Tag: cow

  • 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    ಬೆಳಗಾವಿ: ಜಮೀನಿನಲ್ಲಿ ಕಟ್ಟಿದ್ದ ಗೋವುಗಳನ್ನ ರಾತ್ರೋರಾತ್ರಿ ದುರುಳರು ಕದ್ದು ಸಾಗಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.

    ಜ.7ರ ರಾತ್ರಿ ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಜಮೀನಿನ ಶೆಡ್ ನಲ್ಲಿ ಕಟ್ಟಿದ್ದ ನಾಲ್ಕು ಜರ್ಸಿ ಆಕಳು, ಒಂದು ಆಕಳಿನ ಕರುವನ್ನು ಪಿಕಪ್‌ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ.

    ತಂದೆ ಇಲ್ಲದ, ಗಂಡನಿಲ್ಲದ ಉಮಾಗೆ ಆಕಳುಗಳು ಆಧಾರ ಸ್ತಂಭವಾಗಿದ್ದವು. ತಂದೆಯ ಆಸ್ತಿಯಲ್ಲಿ ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಉಮಾ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

    ಜ.8 ರ ಮಧ್ಯರಾತ್ರಿ ಆಕಳುಗಳನ್ನು ಪಿಕಪ್‌ ವಾಹನದಲ್ಲಿ ಕದ್ದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಇಟ್ಟುಕೊಂಡು ಸವದತ್ತಿ ಪೊಲೀಸ್ ಠಾಣೆಯಲ್ಲಿ ಉಮಾ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿ ವಾರ ಕಳೆದರೂ ದನಗಳನ್ನ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.

    ಸಿಸಿಟಿವಿ ದೃಶ್ಯವನ್ನು ನೀಡಿದಾಗ ಪಿಕ್‌ಅಪ್‌ ವಾಹನಕ್ಕೆ ನಂಬರ್‌ ಇಲ್ಲ ಎಂದು ಹೇಳಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ದನಗಳನ್ನು ಕಸಾಯಿಖಾನೆಗೆ ಸಾಗಿಸಿರಬಹುದು ಶಂಕೆ ವ್ಯಕ್ತಪಡಿಸುತ್ತಿರುವ ಉಮಾ ಈಗ ಕಂಡಕಂಡವರಲ್ಲಿ ಐದು ಆಕಳುಗಳನ್ನ ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

  • Kodagu | ಹುಲಿ ದಾಳಿಗೆ ಎರಡು ಹಸುಗಳು ಬಲಿ

    Kodagu | ಹುಲಿ ದಾಳಿಗೆ ಎರಡು ಹಸುಗಳು ಬಲಿ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಒಂದೆಡೆ ಕಾಡಾನೆ ಹಾವಳಿಯಿಂದ ಗ್ರಾಮೀಣ ಜನರು ತೋಟಗಳಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರೆ, ಮತ್ತೊಂದೆಡೆ ಹುಲಿಗಳ (Tiger) ಅಟ್ಟಹಾಸ ಮುಂದುವರಿದಿದೆ. ಇದೀಗ ಮತ್ತೆ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾದ ಘಟನೆ ಜಿಲ್ಲೆಯ ಪೊನ್ನಂಪೇಟೆ  (Ponnampet) ತಾಲೂಕಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಎಂ. ದಿನು ಎಂಬವರಿಗೆ ಸೇರಿದ 2 ಹಸುಗಳು ಹುಲಿಗೆ ಆಹಾರವಾಗಿದೆ. ಸದ್ಯ ಆನೆಗಳ ಮೂಲಕ ಹುಲಿಸೆರೆ ಕಾರ್ಯಾಚರಣೆ ಸಿದ್ಧತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ಮಂಡ್ಯದ ಪಾಲಹಳ್ಳಿಯಲ್ಲಿ ಮತ್ತೆ ಹರಿದ ನೆತ್ತರು – ರೌಡಿಶೀಟರ್‌ನ ಬರ್ಬರ ಹತ್ಯೆ

    ಸ್ಥಳಕ್ಕೆ ರಾಜ್ಯ ವನ್ಯಜೀವಿಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಹಸುಗಳಿಗೆ ಪರಿಹಾರದ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಕಡಿಮೆ ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧ – ಜೋಶಿ

  • Kolar | ಹಳೆ ದ್ವೇಷಕ್ಕೆ ದನದ ಶೆಡ್ ಧ್ವಂಸ ಮಾಡಿದ  ಗ್ರಾಮ ಪಂಚಾಯತ್‌ ಸದಸ್ಯ 

    Kolar | ಹಳೆ ದ್ವೇಷಕ್ಕೆ ದನದ ಶೆಡ್ ಧ್ವಂಸ ಮಾಡಿದ  ಗ್ರಾಮ ಪಂಚಾಯತ್‌ ಸದಸ್ಯ 

    ಕೋಲಾರ: ಹಳೇ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್‌ ಸದಸ್ಯ ಹಸುವಿನ ಶೆಡ್ ನೆಲಸಮ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆ ಮಾಲೂರು (Malur) ತಾಲೂಕು ಗೊಲ್ಲಪೇಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶೆಡ್ ನೆಲಸಮದಿಂದ ಶೆಡ್‌ನಲ್ಲಿದ್ದ ಹಸು ಗಂಭೀರವಾಗಿ ಗಾಯಗೊಂಡಿದೆ. ಗ್ರಾಮದ ಅಮೀರ್ ಜಾನ್ ಎಂಬವರಿಗೆ ಸೇರಿದ ಹಸು ಹಾಗೂ ಶೆಡ್ ಇದಾಗಿದ್ದು, ಸಂಬಂಧಿ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮುಬಾರಕ್ ಅವರು ಈ ಕೃತ್ಯವೆಸಗಿದ್ದಾರೆ. ವಿನಾಕಾರಣ ಮುಬಾರಕ್ ಅವರು ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 18 ಟೆಂಟ್‌ಗಳು ಭಸ್ಮ, ಪರಿಸ್ಥಿತಿ ಅವಲೋಕಿಸಿದ ಮೋದಿ

    ಕಳೆದ ಹಲವು ದಿನಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿದೆ.  ಶನಿವಾರ ತಡರಾತ್ರಿ ಹಸುವಿನ ಶೆಡ್ ನೆಲಸಮ ಮಾಡಿದ್ದು, ಇದರಿಂದ ಶೆಡ್‌ನಲ್ಲಿದ್ದ ಸುಮಾರು ಒಂದೂವರೆ ಲಕ್ಷ ರೂ. ಬೆಲೆ ಬಾಳುವ ಹಸುವಿಗೆ ಗಾಯವಾಗಿದೆ. ಈ ಬಗ್ಗೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ರಾಜ್ಯದ ಹಿತ ನೋಡಿ‌ ಮಾತನಾಡಲಿ – ಸಚಿವ ಎಂ.ಬಿ ಪಾಟೀಲ್

  • ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಹೊತ್ತೊಯ್ದು ಬಾಡೂಟ – 7 ಮಂದಿ ಅರೆಸ್ಟ್

    ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಹೊತ್ತೊಯ್ದು ಬಾಡೂಟ – 7 ಮಂದಿ ಅರೆಸ್ಟ್

    ಹಾಸನ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ (Hassan) ಕರುವೊಂದನ್ನು (Cow) ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿದ್ದಾರೆ. ಮಂಗಳವಾರ ಕರುವನ್ನು ದುಷ್ಕರ್ಮಿಗಳು ಕದ್ದಿದ್ದರು. ಕರುವಿಗಾಗಿ ಹುಡುಕಾಟ ನಡೆಸಿದಾಗ, ಮಡಬಲು ಗ್ರಾಮದ ರೈಲ್ವೆ ಗೇಟ್ ಸಮೀಪ ಕರುವಿನ ರುಂಡ ಪತ್ತೆಯಾಗಿತ್ತು.

    ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

    ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿ ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಬೆಳಗಾಗಿದ್ದು ಜಮೀನು ಕೆಲಸಕ್ಕೆ ರೈತರು ಬರುತ್ತಿರುವುದನ್ನು ಕಂಡು ರುಂಡವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

    ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಬೆಂಗಳೂರು: ಕೊಟ್ಟ ಮಾತಿನಂತೆ ಚಾಮರಾಜಪೇಟೆ (Chamarajpet) ಶಾಸಕ, ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರು ಮೂರು ಹಸುಗಳನ್ನು ನೀಡಿದ್ದಾರೆ.

    ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಅಹಿತಕರ ಘಟನೆ (Bengaluru Cow Horror Case) ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದರು.  ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಈ ವೇಳೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ ಎಂದು ಹೇಳಿದರು.

     

  • ಗೋವಿನ ಕೆಚ್ಚಲು ಕತ್ತರಿಸಿರೋದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ: ಸುಗುಣೇಂದ್ರ ಶ್ರೀ

    ಗೋವಿನ ಕೆಚ್ಚಲು ಕತ್ತರಿಸಿರೋದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ: ಸುಗುಣೇಂದ್ರ ಶ್ರೀ

    ಉಡುಪಿ: ಗೋವುಗಳೆಂದರೆ (Cow) ದೇವರ ಸನ್ನಿಧಾನ ಇರುವ ಸ್ಥಳ ಎಂದು ನಾವು ಗೌರವಿಸುತ್ತೇವೆ. ಪವಿತ್ರ ಎಂದು ಪರಿಗಣಿಸಿ ಭಾರತದಲ್ಲಿ ಪೂಜಿಸಲಾಗುತ್ತದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು (Sugunendra Theertha Swamiji) ಹೇಳಿದ್ದಾರೆ.

    ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ಅಮಾನವೀಯ ಪ್ರಕರಣವನ್ನು ಖಂಡಿಸುತ್ತೇವೆ. ಈ ಘಟನೆಯ ಬಗ್ಗೆ ಕೇಳಿ ಆಘಾತವಾಗಿದೆ. ಕ್ರೂರವಾಗಿ ಹಿಂಸೆಯನ್ನು ನೀಡಿ ಹಸುವಿಗೆ ಘಾಸಿಗೊಳಿಸಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಭಯಾನಕವಾದದ್ದು. ಯಾವುದೇ ಘಟನೆಯನ್ನು ಗೋವಿನ ಮೇಲೆ ಹಿಂಸೆಯಾಗಿ ಪರಿಗಣಿಸಬಾರದು. ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ. ನಮ್ಮ ದೇಶದಲ್ಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದರೆ ಮುಂದೆ ಏನಾಗಬಹುದು? ಅದನ್ನು ಯೋಚಿಸಿದರೆ ಕತ್ತಲೆ ಕವಿದಂತಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ.

    ಇದೊಂದು ಸಾಂಕೇತಿಕ ಘಟನೆಯಾಗಿದ್ದು ಭವಿಷ್ಯದ ಅಪಾಯವನ್ನು ಸೂಚಿಸುತ್ತಿದೆ. ಗೋಪಾಲಕೃಷ್ಣನ ( Udupi Gopalakrishna) ಸನ್ನಿಧಾನದಿಂದ ನಾನು ಈ ಕೃತ್ಯವನ್ನು ಖಂಡಿಸುತ್ತೇನೆ. ಸರ್ಕಾರ ವಿಶೇಷ ಪ್ರಯತ್ನವಹಿಸಿ ಅಪರಾಧಿಗಳನ್ನು ಶಿಕ್ಷಿಸಬೇಕು ಒತ್ತಾಯಿಸಿದ್ದಾರೆ.

  • ಸಂಕ್ರಾಂತಿ ಸುಗ್ಗಿ; ಹಸುಗಳಿಗೆ ಕಿಚ್ಚು ಹಾಯಿಸುವ ಸಂಭ್ರಮ

    ಸಂಕ್ರಾಂತಿ ಸುಗ್ಗಿ; ಹಸುಗಳಿಗೆ ಕಿಚ್ಚು ಹಾಯಿಸುವ ಸಂಭ್ರಮ

    ಕರ ಸಂಕ್ರಾಂತಿ (Makar Sankranti) ಎಂದೊಡನೆ ಥಟ್ಟನೆ ನೆನಪಾಗುವುದು ಹಸುಗಳಿಗೆ ಕಿಚ್ಚು ಹಾಯಿಸುವುದು. ಹಳೆ ಮೈಸೂರು ಭಾಗದಲ್ಲಿ ಈ ಪದ್ಧತಿ ಹೆಚ್ಚು ಜನಜನಿತ. ಮಾಗಿಯ ಚಳಿಯಲ್ಲಿ ಮುಂಜಾನೆಯೇ ಎದ್ದು ಹಸು-ಕುರಿ-ಮೇಕೆಗಳನ್ನು ಜನರು ಕಾಲುವೆ, ಕರೆ-ಕಟ್ಟೆ, ಅಥವಾ ನದಿಗಳ ಕಡೆಗೆ ಅಟ್ಟಿಕೊಂಡು ಹೋಗುತ್ತಾರೆ. ಅಲ್ಲಿ ಅವುಗಳ ಮೈ ಉಜ್ಜಿ ಚೆನ್ನಾಗಿ ಸ್ನಾನ ಮಾಡಿಸಿ ಮನೆಗೆ ತಂದು ಕಟ್ಟುತ್ತಾರೆ. ಬಣ್ಣಗಳಿಂದ ರಾಸುಗಳ ಮೈ-ಕೊಂಬುಗಳಲ್ಲಿ ಚಿತ್ತಾರ ಮೂಡಿಸುತ್ತಾರೆ. ಕೊಂಬುಗಳಿಗೆ ಬಲೂನು ಕಟ್ಟಿ ಸಿಂಗರಿಸುತ್ತಾರೆ. ಕೊನೆಗೆ ಹಸುಗಳನ್ನು ಕಿಚ್ಚು ಹಾಯಿಸುವುದಕ್ಕೆ ಅಣಿಗೊಳಿಸುತ್ತಾರೆ.

    ಇತ್ತ ಹೆಂಗಸರು ಮನೆಗಳನ್ನು ಸ್ವಚ್ಛಗೊಳಿಸಿ ದೇವರ ಕೋಣೆಗಳನ್ನು ಅಲಂಕರಿಸುತ್ತಾರೆ. ಹೊಸ ಬಟ್ಟೆ ಧರಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಜೊತೆಗೆ ಬಗೆಬಗೆಯ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ. ಮನೆಯ ಮಕ್ಕಳು ಸಹ ಉತ್ಸಾಹದಿಂದ ಸಿದ್ಧತೆ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?

    ಸಂಜೆಯಾಗುತ್ತಿದ್ದಂತೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ಊರಿನ ಸಿಂಗರಿಸಿದ ಹಸುಗಳನ್ನು ಒಂದು ಕಡೆ ಕಿಚ್ಚು ಹಾಯಿಸಲು ಕರೆತರಲಾಗುತ್ತದೆ. ನೆಲಕ್ಕೆ ಹುಲ್ಲನ್ನು ಹಾಕಿ ಬೆಂಕಿ ಹಚ್ಚಿ, ಹಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಬೆಚ್ಚುವ ಹಸುಗಳನ್ನು ಹುರಿದುಂಬಿಸುತ್ತಾ ಬೆಂಕಿಯಿಂದ ಜಿಗಿಸುವ ದೃಶ್ಯ ರಂಜನೀಯವಾಗಿರುತ್ತದೆ. ಆ ದೃಶ್ಯವನ್ನು ಕಣ್ತುಂಬಿಕೊಂಡು ಆನಂದಿಸಲು ಇಡೀ ಊರಿಗೆ ಊರೇ ನೆರೆದಿರುತ್ತದೆ.

    ಚಳಿಗಾಲ ಎಂದರೆ ಸೋಂಕು, ಕಾಯಿಲೆಗಳ ಕಾಲ. ಹಿಂದೆಲ್ಲ ಹಸುಗಳೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು. ಹಬ್ಬದ ಸಂದರ್ಭದಲ್ಲಿ ಅವುಗಳನ್ನು ಚೆನ್ನಾಗಿ ತೊಳೆದು ಮೈ ತುಂಬೆಲ್ಲಾ ಅರಿಸಿನ ಹಚ್ಚುವುದರಿಂದ, ಸೋಂಕಿಗೆ ತುತ್ತಾಗುವುದನ್ನು ತಡೆಯಬಹುದು. ಕಿಚ್ಚು ಹಾಯುವಾಗ ಹಸುಗಳ ಮೈಗೆ ಬೆಂಕಿಯ ಹವೆ ತಾಕಿ ಕ್ರಿಮಿಗಳು ನಾಶವಾಗುತ್ತವೆ. ಕಿಚ್ಚು ಹಾಯುವುದರಿಂದ ಚಳಿಯಲ್ಲಿ ಹಸುಗಳಿಗೆ ಬೆಚ್ಚನೆಯ ಅನುಭವವಾಗಿ ಮೈಕೊಡವಿ ನಿಲ್ಲಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?

    ಹಸುಗಳಿಗೆ ಕಿಚ್ಚು ಹಾಯಿಸಿದ ಬಳಿಕ ಬೆಂಕಿಯಿಂದಾದ ಬೂದಿಯನ್ನು ತೆಗೆದುಕೊಂಡು ಜನರು ಭಕ್ತಿ-ಭಾವದಿಂದ ಹಣೆಗೆ ತಿಲಕ ಇಟ್ಟುಕೊಳ್ಳುತ್ತಾರೆ. ಕಿಚ್ಚು ಹಾಯ್ದ ಗೋವುಗಳನ್ನು ಮನೆಗೆ ಕರೆತಂದು ಅವುಗಳ ಕಾಲು ತೊಳೆದು ಹೆಂಗಳೆಯರು ಗೋಪೂಜೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭಕ್ಷ್ಯ ಮತ್ತು ಬಾಳೆ ಹಣ್ಣನ್ನು ಮೊದಲು ಗೋವಿಗೆ ತಿನ್ನಿಸುತ್ತಾರೆ. ಗೋವು ತಿಂದು ಉಳಿಸಿದ್ದನ್ನು ಪ್ರಸಾದವೆಂದು ಭಕ್ತಿಯಿಂದ ಮನೆಮಂದಿ ಸೇವಿಸುತ್ತಾರೆ. ಕೊನೆಗೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಹಬ್ಬದೂಟ ಸವಿದು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಆನಂದಿಸುತ್ತಾರೆ.

    ಎಳ್ಳು-ಬೆಲ್ಲ: ಸಂಕ್ರಾಂತಿಯ ಸಾಂಪ್ರದಾಯಿಕ ತಿನಿಸು ಇದು. ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು’ ಅಂತಾರೆ. ಚಳಿಗಾಲದಲ್ಲಿ ಮನುಷ್ಯನ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಮೈ ಚರ್ಮ ಒಡೆಯುತ್ತದೆ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶವಿರುವ ಪದಾರ್ಥ ಸೇವನೆ ದೇಹಕ್ಕೆ ತುಂಬಾ ಸಹಕಾರಿ. ಈ ಹಿನ್ನೆಲೆಯಲ್ಲಿ ಎಳ್ಳು ದೇಹಕ್ಕೆ ಅಗತ್ಯ ಎಣ್ಣೆಯಂಶವನ್ನು ನೀಡುತ್ತದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಎಳ್ಳು-ಬೆಲ್ಲ

    Kichadi

    ಕಿಚಡಿ-ಕಾಯಾಲು ಭಕ್ಷ್ಯದ ಗಮ್ಮತ್ತು: ಸಂಕ್ರಾಂತಿ ಹಬ್ಬದಂದು ಹೆಚ್ಚು ಪ್ರಚಲಿತದಲ್ಲಿರುವ ಭಕ್ಷ್ಯವೆಂದರೆ ಅದು ಕಿಚಡಿ-ಕಾಯಾಲು. ಅರಿಸಿನ, ಮೆಣಸು, ಜೀರಿಗೆ ಬಳಸಿ ಕಿಚಡಿ ತಯಾರಿಸಲಾಗುತ್ತದೆ. ಅದಕ್ಕೆ ಹೊಂದುವ ಸಿಹಿಯಾದ ಕಾಯಾಲನ್ನು ತೆಂಗಿನಕಾಯಿ, ಬೆಲ್ಲ ಬಳಸಿ ಮಾಡಲಾಗುತ್ತದೆ. ಚಳಿಗಾಲದಲ್ಲಿ ಈ ಭಕ್ಷ್ಯವು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಅರಿಸಿನ ಮತ್ತು ಮೆಣಸು ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾದ ಪದಾರ್ಥಗಳು.

    ಅವರೆಕಾಳು ಪಲ್ಯ, ಸಾಂಬಾರ್: ಈ ಸೀಸನ್‌ನಲ್ಲಿ ಜನಪ್ರಿಯ ಬೆಳೆ ಎಂದರೆ ಅದು ಅವರೆಕಾಳು. ಚಳಿಗಾಲದಲ್ಲಿ ಅವರೆಕಾಳು ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಹಬ್ಬದ ದಿನ ಅವರೆಕಾಳು ಪಲ್ಯ, ಸಾಂಬಾರ್ ಮಾಡಿ ಜನ ಬಾಯಿ ಚಪ್ಪರಿಸಿ ಸವಿಯುವುದುಂಟು. ಇದನ್ನೂ ಓದಿ: Sankranti 2025: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸುವುದೇಕೆ? – ಈ ಕೌತುಕ ನೀವು ತಿಳಿಯಲೇಬೇಕು

  • ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamarajpet) ಹಸುವಿನ (Cow) ಕೆಚ್ಚಲು ಕೊಯ್ದಿದ್ದ ಪ್ರಕರಣಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸಂಸದ ಪಿ.ಸಿ ಮೋಹನ್‌ (P.C Mohan) ಅವರು ಹಸುವಿನ ಮಾಲೀಕನಿಗೆ 2 ಹಸು ಹಾಗೂ ಒಂದು ಕರುವನ್ನು ನೀಡಿದ್ದಾರೆ.

    ಹಸು ಮಾಲೀಕ ಕರ್ಣನಿಗೆ ಸಾಂತ್ವನ ಮಾಡಿದ ಸಂಸದರು. ನಾನು ವೈಯಕ್ತಿಕವಾಗಿ ಹಸುವನ್ನು ನೀಡಿದ್ದೇನೆ ಎಂದಿದ್ದಾರೆ.

    ವಾದ್ಯಮೇಳಗಳ ಮೂಲಕ ಹಸು ಹಾಗೂ ಕರುವನ್ನು ಕರ್ಣ ಅವರ ಮನೆಗೆ ತಲುಪಿಸಿದ್ದಾರೆ. ಹಸು ನೀಡುವ ಮುನ್ನ, ಹಸು ಹಾಗೂ ಕರುವಿಗೆ ಚಾಮರಾಜಪೇಟೆಯ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿಸಲಾಯಿತು. ಬಳಿಕ ಹಸುವನ್ನು ಕರ್ಣ ಅವರ ಸುಪರ್ದಿಗೆ ನೀಡಲಾಗಿದೆ.

    ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದ್ದರು.

  • ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ (Chamarajpet) ಹಸುಗಳ ಕೆಚ್ಚಲು (Cows Udder) ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ. ಇದನ್ನೂ ಓದಿ: ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್ 

    ಏನಿದು ಅಮಾನವೀಯ ಪ್ರಕರಣ?
    ಬೀದಿಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಇನ್ನೂ ಈ ಪ್ರಕರಣದಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಶುರುವಾಗಿದೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ಕೊಟ್ರು.. ಸ್ಥಳೀಯ ಸಂಸದ ಪಿಸಿ ಮೋಹನ್ ಸ್ಥಳ ಪರಿಶೀಲಿಸಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ವಿಪಕ್ಷ ನಾಯಕ ಅಶೋಕ್ ಕೂಡ ಸ್ಥಳಕ್ಕಾಗಮಿಸಿ, ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಇದು ಜಿಹಾದಿ ಮನಸ್ಥಿತಿ, ಹಾಲು ಕೊಡುವ ಕೆಚ್ಚಲು ಕೊಯ್ದಿದ್ದಾರೆ ಎಂದು ಕಿಡಿಕಾರಿದ್ರು.

    ಈ ವೇಳೆ ವೈಯಕ್ತಿಕವಾಗಿ 1 ಲಕ್ಷ ಪರಿಹಾರವನ್ನೂ ಘೋಷಿಸಿದ್ರು. ಇತ್ತ, ಹಿಂದೂ ಮುಖಂಡರೂ ಘಟನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಘಟನೆಯನ್ನು ಸಿಎಂ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ ಅಂದಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಜಮೀರ್, ಕಾಟನ್‌ಪೇಟೆ ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. 3 ಹೊಸ ಹಸುಗಳನ್ನು ನಾನೇ ಕೊಡಿಸ್ತೀನಿ ಅಂದಿದ್ದಾರೆ. ಇದನ್ನೂ ಓದಿ: ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

  • ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಬೆಂಗಳೂರು: ಪ್ರತಿಭಟನೆಗೆ ಹಸುಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. 6 ತಿಂಗಳ ಹಿಂದೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಎತ್ತಂಗಡಿಗೆ ಪ್ಲ್ಯಾನ್ ನಡೆದಿತ್ತು. ಪ್ರತಿಭಟನೆಯ ವೇಳೆ ಈ ಹಸುಗಳನ್ನು ಮಾಲೀಕರು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು.

    ಕೆಲ ದಿನಗಳ ಹಿಂದೆ ಹಸುವಿನ ಗುದಾದ್ವಾರಕ್ಕೆ ಪೈಪ್ ಇಟ್ಟು ವಿಕೃತಿ ಮೆರೆದಿದ್ದರು. ಈಗ ಶನಿವಾರ ಕೆಚ್ಚಲುಗೆ ಚಾಕು ಹಾಕಿ ಇರಿದಿದ್ದಾರೆ. ಪಶು ಆಸ್ಪತ್ರೆ ಉಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ವಿರೋಧಿಗಳು ಈ ಕೃತ್ಯ ಎಸಗಿರಬಹುದೆಂಬ ಅನುಮಾನವನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.

     

    ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಮಹಿಳಾ ನಿವಾಸಿಗಳು ದೂರಿಸಿದ್ದಾರೆ.

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಾಜ್ಯದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದರು.

     

    ಪ್ರತಿಭಟನೆ ಯಾಕೆ?
    ಚಾಮರಾಜಪೇಟೆ ಪಶು ಆಸ್ಪತ್ರೆಯು ಹಲವು ವರ್ಷಗಳಿಂದ ಪಶುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿತ್ತು. ಸರ್ಕಾರ ಈ ಆಸ್ಪತ್ರೆ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ನೀಡಿ ಆದೇಶ ಹೊರಡಿಸಿತ್ತು. ಜೊತೆಗೆ ಪಶು ಆಸ್ಪತ್ರೆಯನ್ನೂ ಸ್ಥಳಾಂತರ ಮಾಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಚಾಮರಾಜಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೇ ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್‌ ಚಾಮರಾಜಪೇಟೆ ಪಶು ಆಸ್ಪತ್ರೆಯನ್ನು ವಕ್ಫ್ ಬೋರ್ಡ್‌ಗೆ ನೀಡಲಾದ ಸರ್ಕಾರಿ ಆದೇಶಕ್ಕೆ ತಡೆಯನ್ನು ನೀಡಿದೆ. ಜೊತೆಗೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಸ್ಥಳಾಂತರ ಮಾಡುವುದನ್ನು ಕೂಡ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುಯಂತೆ ಹೈಕೊರ್ಟ್ ಸೂಚನೆ ನೀಡಿತ್ತು.