Tag: cow

  • ಕೋಲಾರದಲ್ಲಿ ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಹಸು!

    ಕೋಲಾರದಲ್ಲಿ ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಹಸು!

    ಕೋಲಾರ: ಜಿಲ್ಲೆಯಲ್ಲಿ ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

    ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಂಬ್ಲಿಕಲ್ ಗ್ರಾಮದ ರೈತ ವೆಂಕಟರಾಮಪ್ಪ ಹಾಗೂ ಸಾವಿತ್ರಮ್ಮ ಅವರ ಮನೆಯಲ್ಲಿ ಎರಡು ದಿನದ ಹಿಂದೆ ಜನಿಸಿರುವ ತ್ರಿವಳಿ ಕರುಗಳು ಅಚ್ಚರಿ ಕೇಂದ್ರ ಬಿಂದುವಾಗಿವೆ. ಆಲ್ ಬ್ಲಾಕ್ ತಳಿಯ ಹಸು ಸೋಮವಾರ ಮೂರು ಎಚ್‍ಎಫ್ ಕರುಗಳಿಗೆ ಜನ್ಮ ನೀಡಿರುವುದು ತೀವ್ರ ಕುತೂಹಲ ಉಂಟು ಮಾಡಿದೆ.

    ವಿಚಿತ್ರ ಅಂದರೆ ಮೂರು ಕರುಗಳು ಒಂದೇ ದಿನ 15 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿರುವುದು ದಾಖಲೆ ಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೂ ಇದೊಂದು ರೀತಿಯ ಅಚ್ಚರಿ ಉಂಟು ಮಾಡಿದ್ದು, ಹಸು ಹಾಗೂ ಕರುಗಳನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

    ಕಳೆದ ಹತ್ತು ವರ್ಷಗಳಿಂದ ಹಸುವನ್ನೇ ನಂಬಿ ಜೀವನ ನಡೆಸುತ್ತಿದ್ದ ಈ ಕುಟುಂಬಕ್ಕೆ ಮೂರು ಕರುಗಳಿಗೆ ಜನ್ಮ ನೀಡಿರುವ ಹಸು ಕಾಮಧೇನು ಆಗಿ ಪರಿಣಮಿಸಿದೆ. ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡುವುದು ಸಹಜ. ಆದರೆ ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

    ಮೂರು ಕರುಗಳು ಆರೋಗ್ಯವಾಗಿವೆ ಎಂದು ಪಶು ವೈದ್ಯರು ದೃಢಪಡಿಸಿದ್ದು, ಇಂತಹ ಪ್ರಕರಣಗಳು ಸುಮಾರು 50 ಸಾವಿರ ಹಸುಗಳಲ್ಲಿ ಒಂದು ಎಂದು ತಿಳಿಸಿದ್ದಾರೆ. ಇಂತಹ ಪ್ರಕರಣಗಳನ್ನು ನೋಡಿಯೇ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !

    ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗುಳಿ ಗ್ರಾಮಸ್ಥರು ಕುಡಿಯಲು ನೀರು ಕೇಳಿದ್ರೆ ಮಜ್ಜಿಗೆ ಕೊಡುತ್ತಾರೆ. ಕಾರಣ ಗ್ರಾಮದ ಪ್ರತಿಯೊಬ್ಬರು ಹೈನುಗಾರಿಕೆಯನ್ನು ಉದ್ಯೋಗ ಮಾಡಿಕೊಂಡಿದ್ದಾರೆ. ಆದ್ರೆ ಕಳೆದ ಕೆಲ ದಿನಗಳಿಂದ ಜೀವನಾಧಾರವಾದ ಹಸುಗಳು ಕಾಲು, ಬಾಯಿ ಬೇನೆಯಿಂದ ಸಾವನ್ನಪ್ಪುತ್ತಿವೆ. ನಮ್ಮ ಕಷ್ಟ ಕೇಳಬೇಕಾದ ಶಾಸಕರು ಗುರುಗ್ರಾಮದ ರೆಸಾರ್ಟ್ ನಲ್ಲಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮುಗುಳಿ ಗ್ರಾಮದಲ್ಲಿ ಸರಿ ಸುಮಾರು 3 ಸಾವಿರಕ್ಕೂ ಅಧಿಕ ಹಸುಗಳಿವೆ. ಇಲ್ಲಿನ ರೈತರ ಮೂಲ ಉದ್ಯೋಗವೆಂದರೆ ಅದು ಹೈನುಗಾರಿಕೆಯಾಗಿದ್ದು, ಅದನ್ನೆ ಉಸಿರಾಗಿಸಿಕೊಂಡು ಇಲ್ಲಿನ ರೈತರು ಬದುಕುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಹಸುಗಳಿಗೆ ಕಾಲು ಬೇನೆ ಮತ್ತು ಬಾಯಿ ಬೇನೆ ಬಂದು ಸುಮಾರು 15 ಕ್ಕೂ ಹೆಚ್ಚು ಹಸುಗಳು ಅಸುನೀಗಿವೆ. ಹೀಗಾಗಿ ಇಲ್ಲಿನ ರೈತರಿಗೆ ಹಸುಗಳನ್ನ ಕಾಪಾಡಿಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ನಮ್ಮ ಕಷ್ಟವನ್ನ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಗಣಪತಿ ಬಡಿಗೇರ್ ಹೇಳುತ್ತಾರೆ.

    ಗ್ರಾಮದ ರೈತರ ವತಿಯಿಂದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು ಇಲ್ಲಿಯವರೆಗೂ ಗ್ರಾಮದಲ್ಲಿ ಪಶು ಆಸ್ಪತ್ರೆ ಆಗಿಲ್ಲ. ಹೀಗಾಗಿ ಇಲ್ಲಿನ ರೈತರು ತಮ್ಮ ಹಸುಗಳನ್ನ ದೂರದ ಚಿಕ್ಕೋಡಿ ಅಥವಾ ಇಲ್ಲವೇ ಅಕ್ಕ ಪಕ್ಕದ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಅಗತ್ಯ ಎದುರಾಗಿದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯ ಉಪನಿರ್ದೆಶಕರನ್ನ ಕೇಳಿದ್ರೆ ಸರ್ಕಾರಕ್ಕೆ ನಾವು ಸಹ ಪ್ರಸ್ತಾವನೆ ಕಳಿಸಿದ್ದೇವೆ ಆದರೆ ಸರ್ಕಾರ ಹೊಸ ಚಿಕಿತ್ಸಾಲಯಗಳನ್ನು ತೆರೆಯುವ ಮನಸ್ಸು ಮಾಡುತ್ತಿಲ್ಲ. ಬದಲಾಗಿ ಈಗಾಗಲೇ ಇದ್ದ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡುತ್ತಿದೆ ಚಿಕ್ಕೋಡಿ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ಡಾ.ಸದಾಶಿವ ಉಪ್ಪಾರ ಹೇಳುತ್ತಾರೆ.

    ಅವಶ್ಯಕತೆ ಇರುವ ಜಾಗಗಳಲ್ಲಿ ಹೊಸ ಪಶು ಚಿಕಿತ್ಸಾಲಯ ತೆರೆಯೋದು ಬಿಟ್ಟು ಈಗಾಗಲೇ ಇರುವ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕೆಲಸಕ್ಕೆ ಚಿಕ್ಕೋಡಿಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇನ್ನಾದ್ರೂ ಸರ್ಕಾರ ಹೊಸ ಪ್ರಸ್ತಾವನೆಯನ್ನ ಸ್ವೀಕಾರ ಮಾಡಿ ಹೊಸ ಚಿಕಿತ್ಸಾಲಯಗಳನ್ನ ಪ್ರಾರಂಭಿಸುತ್ತಾ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನ ಹಸು ಸಾಕಾಣಿಕೆದಾರರೇ ಹುಷಾರ್ !

    ಬೆಂಗಳೂರಿನ ಹಸು ಸಾಕಾಣಿಕೆದಾರರೇ ಹುಷಾರ್ !

