Tag: cow

  • ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ – ಬಾಲಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

    ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ – ಬಾಲಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

    ಚಿಕ್ಕಮಗಳೂರು: ನಗರದಲ್ಲಿ (Chikkamagaluru) ಹಸುವಿನ (Cow) ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಬಾಲಕನನ್ನು ಹಿಂದೂ ಕಾರ್ಯಕರ್ತರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

    ವಿಜಯಪುರ ಬಡಾವಣೆಯಲ್ಲಿ 16 ವರ್ಷದ ಬಾಲಕನೊಬ್ಬ ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಬಾಲಕನ ಕೃತ್ಯ ಕಂಡು ಸ್ಥಳೀಯರು ಹಾಗೂ ಹಿಂದೂ ಕಾರ್ಯಕರ್ತರು ಬಾಲಕನಿಗೆ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು

    ವಿಕೃತಿ ಮೆರೆದ ಬಾಲಕನ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನಿಗೆ ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೂ ಬಾಲಕನ ತಾಯಿ ದೂರು ನೀಡಿದ್ದಾಳೆ. ಅಪ್ರಾಪ್ತ ಬಾಲಕನ ಮನಸ್ಥಿತಿ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

    ಬಾಲಕ ಕೃತ್ಯಕ್ಕೆ ಬಳಸಿದ ಲೈಟರ್ ಹಾಗೂ ಸೆಂಟ್ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್ ಕೇಸ್ – 2 ತಿಂಗಳು ಕಳೆದರೂ 12 ಆರೋಪಿಗಳಿಗೆ ಬಿಡುಗಡೆ ಭಾಗ್ಯವಿಲ್ಲ

  • ನೆಲಮಂಗಲ | ಹಸುಗಳನ್ನು ಕೊಂದು ಎಸೆದಿದ್ದ ಮೂವರು ಆರೋಪಿಗಳು ಅರೆಸ್ಟ್

    ನೆಲಮಂಗಲ | ಹಸುಗಳನ್ನು ಕೊಂದು ಎಸೆದಿದ್ದ ಮೂವರು ಆರೋಪಿಗಳು ಅರೆಸ್ಟ್

    – ಕೇರಳಕ್ಕೆ ಹಸುಗಳನ್ನು ಸಾಗಿಸುತ್ತಿದ್ದ ಗ್ಯಾಂಗ್
    – ಮಾಂಸಕ್ಕೆ ಯೋಗ್ಯವಲ್ಲ ಅಂತ ಕೊಂದು ಎಸೆದಿದ್ದ ಪಾಪಿಗಳು

    ನೆಲಮಂಗಲ: ಹಸುಗಳ (Cow) ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಿದ್ದ ಮೂವರು ಆರೋಪಿಗಳನ್ನು ನೆಲಮಂಗಲ (Nelamangala) ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಇಮ್ರಾನ್ (30) ಸೈಯದ್ ನವಾಜ್ (35) ಗುರುತಿಸಲಾಗಿದೆ. ಮತ್ತೋರ್ವ ಆರೋಪಿಯ ಹೆಸರು ಬಹಿಂಗಪಡಿಸಿಲ್ಲ. ಆರೋಪಿಗಳು ಇತ್ತೀಚೆಗೆ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆ ಮೇಲೆ 2 ನಾಟಿ ಹಸುಗಳ ಕತ್ತು ಕೊಯ್ದು ಬಿಸಾಡಿದ್ದರು. ಈ ಪ್ರಕರಣದ ಬಗ್ಗೆ ಸದನದಲ್ಲೂ ಚರ್ಚೆ ಆಗಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳದ ಆರೋಪ – ಮಗುವಿನ ಎದುರೇ ತಾಯಿ ನೇಣಿಗೆ ಶರಣು

    ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಕೇರಳಕ್ಕೆ (Kerala) ಹಸುಗಳನ್ನ ಸಾಗಿಸುತ್ತಿದ್ದ ಗ್ಯಾಂಗ್‍ನ ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಹತ್ಯೆಯಾದ ಹಸುಗಳ ಮಾಂಸ ತಿನ್ನಲು ಯೋಗ್ಯವಲ್ಲದ ಕಾರಣ ಆರೋಪಿಗಳು ಕೊಂದು ಬಿಸಾಡಿದ್ದಾರೆ ಎಂಬುದು ತಿಳಿದು ಬಂದಿದೆ.

