಿತ್ಯವೂ ಮೇಕೆ ಮರಿಗಳಿಗೆ ಹಾಲುಣಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ.

    ಕನ್ನಾಪುರಹಟ್ಟಿ ಗ್ರಾಮದ ಯಮನೂರು ಮೇಗೂರು ಅವರ ಮನೆಯಲ್ಲಿ ಈ ಅಚ್ಚರಿ ನಡೆದಿದ್ದು, ಯಮನೂರು ಅವರಿಗೆ ಮಾತ್ರ ಹಾಲು ಕರಿಯಲು ಅವಕಾಶ ನೀಡುತ್ತದೆ. ಬೇರೆಯವರು ಕೆಚ್ಚಲಿಗೆ ಕೈ ಹಾಕುವಂತಿಲ್ಲ. ಒಂದು ವೇಳೆ ಹಾಗೇ ಗೊತ್ತಿಲ್ಲದೇ ಹಾಲು ಕರಿಯಲು ಹೋದರೆ ಆಕಳು ಒದೆಯುತ್ತದೆ.

    ಯಮನೂರು ಅವರು ಆಕಳು ಜೊತೆಗೆ ಮೇಕೆಯನ್ನೂ ಸಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮೇಕೆಯೂ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆದರೆ ಅದರ ಮೊಲೆಯಲ್ಲಿ ಹಾಲು ಬರುತ್ತಿಲ್ಲ. ಹೀಗಾಗಿ ಮೇಕೆ ಮರಿಗಳು ಕೊಟ್ಟಿಗೆಯಲ್ಲಿದ್ದ ಆಕಳು ಮೊಲೆಗೆ ಬಾಯಿ ಇಟ್ಟು ಹಾಲು ಕುಡಿಯುತ್ತಿವೆ. ಇದನ್ನೇ ಅಭ್ಯಾಸ ಮಾಡಿಕೊಂಡಿರುವ ಮರಿಗಳು ನಿತ್ಯವೂ ಆಕಳಿನ ಮೊಲೆ ಹಾಲನ್ನು ಕುಡಿದು ಬೆಳೆಯುತ್ತಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

  • ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಜೈಪುರ: ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

    ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

    2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

    ಓಂ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿ, ಗಿರ್ ತಳಿಯ ಹಸುವಿನ ಮೂತ್ರವನ್ನು ನಾನು ಮಾರಾಟ ಮಾಡುತ್ತಿದ್ದೇನೆ. ಲೀಟರ್ ಒಂದಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. ಇದನ್ನು ಓದಿ: ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಬೇಡಿಕೆ ಯಾಕೆ?
    ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

    ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.

  • ಭಾರತದಲ್ಲಿ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿರುವುದೇ ಹೆಚ್ಚು ಸುರಕ್ಷಿತ: ಶಶಿ ತರೂರ್

    ಭಾರತದಲ್ಲಿ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿರುವುದೇ ಹೆಚ್ಚು ಸುರಕ್ಷಿತ: ಶಶಿ ತರೂರ್

    ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿರುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ವೆಬ್‍ಸೈಟ್ ಒಂದಕ್ಕೆ ಲೇಖನವನ್ನು ಬರೆದಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕೋಮು ಗಲಭೆಗಳನ್ನು ಕಡಿತಗೊಳಿಸುವ ಬಗ್ಗೆ ಬಿಜೆಪಿ ಸಚಿವರುಗಳು ಏಕೆ ಸುಮ್ಮನಿದ್ದಾರೆ ಎನ್ನುವುದು ತಿಳಿಯದ ವಿಚಾರವಾಗಿದೆ. ಆದ್ದರಿಂದ ಭಾರತದಲ್ಲಿ ಹಲವು ಕಡೆ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿದ್ದರೇ ಉತ್ತಮ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ತಾಲಿಬಾನ್ ಆರಂಭಿಸಿದೆಯಾ? ಶಶಿ ತರೂರ್ ಪ್ರಶ್ನೆ

    ಬಿಜೆಪಿ `ಹಿಂದೂತ್ವ ಸಿದ್ಧಾಂತ’ ವನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲವು ಸಾಧಿಸಿದರೆ, ಭಾರತವನ್ನು ಹಿಂದೂ ಪಾಕಿಸ್ತಾನವಾಗಿ ಬದಲಿಸುತ್ತದೆ ಎಂದು ಶಶಿ ತರೂರ್ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ಭಾರತ ಹಿಂದೂ-ಪಾಕಿಸ್ತಾನ ಆಗಲಿದೆ: ಶಶಿ ತರೂರ್