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸು ಸಾಕುವ ಜನರಿಗೆ ನಿಜಕ್ಕೂ ಶಾಕ್ ಆಗುವಂಥ ಸುದ್ದಿ ಇದು. ಬೆಂಗಳೂರಿನಲ್ಲಿ ತುಂಬಾ ಜನರು ಹಸು ಸಾಕಿದ್ದಾರೆ. ಕಾಂಕ್ರೀಟ್ ಕಾಡಿನಂತಿರುವ ಬೆಂಗಳೂರಿನಲ್ಲಿ ಮೇವು ಹೊಂದಿಸಿ ಹಸುಗಳನ್ನು ಸಾಕಿ ಬದುಕು ಕಟ್ಟಿಕೊಂಡಿರೋರು ತುಂಬಾ ಜನರಿದ್ದಾರೆ. ಇತ್ತೀಚೆಗೆ ನಗರದಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಚಿನ್ನ, ವಾಹನ, ಹಣ ಕಳ್ಳತನ ಪ್ರಕರಣಗಳ ಜೊತೆಗೆ ಹಸು, ಕರು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದಾರೆ.

    ರಾತ್ರೋರಾತ್ರಿ ಬರುವ ಹಸು ಕಳ್ಳರು ಕ್ಯಾಂಟರ್ ಗಳನ್ನು ತಂದು ಕೊಟ್ಟಿಗೆಗಳಿಂದ ಹಸು, ಕರು, ಎಮ್ಮೆಗಳ ಕಳ್ಳತನ ಮಾಡ್ಕೊಂಡು ಪರಾರಿಯಾಗ್ತಿದ್ದಾರೆ. ಪಬ್ಲಿಕ್ ಟಿವಿಗೆ ಹಸು ಕಳ್ಳರ ಕೈ ಚಳಕದ ವೀಡಿಯೋ ಲಭ್ಯವಾಗಿದೆ. ಜಕ್ಕೂರಿನಲ್ಲಿ ಕಳೆದ ಶುಕ್ರವಾರ ರಾತ್ರಿ ಹಸು ಮತ್ತು ಅದರ ಕರುವನ್ನು ಕ್ಯಾಂಟರ್ ನಲ್ಲಿ ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಪ್ರಮುಖವಾಗಿ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಹಸು ಮತ್ತು ಎಮ್ಮೆಗಳ ಕಳ್ಳತನ ಹೆಚ್ಚಾಗಿದೆ. ಅಮೃತಹಳ್ಳಿ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಜಕ್ಕೂರು ಲೇಔಟ್, ಜಕ್ಕೂರು, ಬ್ಯಾಟರಾಯನಪುರದಲ್ಲಿ ಕಳೆದ ಮೂರು ತಿಂಗಳಿಂದ ಸರಿ ಸುಮಾರು 15 ಕ್ಕೂ ಹೆಚ್ಚು ಹಸುಗಳ ಕಳ್ಳತನ ನಡೆದಿದೆ. ಪರಿಣಾಮ ಈ ಭಾಗದ ಹಸು ಸಾಕಾಣಿಕೆದಾರರು ಬಹಳ ಆತಂಕಗೊಂಡಿದ್ದಾರೆ.

    ಜಾನುವಾರು ಸಾಕಿದವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕಳ್ಳರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಆದರೆ ಕಳ್ಳರ ಪತ್ತೆ ಇನ್ನೂ ಆಗಿಲ್ಲ. ಹಸು, ಕರು, ಎಮ್ಮೆ ಕದ್ದವರು ಅದನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಆರೋಪವೂ ಇದೆ. ಜಾನುವಾರುಗಳ ಕಳ್ಳತನಗಳ ಹಿಂದೆ ನಗರದಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು ನಿಂತಿದ್ದರೆ, ಅದರ ಕರು ಹಾಲು ಕುಡಿಯವಷ್ಟು ಎತ್ತರವಾಗಿರುತ್ತದೆ. ಇಲ್ಲಿ ಪುಟ್ಟ ನಾಯಿ ಮರಿಗಳಿಗೆ ಕಷ್ಟವಾಗಬಾರದು ಅಂತಾ ಗೋ ಮಾತೆ ಮಲಗಿ ಹಾಲು ನೀಡುತ್ತಿದೆ. ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಮನುಷ್ಯರಲ್ಲಿ ನಾನು, ನೀನು ಎಂಬ ಭೇದ ಭಾವವಿರುತ್ತೆ ಹೊರತು ಪ್ರಾಣಿಗಳಲ್ಲಿರಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಇಂದು ನಮ್ಮ ಮುಂದಿದೆ. ಕೆಲ ಪ್ರಾಣಿಗಳು ಪರಸ್ಪರ ಬದ್ಧವೈರಿಗಳಾಗಿದ್ದರು, ಒಂದಕ್ಕೊಂದು ಹಾಲುಣಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ.

    ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿತ್ತು. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಗಜ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ತಬ್ಬಲಿ ಮೇಕೆಗೆ ಅದೇ ಮನೆಯಲ್ಲಿದ್ದ ಶ್ವಾನವೇ ತಾಯಿಯಾಗಿ ಆಸರೆಯಾಗಿತ್ತು.

    https://www.youtube.com/watch?v=uQca3sM_wfw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಕರುವನ್ನು ಗೋ ಕಳ್ಳರು ಕದ್ದಿದ್ದಕ್ಕೆ ಆಕ್ರೋಶಗೊಂಡು ಕಾರನ್ನು ಅಟ್ಟಿಸಿಕೊಂಡು ಹೋದ ತಾಯಿ ಹಸು

    ಚಿಕ್ಕಮಗಳೂರು: ಕರುವನ್ನು ಹೊತ್ತೊಯ್ದಿದ್ದಕ್ಕೆ ತಾಯಿ ಹಸು ಗೋಕಳ್ಳರ ಕಾರನ್ನು ಅಟ್ಟಿಸಿಕೊಂಡು ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ.

    ಗುರುವಾರ ರಾತ್ರಿ ಮೂವರು ಗೋ ಕಳ್ಳರು ಹಸುಗಳ ಕಳ್ಳತನಕ್ಕೆಂದು ಝೈಲೋ ಕಾರಿನಲ್ಲಿ ಕೊಪ್ಪ ನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಿಡಾಡಿ ಹಸುವನ್ನು ಕಾರಿನೊಳಗೆ ತುಂಬಲು ಯತ್ನಿಸಿದಾಗ ಹಸು ಓಡುವ ವೇಗಕ್ಕೆ ಅದರೊಂದಿಗೆ ಓಡಲಾಗದೆ ಅದನ್ನು ಹಿಡಿಯಲೂ ಆಗದೇ ಕೈಬಿಟ್ಟಿದ್ದಾರೆ.

    ಹಸುವಿನ ಕರುವನ್ನು ಕಾರಿನೊಳಗೆ ತುಂಬಿಕೊಂಡು ಹೋಗೋದನ್ನು ಕಂಡ ತಾಯಿ ಹಸು ಕಾರನ್ನು ಅಟ್ಟಿಸಿಕೊಂಡು ಹೋಗಿರುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕರುಗಿಂತ ಮೊದಲೇ ತಾಯಿ ಹಸುವನ್ನು ಹಿಡಿಯಲೆತ್ನಿಸಿದ ಕಳ್ಳರಿಗೆ ಹಸು ಚೆನ್ನಾಗಿ ಪಾಠ ಕಲಿಸಿದೆ. ಎರ್ರಾ ಬಿರ್ರಿ ಓಡಿ ಗೋಕಳ್ಳನನ್ನು ಹೈರಾಣು ಮಾಡಿದೆ.

    ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಳ್ಳರು ಯಾರೆಂದು ತಿಳಿದು ಬಂದಿಲ್ಲ. ಆದರೆ ಕಾರು ಝೈಲೋ ಅನ್ನೋದು ಪತ್ತೆಯಾಗಿದೆ. ಮುಂದೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    https://www.youtube.com/watch?v=WRPMx1dEJvs&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿಯುವ ನೀರಿಗೆ ಪರದಾಡಿ ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿದ ಹಸು: ವಿಡಿಯೋ ವೈರಲ್

    ಕುಡಿಯುವ ನೀರಿಗೆ ಪರದಾಡಿ ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿದ ಹಸು: ವಿಡಿಯೋ ವೈರಲ್

    ಚಿಕ್ಕಮಗಳೂರು: ಕುಡಿಯಲು ನೀರಿಲ್ಲದೆ ಹಸುವೊಂದು ಪರದಾಡಿ, ರಸ್ತೆ ಪಕ್ಕದಲ್ಲಿದ್ದ ನಲ್ಲಿಯಲ್ಲಿ ನೀರು ಕುಡಿಯುತ್ತಿರುವ ಮನಕಲಕುವ ದೃಶ್ಯವೊಂದು ಸೆರೆಯಾಗಿದೆ.

    ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆಯಲ್ಲಿ ಕುಡಿಯಲು ನೀರಿಲ್ಲದೆ ಹಸುವೊಂದು ಕೆಲಕಾಲ ಪರದಾಡಿದೆ. ನಂತರ ಹಸು ರಸ್ತೆಯ ಪಕ್ಕದಲ್ಲಿದ್ದ ನಲ್ಲಿಯನ್ನು ಗಮನಿಸಿದೆ. ಹಸು ಸ್ಥಳಕ್ಕೆ ತೆರಳಿ ನಲ್ಲಿಯನ್ನು ತಿರುಗಿಸಿ ಸುಮಾರು ಐದು ನಿಮಿಷಗಳ ನೀರು ಕುಡಿದಿದೆ.

    ಹಸು ನೀರನ್ನು ಕುಡಿದ ಬಳಿಕ ನಲ್ಲಿಯನ್ನ ಮತ್ತೆ ತಿರುಗಿಸಿ ಆಫ್ ಮಾಡಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಿಗದೇ ಇರುವ ಕಾರಣ ಕುಡಿಯುವ ನೀರಿಗಾಗಿ ಪರದಾಡಿದ ಹಸು ಕೊನೆಗೆ ನಲ್ಲಿ ನೀರು ಕುಡಿದಿದೆ.

    ಹಸು ನಲ್ಲಿ ತಿರುಗಿಸಿ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    https://www.youtube.com/watch?v=2LaHhnS5FZY&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳೆಯ ದ್ವೇಷಕ್ಕೆ ರೈತನ 3 ಹಸುಗಳಿಗೆ ಕಿಡಿಗೇಡಿಗಳಿಂದ ವಿಷ

    ಹಳೆಯ ದ್ವೇಷಕ್ಕೆ ರೈತನ 3 ಹಸುಗಳಿಗೆ ಕಿಡಿಗೇಡಿಗಳಿಂದ ವಿಷ

    ಬೀದರ್: ಹಳೆಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ರೈತರೊಬ್ಬರ ಮೂರು ಹಸುಗಳಿಗೆ ವಿಷ ಹಾಕಿ ಅಮಾನವೀಯತೆ ಮೆರೆದ ಘಟನೆ ಬೀದರ್ ನಲ್ಲಿ ನಡೆದಿದೆ.

    ವಿಷ ತಿಂದ ಹಸುಗಳು ಜಿಲ್ಲೆಯ ಔರಾದ್ ಪಟ್ಟಣದ ಗೋವಿಂದ ರೆಡ್ಡಿಗೆ ಸೇರಿದ್ದಾಗಿವೆ. ಯಾರೋ ಕಿಡಿಗೇಡಿಗಳು ಗೋವಿಂದ ಅವರ ಮೂರು ಹಸುಗಳಿಗೆ ವಿಷ ಹಾಕಿದ್ದಾರೆ. ವಿಷ ಹಾಕಿದ ಪರಿಣಾಮ ಮೂಕ ಪ್ರಾಣಿಗಳು ನರಳಿ ನರಳಿ ಕೊನೆಯುಸಿರೆಳೆದಿವೆ.

