Tag: covud 19

  • ದೇಶದಲ್ಲಿ 54 ಲಕ್ಷ ದಾಟಿದ ಸೋಂಕಿತರ ಸಂಖ್ಯೆ- ಒಂದೇ ದಿನ 1,130 ಮಂದಿ ಕೊರೊನಾಗೆ ಬಲಿ

    ದೇಶದಲ್ಲಿ 54 ಲಕ್ಷ ದಾಟಿದ ಸೋಂಕಿತರ ಸಂಖ್ಯೆ- ಒಂದೇ ದಿನ 1,130 ಮಂದಿ ಕೊರೊನಾಗೆ ಬಲಿ

    ನವದೆಹಲಿ: ದೇಶದಲ್ಲಿ ಮಹಾಮಾಹರಿ ಚೀನಿ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 54 ಲಕ್ಷದ ಗಡಿ ದಾಟಿದೆ.

    ಕಳೆದ 24 ಗಂಟೆಯಲ್ಲಿ 86,961 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೊಂಕಿತರ ಸಂಖ್ಯೆ 54,87,581ಕ್ಕೆ ಏರಿಕೆಯಾಗಿದೆ. ಒಂದೇ ದಿನ 1,130 ಮಂದಿ ಕೊರೊನಾ ವೈರಸ್ ಗೆ ತುತ್ತಾಗಿದ್ದು, ಇದೂವರೆಗೂ 87,882 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

    54,87,581 ಸೋಂಕಿತರ ಪೈಕಿ 10,03,299 ಸಕ್ರಿಯ ಪ್ರಕರಣಗಳಿದ್ದು, 43,96,399 ಮಂದಿ ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

    ದೇಶದಲ್ಲಿ ನಿನ್ನೆ ಒಂದೇ ದಿನ 7,31,534 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 6,43,92,594 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

  • ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    – ಯುವತಿಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ

    ಪುಣೆ: ಮಹಾಮಾರಿ ಕೊರೊನಾ ವೈರಸ್ ಗೆದ್ದವರ ಮೇಲೆ ಹೂಮಳೆ ಸುರಿಸಿ ಆತ್ಮೀಯವಾಗಿ ಸ್ವಾಗತಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ಚೀನಿ ವೈರಸ್ ಗೆದ್ದು ಬಂದ ತನ್ನ ಸಹೋದರಿಯನ್ನು ವಿಭಿನ್ನವಾಗಿ ಸ್ವಾಗತಿಸುವ ಮೂಲಕ ಸಖತ್ ಸುದ್ದಿಯಾಗಿದ್ದಾಳೆ.

    ಹೌದು. ಪುಣೆ ಮೂಲದ ಸಲೋನಿ ಸತ್ಪೂಟ್ ಎಂಬ ಯುವತಿ ತನ್ನ ಸಹೋದರಿಯನ್ನು ಹಿಂದಿಯ ಚಿಲ್ಲರ್ ಪಾರ್ಟಿ ಸಿನಿಮಾದ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ್ದಾಳೆ. ಯುವತಿ ಡ್ಯಾನ್ಸ್ ಮಾಡುವ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ತನ್ನ ಸಹೋದರಿ ಚೀನೀ ವೈರಸ್ ಕೋವಿಡ್ 19 ನಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗುತ್ತಿದ್ದಾರೆ. ಈ ವೇಳೆ ಸಲೋನಿ ಸಖತ್ ಸ್ಟೆಪ್ಸ್ ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಗುಣಮುಖರಾದವರು ಕೂಡ ಸಲೋನಿಗೆ ಸಾಥ್ ನೀಡಿದ್ದು, ಇಬ್ಬರೂ ಸಖತ್ತಾಗಿ ಡ್ಯಾನ್ಸ್ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತೀಚೆಗೆ ಸಲೋನಿಯನ್ನು ಬಿಟ್ಟು ಆಕೆಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು. ಮೊದಲು ಸಲೋನಿ ತಂದೆಗೆ ಕೊರೊನಾ ಪಾಸಟಿವ್ ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಬಳಿಕ ಮನೆಯವರನ್ನು ಟೆಸ್ಟ್ ಗೆ ಕರೆದೊಯ್ಯಲಾಯಿತು. ಈ ವೇಳೆ ಮನೆಯ ನಾಲ್ವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಲಾಯಿತು. ಇತ್ತ ಸಲೋನಿ ವರದಿ ಮಾತ್ರ ನೆಗೆಟಿವ್ ಎಂದು ಬಂದಿದ್ದು, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು.

    ಈ ಮಧ್ಯೆ ಮೊದಲು ಸಲೋನಿ ತಂದೆ-ತಾಯಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದು, ಆ ನಂತರ ಕೆಲ ದಿನಗಳ ಬಳಿಕ ಸಹೋದರಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಹೋದರಿ ಮನೆಗೆ ಪಾಸ್ಸಾಗುತ್ತಿದ್ದಂತೆಯೇ ಸಲೋನಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡಳು.

    ಸದ್ಯ ಸಲೋನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈಕೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ತನ್ನ ಸಹೋದರಿಯ ಮೇಲೆ ಆಕೆಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾಳೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.