    ತಿರುವನಂತಪುರಂ ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ್ದ ಅವರು, ಬಿಜೆಪಿ ಹೊಸ ಸಂವಿಧಾನವನ್ನು ರಚಿಸಿ, ಅಲ್ಪಸಂಖ್ಯಾತರಿಗೆ ಹಕ್ಕು ನೀಡದ ಪಾಕಿಸ್ತಾನದ ರೀತಿ ಭಾರತವನ್ನು ಮಾರ್ಪಾಡಿಸಿ ಹಿಂದೂ ರಾಷ್ಟ್ರದ ಹಾದಿಯನ್ನು ಸುಗಮಗೊಳೀಸಲಿದೆ. ಬಿಜೆಪಿಯು ಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದರೆ, ನಮ್ಮ ಪ್ರಜಾಪ್ರಭುತ್ವದ ಎಲ್ಲ ಅಂಶಗಳನ್ನು ಭಾರತದ ಸಂವಿಧಾನದಿಂದ ತೆಗೆದು ಹಾಕುತ್ತಾರೆ. ತಮಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಹೊಸ ಸಂವಿಧಾನವನ್ನು ಸೃಷ್ಟಿಸುತ್ತಾರೆ ಎಂದು ಶಶಿ ತರೂರ್ ಭವಿಷ್ಯ ನುಡಿದಿದ್ದರು.

  • ಇದೊಂದು ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ- ಹಸು ಜೊತೆ ನಾಯಿ ಮರಿಯ ಚೆಲ್ಲಾಟ

    ಇದೊಂದು ಅಪರೂಪದ ಮೂಕ ಪ್ರಾಣಿಗಳ ಬಾಂಧವ್ಯ- ಹಸು ಜೊತೆ ನಾಯಿ ಮರಿಯ ಚೆಲ್ಲಾಟ

    ಬೆಂಗಳೂರು: ನೆಲಮಂಗಲ ಸಮೀಪದ ಮೋಟಗಾನಹಳ್ಳಿಯಲ್ಲಿ ಮೂಕ ಪ್ರಾಣಿಗಳಾದ ಹಸು ಹಾಗೂ ನಾಯಿಮರಿಯ ಫ್ರೆಂಡ್‍ಶಿಪ್ ದೃಶ್ಯ ಹಳ್ಳಿಯ ರೈತ ಮಗನ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಮೋಟಗಾನಹಳ್ಳಿಯ ಜಯಸಿಂಹ ಎಂಬವರ ತೋಟದ ಬಳಿ ಎರಡು ನಾಯಿ ಮರಿಗಳಿವೆ. ಅಲ್ಲಿಯೇ ಜಯಸಿಂಹರವರು ನಿತ್ಯವೂ ತಮ್ಮ ಒಂದು ಹಸುವನ್ನು ಕಟ್ಟಿ ಹಾಕುತ್ತಾರೆ. ಹಸುವನ್ನು ಕಟ್ಟಿ ಹಾಕಿ ಮಾಲೀಕ ಜಯಸಿಂಹ ಹಿಂದಿರುಗುತ್ತಿದ್ದಂತೆಯೇ, ನಾಯಿಮರಿಗಳು ಹಸು ಜೊತೆ ಸಖತ್ ಎಂಜಾಯ್ ಮಾಡ್ತೀವೆ.

    ಇದೀಗ ಈ ಹಸು ಹಾಗೂ ನಾಯಿಗಳ ಮಧ್ಯೆ ಗಟ್ಟಿ ಸ್ನೇಹ ಮೂಡಿದೆ. ನಿತ್ಯವೂ ಚಿಕ್ಕ ಮಕ್ಕಳಂತೆ ಚೆಲ್ಲಾಟವಾಡುವ ಮೂಕಪ್ರಾಣಿಗಳು ಸಖತ್ ಎಂಜಾಯ್ ಮಾಡ್ತೀವೆ. ಅಲ್ಲದೆ ಈ ಹಸು ಜೊತೆ ಅಪರಿಚಿತರು ಹಾಗೂ ಯಾವುದೇ ಪ್ರಾಣಿಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ಕಾವಲು ಕಾಯುತ್ತವೆ.

    https://www.youtube.com/watch?v=CDmy0lHiYPs

  • ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೋರಿಯಲ್ಲಿ ಬಿದ್ದು 1 ಗಂಟೆ ನರಳಾಡಿದ ಹಸುವಿನ ರಕ್ಷಣೆ

    ಮೈಸೂರು: ದೊಡ್ಡ ಮೋರಿಯಲ್ಲಿ ಬಿದ್ದ ಹಸುವನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಜೆ.ಪಿ. ನಗರದಲ್ಲಿ ನಡೆದಿದೆ.

