Tag: Cow urine

  • ಗೋಮೂತ್ರದ ಔಷಧೀಯ ಗುಣಗಳನ್ನ ಪರಿಗಣಿಸಬೇಕು – ಐಐಟಿ ಮದ್ರಾಸ್‌ ನಿರ್ದೇಶಕ

    ಗೋಮೂತ್ರದ ಔಷಧೀಯ ಗುಣಗಳನ್ನ ಪರಿಗಣಿಸಬೇಕು – ಐಐಟಿ ಮದ್ರಾಸ್‌ ನಿರ್ದೇಶಕ

    – ಕಾಂಗ್ರೆಸ್‌ ಸಂಸದ ಪಿ. ಕಾರ್ತಿ ಚಿದಂಬರಂ ಆಕ್ಷೇಪ

    ಚೆನ್ನೈ: ಐಐಟಿ ಮದ್ರಾಸ್‌ ನಿರ್ದೇಶಕ ವಿ. ಕಾಮಕೋಟಿ (V Kamakoti) ಗೋಮೂತ್ರದಲ್ಲಿನ ಔಷಧೀಯ ಗುಣಗಳನ್ನ ಕೊಂಡಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಐಐಟಿ ನಿರ್ದೇಶಕನ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್‌ ಸಂಸದ ಪಿ. ಕಾರ್ತಿ ಚಿದಂಬರಂ (Karti P Chidambaram) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಐಐಟಿ ಮದ್ರಾಸ್ ನಿರ್ದೇಶಕರು ನಕಲಿ ವಿಜ್ಞಾನವನ್ನು ಹರಡುತ್ತಿರುವುದು ಅಸಂಬದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.

    ಕಾಮಕೋಟಿ ಹೇಳಿದ್ದೇನು?
    ಗೋಮೂತ್ರವು (Cow Urine) ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರಯ ನಿರೋಧಕ ಹಾಗೂ ಜೀರ್ಣಕಾರಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉರಿ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿಗೆ ಗೋಮೂತ್ರ ಸೂಕ್ತ. ಅಲ್ಲದೇ ಗೋಮೂತ್ರದ ಔಷಧೀಯ ಗುಣಗಳನ್ನು ಪರಿಗಣಿಸಬೇಕು ಎಂದೂ ಕಾಮಕೋಟಿ ಎಂದೂ ಪ್ರತಿಪಾದಿಸಿದ್ದಾರೆ.

    ಇದೇ ತಿಂಗಳು ಜನವರಿ 15ರಂದು ಮಾತು ಪೊಂಗಲ್ ಪ್ರಯುಕ್ತ ಗೋ ಸಂರಕ್ಷಣಾ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವಾಗ, ಸನ್ಯಾಸಿಯೊಬ್ಬರು ತೀವ್ರ ಜ್ವರವಿದ್ದಾಗ ಗೋಮೂತ್ರ ಸೇವಿಸಿ ಹೇಗೆ ಚೇತರಿಸಿಕೊಂಡರು ಎಂಬ ಉದಾಹರಣೆ ನೀಡುವಾಗ ಕಾಮಕೋಟಿ ಅವರು ಈ ಹೇಳಿಕೆಗಳನ್ನು ನೀಡಿದ್ದರು.

    ಸಂಶೋಧನಾ ವರದಿ ಹೇಳಿದ್ದೇನು?
    ಈ ಹಿಂದೆ ಉತ್ತರ ಪ್ರದೇಶದ ಬರೇಲಿಯಲ್ಲಿ ಇರುವ ಭಾರತೀಯ ಪಶು ಸಂಶೋಧನಾ ಸಂಸ್ಥೆ (IVRI) ಗೋಮೂತ್ರದ ಕುರಿತು ವರದಿಯೊಂದನ್ನ ಪ್ರಕಟಿಸಿತ್ತು. ಸಂಸ್ಕರಣೆ ಮಾಡದ, ತಾಜಾ ಗೋ ಮೂತ್ರದಲ್ಲಿ ವಿಷಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ, ಗೋ ಮೂತ್ರದ ನೇರ ಸೇವನೆ ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರ ವರದಿ ತಿಳಿಸಿತ್ತು.

  • ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ; ಎಮ್ಮೆಯ ಮೂತ್ರವೇ ಉತ್ತಮ ಎಂದ IVRI ಅಧ್ಯಯನ

    ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ; ಎಮ್ಮೆಯ ಮೂತ್ರವೇ ಉತ್ತಮ ಎಂದ IVRI ಅಧ್ಯಯನ

    ಲಕ್ನೋ: ಗೋವು ಪವಿತ್ರ.. ಗೋಮೂತ್ರ (Cow Urine) ಸೇವನೆಯಿಂದ ರೋಗರುಜಿನ ವಾಸಿಯಾಗುತ್ತದೆ. ಗೋಮೂತ್ರ ಸೇವನೆಯಿಂದ ಚರ್ಮಕ್ಕೆ ನಾನಾ ಪ್ರಯೋಜನಗಳಿವೆ ಎಂದು ನಂಬಿದ್ದ ಹಿಂದೂಪರವಾದಿಗಳಿಗೆ ಬಿಗ್‌ ಶಾಕ್‌ ನೀಡುವ ಸುದ್ದಿ ವರದಿಯಾಗಿದೆ. ಮಾನವರಿಗೆ ಗೋಮೂತ್ರ ಸೇವನೆ ಯೋಗ್ಯವಲ್ಲ ಎಂದು ಐವಿಆರ್‌ಐ ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ಗೋಮೂತ್ರಕ್ಕೆ ಹೋಲಿಸಿದರೆ ಎಮ್ಮೆಯ ಮೂತ್ರವೇ ಉತ್ತಮ ಎಂದು ವಿಶ್ಲೇಷಿಸಿದೆ.

    ದಶಕಗಳಿಂದ ಪವಾಡ ಸದೃಶ ಔಷಧಿ ಎಂದು ಹೇಳಲಾಗುತ್ತಿರುವ ಗೋಮೂತ್ರವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದೆ. ಹೀಗಾಗಿ ಇದು ನೇರವಾಗಿ ಮಾನವ ಬಳಕೆಗೆ ಸೂಕ್ತವಲ್ಲ ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (IVRI) ಅಧ್ಯಯನದ ವರದಿ ತಿಳಿಸಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ಕೆಂಡದ ಮೇಲೆ ನಡೆದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ

    ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಹೊಟ್ಟೆಯ ಸೋಂಕನ್ನು ಉಂಟುಮಾಡುತ್ತವೆ ಎಂದು ಪತ್ತೆ ಹಚ್ಚಲಾಗಿದೆ. ಈ ಸಂಶೋಧನೆಯ ವರದಿಯನ್ನು ಆನ್‌ಲೈನ್ ಸಂಶೋಧನಾ ವೆಬ್‌ಸೈಟ್ ರಿಸರ್ಚ್‌ಗೇಟ್‌ನಲ್ಲಿ ಪ್ರಕಟಿಸಲಾಗಿದೆ.

    ಇನ್‌ಸ್ಟಿಟ್ಯೂಟ್‌ನ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥ ಸಿಂಗ್, “ಹಸು, ಎಮ್ಮೆಗಳು ಮತ್ತು ಮಾನವರ ಮೂತ್ರದ 73 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ. ಎಮ್ಮೆಯ ಮೂತ್ರವು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದಿದ್ದಾರೆ. ಇದನ್ನೂ ಓದಿ: CSK ಬ್ಯಾನ್ ಮಾಡಿ: ತಮಿಳುನಾಡು ಶಾಸಕ

    ನಾವು ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಮೂರು ತಳಿಯ ಹಸುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದೆವು. ಎಮ್ಮೆ ಹಾಗೂ ಮನುಷ್ಯರ ಮೂತ್ರವನ್ನೂ ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 2022ರ ಜೂನ್-ನವೆಂಬರ್ ನಡುವೆ ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ವ್ಯಕ್ತಿಗಳ ಮೂತ್ರದ ಮಾದರಿಗಳಲ್ಲೂ ಗಣನೀಯ ಪ್ರಮಾಣದಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಯಾವುದೇ ಕಾರಣಕ್ಕೂ ಗೋಮೂತ್ರವನ್ನು ಮಾನವ ಬಳಕೆಗೆ ಶಿಫಾರಸು ಮಾಡಲಾಗುವುದಿಲ್ಲ. ಬಟ್ಟಿ ಇಳಿಸಿದ ಮೂತ್ರದಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಇರುವುದಿಲ್ಲ ಎಂದು ಕೆಲವರು ವಾದ ಮಂಡಿಸುತ್ತಾರೆ. ಅದರ ಬಗ್ಗೆ ನಾವು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್‍ನ್ನು ಫೋಟೋಶೂಟ್ ಮಾಡಿಸಿ ಸೆಲೆಬ್ರೆಟ್ ಮಾಡಿದ ಮಹಿಳೆ