    ಬಸ್ ಸ್ಟ್ಯಾಂಡ್ ಹಿಂದಿನ ರಸ್ತೆ ಪಕ್ಕದಲ್ಲಿ ಹಸುಗಳಿಗೆ ಮೇವು ಹಾಕಲಾಗಿತ್ತು. ಆದರೆ ತಡರಾತ್ರಿ ಅಪರಿಚಿತರು ಮೇವಿನಲ್ಲಿ ಕ್ರಿಮಿನಾಶಕ ವಿಷ ಬೆರೆಸಿ ಹಸುಗಳ ಸಾವಿಗೆ ಕಾರಣರಾಗಿದ್ದಾರೆ. ತೀವ್ರ ಅಸ್ವಸ್ಥರಾದ ಹಸುಗಳಿಗೆ ಸ್ಥಳೀಯ ಪಶು ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹಸುಗಳು ಮತಪಟ್ಟಿದೆ.

    ಸದ್ಯ ಘಟನೆ ನಂತರ ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಕು ಹಸುಗಳನ್ನು ಕಳೆದುಕೊಂಡು ಕಂಗಾಲಾದ ಗೋವಿಂದ ರೆಡ್ಡಿ ಅವರು ಔರಾದ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಯಚೂರಿನಲ್ಲಿ ಹಾಲು ಬದಲು ಆಲ್ಕೋಹಾಲ್ ನೀಡ್ತಿವೆ ಹಸು, ಎಮ್ಮೆಗಳು

    ರಾಯಚೂರಿನಲ್ಲಿ ಹಾಲು ಬದಲು ಆಲ್ಕೋಹಾಲ್ ನೀಡ್ತಿವೆ ಹಸು, ಎಮ್ಮೆಗಳು

    ರಾಯಚೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ನಿಜ. ಹಸು, ಎಮ್ಮೆ ಹಾಲು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಎಮ್ಮೆ, ಆಕಳುಗಳೇ ಮದ್ಯಪಾನ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನ ಸಿಂಧನೂರು ತಾಲೂಕಿನ ಗಾಂಧಿನಗರ, ಸತ್ಯವತಿ ಕ್ಯಾಂಪ್, ತಾಯಮ್ಮ ಕ್ಯಾಂಪ್‍ಗಳಲ್ಲಿ ಹಸು, ಎಮ್ಮೆಗಳು ಈ ರೀತಿಯ ಹಾಲನ್ನು ಕೊಡುತ್ತಿವೆ. ಸ್ವಲ್ಪ ಮಟ್ಟಿಗೆ ಬಿಯರ್ ವಾಸನೆ, ಉಪ್ಪಿನ ರುಚಿ, ಕೊಂಚ ಹಳದಿ ಬಣ್ಣದಲ್ಲಿರುವ ಬಿಯರ್ ನೊರೆಯ ಹಾಲು ಮಕ್ಕಳ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವ ಆತಂಕ ಮೂಡಿದೆ.

    ಬಿಯರ್ ತಯಾರಿಕೆಯಲ್ಲಿ ಬಳಸಿ ಕೊನೆಗೆ ಉಳಿದ ಮಡ್ಡಿ ಪದಾರ್ಥವನ್ನು ಜಾನುವಾರುಗಳಿಗೆ ತಿನ್ನಿಸುತ್ತಿರುವುದರಿಂದ ಈ ಹಾಲು ಬರುತ್ತಿದೆ. ಬಿಯರ್ ತಯಾರಿಕಾ ಕಂಪೆನಿಗಳು ಕೆಲಸಕ್ಕೆ ಬಾರದೇ ಬಿಸಾಡುತ್ತಿದ್ದ ಬಿಯರ್ ಹೊಟ್ಟನ್ನು 10 ರೂ.ಗೆ ಒಂದು ಕೆ.ಜಿಯಂತೆ ಲಾರಿಯಲ್ಲಿ ತಂದು ರೈತರಿಗೆ ಟನ್ ಗಟ್ಟಲೆ ಮಾರುತ್ತಿವೆ. ಬಿಯರ್ ಹೊಟ್ಟು ತಿಂದರೆ ಎಮ್ಮೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಅಂತ ರೈತರು ಬಳಸುತ್ತಿದ್ದಾರೆ.

    ಸುಮಾರು ಹತ್ತು ವರ್ಷಗಳಿಂದ ಬಿಯರ್ ಹೊಟ್ಟನ್ನು ಬಳಸುತ್ತಿರುವ ಗ್ರಾಮಸ್ಥರು ಜಾನುವಾರುಗಳು ಕೆಚ್ಚಲು ನಿಂತು ಹಾಲುಕೊಡದ ಸ್ಥಿತಿಗೆ ಬಂದಾಗ ತಮ್ಮ ಹಸು, ಎಮ್ಮೆಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಹೊಟ್ಟು ತಿಂದ ನಶೆಯಲ್ಲಿ ಜಾನುವಾರುಗಳು ಎರಡರಿಂದ ಮೂರು ಲೀಟರ್ ಹೆಚ್ಚು ಹಾಲು ಕೊಡುತ್ತವೆ. ಆದರೆ ಹೊಟ್ಟು ಕೊಡದಿದ್ದರೆ ಮೂರ್ನಾಲ್ಕು ದಿನ ಹಾಲನ್ನೇ ಕೊಡುವುದಿಲ್ಲ.

    ಗಾಂಧಿನಗರದಲ್ಲಿ ಒಟ್ಟು ನಾಲ್ಕು ಹಾಲಿನ ಡೈರಿಗಳಿದ್ದು ಹೆಚ್ಚು ಹಾಲಿಗಾಗಿ ಡೈರಿಯವರೇ ರೈತರಿಗೆ ಬಿಯರ್ ಹೊಟ್ಟನ್ನು ನೀಡುತ್ತಿದ್ದಾರೆ. ಬಿಯರ್ ಹೊಟ್ಟಿನಿಂದ ಜಾನುವಾರುಗಳಿಗೆ ಕೀಲು ನೋವು, ಕೆಚ್ಚಲು ಕಟ್ಟದಿರುವ ಸಮಸ್ಯೆಯಂತೂ ಕಾಣಿಸಿಕೊಂಡಿದೆ. ಆದರೆ ಚಿಕ್ಕಮಕ್ಕಳು, ವಯಸ್ಕರ ಮೇಲೆ ಈ ಹಾಲು ಯಾವೆಲ್ಲಾ ಪರಿಣಾಮ ಬೀರಬಹುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

    ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಬೀಚಪಲ್ಲಿ ಹಾಗೂ ನಂದ್ಯಾಲದಿಂದ ಈ ಬಿಯರ್ ಹೊಟ್ಟು ಬರುತ್ತಿದೆ. ಈ ಹೊಟ್ಟನ್ನು ಬಳಸುವ ರೈತರು ಆ ಹಾಲನ್ನು ತಾವು ಕುಡಿಯದೇ ನೇರವಾಗಿ ಡೈರಿಗಳಿಗೆ ಹಾಕುತ್ತಿದ್ದಾರೆ. ಸದ್ಯ ಜಿಲ್ಲಾ ಆರೋಗ್ಯ ಇಲಾಖೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಹಾಲಿನಲ್ಲಿ ಮದ್ಯಪಾನ ಪತ್ತೆಯಾದರೆ ನಿಜಕ್ಕೂ ಈ ಬಿಯರ್ ಹಾಲು ಡೆಂಜರಸ್ ಎನ್ನುವುದು ಸಾಬೀತಾಗುತ್ತದೆ. ಸದ್ಯಕ್ಕಂತೂ ವೈದ್ಯರಿಗೆ ಈ ಬೀಯರ್ ಹಾಲು ಸವಾಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಾವು-ಬದುಕಿನ ಹೋರಾಟ ನಡೆಸ್ತಿದ್ದ ಹಸುವಿಗೆ ಯುವಕರಿಂದ ಸಹಾಯ

    ಸಾವು-ಬದುಕಿನ ಹೋರಾಟ ನಡೆಸ್ತಿದ್ದ ಹಸುವಿಗೆ ಯುವಕರಿಂದ ಸಹಾಯ

    ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಹಸುವೊಂದಕ್ಕೆ ಯುವಕರು ತಾತ್ಕಾಲಿಕ ಶೆಡ್ ನಿರ್ಮಿಸಿ ಚಿಕಿತ್ಸೆ ನೀಡಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ಅಪಘಾತಕ್ಕೀಡಾದ ಹಸುವೊಂದು ಮೇಲೇಳಲಾಗದೆ ನರಳುತ್ತಿತ್ತು. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂರು ದಿನಗಳಿಂದ ಹಸುವಿನ ಸ್ಥಿತಿ ಹೀಗೆ ಇದ್ದರೂ ಯಾರೋಬ್ಬರು ಕೂಡ ಹಸುವಿನ ನೆರವಿಗೆ ಮುಂದಾಗಿರಲಿಲ್ಲ.

    ಹಸುವಿನ ಮಾಲೀಕರು ಕೂಡ ಬಂದಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ನಾಗರಾಜ್ ಭಟ್, ಅನ್ವರ್, ಜಾರ್ಜ್ ಹಾಗೂ ಸ್ಥಳೀಯ ಯುವಕರು ತಾತ್ಕಾಲಿಕ ಶೆಡ್ ನಿರ್ಮಿಸಿ ಹಸುವಿನ ಚಿಕಿತ್ಸೆ ನೀಡಿ, ಪಶು ವೈದ್ಯರಿಗೆ ವಿಷಯ ಮುಟ್ಟಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಬಂದ ಪಶು ವೈದ್ಯರು ಹಸುವಿಗೆ ಚುಚ್ಚು ಮದ್ದು ನೀಡಿ, ಹಸುವನ್ನು ರಕ್ಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

    ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

    – ಪಂಚಾಯ್ತಿ ಅಧ್ಯಕ್ಷರಿಂದ ಸಹಾಯಧನ

    ಬೆಂಗಳೂರು: ಅಪರೂಪದ ಅವಳಿ ಹೆಣ್ಣು ಕರುಗಳಿಗೆ ಗೋವೊಂದು ಜನ್ಮ ನೀಡಿದ್ದು, ಇದೀಗ ಸುತ್ತಮುತ್ತಲ ಜನರ ಆಕರ್ಷಣೆಗೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ಈ ವಿಸ್ಮಯ ನಡೆದಿದೆ. ಗ್ರಾಮದ ನರಸಮ್ಮ ಎಂಬವರಿಗೆ ಸೇರಿದ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿ ಸೋಜಿಗಕ್ಕೆ ಕಾರಣವಾಗಿದೆ.

    ವೈಜ್ಞಾನಿಕವಾಗಿ ವರ್ಣತಂತುಗಳು ಡೈಜೈಗೋಟಿಕ್ ಪ್ರಕ್ರಿಯೆಯಾದಾಗ ಈ ರೀತಿಯ ಎರಡು ಕರುಗಳು ಜನ್ಮ ತಾಳುತ್ತವೆ. ಅಪರೂಪದ ಹಸು ಕರುಗಳನ್ನು ನೋಡಲು ಸುತ್ತ-ಮುತ್ತಲಿನ ಗ್ರಾಮಗಳ ಹಲವಾರು ಮಂದಿ ಆಗಮಿಸಿ ವೀಕ್ಷಿಸುತ್ತಿದ್ದಾರೆ.

    ಸ್ಥಳೀಯ ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸು ಸಾಕಿದ ನರಸಮ್ಮಳಿಗೆ ಉಡುಗೊರೆ ಹಾಗೂ ಕರುಗಳ ಪೋಷಣೆಗಾಗಿ ಸಹಾಯ ಧನ ನೀಡಿ ಮಾನವೀಯತೆಗೆ ಮುಂದಾಗಿದ್ದಾರೆ. ಅಪರೂಪದ ಹಸು ಕರುಗಳು ವಿಜ್ಞಾನಕ್ಕೆ ವಿಸ್ಮಯವಾಗಿದ್ದು, ಹಸು ಹಾಗೂ ಕರುಗಳೆರಡೂ ಆರೋಗ್ಯವಾಗಿವೆ ಎಂದು ನರಸಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv