Tag: Covishield

  • ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ನವದೆಹಲಿ: ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳಿಗೆ ಕೊರೊನಾ ವ್ಯಾಕ್ಸಿನ್ (Covid Vaccine) ಕಾರಣವಲ್ಲ ಎಂದು ಲಸಿಕೆ ತಯಾರಕ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಹೇಳಿದೆ. ತಮ್ಮ ಕೋವಿಶೀಲ್ಡ್ (Covishield) ಲಸಿಕೆ ಸುರಕ್ಷಿತವಾಗಿದೆ ಎಂದು ಇದೇ ವೇಳೆ ಅದು ಸ್ಪಷ್ಟಪಡಿಸಿದೆ.

    ಸೀರಮ್‌ ಇನ್‌ಸ್ಟಿಟ್ಯೂಟ್‌ ತಮ್ಮ ಔಷಧವು ಕೋವಿಡ್‌ 19 ವಿರುದ್ಧ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಕೋವಿಶೀಲ್ಡ್‌ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ವಿಶ್ವಾದ್ಯಂತ ಹಲವಾರು ಕ್ಲಿನಿಕಲ್‌ ಪರೀಕ್ಷೆಗಳು ಮತ್ತು ನಿಯಂತ್ರಕ ಸಂಸ್ಥೆಗಳ ಮೌಲ್ಯಮಾಪನದಿಂದ ದೃಢೀಕರಿಸಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ದುಷ್ಪರಿಣಾಮಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಸಂಸ್ಥೆ ವಾದಿಸಿದೆ. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್‌ ಸರ್ಜರಿ!

    ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇತ್ತೀಚೆಗೆ ರಾಜ್ಯದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡ ಕೆಲವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹೇಳಿಕೆಯು ಸಾರ್ವಜನಿಕರಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆದರೆ ಸೀರಂ ತನ್ನ ಲಸಿಕೆಯ ಸುರಕ್ಷತೆಯನ್ನು ಪುನರುಚ್ಚರಿಸಿದ್ದು, ಇಂತಹ ಆರೋಪಗಳಿಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದೆ.  ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

    ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತದ ಔಷಧ ನಿಯಂತ್ರಣ ಸಂಸ್ಥೆಗಳಂತಹ ಸಂಸ್ಥೆಗಳು ಕೋವಿಶೀಲ್ಡ್‌ ಲಸಿಕೆಯನ್ನು ವ್ಯಾಪಕವಾಗಿ ಬಳಕೆಗೆ ಅನುಮೋದಿಸಿವೆ. ಈ ಲಸಿಕೆಯು ಭಾರತದ ಕೋವಿಡ್‌-19 ಲಸಿಕಾ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕೋಟ್ಯಂತರ ಜನರಿಗೆ ರಕ್ಷಣೆ ನೀಡಿದೆ ಎಂದು ತಿಳಿಸಿದೆ.

    ಆತಂಕ ಮೂಡಿಸುವ ಯಾವುದೇ ಆಧಾರರಹಿತ ಹೇಳಿಕೆಗಳಿಗೆ ಜನರು ಭಯ ಪಡಬಾರದು. ಒಳಗಾಗದಂತೆ ಮನವಿ ಮಾಡಿದ್ದು, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಅವಲಂಬಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ.

  • ಕೋವಿಡ್‌ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಮನವಿ – ಅರ್ಜಿ ವಜಾಗೊಳಿಸಿದ ಸುಪ್ರೀಂ

    ಕೋವಿಡ್‌ ಲಸಿಕೆ ಅಡ್ಡಪರಿಣಾಮಗಳ ತನಿಖೆಗೆ ಮನವಿ – ಅರ್ಜಿ ವಜಾಗೊಳಿಸಿದ ಸುಪ್ರೀಂ

    ನವದೆಹಲಿ: ಕೋವಿಡ್ ಲಸಿಕೆಗಳಿಂದ (Covid Vaccine) ಆರೋಗ್ಯದ ದುಷ್ಪರಿಣಾಮಗಳ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

    ಲಸಿಕೆಗಳು ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಯುನೈಟೆಡ್ ಕಿಂಗ್‌ಡಂನಂತಹ ವಿದೇಶಗಳಲ್ಲಿ ಅದೇ ಕಾಳಜಿಯ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು. ಇದನ್ನೂ ಓದಿ: ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದಲೇ ಹೊರ ಹಾಕಿದ ಭಾರತ

    ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿತ್ತು. ಆರಂಭದಲ್ಲಿ, ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಲಸಿಕೆಗಳು ಜಾಗತಿಕವಾಗಿ ನೆರವು ನೀಡಿವೆ. ಈಗ ಅಂತಹ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ ಎಂದು ಸಿಜೆಐ ಒತ್ತಿ ಹೇಳಿದರು.