  • ಲೀಟರ್‌ ಗೋಮೂತ್ರಕ್ಕೆ 4 ರೂ. – ರೈತರಿಂದ ಖರೀದಿಗೆ ಮುಂದಾದ ಸರ್ಕಾರ

    ಲೀಟರ್‌ ಗೋಮೂತ್ರಕ್ಕೆ 4 ರೂ. – ರೈತರಿಂದ ಖರೀದಿಗೆ ಮುಂದಾದ ಸರ್ಕಾರ

    ರಾಯ್ಪುರ: ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಖರೀದಿಸಲು ಛತ್ತೀಸಗಡದ ಕಾಂಗ್ರೆಸ್‌ ಸರ್ಕಾರ ಯೋಜನೆ ರೂಪಿಸಿದೆ.

    ʼಗೋದಾನ ನ್ಯಾಯ ಯೋಜನೆʼ ಅಂಗವಾಗಿ ಪ್ರತಿ ಲೀಟರ್‌ಗೆ 4 ರೂ. ದರದಲ್ಲಿ ಗೋಮೂತ್ರ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ ಸುಸ್ಥಿರ ಗೋಸಂರಕ್ಷಣೆ ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್‌ ಭೀತಿ – ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸೂಚನೆ

    Bhupesh Baghel

    ಜುಲೈ 28 ರಂದು ನಡೆಯಲಿರುವ ‘ಹರೇಲಿ ತಿಹಾರ್’ ಹಬ್ಬದ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು. ನಮ್ಮ ಸರ್ಕಾರವು ಗೋದಾನ್‌ ನ್ಯಾಯ ಯೋಜನೆಯಡಿ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಹೇಳಿದೆ.

    ಗೋದಾನ್ ನ್ಯಾಯ ಮಿಷನ್ ನಿರ್ದೇಶಕ ಅಯ್ಯಾಜ್ ತಾಂಬೋಳಿ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ಜಿಲ್ಲಾ ಕೇಂದ್ರಗಳಲ್ಲಿರುವ ಗೋಠಾಣೆಗಳು (ಗೋಶಾಲೆ) ಗೋಮೂತ್ರ ಖರೀದಿಸಲಿವೆ. ಆಯಾ ಜಿಲ್ಲೆಯ ರೈತರು ಸಂಗ್ರಹಿಸಿ ಗೋಮೂತ್ರವನ್ನು ಈ ಗೋಠಾಣೆಗಳಿಗೆ ತಂದು ನೀಡಬೇಕು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳಿಂದ ಗೋಮೂತ್ರ ಖರೀದಿಗೆ ಕನಿಷ್ಠ ಬೆಲೆ ಲೀಟರ್‌ಗೆ 4 ರೂ.ಗೆ ಪ್ರಸ್ತಾವಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಂಗ್ರಹಿಸಿದ ಗೋಮೂತ್ರವನ್ನು ಸ್ವ-ಸಹಾಯ ಮಹಿಳಾ ಗುಂಪುಗಳ ಸಹಾಯದಿಂದ ಕೀಟ ನಿಯಂತ್ರಣ ಉತ್ಪನ್ನಗಳು ಮತ್ತು ನೈಸರ್ಗಿಕ ದ್ರವ ಗೊಬ್ಬರವನ್ನು ತಯಾರಿಸಲು ಬಳಸಲಾಗುತ್ತದೆ. ಇದರಿಂದ ಬೇಸಾಯದಲ್ಲಿ ರಸಗೊಬ್ಬರದ ವೆಚ್ಚ ಮತ್ತು ಹೊಲಗಳಲ್ಲಿ ದ್ರವ ಗೊಬ್ಬರಗಳ ಬಳಕೆ ಕಡಿಮೆಯಾಗುತ್ತದೆ. ಇದನ್ನೂ ಓದಿ: ಮುಗೀತು ರಾಷ್ಟ್ರಪತಿ ಚುನಾವಣೆ, 21ಕ್ಕೆ ಫಲಿತಾಂಶ – ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗೋದು ಖಚಿತ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವಿರುದ್ಧ ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ: ಬಿಜೆಪಿ ಶಾಸಕ

    ಕೊರೊನಾ ವಿರುದ್ಧ ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ: ಬಿಜೆಪಿ ಶಾಸಕ

    ಲಕ್ನೋ: ಕೊರೊನಾ ವಿರುದ್ಧ ನೀವು ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ತಾವು ಗೋಮೂತ್ರ ಸೇವಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

    ಬಿಜೆಪಿ ಶಾಸಕ ಗೋಮೂತ್ರ ಸೇವಿಸುವ ವೀಡಿಯೋ ಸದ್ಯ ವೈರಲ್ ಆಗಿದೆ, ಎಲ್ಲರೂ ಗೋಮೂತ್ರ ಸೇವಿಸಿ ಎಂದು ಸುರೇಂದ್ರ ಸಿಂಗ್ ಮನವಿ ಮಾಡಿದ್ದಾರೆ. ಗೋಮೂತ್ರ ಬಳಸಿ ಕೊರೊನಾ ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದರ ಮಧ್ಯೆಯೂ ನನ್ನ ಉತ್ತಮ ಆರೋಗ್ಯದ ಗುಟ್ಟು ಗೋಮೂತ್ರ ಎಂದು ಸಿಂಗ್ ಹೇಳಿದ್ದಾರೆ.

    ಅಲ್ಲದೆ ಗೋಮೂತ್ರವನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವಿಸಬೇಕು ಎಮಬುದರ ಕುರಿತು ಸಹ ಮಾಹಿತಿ ನೀಡಿರುವ ಅವರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು. ಒಂದು ಗ್ಲಾಸ್ ನೀರಿನಲ್ಲಿ ಎರಡ್ಮೂರು ಕ್ಯಾಪ್‍ನಷ್ಟು ಗೋಮೂತ್ರ ಬೆರೆಸಿ ಸೇವಿಸಬೇಕು. ಇನ್ನೊಂದು ಮುನ್ನೆಚ್ಚರಿಕೆ ನೀಡಿರುವ ಅವರು, ಗೋಮೂತ್ರ ಸೇವಿಸಿದ ಬಳಿಕ ಅರ್ಧ ಗಂಟೆ ಏನೂ ಸೇವಿಸಬಾರದು ಎಂದಿದ್ದಾರೆ.

    ನಾನು ವಿಜ್ಞಾನವನ್ನು ನಂಬುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಗೋಮೂತ್ರವನ್ನು ಸಂಪೂರ್ಣವಾಗಿ ನಂಬುತ್ತೇನೆ. ಕೊರೊನಾ ಮಹಾಮಾರಿಗೆ ಮಾತ್ರವಲ್ಲ, ಹೃದಯ ಸಂಬಂಧಿ ರೋಗ ಸೇರಿದಂತೆ ಹಲವು ಖಾಯಿಲೆಗಳಿಗೆ ಗೋಮೂತ್ರವೇ ಮದ್ದು. ಇದೇ ವೇಳೆ ಪತಂಜಲಿ ಗೋಮೂತ್ರ ಉತ್ತಮ, ಅಲ್ಲದೆ ನಿಯಮಿತವಾಗಿ ಬೇಯಿಸಿದ ಅರಿಶಿಣ ಪುಡಿ ಬಳಸುವುದರಿಂದ ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

  • ಗೋಮೂತ್ರದ ಫಿನಾಯಿಲ್‌ನಿಂದ ಕಚೇರಿ ಸ್ವಚ್ಛಗೊಳಿಸಿ -ಮಧ್ಯಪ್ರದೇಶದಲ್ಲಿ ಆದೇಶ

    ಗೋಮೂತ್ರದ ಫಿನಾಯಿಲ್‌ನಿಂದ ಕಚೇರಿ ಸ್ವಚ್ಛಗೊಳಿಸಿ -ಮಧ್ಯಪ್ರದೇಶದಲ್ಲಿ ಆದೇಶ

    ಭೋಪಾಲ್: ಗೋಮೂತ್ರದ ಫಿನಾಯಿಲ್‌ನಿಂದ ಮಾತ್ರ ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸಬೇಕೆಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

    ಮಧ್ಯಪ್ರದೇಶದ ಜನರಲ್ ಅಡ್‍ಮಿನಿಸ್ಟ್ರೇಶನ್ ಡಿಪಾರ್ಟ್‍ಮೆಂಟ್(ಜಿಎಡಿ)ಹೊರಡಿಸಿರುವ ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ರಾಸಾಯನಿಕ ಮಿಶ್ರಿತ ಫಿನಾಯಿಲ್‌ ಬದಲು ಗೋಮೂತ್ರದಿಂದ ತಾಯಾರಿಸಿದ ಫಿನಾಯಿಲ್‌ ಬಳಕೆ ಮಾಡಬೇಕೆಂದು ತಿಳಿಸಿದೆ.

    ನವೆಂಬರ್ ನಲ್ಲಿ  ನಡೆದ ಕ್ಯಾಬಿನೆಟ್‍ನಲ್ಲಿ ಹಸುವಿನ ರಕ್ಷಣೆ ಮತ್ತು ಅದರ ಕುರಿತು ಪ್ರಚಾರಕ್ಕಾಗಿ ಈ ನಿರ್ಧಾರ ಮಾಡಲಾಗಿತ್ತು.

    ಪಶುಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರೇಮ್ ಸಿಂಗ್ ಪಟೇಲ್, ಮಧ್ಯಪ್ರದೇಶದಲ್ಲಿರುವ ಗೋವುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದಾಗಿ ಗೋಮೂತ್ರಗಳನ್ನು ಬಾಟಲ್‍ಗಳಲ್ಲಿ ಸಂಗ್ರಹ ಮಾಡಿ ಫ್ಯಾಕ್ಟರಿ ತೆರೆದು ಫಿನಾಯಿಲ್‌ ತಯಾರಿಸುವ ಪ್ರಮುಖ ಗುರಿ ಹೊಂದಿದ್ದೇವೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮಧ್ಯಪ್ರದೇಶ ಸರ್ಕಾರ ಕಳೆದ ವರ್ಷ 1,80,000 ಗೋವುಗಳಿಗೆ ಆಹಾರವನ್ನು ಒದಗಿಸುವ ಸಂಬಂಧ 11 ಕೋಟಿ ಸಾವಿರ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೇ ಪ್ರಥಮ ಹಸು ಅಭಯಾರಣ್ಯವನ್ನು 2017 ರಲ್ಲಿ ಮಧ್ಯಪ್ರದೇಶದ ಆಗರ್ ಮಾಲ್ವಾದಲ್ಲಿ ಸ್ಥಾಪಿಸಿದೆ.

  • ಗೋಮೂತ್ರ ಸೇವಿಸಿದ್ರೆ ಕೊರೊನಾ ಬರಲ್ಲ – ಹರಿದಾಡುತ್ತಿದೆ ಶ್ರೀರಾಮುಲು ಟ್ವೀಟ್ ಫೋಟೋ

    ಗೋಮೂತ್ರ ಸೇವಿಸಿದ್ರೆ ಕೊರೊನಾ ಬರಲ್ಲ – ಹರಿದಾಡುತ್ತಿದೆ ಶ್ರೀರಾಮುಲು ಟ್ವೀಟ್ ಫೋಟೋ

    ಬೆಂಗಳೂರು: ಗೋಮೂತ್ರ ಸೇವಿಸೋದ್ರಿಂದ, ಸಗಣಿಯನ್ನು ದೇಹಕ್ಕೆ ಸವರಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ಬರೆದಿರುವ ಸಚಿವ ರಾಮುಲು ಖಾತೆ ಟ್ವೀಟ್ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಗಂಜಲ ಕುಡಿಯುವುದಿಂದ ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್ ತಡೆಗಟ್ಟಬಹುದು ಎಂದು ಟ್ವಿಟ್ಟರ್ ನಲ್ಲಿ ಬರೆಯಲಾಗಿದೆ.

    ಎಷ್ಟು ಗಂಟೆಗೆ ಈ ಟ್ವೀಟ್ ಪ್ರಕಟವಾಗಿದೆ ಎನ್ನುವ ವಿವರ ಇದರಲ್ಲಿ ಇಲ್ಲ. ಒಟ್ಟು 17 ಮಂದಿ ಕಮೆಂಟ್ ಮಾಡಿದ್ದರೆ 48 ಮಂದಿ ರಿಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಶ್ರೀರಾಮುಲು ತಂಡವನ್ನು ಸಂಪರ್ಕಿಸಿದರೆ ನಾವು ಟ್ವೀಟ್ ಮಾಡಿಲ್ಲ, ಸಚಿವರ ಖಾತೆ ಹ್ಯಾಕ್ ಆಗಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

    ಖಾತೆ ಹ್ಯಾಕ್ ಆಗಿದೆಯೋ ಅಥವಾ ಅಧಿಕೃತ ಖಾತೆಯನ್ನು ಬಳಸಿ ಫೋಟೋ ಎಡಿಟ್ ಮಾಡಿ ಫೋಟೋ ತಯಾರಿಸಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಿದೆ.

  • ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಹಾಲಿಗಿಂತಲೂ ಗೋಮೂತ್ರಕ್ಕೆ ಹೆಚ್ಚಾಯ್ತು ಬೇಡಿಕೆ: 1 ಲೀಟರ್ ಗೆ 30 ರೂ.

    ಜೈಪುರ: ರಾಜಸ್ಥಾನದಲ್ಲಿ ಈಗ ಗೋಮೂತ್ರದ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.

    ರಾಜಸ್ಥಾನದ ರೈತರು ಗಿರ್ ಮತ್ತು ತಾಪಾರ್ಕರ್ ಎಂಬ ಪ್ರಮುಖವಾದ ತಳಿಯ ಗೋಮೂತ್ರವನ್ನು ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಗೆ 15 ರೂ. ನಿಂದ 30 ರೂ. ನಂತೆ ಮಾರಾಟ ಮಾಡುತ್ತಿದ್ದರೆ, ಹಾಲನ್ನು 22 ರೂ. ನಿಂದ 25 ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

    2 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಜೈಪುರದ ಕೈಲೇಶ್ ಗುಜ್ಜರ್ ಪ್ರತಿಕ್ರಿಯಿಸಿ, ಗೋಮೂತ್ರ ಮಾರಾಟದಿಂದಾಗಿ ನನ್ನ ಆದಾಯ 30% ಹೆಚ್ಚಾಗಿದೆ. ಮಾರಾಟದಿಂದಾಗಿ ಈಗ ನನಗೆ ಅದೃಷ್ಟ ಬಂದಿದ್ದು, ಗೋಮೂತ್ರ ಸಂಗ್ರಹಿಸಲು ರಾತ್ರಿಯಿಡಿ ಹಸುವಿನ ಕೊಟ್ಟಿಗೆಯಲ್ಲೇ ಎಚ್ಚರವಾಗಿರಬೇಕಾಗುತ್ತದೆ. ದನ ನಮ್ಮ ತಾಯಿ, ಹಾಗಾಗಿ ರಾತ್ರಿಯಿಡಿ ಗೋಮೂತ್ರಕ್ಕಾಗಿ ಕೊಟ್ಟಿಗೆಯಲ್ಲಿ ಕಾಯುವುದು ನನಗೆ ಬೇಸರವಾಗುವುದಿಲ್ಲ ಎಂದು ಹೇಳಿದ್ದಾರೆ.

    ಓಂ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿ, ಗಿರ್ ತಳಿಯ ಹಸುವಿನ ಮೂತ್ರವನ್ನು ನಾನು ಮಾರಾಟ ಮಾಡುತ್ತಿದ್ದೇನೆ. ಲೀಟರ್ ಒಂದಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. ಇದನ್ನು ಓದಿ: ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು!

    ಬೇಡಿಕೆ ಯಾಕೆ?
    ಗೋಮೂತ್ರವನ್ನು ಹೆಚ್ಚಾಗಿ ರೈತರು ತಮ್ಮ ಕೃಷಿಯನ್ನು ಹಾಳು ಮಾಡುವ ಕೀಟಗಳನ್ನು ತಡೆಗಟ್ಟಲು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ಅಷ್ಟೇ ಅಲ್ಲದೇ ಯಜ್ಞ, ಪಂಚಗವ್ಯಗಳಲ್ಲಿ ಮತ್ತು ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಬೇಡಿಕೆ ಹೆಚ್ಚಾಗಿದೆ.

    ಉದಯಪುರದ ಸರ್ಕಾರಿ ಮಹಾರಾಣಾ ಪ್ರತಾಪ್ ಕೃಷಿ ವಿಶ್ವವಿದ್ಯಾಲಯ, ಜೈವಿಕ ಕೃಷಿ ಯೋಜನೆಗಾಗಿ ಪ್ರತಿ ತಿಂಗಳಿಗೂ 300 ರಿಂದ 500 ಲೀಟರ್ ನಷ್ಟು ಗೋಮೂತ್ರವನ್ನು ಬಳಸುತ್ತದೆ. ಪ್ರತಿ ತಿಂಗಳು 15,000-20,000 ರೂಪಾಯಿಯ ಮೌಲ್ಯದಷ್ಟು ಗೋಮೂತ್ರವನ್ನು ಖರೀದಿಸುತ್ತದೆ ಎಂದು ಉಪಕುಲಪತಿ ಉಮಾ ಶಂಕರ್ ಹೇಳಿದ್ದಾರೆ.