Tag: cow

  • ಕರು ಸತ್ತ ದುಃಖದಲ್ಲಿ ಆಹಾರ ಬಿಟ್ಟ ತಾಯಿ ಹಸು- ಗೋಪಾಲಕ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

    ಕರು ಸತ್ತ ದುಃಖದಲ್ಲಿ ಆಹಾರ ಬಿಟ್ಟ ತಾಯಿ ಹಸು- ಗೋಪಾಲಕ ಮಾಡಿದ ಕೆಲಸಕ್ಕೆ ಎಲ್ಲರ ಮೆಚ್ಚುಗೆ

    ಮೈಸೂರು: ಮಾತು ಬಾರದ ಮೂಕ ಪ್ರಾಣಿಗಳ ವರ್ತನೆ ಕೆಲವೊಮ್ಮೆ ಮಾನವರ ಪ್ರೀತಿಯನ್ನು ಮೀರಿಸುವಂತಿರುತ್ತದೆ. ಈ ಮಾತಿಗೆ ಪೂರಕ ಎಂಬಂತೆ ನಗರದಲ್ಲಿ ಘಟನೆ ನಡೆದಿದ್ದು, ಗೋ ಮಾಲೀಕ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ರಾಮಕೃಷ್ಣನಗರ ಎಚ್ ಬ್ಲಾಕ್‍ನ ಗೋ ಪಾಲಕ ಜಗದೀಶ್ ಸಾಕುತ್ತಿರುವ ಹಸುವೊಂದು ನಾಲ್ಕು ದಿನಗಳ ಹಿಂದೆ ಕರು ಹಾಕಿತ್ತು. ಆದರೆ ಎರಡು ದಿನಗಳ ನಂತರ ಆ ಕರು ಮೃತಪಟ್ಟಿತ್ತು. ಕರುವಿನ ಸಾವು ತಾಯಿ ಹಸುವಿಗೆ ದೊಡ್ಡ ಆಘಾತ ಉಂಟು ಮಾಡಿತ್ತು.

    ಕರುವಿನ ಸಾವಿನಿಂದ ಆಘಾತದಲ್ಲಿ ತಾಯಿ ಹಸು ಆಹಾರ ತ್ಯಜಿಸಿ ಹಾಲು ನೀಡುವುದನ್ನು ನಿಲ್ಲಿಸಿತ್ತು. ಇದನ್ನು ಮನಗೊಂಡ ಗೋ ಪಾಲಕ ಜಗದೀಶ್ ಮೃತಪಟ್ಟ ಕರುವಿನ ಅವಶೇಷವನ್ನು ಸ್ವಚ್ಛಗೊಳಿಸಿದ್ದರು. ನಂತರ ಮೃತಪಟ್ಟ ಕರುವಿನ ಚರ್ಮದ ಮುಖಾಂತರವೇ ಜೀವಂತ ಕರುವಿನ ರೀತಿ ಆಕೃತಿ ತಯಾರು ಮಾಡಿದ್ದಾರೆ. ಈ ಆಕೃತಿಯನ್ನು ತಾಯಿ ಹಸುವಿನ ಬಳಿ ಬಿಟ್ಟಾಗ ಹಸು ಎಂದಿನಂತೆ ಆಹಾರ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಹಾಲು ನೀಡಲು ಆರಂಭಿಸಿದೆ.

