Tag: cow

  • ಮುಸ್ಲಿಂರು ಹಾಲು ನೀಡದ ಹಸುಗಳು, ಇವುಗಳಿಗೆ ಮೇವು ಹಾಕ್ಬೇಕಾ: ಬಿಜೆಪಿ ಶಾಸಕ

    ಮುಸ್ಲಿಂರು ಹಾಲು ನೀಡದ ಹಸುಗಳು, ಇವುಗಳಿಗೆ ಮೇವು ಹಾಕ್ಬೇಕಾ: ಬಿಜೆಪಿ ಶಾಸಕ

    ದಿಷ್‍ಪುರ್: ಮುಸ್ಲಿಂ ಸಮಾಜದವರು ನಮ್ಮ ಬಿಜೆಪಿ ಪಕ್ಷಕ್ಕೆ ವೋಟ್ ಹಾಕುವುದಿಲ್ಲ. ಅವರು ನಮಗೆ ಹಾಲು ನೀಡದ ಹಸುಗಳು. ಅವರಿಗೆ ನಾವು ಏಕೆ ಮೇವು ನೀಡಬೇಕು ಎಂದು ಅಸ್ಸಾಂನ ದಿಬ್ರುಘರ್ ಕ್ಷೇತ್ರದ ಎಂಎಲ್‍ಎ ಪ್ರಶಾಂತ್ ಫೂಕಾನ್ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

    ಫೂಕಾನ್ ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಶೇ.90 ರಷ್ಟು ಹಿಂದೂಗಳು ನಮ್ಮ ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತಾರೆ ಅದರೆ ಮುಸ್ಲಿಂ ಸಮಾಜದ ಶೇ.90 ರಷ್ಟು ಜನ ನಮಗೆ ವೋಟ್ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡುತ್ತಾರೆ. ಒಂದು ಹಸು ನಮಗೆ ಹಾಲನ್ನು ನೀಡದೆ ಇದ್ದರೆ, ಅದಕ್ಕೆ ನಾವು ಮೇವು ಏಕೆ ಹಾಕಬೇಕು ಎಂದು ಹೇಳುವ ಮೂಲಕ ಮುಸ್ಲಿಂ ಸಮಾಜದವರನ್ನು ಹಸುವಿಗೆ ಹೋಲಿಸಿದ್ದರು.

    ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕ ದೇಬಬ್ರತಾ ಸೈಕಿಯ ಅವರು ಅಸ್ಸಾಂನ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು ಮುಸ್ಲಿಂರನ್ನು ಹಸುಗಳಿಗೆ ಹೋಲಿಸಿದ ಪ್ರಶಾಂತ್ ಫೂಕಾನ್ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹ ಮಾಡಿದ್ದಾರೆ. ಅಸ್ಸಾಂ ಮುಸ್ಲಿಂರು ನಮಗೆ ವೋಟ್ ಮಾಡುವುದಿಲ್ಲ ಅದಕ್ಕಾಗಿ ನಮ್ಮ ಸರ್ಕಾರದಲ್ಲಿ ಮುಸ್ಲಿಂ ಸಮಾಜದ ಕಲ್ಯಾಣಕಾಗಿ ನಾವು ಏನೂ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎಂದು ಸೈಕಿಯ ಆರೋಪ ಮಾಡಿದ್ದಾರೆ.

    ಪ್ರಶಾಂತ್ ಫೂಕಾನ್ ಅವರು ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದು, ನಾನು ಶೇ.90 ರಷ್ಟು ಮುಸ್ಲಿಂರು ನಮಗೆ ವೋಟ್ ಹಾಗುವುದಿಲ್ಲ ಎಂಬ ವಿಚಾರಕ್ಕೆ ಹಾಲು ನೀಡದ ಹಸುಗಳಿಕೆ ಏಕೆ ನಾವು ಮೇವು ಹಾಕಬೇಕು ಎಂದು ಅಸ್ಸಾಂ ಗಾದೆ ಹೇಳಿದೆ. ಅದನ್ನು ಬಿಟ್ಟರೆ ನಾನು ಮುಸ್ಲಿಂರನ್ನು ಹಸುವಿಗೆ ಹೋಲಿಸಿಲ್ಲ ಎಂದು ಹೇಳಿದ್ದಾರೆ.

    ಅಸ್ಸಾಂ ರಾಜ್ಯದ ಬಿಜೆಪಿ ಉಪಾಧ್ಯಕ್ಷರಾದ ತೌಫಿಕ್ರೆ ರಹಮಾನ್ ಅವರು ಈ ವಿಚಾರದ ಬಗ್ಗೆ ಮಾತನಾಡಿ ಫೂಕನ್ ಅವರ ಹೇಳಿಕೆಗೆ ನಮ್ಮ ಪಕ್ಷ ಇನ್ನೂ ಯಾವುದೇ ರೀತಿಯ ಅಧಿಕೃತವಾದ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.

  • ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್  ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್ ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್‍ಗೆ ಹಸುಹಾಲು ಕರೆಯುವ ಟ್ರೈನಿಂಗ್  ಕೊಡುವುದರಲ್ಲಿ ಫುಲ್ ಬ್ಯುಸಿಯಗಿದ್ದಾರೆ. ಮೈಸೂರಿನ ಫಾರ್ಮ್‍ಹೌಸ್‍ನಲ್ಲಿ ದರ್ಶನ್ ಮತ್ತು ವಿನೀಷ್ ಹಸುಹಾಲು ಕರೆಯುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

    ಮಂಡ್ಯ ಎಲೆಕ್ಷನ್ ಪ್ರಚಾರದಲ್ಲಿ ಸಿಕ್ಕಪಟ್ಟೆ ಬ್ಯುಸಿಯಾಗಿದ್ದ ದಚ್ಚು ಈಗ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಡಿ ಬಾಸ್‍ನ ಹೊಸ ಸಿನಿಮಾ ರಾಬರ್ಟ್ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಗ್ಯಾಪ್‍ನಲ್ಲಿ ಮಗನ ಜೊತೆ ದಚ್ಚು ತಮ್ಮ ಸಮಯ ಕಳೆಯುತ್ತಿದ್ದಾರೆ. ಅಪ್ಪನ ರೀತಿಯೇ ಮಗ ವಿನೀಶ್ ಕೂಡ ಪ್ರಾಣಿ ಪ್ರೇಮಿ. ಆದ್ದರಿಂದ ಮಗನಿಗೆ ದರ್ಶನ್ ಹಸುವಿನ ಹಾಲು ಹೇಗೆ ಕರೆಯಬೇಕು ಎನ್ನುವುದನ್ನು ಕಲಿಸುತ್ತಿದ್ದರೆ, ಇತ್ತ ಮಗ ಕೂಡ ಆಸಕ್ತಿಯೊಂದಿಗೆ ತಂದೆಯ ಜೊತೆ ಟ್ರೈನಿಂಗ್ ಪಡೆಯುತ್ತಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಪ್ರಚಾರದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ದರ್ಶನ್ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ದಚ್ಚು ಸ್ವಲ್ಪವು ಮುಜುಗರ ಮಾಡಿಕೊಳ್ಳದೇ ಜನರ ನಡುವೆ ಖುಷಿಯಿಂದ ಹಸುವಿನ ಹಾಲು ಕರೆದು ನಾನು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದರು. ಈ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಈ ಹಿಂದೆ ವಿನೀಶ್ ಅವರು ಸಾಕುತ್ತಿರುವ ಕುದುರೆ ಮೇಲೆ ಸವಾರಿ ಮಾಡಿದ ಫೋಟೋ ಸಖತ್ ವೈರಲ್ ಆಗಿತ್ತು. ವಿನೀಶ್ ಕುದುರೆ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು.

  • ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಭಕ್ತರಂತೆ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದ ಹಸು

    ಶಿವಮೊಗ್ಗ: ಭಕ್ತರಂತೆ ಒಂದು ಹಸು ದೇವಾಲಯಕ್ಕೆ ಬಂದು ಗಂಟೆ ಬಾರಿಸಿ ಹೋಗಿರುವ ಕೌತುಕಮಯ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಡಿ.ಬಿ ಹಳ್ಳಿಯಲ್ಲಿ ನಡೆದಿದೆ.

    ಇಲ್ಲಿರುವ ವೀರಭದ್ರಸ್ವಾಮಿ ಹಾಗೂ ಮುಗ್ದ ಸಂಮೇಶ್ವರ ಸ್ವಾಮೀಜಿಗಳ ಗದ್ದಿಗೆ ಇರುವ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಗ್ರಾಮದ ಮಂಜಪ್ಪ ಎಂಬವರಿಗೆ ಸೇರಿದ ಈ ಹಸು ಗಂಟೆ ಬಾರಿಸಿದ ವಿಷಯ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಆದಾಗ ಶರಣ ದೊಂಬರ ಚನ್ನಮ್ಮ ಈ ಊರಿಗೆ ಬಂದು ನೆಲೆಸಿದರು ಎನ್ನಲಾಗಿದೆ. ಈ ಕಾರಣದಿಂದ ಗ್ರಾಮಕ್ಕೆ ದೊಂಬರ ಭೈರನಹಳ್ಳಿ ಎಂದು ಹೆಸರಿಡಲಾಗಿದೆ. ಆಗಿನ ಕಾಲದಿಂದಲೂ ಈ ದೇವಾಲಯದಲ್ಲಿ ಪವಾಡಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಅಪ್ಪಣೆ ಕೇಳುವ ವಿಷಯದಲ್ಲಿ ಈ ದೇವಾಲಯ ಖ್ಯಾತಿ ಪಡೆದಿದೆ. ಬೇಕು ಬೇಡಗಳನ್ನು ಎಡ-ಬಲ ಹೂ ಕೊಟ್ಟು ಹೇಳುವ ಈ ದೇವರು ಗ್ರಾಮಸ್ಥರ ಅಚ್ಚುಮೆಚ್ಚು. ಈಗ ಹಸು ಗಂಟೆ ಬಾರಿಸಿರುವುದು ದೇವಾಲಯದ ಬಗ್ಗೆ ಇದ್ದ ಭಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಮಾಲೀಕತ್ವ ವಿವಾದ – ನ್ಯಾಯಾಲಯಕ್ಕೆ ಹಾಜರಾದ ಆಕಳು, ಕರು

    ಮಾಲೀಕತ್ವ ವಿವಾದ – ನ್ಯಾಯಾಲಯಕ್ಕೆ ಹಾಜರಾದ ಆಕಳು, ಕರು

    ಜೈಪುರ: ಮಾಲೀಕತ್ವದ ವಿಚಾರವಾಗಿ ಹಸು ಹಾಗೂ ಕರುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪ್ರಸಂಗವು ರಾಜಸ್ತಾನದ ಜೋಧ್‍ಪುರದಲ್ಲಿ ನಡೆದಿದೆ.

    ಏನಿದು ಪ್ರಕರಣ?:
    ಹಸು ಹಾಗೂ ಕರುವಿನ ಮಾಲೀಕತ್ವದ ವಿಚಾರವಾಗಿ ಪೊಲೀಸ್ ಪೇದೆ ಓಂ ಪ್ರಕಾಶ್ ಹಾಗೂ ಶಿಕ್ಷಕ ಶ್ಯಾಂ ಸಿಂಗ್ ಎಂಬವರ ನಡುವೆ ಜಗಳವಾಗಿತ್ತು. ಈ ಸಂಬಂಧ ಜೋಧ್‍ಪುರ್ ನಿಂದ 9 ಕಿ.ಮೀ. ದೂರದಲ್ಲಿರುವ ಮಾಂಡೋರ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 2018ರಲ್ಲಿ ದೂರು ದಾಖಲಾಗಿತ್ತು.

    ವಿಚಾರಣೆ ಹೇಗಿತ್ತು?:
    ನ್ಯಾಯಾಲಯದ ಆವರಣಕ್ಕೆ ಹಸು ಹಾಗೂ ಕರುವನ್ನು ಕರೆತಂದಾಗ ಅಲ್ಲಿಗೆ ನ್ಯಾಯಾಧೀಶರು ಆಗಮಿಸಿದರು. ಬಳಿಕ ದೂರುದಾರ ನೀಡಿದ್ದ ಇಬ್ಬರನ್ನೂ ಹಸು ಹಾಗೂ ಕರುವಿನ ಬಳಿ ನಿಲ್ಲುವಂತೆ ಸೂಚಿಸಿದರು. ಹಸು ಹಾಗೂ ಕರುವು ಯಾರ ಮೇಲೆ ಒಲವು ತೋರಿಸುತ್ತಿದೆ ಎನ್ನುವುದನ್ನು ಗಮನಿಸಲಾಯಿತು. ಈ ಮೂಲಕ ಮಾಲೀಕರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು.

    ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮದನ್ ಚೌಧರಿ ಅವರು, ಹಸು ಹಾಗೂ ದೂರುದಾರರ ನಡುವಿನ ಬಾಂಧವ್ಯ ಗಮನಿಸಿದರು. ಬಳಿಕ ದೂರುದಾರರ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದಾರೆ.

  • ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ 4 ಹಸುಗಳು ಬಲಿ

    ಚಿಕ್ಕಮಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ 4.30ರ ಸಮಯಕ್ಕೆ ಮೇವಿಗೆಂದು ಬಂದ ಹಸುಗಳು ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿವೆ. ಈ 4 ಹಸುಗಳು ಕೂಡ ಗಂಗಮನಕ್ಕಿಯ ಸೀತಮ್ಮ ಎಂಬವರಿಗೆ ಸೇರಿದ್ದಾಗಿದ್ದು, ಹಾಲು ಕೊಡುತ್ತಿದ್ದವು.

    ಸೀತಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಏಕಾಏಕಿ ನಿಂತ ಜಾಗದಲ್ಲೇ ನಾಲ್ಕು ಜಾನುವಾರುಗಳು ಸಾವನ್ನಪ್ಪಿರೋದ್ರಿಂದ, ಸೀತಮ್ಮ ಕುಟುಂಬ ಭವಿಷ್ಯದ ಚಿಂತೆಯಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

    ಹಸುಗಳು ಮೇವಿಗೆ ಹೋದ ಪ್ರದೇಶ ಸಾರ್ವಜನಿಕರು ಹಾಗೂ ಮಕ್ಕಳು ಓಡಾಡುವ ಜಾಗವಾಗಿದೆ. ಹೀಗಾಗಿ ಸ್ಥಳೀಯರು ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ನೀರು ಕುಡಿಯಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಹಸು

    ನೀರು ಕುಡಿಯಲು ಹೋಗಿ ಆಯತಪ್ಪಿ ಬಾವಿಗೆ ಬಿದ್ದ ಹಸು

    ಚಿಕ್ಕಮಗಳೂರು: ಮೇಯುತ್ತಾ ಬಂದ ಹಸುವೊಂದು ನೀರು ಕುಡಿಯಲು ಹೋಗಿ ಆಯತಪ್ಪಿ ಗ್ರಾಮ ಪಂಚಾಯ್ತಿ ಹಿಂಭಾಗವಿರುವ ಬಾವಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಸ್ಗಲ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿ ಹಿಂಭಾಗದಿಂದ ಮೇಯುತ್ತಾ ಬಂದು ಬಿಸಿಲಿನ ಧಗೆಗೆ ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಆದರೆ ಹಸು ಬಾವಿಗೆ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡರಿಂದ ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಹಸುವನ್ನು ಮೇಲೆತ್ತಿದ್ದಾರೆ.

    ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಬಾವಿಗೆ ಇಳಿದ ಸ್ಥಳೀಯರು ಹಸುವಿನ ದೇಹಕ್ಕೆ ಯಾವುದೇ ಗಾಯವಾಗದಂತ ಬೆಲ್ಟ್ ರೀತಿಯ ಸಾಮಾಗ್ರಿ ಹಾಗೂ ಹಗ್ಗ ಕಟ್ಟಿ ಮೇಲೆತ್ತಿದ್ದಾರೆ. ಬಾವಿಯಲ್ಲೂ ಹೆಚ್ಚಾಗಿ ನೀರು ಇಲ್ಲದಿರೋದ್ರಿಂದ ಹಸುವನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಲಭವಾಗಿ ಮೇಲೆತ್ತಿದ್ದಾರೆ.

    ಸದ್ಯ ಬಾವಿಯಲ್ಲಿ ನೀರು ಕಡಿಮೆ ಇದ್ದಿದ್ರಿಂದ ಹಸುವಿನ ಜೀವಕ್ಕೂ ಯಾವುದೇ ಅಪಾಯ ಸಂಭವಿಸಿಲ್ಲ.

  • ನೀರು ಕುಡಿದು ನಲ್ಲಿ ಬಂದ್ ಮಾಡುವ ಹಸು-ವಿಡಿಯೋ ನೋಡಿ

    ನೀರು ಕುಡಿದು ನಲ್ಲಿ ಬಂದ್ ಮಾಡುವ ಹಸು-ವಿಡಿಯೋ ನೋಡಿ

    ಬೀದರ್: ಹಸುವೊಂದು ನೀರು ಕುಡಿದು ನಲ್ಲಿಯನ್ನು ಬಂದ್ ಮಾಡಿದೆ. ನಗರದ ಉಸ್ಮಾನಗಂಜ್ ಮಾರುಕಟ್ಟೆಯಲ್ಲಿ ನೀರು ಕುಡಿದ ಹಸು ಕೊನೆಗೆ ನಲ್ಲಿ ಬಂದ್ ಮಾಡುವ ಮೂಲಕ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

    ನಮ್ಮ ಅಂಗಡಿಯ ಎದುರಿನ ನೀರಿನ ತೊಟ್ಟಿಯ ನಲ್ಲಿಯನ್ನು ತಿರುಗಿಸಿ ಹಸು ನೀರು ಕುಡಿದು ಹೋಗುತ್ತದೆ. ಕಳೆದ ಕೆಲವು ದಿನಗಳಿಂದ ಈ ಹಸು ಮಾತ್ರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೀರು ಕುಡಿದು ಹೋಗುತ್ತದೆ. ಮೂಕಪ್ರಾಣಿಯಾದರೂ ನೀರನ್ನು ವ್ಯರ್ಥ ಮಾಡುತ್ತಿಲ್ಲ. ಫೆಬ್ರವರಿಯಿಂದಲೇ ನಮ್ಮಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ನೀರನ್ನು ಉಳಿಸಿ ಎಂದು ಹಸು ಸಮಾಜಕ್ಕೆ ಹೇಳುತ್ತಿದೆ. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡೋದನ್ನು ನಾವೆಲ್ಲರೂ ನಿಲ್ಲಿಸಬೇಕಿದೆ ಎಂದು ಸ್ಥಳೀಯ ನಿವಾಸಿ ಸಂತೋಷ್ ಕುಮಾರ್ ಹೇಳುತ್ತಾರೆ.

    ಬೇಸಿಗೆ ಆರಂಭವಾಗುತ್ತಿದ್ದಂತೆ ಬೀದರ್ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಆರಂಭವಾಗುತ್ತದೆ. ಅಂತಹದರಲ್ಲಿ ಕೆಲವರು ನೀರನ್ನು ಮಾತ್ರ ಪೋಲು ಮಾಡೋದನ್ನು ಮಾತ್ರ ನಿಲ್ಲಿಸಲ್ಲ. ಮೂಕ ಪ್ರಾಣಿಯೊಂದು ನಲ್ಲಿಯನ್ನು ಬಂದ್ ಮಾಡುವ ಮೂಲಕ ನೀರನ್ನು ವ್ಯರ್ಥ ಮಾಡದ್ರಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಈ ಕರುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು ಮುಗಿಬಿದ್ದಿದ್ದರು.

    ಬೆಂಗಳೂರಿನ ಮಾರತಹಳ್ಳಿ ಬಳಿಯ ಬಾಲಾಜಿ ಲೇಔಟ್ ನಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಕಾಮನ್ ಆಗಿದ್ದರೂ ಈ ದಟ್ಟ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಹಸುವೊಂದು ಅವಳಿ ಗಂಡು ಕರುಗಳಿಗೆ ಜನ್ಮ ಕೊಟ್ಟಿದ್ದು ಸೆಲ್ಫಿ ಕ್ರೇಜ್‍ಗೆ ಕಾರಣವಾಗಿದೆ.

    ವಿಶ್ವನಾಥ್ ರೆಡ್ಡಿ ಎಂಬವರು ಕಳೆದ 20 ವರ್ಷಗಳಿಂದ ಹಸು ಸಾಗಣಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಹಸು ಅವಳಿ ಕರುಗಳಿಗೆ ಜನ್ಮ ಕೊಟ್ಟಿದೆ. ಹೀಗಾಗಿ ತಮಗೂ ಇದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಸಂಡೇ ಸ್ಪೆಷಲ್ ಎಂಬಂತೆ ಅವಳಿ ಕರುಗಳು ಪುಟಾಣಿಗಳ ರಜೆ ಮಜಾವನ್ನು ಮತ್ತಷ್ಟು ಕಲರ್ ಫುಲ್ ಗೊಳಿಸಿದವು.

    ಮಕ್ಕಳು ಅವಳಿ ಕರುವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಚೆನ್ನೈ: ತೆಲಂಗಾಣದ ನಾಗಪಟ್ಟಿಣಂ ನಲ್ಲಿ ಒಂದು ಹಸು ಎರಡು ದೇಹ, ಎರಡು ಬಾಲ ಹಾಗೂ ಏಳು ಕಾಲುಗಳನ್ನು ಹೊಂದಿರುವ ಅಸಾಮಾನ್ಯ ಕರುವಿಗೆ ಜನ್ಮ ನೀಡಿದೆ.

    ಭಾನುವಾರ ನಾಗಪಟ್ಟನಂ ಬಳಿಕಯ ವೆಟ್ಟೈಕಾರಣಿರುಪ್ಪು ಗ್ರಾಮದಲ್ಲಿ ಈ ರೀತಿ ಕರು ಜನಿಸಿದೆ. ರೈತ ಜೆಗನ್ ಎಂಬವರಿಗೆ ಸೇರಿದ್ದ ಹಸು ಏಳು ಕಾಲು, ಎರಡು ದೇಹ ಹಾಗೂ ಎರಡು ಬಾಲ ಇರುವ ಕರುವಿಗೆ ಜನ್ಮ ಕೊಟ್ಟಿದೆ.

    ನಾಗಪಟ್ಟಣಂ ಜಿಲ್ಲೆಯ ಪಶುವೈದ್ಯ ವೈದ್ಯರ ಸಹಾಯದಿಂದ ಕರುವಿಗೆ ಸೂಕ್ತವಾದ ಶಸ್ತ್ರ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈತ ತಿಳಿಸಿದ್ದಾರೆ. ಅಸಾಮಾನ್ಯ ಕರು ಜನಿಸಿರುವ ಬಗ್ಗೆ ತಿಳಿದು ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಅಪಾರ ಸಂಖ್ಯೆಯ ಜನರು ಬಂದು ಕರುವನ್ನು ನೋಡುತ್ತಿದ್ದಾರೆ.

    ಇತ್ತೀಚಿನ ‘ಗಜ’ ಚಂಡಮಾರುತದ ಸಮಯದಲ್ಲಿ ಪೀಡಿತ ಗ್ರಾಮಗಳಲ್ಲಿ ವೆಟ್ಟಿಕರಣಿರುಪ್ಪು ಕರಾವಳಿ ಹಳ್ಳಿಯು ಒಂದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕರು ಅಸುನೀಗಿದ್ದಕ್ಕೆ ರೊಚ್ಚಿಗೆದ್ದು ರಸ್ತೆಯೆಲ್ಲಾ ಓಡಾಡಿದ ಹಸು

    ಕರು ಅಸುನೀಗಿದ್ದಕ್ಕೆ ರೊಚ್ಚಿಗೆದ್ದು ರಸ್ತೆಯೆಲ್ಲಾ ಓಡಾಡಿದ ಹಸು

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹಿರೇ ಪೇಟೆಯಲ್ಲಿ ಆಕಳ ಕರುವೊಂದು ಅಸ್ವಸ್ಥಗೊಂಡು ರಸ್ತೆಯಲ್ಲಿಯೇ ಅಸುನಿಗಿತ್ತು. ಕರುಳಿನ ಕುಡಿಯನ್ನು ಕಳೆದುಕೊಂಡ ಹಸುವಿನ ಮೂಕರೋಧನೆ ನೆರೆದಿದ್ದವರ ಕರುಳು ಹಿಂಡುವಂತೆ ಮಾಡಿತ್ತು.

    ಕರುಳ ಕುಡಿಯನ್ನು ಕಳೆದುಕೊಂಡ ಹಸು ರೊಚ್ಚಿಗೆದ್ದು ರಸ್ತೆ ತುಂಬೆಲ್ಲಾ ಓಡಾಡಿ ಜನರಲ್ಲಿ ಕೆಲ ಸಮಯ ಆತಂಕಕ್ಕೀಡು ಮಾಡಿತ್ತು. ತನ್ನ ಕರುವನ್ನು ಯಾರೋ ಏನೋ ಮಾಡಿದ್ದಾರೆ ಎನ್ನುವ ಸಿಟ್ಟಿನಿಂದ ಆಕಳು ಜನರ ಮೇಲೆ ಎರಗಿತ್ತು. ಹಸುವಿನ ಈ ರೋಧನೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಸ್ತೆಯಲ್ಲಿ ನಡೆದು ಬರುತ್ತಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶೇರೆವಾಡ ಗ್ರಾಮದ ಓರ್ವ ಯುವಕನನ್ನು ಆಕಳು ರಸ್ತೆ ಮೇಲೆ ಕೆಡವಿ ಥಳಿಸಿತು. ಕೂಡಲೇ ಅಲ್ಲಿದ್ದ ಜನರು ಹರಸಾಹಸಪಟ್ಟು ಆತನನ್ನು ಬದುಕಿಸಿದ್ದಾರೆ. ನಂತರ ಸ್ಥಳೀಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ವಿಷಯ ಮುಟ್ಟಿಸಿದರು.

    ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಸಿಬ್ಬಂದಿ ಸಾವನ್ನಪ್ಪಿದ್ದ ಕರುವನ್ನು ತೆಗೆದುಕೊಂಡು ಹೋದರು. ಆದರೂ ಸಹ ಕರು ಮೃತಪಟ್ಟ ಸ್ಥಳದಲ್ಲಿಯೇ ಹಸು ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ತಿರುಗಾಡುತ್ತಿದ್ದನ್ನು ನೋಡಿದ ಜನರ ಕಣ್ಣಾಲಿಗಳು ಅವರಿಗರಿವಿಲ್ಲದಂತೆ ಒದ್ದೆಯಾಗಿದ್ದವು.

    https://www.youtube.com/watch?v=BnJTXkI_mnA&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv