Tag: Covid19

  • ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು?

    ಹದಿಹರೆಯದ ಹುಡುಗಿಯರ ಮಿದುಳಿಗೆ ಬೇಗ ವಯಸ್ಸಾಗ್ತಿದೆಯಂತೆ; ಯಾಕೆ ಗೊತ್ತಾ? – ಅಧ್ಯಯನ ಹೇಳೋದೇನು?

    ಧುನಿಕ ಜಗತ್ತಿನಲ್ಲಿ ಮನುಕುಲವನ್ನು ಕೋವಿಡ್‌ನಷ್ಟು ತಲ್ಲಣಗೊಳಿಸಿದ ಮತ್ತೊಂದು ರೋಗವಿಲ್ಲ. ಕೇವಲ ಆರೋಗ್ಯವಷ್ಟೇ ಅಲ್ಲ, ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಅದು ಬೀರಿದ ಪರಿಣಾಮ ಭೀಕರವಾಗಿತ್ತು. ಕೊರೊನಾ ಸಾಂಕ್ರಾಮಿಕವು ಜಾಗತಿಕವಾಗಿ ಜನರ ಮೇಲೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಿತು. ಇದು ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಸದ್ಯಕ್ಕೆ ಕೊರೊನಾ ಹಾವಳಿ ತಗ್ಗಿದೆಯಾದರೂ, ಮಾನವನ ದೇಹದಲ್ಲಿ ಅದರಿಂದಾಗುತ್ತಿರುವ ಎಫೆಕ್ಟ್ ಇನ್ನೂ ನಿಂತಿಲ್ಲ. ಕೋವಿಡೋತ್ತರ ಪರಿಣಾಮಗಳಿಂದ ಜನರು ಇನ್ನೂ ಬಳಲುತ್ತಿದ್ದಾರೆ.

    ಹದಿಹರೆಯದ ಹೆಣ್ಣುಮಕ್ಕಳ ಮೇಲಿನ ಕೋವಿಡೋತ್ತರ ಎಫೆಕ್ಟ್ ಆತಂಕ ಮೂಡಿಸಿದೆ. ಹರೆಯದ ಹೆಣ್ಣುಮಕ್ಕಳ ಮಿದುಳಿಗೆ ಬಹುಬೇಗ ವಯಸ್ಸಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ವೈದ್ಯಕೀಯ ಲೋಕ ಬಿಚ್ಚಿಟ್ಟಿದೆ. ಕೊರೊನಾ ಸಾಂಕ್ರಾಮಿಕದ ಪರಿಣಾಮ ಇದು ಎಂಬ ಅಂಶವನ್ನು ಸಂಶೋಧನಾ ವರದಿ ಉಲ್ಲೇಖಿಸಿದೆ. ಹಾಗಾದ್ರೆ, ಹದಿಹರೆಯದವರ ಮಿದುಳಲ್ಲಿ ಏನಾಗ್ತಿದೆ? ಯಾಕೆ ಬೇಗ ವಯಸ್ಸಾಗ್ತಿದೆ? ಈ ಬಗ್ಗೆ ಸಂಶೋಧನಾ ವರದಿ ಏನು ಹೇಳ್ತಿದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.

    ಹೆಣ್ಣುಮಕ್ಕಳ ಮಿದುಳಲ್ಲಿ ಏನಾಗ್ತಿದೆ?
    ಕೋವಿಡ್-19 ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ನಾಲ್ಕು ವರ್ಷಗಳ ನಂತರ, ವಿಜ್ಞಾನಿಗಳು ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡುವುದನ್ನು ಮುಂದುವರೆಸಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರ ಇತ್ತೀಚಿನ ಅಧ್ಯಯನವು ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳ ಸಮಯದಲ್ಲಿ ಅನೇಕ ಹದಿಹರೆಯದವರ ಮಿದುಳಿಗೆ ಬೇಗ ವಯಸ್ಸಾಗುತ್ತಿದೆ. ಹುಡುಗಿಯರ ಮೇಲೆ ಹೆಚ್ಚು ತೀವ್ರವಾಗಿ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದೆ.

    COVID

    ಸಂಶೋಧಕರು 2018 ರಲ್ಲಿ 9-17 ವರ್ಷ ವಯಸ್ಸಿನ 160 ಮಕ್ಕಳಿನ್ನು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಿದ್ದರು. ಶಾಲಾ ವರ್ಷಗಳಲ್ಲಿ ಅವರ ಮಿದುಳಿನ ಕಾರ್ಟೆಕ್ಸ್ ಸಾಮಾನ್ಯವಾಗಿ ತೆಳುವಾಗುವುದನ್ನು ಅಧ್ಯಯನ ಮಾಡಲು ಅವುಗಳನ್ನು ಬಳಸಿದ್ದರು. ಲಾಕ್‌ಡೌನ್ ನಂತರ, ಸಂಶೋಧಕರು 2021 ಮತ್ತು 2022 ರಲ್ಲಿ 12-16 ರ ವಯೋಮಾನದ ಅದೇ ಮಕ್ಕಳನ್ನು ಮತ್ತೊಮ್ಮೆ ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಿದರು. ಹುಡುಗರ ಮಿದುಳಿನಲ್ಲಿ ಒಂದು ಕಡೆ ಕಾರ್ಟಿಕಲ್ ತೆಳುವಾದರೆ, ಹುಡುಗಿಯರ ಮಿದುಳಿನ 30 ಭಾಗಗಳಲ್ಲಿ ಅಚ್ಚರಿ ಎಂಬಂತೆ ಕಾರ್ಟಿಕಲ್ ತೆಳುವಾಗಿರುವುದು ಕಂಡುಬಂದಿದೆ.

    ಮಿದುಳಿನ ಕಾರ್ಟಿಕಲ್ ವೇಗವಾಗಿ ತೆಳುವಾಗ್ತಿದೆಯೇ?
    ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ನಲ್ಲಿ ಪ್ರಕಟವಾದ ಅಧ್ಯಯನವು ಹದಿಹರೆಯದವರ ಮೆದುಳಿನ ರಚನೆಯ ಮೇಲೆ ಕೋವಿಡ್-19 ಲಾಕ್‌ಡೌನ್‌ಗಳ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದೆ. ಕಾರ್ಟಿಕಲ್ ಗಾತ್ರದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು, ಕೊರೊನಾ ಲಾಕ್‌ಡೌನ್‌ಗೂ ಮೊದಲು ಮತ್ತು ನಂತರದ ಅವಧಿಯಲ್ಲಿ ಹದಿಹರೆಯದವರಿಂದ ಎಂಆರ್‌ಐ ಡೇಟಾವನ್ನು ಸಂಶೋಧಕರು ಸಂಗ್ರಹಿಸಿದರು. ಇದು ಮೆದುಳಿನ ರಚನೆಯ ಅಳತೆಯಾಗಿದೆ. ಲಾಕ್‌ಡೌನ್ ಪೂರ್ವ ಮತ್ತು ನಂತರದ ಅವಧಿಯಲ್ಲಿ ಹದಿಹರೆಯದವರ ಮಿದುಳಿನ ಬೆಳವಣಿಗೆ ಬಗ್ಗೆ ಸಂಶೋಧನೆ ನಡೆಯಿತು. ಹುಡುಗರು ಮತ್ತು ಹುಡುಗಿಯರ ಡೇಟಾಗಳನ್ನು ಹೋಲಿಕೆ ಮಾಡಿ ನೋಡಲಾಯಿತು. ಇಬ್ಬರಲ್ಲೂ ಕಾರ್ಟಿಕಲ್ ವೇಗವಾಗಿ ತೆಳುವಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

    ಕಾರ್ಟೆಕ್ಸ್ ತೆಳುವಾಗುವಿಕೆ ಅಪಾಯಕಾರಿಯೇ?
    ಕಾರ್ಟೆಕ್ಸ್ ತೆಳುವಾಗುವುದು ಅಪಾಯಕಾರಿಯಲ್ಲ. ಕಾರ್ಟಿಕಲ್ ತೆಳುವಾಗುವುದು ಸೆರೆಬ್ರಲ್ ಕಾರ್ಟೆಕ್ಸ್ನ ಗಾತ್ರದಲ್ಲಿನ ತಗ್ಗುವಿಕೆಯನ್ನು ಸೂಚಿಸುತ್ತದೆ. ಮಿದುಳಿನ ಹೊರಗಿನ ಪದರವು ಆಲೋಚನೆ, ಗ್ರಹಿಕೆ ಮತ್ತು ಸ್ವಯಂಪ್ರೇರಿತ ಚಲನೆಯಂತಹ ಕಾರ್ಯಗಳಿಗೆ ಕಾರಣವಾಗಿದೆ. ಈ ತೆಳುವಾಗುವುದು ಮೆದುಳಿನ ಬೆಳವಣಿಗೆಯ ನೈಸರ್ಗಿಕ ಭಾಗವೇ ಆಗಿದೆ. ಕಾರ್ಟೆಕ್ಸ್ ತೆಳುವಾಗುವಿಕೆ ಸಮಸ್ಯೆಯ ಸೂಚನೆಯಲ್ಲ, ಬುದ್ದಿಶಕ್ತಿಯ ಪಕ್ಷತೆಯ ಸಂಕೇತವಾಗಿದೆ. ಆದರೆ, ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಒತ್ತಡದ ಪರಿಸ್ಥಿತಿಗಳು ತೆಳುವಾಗುವಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತವೆ ಎಂಬುದು ಗೊತ್ತಾಗಿದೆ.

    ಸಂಶೋಧಕರು ಹೇಳೋದೇನು?
    2021 ರಲ್ಲಿ ನಡೆಸಿದ ಸ್ಕ್ಯಾನ್‌ಗಳ ವರದಿ ಪ್ರಕಾರ, ಆ ಅವಧಿಯಲ್ಲಿ ಹುಡುಗರು ಮತ್ತು ಹುಡುಗಿಯರು ಕ್ಷಿಪ್ರ ಕಾರ್ಟಿಕಲ್ ತೆಳುವಾಗುವುದನ್ನು ಅನುಭವಿಸಿದ್ದಾರೆ. ಆದರೆ ಇದರ ಪರಿಣಾಮವು ಹುಡುಗಿಯರಲ್ಲಿ ಹೆಚ್ಚು ಗಮನಾರ್ಹವಾಗಿದೆ. ಹೆಣ್ಣುಮಕ್ಕಳ ಸರಾಸರಿ ವಯಸ್ಸಿಗಿಂತ 4.2 ವರ್ಷಗಳಷ್ಟು ಹೆಚ್ಚು ವಯಸ್ಸು ಅವರ ಮಿದುಳಿಗೆ ಆಗುತ್ತಿದೆ. ಹುಡುಗರ ಮಿದುಳಿನಲ್ಲಿ ತೆಳುವಾಗುವಿಕೆಯು ನಿರೀಕ್ಷಿಸಿದ್ದಕ್ಕಿಂತ 1.4 ವರ್ಷಗಳಷ್ಟು ಮುಂದಿದೆ.

    ಉದಾಹರಣೆಗೆ: ಹೆಣ್ಣುಮಕ್ಕಳು ತಮ್ಮ 11ನೇ ವಯಸ್ಸಿನಲ್ಲಿ ಒಮ್ಮೆ ಸಂಶೋಧನೆಗೆ ಒಳಪಟ್ಟಿದ್ದರು. ನಂತರ ಮತ್ತೆ 14ನೇ ವಯಸ್ಸಿಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಗಾದರು. ಈ ಸಂದರ್ಭದಲ್ಲಿ ಅವರ ಮಿದುಳು 18 ವರ್ಷ ವಯಸ್ಸಾದಂತಹ ರಚನೆಯನ್ನು ಹೊಂದಿದೆ.

    ಹೆಣ್ಣುಮಕ್ಕಳಿಗೆ ಏಕೆ ಈ ಸಮಸ್ಯೆ?
    ಸಾಂಕ್ರಾಮಿಕ ರೋಗದಿಂದ ಈ ಸಮಸ್ಯೆ ಉಂಟಾಗಿದೆ. ಇದು ಹದಿಹರೆಯದ ಹುಡುಗಿಯರನ್ನೇ ಹೆಚ್ಚು ಭಾದಿಸಿದೆ. ಸಾಮಾಜಿಕ ಜೀವನದ ಮೇಲೆ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಅವಲಂಬಿತರಾಗಿದ್ದಾರೆ. ಹೆಣ್ಣುಮಕ್ಕಳು ಸ್ನೇಹಿತರೊಟ್ಟಿಗೆ ಕಷ್ಟ-ಸುಖ, ಭಾವನೆಗಳನ್ನು ಹೆಚ್ಚು ಹಂಚಿಕೊಳ್ಳುವ ಮನೋಭಾವದವರು. ಆ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುತ್ತಿದ್ದರು. ಭಾವನಾತ್ಮಕ ವಿಚಾರಗಳಲ್ಲಿ ಸಮಾಜದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಕೋವಿಡ್ ಲಾಕ್‌ಡೌನ್ ಅವರ ಸಾಮಾಜಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಅವರ ಮಿದುಳಿನ ಮೇಲೆ ಪರಿಣಾಮ ಬೀರಿದೆ. ಲಾಕ್‌ಡೌನ್ ಅವರ ಒಂಟಿತನದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಿದೆ ಎಂದು ವಾಷಿಂಗ್ಟನ್ ವಿವಿಯ ಇನ್‌ಸ್ಟಿಟ್ಯೂಟ್ ಫಾರ್ ಲರ್ನಿಂಗ್ & ಬ್ರೆöÊನ್ ಸೈನ್ಸಸ್‌ನ ಸಹ ನಿರ್ದೇಶಕ ಕುಹ್ಲ್ ತಿಳಿಸಿದ್ದಾರೆ.

    ಆಲ್‌ಝೈಮರ್ಸ್, ಪಾರ್ಕಿನ್ಸನ್‌ಗೆ ಕಾರಣ?
    ಕಾರ್ಟಿಕಲ್ ವೇಗವರ್ಧಿತ ತೆಳುವಾಗುವಿಕೆಯು ಆಲ್‌ಝೈಮರ್ಸ್ ಮತ್ತು ಪಾರ್ಕಿನ್ಸನ್‌ನಂತಹ ವೃದ್ಧಾಪ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನರಮಾನಸಿಕ ಅಸ್ವಸ್ಥತೆ ಅಪಾಯವನ್ನೂ ತಂದೊಡ್ಡಬಹುದು. ಖಿನ್ನತೆ ಅಥವಾ ಆತಂಕದಂತಹ ಮನೋವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಸಂಶೋಧಕರಾದ ಕೊರಿಗನ್ ಹೇಳಿದ್ದಾರೆ.

    ಪೋಷಕರಿಗೆ ಎಚ್ಚರಿಕೆಯ ಕರೆಗಂಟೆ!
    ಈ ಸಂಶೋಧನೆಯು ಮಕ್ಕಳ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಕ್ಕಳಲ್ಲಿ ಕಂಡುಬರುವ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಮಾತನಾಡುವ, ಅವರಿಗೆ ಬಾವನಾತ್ಮಕ ಬೆಂಬಲ ನೀಡುವ ಮೂಲಕ ಇಂತಹ ಸಮಸ್ಯೆ ತಡೆಯಲು ಸಹಾಯ ಮಾಡಬಹುದು ಎಂದು ಕೊರಿಗನ್ ತಿಳಿಸಿದ್ದಾರೆ.

  • ಕೇರಳದಲ್ಲಿ ಕೊರೊನಾ ಹೆಚ್ಚಳ – ಕರ್ನಾಟಕದಲ್ಲಿ ಮಾರ್ಗಸೂಚಿ ಪ್ರಕಟ

    ಕೇರಳದಲ್ಲಿ ಕೊರೊನಾ ಹೆಚ್ಚಳ – ಕರ್ನಾಟಕದಲ್ಲಿ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಕೇರಳದಲ್ಲಿ (Kerala) ಕೊರೊನಾ ಪ್ರಕರಣ (Corona Case) ಹೆಚ್ಚಾಗುತ್ತಿದ್ದಂತೆ ಹೊಸವರ್ಷ, ಕ್ರಿಸ್ ಮಸ್ ಹಾಗೂ ಚಳಿಗಾಲ ಗಮನದಲ್ಲಿಟ್ಟು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health and Family Welfare Department) ಹೊಸ ಮಾರ್ಗಸೂಚಿ ಪ್ರಕಟಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    1. ಎಲ್ಲಾ ಹಿರಿಯ ನಾಗರೀಕರು (60 ವರ್ಷ ಹಾಗೂ ಮೇಲ್ಪಟ್ಟವರು), ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು), ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪುದೇಶಗಳಿಗೆ ತೆರಳಬೇಡಿ.

     
    2. ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸುವುದು.   ಇದನ್ನೂ ಓದಿ: ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ – ಮಂಡ್ಯದಲ್ಲಿ ವರ್ಷದ ಮೊದಲ ಕೇಸ್ ಪತ್ತೆ

    3. ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಇತ್ಯಾದಿಗಳ ಪಾಲಿಸುವುದು.

    4. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ, ಮನೆಯಲ್ಲಿರುವುದು ಸೂಕ್ತ, ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರೀಕರು / ದುರ್ಬಲರನ್ನು ಅವಶ್ಯವಿದ್ದಲ್ಲಿ, ಮಾತ್ರವೇ ಭೇಟಿ ಮಾಡುವುದು. ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು, ಜನಸಂದಣಿಯ ಪುದೇಶಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು.

    5. ಅಂತರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸುವುದು.

     

  • ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 12 ಮಂದಿಗೆ ಕೊರೊನಾ

    ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 12 ಮಂದಿಗೆ ಕೊರೊನಾ

    ಬೆಂಗಳೂರು: ಡಿಸೆಂಬರ್‌ ತಿಂಗಳಿನಲ್ಲಿ ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಆಗಮಿಸಿದ 12 ಮಂದಿಗೆ ಕೊರೊನಾ ಸೋಂಕು (Corona Virus) ದೃಢಪಟ್ಟಿದೆ.

    ಸದ್ಯ 12 ಮಂದಿಯೂ ಆರೋಗ್ಯವಾಗಿದ್ದಾರೆ. ಒಟ್ಟು ನಾಲ್ಕು ಜನ ಅಂತರಾಷ್ಟ್ರೀಯ ಪ್ರಯಾಣಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನುಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.  ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಹಾಂಕಾಂಗ್, ಅಮೇರಿಕ, ಥಾಯ್ಲೆಂಡ್‌, ಆಸ್ಟ್ರೇಲಿಯಾ, ಸಿಂಗಾಪುರದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿದೆ. ಇವರಿಗೆ ಬಂದಿರುವ ತಳಿ  ಯಾವುದು ಎಂದು ತಿಳಿಯಲು ಗಂಟಲ ದ್ರವದ ಮಾದರಿಯನ್ನು ಜೀನೋಮ್‌ ಸೀಕ್ವೆನ್ಸ್‌ ಲ್ಯಾಬ್‌ಗೆ ಕಳುಹಿಸಲಾಗಿದೆ.

    ಪ್ರಸ್ತುತ ಈಗ ಪ್ರತಿ ದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ  ರ್‍ಯಾಂಡಮ್‌ ಆಗಿ 100-150 ಮಂದಿಗೆ ಕೊರೊನಾ ಟೆಸ್ಟ್‌ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ಮರಳಿದ ವ್ಯಕ್ತಿಯಲ್ಲಿ ಚೀನಿ ವೈರಸ್?

    ಭಾರತಕ್ಕೆ ಮರಳಿದ ವ್ಯಕ್ತಿಯಲ್ಲಿ ಚೀನಿ ವೈರಸ್?

    ನವದೆಹಲಿ: ಚೀನಾ (China) ಪ್ರವಾಸದಿಂದ ಭಾರತಕ್ಕೆ ಹಿಂತಿರುಗಿದ ವ್ಯಕ್ತಿಯಲ್ಲಿ (Man) ಕೊರೊನಾ (Corona) ಸೋಂಕು ದೃಢಪಟ್ಟಿದ್ದು, ಚೀನಾದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಬಿಎಫ್.7 (BF.7) ಮಾದರಿ ಆಗಿರುವ ಭೀತಿ ಹುಟ್ಟಿಕೊಂಡಿದೆ.

    ಶಹಗಂಜ್ ಪ್ರದೇಶದ ವ್ಯಕ್ತಿ ಡಿಸೆಂಬರ್ 23ರಂದು ಚೀನಾದಿಂದ ಆಗ್ರಾಗೆ ಮರಳಿದ್ದರು. ಬಳಿಕ ಅವರು ಖಾಸಗಿ ಪ್ರಯೋಗಾಲಯದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರ ಅವರ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ. ವ್ಯಕ್ತಿಯಲ್ಲಿ ಬಿಎಫ್.7 ರೂಪಾಂತರಿ ಇರುವ ಭೀತಿಯಿದ್ದು, ಇದೀಗ ವ್ಯಕ್ತಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಈಗ ಗಂಟಲ ದ್ರವದ ಮಾದರಿಯನ್ನು ಜಿನೋಮ್ ಸ್ವಿಕ್ವೆನ್ಸ್ ಲ್ಯಾಬ್‌ಗೆ ಕಳುಹಿಸಲಾಗಿದೆ.

    ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ ಮಾಡಲಾಗಿದೆ. ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸೋಂಕಿತ ವ್ಯಕ್ತಿಯನ್ನು ವೈದ್ಯಾಧಿಕಾರಿಗಳು ಚಿಕಿತ್ಸೆ ಹಾಗೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಬಿಬಿಎಂಪಿ ಎಂಜಿನಿಯರ್‌ಗಳ ಸಂಬಳ ಕಟ್‌

    ಚೀನಾದಲ್ಲಿ ಈ ತಿಂಗಳು ತೀವ್ರವಾಗಿ ಕೋವಿಡ್ ಪ್ರಕರಣಗಳ ಏರಿಕೆ ಕಾಣುತ್ತಿರುವುದರಿಂದ ಭಾರತ ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲು ಈಗಾಗಲೇ ಪ್ರಾರಂಭಿಸಿದೆ. ಚೀನಾಗಿಂತಲೂ ಭಾರತದಲ್ಲಿ ಉತ್ತಮವಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಸಲಾಗಿರುವುದರಿಂದ ಹೆಚ್ಚಿನ ಅಪಾಯವಿಲ್ಲ, ಜನರು ಭಯಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ದಂಪತಿ ಪಾರು- ಸ್ಥಳೀಯರ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • 1,186 ಹೊಸ ಕೇಸ್ – ಮೈಸೂರಲ್ಲಿ ನೂರರ ಗಡಿ ದಾಟಿದ ಕೊರೊನಾ

    1,186 ಹೊಸ ಕೇಸ್ – ಮೈಸೂರಲ್ಲಿ ನೂರರ ಗಡಿ ದಾಟಿದ ಕೊರೊನಾ

    ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಏರಿಳಿತ ಮುಂದುವರಿದಿದೆ. ರಾಜ್ಯದಲ್ಲಿ ಇಂದು 1,186 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 635 ಪ್ರಕರಣಗಳು ವರದಿಯಾಗುವ ಮೂಲಕ ಸ್ವಲ್ಪ ಇಳಿಕೆ ಕಂಡರೂ, ಮೈಸೂರಿನಲ್ಲಿ 121 ಪ್ರಕರಣ ವರದಿಯಾಗಿ ಆತಂಕಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 40,187 ಕ್ಕೆ ಏರಿಕೆಯಾಗಿದೆ. ಇಂದು 1,118 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 40,00,331 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 7,922 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

    ಇಂದಿನ ಪಾಸಿಟಿವಿಟಿ ರೇಟ್ ಶೇ.4.30 ಇದೆ. ಇಂದು 19,561 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,562 ಜನರನ್ನು (ಆರ್‌ಟಿಪಿಸಿಆರ್ 20,697 + 6,865 ರ‍್ಯಾಪಿಡ್ ಆಂಟಿಜನ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 635, ಬಾಗಲಕೋಟೆ 0, ಬಳ್ಳಾರಿ 27, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 13, ಬೀದರ್ 0, ಚಾಮರಾಜನಗರ 27, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 40, ಚಿತ್ರದುರ್ಗ 2, ದಕ್ಷಿಣ ಕನ್ನಡ 23, ದಾವಣಗೆರೆ 6, ಧಾರವಾಡ 28, ಗದಗ 0, ಹಾಸನ 62, ಹಾವೇರಿ 2, ಕಲಬುರಗಿ 12, ಕೊಡಗು 27, ಕೋಲಾರ 13, ಕೊಪ್ಪಳ 5, ಮಂಡ್ಯ 10, ಮೈಸೂರು 121, ರಾಯಚೂರು 19, ರಾಮನಗರ 8, ಶಿವಮೊಗ್ಗ 42, ತುಮಕೂರು 19, ಉಡುಪಿ 15, ಉತ್ತರ ಕನ್ನಡ 14, ವಿಜಯಪುರ 5 ಹಾಗೂ ಯಾದಗಿರಿಯಲ್ಲಿ 2 ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ- ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದು ನಾಪತ್ತೆಯಾಗಿದ್ದಾಕೆ ಕೊನೆಗೂ ಲಾಕ್

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,191 ಮಂದಿಗೆ ಕೊರೊನಾ ಸೋಂಕು – ಎರಡು ದಿನದಲ್ಲಿ 6 ಮಂದಿ ಸಾವು

    ರಾಜ್ಯದಲ್ಲಿಂದು 1,191 ಮಂದಿಗೆ ಕೊರೊನಾ ಸೋಂಕು – ಎರಡು ದಿನದಲ್ಲಿ 6 ಮಂದಿ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಕರಣ ಮಾತ್ರ ದಿನವೂ ಪತ್ತೆಯಾಗುತ್ತಿದೆ. ರಾಜ್ಯದಲ್ಲಿಂದು 1,191 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಸಹ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 2,032 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,99,213 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 29,104 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,85,20,201 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಕ್ಲಾಸ್ ಬೆನ್ನಲ್ಲೇ BDA ಆಯುಕ್ತ ರಾಜೇಶ್‌ಗೌಡ ಎತ್ತಂಗಡಿ

    ಕೋವಿಡ್‌ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,185 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.4.09 ಇದೆ. 7,856 ಸಕ್ರಿಯ ಪ್ರಕರಣಗಳಿವೆ. ಇಂದು 29,104 (ರ‍್ಯಾಪಿಡ್ ಆಂಟಿಜನ್‌ 7,236, ಆರ್‌ಟಿಪಿಸಿಆರ್‌ 21,868) ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 42,928 ಮಂದಿ ರಾಜ್ಯಾದ್ಯಂತ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    ಬೆಂಗಳೂರು ನಗರದಲ್ಲೇ 668 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 10, ಬಾಗಲಕೋಟೆ 1, ಬಳ್ಳಾರಿ 21, ಬೆಳಗಾವಿ 16, ಬೀದರ್ 1, ಚಾಮರಾಜನಗರ 15, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 28, ಚಿತ್ರದುರ್ಗ 8, ದಕ್ಷಿಣ ಕನ್ನಡ 19, ದಾವಣಗೆರೆ 8, ಧಾರವಾಡ 12, ಗದಗ 0, ಹಾಸನ 48, ಹಾವೇರಿ 3, ಕಲಬುರಗಿ 9, ಕೊಡಗು 10, ಕೋಲಾರ 24, ಕೊಪ್ಪಳ 4, ಮಂಡ್ಯ 16, ಮೈಸೂರು 93, ರಾಯಚೂರು 18, ರಾಮನಗರ 70, ಶಿವಮೊಗ್ಗ 33, ತುಮಕೂರು 17, ಉಡುಪಿ 15, ಉತ್ತರ ಕನ್ನಡ 10, ವಿಜಯಪುರದಲ್ಲಿ 2 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಏರಿಳಿತ; ರಾಜ್ಯದಲ್ಲಿಂದು 1,329 ಮಂದಿಗೆ ಕೊರೊನಾ – ಮೂರೇ ದಿನಗಳಲ್ಲಿ 16 ಜೀವ ಬಲಿ

    ಕೋವಿಡ್ ಏರಿಳಿತ; ರಾಜ್ಯದಲ್ಲಿಂದು 1,329 ಮಂದಿಗೆ ಕೊರೊನಾ – ಮೂರೇ ದಿನಗಳಲ್ಲಿ 16 ಜೀವ ಬಲಿ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿತವಾಗುತ್ತಿದೆ. ಗುರುವಾರ 1,691 ಇದ್ದ ಸೋಂಕಿನ ಪ್ರಕರಣ ಶುಕ್ರವಾರ 2,032ಕ್ಕೆ ಏರಿಕೆಯಾಗಿತ್ತು. ಇಂದು 1,329 ಪ್ರಕರಣಗಳು ವರದಿಯಾಗಿದೆ. ಅಲ್ಲದೇ ಇಂದು ಸಹ 5 ಮಂದಿ ಮೃತಪಟ್ಟಿದ್ದು, ಕಳೆದ ಮೂರು ದಿನಗಳಲ್ಲಿ 16 ಜೀವಗಳು ಕೊರೊನಾ ಸೋಂಕಿಗೆ ಬಲಿಯಾಗಿವೆ.

    ಇಂದು ರಾಜ್ಯದಲ್ಲಿ 1,614 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,79,155 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 31,154 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,81,80,482 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ: ವಾಣಿಜ್ಯ ಮಂಡಳಿಯಿಂದ ಅಭಿನಂದನ ಕಾರ್ಯಕ್ರಮ

    ಕೋವಿಡ್‌ನಿಂದ ಇಂದು 5 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,144 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.4.26 ಇದೆ. 10,105 ಸಕ್ರಿಯ ಪ್ರಕರಣಗಳಿವೆ. ಇಂದು 31,154 ಮಂದಿಯನ್ನು (8,187 ರ‍್ಯಾಪಿಡ್ ಆಂಟಿಜನ್, 22,967 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 47,299 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಬೆAಗಳೂರು ನಗರದಲ್ಲೇ 791 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 16, ಬಾಗಲಕೋಟೆ 3, ಬಳ್ಳಾರಿ 50, ಬೆಳಗಾವಿ 18, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 5, ಚಿತ್ರದುರ್ಗ 6, ದಕ್ಷಿಣ ಕನ್ನಡ 17, ದಾವಣಗೆರೆ 30, ಧಾರವಾಡ 38, ಗದಗ 2, ಹಾಸನ 55, ಹಾವೇರಿ 10, ಕಲಬುರಗಿ 16, ಕೊಡಗು 21, ಕೋಲಾರ 19, ಕೊಪ್ಪಳ 8, ಮಂಡ್ಯ 28, ಮೈಸೂರು 38, ರಾಯಚೂರು 46, ರಾಮನಗರ 19, ಶಿವಮೊಗ್ಗ 25, ತುಮಕೂರು 22, ಉಡುಪಿ 8, ಉತ್ತರ ಕನ್ನಡ 21, ವಿಜಯಪುರ 6 ಹಾಗೂ ಯಾದಗಿರಿಯಲ್ಲಿ 3 ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 2 ಸಾವಿರ ಮಂದಿಗೆ ಕೊರೊನಾ – ಎರಡೇ ದಿನಗಳಲ್ಲಿ 11 ಜೀವ ಬಲಿ

    ರಾಜ್ಯದಲ್ಲಿಂದು 2 ಸಾವಿರ ಮಂದಿಗೆ ಕೊರೊನಾ – ಎರಡೇ ದಿನಗಳಲ್ಲಿ 11 ಜೀವ ಬಲಿ

    ಬೆಂಗಳೂರು: ಕಳೆದ ಎರಡು ವಾರಗಳ ಹಿಂದೆ ಸಮತೋಲನದಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣ ದಿಢೀರ್‌ ಏರಿಕೆಯಾಗುತ್ತಿದೆ. ನಿನ್ನೆ 1,691 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 2,032ಕ್ಕೇ ಏರಿಕೆಯಾಗಿದೆ. ನಿನ್ನೆ 6 ಮಂದಿ ಮೃತಪಟ್ಟಿದ್ದು, ಇಂದು 5 ಜೀವಗಳು ಕೊರೊನಾ ಸೋಂಕಿಗೆ ಬಲಿಯಾಗಿವೆ.

    ಇಂದು ರಾಜ್ಯದಲ್ಲಿ 1,686 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,77,541 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 30,638 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,81,49,328 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಕೋವಿಡ್‌ನಿಂದ ಇಂದು 5 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,139 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.63 ಇದೆ. 10,395 ಸಕ್ರಿಯ ಪ್ರಕರಣಗಳಿವೆ. ಇಂದು 3.,638 ಮಂದಿಯನ್ನು (9,213 ರ‍್ಯಾಪಿಡ್ ಆಂಟಿಜನ್, 21,425 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 86,105 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ

    ಬೆಂಗಳೂರು ನಗರದಲ್ಲೇ 1,202 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 60, ಬಾಗಲಕೋಟೆ 18, ಬಳ್ಳಾರಿ 63, ಬೆಳಗಾವಿ 45, ಬೀದರ್ 0, ಚಾಮರಾಜನಗರ 17, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರಿ 1, ಚಿತ್ರದುರ್ಗ 6, ದಕ್ಷಿಣ ಕನ್ನಡ 14, ದಾವಣಗೆರೆ 39, ಧಾರವಾಡ 75, ಗದಗ 1, ಹಾಸನ 77, ಹಾವೇರಿ 12, ಕಲಬುರಗಿ 34, ಕೊಡಗು 25, ಕೋಲಾರ 36, ಕೊಪ್ಪಳ 15, ಮಂಡ್ಯ 31, ಮೈಸೂರು 132, ರಾಯಚೂರು 35, ರಾಮನಗರ 17, ಶಿವಮೊಗ್ಗ 29, ತುಮಕೂರು 13, ಉಡುಪಿ 7, ಉತ್ತರ ಕನ್ನಡ 12, ವಿಜಯಪುರ 1 ಹಾಗೂ ಯಾದಗಿರಿಯಲ್ಲಿ 3 ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ರೋಗಿ ಬೇರೆ ಕಾರಣಗಳಿಂದ ಸಾವನ್ನಪ್ಪಿದರೂ ಕೋವಿಡ್ ಸಾವೆಂದೇ ಪರಿಗಣನೆ: ಅಲಹಾಬಾದ್ ಹೈಕೋರ್ಟ್

    ಕೋವಿಡ್ ರೋಗಿ ಬೇರೆ ಕಾರಣಗಳಿಂದ ಸಾವನ್ನಪ್ಪಿದರೂ ಕೋವಿಡ್ ಸಾವೆಂದೇ ಪರಿಗಣನೆ: ಅಲಹಾಬಾದ್ ಹೈಕೋರ್ಟ್

    ಲಕ್ನೋ: ಕೋವಿಡ್-19 ರೋಗಿ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪಿದರೆ, ಸಾವಿನ ಕಾರಣ ಯಾವುದೇ ಇದ್ದರೂ ಅವರ ಸಾವನ್ನು ಕೋವಿಡ್ ಸಾವು ಎಂದೇ ಪರಿಗಣಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

    ಕೋವಿಡ್ ರೋಗಿಯ ಸಾವಿಗೆ ಕಾರಣ ಹೃದಯಾಘಾತ ಅಥವಾ ಇನ್ನಾವುದೇ ಕಾರಣ ಇದ್ದರೂ ಅದನ್ನು ನಿರ್ಲಕ್ಷಿಸಿ, ಅದನ್ನು ಕೋವಿಡ್ ಸಾವು ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಹಾಕಿಸಿಕೊಂಡವರಿಗೆ ಉಚಿತ ಪುರಿ ಸಾಗು

    ನ್ಯಾಯಮೂರ್ತಿ ಎ.ಆರ್ ಮಸೂದಿ ಮತ್ತು ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಅವರ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಕೋವಿಡ್-19 ರೋಗಿಯ ಮರಣದ ನಂತರ, ಅವರ ಕುಟುಂಬಕ್ಕೆ 30 ದಿನಗಳ ಒಳಗೆ ಪರಿಹಾರ ಮೊತ್ತವನ್ನು ಪಾವತಿಸಬೇಕು. 1 ತಿಂಗಳಿನಲ್ಲಿ ಪರಿಹಾರ ನೀಡಲು ಸಾಧ್ಯವಾಗದೇ ಹೋದರೆ, ಬಳಿಕ ಶೇ.9 ರಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ

    ಕೋವಿಡ್-19 ರೋಗಿಯ ಯಾವುದೇ ಅಂಗದ ಮೇಲೆ ಪರಿಣಾಮ ಬೀರಬಹುದು ಹಾಗೂ ಹಾನಿಯನ್ನು ಉಂಟುಮಾಡಬಹುದು. ಇದರಿಂದಾಗಿ ರೋಗಿಯ ಸಾವಾಗಬಹುದು ಎಂದು ನ್ಯಾಯಾಲಯ ಹೇಳಿದೆ. ಕೋವಿಡ್ ರೋಗಿಯ ಅಂಗಾAಗ ವೈಫಲ್ಯದಿಂದ ಉಂಟಾಗುವ ಸಾವನ್ನು ಪ್ರತ್ಯೇಕ ಕಾರಣ ನೀಡಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಮಾನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ನಿನ್ನೆ 939 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 1,425ಕ್ಕೆ ಏರಿಕೆಯಾಗಿದೆ. ನಿನ್ನೆಯಂತೆ ಇಂದೂ ಒಂದು ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 1,459 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,49,147 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 23,150 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,38,495 ಮಂದಿಗೆ ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,092 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.15 ಇದೆ. 8,861 ಸಕ್ರಿಯ ಪ್ರಕರಣಗಳಿವೆ. ಇಂದು 23,150 ಮಂದಿಯನ್ನು (9,335 ರ‍್ಯಾಪಿಡ್ ಆಂಟಿಜನ್, 13,815 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 85,475 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 1,198 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 19, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 15, ಬೆಳಗಾವಿ 12, ಬೀದರ್ ನಲ್ಲಿ 4, ಚಾಮರಾಜನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 4, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 4, ಧಾರವಾಡದಲ್ಲಿ 17, ಕಲಬುರಗಿ ಹಾಗೂ ಕೊಡಗಿನಲ್ಲಿ ತಲಾ 7, ಕೋಲಾರದಲ್ಲಿ 8, ಮಂಡ್ಯದಲ್ಲಿ 5, ಮೈಸೂರಿನಲ್ಲಿ 53, ರಾಯಚೂರಿನಲ್ಲಿ 3, ಶಿವಮೊಗ್ಗ 9, ತುಮಕೂರಿನಲ್ಲಿ 18, ಉಡುಪಿಯಲ್ಲಿ 3, ಉತ್ತರ ಕನ್ನಡದಲ್ಲಿ 7, ವಿಯಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]