    ಅರ್ಜಿದಾರರು ನಿಜವಾಗಿಯೂ ನೊಂದಿದ್ದರೆ, ಅವರು ಆರ್ಟಿಕಲ್ 32 ಅರ್ಜಿಗಳನ್ನು ಸಲ್ಲಿಸುವ ಬದಲು ಕ್ಲಾಸ್ ಆಕ್ಷನ್ ಸೂಟ್‌ಗಳನ್ನು ಸಲ್ಲಿಸಬೇಕು ಎಂದು ಸಿಜೆಐ ಹೇಳಿದರು. ‘ಲಸಿಕೆ ತೆಗೆದುಕೊಂಡ ನಂತರ ಅರ್ಜಿದಾರರು ವೈಯಕ್ತಿಕವಾಗಿ ಯಾವುದೇ ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆಯೇ’ ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದರು. ಅದಕ್ಕೆ ವಕೀಲರು ನಕಾರಾತ್ಮಕವಾಗಿ ಉತ್ತರಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ

    ಬ್ರಿಟಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ, ಯುಕೆ ಹೈಕೋರ್ಟ್‌ನಲ್ಲಿ 51 ಅರ್ಜಿದಾರರಿಂದ ಕಾನೂನು ಮೊಕದ್ದಮೆಯನ್ನು ಎದುರಿಸುತ್ತಿದೆ. ಲಸಿಕೆಯಿಂದಾಗಿ ಸಾವು-ನೋವುಗಳಾಗಿವೆ ಎಂದು ಆರೋಪಿಸಲಾಗಿತ್ತು. ಕಂಪನಿಯು ಕೋವಿಡ್ ಲಸಿಕೆ ಅಪರೂಪದ ಸನ್ನಿವೇಶಗಳಲ್ಲಿ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ನೊಂದಿಗೆ ಥ್ರಂಬೋಸಿಸ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಕಂಪನಿಯೂ ಒಪ್ಪಿಕೊಂಡಿದೆ.

    ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಸೇರಿದಂತೆ ಲಸಿಕೆಗಳನ್ನು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: Mumbai | ಲಘು ಮೋಟರ್ ವಾಹನಗಳಿಗೆ ಟೋಲ್ ಫ್ರೀ ಪ್ರವೇಶ: ಸಿಎಂ ಶಿಂಧೆ

  • ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    ಚಿಕ್ಕಬಳ್ಳಾಪುರ: ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್, ಫ್ರಿಡ್ಜ್ ವಾಟರ್ ಕುಡಿಯಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾನೂನು ಕಾಲೇಜು ಕಟ್ಟಪ್ಪಣೆ ಹೊರಡಿಸಿದ ಸೂಚನಾ ಪತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

    ಮೊದಲು ಕಳುಹಿಸಿದ ಸೂಚನಾ ಪತ್ರ

    ಚಿಕ್ಕಬಳ್ಳಾಪುರ (Chikkaballaoura) ನಗರದ ವಾಪಸಂದ್ರ ಬಡವಾವಣೆಯಲ್ಲಿರುವ ಶ್ರೀ ನಿಡುಮಾಮಿಡಿ ಶಾಖಾ ಮಠದ ಉಸ್ತುವಾರಿಯ ಶ್ರೀ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ (Sri Siddaramaiah Law College) ಇಂತಹದೊದು ಎಡವಟ್ಟು ಮಾಡಿದೆ.

    ಮೇ 2 ರಂದು ಸಂಸ್ಥೆಯ ಆಡಳಿತಾಧಿಕಾರಿ ಶಿವಜ್ಯೋತಿ ನಿರ್ದೇಶನದ ಮೇರೆಗೆ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾರ ಉದಯ್ ಶಂಕರ್ ಈ ಮುಖ್ಯ ಸೂಚನಾ ಪತ್ರ ಹೊರಡಿಸಿದ್ದು ಈಗ ಇಡೀ ರಾಜ್ಯಾದ್ಯಾಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಆರೋಗ್ಯ ಇಲಾಖೆಯಿಂದ ನೋಟಿಸ್‌

    ಕೋವಿಡ್ (Covid) ಸಮಯದಲ್ಲಿ ಪಡೆದ ಕೋವಿಶೀಲ್ಡ್ ವ್ಯಾಕ್ಸಿನ್ (Covishield Vaccine) ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್‌ ನೀರು, ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಕೂಲ್ ಡ್ರಿಂಕ್ಸ್ ಐಸ್ ಕ್ರೀಂ ಫ್ರಿಡ್ಜ್ ವಾಟರ್ ಕುಡಿಯದಂತೆ ತಿಳಿಸಲಾಗಿದೆ.

    ಸೂಚನಾ ಪತ್ರದಲ್ಲಿ ಆರೋಗ್ಯ ಇಲಾಖೆಯ (Health Department) ಮಾಹಿತಿ ತಿಳುವಳಿಕೆ ಪ್ರಕಾರ ಎಂದು ಉಲ್ಲೇಖಿಸಲಾಗಿದ್ದು ಇದು ಬಹುತೇಕ ಸತ್ಯ ಎಂದು ನಂಬಿ ಜನ ಮತ್ತಷ್ಟು ಮಂದಿ ಕಳುಹಿಸುತ್ತಿದ್ದಾರೆ. ವೈರಲ್‌ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಗಮನಕ್ಕೂ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೋಟಿಸ್ ನೀಡಿದ್ದಾರೆ.

    ಟಿವಿ ಮಾಧ್ಯಮ/ ಜಾಹೀರಾತು ಎಂದು ಬದಲಾಯಿಸಿ ಕಾಲೇಜಿನಿಂದ ಮತ್ತೊಂದು ಸೂಚನೆ ಪ್ರಕಟ

    ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಆಡಳಿತಾಧಿಕಾರಿ ಶಿವಜ್ಯೋತಿ ಮತ್ತೆ ಅದೇ ಆದೇಶದ ಆರಂಭದಲ್ಲಿ ಆರೋಗ್ಯ ಇಲಾಖೆ ಎಂಬುದುನ್ನು ತೆಗೆದು ಹಾಕಿ ಟಿವಿ ಮಾಧ್ಯಮ ಹಾಗೂ ಜಾಹೀರಾತು ಮಾಹಿತಿ ಪ್ರಕಾರ ಎಂದು ಬರೆದು ಅದನ್ನೇ ಮರು ಆದೇಶ ಹೊರಡಿಸಿದ್ದಾರೆ.

    ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಿ ಈ ಸೂಚನಾ ಪತ್ರದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

  • ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮ- ಏನಿದು TTS ಸಿಂಡ್ರೋಮ್‌?- ಕಾರಣ ಮತ್ತು ಲಕ್ಷಣಗಳೇನು..?

    ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮ- ಏನಿದು TTS ಸಿಂಡ್ರೋಮ್‌?- ಕಾರಣ ಮತ್ತು ಲಕ್ಷಣಗಳೇನು..?

    – ಐಸಿಎಂಆರ್‌ ಕೊಟ್ಟ ಸ್ಪಷ್ಟನೆ ಏನು..?

    ವಿಶ್ವಾದ್ಯಂತ ಮಹಾಮಾರಿ ಕೊರೊನಾ ವೈರಸ್‌ (Corona Virus) ಜನರನ್ನು ದಂಗುಬಡಿಸಿತ್ತು. ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ ಇನ್ನೂ ಕೆಲವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಈ ನಡುವೆ ಕೊರೊನಾವನ್ನು ಹೊಡೆದೋಡಿಸಲು ಚಿಕಿತ್ಸೆಯನ್ನು ಕಂಡುಹಿಡಿಯಲಾಯಿತು. ಅಂತೆಯೇ ಮಹಾಮಾರಿಗೆ ಭಯ ಬಿದ್ದು ಎಲ್ಲರೂ ಕೋವಿಶೀಲ್ಡ್‌ (Covishield) ಹಾಗೂ ಕೋವ್ಯಾಕ್ಸಿನ್‌ ಮೊರೆ ಹೋದರು.

    ಹೌದು. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು. ಭಾರತ ದೇಶದಲ್ಲಿ ಈ ಲಸಿಕೆ ವ್ಯಾಪಕವಾಗಿ ನಿರ್ವಹಿಸಲ್ಪಟ್ಟಿತು. ಅಲ್ಲದೇ ಪ್ರಪಂಚದಾದ್ಯಂತ ದೇಶಗಳು ತಮ್ಮ ನಾಗರಿಕರಿಗೆ ಈ ಲಸಿಕೆಯನ್ನು ನೀಡುವುದನ್ನು ಮುಂದುವರಿಸಿದವು. ಈ ಮಧ್ಯೆ ಅಪರೂಪದ ಅಡ್ಡಪರಿಣಾಮಗಳ ವರದಿಗಳು ಹೊರಹೊಮ್ಮಿವೆ. ಇದನ್ನು ಟಿಟಿಎಸ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ. ಹಾಗಿದ್ರೆ ಏನಿದು ಟಿಟಿಎಸ್..?‌, ಇದರ ಲಕ್ಷಣಗಳು ಏನೇನು ಎಂಬುದನ್ನು ನೋಡೋಣ. ಜೊತೆಗೆ ಅಡ್ಡಪರಿಣಾಮದ ವಿಚಾರ ಹೊರ ಬೀಳುತ್ತಿದ್ದಂತೆಯೇ ಐಸಿಎಂಆರ್‌ ಸ್ಪಷ್ಟನೆ ಕೂಡ ಕೊಟ್ಟಿದೆ.

    ಏನಿದು TTS ಸಿಂಡ್ರೋಮ್?
    ಟಿಟಿಎಸ್‌ ಅಂದ್ರೆ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್. ರಕ್ತ ಹೆಪ್ಪುಗಟ್ಟುವುದಕ್ಕೆ ಥ್ರಂಬೋಸಿಸ್ ಅಂತಾ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದಕ್ಕೆ ಥ್ರಂಬೋಸೈಟೋಪೆನಿಯಾ ಅಂತಲೂ ಕರೆಯಲಾಗುತ್ತದೆ. ಒಟ್ಟಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್‌ಲೆಟ್‌ಗಳು (ಪ್ರತಿ ಮೈಕ್ರೋಲೀಟರ್‌ಗೆ 1,50,000 ಕ್ಕಿಂತ ಕಡಿಮೆ) ಕಡಿಮೆಯಾಗುವುದಕ್ಕೆ TTS ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.

    TTS ಸಿಂಡ್ರೋಮ್, ಲಸಿಕೆ-ಪ್ರೇರಿತ ಇಮ್ಯೂನ್ ಥ್ರಂಬೋಟಿಕ್ ಥ್ರಂಬೋಸೈಟೋಪೆನಿಯಾ (VITT) ಎಂದೂ ಕರೆಯಲ್ಪಡುವ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯಾಗಿದ್ದು, ಇದು ಕೋವಿಶೀಲ್ಡ್ ಲಸಿಕೆಗೆ ಸಂಬಂಧಿಸಿದೆ. ಇದು ಒಂದು ರೀತಿಯ ಸೆರೆಬ್ರಲ್ ವೆನಸ್ ಸೈನಸ್ ಥ್ರಂಬೋಸಿಸ್ (ಸಿವಿಎಸ್‌ಟಿ) ಆಗಿದ್ದು, ಮೆದುಳಿನ ಸೈನಸ್‌ಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೂಪುಗೊಳ್ಳುತ್ತದೆ. ಮೆದುಳಿನಿಂದ ರಕ್ತವು ಹೊರಹೋಗುವುದನ್ನು ತಡೆಯುತ್ತದೆ. ಇದು ಪ್ಲೇಟ್ಲೆಟ್ ಇಳಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, TTS ಸಿಂಡ್ರೋಮ್ ಗಂಭೀರ ಮತ್ತು ಅಪರೂಪದ ಪ್ರತಿಕೂಲ ಘಟನೆಯಾಗಿದ್ದು, ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಕಡಿಮೆ ಸಂಖ್ಯೆಯ ಜನರಲ್ಲಿ ವರದಿಯಾಗಿದೆ. ಈ ಸ್ಥಿತಿಯು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ವರದಿಯಾಗಿದೆ. ಆದಾಗ್ಯೂ ಲಸಿಕೆಯನ್ನು ಪಡೆಯುವ ಪ್ರಯೋಜನಗಳು TTS ಸಿಂಡ್ರೋಮ್‌ಗೆ ಸಂಬಂಧಿಸಿದ ಅಪಾಯಗಳನ್ನು ಮೀರಿಸುತ್ತದೆ.

    ಕಾರಣಗಳೇನು..?
    TTS ಸಿಂಡ್ರೋಮ್‌ ಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಬಳಿಕ ಉಂಟಾದ ಪ್ರತಿಕ್ರಿಯೆಯಿಂದ ಇದೂ ಒಂದು ಕಾರಣ ಎಂದು ನಂಬಲಾಗಿದೆ. ಲಸಿಕೆ ದೇಹವನ್ನು ಪ್ರವೇಶಿಸಿದಾಗ, ಕೊರೊನಾ ವೈರಸ್ ಮೇಲ್ಮೈಯಲ್ಲಿ ಕಂಡುಬರುವ ಸ್ಪೈಕ್ ಪ್ರೋಟೀನ್ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸಲು ಇದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಕೆಲವು ವ್ಯಕ್ತಿಗಳ ದೇಹದಲ್ಲಿ ಇದು ಬೇಗನೇ ಸಕ್ರಿಯವಾಗಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಗೆ ಕಾರಣವಾಗಬಹುದು.

    ಟಿಟಿಎಸ್ ಸಿಂಡ್ರೋಮ್‌ನ ಲಕ್ಷಣಗಳು:
    * ತೀವ್ರ ಮತ್ತು ನಿರಂತರ ತಲೆನೋವು
    * ಮಂದ ದೃಷ್ಟಿ
    * ಉಸಿರಾಟದ ತೊಂದರೆ
    * ಎದೆ ನೋವು
    * ತೀವ್ರ ಹೊಟ್ಟೆ ನೋವು
    * ತೋಳುಗಳು ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ
    * ರೋಗಗ್ರಸ್ತವಾಗುವಿಕೆ

    ಟಿಟಿಎಸ್ ಸಿಂಡ್ರೋಮ್‌ಗೆ ಚಿಕಿತ್ಸೆ: ಟಿಟಿಎಸ್​​ ಚಿಕಿತ್ಸೆಯು ಬಹು ಹಂತದ ಚಿಕಿತ್ಸೆಯಾಗಿದೆ. ಆಸ್ಪತ್ರೆಗೆ ದಾಖಲೀಕರಣದಿಂದ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಮೂಲಕ ಭವಿಷ್ಯದಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಮತ್ತು ಪ್ಲಾಸ್ಮಾ ಬದಲಾವಣೆ ಮೂಲಕ ಪ್ಲೆಟ್ಲೇಟ್​​ ಮಟ್ಟವನ್ನು ಸ್ಥಿರಗೊಳಿಸಬಹುದು.

    ICMR ಸ್ಪಷ್ಟನೆ: ಅಡ್ಡಪರಿಣಾಮದ ವಿಚಾರ ಹೊರಬೀಳುತ್ತಿದ್ದಂತೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆಯನ್ನು ನೀಡಿದೆ. ಕೊರೊನಾ ಲಸಿಕೆ ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳಲ್ಲಿ ಮಾತ್ರ TTS ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಲಿದೆ. ಮೊದಲ ಡೋಸ್ ಪಡೆದಾಗ ಅಪಾಯವು ಅತ್ಯಧಿಕವಾಗಿರಲಿದೆ. ಆದರೆ ಅದು ಎರಡನೇ ಡೋಸ್‌ಗೆ ಕಡಿಮೆಯಾಗುತ್ತದೆ. ಮೂರನೇ ಡೋಸ್‌ಗೆ ಈ ಅಪಾಯ ಇನ್ನೂ ಕಡಿಮೆಯಾಗಲಿದೆ. ಒಂದು ವೇಳೆ ಅಡ್ಡ ಪರಿಣಾಮ ಸಂಭವಿಸಿದ್ದಲ್ಲಿ ಆರಂಭಿಕ ಎರಡರಿಂದ ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ ಎಂದು ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ನಿವೃತ್ತ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ‌.

  • 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

    10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

    ನವದೆಹಲಿ: ಕೊರೊನಾ (Covid-19) ಲಸಿಕೆ ಕೋವಿಶೀಲ್ಡ್ (Covishield) ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳಲ್ಲಿ ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಭಾರತದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ನಿವೃತ್ತ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ‌.

    ಅಸ್ಟ್ರಾಜೆನೆಕಾ (AstraZeneca) ಕೋವಿಡ್ ಲಸಿಕೆ ಪಡೆದವರಲ್ಲಿ ಅಪರೂಪವಾಗಿ ರಕ್ತ ಹೆಪ್ಪುಗಟ್ಟುವಿಕೆ ಒಳಗೊಂಡ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎನ್ನುವ ವರದಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲ ಡೋಸ್ ಪಡೆದಾಗ ಅಪಾಯವು ಅತ್ಯಧಿಕವಾಗಿರಲಿದೆ. ಆದರೆ ಅದು ಎರಡನೇ ಡೋಸ್‌ಗೆ ಕಡಿಮೆಯಾಗುತ್ತದೆ. ಮೂರನೇ ಡೋಸ್‌ಗೆ ಈ ಅಪಾಯ ಇನ್ನು ಕಡಿಮೆಯಾಗಲಿದೆ. ಒಂದು ವೇಳೆ ಅಡ್ಡ ಪರಿಣಾಮ ಸಂಭವಿಸಿದಲ್ಲಿ ಆರಂಭಿಕ ಎರಡರಿಂದ ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ ಎಂದು ಗಂಗಾಖೇಡ್ಕರ್ ತಿಳಿಸಿದರು. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ಟಿಟಿಎಸ್ ಅನ್ನು ಅಡೆನೊವೈರಸ್ ವೆಕ್ಟರ್ ಲಸಿಕೆಯ ಅಪರೂಪದ ಅಡ್ಡ ಪರಿಣಾಮವೆಂದು ಗುರುತಿಸಲಾಗಿದೆ. ಲಸಿಕೆಯ ತಿಳುವಳಿಕೆಯಲ್ಲಿ ಯಾವುದೇ ಹೊಸ ಅಥವಾ ಬದಲಾವಣೆ ಇಲ್ಲ. ಲಸಿಕೆ ಪಡೆಯುವ 10 ಲಕ್ಷ ಜನರಲ್ಲಿ ಕೇವಲ 7 ರಿಂದ 8 ಜನರಿಗೆ ಅಪಾಯವಿದೆ ಎಂದು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಲಕ್ಷಾಂತರ ಜನರ ಮೇಲೆ ಈ ಲಸಿಕೆಯ ಸಕಾರಾತ್ಮಕ ಪರಿಣಾಮವನ್ನು ಗಮನಿಸಿದರೆ, ಇದಕ್ಕೆ ಸಂಬಂಧಿತ ಅಪಾಯವು ಬಹಳ ಕಡಿಮೆಯಾಗಿದೆ ಎಂದು ಗಂಗಾಖೇಡ್ಕರ್ ಸ್ಪಷ್ಟಪಡಿಸಿದರು.

    ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನೆಕಾ ಕಂಪನಿ ಕೋವಿಶೀಲ್ಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಲಸಿಕೆ ಪಡೆದ ಹಲವರು ಕಂಪನಿ ವಿರುದ್ಧ ಬ್ರಿಟನ್‌ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಸಾವು ಹಾಗೂ ಅಡ್ಡಪರಿಣಾಮದ ಆರೋಪಗಳನ್ನು ಕಂಪನಿ ವಿರುದ್ಧ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಕಂಪನಿಯು ಕೆಲವು ಅಪರೂಪದ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್‌ ವಿತ್‌ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ (ಟಿಟಿಎಸ್‌) ಎಂಬ ಅಡ್ಡಪರಿಣಾಮದ ತೀವ್ರತೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್‍ಗೆ ಮತ್ತೆ ಶಾಕ್- ಇಂದು ಮತ್ತಿಬ್ಬರು ರಾಜೀನಾಮೆ

  • ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ನವದೆಹಲಿ: ಕೋವಿಶೀಲ್ಡ್‌ (Covishield) ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟಿಷ್‌ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಇದಾಗಿದೆ.

    ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದ ದಾಖಲೆಗಳಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಪ್ರಾಧಿಕಾರದಿಂದ 14 ಪತಂಜಲಿ ಉತ್ಪನ್ನಗಳ ಲೈಸನ್ಸ್‌ ರದ್ದು

    ಇಡೀ ಜಗತ್ತನ್ನು ಕಾಡಿದ ಕೋವಿಡ್‌ ಸಾಂಕ್ರಾಮಿಕ ತಡೆಗೆ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು. ದೇಶದಲ್ಲಿ ವ್ಯಾಪಕವಾಗಿ ನಿರ್ವಹಿಸಲ್ಪಟ್ಟಿತು.

    ಯುಕೆಯಲ್ಲಿ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವು ಮತ್ತು ತೀವ್ರತರವಾದ ಗಾಯಗಳಿಗೆ ಕಾರಣವಾದ ಆರೋಪದ ಮೇಲೆ ಅಸ್ಟ್ರಾಜೆನೆಕಾ ಮೊಕದ್ದಮೆ ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್‌ ಪೌಂಡ್‌ಗಳವರೆಗೆ ಪರಿಹಾರ ಬಯಸಿದ್ದಾರೆ. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

  • ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ಪುಣೆ: 10 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ(Covishield Vaccine) ವ್ಯರ್ಥವಾಗಿದೆ ಎಂದು ವಿಶ್ವದ ಅತಿದೊಡ್ಡ ಅತಿ ದೊಡ್ಡ ಲಸಿಕೆ ತಯಾರಿಕೆ ಕಂಪನಿ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ(Serum Institute of India) ಹೇಳಿದೆ.

    ಕಂಪನಿಯ ಸಿಇಒ ಆದಾರ್‌ ಪೂನಾವಾಲ(Adar Poonawalla), 2021ರ ಡಿಸೆಂಬರ್‌ನಲ್ಲೇ ಕೋವಿಡ್‌ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

    ಜನರು ಬೂಸ್ಟರ್‌ ಡೋಸ್‌(Booster Dose) ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಕಾರಣಕ್ಕೆ ನಾವು ಉತ್ಪಾದನೆ ಮಾಡುವುದನ್ನು ನಿಲ್ಲಿಸಿದೆವು ಎಂದಿದ್ದಾರೆ.

    ಈ ವೇಳೆ ಉತ್ಪಾದನೆಯಾಗಿ ಖರೀದಿಯಾಗದೇ ಉಳಿದಿದ್ದ 10 ಕೋಟಿ ಡೋಸ್‌ನಷ್ಟು ಲಸಿಕೆಯ ಅವಧಿ ಮುಗಿದ ಕಾರಣ ವ್ಯರ್ಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೋವಿಶೀಲ್ಡ್‌ ಲಸಿಕೆಯ ಗರಿಷ್ಠ ಬಳಕೆಯ ಅವಧಿ 9 ತಿಂಗಳು ಆಗಿತ್ತು. 2021ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಗರಿಷ್ಠ ಬಳಕೆಯ ಅವಧಿಯನ್ನು ಆರರಿಂದ ಒಂಬತ್ತು ತಿಂಗಳಿಗೆ ಹೆಚ್ಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೋವಿಶೀಲ್ಡ್ ಪಡೆದು ಪುತ್ರಿ ಸಾವು – ಬಿಲ್‌ಗೇಟ್ಸ್ ವಿರುದ್ಧ 1,000 ಕೋಟಿ ಪರಿಹಾರಕ್ಕಾಗಿ ತಂದೆಯ ಕಾನೂನು ಹೋರಾಟ

    ಕೋವಿಶೀಲ್ಡ್ ಪಡೆದು ಪುತ್ರಿ ಸಾವು – ಬಿಲ್‌ಗೇಟ್ಸ್ ವಿರುದ್ಧ 1,000 ಕೋಟಿ ಪರಿಹಾರಕ್ಕಾಗಿ ತಂದೆಯ ಕಾನೂನು ಹೋರಾಟ

    ಮುಂಬೈ: ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದು ಅದರ ಅಡ್ಡ ಪರಿಣಾಮಗಳಿಂದ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ದಿಲೀಪ್ ಲುನಾವತ್ ಎನ್ನುವವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್‌‌ಗೆ ನೋಟಿಸ್ ಜಾರಿ ಮಾಡಿದೆ.

    ಕೋವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ದೇಹಕ್ಕೆ ಯಾವುದೇ ಅಪಾಯ ಅಥವಾ ತೊಂದರೆಗಳನ್ನು ಉಂಟುಮಾಡುವುದಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ತಮ್ಮ ಪುತ್ರಿ ಸ್ನೇಹಲ್ ಲುನಾವತ್ ಅವರಿಗೆ ವೈದ್ಯರು ಭರವಸೆ ನೀಡಿದ್ದರು. ಇದನ್ನು ನಂಬಿ ವ್ಯಾಕ್ಸಿನ್ ಪಡೆದು ಸಾವನ್ನಪ್ಪಿದ್ದಾಳೆ. ಹೀಗಾಗಿ 1,000 ಕೋಟಿ ಪರಿಹಾರ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಅರ್ಜಿ – ಛೀಮಾರಿ ಹಾಕಿ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

    ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಶೋಧನೆ ಮಾಡಿದೆ. ಇದಕ್ಕೆ ಬಿಲ್‌ಗೇಟ್ಸ್ ಫೌಂಡೇಶನ್ ಆರ್ಥಿಕ ನೆರವು ನೀಡಿದೆ. ಈ ವ್ಯಾಕ್ಸಿನ್ ಪಡೆದು ಮಗಳು ಸಾವನ್ನಪ್ಪಿದ್ದಾಳೆ. ಎಇಎಫ್‌ಐ ಸಮಿತಿಯು ಕೋವಿಶೀಲ್ಡ್‌ನ ಅಡ್ಡಪರಿಣಾಮಗಳಿಂದ ಯುವತಿಯ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡಿದೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.

    ಇನ್ನು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ, ಮಹಾರಾಷ್ಟ್ರ ರಾಜ್ಯ ಸರ್ಕಾರ, ಕೇಂದ್ರ ಆರೋಗ್ಯ ಇಲಾಖೆ, ಟಾಸ್ಕ್ ಫೋರ್ಸ್ ಸದಸ್ಯ ಡಾ.ರಣದೀಪ್ ಗುಲೇರಿಯಾ, ಡಿಜಿಸಿಐ ಹಾಗೂ ಬಿಲ್‌ಗೇಟ್ಸ್ ಅವರನ್ನು ಅರ್ಜಿದಾರ ದಿಲೀಪ್ ಲುನಾವತ್ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಅಲ್ಲದೇ ಲಸಿಕೆ ಅಡ್ಡ ಪರಿಣಾಮಗಳಿಂದಾಗುವ ಸಾವುಗಳ ಬಗ್ಗೆ ಸರಿಯಾದ ಡೇಟಾವನ್ನು ಸಂಗ್ರಹಿಸುವಲ್ಲಿ ಪಿತೂರಿ ಮಾಡಿರುವ ಗೂಗಲ್, ಯೂಟ್ಯೂಬ್, ಮೆಟಾ ಮುಂತಾದ ಸಾಮಾಜಿಕ ಮಾಧ್ಯಮ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಕೋರಿದರು. ಇದನ್ನೂ ಓದಿ: ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ಗೆ ಮೋದಿ ಚಾಲನೆ

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ವಿ.ಗಂಗಾಪುರವಾಲಾ ಮತ್ತು ಮಾಧವ್ ಜಾಮ್‌ದಾರ್ ಅವರ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಬಿಲ್‌ಗೇಟ್ಸ್ ಪರವಾಗಿ ವಕೀಲ ಸ್ಮಿತಾ ಠಾಕೂರ್ ನೋಟಿಸ್ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

    ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

    ನವದೆಹಲಿ: ಭಾರತ ಔಷಧ ನಿಯಂತ್ರಕದಿಂದ ಕೋವಿಡ್‌ ವಿರೋಧಿ ಲಸಿಕೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.

    ಈ ಲಸಿಕೆಗಳ ಮಾರುಕಟ್ಟೆ ಮಾರಾಟವನ್ನು ʻಹೊಸ ಔಷಧಗಳು ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮಗಳು, 2019’ರ ಅಡಿಯಲ್ಲಿ ಅನುಮೋದಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವೆಂದ ಮಾತ್ರಕ್ಕೆ ಅಂಗಡಿಗಳಲ್ಲೆಲ್ಲ ಸಿಗುತ್ತೆ ಎಂದರ್ಧವಲ್ಲ. ಈ ಎರಡೂ ಲಸಿಕೆಗಳು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 185 ಓಮಿಕ್ರಾನ್ ಕೇಸ್ ಪತ್ತೆ – ಒಟ್ಟು ಪ್ರಕರಣಗಳ ಸಂಖ್ಯೆ 1,115ಕ್ಕೆ ಏರಿಕೆ

    ಕೋವ್ಯಾಕ್ಸಿನ್‌ ತಯಾರಕಾ ಸಂಸ್ಥೆ ಭಾರತ್‌ ಬಯೋಟೆಕ್‌ ಮತ್ತು ಕೋವಿಶೀಲ್ಡ್‌ ತಯಾರಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಕ್ಲಿನಿಕಲ್‌ ಪ್ರಯೋಗಕ್ಕೆ ಸಂಬಂಧಿಸಿದ ಡೇಟಾವನ್ನು ಭಾರತ ಔಷಧ ನಿಯಂತ್ರಕಕ್ಕೆ ಸಲ್ಲಿಸಿವೆ. ಕೋವಿಡ್-‌19 ವಿಷಯ ತಜ್ಞರ ಸಮಿತಿಯು ಜ.19 ರಂದು ಅನುಮೋದನೆಯನ್ನು ಶಿಫಾರಸು ಮಾಡಿದ ನಂತರ ಮಾರುಕಟ್ಟೆಗೆ ಮಾರಾಟಕ್ಕೆ ಅನುಮತಿಸಲಾಗಿದೆ.

    ಕೋವಿಶೀಲ್ಡ್‌ಗೆ ನಿಯಮಿತ ಮಾರುಕಟ್ಟೆ ಅಧಿಕಾರವನ್ನು ಕೋರಿ ಅ.25 ರಂದು ಡಿಸಿಜಿಐಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ಕೋವ್ಯಾಕ್ಸಿನ್‌ಗೆ ನಿಯಮಿತ ಮಾರುಕಟ್ಟೆ ಅನುಮೋದನೆಗೆ ಭಾರತ್‌ ಬಯೋಟೆಕ್‌ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಕೊರೊನಾ ನಿಯಮ ಮರೆತು ಕ್ರಿಕೆಟ್ ಪಂದ್ಯಾಟ – ಬ್ಯಾಟ್‍ಬೀಸಿ ಸಂಭ್ರಮಿಸಿದ ಜಮೀರ್

    ಭಾರತದಲ್ಲಿ ಈವರೆಗೆ ಕೋವಿಡ್‌ ಲಸಿಕೆ ಅಭಿಯಾನದಲ್ಲಿ 163.84 ಕೋಟಿ ಡೋಸ್‌ ನೀಡಲಾಗಿದೆ. ದೇಶದಲ್ಲಿ ಶೇ.72 ರಷ್ಟು ವಯಸ್ಕರು ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. 15-18 ವಯಸ್ಸಿನ ಮಕ್ಕಳಲ್ಲಿ ಶೇ.52 ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

  • ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

    ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

    ಹೈದರಾಬಾದ್: ಕೋವ್ಯಾಕ್ಸಿನ್, ಕೋವಿಶೀಲ್ಡ್ 2 ವಿಧದ ಲಸಿಕೆ ಪಡೆಯುವುದು ಕೊರೊನಾ ಸೋಂಕಿನ ವಿರುದ್ಧ 4 ಪಟ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ತಿಳಿಸಿದೆ.

    2 ಲಸಿಕೆಗಳನ್ನು ಪಡೆಯುವುದರಿಂದ ಭಾರೀ ಪ್ರತಿಕಾಯ ಶಕ್ತಿ ವೃದ್ಧಿ ಆಗುತ್ತದೆ. ಹೈದರಾಬಾದ್ ಮೂಲದ ಎಜಿಐ ಆಸ್ಪತ್ರೆ ಮತ್ತು ಏಷ್ಯನ್ ಹೆಲ್ತ್‍ಕೇರ್ ಫೌಂಡೇಶನ್ ಸಂಶೋಧಕರು ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್

    ಕೋವಿಡ್ ಲಸಿಕೆ ಪಡೆಯದ, ಸೋಂಕು ಇಲ್ಲದ 330 ಜನರ ಮೇಲೆ ಈ ಪ್ರಯೋಗ ನಡೆಸಲಾಗಿತ್ತು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಒಂದೊಂದು ಡೋಸ್ ಆಗಿ ನೀಡುವುದು ಸುರಕ್ಷಿತವೇ, ಮಿಕ್ಸಿಂಗ್ ಲಸಿಕೆ ಪರಿಣಾಮ ಏನು? ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದೆ.

    ಒಂದೇ ಲಸಿಕೆಯನ್ನು ಎರಡು-ಡೋಸ್‍ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಅಧ್ಯಯನದಲ್ಲಿ ತೊಡಗಿರುವ ಸಂಶೋಧಕರಲ್ಲಿ ಒಬ್ಬರಾಗಿರುವ ಡಾ. ರೆಡ್ಡಿ ಹೇಳಿದ್ದಾರೆ.