    ಹಸು ಮೇವು ಮೇಯುತ್ತಾ ಹಳ್ಳಕ್ಕೆ ಬಿದ್ದಿದೆ. ಆದರೆ ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ 1 ಗಂಟೆಗೂ ಹೆಚ್ಚು ಕಾಲ ನರಳಾಡಿದೆ. ಬಳಿಕ ಹಸುವಿನ ನರಳಾಟ ನೋಡಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಿಬ್ಬಂದಿ ಹಗ್ಗದ ಸಹಾಯದಿಂದ ಹಸುವನ್ನು ರಕ್ಷಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮೋರಿ ತುಂಬಿ ಹೋಗಿತ್ತು. ಮೋರಿಯಲ್ಲಿ ಹುಲ್ಲು ಬೆಳೆದಿದ್ದ ಕಾರಣ ಹಸು ಮೇಯಲು ಹೋಗಿ ಮೋರಿಯೊಳಗೆ ಸಿಲುಕಿದೆ.

  • ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಸೋಫಿಯಾ: ಗರ್ಭಿಣಿ ಹಸುವಿಗೆ ವಿಧಿಸಿದ್ದ ಮರಣದಂಡನೆ ಆದೇಶವನ್ನು ಬಲ್ಗೇರಿಯಾ ಸರ್ಕಾರ ಅನೂರ್ಜಿತಗೊಳಿಸಿದ ಘಟನೆ ನಡೆದಿದೆ.

    ಪೆಂಕಾ ಎಂಬ ಹಸು ಕಳೆದ ತಿಂಗಳು ತನ್ನ ಹಿಂಡಿನ ಜೊತೆ ಸಾಗುವಾಗ ಯುರೋಪಿಯನ್ ಯೂನಿಯನ್ ಗಡಿಯನ್ನು ದಾಟಿ ಪಕ್ಕದ ಸರ್ಬಿಯಾಕ್ಕೆ ಹೋಗಿ ವಾಪಸ್ ಬಂದಿತ್ತು.

    ಯುರೋಪಿಯನ್ ಕಮಿಷನ್ ಮಾರ್ಗದರ್ಶನಗಳ ಪ್ರಕಾರ ಹಸುಗಳ ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಗಡಿಯಲ್ಲಿರುವ ಚೆಕ್ ಪಾಯಿಂಟ್ ಗಳಲ್ಲಿ ತೋರಿಸಬೇಕು. ಗಡಿಯಲ್ಲಿ ತಪಾಸಣೆಗೊಂಡು ಅನುಮತಿ ಪಡೆದ ನಂತರವಷ್ಟೇ ಯುರೋಪ್ ಯೂನಿಯನ್ ಒಳಗೆ ಬರಬಹುದಾಗಿದೆ. ಹಾಗಾಗಿ ಅಧಿಕಾರಿಗಳು ಪೆಂಕಾವನ್ನು ಶಿಕ್ಷೆಗೆ ಗುರಿಪಡಿಸಿ ಎಂದು ವಾದಿಸಿದ್ದರು. ಸರ್ಕಾರ ಪೆಂಕಾಗೆ ಮರಣದಂಡನೆಯನ್ನು ವಿಧಿಸಿತ್ತು.

    ವಿಚಾರ ತಿಳಿಯುತ್ತಿದ್ದಂತೆ ಪ್ರಾಣಿದಯಾ ಚಳುವಳಿಗಾರರಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಪ್ರಕರಣದಲ್ಲಿ ಪೆಂಕಾಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಿ ಆನ್ ಲೈನ್ ಅಭಿಯಾನ ಕೂಡ ಶುರುವಾಗಿತ್ತು. ಇದರ ಬೆನ್ನಲ್ಲೇ ಬಲ್ಗೇರಿಯಾ ಸರ್ಕಾರ ಆದೇಶವನ್ನು ಅನೂರ್ಜಿತಗೊಳಿಸಿದೆ.

    https://www.youtube.com/watch?v=DBzExVlwhQQ