– ಭಾರತ ತೊರೆದು ಲಂಡನ್ ಸೇರಿದ ಆದಾರ್ ಪೂನಾವಾಲಾ – ಪವರ್ ಫುಲ್ ಜನರಿಂದಲೇ ಬೆದರಿಕೆ, ಒತ್ತಡ
ನವದೆಹಲಿ: ಬೆದರಿಕೆ ಬಂದ ಹಿನ್ನೆಲೆ ಕೋವಿಶೀಲ್ಡ್ ಲಸಿಕೆ ತಯಾರಿಕಾ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ಭಾರರ ತೊರೆದು ಲಂಡನ್ ಸೇರಿದ್ದಾರೆ. ಇದು ದೀರ್ಘ ಸಮಯದ ಪ್ರವಾಸ ಆಗಿದ್ದು, ಇಂತಹ ಸ್ಥಿತಿಯಲ್ಲಿ ಇರಲಾರೆ ಎಂದು ಪೂನಾವಾಲಾ ಹೇಳಿಕೊಂಡಿದ್ದಾರೆ.
ನಾನು ಲಂಡನ್ ನಲ್ಲಿ ಹೆಚ್ಚು ದಿನಗಳನ್ನ ಕಳೆಯಲಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಭಾರತದಲ್ಲಿ ಇರಲು ಸಾಧ್ಯವಿಲ್ಲ. ಎಲ್ಲ ಜವಾಬ್ದಾರಿಗಳನ್ನು ನನ್ನ ಹೆಗಲ ಮೇಲೆ ಹಾಕಲಾಗುತ್ತಿದೆ. ಇದೆಲ್ಲವನ್ನು ನನ್ನ ಒಬ್ಬನಿಂದ ನಿಭಾಯಿಸಲು ಆಗಲಾರದು. ನನ್ನ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ಕೆಲವು ಸಮಯಗಳಿಂದ ಪ್ರಭಾವಿ ಜನರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪೂನಾವಾಲಾ ಹೇಳಿಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಪೂನಾವಾಲಾಗೆ ಭದ್ರತೆ ಕೋರಿ ಸಿರಂ ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16 ರಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ಸಹ ಪೂನಾವಾಲಾ ಅವರಿಗೆ ವೈ ದರ್ಜೆ ಭದ್ರತೆ ಒದಗಿಸಿತ್ತು.
ಪುಣೆ: ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿದ ಸೀರಂ ಇನ್‍ಸ್ಟಿಟ್ಯೂಟ್ ಕೋವಿಶೀಲ್ಡ್ ದರವನ್ನು ಇಳಿಕೆ ಮಾಡಿದೆ. ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ಕೋವಿಶೀಲ್ಡ್ ಲಸಿಕೆಗೆ ಈ ಹಿಂದೆ 400 ರೂಪಾಯಿ ನಿಗದಿಯಾಗಿತ್ತು. ಇದೀಗ 100 ರೂಪಾಯಿ ಕಡಿತ ಮಾಡಿ 300 ರೂಪಾಯಿ ದರ ನಿಗದಿ ಪಡಿಸಿದೆ. ಇದರೊಂದಿಗೆ ಕೋವ್ಯಾಕ್ಸಿನ್ ದರವೂ ಇಳಿಕೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ, ರಾಜ್ಯದಲ್ಲಿ ಸೋಂಕು ಹೆಚ್ಚಾದಂತೆ ವ್ಯಾಕ್ಸಿನ್‍ಗೆ ಬೇಡಿಕೆ ಹೆಚ್ಚಾಗಿದೆ. ಜನತೆ ವ್ಯಾಕ್ಸಿನ್ ಪಡೆಯಲು ಮುಗಿಬೀಳುತ್ತಿದ್ದಾರೆ.
As a philanthropic gesture on behalf of @SerumInstIndia, I hereby reduce the price to the states from Rs.400 to Rs.300 per dose, effective immediately; this will save thousands of crores of state funds going forward. This will enable more vaccinations and save countless lives.
ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಸೀರಂ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ, ಲೋಕೋಪಾಕಾರಿಯಾಗಿ ಗುರುತಿಸಿ ಕೊಂಡಿರುವ ಸೀರಂ ಇನ್‍ಸ್ಟಿಟ್ಯೂಟ್ ಲಸಿಕೆಯ ದರವನ್ನು ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ರಾಜ್ಯಗಳ ಹಣ ಉಳಿಕೆಯಾಲಿದೆ. ಹಾಗೆ ಹೆಚ್ಚು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹ ಸಿಗಲಿದೆ ಮತ್ತು ಹಲವು ಜನರ ಪ್ರಾಣ ಉಳಿಯಲಿದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಪ್ರಮುಖ ಅಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೋಲ್ಡ್ ಲಸಿಕೆಯನ್ನು ಅಭಿವೃದ್ದಿ ಪಡಿಸಿದ್ದು, ಈಗಾಗಲೇ ಸಾವಿರಾರು ಜನ ಲಸಿಕೆಯನ್ನು ಪಡೆದಿದ್ದಾರೆ. ಹಾಗೆ ಬೇರೆ ಬೇರೆ ದೇಶಗಳಿಗೆ ವ್ಯಾಕ್ಸಿನ್‍ನ್ನು ಕಳುಹಿಸಿ ಕೊಡಲಾಗಿದೆ.
ಇದೀಗ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವ್ಯಾಕ್ಸಿನ್ ಪಡೆಯಲು ಕೋವಿನ್ ಆ್ಯಪ್ ಮೂಲಕ ನೋಂದಣಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಹೈದರಾಬಾದ್: ದೇಶಾದ್ಯಂತ ಕೊರೊನಾ 2ನೇ ಅಲೆ ತಾಂಡವಾಡುತ್ತಿದ್ದು, ಹತೋಟಿಗೆ ತರಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸಿವೆ. ಇದರ ಭಾಗವಾಗಿ ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಹೀಗಿರುವಾಗಲೇ ದೇಶೀಯ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ ದರ ನಿಗದಿಪಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ. ದರ ನಿಗದಿಪಡಿಸಲಾಗಿದೆ.
ಈ ಕುರಿತು ಹೈದರಾಬಾದ್ ಮೂಲದ ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಅಧಿಕೃತ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ 600 ರೂ., ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಕೋವ್ಯಾಕ್ಸಿನ್ ಬೆಲೆಯನ್ನು 1,200 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರಕ್ಕೂ ಸಂಸ್ಥೆ ಲಸಿಕೆಯನ್ನು ಒದಗಿಸಲಿದೆ.
ಈ ಹಿಂದೆ ಸೀರಂ ಸಂಸ್ಥೆ ಖಾಸಗಿ ಆಸ್ಪತ್ರೆ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವ ಕೊರೊನಾ ಲಸಿಕೆ ಕೋವಿಶೀಲ್ಡ್ ಬೆಲೆಯನ್ನ ಘೋಷಣೆ ಮಾಡಿಕೊಂಡಿತ್ತು. ಪ್ರತಿ ಡೋಸ್‍ಗೆ ರಾಜ್ಯ ಸರ್ಕಾರಕ್ಕೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ನಿಗದಿ ಮಾಡಿತ್ತು. ವ್ಯಾಕ್ಸಿನ್ ಅಭಿಯಾನದ ನೂತನ ಹಂತದಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ನೇರವಾಗಿ ಲಸಿಕೆಯನ್ನ ಉತ್ಪಾದಕರಿಂದ ಖರೀದಿಸಲು ಅನುಮತಿ ಕಲ್ಪಿಸಲಾಗಿತ್ತು. ಇದೀಗ ಕೋವ್ಯಾಕ್ಸಿನ್ ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ.
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡುತ್ತಿದೆ. ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಸಹ ಭರದಿಂದ ಸಾಗುತ್ತಿದೆ. ಈ ನಡುವೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನ 28 ದಿನದಿಂದ ಎರಡು ತಿಂಗಳಿಗೆ ಹೆಚ್ಚಿಸಲಾಗಿದೆ.
ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನ 6 ರಿಂದ 8 ವಾರಗಳಿಗೆ ಹೆಚ್ಚಿಸಲಾಗಿದೆ. ಸದ್ಯ 28 ದಿನಕ್ಕೆ ಎರಡನೇ ಡೋಸ್ ನೀಡಲಾಗುತ್ತಿದೆ. ತಜ್ಞರ ಸಲಹೆ ಮೇರೆಗೆ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ನೀಡುವ ನಡುವಿನ ಅವಧಿಯನ್ನ ಹೆಚ್ಚಿಸಲಾಗಿದೆ ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
ಎನ್‍ಟಿಎಜಿಐ ಮತ್ತು ವ್ಯಾಕ್ಸಿನೇಷನ್ ಎಕ್ಸಪರ್ಟ್ ಗ್ರೂಪ್ ರಿಸರ್ಚ್ ಪ್ರಕಾರ ಡೋಸ್ ಗಳ ನಡುವಿನ ಅಂತರ ಹೆಚ್ಚಿಸುವದರಿಂದ ಹೆಚ್ಚು ಲಾಭದಾಯಕವಾಗಿರಲಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ತಜ್ಞರ ತಂಡ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ವರದಿಯಾಗಿದೆ.
In view of emerging scientific evidence, interval between two doses of a specific COVID-19 vaccine i.e. COVISHIELD, has been revisited by National Technical Advisory Group on Immunization& subsequently by National Expert Group on Vaccine Administration for COVID-19: Govt of India
ಮಹಾರಾಷ್ಟ್ರದ ಪುಣೆಯ ಸೇರಂ ಇನ್ಸಿಟ್ಯೂಟ್ ನಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಆಗುತ್ತಿದೆ. ಜನವರಿ 16ರಿಂದ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿತ್ತು. ಎರಡನೇ ಡೋಸ್ ಮಾರ್ಚ್ 1ರಿಂದ ಆರಂಭಿಸಲಾಗಿತ್ತು.
ನವದೆಹಲಿ: ಕೊವಿಶೀಲ್ಡ್ ಬೆನ್ನಲ್ಲೇ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆ ವಿತರಣೆ ಪ್ರಾರಂಭಗೊಂಡಿದೆ.
ಇನ್ನೂ ಮೂರನೇ ಹಂತದ ಪ್ರಯೋಗದಲ್ಲಿರುವ ಕೋವಾಕ್ಸಿನ್ ಬಗ್ಗೆ ಸಾಕಷ್ಟು ಸಂದೇಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಬಯೋಟೆಕ್ ಸಂಸ್ಥೆ ಮಹತ್ವದ ಹೇಳಿಕೆ ನೀಡಿದೆ. ತಮ್ಮ ಸಂಸ್ಥೆಯ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮ ಉಂಟಾಗಿದೆ ಎಂದು ಸಾಬೀತುಪಡಿಸಿದ್ರೆ ನಷ್ಟ ಪರಿಹಾರ ಕಲ್ಪಿಸುತ್ತೇವೆ ಎಂದು ಪ್ರಕಟಣೆ ಹೊರಡಿಸಿದೆ.
ಕೋವಾಕ್ಸಿನ್ 3ನೇ ಹಂತದ ಪ್ರಯೋಗದಲ್ಲಿರುವುದರಿಂದ ಈ ಲಸಿಕೆ ಪಡೆದುಕೊಳ್ಳುವವರಿಂದ ಭಾರತ ಬಯೋಟೆಕ್ ಸಂಸ್ಥೆ ಸಮ್ಮತಿ ಪತ್ರಕ್ಕೆ ಸಹಿಪಡೆದುಕೊಳ್ಳುತ್ತಿದೆ. ಈ ಪತ್ರದಲ್ಲಿ ಸಂಸ್ಥೆ ಹಲವು ಪ್ರಮುಖ ಅಂಶಗಳನ್ನು ವಿವರಿಸಿದೆ. ಕೋವಾಕ್ಸಿನ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಕೋವಿಡ್ ವಿರುದ್ಧ ಹೋರಾಡಲು ಈ ಲಸಿಕೆ ವ್ಯಕ್ತಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬುದನ್ನು ಮೊದಲ 2 ಪ್ರಯೋಗಗಳಲ್ಲಿ ಸಾಬೀತಾಗಿದೆ.
ಪ್ರಸ್ತುತ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಕೋವಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಂಡುಬಂದರೆ ನಾವು ಪರಿಹಾರ ನೀಡುವ ಜೊತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸುತ್ತೇವೆ ಎಂದು ವಾಗ್ದಾನ ನೀಡಿದೆ.
ಮುಂಬೈ: ಸೆರಮ್ ಇನ್ಸ್ ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲ ಸ್ವತಃ ಲಸಿಕೆ ಪಡೆಯುವ ಮೂಲಕ ಕೊವಿಶೀಲ್ಡ್ ಲಸಿಕೆಯ ಸುರಕ್ಷತೆ ಅನುಮೋದಿಸಿದ್ದಾರೆ. ಪ್ರಧಾನಿ ಮೋದಿ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದ ನಂತರ ಪೂನಾವಾಲ ಲಸಿಕೆ ಪಡೆದುಕೊಂಡರು.
ಆದರ್ ಪೂನಾವಾಲ ಅವರ ಕಂಪನಿ ಸೆರಮ್ ಸಂಸ್ಥೆ, ಬ್ರಿಟನ್‍ನ ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜೆನಿಕಾ ಜೊತೆ ಕೈ ಜೋಡಿಸಿ ಪುಣೆಯಲ್ಲಿ ಕೊವಿಶೀಲ್ಡ್ ಲಸಿಕೆಯನ್ನು ಸಿದ್ಧಪಡಿಸಿದೆ. ಒಬ್ಬ ವ್ಯಕ್ತಿ ಮಂಚದ ಮೇಲೆ ಕುಳಿತಿದ್ದು, ಮಾಸ್ಕ್ ಧರಿಸಿರುವ ಇನ್ನೂಬ್ಬ ವ್ಯಕ್ತಿ ಆತನಿಗೆ ಲಸಿಕೆ ನೀಡುತ್ತಿರುವ ದೃಶ್ಯವನ್ನು ಟ್ಟೀಟರ್‍ನಲ್ಲಿ ಪೋಸ್ಟ್ ಮಾಡಿರುವ ಪೂನಾವಾಲ ಇದು ಲಸಿಕೆಗೆ ಇರುವ ಸುರಕ್ಷತೆ ಮತ್ತು ಪರಿಣಾಮಕಾರಿಯನ್ನು ತಿಳಿಸುತ್ತದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಆದ್ಯತೆ ಎಂದು ಬರೆದುಕೊಂಡಿದ್ದಾರೆ.
ನಾನು ವಿಶ್ವದ ಅತೀ ದೊಡ್ಡ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ಸನ್ನು ಗೌರವಿಸುತ್ತೇನೆ. ಕೊವಿಶೀಲ್ಡ್ ಈ ಐತಿಹಾಸಿಕ ಪ್ರಯತ್ನದ ಭಾಗವಾಗಿದೆ ಮತ್ತು ಇದರ ಸುರಕ್ಷತೆ ಮತ್ತು ಇದರಿಂದಾಗುವ ಪರಿಣಾಮವನ್ನು ತಿಳಿಸಲು ನಾನು ನಮ್ಮ ಆರೋಗ್ಯ ಕಾರ್ಯಕರ್ತರೊಂದಿಗೆ ಲಸಿಕೆ ಪಡೆಯಲು ಬಯಸುತ್ತೇನೆ ಎಂದು ಪೂನಾವಾಲ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳನ್ನು ಶ್ಲಾಘಿಸಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಎರಡು ಲಸಿಕೆಗಳ ದತ್ತಾಂಶವನ್ನು ಪರೀಕ್ಷಿಸಿದ ನಂತರ ಬಳಕೆಗೆ ಅನುಮೋದನೆ ನೀಡಿದೆ. ಹಾಗಾಗಿ ವದಂತಿಗಳ ಕಡೆ ಕಿವಿ ಕೊಡಬೇಡಿ, ಲಸಿಕೆಯು ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದೇವೆ ಎಂದು ಸಂತಸ ಹಂಚಿಕೊಂಡರು.
ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಅನುಮತಿ ಕೋಡಲಾಗಿದೆ ಕೊವಿಶೀಲ್ಡ್ 3 ಹಂತದ ಪರೀಕ್ಷೆ ಒಳಪಟ್ಟು ಕಾನೂನಿನ ಪ್ರಕಾರ ಕ್ಲಿನಿಕಲ್ ಟ್ರಯಲ್ ಮಾಡಿಸಿ ಶೇ.70.42 ರಷ್ಟು ಪರಿಣಾಮಕಾರಿಯನ್ನು ಪಡೆದುಕೊಂಡಿದೆ. ಕೊವ್ಯಾಕ್ಸಿನ್ ಎರಡು ಹಂತ ಪೂರ್ಣಗೊಳಿಸಿ ಮೂರನೇ ಹಂತದ ಪ್ರಯೋಗದಲ್ಲಿದೆ.
ಈ ಲಸಿಕೆಗಳ ಕುರಿತು ಹಲವು ಟೀಕೆಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಆದರೆ ಸರ್ಕಾರ ಇದರ ಒಂದು ಮತ್ತು ಮೂರನೇ ಪ್ರಯೋಗಗಳ ನಂತರ ಇದರಲ್ಲಿ ಅಪಾರ ಪ್ರಮಾಣದ ಇಮ್ಯುನೂಜೆನೆಸಿಟಿ ಮತ್ತು ಸುರಕ್ಷತಾ ದತ್ತಾಂಶ ಇದೆ ಎಂದು ಖಾತ್ರಿ ಪಡಿಸಿ ಜನರಿಗೆ ನೀಡಲು ಮುಂದಾಗಿದೆ.
– ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
– ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ
ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.
ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.
ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.
ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.
ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.
ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.
#WATCH | PM Narendra Modi gets emotional while talking about the hardships faced by healthcare and frontline workers during the pandemic. pic.twitter.com/B0YQsqtSgW
ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.
ಬೆಂಗಳೂರು: ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆಯ ಮಹಾಯಜ್ಞ ಶುರುವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆಗೆ ನೀಡಲಿದ್ದಾರೆ. ಅಲ್ಲದೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೊದಲ ದಿನವಾದ ಇಂದು ದೇಶಾದ್ಯಂತ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಪುಣೆಯ ಸೆರಮ್ ಇನ್ಸಿಟಿಟ್ಯೂಟ್ ತಯಾರಿಸಿರೋ ‘ಕೊವಿಶೀಲ್ಡ್’ ಲಸಿಕೆಯ ಮೊದಲ ಡೋಸ್ ಪಡೆಯಲಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವ್ಯಾಕ್ಸಿನ್ ಹಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ಮಾಡಲಿದ್ದಾರೆ.
ಕೊರೊನಾ ವ್ಯಾಕ್ಸಿನೇಷನ್‍ಗೆ ರಾಜ್ಯ ಸಜ್ಜಾಗಿದೆ. ರಾಜ್ಯದಲ್ಲಿ 243 ಹಾಗೂ ಬೆಂಗಳೂರಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಅಲ್ಲದೆ ಲಸಿಕೆ ತೆಗೆದುಕೊಂಡ ನಂತರ ಕೆಲವರಿಗೆ ಸೈಡ್ ಎಫೆಕ್ಟ್ ಆಗಬಹುದು. ಸ್ಪಲ್ಪ ಜ್ವರ ಬರಬಹುದು. ಆಮೇಲೆ ಅದೇ ಸರಿ ಹೋಗುತ್ತೆ. ಆತಂಕಕ್ಕೆ ಒಳಗಾಗಬಾರದು ಅಂತ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ ಅಂತ ಸುಧಾಕರ್ ವಿವರಿಸಿದ್ದಾರೆ. ಬೆಂಗಳೂರಿನ 8 ಲಸಿಕಾ ಕೇಂದ್ರದಲ್ಲಿ ಒಟ್ಟು 800 ಜನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಾವೇ ಮೊದಲ ವ್ಯಾಕ್ಸಿನ್ ತೆಗೆದುಕೊಳ್ಳೋದಾಗಿ ಖ್ಯಾತ ವೈದ್ಯ, ಟಾಸ್ಕ್ ಫೋರ್ಸ್ ಸಮಿತಿ ಮುಖ್ಯಸ್ಥರಾಗಿರೋ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ನವದೆಹಲಿ: ದೇಶವನ್ನು ವರ್ಷಗಳ ಕಾಲ ಕಾಡಿರುವ ಮತ್ತು ಈಗಲೂ ಸಮಸ್ಯೆ ತಂದಿಟ್ಟಿರುವ ಹೆಮ್ಮಾರಿ ಕೊರೊನಾಗೆ ಲಸಿಕೆ ಬಂದಾಗಿದೆ. ದೇಶಾದ್ಯಂತ ಶನಿವಾರದಿಂದ ಕೊರೋನಾ ಲಸಿಕೆಯ ಮಹಾಯಜ್ಞ ಶುರುವಾಗಲಿದೆ.
ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆಗೆ ನೀಡಲಿದ್ದಾರೆ. ಅಲ್ಲದೆ, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ದಿನವಾದ ನಾಳೆ ದೇಶಾದ್ಯಂತ 3 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆಯಲಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವ್ಯಾಕ್ಸಿನ್ ಹಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ಮಾಡಲಿದ್ದಾರೆ. ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿರುವ ʼಕೊವಿಶೀಲ್ಡ್’ ಲಸಿಕೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರವಾನೆಯಾಗಿದೆ.
ಈ ಮಧ್ಯೆ, ನಾಳೆ ಹೈದ್ರಾಬಾದ್‍ನಿಂದಲೂ ಭಾರತ್ ಬಯೋಟೆಕ್‍ನ ಕೊವಾಕ್ಸಿನ್ ಲಸಿಕೆ ಪೊರೈಕೆ ಶುರುವಾಗಲಿದೆ. ದೇಶದ 12 ಕಡೆ 56 ಲಕ್ಷ ಕೊವಾಕ್ಸಿನ್ ಲಸಿಕೆ ಸಪ್ಲೈ ಆಗಲಿದೆ. 1 ಕೊವಾಕ್ಸಿನ್ ಲಸಿಕೆಗೆ 295 ರೂ.ನಂತೆ ವ್ಯಾಕ್ಸಿನ್ ಖರೀದಿ ಆಗಲಿದೆ. ಒಟ್ಟು 55 ಲಕ್ಷ ಲಸಿಕೆಯನ್ನು ಭಾರತ್ ಬಯೋಟೆಕ್ ಪೂರೈಸಲಿದ್ದು, ಮೊದಲ ಕಂತು – 38.5 ಲಕ್ಷ, ಎರಡನೇ ಕಂತು – 16.5 ಲಕ್ಷ ಲಸಿಕೆ ಇರಲಿದೆ.
ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಆಗುತ್ತಿರುವ ಹಿನ್ನೆಲೆಯಲ್ಲಿ . ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾರು ಲಸಿಕೆ ತೆಗೆದುಕೊಳ್ಳಬಹುದು..? ಯಾರಿಗೆ ಲಸಿಕೆ ಕೊಡಬಹುದು..? ಯಾರಿಗೆ ಕೋವಿಡ್ ಲಸಿಕೆ ಕೊಡಬಾರದು ಎಂಬ ಬಗ್ಗೆ ಮಾರ್ಗಸೂಚಿ ನೀಡಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– 18 ಮತ್ತು 18 ವರ್ಷ ಮೇಲ್ಪಟ್ಟವರಿಗಷ್ಟೇ ಲಸಿಕೆ
– ಬಾಣಂತಿಯರು, ಸ್ತನ್ಯಪಾನ ನೀಡುತ್ತಿರುವ ತಾಯಂದಿರಿಗೆ ವ್ಯಾಕ್ಸಿನ್ ಬೇಡ
– ಗರ್ಭಿಣಿಯರು, ಗರ್ಭಧಾರಣೆ ಬಗ್ಗೆ ಇನ್ನೂ ಸ್ಪಷ್ಟ ಆಗದೇ ಇದ್ದಲ್ಲಿ ವ್ಯಾಕ್ಸಿನ್ ಬೇಡ
– ಅಲರ್ಜಿ ಸಮಸ್ಯೆ ಇರುವವರು ವ್ಯಾಕ್ಸಿನ್ ಪಡೆಯಬಾರದು
– ಕೊವಿಡ್ ಸೋಂಕಿಗೆ ಒಳಗಾದವರು, ಬಹು ಕಾಯಿಲೆ ಬಾಧಿತರು, ರೋಗ ನಿರೋಧಕ ಶಕ್ತಿ ಕಡಿಮೆ ಇರೋವವರು ಲಸಿಕೆ ಹಾಕಿಸಿಕೊಳ್ಳಬೇಕು
– ಮೊದಲಿಗೆ ಯಾವ ವ್ಯಾಕ್ಸಿನ್ ತೆಗೆದುಕೊಳ್ತಿರೋ 2ನೇ ಡೋಸ್ ಅದೇ ಇರಬೇಕು (ಉದಾ: ಕೊವಿಶೀಲ್ಡ್ ಲಸಿಕೆ ಪಡೆದಿದ್ದರೆ, 2ನೇ ಡೋಸ್ ಕೋವಿಶೀಲ್ಡ್ ಆಗಿರಬೇಕು)
– ಸದ್ಯಕ್ಕೆ ಕೊವಿಡ್ ಚಿಕಿತ್ಸೆ, ರೋಗ ನಿರೋಧಕ ಔಷಧಿ, ಪ್ಲಾಸ್ಮಾ ಚಿಕಿತ್ಸೆ ಪಡೆಯುತ್ತಿದ್ದರೆ ವ್ಯಾಕ್ಸಿನ್ ಬೇಡ
– ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೂ ಲಸಿಕೆ ಬೇಡ
– ಗುಣಮುಖರಾದ 4 ರಿಂದ 8 ವಾರಗಳ ಬಳಿಕ ಲಸಿಕೆ ಪಡೆಯಬಹುದು
– ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಕಾಣಿಸಬಹುದು
– ಸ್ವಲ್ಪ ಜ್ವರ, ಇಂಜೆಕ್ಷನ್ ಪಡೆದ ಕಡೆ ನೋವು, ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು
– ಅಡ್ಡ ಪರಿಣಾಮಗಳ ಬಗ್ಗೆ ಚಿಂತೆ ಬೇಡ, ತಾನಾಗೇ ಗುಣಮುಖ ಆಗುತ್ತೆ
– ಸಂತಾನೋತ್ಪತ್ತಿ ಮೇಲೆ ಕೊವಿಡ್ ಲಸಿಕೆ ಪರಿಣಾಮ ಬೀರಲ್ಲ
– ಬೇರೆ ಲಸಿಕೆ ಪಡೆಯುತ್ತಿದ್ದರೆ 14 ದಿನಗಳ ಅಂತರದಲ್ಲಿ ಕೋವಿಡ್ ಲಸಿಕೆ ಪಡೆಯಬಹುದು
– ಕೊ-ವಿನ್ ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ
– ಸಾರ್ವಜನಿಕರಿಗೆ ನೋಂದಣಿಗಾಗಿ ಇನ್ನೂ ಕೊ-ವಿನ್ ಆ್ಯಪ್ ಬಿಡುಗಡೆ ಆಗಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16ರಂದು ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಪ್ರಶ್ನೋತ್ತರಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಜನಸಾಮಾನ್ಯರ ಮನದಲ್ಲಿರುವ ಗೊಂದಲದ ನಿವಾರಣೆಗೆ ಮುಂದಾಗಿದೆ. ಈ ಲಸಿಕೆಯ ಬಗ್ಗೆ ನಿಮಗೆ ಯಾವುದಾದರೂ ಅನುಮಾನವಿದ್ದರೆ ಅದನ್ನು ಈ ವೀಡಿಯೋ ನೋಡಿ ಬಗೆಹರಿಸಿಕೊಳ್ಳಿ.