Tag: Covishield Vaccine

  • ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದ ಅಸ್ಟ್ರಾಜೆನೆಕಾ

    ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದ ಅಸ್ಟ್ರಾಜೆನೆಕಾ

    ನವದೆಹಲಿ: ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಬಳಿಕ ಕೋವಿಡ್‌ ಲಸಿಕೆಯನ್ನು (Covid Vaccine) ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ (AstraZeneca) ಆರಂಭಿಸಿದೆ.

    ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ. ಲಸಿಕೆಯನ್ನು ಇನ್ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ನಾಳೆ ಭಾರತಕ್ಕೆ ಭೇಟಿ

    ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಾಗಿ ಲಭ್ಯವಿದೆ. ಇದು ಲಸಿಕೆಗೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯು ತನ್ನ ಮಾರ್ಕೆಟಿಂಗ್ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಲಸಿಕೆಯನ್ನು ಇನ್ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಹಿಂಪಡೆಯಲು ಅರ್ಜಿಯನ್ನು ಮಾರ್ಚ್ 5 ರಂದು ಸಲ್ಲಿಸಲಾಗಿತ್ತು. ಮಂಗಳವಾರದಿಂದ (ಮಾ.7) ಜಾರಿಗೆ ಬಂದಿದೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ವ್ಯಾಕ್ಸಿವ್ರಿಯಾ (Vaxzervria Vaccine) ಎಂದು ಕರೆಯಲ್ಪಡುವ ಲಸಿಕೆಯನ್ನು ಈ ಹಿಂದೆ ಅನುಮೋದಿಸಿರುವ ಇತರ ದೇಶಗಳಲ್ಲಿಯೂ ಹಿಂತೆಗೆದುಕೊಳ್ಳಲು ಕಂಪನಿ ಅರ್ಜಿ ಸಲ್ಲಿಸಲಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್‌ಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ವ್ಯಾಕ್ಸೆವ್ರಿಯಾ ಲಸಿಕೆಯು ಜಾಗತಿಕ ಪರಿಶೀಲನೆಯಲ್ಲಿದೆ. ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ, ಲಸಿಕೆ ಅಪರೂಪದ ಸಂದರ್ಭಗಳಲ್ಲಿ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡಿತ್ತು.

  • ಕೋವಿಶೀಲ್ಡ್ ಲಸಿಕೆ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಕೋವಿಶೀಲ್ಡ್ ಲಸಿಕೆ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು/ಧಾರವಾಡ: ಕೋವಿಶೀಲ್ಡ್ ಲಸಿಕೆ (Covishield Vaccine) ಪಡೆದವರಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತಿದೆ ಎಂಬುದರ ಕುರಿತು ಜನರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಈ ಕುರಿತು ಧಾರವಾಡದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಅಡ್ಡ ಪರಿಣಾಮಗಳು ಆಗಿರುವ ಬಗ್ಗೆ ಮಾಹಿತಿ ಇದೆ. ಲಸಿಕೆ ಎಂದ ಮೇಲೆ ಸಣ್ಣ ಪ್ರಮಾಣದ ಸೈಡ್ ಎಫೆಕ್ಟ್ ಇರುತ್ತೆ. ಆದರೆ ಜನರು ಏನೋ ಆಗಿಬಿಡುತ್ತೆ ಎಂದು ಭಯಪಡಬಾರದು ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್

    ಕರ್ನಾಟಕದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗಿದೆ. ನಾಲ್ಕೈದು ಜನರಿಗೆ ವ್ಯಾಕ್ಸಿನ್ ಪಡೆದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವ ಬಗ್ಗೆ ಮಾಹಿತಿ ಇದೆ. ಆದರೆ ಇದು ಲಸಿಕೆಯಿಂದಲೇ ಆಗಿದೆಯಾ ಅಥವಾ ಬೇರೆ ಆರೋಗ್ಯದ ಸಮಸ್ಯೆಗಳು ಕೂಡ ಕಾರಣವಾ ಎಂಬುದನ್ನ ನೋಡಬೇಕು ಎಂದರು. ಇದನ್ನೂ ಓದಿ: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ವಿಚಾರದಲ್ಲಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

    ಕೋವಿಶೀಲ್ಡ್ ವಾಕ್ಸಿನ್ ಪಡೆದವರೆಲ್ಲರಿಗೂ ಆರೋಗ್ಯ ತೊಂದರೆಗಳಾಗುತ್ತವೆ ಎಂದು ಭಯ ಪಡುವ ಅಗತ್ಯವಿಲ್ಲ. ಏನೋ ಆಗಿಬಿಡುತ್ತೆ ಎಂದು ಸಾರ್ವತ್ರಿಕವಾಗಿ ಭಯದ ವಾತವಾರಣ ಸೃಷ್ಟಿಯಾಗುತ್ತಿರುವುದನ್ನ ಗಮನಿಸಿದ್ದೇನೆ. ಆದರೆ ಈಗಾಗಲೇ ವ್ಯಾಕ್ಸಿನ್ ಪಡೆದು ಎರಡು ವರ್ಷಗಳು ಕಳೆದು ಹೋಗಿವೆ. ಹೀಗಿರುವಾಗ ಈಗ ಅಷ್ಟೊಂದು ಅಡ್ಡಪರಿಣಾಮ ಆಗಲ್ಲ ಎಂಬ ಅಭಿಪ್ರಾಯಗಳು ಕೂಡ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮೋದಿಯವರನ್ನು ಎಳೆದು ತರಬೇಡಿ: ನಿಖಿಲ್ ಮನವಿ

    ವದಂತಿಗಳಿಗೆ ಜನರು ಕಿವಿಗೊಡಬಾರದು. ಯಾರಿಗೆ ದೇಹದಲ್ಲಿ ಸಮಸ್ಯೆಗಳು ಕಂಡುಬಂದು, ಅನುಮಾನಗಳಿದ್ದರೆ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ನಿರ್ದೇಶನ ನೀಡಲಿದೆ ನೋಡೋಣ. ವ್ಯಾಕ್ಸಿನೇಷನ್ ಮಾಡುವುದನ್ನ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಕೇಂದ್ರ ಸರ್ಕಾರದ ಬಳಿ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಹೀಗಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಪಾಲಿಸುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕೋವಿಡ್ ಲಸಿಕೆ ಪಡೆದವರಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಆರೋಗ್ಯದಲ್ಲಿ ಸಮಸ್ಯೆಗಳಾಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಎಳನೀರು ಸೇವಿಸಿ ದಲಿತರೊಂದಿಗೆ ನಾವಿದ್ದೇವೆ ಅಂದ್ರು ಯದುವೀರ್

  • ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಹೇಳಿಕೆ

    ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಹೇಳಿಕೆ

    – ಕೋವಿಶೀಲ್ಡ್‌ ಲಸಿಕೆ ಅಪರೂಪದ ಅಡ್ಡಪರಿಣಾಮ ವರದಿ ಬೆನ್ನಲ್ಲೇ ಪ್ರತಿಕ್ರಿಯೆ

    ನವದೆಹಲಿ: ಯಾವುದೇ ಲಸಿಕೆಯ ಏಕಮಾತ್ರ ಆದ್ಯತೆ ಸುರಕ್ಷತೆ. ಆ ಉದ್ದೇಶದಿಂದಲೇ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಕೋವ್ಯಾಕ್ಸಿನ್‌ (Covaxin) ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಸ್ಪಷ್ಟಪಡಿಸಿದೆ.

    ಕೋವಿಶೀಲ್ಡ್‌ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮಗಳು ಬೀರಬಹುದು ಎಂದು ನ್ಯಾಯಾಲಯದ ಮುಂದೆ ಅಸ್ಟ್ರಾಜೆನೆಕಾ (AstraZeneca) ಹೇಳಿಕೆ ನೀಡಿತ್ತು. ಈ ವಿಚಾರವಾಗಿ ಸಾಕಷ್ಟು ವರದಿಗಳು ಬಂದವು. ಅದರ ಬೆನ್ನಲ್ಲೇ ಭಾರತ್‌ ಬಯೋಟಿಕ್‌ (Bharat Biotech) ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

    ಭಾರತದಲ್ಲಿ ಪರಿಣಾಮಕಾರಿತ್ವದ ಪ್ರಯೋಗಗಳನ್ನು ನಡೆಸಿದ ಭಾರತ ಸರ್ಕಾರದ COVID-19 ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಕೋವಾಕ್ಸಿನ್ ‘ಏಕೈಕ ಕೋವಿಡ್ ಲಸಿಕೆ’ ಎಂದು ತಿಳಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಭಾರತ್‌ ಬಯೋಟೆಕ್‌, ಸುರಕ್ಷತೆಯನ್ನೇ ಗಮನದಲ್ಲಿಟ್ಟುಕೊಂಡು ಕೋವ್ಯಾಕ್ಸಿನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ದಕ್ಷತೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಭಾರತದಲ್ಲಿ ಪ್ರಾಥಮಿಕವಾಗಿ ನಿರ್ವಹಿಸಲಾಯಿತು.

    ಭಾರತ್ ಬಯೋಟೆಕ್, ಅದರ ಪರವಾನಗಿ ಪ್ರಕ್ರಿಯೆಯ ಭಾಗವಾಗಿ ಕೋವ್ಯಾಕ್ಸಿನ್ ಅನ್ನು 27,000 ಕ್ಕೂ ಹೆಚ್ಚು ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ ನಿರ್ಬಂಧಿತ ಬಳಕೆಯ ಅಡಿಯಲ್ಲಿ ಇದು ಪರವಾನಗಿ ಪಡೆದಿದೆ.

  • ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ ಮರಳಿ ಮಾತು ಪಡೆದ ವ್ಯಕ್ತಿ!

    ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ ಮರಳಿ ಮಾತು ಪಡೆದ ವ್ಯಕ್ತಿ!

    ಜಾರ್ಖಂಡ್: ಕೋವಿಡ್ ವ್ಯಾಕ್ಸಿನ್ , ಕೋವಿಶೀಲ್ಡ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ಜಾರ್ಖಂಡ್‌ನ ಬೊಕಾರೊದಲ್ಲಿ ಕೋವಿಡ್ ಲಸಿಕೆ ಕೋವಿಶೀಲ್ಡ್ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ನಂತರ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ, ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿವೆ.

    ಸಲ್ಗಡಿ ಗ್ರಾಮದ ನಿವಾಸಿಯಾಗಿರವ 55 ವರ್ಷದ ದುಲರ್ ಚಂದ್ ಮುಂಡಾ   ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇವರು ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೂ ದೈಹಿಕ ನ್ಯೂನತೆಗಳಿಂದಾಗಿ ಹಾಸಿಗೆ ಹಿಡಿದಿದ್ದರು. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಲು ಶುರುವಾಗಿ ಮಾತನಾಡಲು ತೊದಲುತ್ತಿದ್ದರು. ಜನವರಿ 4ರಂದು ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಇದಾದ ಬಳಿಕ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡುತ್ತಿವೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯಾಧಿಕಾರಿ ಡಾ. ಅಲ್ಬೆಲ್ ಕೆರ್ಕೆಟ್, ಇದೊಂದು ಸಂಶೋಧನೆಯ ವಿಷಯವಾಗಬಹುದು, ನಿಜಕ್ಕೂ ಅವರ ದೇಹದಲ್ಲಿ ಇಷ್ಟೊಂದು ಬದಲಾವಣೆ ಕಂಡು ಬಂದಿರುವುದು ಅಚ್ಚರಿಯಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್ ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ- ಸರ್ಕಾರ ಆದೇಶ

  • ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

    ಮುಂಬೈ: ಇಂಗ್ಲೆಂಡ್‍ಗೆ ತೆರಳಿದ್ದ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ್ದಾರೆ.

    ಭಾರತದಲ್ಲಿ ಕೊರೊನಾ ಎರಡನೇ ಅಲೆ ಸ್ಫೋಟಗೊಂಡ ವೇಳೆಯೇ ಆದಾರ್ ಪೂನಾವಾಲಾ ಇಂಗ್ಲೆಂಡ್‍ಗೆ ತೆರಳಿದ್ದರು. ಬೆದರಿಕೆ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೂನಾವಾಲಾ ಲಂಡನ್ ಸೇರಿದ್ದರು. ಇಂದು ಬೆಳಗ್ಗೆ ಪೂನಾವಾಲಾ ಸಂಸ್ಥೆಯ ಖಾಸಗಿ ಜೆಟ್ ಪುಣೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಖಾಸಗಿ ಹೆಲಿಕಾಪ್ಟರ್ ಮೂಲಕ ನೇರವಾಗಿ ಆದಾರ್ ಪೂನಾವಾಲಾ ಸೀರಂ ಸಂಸ್ಥೆಗೆ ತೆರಳಿದ್ದಾರೆ.

    ಭಾರತದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಸೀರಂ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆಯನ್ನ ಸೀರಂ ಉತ್ಪಾದನೆ ಮಾಡುತ್ತಿದೆ. ಮೇನಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದ ವೇಳೆ ದಿಢೀರ್ ಪೂನಾವಾಲಾ ಲಂಡನ್ ಗೆ ತೆರಳಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

    ಲಂಡನ್ ತಲುಪಿದ ಬಳಿಕ ಸ್ಪಷ್ಟನೆ ನೀಡಿದ್ದ ಪೂನಾವಾಲಾ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದಿದ್ದರು. ಈ ಹೇಳಿಕೆ ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡು ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬೆದರಿಕೆ ಬರುತ್ತಿದೆ ಇಂತಹ ಸ್ಥಿತಿಯಲ್ಲಿ ಇರಲಾರೆ: ಕೋವಿಶೀಲ್ಡ್ ಲಸಿಕೆ ತಯಾರಿಕಾ ಸಂಸ್ಥೆಯ ಸಿಇಓ

    ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇಡೀ ವಿಶ್ವದಲ್ಲಿಯೇ ಲಸಿಕೆಯ ಉತ್ಪಾದನೆ ಸಂಸ್ಥೆಗಳಲ್ಲಿ ಸೀರಂ ಸಹ ಒಂದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಭಾರತ ಸರ್ಕಾರಕ್ಕೆ ಸೀರಂ ಸಂಸ್ಥೆ 50 ಕೋಟಿ ಕೊರೊನಾ ವ್ಯಾಕ್ಸಿನ್ ನೀಡಬೇಕಿದೆ.

  • ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಕೋವಿಶೀಲ್ಡ್ ತಯಾರಿಕಾ ಕಂಪನಿಗೆ 500 ಕೋಟಿ ತುರ್ತು ಸಾಲ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಕೋವಿಡ್ ವಿರುದ್ಧ ಹೋರಾಟದಲ್ಲಿ ಆರೋಗ್ಯ ಮೂಲಸೌಕರ್ಯಕ್ಕಾಗಿ 50 ಸಾವಿರ ಕೋಟಿ ರೂ.ಗಳನ್ನ ಸಾಲದ ರೂಪದಲ್ಲಿ ನೀಡೋದಾಗಿ ಬುಧವಾರ ಹೇಳಿತ್ತು. ಇದರ ಮೊದಲ ಲಾಭ ಕೋವಿಶೀಲ್ಡ್ ತಯಾರಿಕೆಯ ಸೀರಂ ಸಂಸ್ಥೆಗೆ ಲಭ್ಯವಾಗಿದ್ದು, ಬ್ಯಾಂಕ್ ಆಫ್ ಬರೋಡಾ 500 ಕೋಟಿ ರೂ. ಸಾಲ ನೀಡುವ ಬಗ್ಗೆ ನಿರ್ಧರಿಸಿದೆ.

    ಭಾರತದಲ್ಲಿ ಮೂರು ಕೊರೊನಾ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕೋವಿಶೀಲ್ಡ್ ಹೆಚ್ಚು ಪೂರೈಕೆಯಾಗುತ್ತಿದ್ದು, ಬಳಕೆಯಾಗ್ತಿದೆ. ಹಾಗಾಗಿ ಕೋವಿಶೀಲ್ಡ್ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬ್ಯಾಂಕ್ ಆಫ್ ಬರೋಡಾ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋವ್ಯಾಕ್ಸಿನ್ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಗೆ ಲೋನ್ ನೀಡಲು ಮುಂದಾಗಿದೆ. ಆದ್ರೆ ಸಾಲದ ಮೊತ್ತವನ್ನ ಬಹಿರಂಗಪಡಿಸಿಲ್ಲ.

    ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಆರ್ ಬಿಐ, ಕೋವಿಡ್ ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳಿಗೆ ನೆರವು ನೀಡಲಾಗುವುದು. ಬ್ಯಾಂಕ್‍ಗಳು ವ್ಯಾಕ್ಸಿನ್ ತಯಾರಿಕೆ ಕಂಪನಿಗಳು, ಆಮದುದಾರರಿಗೆ, ಆಕ್ಸಿಜನ್ ಪೂರೈಕೆದಾರರಿಗೆ, ಔಷಧಿ ಕಂಪನಿಗಳು, ಲ್ಯಾಬ್, ಆಸ್ಪತ್ರೆಗಳಿಗೂ ಲೋನ್ ಸಿಗಲಿದೆ ಎಂದು ಹೇಳಿತ್ತು. ಈ ಸೌಲಭ್ಯ ಮಾರ್ಚ್ 31, 2022ರವರೆಗೆ ಇರಲಿದೆ ಎಂದು ಆರ್ ಬಿಐ ಹೇಳಿದೆ.

  • ಗಮನಿಸಿ, ಒಂದಲ್ಲ, ಎರಡು ತಿಂಗಳ ನಂತ್ರ ಸಿಗಲಿದೆ ಕೋವಿಶೀಲ್ಡ್ ಎರಡನೇ ಡೋಸ್

    ಗಮನಿಸಿ, ಒಂದಲ್ಲ, ಎರಡು ತಿಂಗಳ ನಂತ್ರ ಸಿಗಲಿದೆ ಕೋವಿಶೀಲ್ಡ್ ಎರಡನೇ ಡೋಸ್

    – ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಆದೇಶ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡುತ್ತಿದೆ. ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಸಹ ಭರದಿಂದ ಸಾಗುತ್ತಿದೆ. ಈ ನಡುವೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನ 28 ದಿನದಿಂದ ಎರಡು ತಿಂಗಳಿಗೆ ಹೆಚ್ಚಿಸಲಾಗಿದೆ.

    ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವನ್ನ 6 ರಿಂದ 8 ವಾರಗಳಿಗೆ ಹೆಚ್ಚಿಸಲಾಗಿದೆ. ಸದ್ಯ 28 ದಿನಕ್ಕೆ ಎರಡನೇ ಡೋಸ್ ನೀಡಲಾಗುತ್ತಿದೆ. ತಜ್ಞರ ಸಲಹೆ ಮೇರೆಗೆ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ನೀಡುವ ನಡುವಿನ ಅವಧಿಯನ್ನ ಹೆಚ್ಚಿಸಲಾಗಿದೆ ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

    ಎನ್‍ಟಿಎಜಿಐ ಮತ್ತು ವ್ಯಾಕ್ಸಿನೇಷನ್ ಎಕ್ಸಪರ್ಟ್ ಗ್ರೂಪ್ ರಿಸರ್ಚ್ ಪ್ರಕಾರ ಡೋಸ್ ಗಳ ನಡುವಿನ ಅಂತರ ಹೆಚ್ಚಿಸುವದರಿಂದ ಹೆಚ್ಚು ಲಾಭದಾಯಕವಾಗಿರಲಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ತಜ್ಞರ ತಂಡ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ವರದಿಯಾಗಿದೆ.

    ಮಹಾರಾಷ್ಟ್ರದ ಪುಣೆಯ ಸೇರಂ ಇನ್ಸಿಟ್ಯೂಟ್ ನಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಆಗುತ್ತಿದೆ. ಜನವರಿ 16ರಿಂದ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿತ್ತು. ಎರಡನೇ ಡೋಸ್ ಮಾರ್ಚ್ 1ರಿಂದ ಆರಂಭಿಸಲಾಗಿತ್ತು.

  • ಕೋವಿಡ್‌ ಲಸಿಕೆ – ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಕೋವಿಡ್‌ ಲಸಿಕೆ – ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16ರಂದು ಕೋವಿಡ್‌ ಲಸಿಕೆ ನೀಡುವ ಮಹಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್‌ ಲಸಿಕೆ ಪ್ರಶ್ನೋತ್ತರಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಜನಸಾಮಾನ್ಯರ ಮನದಲ್ಲಿರುವ ಗೊಂದಲದ ನಿವಾರಣೆಗೆ ಮುಂದಾಗಿದೆ. ಈ ಲಸಿಕೆಯ ಬಗ್ಗೆ ನಿಮಗೆ ಯಾವುದಾದರೂ ಅನುಮಾನವಿದ್ದರೆ ಅದನ್ನು ಈ ವೀಡಿಯೋ ನೋಡಿ ಬಗೆಹರಿಸಿಕೊಳ್ಳಿ.

  • ಮುಂಬೈ, ಚಂಡೀಗಢದಲ್ಲಿ ಇಂದಿನಿಂದ ಕೋವಿಶೀಲ್ಡ್ ವ್ಯಾಕ್ಸಿನ್ ಪ್ರಯೋಗ

    ಮುಂಬೈ, ಚಂಡೀಗಢದಲ್ಲಿ ಇಂದಿನಿಂದ ಕೋವಿಶೀಲ್ಡ್ ವ್ಯಾಕ್ಸಿನ್ ಪ್ರಯೋಗ

    ನವದೆಹಲಿ: ಇಂದಿನಿಂದ ಮುಂಬೈ ಮತ್ತು ಚಂಡೀಗಢದಲ್ಲಿ ಕೊರೊನಾ ವೈರಸ್ ನಿಗ್ರಹ ಕೋವಿಶೀಲ್ಡ್ ವ್ಯಾಕ್ಸಿನ್ ಪರೀಕ್ಷೆಗೆ ಒಳಪಡಲಿದೆ. ಮುಂಬೈನ KEM ಆಸ್ಪತ್ರೆ ಮತ್ತು ಚಂಡೀಗಢದ PGIMERನಲ್ಲಿ ಮಾನವರ ಮೇಲೆ ಪ್ರಯೋಗ ನಡೆಯಲಿದೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಹೇಳಿದೆ.

    ಪುಣೆಯಲ್ಲಿ ಈಗಾಗಲೇ ಮೂರನೇ ಹಂತದ ಪರೀಕ್ಷೆ ಆರಂಭವಾಗಿದ್ದು, ಅದರ ಭಾಗವಾಗಿ ಚಂಡೀಗಢ ಮತ್ತು ಮುಂಬೈನಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಚಂಡೀಗಢದಲ್ಲಿ 57, 33, 26 ವಯಸ್ಸಿನ ಮೂವರು ಸ್ವಯಂ ಸೇವಕರ ಮೇಲೆ ಇಂದು ಪ್ರಯೋಗ ನಡೆಯಲಿದೆ.

    ಈವರೆಗೂ 18 ಮಂದಿ ಸ್ವಯಂಸೇವಕರು ನೊಂದಣಿಯಾಗಿದ್ದಾರೆ. 100 ಸ್ವಯಂ ಸೇವಕರ ಮೇಲೆ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು PGIMER ಮುಖ್ಯಸ್ಥ ಫ್ರೋ.ಜಗತ್ ರಾಮ್ ಹೇಳಿದ್ದಾರೆ.

    ಮುಂಬೈನ KEM ನಲ್ಲಿ ಇಂದು 13 ಮಂದಿ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಯಲಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರಯೋಗ ನಡೆಯಲಿದೆ ಎಂದು ಡಾ. ಹೇಮಂತ್ ದೇಶಮುಖ್ ತಿಳಿಸಿದ್ದಾರೆ.

    ಬ್ರಿಟನ್‍ನ ಆಕ್ಸ್‌ಫರ್ಡ್ ಯೂನಿವರ್ಸಿಟಿ, ಆಸ್ಟ್ರಾಜೆನಿಕಾ ಫಾರ್ಮಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಪ್ರಯೋಗಕ್ಕೆ ಒಳಪಡಿಸಿದ್ದು, ಅಂತಿಮ ಹಂತದ ಪರೀಕ್ಷೆಗಳನ್ನು ವಿಸ್ತರಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಫಲಿತಾಂಶ ನಿರೀಕ್ಷಿಸಿದೆ.

    https://twitter.com/HindustanNews10/status/1309700162722435073