    ಈ ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗದಗ | ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ – ಗ್ರಾಮ ಸಹಾಯಕ ಸಾವು

  • ಚಿಕ್ಕಮಗಳೂರು |  ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

    ಚಿಕ್ಕಮಗಳೂರು | ಬ್ರೆಡ್‌ ಜೊತೆ ಮತ್ತು ಬರೋ ಔಷಧಿ ತಿನ್ನಿಸಿ ದನ ಕದ್ದೊಯ್ದ ಕಳ್ಳರು

    ಚಿಕ್ಕಮಗಳೂರು: ಬ್ರೆಡ್‌ಗೆ ಮತ್ತು ಬರೋ ಔಷಧಿ ಬೆರಸಿ ತಿನ್ನಿಸಿ, ದನಗಳನ್ನು ಕದ್ದು ಸಾಗಿಸಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಸ್ಪತ್ರೆ ಮುಂಭಾಗ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳ್ಳರು ಹಸುಗಳಿಗೆ ಬ್ರೆಡ್‌ನಲ್ಲಿ ಮತ್ತು ತರಿಸುವ ವಸ್ತು ಹಾಕಿ ತಿನ್ನಿಸಿದ್ದಾರೆ. ಬಳಿಕ ಅವು ಮಂಕಾದ ಬಳಿಕ ಅವುಗಳನ್ನು ರಿಟ್ಜ್‌ ಕಾರಿನಲ್ಲಿ ತುಂಬಿದ್ದಾರೆ. ಬಳಿಕ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನ ಭಾಗದಲ್ಲಿ ದನಗಳ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ರಸ್ತೆ ಬದಿ ಮಲಗುವ ಬಿಡಾಡಿ ದನಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿವೆ. ಇದನ್ನೂ ಓದಿ: ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ

    ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ರಾತ್ರಿ ವೇಳೆ ಪೊಲೀಸರು ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು ಎಂದು ಆಗ್ರಸಿದ್ದಾರೆ. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌

  • ಪ್ಯಾಸೆಂಜರ್‌ ಟ್ರೈನ್‌ ಡಿಕ್ಕಿ – 6 ದನಗಳ ದೇಹ ಛಿದ್ರ ಛಿದ್ರ

    ಪ್ಯಾಸೆಂಜರ್‌ ಟ್ರೈನ್‌ ಡಿಕ್ಕಿ – 6 ದನಗಳ ದೇಹ ಛಿದ್ರ ಛಿದ್ರ

    ಬಾಗಲಕೋಟೆ: ರೈಲಿಗೆ ಸಿಲುಕಿ 6 ದನಗಳು (Cow) ಮೃತಪಟ್ಟ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ನಿಲ್ದಾಣದ ಸಮೀಪ ಗುಡ್ಡದ ತಿರುವಿನಲ್ಲಿ ನಡೆದಿದೆ.

    ರೈಲು ಹಳಿಯ ಮೇಲೆ ಆರು ದನಗಳು ತೆರಳುತ್ತಿದ್ದವು. ಈ ವೇಳೆ ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು (Passenger Train) ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಡಿಕ್ಕಿಯ ರಭಸಕ್ಕೆ 6 ದನಗಳ ದೇಹಗಳು ಛಿದ್ರಛಿದ್ರವಾಗಿ ಹಳಿಯಲ್ಲಿ ಬಿದ್ದಿದೆ. ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

  • ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

    ಹಸುವಿನ ಕೆಚ್ಚಲು ಕೊಯ್ದು ಹೀನ ಕೃತ್ಯ – ಜಮೀನಿನಲ್ಲೇ ನರಳಿ ಪ್ರಾಣ ಬಿಟ್ಟ ಹಸು

    – ಹಳೇ ವೈಷಮ್ಯಕ್ಕೆ ಕೃತ್ಯ ಎಸಗಿರೋ ಶಂಕೆ

    ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ (Chamarajpet) ಹಸುವಿನ (Cow) ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ಸೂಲಿವಾರ ಗ್ರಾಮದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.

    ತನ್ನ ಜಮೀನಿನಲ್ಲಿ ಹಸು ಮೇಯಲು ಬಂದಿದೆ ಅನ್ನೋ ಕಾರಣಕ್ಕೆ ಹಳೆಯ ದ್ವೇಷದಿಂದ ಗುರುಸಿದ್ದಪ್ಪ ಅನ್ನೋರು ಸುವಿನ ಕೆಚ್ಚಲು ಕತ್ತರಿಸಿದ್ದಾರೆ ಅನ್ನೋ ಅನುಮಾನವಿದೆ. ಅವ್ರೇ ಈ ಕೃತ್ಯವನ್ನ ಮಾಡಿರಬಹುದು ಅಂತ ಹಸುವಿನ ಮಾಲೀಕ ಮರಿ ಬಸವಯ್ಯ ಆರೋಪಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಹಸು ನಿನ್ನೆ ಜಮೀನಿನಲ್ಲೇ ಮೃತಪಟ್ಟಿದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    ಮರಿ ಬಸವಯ್ಯ ಹಾಗೂ ಗುರು ಸಿದ್ದಪ್ಪ ಅವ್ರ ಜಮೀನುಗಳು ಅಕ್ಕಪಕ್ಕದಲ್ಲೇ ಇವೆ. ಹಲವು ವರ್ಷಗಳಿಂದ ಇವರಿಬ್ಬರ ನಡ್ವೆ ಹಳೆಯ ದ್ವೇಷ ಇತ್ತಂತೆ. ಮರಿ ಬಸವಯ್ಯ, ಸೂಲಿವಾರ ಗ್ರಾಮದ ಹಾಲು ಉತ್ಪಾದಕ ಸಂಘದ ಅಧ್ಯಕ್ಷನಾಗಿದ್ದನಂತೆ. ಒಂದು ತಿಂಗಳ ಹಿಂದೆ ನಡೆದ KMF ಚುನಾವಣೆಗೆ ಹನುಮಂತಯ್ಯ ಅನ್ನೋ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದ್ರು. ಅವ್ರ ಆಪ್ತನೇ ಈ ಗುರುಸಿದ್ದಪ್ಪ. ಹನುಮಂತಯ್ಯನವ್ರಿಗೆ ಮತ ಹಾಕಿಲ್ಲ ಅನ್ನೋ ದ್ವೇಷದಿಂದಲೂ ಈ ಕೃತ್ಯ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಏನೇ ಸಿಟ್ಟು, ಕೋಪ ಇದ್ರೂ ನಮ್ಮ ಜೊತೆ ಮಾತನಾಡಬೇಕು ಹೊರತು, ಹಸುವನ್ನ ಸಾಯಿಸೋದಲ್ಲ ಅಂತ ಮರಿ ಬಸವಯ್ಯ ಅವ್ರ ಪತ್ನಿ ಭಾಗ್ಯಮ್ಮ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವನ್ನ ಯಾರು ನಡೆಸಿದ್ರೂ, ಯಾರ ಮೇಲೆ ಅನುಮಾನವಿದೆ ಅಂತ ಮರಿ ಬಸವಯ್ಯನವ್ರಿಂದ ಮಾಹಿತಿಯನ್ನ ಪಡೆದಿದ್ದಾರೆ. ಮರಿ ಬಸವಯ್ಯನವ್ರ ಜಮೀನಿನಲ್ಲಿಯೇ ಹಸುವಿನ ಅಂತ್ಯ ಸಂಸ್ಕಾರ ಮಾಡಲಾಗಿದೆ. ದೂರು ದಾಖಲಿಸಿಕೊಂಡಿರೋ ಪೊಲೀಸರು, ಈ ಕೃತ್ಯವೆಸಗಿದವ್ರ ವಿರುದ್ಧ ಏನ್ ಕ್ರಮ ಕೈಗೊಳ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: `ಮನಿ’ ಕೊಟ್ಟರಷ್ಟೇ ಸರ್ಕಾರಿ `ಮನೆ’ – ಜಮೀರ್‌ಗೆ ಗೊತ್ತಿಲ್ಲ ಅಂದ್ರೆ ತನಿಖೆ ಮಾಡಿಸಲಿ: ಬಿ.ಆರ್ ಪಾಟೀಲ್ ಬಾಂಬ್‌

  • ಸರ್ಕಾರಿ ಕಚೇರಿಗಳಿಗೆ ಸಗಣಿ ಲೇಪಿಸಿ – ಯೋಗಿ ಆದಿತ್ಯನಾಥ್ ಸೂಚನೆ

    ಸರ್ಕಾರಿ ಕಚೇರಿಗಳಿಗೆ ಸಗಣಿ ಲೇಪಿಸಿ – ಯೋಗಿ ಆದಿತ್ಯನಾಥ್ ಸೂಚನೆ

    ಲಕ್ನೋ: ಹೈನುಗಾರಿಕಾ ವಲಯ ಅಭಿವೃದ್ಧಿಗಾಗಿ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಎಲ್ಲಾ ಸರ್ಕಾರಿ ಕಟ್ಟಡದ ಗೋಡೆಗಳಿಗೆ ಹಸು ಸಗಣಿ ಲೇಪಿಸಲು ಸೂಚನೆ ನೀಡಿದ್ದಾರೆ. ಸದ್ಯ ಇದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

    ಯೋಗಿ ಆದಿತ್ಯನಾಥ್ ಆದೇಶದ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಟೀಕೆ ಮಾಡಿದ್ದಾರೆ. ಗೋಬರ್‍ನಾಮ್ ಬಿಜೆಪಿ ಸರ್ಕಾರದ ಹೊಸ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. ಅಖಿಲೇಶ್ ಯಾದವ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ಗೋಮಯ ಮತ್ತು ಜಾನುವಾರುಗಳ (Cow) ಬಗ್ಗೆ ದ್ವೇಷವಿದೆ ಎಂದು ಟೀಕಿಸಿದ್ದಾರೆ.

    ಉತ್ತರ ಪ್ರದೇಶದಾದ್ಯಂತ ಸುಮಾರು 7,693 ಗೋಶಾಲೆಗಳಲ್ಲಿ ಇರಿಸಲಾಗಿರುವ 12 ಲಕ್ಷಕ್ಕೂ ಹೆಚ್ಚು ಬಿಡಾಡಿ ದನಗಳಿಂದ ಪ್ರತಿದಿನ ಬೃಹತ್ ಪ್ರಮಾಣದ ಹಸುವಿನ ಸಗಣಿ ಮತ್ತು ಮೂತ್ರ ದೊರೆಯುತ್ತದೆ. ಇದರಿಂದಾಗಿ ಗೋಶಾಲೆಗಳು ಸ್ವಾವಲಂಬಿಯಾಗಲು ಸಹಾಯ ಮಾಡಿದಂತಾಗುತ್ತದೆ. ನೈಸರ್ಗಿಕ ಸಂಪನ್ಮೂಲವನ್ನು ಬಳಸಲು ಹೆಚ್ಚಿನ ಮತ್ತು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

    ಉತ್ತರ ಪ್ರದೇಶ ಸರ್ಕಾರವು ಬಿಡಾಡಿ ದನಗಳ ಮೇವಿಗೆ ವಾರ್ಷಿಕವಾಗಿ 2,000 ಕೋಟಿ ರೂ. ಹಣ ಖರ್ಚು ಮಾಡುತ್ತದೆ.

  • ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

    ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

    – ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಘಟನೆ ಬೆಳಕಿಗೆ

    ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆಗೈದು ಮಾಂಸ ಸಾಗಾಟ ಮಾಡಿ ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ (Bhatkal) ಬಳಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ನಡೆದಿದೆ.ಇದನ್ನೂ ಓದಿ: ರಾಯಚೂರು | ಭೀಕರ ಅಪಘಾತಕ್ಕೆ ನಾಲ್ವರು ಬಲಿ

    ಮಾಂಸಕ್ಕಾಗಿ ದನವನ್ನು ವಧೆ ಮಾಡಿ ಕರುವಿನ ಭ್ರೂಣ ಹಾಗೂ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಘಟನೆ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಹೊನ್ನಾವರದಲ್ಲಿ ಇಂತದ್ದೇ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಹಿಡಿದು ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದರು. ಆ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಸಿಇಟಿ ಪರೀಕ್ಷೆಯಲ್ಲಿ ಅಮಾನವೀಯ ಘಟನೆ – ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ!

  • ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

    ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

    ಹಾಸನ: ಹಿಂದೂ ಸಂಪ್ರದಾಯದಲ್ಲಿ ತುಂಬು ಗರ್ಭಿಣಿಯರಿಗೆ ಇಷ್ಟವಾದ ಅಡುಗೆ ಸಿದ್ಧಪಡಿಸಿ ಸೀಮಂತ ಶಾಸ್ತ್ರ ಮಾಡುವ ವಾಡಿಕೆ ಇದೆ. ಅದೇ ರೀತಿ ಹಾಸನದ (Hassan) ವ್ಯಕ್ತಿಯೊಬ್ಬರು ನವಮಾಸ ತುಂಬಿದ ಹಳ್ಳಿಕಾರ್ (Hallikar) ತಳಿಯ ಹಸುವಿಗೆ (Cow) ಕಲ್ಯಾಣಮಂಟಪದಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ವಿಶೇಷ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

    ಉದ್ಯಮಿ ದಿನೇಶ್ ಎಂಬವರು ಗರ್ಭಿಣಿಯರಿಗೆ ಮಾಡುವ ಶಾಸ್ತ್ರದ ರೀತಿಯಲ್ಲಿಯೇ ಹಸುವಿಗೂ ಶಾಸ್ತ್ರ ಮಾಡಿ, ನೂರಾರು ಮಂದಿಗೆ ಭರ್ಜರಿ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ. ಸಾಕು ಪ್ರಾಣಿಗಳು, ಅದರಲ್ಲೂ ಜಾನುವಾರುಗಳೆಂದರೆ ದಿನೇಶ್‌ ಅವರಿಗೆ ಬಲು ಪ್ರೀತಿ. ಅದರಲ್ಲೂ ದೇಸಿಯ ಹಳ್ಳಿಕಾರ್ ತಳಿಯ ಹಸು, ಎತ್ತುಗಳನ್ನು ಸಾಕುವುದರಲ್ಲಿ ಇವರು ಎತ್ತಿದ ಕೈ. ಈ ಹಂಬಲದಿಂದಲೇ ಬೆಂಗಳೂರಿನ ಬಿಡದಿ ಬಳಿಯ ಹಳ್ಳಿಯಿಂದ ನಾಲ್ಕು ತಿಂಗಳ ಹಳ್ಳಿಕಾರ್ ತಳಿಯ ಹೆಣ್ಣು ಕರುವನ್ನು ತಂದು ಅದಕ್ಕೆ ಗೌರಿ ಎಂದು ನಾಮಕರಣ ಮಾಡಿ ಸಾಕಿ ಸಲಹಿದ್ದಾರೆ. ಇನ್ನೊಂದು ವಾರದಲ್ಲಿ ಗೌರಿ ಕರುವಿಗೆ ಜನ್ಮ ನೀಡಲಿದೆ. ಅದಕ್ಕೂ ಮುಂಚೆ ದಿನೇಶ್ ಹಾಗೂ ಕುಟುಂಬದವರು, ಹಸುವಿಗೆ ಸೀಮಂತ ಶಾಸ್ತ್ರ ಮಾಡುವ ರೀತಿಯಲ್ಲಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಇಂದು ಅದ್ಧೂರಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

    ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಗೌರಿ ಹಸುವಿಗೆ ಅಲಂಕಾರ ಮಾಡಿ, ಹೂವು ಮುಡಿಸಿ, ವೀಳ್ಯೆದೆಲೆ, ಹಸಿರು ಬಳೆ, ಅಕ್ಷತೆ, ಬೆಲ್ಲ, ಕೊಬ್ಬರಿ, ಹಣ್ಣುಗಳನ್ನಿಟ್ಟಿದ್ದು, ಹಸುವಿಗೆ ಆರತಿ ಬೆಳಗಿ ಹಣ್ಣು ನೀಡಿದರು. ಸೀಮಂತ ಶಾಸ್ತ್ರದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಅಪರೂಪದ ಸೀಮಂತ ಶಾಸ್ತ್ರವನ್ನು ಕಣ್ತುಂಬಿಕೊಂಡು ಗೌರಿಗೆ ಹಾರೈಸಿದರು. ಬಂದಿದ್ದ ಎಲ್ಲರಿಗೂ ಭರ್ಜರಿ ಔತಣಕೂಟ ಏರ್ಪಡಿಸಿದ್ದು, ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದವರು ಭರ್ಜರಿ ಊಟ ಸವಿದು ತೆರಳಿದದ್ದಾರೆ.

    ಈ ಬಗ್ಗೆ ಮಾತಾಡಿದ ದಿನೇಶ್‌, ಹಳ್ಳಿಕಾರ್ ತಳಿ ನಮ್ಮ ದೇಸಿಯ ತಳಿಯಾಗಿದ್ದು, ಇದನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ರೈತರು ಹಾಗೂ ಜಾನುವಾರು ಪ್ರಿಯರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದಿದ್ದಾರೆ.

    ಒಟ್ಟಿನಲ್ಲಿ ಹಳ್ಳಿಕಾರ್ ತಳಿ ಉಳಿಸಿ, ಬೆಳೆಸಬೇಕು ಎಂಬ ಕೂಗಿನ ನಡುವೆ ದಿನೇಶ್ ಅವರು ಒಡಲು ತುಂಬಿಕೊಂಡ ಹಸುವಿಗೆ ಸೀಮಂತ ಶಾಸ್ತ್ರ ಮಾಡಿದ್ದು ಒಂದು ಮಾದರಿಯಾಗಿದೆ.

  • ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿ ಮಾಂಸ ಕದ್ದೊಯ್ದಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಹೊನ್ನಾವರ (Honnavara) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವಿನ ವಧೆ ಮಾಡಿ, ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಹೊತ್ತೊಯ್ದಿದ್ದ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋವನ್ನು ಹತ್ಯೆ ನಡೆದಿತ್ತು. ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

  • ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಗುವಾಹಟಿ: ಅಸ್ಸಾಂನಲ್ಲಿ ಸಾರ್ವಜನಿಕವಾಗಿ ಹಸುವನ್ನು ಕೊಂದು ನಂತರ ಅದರ ಮಾಂಸವನ್ನು ತಿಂದ ಪ್ರಕರಣದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ 19 ವಯಸ್ಸಿನ ಹುಡುಗ ಕೂಡ ಇದ್ದಾನೆ.

    ಸಾರ್ವಜನಿಕ ಸ್ಥಳದಲ್ಲೇ ಹಸು ಕೊಂದ ಕೃತ್ಯದ ವೀಡಿಯೋ ವೈರಲ್ ಆಗಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ತಿಳಿಸಿದ್ದಾರೆ.

    ಆರೋಪಿಗಳನ್ನು ಸಾಹಿಲ್ ಖಾನ್ (20), ಹಫೀಜುರ್ ಇಸ್ಲಾಂ (19), ರೋಕಿಬುಲ್ ಹುಸೇನ್ (20), ಸಾಹಿದುಲ್ ಇಸ್ಲಾಂ (30), ಇಜಾಜ್ ಖಾನ್ (26), ಜಹಿದುಲ್ ಇಸ್ಲಾಂ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ರಾಜ್ಯದ ಕಾಮರೂಪ ಜಿಲ್ಲೆಯ ಅಸಲ್ಪಾರ ಗ್ರಾಮದ ನಿವಾಸಿಗಳು.

    ವೀಡಿಯೋದಲ್ಲಿ, ಆರೋಪಿಗಳು ದೊಡ್ಡ ಚಾಕುಗಳನ್ನು ಹರಿತಗೊಳಿಸುವುದು, ಅಡುಗೆ ಪಾತ್ರೆಗಳನ್ನು ಹೊತ್ತುಕೊಂಡು ದೋಣಿಗೆ ಹಸುವನ್ನು ಹತ್ತಿಸಿಕೊಳ್ಳುವುದನ್ನು ಕಾಣಬಹುದು. ಆ ವೀಡಿಯೋದ ಇನ್ನೊಂದು ಭಾಗದಲ್ಲಿ, ಅವರು ಪ್ರಾಣಿಯನ್ನು ಕತ್ತರಿಸಿ ನಂತರ ಅಡುಗೆ ಮಾಡುವುದನ್ನು ತೋರಿಸಲಾಗಿದೆ.

    ಈ ವೀಡಿಯೋ, ಗೋವುಗಳನ್ನು ಪವಿತ್ರವೆಂದು ಪರಿಗಣಿಸುವ ಹಿಂದೂ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. 2021 ರ ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆಯಡಿ, ರಾಜ್ಯದಲ್ಲಿ ಅಕ್ರಮ ವಧೆ ಮತ್ತು ಜಾನುವಾರು ವ್ಯಾಪಾರವನ್ನು ನಿಷೇಧಿಸಲಾಗಿದೆ.