    ಕೆಲ ದಿನಗಳ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕೊತ್ತನಹಳ್ಳಿ ಬಳಿ ಭತ್ತದ ಗದ್ದೆಯಲ್ಲಿ ತಾಯಿ ಆನೆಯೊಂದು ಮೃತಪಟ್ಟ ತನ್ನ ಕಂದನನ್ನು ಬದುಕಿಸಲು ಹರಸಾಹಸ ಪಟ್ಟಿತ್ತು. ಭತ್ತದ ಗದ್ದೆಯಲ್ಲಿ ಆನೆಯೊಂದು ಮರಿಯಾನೆಗೆ ಜನ್ಮ ನೀಡಿತ್ತು. ಆದರೆ ಮರಿಯಾನೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು. ಇದರ ಅರಿವಿಲ್ಲದೆ ತಾಯಿ ಆನೆ ತನ್ನ ಮರಿಯ ಮೃತದೇಹವನ್ನು ಬಿಟ್ಟು ಕದಲದೇ ಎದ್ದೇಳಿಸಲು ಪ್ರಯತ್ನಿಸಿತ್ತು. ಅಷ್ಟೇ ಅಲ್ಲದೇ ತನ್ನ ಸಂಗಡಿಗ ಆನೆಯ ರೋಧನೆ ಕಂಡು ಇತರೆ 12ಕ್ಕೂ ಹೆಚ್ಚು ಆನೆಗಳ ದಂಡು ತಾಯಿಯಾನೆಯನ್ನು ಬಿಟ್ಟು ಹೋಗದೆ ತಮ್ಮ ಮಮತೆಯನ್ನೂ ಕೂಡ ತೋರಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪಶು ವೈದ್ಯ ಮುರಳಿ, ರಾತ್ರಿ ಆಹಾರವನ್ನು ಅರಸಿಕೊಂಡ ಬಂದ ಈ ಆನೆಗಳ ದಂಡಿನಲ್ಲಿ ತಾಯಿ ಆನೆ ಮರಿಯಾನೆಗೆ ಜನ್ಮ ನೀಡಿತ್ತು. ತಾಯಿ ಆನೆಗೆ ಮರಿಯಾನೆ ಮೃತಪಟ್ಟ ವಿಚಾರ ಗೊತ್ತಿತ್ತೋ ಅಥವಾ ಇಲ್ಲವೋ ನಮಗೆ ತಿಳಿದಿಲ್ಲ. ಆದರೆ ತನ್ನ ಮಗುವಿನ ದೇಹವನ್ನು ಅಲ್ಲಿಂದ 200 ಮೀಟರ್ ವರೆಗೆ ಎಳೆದುಕೊಂಡು ಹೋಯಿತು. ಮರಿಗೆ ಜನ್ಮ ನೀಡಿದ ಕೂಡಲೇ ಆನೆ ತನ್ನ ಮರಿಗೆ ಹಾಲನ್ನು ಉಣಿಸಬೇಕು. ಇಲ್ಲವಾದಲ್ಲಿ ಸಹಜವಾಗಿ ತಾಯಿ ಆನೆಗೆ ನೋವು ಆರಂಭವಾಗುತ್ತದೆ. ಹಾಗಾಗಿ ತಾಯಿ ಆನೆ ತನ್ನ ಮಗುವನ್ನು ಏಳಿಸಲು ಪ್ರಯತ್ನಿಸಿತ್ತು. ಈ ರೀತಿಯ ತಾಯಿ ಮಮತೆ ಕೇವಲ ಮನುಷ್ಯರಲ್ಲಷ್ಟೆ ಅಲ್ಲ ಪ್ರಾಣಿಗಳಲ್ಲೂ ಇರುತ್ತೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳು ಕೊಟ್ಟ ಉಡುಗೊರೆಯನ್ನ ನೋಡಿ ಆಶ್ಚರ್ಯ ಪಟ್ಟ ಅರ್ಜುನ್ ಸರ್ಜಾ

    ಮಕ್ಕಳು ಕೊಟ್ಟ ಉಡುಗೊರೆಯನ್ನ ನೋಡಿ ಆಶ್ಚರ್ಯ ಪಟ್ಟ ಅರ್ಜುನ್ ಸರ್ಜಾ

    ಬೆಂಗಳೂರು: ಸಿನಿಮಾ ಸ್ಟಾರ್ ಗಳು ಸಾಮಾನ್ಯವಾಗಿ ತಮ್ಮ ಅಪ್ಪ ಅಮ್ಮನಿಗೆ ಹುಟ್ಟುಹಬ್ಬಕ್ಕಾಗಿ ಉಡುಗೊರೆ ಕೊಡುತ್ತಾರೆ. ಅದರಲ್ಲೂ ಉಡುಗೊರೆಯಾಗಿ ಬೈಕ್, ಕಾರ್, ಚಿನ್ನ ಈ ರೀತಿ ದುಬಾರಿಯ ಉಡುಗೊರೆಯನ್ನು ಕೊಡುತ್ತಾರೆ. ಆದರೆ ನಟ ಅರ್ಜುನ್ ಸರ್ಜಾ ಅವರಿಗೆ ಅವರ ಮಕ್ಕಳು ನೀಡಿದ ಗಿಫ್ಟ್ ನೋಡಿ ಆಶ್ಚರ್ಯ ಪಟ್ಟಿದ್ದಾರೆ.

