Tag: cow

  • ಹಸುವಿನ ಸೆಗಣಿಯನ್ನು ಯುಎಸ್‍ಗೆ ತೆಗೆದುಕೊಂಡು ಹೋದ ಭಾರತೀಯ

    ಹಸುವಿನ ಸೆಗಣಿಯನ್ನು ಯುಎಸ್‍ಗೆ ತೆಗೆದುಕೊಂಡು ಹೋದ ಭಾರತೀಯ

    ವಾಷಿಂಗ್ಟನ್: ಭಾರತದಿಂದ ಯೆಸ್‍ಗೆ ಪ್ರಯಾಣಿಸಿದ ಪ್ರಯಾಣಿಕನ ಲಗೇಜ್ ಬ್ಯಾಗ್‍ನಲ್ಲಿ ಹಸುವಿನ ಸೆಗಣಿ ಪತ್ತೆಯಾಗಿದೆ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

    ಹಸುವಿನ ಸಗಣಿಯನ್ನು ಯುಎಸ್‍ನಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ ಎನ್ನಲಾಗುತ್ತದೆ . ಆದರೆ ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ ತಲುಪಿದ ನಂತರ ಸಿಬಿಪಿ ಕೃಷಿ ತಜ್ಞರು ಸೂಟ್ ಕೇಸ್‍ನಲ್ಲಿ ಎರಡು ಹಸುವಿನ ಸಗಣಿ ಉಂಡೆಯನ್ನು ಕಂಡುಕೊಂಡಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಸೋಮವಾರ ತಿಳಿಸಿದೆ.

    ಕಾಲುಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ. ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆಯ ಕೃಷಿ ಸಂರಕ್ಷಣಾ ಕಾರ್ಯಾಚರಣೆಯ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಬಾಲ್ಟಿಮೋರ್ ಫೀಲ್ಡ್ ಆಫೀಸ್ ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.

    ಹಸುವಿನ ಸಗಣಿ ವಿಶ್ವದ ಕೆಲವು ಭಾಗಗಳಲ್ಲಿ ಪ್ರಮುಖ ಶಕ್ತಿ ಮತ್ತು ಅಡುಗೆ ಮೂಲವಾಗಿದೆ ಎಂದು ತಿಳಿದಿದ್ದರೂ ಹಸುವಿನ ಚರ್ಮವನ್ನು ಡಿಟಾಕ್ಸಿಫೈಯರ್, ಆಂಟಿಮೈಕ್ರೊಬಿಯಲ್ ಮತ್ತು ರಸಗೊಬ್ಬರವಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ಪ್ರಯೋಜನಗಳ ಹೊರತಾಗಿಯೂ, ಕಾಲುಬಾಯಿ ರೋಗದ ಸಂಭಾವ್ಯ ಕಾರಣಗಳಿಂದಾಗಿ ಗೋವಿನ ಸಗಣಿ ನಿಷೇಧಿಸಲಾಗಿದೆ ಎಂದು ಸಿಬಿಪಿ ಹೇಳಿದೆ.

    ಯು.ಎಸ್. ಕೃಷಿ ಇಲಾಖೆಯ ಪ್ರಕಾರ, ಕಾಲುಬಾಯಿ ರೋಗವು ವಿಶ್ವಾದ್ಯಂತದ ಜಾನುವಾರುಗಳಿಗೆ ತೊಂದರೆ ತರುವ ರೋಗವಾಗಿದ್ದು ಇದು ವ್ಯಾಪಕವಾಗಿ ಮತ್ತು ವೇಗವಾಗಿ ಹರಡಬಹುದು ಮತ್ತು ಜಾನುವಾರುಗಳ ಸಂಖ್ಯೆಗೆ ಗಮನಾರ್ಹ ನಷ್ಟವನ್ನು ತರಬಲ್ಲದು. 1929ರಿಂದ ಯುಎಸ್ ಕಾಲುಬಾಯಿ ರೋಗದಿಂದ ಮುಕ್ತವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

  • ವಿದ್ಯುತ್ ಪ್ರವಹಿಸಿ ಜಾನುವಾರು ಸಾವು – ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

    ವಿದ್ಯುತ್ ಪ್ರವಹಿಸಿ ಜಾನುವಾರು ಸಾವು – ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

    ಮಡಿಕೇರಿ: ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಪ್ರವಹಿಸಿ ಜಾನುವಾರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಗಂಧದಕೋಟಿಯಲ್ಲಿ ನಡೆದಿದೆ.


    ಗಂಧದಕೋಟಿಯಿಂದ ಗೊಂದಿಬಸವನಹಳ್ಳಿಗೆ ತೆರಳುವ ಮಾರ್ಗದ ಕೆಎಂಟಿ ವಿದ್ಯಾಸಂಸ್ಥೆ ಬಳಿ ಈ ದುರ್ಘಟನೆ ನಡೆದಿದೆ. ಮುಖ್ಯರಸ್ತೆ ಬದಿಯಲ್ಲಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ ಬಳಿ ಮೂರು ಜಾನುವಾರುಗಳು ಮೇಯುತ್ತಿದ್ದವು. ಈ ಸಂದರ್ಭ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸಿದೊಡನೆ ಎರಡು ಜಾನುವಾರುಗಳು ಪಾರಾಗಿದೆ. ಆದರೆ ಗೊಂದಿಬವನಹಳ್ಳಿಯ ಮಂಜುನಾಥ್ ಎಂಬವರಿಗೆ ಸೇರಿದ 2 ವರ್ಷ ಪ್ರಾಯದ ಸಿಂಧಿ ಹಸು ಸ್ಥಳದಲ್ಲೇ ಮೃತಪಟ್ಟಿದೆ.

    ಘಟನೆಯನ್ನು ಕಂಡ ಸ್ಥಳೀಯರು ಸೆಸ್ಕಾಂಗೆ ಕರೆಮಾಡಿ ವಿದ್ಯುತ್ ಕಡಿತಗೊಳಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಜನನಿಬಿಡ ಪ್ರದೇಶದಲ್ಲಿ ತೆರೆದ ಸ್ಥಿತಿಯಲ್ಲಿ ಟ್ರಾನ್ಸ್ ಫಾರ್ಮರ್ ಇರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಟ್ರಾನ್ಸ್ ಫಾರ್ಮರ್ ಸುತ್ತಲು ತಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಪರಿಹಾರ ಕೊಡುವಂತೆ ಸೆಸ್ಕಾಂಗೆ ಮನವಿ ಮಾಡಿದ್ದಾರೆ. 40 ಸಾವಿರ ಮೌಲ್ಯದ ಜಾನುವಾರು ಕಳೆದುಕೊಂಡ ಮಾಲೀಕರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಮಾಜಿ ಗ್ರಾಪಂ ಸದಸ್ಯ ಡಿ.ಎಸ್.ಹರೀಶ್, ಲೋಕೇಶ್, ಪುಟ್ಟಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.

  • ಅಪರೂಪದ ಘಟನೆ- ನಿತ್ಯ ಎರಡು ಬಾರಿ ಲಿಂಗಮುದ್ರೆಗೆ ಹಾಲುಣಿಸುವ ಹಸು

    ಅಪರೂಪದ ಘಟನೆ- ನಿತ್ಯ ಎರಡು ಬಾರಿ ಲಿಂಗಮುದ್ರೆಗೆ ಹಾಲುಣಿಸುವ ಹಸು

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಮಾದಾಪುರದ ಜನ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಲಿಂಗಮುದ್ರೆ ಕಲ್ಲಿಗೆ ಗೋವು ಪ್ರತಿ ದಿನ ಎರಡು ಬಾರಿ ಹಾಲುಣಿಸುತ್ತಿದೆ. ನಿಯಮಿತವಾಗಿ ನಿತ್ಯ ಹಾಲುಣಿಸುವುದನ್ನು ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

    ಮನೆಯ ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ಗ್ರಾಮದ ಪುಂಡಲೀಕ ಶೇಟ್ ಅವರಿಗೆ ಸೇರಿದ ಹಸು ನೇರವಾಗಿ ಜಮೀನಿನಲ್ಲಿರುವ ಲಿಂಗಮುದ್ರೆ ಕಲ್ಲಿನ ಬಳಿ ತೆರಳುತ್ತದೆ. ಬಳಿಕ ಲಿಂಗಮುದ್ರೆ ಕಲ್ಲಿಗೆ ತನ್ನ ಕೆಚ್ಚಲನ್ನು ತಾಗಿಸಿಕೊಂಡು ನಿಲ್ಲುತ್ತದೆ. ಈ ಮೂಲಕ ನಿಧಾನವಾಗಿ ಅದಕ್ಕೆ ಹಾಲು ಜಿನುಗುವಂತೆ ಮಾಡುತ್ತದೆ.

    ಕಳೆದೆರಡು ತಿಂಗಳ ಹಿಂದೆ ಈ ಹಸುವಿನ ಕರು ಮೃತಪಟ್ಟಿದ್ದು, ಕರು ಮೃತಪಟ್ಟ ಒಂದು ತಿಂಗಳ ವರೆಗೆ ಹಸು ಮಾಲೀಕ ಹಾಲು ಹಿಂಡಿ, ಬಳಿಕ ನಿಲ್ಲಿಸಿದ್ದಾರೆ. ನಂತರ ಹಸು ಕೂಡ ಹಾಲು ಕೊಡುವುದನ್ನು ನಿಲ್ಲಿಸಿತ್ತು. ಕರು ಮೃತಪಟ್ಟಿರುವುದರಿಂದ ಹಸು ಹಾಲು ಕೊಡುತ್ತಿಲ್ಲ ಎಂದು ಮಾಲೀಕ ಪುಂಡಲೀಕ ಶೇಟ್ ಅಂದುಕೊಂಡಿದ್ದರು. ಕೆಲ ದಿನಗಳ ಬಳಿಕ ಪುಂಡಲೀಕ ಶೇಟ್ ಅಣ್ಣನ ಮಗ, ಹಸು ಜಮೀನಿಗೆ ತೆರಳಿ, ಜಮೀನಿನಲ್ಲಿದ್ದ ಲಿಂಗಮುದ್ರೆಗೆ ಹಾಲುಣಿಸುವುದನ್ನು ನೋಡಿದ್ದನಂತೆ. ಆದರೆ ಅಭಾಸವಾಗಬಾರದು ಎಂಬ ಉದ್ದೇಶದಿಂದ ಯಾರಿಗೂ ತಿಳಿಸದೇ ಸುಮ್ಮನಿದ್ದ ಪುಂಡಲೀಕ ಅಣ್ಣನ ಮಗ, ನಂತರ ತಮ್ಮ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಾರೆ.

    ಈ ಹಸು ದಿನಕ್ಕೆ ಎರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ರೀತಿ ವರ್ತಿಸುತ್ತಿದೆಯಂತೆ. ಇದೀಗ ಲಿಂಗಮುದ್ರೆ ಕಲ್ಲು ಹಾಗೂ ಗೋ ಮಾತೆ ಸಂಬಂಧವನ್ನು ಜನರು, ಕಾತುರದಿಂದ ವೀಕ್ಷಿಸುತ್ತಿದ್ದಾರೆ.

  • ಮೂರು ಹಸುಗಳ ಮೇಲೆ ಗುಂಡಿನ ದಾಳಿ

    ಮೂರು ಹಸುಗಳ ಮೇಲೆ ಗುಂಡಿನ ದಾಳಿ

    ಮಡಿಕೇರಿ: ಕಾಡಿನಲ್ಲಿ ಮೇಯಲು ಬಿಟ್ಟಿದ ಮೂರು ಹಸುಗಳ ಮೇಲೆ ಗುಂಡಿನ ದಾಳಿ ನಡೆಸಿ ಕೊರಳ ಕೊಯ್ದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರದ ಎಸ್ಟೇಟ್ ವೊಂದರಲ್ಲಿ ನಡೆದಿದೆ.

    ಕಾಡಿನಲ್ಲಿ ಮೂರು ಹಸುಗಳ ಮೃತದೇಹ ದೊರೆತಿದ್ದು, ಗುಂಡು ಹಾರಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಸುಗಳ ಕುತ್ತಿಗೆಯನ್ನು ಕತ್ತರಿಸಲಾಗಿದೆ. ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆಗಡುಕರು ಮೃತದೇಹಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಹಸುಗಳ ಮಾಲೀಕರದ ರಮೇಶ್ ಸಾಬು ಗಣಪತಿ ಮತ್ತು ಎರವರ ಚುಬ್ರ ಅವರಿಗೆ ಸೇರಿದ ಹಸುಗಳು ಇವಾಗಿವೆ.

    ಈ ರೀತಿಯ ಕೃತ್ಯ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೋನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ತಡರಾತ್ರಿ ಕಾರಲ್ಲಿ ಬಂದು ಕೈಕಾಲು ಕಟ್ಟಿ ಡಿಕ್ಕಿಗೆ ತುಂಬಿಸ್ತಾರೆ – ಉಡುಪಿಯಲ್ಲಿ ಗೋವು ಕಳ್ಳತನ ನಿರಂತರ

    ತಡರಾತ್ರಿ ಕಾರಲ್ಲಿ ಬಂದು ಕೈಕಾಲು ಕಟ್ಟಿ ಡಿಕ್ಕಿಗೆ ತುಂಬಿಸ್ತಾರೆ – ಉಡುಪಿಯಲ್ಲಿ ಗೋವು ಕಳ್ಳತನ ನಿರಂತರ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗೋವು ಕಳ್ಳರ ಕ್ರೂರ ಕೃತ್ಯ ಮಿತಿಮೀರಿದೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದು ಒಯ್ಯುತ್ತಿರೋದು ಸಾಮಾನ್ಯ ಆಗಿಬಿಟ್ಟಿದೆ.

    ಕಾರ್ಕಳದ ಸಾಲ್ಮರ ಪ್ರದೇಶದಲ್ಲಿ ಗೋಕಳ್ಳರ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಬಯಲಾಗಿದೆ. ಕಳೆದ ರಾತ್ರಿ 2.30 ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗುವ, ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಖದೀಮರು ಟಾರ್ಗೆಟ್ ಮಾಡಿಟ್ಟುಕೊಳ್ಳುತ್ತಾರೆ. ತಡರಾತ್ರಿ ಬಂದು ಅಮಾನವೀಯವಾಗಿ ಹೊತ್ತೊಯ್ದಿದ್ದಾರೆ.

    ಹೊಟೇಲೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ ಮನಕಲಕುತ್ತದೆ. ಗೋವಿನ ಕೈಕಾಲು ಕಟ್ಟಿ, ಡಿಕ್ಕಿಯೊಳಗೆ ತುಂಬಿ, ಒದ್ದು ಮಲಗಿಸಿದ್ದಾರೆ. ಮತ್ತೊಂದು ಗೋವನ್ನು ಕರೆತರುವ ಖದೀಮರಿಗಾಗಿ ಮಿಕ್ಕವರು ಕಾದಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದರೂ ಎಗ್ಗಿಲ್ಲದೆ ಗೋಕಳ್ಳತನ, ಗೋಹತ್ಯೆ ನಡೆಯುತ್ತಿರೋದು ವಿಪರ್ಯಾಸ.

    ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರವೀಣ್ ಯಕ್ಷಿಮಠ ಮಾತನಾಡಿ, ಅಮಾನವೀಯವಾಗಿ ಗೋವು ಕಳ್ಳತನ ಮಾಡುವ ದುಷ್ಟರಿಗೆ ಯಾವುದೇ ಪೊಲೀಸ್ ಶಿಕ್ಷೆ ನೀಡಬಾರದು. ಗೋವುಗಳನ್ನು ಹಿಂಸಿಸಿದ ರೀತಿಯಲ್ಲೇ ಕೈಕಾಲು ಕಟ್ಟಿ, ಹಿಂಸಿಸಿ ನೂರಾರು ಕಿಲೋಮೀಟರ್ ಕಾರಿನ ಡಿಕ್ಕಿಯಲ್ಲಿ ಹಾಕಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕು. ಮುಂದೆ ಜೀವನದಲ್ಲಿ ಗೋವಿನ ಜೊತೆ ಅವರು ಅಮಾನವೀಯವಾಗಿ ವರ್ತಿಸಬಾರದು ಎಂದರು.

  • ಕಾಡುಪ್ರಾಣಿಗೆ ಇಟ್ಟಿದ್ದ ಕೈಬಾಂಬ್ ಸ್ಫೋಟ – ಗೋವಿನ ಬಾಯಿ ಛಿದ್ರ

    ಕಾಡುಪ್ರಾಣಿಗೆ ಇಟ್ಟಿದ್ದ ಕೈಬಾಂಬ್ ಸ್ಫೋಟ – ಗೋವಿನ ಬಾಯಿ ಛಿದ್ರ

    ಕಾರವಾರ: ಕಾಡುಪ್ರಾಣಿಯ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಆಕಳಿನ ಬಾಯಿ ಛಿದ್ರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ನಡೆದಿದೆ.

    ಮುಂಡಗೋಡಸ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ್ ಎಂಬವರಿಗೆ ಸೇರಿದ ಆಕಳು ಇದಾಗಿದೆ. ಮೇವು ಅರಸಿ ಜಲಾಶಯದ ಬಳಿ ಬಂದಿದ್ದು ಈ ವೇಳೆ ಆಹಾರವೆಂದು ನೆಲದಲ್ಲಿ ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೈಬಾಂಬ್ ತಿನ್ನಲು ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ.

    ಸ್ಫೋಟದಿಂದಾಗಿ ಆಕಳಿನ ಬಾಯಿ ಸಂಪೂರ್ಣ ಛಿದ್ರವಾಗಿದ್ದು, ಅರಣ್ಯಾಧಿಕಾರಿಗಳ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಕೈಬಾಂಬ್ ದೊರೆತಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಸಾಕಾಣಿಕೆದಾರರಿಗೆ ಯಾಕೆ ರಕ್ಷಣೆ ನೀಡಿಲ್ಲ: ಮಾಜಿ ಶಾಸಕ ಬಾವಾ ಆಕ್ರೋಶ

    ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಸಾಕಾಣಿಕೆದಾರರಿಗೆ ಯಾಕೆ ರಕ್ಷಣೆ ನೀಡಿಲ್ಲ: ಮಾಜಿ ಶಾಸಕ ಬಾವಾ ಆಕ್ರೋಶ

    – ಬೀಫ್ ರಫ್ತಿನಲ್ಲಿ ದೇಶ ನಂ.1 ಆಗಿರೋದಕ್ಕೆ ಯಾರು ಕಾರಣ?

    ಮಂಗಳೂರು: ನಗರದ ಹೊರವಲಯದ ಮಳವೂರು ನಲ್ಲಿರುವ ಕಪಿಲಾ ಗೋಶಾಲೆಯನ್ನು ಜಿಲ್ಲಾಡಳಿತ ಹಾಡಹಗಲೇ ಧ್ವಂಸ ಮಾಡಿದ್ದು ಖಂಡನೀಯ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮೊಹಿಯುದ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಶಾಲೆಯಲ್ಲಿರುವ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ಇವತ್ತು ಬೀಫ್ ರಫ್ತು ಮಾಡುವುದರಲ್ಲಿ ದೇಶ ನಂಬರ್ ಒನ್ ಆಗಿರೋದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ನೆಲಸಮಗೊಂಡ ಗೋಶಾಲೆಯ ಮಾಲೀಕನಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ನೀಡುತ್ತೇನೆ. ಇದರಲ್ಲಿ ತಾತ್ಕಾಲಿಕ ಗೋಶಾಲೆ ನಿರ್ಮಿಸಿ ಎಂದು ಚೆಕ್ ನ್ನು ಗೋಶಾಲೆಯ ಮಾಲೀಕ ಪ್ರಕಾಶ್ ಶೆಟ್ಟಿಯವರಿಗೆ ಇದೇ ವೇಳೆ ಮೊಹಿಯುದ್ದಿನ್ ಬಾವಾ ಹಸ್ತಾಂತರಿಸಿದರು.

    ಉಳಿದ ಮೊತ್ತವನ್ನು ದೇಣಿಗೆ ಮೂಲಕ ಸಂಗ್ರಹಿಸಿ ಸಹಾಯ ಮಾಡುತ್ತೇನೆ. ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಮಾತ್ರವಲ್ಲದೆ ಸಹೋದರ ವಿಧಾನ ಪರಿಷತ್ ಸದಸ್ಯ ಬಿ. ಎಂ.ಫಾರೂಕ್ 5 ಲಕ್ಷ, ಉಳಿದ ಎಂಎಲ್‍ಸಿ ಗಳಿಂದ ದೇಣಿಗೆ ಸಂಗ್ರಹ ಮಾಡುತ್ತೇನೆ ಎಂದು ತಿಳಿಸಿದರು.

     

  • ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ಮಂತ್ರಾಲಯದ ಗೋ ಶಾಲೆ ವೀಕ್ಷಿಸಿದ ದರ್ಶನ್

    ರಾಯಚೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.

    ಮಂತ್ರಾಲಯ ಗುರುವೈಭವೋತ್ಸವ ಕಾರ್ಯಕ್ರದಲ್ಲಿ ಭಾಗವಹಿಸಿರುವ ದರ್ಶನ್, ಸ್ನೇಹಿತರೊಂದಿಗೆ ಮಂತ್ರಾಲಯದಲ್ಲಿ ಗೋ ಶಾಲೆಗಳಲ್ಲಿರುವ ಗೋವುಗಳನ್ನು ವೀಕ್ಷಿಸಿದರು. ಈ ವೇಳೆ ದರ್ಶನ್ ಗೋವುಗಳನ್ನು ಹಿಡಿದುಕೊಂಡಿರುವ ಹಾಗೂ ಕರುವನ್ನು ಹಿಡಿದುಕೊಂಡಿದ್ದಾರೆ.

    ಚಿಕ್ಕವರಿದ್ದಾಗ ಹಸುವನ್ನು ಸಾಕಿ ಅದರಿಂದ ಬಂದ ಹಾಲನ್ನು ಮಾರಿ ಸಂಪಾದಿಸಿ ಜೀವನ ನಡೆಸುತ್ತಿದ್ದ ದರ್ಶನ್‍ಗೆ ಗೋವಿನ ಮೇಲೆ ಅಪಾರವಾದ ಗೌರವ, ಭಕ್ತಿ ಹಾಗೂ ನಂಬಿಕೆ ಹೊಂದಿದ್ದಾರೆ.

    ದರ್ಶನ್‍ಗೆ ಪ್ರಾಣಿಗಳೆಂದರೆ ಮೊದಲಿನಿಂದಲೂ ಬಹಳ ಇಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ಮೈಸೂರು ಮೃಗಾಲಯದಲ್ಲಿ ಹಲವಾರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ, ಕುರಿ, ಕೋಳಿ, ಪಕ್ಷಿ, ಶ್ವಾನ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಸಿನಿಮಾದಿಂದ ಕೊಂಚ ಬಿಡುವು ಸಿಕ್ಕಿದರೆ ಸಾಕು ಸಫಾರಿಗೆ ಹೋಗಿ ತಮ್ಮ ಕೈಯಾರೆ ಕ್ಯಾಮೆರಾದ ಮೂಲಕ ಪ್ರಾಣಿಗಳ ಫೋಟೋವನ್ನು ಸೆರೆಹಿಡಿಯುತ್ತಾರೆ.

    ಇತ್ತೀಚೆಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದು, ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ವೀಡಿಯೋ: ಗೋ ಪೂಜೆ ಮಾಡಿ ಹಸುಗಳಿಗೆ ಚಿನ್ನದ ಸರ ತೊಡಿಸಿದ ಮನೆಮಂದಿ

    ವೀಡಿಯೋ: ಗೋ ಪೂಜೆ ಮಾಡಿ ಹಸುಗಳಿಗೆ ಚಿನ್ನದ ಸರ ತೊಡಿಸಿದ ಮನೆಮಂದಿ

    ಅಹಮದಾಬಾದ್: ಮನೆಯ ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದರಿಂದಾಗಿ ಸಂತೋಷಗೊಂಡ ಕುಟುಂಬವೊಂದು ಕರುವಿಗೆ ಚಿನ್ನ ಮತ್ತು ಬೆಳ್ಳಿಯ ಸರವನ್ನು ತೊಡಿಸಿ ವಿಶಿಷ್ಟವಾಗಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

    ಗುಜರಾತ್‍ನ ನಿವಾಸಿಯಾಗಿರುವ ವಿಜಯ್ ಪ್ರಸನ್ನ ಎಂಬವರ ಮನೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಹಸು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಇದರಿಂದ ಸಂತೋಷಗೊಂಡ ವಿಜಯ್ ಕುಟುಂಬದವರು ಮನೆಗೆ ಗೃಹಲಕ್ಷ್ಮಿಯ ಆಗಮನವಾಗಿದೆ ಎಂದು ಸಮಾರಂಭವನ್ನು ಮಾಡಿ ಕರುವಿಗೆ ಪೂಜೆ ಮಾಡಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ತೊಡಿಸಿ ಸಂಭ್ರಮಪಟ್ಟಿದ್ದಾರೆ.

    ವಿನಯ್ ಪ್ರಸನ್ನ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿಯಂತೆ. ಹಾಗಾಗಿ ತಮ್ಮ ಮನೆಯಲ್ಲಿ ಹಸು ಹೆಣ್ಣು ಕರು ಹಾಕುತ್ತಿದ್ದಂತೆ. ಸಮಾರಂಭವನ್ನು ಮಾಡಿ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಯಾವ ರೀತಿ ಸಂಭ್ರಮಪಡುತ್ತಾರೋ ಅದೇ ರೀತಿ ಹಸು ಮತ್ತು ಕರುವಿಗೆ ಹೊಸ ಬಟ್ಟೆಯನ್ನು ತೊಡಿಸಿ ಪೂಜೆ ಮಾಡಿ ಮನೆಮಂದಿ ಖುಷಿ ಪಟ್ಟಿದ್ದಾರೆ.

    ಕರುವಿಗೆ ಉಡುಗೊರೆ ನೀಡುವ ಸಮಾರಂಭದ ವೀಡಿಯೋದಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರೂ ಕೂಡ ಸಾಲಾಗಿ ನಿಂತಿದ್ದಾರೆ. ಕುಟುಂಬ ಸದಸ್ಯರು ಗೋವುಗಳಿಗೆ ಹೊಸ ಬಟ್ಟೆಯನ್ನು ಹೊದಿಸಿದ್ದಾರೆ. ಹಣ್ಣು ಹಂಪಲನ್ನು ನೀಡಿದ ಮೇಲೆ ಬಾಕ್ಸ್ ನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮನೆಯ ಮಹಿಳಾ ಸದಸ್ಯರು ಕರುವಿಗೆ ಹಾಕುತ್ತಿರುವ ದೃಶ್ಯವನ್ನು ಗಮನಿಸಬಹುದಾಗಿದೆ.

  • ಮೂರು ಕರುಗಳಿಗೆ ಜನ್ಮನೀಡಿದ ಹಸು

    ಮೂರು ಕರುಗಳಿಗೆ ಜನ್ಮನೀಡಿದ ಹಸು

    ಕೋಲಾರ: ಹಸು ಮೂರು ಕರುಗಳಿಗೆ ಜನ್ಮ ನೀಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಆವಲಕುಪ್ಪ ಗ್ರಾಮದಲ್ಲಿ ನಡೆದಿದೆ.

    ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ. ಈ ಹಿಂದೆ ಹಸು ಮೂರು ಬಾರಿ ಒಂದೊಂದು ಕರುವಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿದೆ. ಮೂರು ಕರುವನ್ನು ನೋಡಿ ಸ್ಥಳಿಯರು ಸಂತೋಷ ಪಟ್ಟಿದ್ದಾರೆ.

    ರೈತ ನಾರಾಯಣಸ್ವಾಮಿ ಹಾಗು ಭಾಗ್ಯಮ್ಮ ದಂಪತಿಗಳಿಗೆ ಸೇರಿದ ಹಸು ಇದಾಗಿದೆ. 2 ಹೆಣ್ಣು ಹಾಗೂ 1 ಗಂಡು ಕರುವಿಗೆ ಹಸು ಜನ್ಮ ನೀಡಿದೆ. ಪಶು ವೈದ್ಯ ವೆಂಕಟೇಶ್ ಅವರು ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ. ಕರು ಮತ್ತು ಹಸು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.