Tag: cow

  • ಕಾಡು ಪ್ರಾಣಿಯಿಂದ ಹಸು ಸತ್ತರೆ 10 ಸಾವಿರ ಪರಿಹಾರ – ಅರಣ್ಯ ಸಚಿವ ಆನಂದ್ ಸಿಂಗ್

    ಕಾಡು ಪ್ರಾಣಿಯಿಂದ ಹಸು ಸತ್ತರೆ 10 ಸಾವಿರ ಪರಿಹಾರ – ಅರಣ್ಯ ಸಚಿವ ಆನಂದ್ ಸಿಂಗ್

    – ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳ

    ಚಾಮರಾಜನಗರ: ಕೊರೊನಾದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಬಂಡೀಪುರದ ಕುಂದಕೆರೆ ವಲಯದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಅವರು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೆ. ಅಷ್ಟರಲ್ಲೇ ಕೊರೊನಾ ಬಂತು. ಹಾಗಾಗಿ ಅದು ನೆನಗುದಿಗೆ ಬಿದ್ದಿದೆ ಎಂದರು.

    ಬಂಡೀಪುರದ 40 ಕಿಲೋ ಮೀಟರ್ ಸೇರಿದಂತೆ ರಾಜ್ಯದ ಅರಣ್ಯಗಳ ಅಂಚಿನಲ್ಲಿ 650 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ ಹೊಂದಲಾಗಿದೆ. ಇದಕ್ಕೆ 100 ಕೋಟಿ ರೂಪಾಯಿ ಅನುದಾನವು ಸಹ ಇದೆ. ಕುಂದಕೆರೆ ವಲಯದಲ್ಲಿ ಹಲವಾರು ಜಾನುವಾರುಗಳನ್ನು ಕೊಂದು ಹಾಕಿರುವ ಹುಲಿ ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಹುಲಿ ಸೆರೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

    ರಾಜ್ಯದಲ್ಲಿ ಸಾಕು ಪ್ರಾಣಿಗಳಲ್ಲಾಗಲಿ, ಕಾಡು ಪ್ರಾಣಿಗಳಲ್ಲಾಗಲಿ ಕೊರೊನಾ ಕಂಡು ಬಂದಿಲ್ಲ. ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ತಗುಲದಂತೆ ಮುಂಜಾಗ್ರತೆ ವಹಿಸಲಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಹಸು ಸತ್ತರೆ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದು ಸಾಲುವುದಿಲ್ಲ ಎಂಬ ಹಿನ್ನೆಲೆಯಲ್ಲಿ ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

  • ಗೋ ಶಾಲೆಗೂ ತಟ್ಟಿದ ಕೊರೊನಾ ಬಿಸಿ- ಕೃಷ್ಣಮಠದ ದನಗಳು ಹಟ್ಟಿಯೊಳಗೆ ಲಾಕ್!

    ಗೋ ಶಾಲೆಗೂ ತಟ್ಟಿದ ಕೊರೊನಾ ಬಿಸಿ- ಕೃಷ್ಣಮಠದ ದನಗಳು ಹಟ್ಟಿಯೊಳಗೆ ಲಾಕ್!

    ಉಡುಪಿ: ಲಾಕ್‍ಡೌನ್ ಎಫೆಕ್ಟ್ ಜನಗಳಿಗೆ ಮಾತ್ರ ಅಲ್ಲ ಮೂಕ ಪ್ರಾಣಿಗಳ ಮೇಲೂ ತಟ್ಟಿದೆ. ಅಗತ್ಯ ವಸ್ತುಗಳನ್ನು ತರಲು ಜನಗಳನ್ನು ಕೆಲಹೊತ್ತು ಹೊರಗೆ ಕಳುಹಿಸಲಾಗುತ್ತಿದೆ. ಆದರೆ ಕೃಷ್ಣ ಮಠದ ಗೋವುಗಳಿಗೆ ಕಳೆದ ಹದಿನಾಲ್ಕು ದಿನಗಳಿಂದ ದಿಗ್ಬಂಧನ ಹಾಕಲಾಗಿದೆ.

    ಉಡುಪಿ ಕೃಷ್ಣ ಮಠದ ಗೋಶಾಲೆಯ ಗೋವುಗಳನ್ನು ಹಟ್ಟಿಯಿಂದ ಹೊರಬಿಟ್ಟು ಹದಿನಾಲ್ಕು ದಿನಗ ಕಳೆದಿದೆ. ಬೆಳಗ್ಗೆ ಸ್ನಾನ ಮುಗಿಸಿ ಒಂದು ರೌಂಡ್ ವಾಕಿಂಗ್ ಮಾಡಿ ಮೇವು ಮೇಯುತ್ತಿದ್ದ ದನಗಳು ಕೊಟ್ಟಿಗೆಯಲ್ಲೇ ಒಣ ಹುಲ್ಲು ಹಿಂಡಿ ತಿಂದು ವ್ಯಥೆಪಡ್ತಾ ಇವೆ. ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲೇ ಇರಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಪ್ರಾಣಿಗಳಿಗೆ ಸಮಸ್ಯೆಯಾಗಬಾರದು ಎಂದು ಮಠ ಕೊಟ್ಟಿಗೆ ಕ್ವಾರಂಟೈನ್ ನಿರ್ಧಾರ ತೆಗೆದುಕೊಂಡಿದೆ.

    ಉಡುಪಿ ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಸುಮಾರು ಎಂಬತ್ತು ಹಸುಗಳನ್ನು ಮಠದಲ್ಲಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‍ನ ಹಾವಳಿ ಶುರುವಾದ ಕೂಡಲೇ ಮಠದ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಹಸುಗಳನ್ನು ಮೇವಿಗೆ ಬಿಟ್ಟರೆ ವೈರಸ್ ಬಾಧಿಸಬಹುದು. ಮೂಕ ಪ್ರಾಣಿಗಳಿಗೆ ಕಷ್ಟವಾಗಬಹುದು ಎಂಬ ಉದ್ದೇಶದಿಂದ ಮಠದ ಒಳಗೆ ಗೋಶಾಲೆಯಲ್ಲೇ ಕಟ್ಟಿಹಾಕಲು ನಿರ್ಧಾರ ಮಾಡಿದ್ದಾರೆ.

    ಪ್ರತಿದಿನ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಬಯಲಿಗೆ ಬಿಡುತ್ತಿದ್ದೆವು. ಹನ್ನೆರಡು ಗಂಟೆಗೆ ಹಸುಗಳು ವಾಪಸ್ ಗೋಶಾಲೆಗೆ ಬರುತ್ತಿತ್ತು. ಇದೀಗ ದಿನಪೂರ್ತಿ ಹಟ್ಟಿಯ ಒಳಗೆ ಇರುವುದರಿಂದ ಅವುಗಳಿಗೆ ಬೇಸರವಾಗಿರಬೇಕು. ಈ ಸಮಸ್ಯೆ ಬೇಗ ಪರಿಹಾರವಾದರೆ ಹಸುಗಳನ್ನು ಬಯಲಿಗೆ ಬಿಡಬಹುದಿತ್ತು ಎಂದು ಗೋಶಾಲೆ ಸಿಬ್ಬಂದಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತ ಮಾಹಿತಿ ನೀಡಿದರು.

    ಉಡುಪಿ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾತನಾಡಿ, ಹಸುಗಳು ಬಯಲಿಗೆ ಹೋದರೆ ಅಲ್ಲಿ ಆಹಾರ ಅವುಗಳಿಗೆ ಸಿಗುತ್ತಿರಲಿಲ್ಲ. ಪರ್ಯಾಯ ಅದಮಾರು ಮಠ ಹಸುಗಳಿಗೆ ಪೌಷ್ಟಿಕಾಂಶದ ಆಹಾರಗಳನ್ನು ಕೊಡುತ್ತಿದೆ. ದಿನಕ್ಕೆ ಎಂಟು ಹತ್ತು ಹಸುಗಳನ್ನು ಮಠದ ಒಳಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗುವುದು. ಪರ್ಯಾಯ ಸ್ವಾಮೀಜಿಗಳು ಮಠದ ಸಂಪೂರ್ಣ ಒಳಗೆ ಹಸುಗಳನ್ನು ಬಿಡುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಶಿಫ್ಟ್ ಆಧಾರದಲ್ಲಿ ಹಸುಗಳಿಗೆ ವಾಕಿಂಗ್ ವ್ಯವಸ್ಥೆ ಮಾಡುತ್ತೇವೆ ಎಂದರು.

    ಕೃಷ್ಣಮಠದ ಗೋಶಾಲೆಯಲ್ಲಿ 80 ಹಸುಗಳಿವೆ. ಮೂರು ಹೊತ್ತು ಒಣ ಮೇವು, ಹಿಂಡಿ, ಬೂಸಾ ಕೊಡಲಾಗುತ್ತಿದೆ. ಕರುಗಳನ್ನು ಗೋಶಾಲೆಯ ಒಳಗಡೆ ಅಡ್ಡಾಡಲು ವ್ಯವಸ್ಥೆ ಮಾಡಲಾಗಿದೆ.

  • ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ಮಂಡ್ಯ: ಕಾಡಿನಿಂದ ಬಂದ ಒಂಟಿ ಸಲಗದ ದಾಳಿಗೆ ಎರಡು ಹಸುಗಳು ಹಾಗೂ ಒಂದು ಎಮ್ಮೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿರಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಭೀಮನಕಿಂಡಿ ಬೆಟ್ಟದ ಕಾಡಿನಿಂದ ಇಂದು ಬೆಳಗ್ಗೆ ಒಂಟಿ ಸಲಗವೊಂದು ನೀರು ಕುಡಿಯಲೆಂದು ಭಿಮನಕೆರೆಗೆ ಬಂದಿದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಒಂಟಿ ಸಲಗ ಗಾಬರಿಗೊಂಡಿದೆ. ಅಲ್ಲೆ ಪಕ್ಕದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಕೃಷ್ಣ ಅವರನ್ನು ಅಟ್ಟಾಡಿಸಿದೆ. ನಂತರ ಕೃಷ್ಣ ಅವರ ಬೈಕ್‍ನ್ನು ಸೊಂಡಿಲಿನಿಂದ ಬಿಸಾಡಿದೆ. ಬಳಿಕ ಅಲ್ಲೇ ಇದ್ದ ಎತ್ತಿನಗಾಡಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

    ನಂತರ ಮುಂದೆ ಗದ್ದೆಯಲ್ಲಿ ಮೆಯುತ್ತಿದ್ದ ಎರಡು ಹಸುಗಳು ಹಾಗೂ ಒಂದು ಎಮ್ಮೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಗ್ರಾಮಸ್ಥರು ಬಂದು ಕಿರುಚಿದ ಪರಿಣಾಮ ಒಂಟಿ ಸಲಗ ಹೆದರಿ ಓಡಿ ಹೋಗಿದೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಹಸು ಹಾಗೂ ಎಮ್ಮೆಗಳು ಸಾವನ್ನಪ್ಪಿವೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

  • ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ಉಡುಪಿ: ಜನ ದೇವರನ್ನು ಭಕ್ತಿಯಿಂದ ನೋಡುತ್ತಾರೆ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಉಡುಪಿಯಲ್ಲಿ ಜನರ ಜೊತೆ ದನವೂ ದೇವರಿಗೆ ತಲೆ ತಗ್ಗಿಸಿ ಪೂಜೆ ಮಾಡಿದೆ.

    ಉಡುಪಿಯ ಪ್ರಸಿದ್ಧ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಹಸುವೊಂದು ನಿತ್ಯವೂ ಪೂಜೆ ಸಲ್ಲಿಸುತ್ತಿದೆ. ಆಶ್ಚರ್ಯ ಆದ್ರೂ ಸತ್ಯ. ಹಸು ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿಯೇ ನಡೆಯುವ ಪೂಜೆಯ ಸಂದರ್ಭ ಶ್ರೀ ನಾಗ ದೇವರ ಕಟ್ಟೆಯ ಎದುರಿನ ಮೆಟ್ಟಿಲಿನ ಮಧ್ಯದಲ್ಲಿ ಶಿರಬಾಗಿ ನಮಿಸಿ ನಿಲ್ಲುತ್ತದೆ. ಕಳೆದ ಹಲವು ದಿನಗಳಿಂದಲೂ ನಡೆಯುತ್ತಿರುವ ಈ ವಿದ್ಯಮಾನ ನೋಡಿದ ದೇಗುಲಕ್ಕೆ ಆಗಮಿಸುವ ಭಕ್ತರು ಬೆರಗಾಗಿದ್ದಾರೆ.

    ಪ್ರತಿ ದಿನ ಮುಂಜಾನೆ ದೇವಳದ ಶ್ರೀನಾಗ ದೇವರ ಕಟ್ಟೆಯ ಎದುರು ಬಂದು ನಿಲ್ಲುವ ಈ ಗೋವು ಅಪರಾಹ್ನದ ದೇಗುಲದಲ್ಲಿ ನಡೆಯುವ ಮಹಾಪೂಜೆಯವರೆಗು ಕೂಡ ನಿಂತ ಸ್ಥಳವನ್ನು ಬಿಟ್ಟು ತೆರಳದೇ ಇರುವುದು ಭಕ್ತರ ಆಶ್ಚರ್ಯಕ್ಕೆ ಕಾರಣವಾಗಿದೆ. ಜನ ಮಾಡೋದನ್ನು ನೋಡಿ ಹೀಗೆ ಮಾಡುತ್ತಿರಬಹುದಾ? ಅಥವಾ ವಿಶೇಷ ಶಕ್ತಿಯೊಂದು ಇದರ ಹಿಂದೆ ಅಡಗಿದ್ಯಾ ಅನ್ನೋದು ಸದ್ಯ ಕುತೂಹಲದ ವಿಷಯ.

    ಕುಂಭಾಸಿ ದೇವಸ್ಥಾನದ ಭಕ್ತ ದಿವಾಕರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಲವು ಮೂಕಪ್ರಾಣಿಗಳು ಮನುಷ್ಯರು ಮಾಡುವುದನ್ನು ಅನುಕರಣೆ ಮಾಡುತ್ತವೆ. ಆದರೆ ಗೋವು ಆ ಜಾತಿಗೆ ಸೇರಿಲ್ಲ. ಗೋವು ಅನುಕರಣೆ ಮಾಡುವ ನಿದರ್ಶನ ನನ್ನ ಅನುಭವದ ಪ್ರಕಾರ ಇದೇ ಮೊದಲು. ಕುಂಭಾಸಿ ಸಿದ್ಧಿವಿನಾಯಕ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವರು. ಪ್ರತಿದಿನ ಇಲ್ಲಿ ದನ ದೇವರಿಗೆ ಭಕ್ತಿಯನ್ನು ಅರ್ಪಿಸುತ್ತಿದೆ. ಇದರಿಂದ ಕುಂಭಾಸಿ ಗಣಪತಿ ಮೂಕಪ್ರಾಣಿಗಳಿಗೂ ಒಲಿದಿದ್ದಾನೆ ಎಂಬೂದು ಭಕ್ತನಾಗಿ ನನ್ನ ಅಭಿಪ್ರಾಯ ಎಂದು ಹೇಳಿದರು.

  • ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ಮಂಡ್ಯ: ವಿಷ ಆಹಾರ ಸೇವಿಸಿದ ಪರಿಣಾಮ 2 ಎತ್ತು ಹಾಗೂ ಒಂದು ಹಸು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತರಾದ ರವಿ, ಪ್ರೀತಮ್ ಹಾಗೂ ಲೀಲಾ ಎಂಬುವವರಿಗೆ ಸೇರಿದ ರಾಸುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಮೃತಪಟ್ಟ ರಾಸುಗಳು ಅಂದಾಜು 1.20 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

    ವಿಷ ಆಹಾರ ಸೇವಿಸಿದ ರಾಸುಗಳು ಒದ್ದಾಡುತ್ತಿದ್ದವು ಕೂಡಲೇ ರೈತರು ಪಶು ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮೃತಪಟ್ಟಿದ್ದವು.

    ಪಶುವೈದ್ಯ ಡಾ.ಗೋವಿಂದ ಹಾಗೂ ರಾಮ ಕೃಷ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಷ ಆಹಾರ ಸೇವಿಸಿ ಮೃತಪಟ್ಟಿವೆ ಎಂದು ದೃಢಪಡಿಸಿದ್ದಾರೆ. ರಾಸುಗಳು ಸಾವನ್ನಪ್ಪಿದ್ದರಿಂದ ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    – ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿರಾಯ
    – ನಿದ್ದೆ ಇಲ್ಲದೆ ಟಾರ್ಚ್ ಹಿಡಿದು ಹಸುಗಳನ್ನು ಕಾಯುವ ಕೆಲಸ

    ಮಡಿಕೇರಿ: ವರ್ಷದ ಎಲ್ಲ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನರು ಇದೀಗ ಹುಲಿಯ ಹಾವಳಿಯಿಂದ ಭಯಗೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಸುತ್ತ ಕಳೆದ ಎರಡೂವರೆ ತಿಂಗಳಲ್ಲಿ ಹುಲಿ ದಾಳಿಗೆ ಸುಮಾರು 29 ಜಾನುವಾರುಗಳು ಬಲಿಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟು ಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ.

    ಕಳೆದ ಒಂದೇ ತಿಂಗಳಲ್ಲಿ 15ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು, ಹುದಿಕೇರಿ, ಬೆಳ್ಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಟಾರ್ಗೆಟ್ ಮಾಡಿ ಹುಲಿ ದಾಳಿ ನಡೆಸುತ್ತಿದೆ. ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಬೋನ್ ಇಟ್ಟಿದೆ. ಆದರೆ ಹುಲಿ ಬೋನ್ ಕಡೆ ಸುಳಿಯುತ್ತಲೇ ಇಲ್ಲ.

    ಜನರು ಹುಲಿಯ ಆತಂಕದಿಂದ ರಾತ್ರಿ ಇಡೀ ಟಾರ್ಚ್ ಹಾಕಿ ಜಾರುವಾರುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಜಾರುವಾರುಗಳು ಸಾವನ್ನಪ್ಪಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೇವಲ 2-3 ಸಾವಿರ ರೂ. ಪರಿಹಾರ ನೀಡುತ್ತಾರೆ. ಆದರೆ ಒಂದು ಜರ್ಸಿ ತಳಿಯ ಹಸುಗೆ ಕನಿಷ್ಠ 40 ರಿಂದ 50 ಸಾವಿರ ರೂ ಬೆಲೆ ಇದೆ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಬಡ ರೈತರು ಹುಲಿ ದಾಳಿಯಿಂದ ಕಂಗಾಲಾಗಿದ್ದಾರೆ.

    ಶನಿವಾರ ಸಂಜೆ ಬೆಳ್ಳೂರು ಗ್ರಾಮದ ಗೋಪಾಲ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಈ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುದಿಕೇರಿ ಹೋಬಳಿ ಸಂಚಾಲಕ ಸೂರಜ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಸ್ಥಳೀಯ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ದಿನ ನಿತ್ಯ ಹುಲಿ ಹಾವಳಿಯಿಂದ ಗ್ರಾಮದಲ್ಲಿ ಜೀವನ ಮಾಡುವುದೇ ಕಷ್ಟವಾಗಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

  • ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ಬುದ್ಧಿ ಸ್ವಾಧೀನ ಕಳ್ಕೊಂಡ ಜಾನುವಾರುಗಳ ಜೀವಂತ ಸಮಾಧಿ

    ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸಾಕಿ ಬೆಳೆಸಿದ ಜಾನುವಾರುಗಳನ್ನ ಸ್ವತಃ ಗ್ರಾಮಸ್ಥರೇ ಜೀವಂತ ಸಮಾಧಿ ಮಾಡಿದ ಘಟನೆ ನಡೆದಿದೆ.

    ಹುಚ್ಚು ನಾಯಿ ಕಡಿತಕ್ಕೊಳಗಾದ ಗ್ರಾಮದ ಸುಮಾರು 10 ರಾಸುಗಳು ಬುದ್ಧಿ ಸ್ವಾಧೀನ ಕಳೆದುಕೊಂಡಿದ್ದವು. ಹುಚ್ಚು ನಾಯಿ ಗ್ರಾಮದ ಜನ ಹಾಗೂ ದನಗಳ ಮೇಲೆ ದಾಳಿ ಮಾಡುತ್ತಿದ್ದವು. ಕೆಲ ದಿನಗಳಿಂದ ಹುಚ್ಚು ನಾಯಿಗಳ ಕಡಿತಕ್ಕೆ ಎಮ್ಮೆಯೊಂದು ಆಕಳುಗಳ ಮೇಲೆ ದಾಳಿ ಮಾಡಿತ್ತು. ಜೀವ ಭಯದಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಪ್ರಾಣಿಗಳ ಜೀವಂತ ಸಮಾಧಿ ಮಾಡಿದ್ದಾರೆ.

    ಕೆಲವು ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪಿವೆ. ಪಶುವೈದ್ಯರಿಗೆ ಮಾಹಿತಿ ನೀಡಿದರೂ ಸರಿಯಾದ ಸಮಯಕ್ಕೆ ಔಷಧಿ ವಿತರಣೆ ಮಾಡದ ಹಿನ್ನೆಲೆಯಲ್ಲಿ ಪಶು ಇಲಾಖೆ ಅಧಿಕಾರಿಗಳ ಹಾಗೂ ವೈದ್ಯರ ನಿಷ್ಕಾಳಜಿಯಿಂದ ಚಿಕಿತ್ಸೆ ಸಿಗದೆ ಪ್ರಾಣಿಗಳು ಸ್ವಾಧೀನ ಕಳೆದುಕೊಂಡು ದಾಳಿಮಾಡುತ್ತಿದ್ದವು.

    ಹೀಗಾಗಿ ಬೇರೆದಾರಿಯಿಲ್ಲದೆ ಗ್ರಾಮಸ್ಥರೇ ನಾಲ್ಕೈದು ಜಾನುವಾರುಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ. ಜೊತೆಗೆ ಚಿಕಿತ್ಸೆ ನೀಡದ ಪಶು ವೈಧ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    ಮಗುವಿಗೆ ಯಕೃತ್ ಶಸ್ತ್ರ ಚಿಕಿತ್ಸೆಯಲ್ಲಿ ಹಸುವಿನ ರಕ್ತನಾಳ ಬಳಕೆ

    – ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿ

    ಗುರುಗ್ರಾಮ್‍: ಹರಿಯಾಣದ ಗುರುಗ್ರಾಮ್‍ನ ಖಾಸಗಿ ಆಸ್ಪತ್ರೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಪಿತ್ತಜನಕಾಂಗದ ಕಸಿಯನ್ನು ಮಾಡಲಾಗಿದೆ.

    ಸೌದಿ ಅರೇಬಿಯಾದ ಒಂದು ವರ್ಷದ ಬಾಲಕಿ ಬೇಬಿ ಹರ್ ಯಕೃತ್ ಕಸಿಗೆ ಹಸುವಿನ ರಕ್ತನಾಳಗಳನ್ನು ಬಳಸಲಾಗಿದೆ. 14 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ತಂಡವು ಬಾಲಕಿಯನ್ನು ಎರಡು ವಾರಗಳ ಕಾಲ ಮೇಲ್ವಿಚಾರಣೆಯಲ್ಲಿ ಇಟ್ಟು, ಬುಧವಾರ ಡಿಸ್ಚಾರ್ಜ್ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸಕ ಡಾ.ಗಿರಿರಾಜ್ ಬೋರಾ ಅವರು, ಸೌದಿ ಅರೇಬಿಯಾದ ಬೇಬಿ ಹರ್ ಪಿತ್ತರಸ ನಾಳಗಳಿಲ್ಲದೆ ಜನಿಸಿದೆ. ಬಳಿಕವೂ ಅವಳ ಪಿತ್ತರಸ ನಾಳ ಅಭಿವೃದ್ಧಿಯಾಗಲಿಲ್ಲ. ಆದ್ದರಿಂದ ಬೋವಿನ್ ಜುಗುಲಾರ್ ಸಿರೆ (ಹಸುವಿನ ಗಂಟಲು ಅಬಿಧಮನಿ) ಅನ್ನು ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗಿದೆ. ಈ ರಕ್ತನಾಳವು ಯಕೃತ್ತಿಗೆ ರಕ್ತವನ್ನು ತಲುಪಿಸಲು ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಕೆಲಸವನ್ನು ವೈದ್ಯರ ತಂಡವು ಚೆನ್ನಾಗಿ ನಿರ್ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾರಾ ಮತ್ತು ಅಹ್ಮದ್ ದಂಪತಿಯ ಮೂರನೇ ಮಗು ಬೇಬಿ ಹರ್. ಅವಳು ಜನಿಸಿದ ಮೂರು ತಿಂಗಳ ನಂತರ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಳು. ಸೌದಿ ಅರೆಬಿಯಾದ ವೈದ್ಯರು ಸಮಸ್ಯೆಯನ್ನು ಎದುರಿಸಲು ಮುಂದಾಗಲಿಲ್ಲ. ಬಳಿಕ ನಡೆಸಿದ ಬಿಲಿಯರಿ ಬೈಪಾಸ್ ಶಸ್ತ್ರಚಿಕಿತ್ಸೆ ವಿಫಲವಾದ ನಂತರ ಅಲ್ಲಿನ ವೈದ್ಯರು, ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಸಲಹೆ ನೀಡಿದರು. ಹೀಗಾಗಿ ಭಾರತಕ್ಕೆ ಕರೆತಂದ ಸಾರಾ ದಂಪತಿ ಹರಿಯಾಣದ ಗುರುಗ್ರಾಮ್‍ನ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿದ್ದು, ಮಗುವಿನ ತಂದೆ ಅಹ್ಮದ್ ಭಾರತ ಮತ್ತು ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಡಾ. ಗಿರಿರಾಜ್ ಬೋರಾ ಮಾತನಾಡಿ, ಸೌದಿ ಅರೆಬಿಯಾದ ವೈದ್ಯರು ದ್ವಿಪಕ್ಷೀಯ ಅಟ್ರೆಸಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯನ್ನು ಗುರುತಿಸಿದರು. ಈ ರೋಗವು 16 ಸಾವಿರದಲ್ಲಿ ಒಂದು ನವಜಾತ ಶಿಶುವಿನಲ್ಲಿ ಕಂಡುಬರುತ್ತದೆ. ಅಂತಹ ಮಕ್ಕಳಲ್ಲಿ ಪಿತ್ತರಸ ನಾಳಗಳು ಬೆಳೆಯುವುದಿಲ್ಲ. ಮಗುವಿನ ತೂಕ 5.2 ಕೆ.ಜಿ. ಇರುತ್ತದೆ ಎಂದು ಹೇಳಿದ್ದಾರೆ.

  • ಶಾಲಾ ಕೊಠಡಿಯಲ್ಲಿ ಹಸು ಕೂಡಿ ಹಾಕಿದ ಶಿಕ್ಷಕರು!

    ಶಾಲಾ ಕೊಠಡಿಯಲ್ಲಿ ಹಸು ಕೂಡಿ ಹಾಕಿದ ಶಿಕ್ಷಕರು!

    ಕಾರವಾರ: ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿಯ ಒಳಗೆ ಹೋಗಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೂಠಡಿಯಲ್ಲಿ ಕೂಡಿ ಹಾಕಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಶನಿವಾರದ ದಿನ ಶಾಲೆಯ ಒಳಗೆ ದನ ಹೋಗಿದೆ. ಆದರೆ ಇದನ್ನು ಗಮನಿಸದ ಶಿಕ್ಷಕರು ಹಾಗೆಯೇ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ಹಸು ಎರಡು ದಿನ ಶಾಲೆಯೊಳಗಡೆ ಬಂಧಿಯಾಗಿದೆ. ಹಸುವಿಗೆ ಆಹಾರವಿಲ್ಲದೇ ಹಸುವಿನಿಂದ ಇಂದು ಗೋಗರೆದಿದ್ದು ನಂತರ ಅಕ್ಕಪಕ್ಕದ ಜನರಿಗೆ ತಿಳಿದು ಕೊಠಡಿ ನೋಡಿದಾಗ ಹಸು ಇರುವುದು ಪತ್ತೆಯಾಯಿತು.

    ನಂತರ ಇಂದು ಹಸುವಿಗೆ ಕೊಠಡಿಯಿಂದ ಮುಕ್ತಿ ನೀಡಲಾಗಿದ್ದು, ಶಿಕ್ಷಕರ ನಿರ್ಲಕ್ಷದ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಶಿಕ್ಷಕರು ಮನೆಗೆ ಹೋಗುವ ಗಡಿಬಿಡಿಯಲ್ಲಿ ಹಸು ಬಂದಿರುವುದನ್ನು ನೋಡದೆ ಬೀಗ ಹಾಕಿ ಹೋಗಿದ್ದಾರೆ. ಒಂದು ವೇಳೆ ಇದೇ ಕೊಠಡಿಯಲ್ಲಿ ಮಕ್ಕಳಿದ್ದಿದ್ದರೆ ಏನು ಗತಿ ಎಂದು ಶಿಕ್ಷಕರ ನಿರ್ಲಕ್ಷ್ಯಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಂಡ್ಯ: ತಮ್ಮ ಮನೆಯ ಆವರಣದಲ್ಲಿ ಮಾಡಲಾಗಿದೆ ಎನ್ನಲಾದ ಮಾಟ ಮಂತ್ರದ ನಿವಾರಣೆಗಾಗಿ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊನ್ನಲಗೇಗೌಡ ಎಂಬವರೇ ತಮ್ಮ ಮನೆಯಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದರು. ರೈತ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ಮನೆಯ ಆವರಣದಲ್ಲಿ ಎಲ್ಲೋ ಒಂದು ಕಡೆ ಹೂತು ಹಾಕಿದ್ದಾರೆ ಎಂಬ ಬಗೆಗೆ ಅನುಮಾನಗೊಂಡಿದ್ದನು. ಈ ರೀತಿಯ ಮಾಟ ಮಂತ್ರಗಳನ್ನ ಗುರುತಿಸಿ ನಿವಾರಿಸುವುದರಲ್ಲಿ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ್ದಾರೆ.


    ಊರಿಗೆ ಬಂದ ಬಸಪ್ಪನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಬಸಪ್ಪ ಹೊನ್ನಲಗೇಗೌಡರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಪತ್ತೆ ಹಚ್ಚಿದೆ. ಮಾಟ ಮಾಡಿ ಹೂತಿಟ್ಟಿದ್ದ ಸ್ಥಳವನ್ನ ತನ್ನ ಪಾದದ ಮೂಲಕ ತೋರಿಸಿಕೊಟ್ಟಿದೆ. ನಂತರ ಅಲ್ಲಿ ಗುಂಡಿ ತೆಗೆಸಿ ನೋಡಿದಾಗ ಮಾಟ ಮಾಡಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.