    ಇತ್ತೀಚೆಗಷ್ಟೆ ನಟ ಅರ್ಜುನ್ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ ಇಬ್ಬರು ಸೇರಿ ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಏನಾದರು ಉಡುಗೊರೆ ಕೊಡಬೇಕು ಎಂದು ಯೋಚಿಸಿ ಒಂದು ಅಪರೂಪದ ಗಿಫ್ಟ್ ನೀಡಿದ್ದಾರೆ.

    ನಟ ಅರ್ಜುನ್ ಸರ್ಜಾ ಅವರ ಮಕ್ಕಳು ಪ್ರೀತಿಯಿಂದ ತಮ್ಮ ತಂದೆಗೆ ಒಂದು ಹಸುವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಪ್ಪನಿಗಾಗಿ ನೀಡಿರುವ ಹಸುವನ್ನು ಗುಜರಾತಿನಿಂದ ತೆಗೆದುಕೊಂಡು ಬರಲಾಗಿದೆ ಎಂದು ತಿಳಿದು ಬಂದಿದೆ. ಮಕ್ಕಳು ನೀಡಿರುವ ಉಡುಗೊರೆಯನ್ನು ನೋಡಿ ಒಂದು ಕ್ಷಣ ಅರ್ಜುನ್ ಸರ್ಜಾ ಅವರು ಆಶ್ಚರ್ಯ ಪಟ್ಟು, ಬಳಿಕ ಸಂತಸ ಪಟ್ಟಿದ್ದಾರೆ.

    ಅರ್ಜುನ್ ಸರ್ಜಾ ಅವರು ಮಕ್ಕಳು ಕೊಟ್ಟಿರುವ ಹಸುವಿನ ಜೊತೆ ಮತ್ತು ಕುಟುಂಬದವರ ಜೊತೆ ಸಂತಸದಿಂದ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ನಮ್ಮ ಮಕ್ಕಳು ನನಗಾಗಿ ನೀಡಿರುವ ಉಡುಗೊರೆ ಇದು. ಈ ರೀತಿ ಉಡುಗೊರೆ ನೀಡುತ್ತಾರೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ. ನಿಜಕ್ಕೂ ಇದು ಅತ್ಯುತ್ತಮ ಉಡುಗೊರೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.

    ಅರ್ಜುನ್ ಸರ್ಜಾ ಅವರು ಬಾಲ್ಯದಿಂದಲೂ ಸಿನಿಮಾದಲ್ಲಿ ಅಭಿನಯಿಸಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮಗಳು ಐಶ್ವರ್ಯ ‘ಪ್ರೇಮ ಬರಹ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ಬಾವಿಗೆ ಬಿದ್ದಿದ್ದ ಆಕಳನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ!

    ಬಾವಿಗೆ ಬಿದ್ದಿದ್ದ ಆಕಳನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ!

    ವಿಜಯಪುರ: ತೆರದ ಬಾವಿಗೆ ಬಿದ್ದಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತೆಗೆದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಕನಕನಾಳ ಗ್ರಾಮದಲ್ಲಿ ನಡೆದಿದೆ.

    ಕನಕನಾಳ ಗ್ರಾಮದ ತೊಟದ ವಸ್ತಿಯಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಗೆನಪ್ಪ ಭೀಮಣ್ಣ ಢಗೆ ಅವರಿಗೆ ಸೇರಿದ ಸುಮಾರು 60 ಸಾವಿರ ಮೌಲ್ಯದ ಜರ್ಸಿ ತಳಿಯ ಆಕಳು ಮೇವು ತಿನ್ನಲು ಹೋಗಿತ್ತು. ಈ ವೇಳೆ ಆಕಳು ತೆರೆದ ಬಾವಿಗೆ ಬಿದ್ದಿದೆ. ಬಾವಿಯಲ್ಲಿ ಬಿದ್ದ ಆಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವರಾದ ಸೂರ್ಯಕಾಂತ ಬಿರಾದಾರ, ಸಹಾಯಕ ಠಾಣಾಧಿಕಾರಿಗಳ ತಂಡ ಸತತವಾಗಿ ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಆಕಳನ್ನು ರಕ್ಷಿಸಿದ್ದಾರೆ. ಅವರೊಂದಿಗೆ ಪ್ರಲ್ಹಾದ್ ಹರಿಜನ ಪುಲಸಿಂಗ, ಲಮಾಣಿ ಅಶೊಕ ರೂಗಿ, ಸಂತೋಷ ಬಗಲಿ, ಮಾರುತಿ ರಾಠೊಡ್ ಕೂಡ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಸುಗೆ ಅದ್ಧೂರಿ ಸೀಮಂತ – ಮನೆ ಮಂದಿಯಿಂದ ಶಾಸ್ತ್ರೋಕ್ತ ಕಾರ್ಯಕ್ರಮ

    ಹಸುಗೆ ಅದ್ಧೂರಿ ಸೀಮಂತ – ಮನೆ ಮಂದಿಯಿಂದ ಶಾಸ್ತ್ರೋಕ್ತ ಕಾರ್ಯಕ್ರಮ

    ಹಾವೇರಿ: ಗರ್ಭಿಣಿಯ ಪಾಲಿಗೆ ಸೀಮಂತ ಅನ್ನೋದು ಅತ್ಯಂತ ಮಹತ್ವದ ಆಚರಣೆ. ಆದರೆ ಇಲ್ಲೊಬ್ಬ ರೈತರು ತಮ್ಮ ಮನೆಯ ಮಗಳಂತೆ ಇರೋ ಹಸು ಗೌರಿಗೂ ಸೀಮಂತ ಮಾಡಿದ್ದಾರೆ.

    ಹೌದು. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ರೈತ ರಮೇಶಗೌಡ ಕಾಡನಗೌಡರ ಮನೆಯಲ್ಲಿ ಗೌರಿಗೆ ಸೀಮಂತ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಯಾರೋ ಆರು ತಿಂಗಳ ಆಕಳು ಕರುವೊಂದನ್ನ ಕಸಾಯಿಖಾನೆಗೆ ತೆಗೆದುಕೊಂಡು ಹೋಗ್ತಿದ್ದರು. ಆಗ ಆಕಳನ್ನು ಕಂಡು ಇನ್ನೂರು ರೂಪಾಯಿ ಕೊಟ್ಟು ಖರೀದಿಸಿದ್ದೆ. ಗೌರಿ ಬಂದ್ಮೇಲೆ ನಮ್ಮ ಕುಟುಂಬಕ್ಕೆ ಸಾಕಷ್ಟು ಒಳ್ಳೆಯದು ಆಗಿದೆ ಅಂತ ಮಾಲೀಕ ರಮೇಶಗೌಡ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಆಕಳು ಗೌರಿಗೆ ಕೆಲವು ವರ್ಷಗಳಾದ್ರೂ ಗರ್ಭ ಧರಿಸಲಿಲ್ಲ. ಇತ್ತೀಚೆಗೆ ಪಶು ವೈದ್ಯರು ಚಿಕಿತ್ಸೆ ನೀಡಿದಾಗ ಆಕಳು ಗರ್ಭಿಣಿ ಆಗಿದೆ ಅಂತ ತಿಳಿಸಿದ್ರು. ಹೀಗಾಗಿ ಇದೀಗ ಅದಕ್ಕೆ ಸೀಮಂತ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಮೇಶಗೌಡರ ಕುಟುಂಬದ ಸಂಬಂಧಿಕರು, ಬೀಗರು ಸೇರಿದಂತೆ ನೂರಾರು ಜನರು ಭಾಗಿಯಾಗಿದ್ರು. ಗೌರಿ ಸೀಮಂತಕ್ಕೆ ಬಂದ ಬಹುತೇಕ ಜನರು ತರಹೇವಾರಿ ತಿನಿಸುಗಳ ಬಯಕೆಯ ಬುತ್ತಿ ತಂದಿದ್ದರು. ಸೀಮಂತಕ್ಕೆ ಬಂದ ಜನ ಭರ್ಜರಿ ಭೋಜನ ಸವಿದು ಹರಸಿ ಹೋದ್ರು ಅಂತ ಗ್ರಾಮಸ್ಥೆ ಪ್ರೇಮಾ ಪಾಟೀಲ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಮನೆಯಲ್ಲಿನ ಚೊಚ್ಚಲ ಗರ್ಭಿಣಿಯರಿಗೆ ಮಾಡುವಂತೆ ಹಸು ಗೌರಿಗೆ ಸೀಮಂತ ಮಾಡಿದ್ದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗರ್ಭಗುಡಿಯಲ್ಲಿ ಭಗವಾನ್ ಕೃಷ್ಣ – ಗೋಶಾಲೆಯಲ್ಲಿ ಜೂನಿಯರ್ ಕೃಷ್ಣ

    ಗರ್ಭಗುಡಿಯಲ್ಲಿ ಭಗವಾನ್ ಕೃಷ್ಣ – ಗೋಶಾಲೆಯಲ್ಲಿ ಜೂನಿಯರ್ ಕೃಷ್ಣ

    ಉಡುಪಿ: ಭಗವಾನ್ ಶ್ರೀಕೃಷ್ಣ ಹುಟ್ಟಿದ ದಿನವೇ ಹುಟ್ಟಿದ.ಸ ಶ್ರೀಕೃಷ್ಣ ಭೂಮಿಗೆ ಬಂದ ಘಳಿಗೆ, ನಕ್ಷತ್ರ ತಿಥಿಯಲ್ಲೇ ಆತನ ಜನ್ಮವೂ ಆಗಿದೆ. ಕೃಷ್ಣ ಹುಟ್ಟಿದ್ದು ಆತನ ಭಕ್ತರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ಗೋಶಾಲೆಯಲ್ಲಿದ್ದ ಗೋಪಾಲಕರಿಗೂ ಆಗಿದೆ.

    ದೇವರು ಹುಟ್ಟಿದ ದಿನದಂದೇ ಹುಟ್ಟಿದ ಆತನಿಗೆ ಇದೀಗ ದೇವರ ಹೆಸರನ್ನೇ ಇಡಲಾಗಿದೆ. ಉಡುಪಿ ಕೃಷ್ಣ ಮಠದ ಗರ್ಭಗುಡಿಯಲ್ಲಿ ಅಷ್ಟಮಿಯ ರಾತ್ರಿ 11.55 ಕ್ಕೆ ದೇವರಿಗೆ ಅಘ್ರ್ಯ ಪ್ರದಾನ ನಡೆಯುತ್ತಿತ್ತು. ಪರ್ಯಾಯ ಪಲಿಮಾರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಇತ್ತ ಗೋಶಾಲೆಯಲ್ಲಿ ಹಸುವೊಂದು ಗಂಡು ಕರುವಿಗೆ ಜನ್ಮ ನೀಡಿದೆ.

    ಭಗವಾನ್ ಕೃಷ್ಣನ ಜನ್ಮದಿಂದ ಮಠದೊಳಗೆ ಭಕ್ತರಿಗೆ ಎಷ್ಟು ಖುಷಿಯಾಗಿತ್ತೋ ಅಷ್ಟೇ ಸಂತಸ ಗೋಪಾಲಕರಿಗೆ ಗೋಶಾಲೆಯೊಳಗೆ ಆಗಿದೆ. ಅಷ್ಟಮಿಯಂದು ಹುಟ್ಟಿದ ಗಂಡು ಕರುವಿಗೆ ಇದೀಗ ಕೃಷ್ಣ ಎಂದೇ ಹೆಸರಿಡಲಾಗಿದೆ. ಕರುವಿನ ತಾಯಿಯ ಹೆಸರು ಬದಲಾಯಿಸಿ ದೇವಕಿ ಎಂದು ಪುನರ್ ನಾಮಕರಣ ಮಾಡಲಾಗಿದೆ.

    ಕರುವಿಗೆ ಹೂವಿನ ಮಾಲೆ ಹಾಕಿ ಮಠದ ಗೋಶಾಲೆಗೆ ಸ್ವಾಗತ ಮಾಡಲಾಗಿದೆ. ಅಷ್ಟಮಿಯಂದೆ ಕರುವಿಗೆ ಜನ್ಮ ನೀಡಿದ ತಾಯಿ ಹಸುವಿಗೆ ದೋಸೆ, ಬೆಲ್ಲದ ಪಾನಕ, ಬಾಳೆಹಣ್ಣು, ಸಿಹಿ ಅವಲಕ್ಕಿ ನೀಡಲಾಗಿದೆ. ಕೃಷ್ಣನ ಅಮ್ಮನಿಗೂ ಹೂಮಾಲೆ ಹಾಕಿ ಪೂಜಿಸಲಾಗಿದ್ದು, ಉಡುಪಿ ಕೃಷ್ಣಮಠಕ್ಕೆ ಬರುವ ಭಕ್ತರು ಕಡೆಗೋಲು ಕೃಷ್ಣನನ್ನು ನೋಡುವ ಜೊತೆಗೆ ಜೂನಿಯರ್ ಕರು ಕೃಷ್ಣನನ್ನೂ ನೋಡಿ, ಮುಟ್ಟಿ ಮುದ್ದು ಮಾಡಿ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರುವನ್ನು ಕರೆದೊಯ್ಯಲು ಬಿಡಲ್ಲ- ವಾಹನಕ್ಕೆ ಸುತ್ತು ಹಾಕಿ ಪ್ರತಿಭಟಿಸಿದ ಹಸು: ಮನಕಲಕುವ ವಿಡಿಯೋ ನೋಡಿ

    ಕರುವನ್ನು ಕರೆದೊಯ್ಯಲು ಬಿಡಲ್ಲ- ವಾಹನಕ್ಕೆ ಸುತ್ತು ಹಾಕಿ ಪ್ರತಿಭಟಿಸಿದ ಹಸು: ಮನಕಲಕುವ ವಿಡಿಯೋ ನೋಡಿ

    ಹುಬ್ಬಳ್ಳಿ: ತಾಯಿಯ ಕರುಳ ಬಳ್ಳಿಯ ಸಂಬಂಧಕ್ಕೆ ಸಾಟಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಂತಹದ್ದೆ ಒಂದು ಘಟನೆ ನಗರದಲ್ಲಿ ನಡೆದು ಜನರ ಕಣ್ಣೀರು ತರಿಸುವಂತೆ ಮಾಡಿದೆ. ತಾಯಿ ಹಸುವನ್ನು ಕರುವಿನಿಂದ ಬೇರ್ಪಡಿಸಲು ಹೋದ ಪಾಲಿಕೆ ಸಿಬ್ಬಂದಿಯೇ ಕರುಳ ಬಳ್ಳಿಯ ಸಂಬಂಧಕ್ಕೆ ಶರಣಾಗಿ ಕರುವನ್ನು ತಾಯಿಯ ಬಳಿಯೇ ಬಿಟ್ಟು ಬಂದಿದ್ದಾರೆ.

    ಹುಬ್ಬಳ್ಳಿಯ ಸ್ಟೇಷನ್ ರಸ್ತೆಯ ಸುಜಾತ ಚಿತ್ರಮಂದಿರದ ಹತ್ತಿರ ತಾಯಿ ಹಸುವಿಗೆ ಗಾಯವಾಗಿ ನೋವಿನಿಂದ ಪರದಾಡುತ್ತಿತ್ತು. ಕರು ಹಾಲು ಕುಡಿಯಲು ಹೋಗಿ ತಾಯಿ ಹಸುವಿನ ಮೊಲೆಗೆ ಮತ್ತಷ್ಟು ಸಮಸ್ಯೆಯಾಗಬಾರದು. ಕರುವಿಗೆ ಬೇರೆ ಕಡೆ ಆಹಾರವನ್ನಾದರು ನೀಡಬೇಕು ಎಂದು ಮಹಾನಗರ ಪಾಲಿಕೆ ಕರುವನ್ನು ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡಿದ್ದಾರೆ.

    ಆದರೆ ಕರುವನ್ನು ವಾಹನದಲ್ಲಿ ಕರೆದುಕೊಂಡು ಹೋಗುವುದನ್ನು ನೋಡಿದ ತಾಯಿ ಹಸು ಆ ವಾಹನವನ್ನು ಮುಂದೆ ಹೋಗಲು ಬಿಡದೇ, ವಾಹನ ಸುತ್ತು ಹಾಕಿದೆ. ತಾಯಿ ಹಸುವಿನ ತೋಳಲಾಟ ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮನ ಕಲುಕುವಂತೆ ಮಾಡಿತ್ತು. ಕೊನೆಗೆ ಪಾಲಿಕೆ ಸಿಬ್ಬಂದಿ ಹಸು ಹಾಗೂ ಕರುವನ್ನು ಬೇರೆ ಮಾಡುವ ಕೆಲಸವನ್ನು ಮಾಡದೆ ಅಲ್ಲಿಂದ ಮರಳಿದರು.

    https://www.youtube.com/watch?v=VHPIj4RljT8&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆ ಗೋಡೆ ಕುಸಿದು 2 ಹಸು ಸಾವು -2 ಎತ್ತುಗಳಿಗೆ ಗಂಭೀರ ಗಾಯ

    ಮನೆ ಗೋಡೆ ಕುಸಿದು 2 ಹಸು ಸಾವು -2 ಎತ್ತುಗಳಿಗೆ ಗಂಭೀರ ಗಾಯ

    ಚಿತ್ರದುರ್ಗ: ತಡರಾತ್ರಿ ಇದ್ದಕ್ಕಿದಂತೆ ಮನೆಯ ಗೋಡೆಗಳು ಕುಸಿದು ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿದ್ದು, ಅಲ್ಲೇ ಇದ್ದ ಎರಡು ಎತ್ತುಗಳಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನಡೆದಿದೆ.

    ರೇಣುಕಮ್ಮ ಎಂಬವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿಯುತ್ತಿದಂತೆ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹಾಗಾಗಿ ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಜಾನುವಾರಗಳಲ್ಲಿ 2 ಹಸು ಸಾವನ್ನಪ್ಪಿದೆ ಮತ್ತು 2 ಎತ್ತುಗಳಿಗೆ ಗಂಭೀರ ಗಾಯಗಳಾಗಿವೆ. ಮಳೆಗೆ ಒದ್ದೆಯಾಗಿ ಗೋಡೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡ ರೈತ!

    ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡ ರೈತ!

    ನೆಲಮಂಗಲ: ಜಾನುವಾರುಗಳು ಇಲ್ಲದ ಕಾರಣ ರೈತರೊಬ್ಬರು ಬೇಸಾಯಕ್ಕಾಗಿ ಗೋವುಗಳಂತೆ ಪತ್ನಿ ಮತ್ತು ಮಗನನ್ನು ಬಳಸಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ರೈತ ಆನಂದ್ ಅವರಿಗೆ ರಾಗಿ ಬೆಳೆಯನ್ನು ಬೆಳೆಯಲು, ಹಾಗೂ ಕುಂಟೆ ಹೊಡೆಯಲು ಗೋವುಗಳಿಲ್ಲದೇ ಕಂಗಾಲಾಗಿದ್ದಾರೆ. ಹಾಗಾಗಿ ತನ್ನ ಪತ್ನಿ ಹಾಗೂ ಮಗನ ಸಹಾಯದಿಂದ ನೇಗಿಲಿಗೆ ಹೆಗಲು ಬಳಸಿ ಬೇಸಾಯ ಮಾಡಲು ಆರಂಭಿಸಿದ್ದಾರೆ.

    ಸುಮಾರು 8 ರಿಂದ 10 ಎಕರೆ ಭೂಮಿ ಇರುವ ರೈತರಿಗೆ ಬೆಳೆ ಸಾಲ ನೀಡಿದರೆ, ಹಣ ಹೆಚ್ಚು ಪೋಲಾಗುತ್ತದೆ. ಅಲ್ಲದೇ ಅಧಿಕ ಸಾಲಮನ್ನಾ ಪಡೆಯುವ ಶ್ರೀಮಂತ ರೈತರು ಹಣವನ್ನು ಬಡ್ಡಿಗೆ ನೀಡಿ, ಗ್ರಾಮಗಳಲ್ಲಿ ಅನಧಿಕೃತ ಲೇವಾದೇವಿ ವ್ಯವಹಾರ ಮಾಡುತ್ತಿದ್ದಾರೆ. ಆದ್ದರಿಂದ 2-3 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ರೈತ ಶಿವಕುಮಾರ್ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟಿಗೆಯಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ 2 ಹಸು ಸಾವು

    ಕೊಟ್ಟಿಗೆಯಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ 2 ಹಸು ಸಾವು

    ಚಾಮರಾಜನಗರ: ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಎರಡು ಹಸುಗಳು ಸಾವನ್ನಪ್ಪಿವೆ.

    ಗಾಳಿ ಸಹಿತ ಮಳೆಯಿಂದಾಗಿ ಗ್ರಾಮದ ಪರ್ವತಮ್ಮ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು ಬಿದ್ದಿದೆ. ಇದರಿಂದ ಕೊಟ್ಟಿಗೆಯಲ್ಲಿ ಇದ್ದ ಒಂದು ಲಕ್ಷ ರೂ ಮೌಲ್ಯದ ಎರಡು ಹಸುಗಳು ಸಾವನ್ನಪ್ಪಿವೆ. ಈ ಘಟನೆಯಿಂದ ಪಾರ್ವತಮ್ಮ ಹಾಗೂ ಕುಟುಂಬದವರು ಕಂಗಲಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

    ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಪಟ್ಟಣ ಪ್ರದೇಶದ ರಸ್ತೆಗಳು ಹಾಗೂ ಕ್ರೀಡಾಂಗಣ ಕೆಸರು ಗದ್ದೆಯಂತೆ ಆಗಿದೆ. ಎಡೆ ಬಿಡದೇ ಸರಿಯುತ್ತಿರುವ ಸೋನೆ ಮಳೆಯಿಂದ ಜಿಲ್ಲೆಯ ಜನರು ಕಂಗಲಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಎರಡು ದಿನಗಳ ಹಿಂದೆ ಜಲಪಾತದ ಸಮೀಪ ನೀರು ಕುಡಿಯಲೆಂದು ಹೋದ ಹಸು ಆಯಾ ತಪ್ಪಿ ನೀರಿನ ರಭಸಕ್ಕೆ ಸಿಲುಕಿತ್ತು. ಈ ವೇಳೆ ಹಸು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಸತತ ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟಿದೆ. ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಹಸು ತನ್ನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದೇ ಜಲಪಾತದಿಂದ ಕೆಳಗೆ ಬಿದ್ದು ಸಾವನ್ನಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಚಾಮರಾಜನಗರ: ಭರಚುಕ್ಕಿ ಜಲಪಾತದಲ್ಲಿ ಹಸು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

    ಭರಚುಕ್ಕಿ ಜಲಪಾತದ ಬಳಿ ಹಸು ನೀರು ಕುಡಿಯಲು ತೆರಳಿತ್ತು. ನೀರಿನ ರಭಸದಲ್ಲಿ ಸಿಲುಕಿದ ಹಸು ಮೇಲಕ್ಕೆ ಬರಲಾರದೇ ನದಿಯ ಮಧ್ಯ ಭಾಗದಲ್ಲಿ ನಿಂತುಕೊಂಡಿತ್ತು. ಹಸು ತನ್ನ ಪ್ರಾಣ ರಕ್ಷಿಸಿಕೊಳ್ಳಲು ಸತತ ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದೆ. ಕೊನೆಗೆ ನೀರಿನ ರಭಸ ಹೆಚ್ಚಾಗಿದ್ದರಿಂದ ಜಲಪಾತದಲ್ಲಿ ಕೊಚ್ಚಿ ಹೋಗಿದೆ. ಈ ಎಲ್ಲ ದೃಶ್ಯಗಳು ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪ್ರವಾಸಿಗರು ಅಸಹಾಯಕರಾಗಿದ್ದರು.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಹೊಳೆ ದಾಟುವಾಗ ಆಕಸ್ಮಿಕವಾಗಿ ವೃದ್ಧ ನೀರಲ್ಲಿ ಕೊಚ್ಚಿಕೊಂಡು ಹೋಗಿರುವಂತ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನಡೆದಿದೆ. ಬೊಮ್ಮಯ್ಯ ದಾಸ್ ನೀರಲ್ಲಿ ವೃದ್ಧ ಕೊಚ್ಚಿಹೋಗಿದ್ದು, ವೃದ್ಧನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews