Tag: Covid Variant

  • ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

    ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

    ವಾಷಿಂಗ್ಟನ್‌: 2020ರಲ್ಲಿ ಕಾಣಿಸಿಕೊಂಡು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದುಕೊಂಡಿದ್ದ ಕೊರೊನಾ ವೈರಸ್‌  ಇದೀಗ ಮತ್ತೊಂದು ಹೊಸ ರೂಪ (Covid New Variant) ಪಡೆದುಕೊಂಡಿದೆ.

    ಎಕ್ಸ್‌ಇಸಿ (XEC) ಎಂಬ ಹೆಸರಿನ ಕೋವಿಡ್‌ ರೂಪಾಂತರ ಯುರೋಪ್‌ ದೇಶಗಳಲ್ಲಿ (Europe Countries) ಪತ್ತೆಯಾಗಿದ್ದು, ಸುಮಾರು 27 ದೇಶಗಳಿಗೆ ಭಾರಿ ಆತಂಕ ಹುಟ್ಟಿಸಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ!

    ಮೂಲಗಳ ಪ್ರಕಾರ, ಒಮಿಕ್ರಾನ್‌ ಉಪತಳಿಯಾಗಿರುವ ಎಕ್ಸ್‌ಇಸಿ ರೂಪಾಂತರವನ್ನು ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು. ಬಳಿಕ ಯುಕೆ, ಯುಎಸ್‌ (USA), ಡೆನ್ಮಾರ್ಕ್‌, ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್ (Ukraine), ಪೋರ್ಚುಗಲ್ ಸೇರಿದಂತೆ ಸುಮಾರು 27 ದೇಶಗಳಲ್ಲಿ 500 ಮಾದರಿಗಳು ಕಾಣಿಸಿಕೊಂಡಿವೆ.

    ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಅದರಲ್ಲಿ ಜರ್ಮನಿ, ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಮಾರಣಾಂತಿಕ ಪ್ರಮಾಣದಲ್ಲಿ ವೈರಸ್‌ ಹರಡುತ್ತಿವೆ. ಎಚ್ಚೆತ್ತು ಆದಷ್ಟು ಬೇಕ ಲಸಿಕೆ ಪಡೆದುಕೊಂಡರೇ ಕನಿಷ್ಠ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಲಂಡನ್‌ನಲ್ಲಿರುವ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್‌.1? ಇದು ಅಪಾಯಕಾರಿಯೇ?

    XEC ರೂಪಾಂತರದ ಲಕ್ಷಣಗಳೇನು?
    * ಜ್ವರ
    * ಗಂಟಲು ನೋವು
    * ಕೆಮ್ಮು
    * ವಾಸನೆ ಗ್ರಹಿಕೆ ಕಳೆದುಕೊಳ್ಳುವುದು
    * ಹಸಿವಾಗದೇ ಇರುವುದು
    * ಮೈ-ಕೈ ನೋವು ಸೇರಿದಂತೆ ಹಿಂದಿನ ಕೋವಿಡ್‌ ಲಕ್ಷಣಗಳು

    ಪರಿಹಾರ ಏನು?
    * ಲಕ್ಷಣಗಳು ಕಂಡುಬಂದ ಕೂಡಲೇ ತಪಾಸಣೆಗೆ ಒಳಗಾಗಿ ಲಸಿಕೆ ಪಡೆದುಕೊಳ್ಳುವುದು
    * ಶುದ್ಧ ಗಾಳಿ, ನೀರು ಸೇವನೆಯೊಂದಿಗೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು
    * ರೋಗ ಲಕ್ಷಣಗಳ ಬಗ್ಗೆ ತಿಳಿಯಲು ಮುಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಗಾಗುವುದು

  • ಕೋವಿಡ್-19 ಕರ್ತವ್ಯ ನಿರತ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನ ನೀಡದ ಸರ್ಕಾರ

    ಕೋವಿಡ್-19 ಕರ್ತವ್ಯ ನಿರತ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನ ನೀಡದ ಸರ್ಕಾರ

    -7 ತಿಂಗಳ ಸಂಬಳ ನೀಡಲು ಇಲಾಖೆ ಬಜೆಟ್ ಕೊರತೆ

    ರಾಯಚೂರು: ಕೋವಿಡ್ ಮೂರನೇ ಅಲೆಯ ಆತಂಕ ಈಗ ಎಲ್ಲೆಡೆ ಮತ್ತೇ ಹೆಚ್ಚಾಗುತ್ತಿದೆ. ಕೋವಿಡ್ ಪ್ರಕರಣಗಳು ಕೂಡ ಅಲ್ಲಲ್ಲಿ ಪತ್ತೆಯಾಗಲು ಶುರುವಾಗಿದೆ. ಆದರೆ ಕೋವಿಡ್ ಎರಡನೇ ಅಲೆಯಲ್ಲಿ ಪ್ರಾಣವನ್ನು ಒತ್ತೆಯಿಟ್ಟು ದುಡಿದ ಡಿ ಗ್ರೂಪ್ ನೌಕರರಿಗೆ 7 ತಿಂಗಳಾದ್ರೂ ಸಂಬಳವಿಲ್ಲ. ಮೊಸಳೆ ಕಣ್ಣಿನ ಸರ್ಕಾರದ ವರ್ತನೆಗೆ ರಾಯಚೂರು ಸೇರಿ ರಾಜ್ಯದ ಸಾವಿರಾರು ಬಡ ನೌಕರರು ಊಟಕ್ಕೂ ತೊಂದರೆ ಪಡುವಂತಾಗಿದೆ.

    ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಡಿ ಗ್ರೂಪ್ ನೌಕರರಿಗೆ ಈ ವರೆಗೂ ಸನ್ಮಾನ ಬಿಟ್ಟರೆ ಸಂಬಳ ಅಂತ ಬಿಡಿಗಾಸು ಸಿಕ್ಕಿಲ್ಲ. ರಾಯಚೂರು ಜಿಲ್ಲೆಯಲ್ಲಿ 80 ಜನರನ್ನು ನೇಮಕ ಮಾಡಿಕೊಂಡು ರಿಮ್ಸ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಇದೀಗ ಏಳು ತಿಂಗಳಾದರೂ ಒಂದು ತಿಂಗಳ ಸಂಬಳವನ್ನೂ ನೀಡಿಲ್ಲ. ಹೆಸರಿಗೆ ಕೋವಿಡ್ ವಾರಿಯರ್ಸ್ ಅಂತ ಕರೆದ ಸರ್ಕಾರ ಸಂಬಳ ಕೊಡದೆ ಸತಾಯಿಸುತ್ತಿದೆ. ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಜನ ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ

    ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯುಟ್ಟು ಟಾರ್ಗೆಟ್ ಒತ್ತಡದಲ್ಲಿ ಕೆಲಸ ಮಾಡಿದ ಸಿಬ್ಬಂದಿ ಈಗ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದಾರೆ. ಕಳೆದ ಏಳುತಿಂಗಳಿಂದ ತಮ್ಮ ಸ್ವಂತ ಖರ್ಚಿನಲ್ಲೇ ಓಡಾಡಿಕೊಂಡು ದುಡಿಯುತ್ತಿದ್ದಾರೆ. ಎಆರ್‍ಸಿ ಕಡೆಯಿಂದ ನೇಮಕ ಮಾಡಿಕೊಳ್ಳಲಾದ ಸಿಬ್ಬಂದಿಗೆ ಬಜೆಟ್ ಕೊರತೆ ಕಾರಣ ಹೇಳಿ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಕೋವಿಡ್ ರಿಸ್ಕ್ ಅಲೊಯನ್ಸ್ ನೀಡುವುದಾಗಿ ಸರ್ಕಾರ ಹೇಳಿತ್ತು, ಆದರೆ ಅದನ್ನು ಪೂರ್ಣಾವಧಿ ನೌಕರರಿಗೆ ಹಾಕಿ ಗುತ್ತಿಗೆ ನೌಕರರನ್ನು ಕಡೆಗಣಿಸಲಾಗಿದೆ. ಹೀಗಾಗಿ ನೌಕರರು ಸಂಬಳಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇನ್ನೂ ಅಧಿಕಾರಿಗಳು ಮಾತ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ. ಅನುದಾನ ಕೊರತೆಯಿದೆ, ಒಂದೆರಡು ಜಿಲ್ಲೆಯಲ್ಲಿ ಸಂಬಳ ಕೊಟ್ಟಿರಬಹುದು ಬಹುತೇಕ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಅನುದಾನದ ಪ್ರಸ್ತಾವನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಒಟ್ನಲ್ಲಿ, ಕೋವಿಡ್ ಸಮಯದಲ್ಲಿ ಡಿ ಗ್ರೂಪ್ ನೌಕರರನ್ನೂ ದೇವರಂತೆ ಬಿಂಬಿಸಿದ ಸರ್ಕಾರ ಈಗ ಅವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಷ್ಟ ಕಾಲದಲ್ಲಿ ದುಡಿದವರು ಈಗ ಸಂಬಳವಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಈಗಲಾದ್ರೂ ಸರ್ಕಾರ ಎಚ್ಚೆತ್ತು ಸಿಬ್ಬಂದಿ ಸಂಬಳ ಬಿಡುಗಡೆ ಮಾಡಬೇಕಿದೆ.

  • ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ

    ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಹೊಸ ಕೊರೊನಾ ವೈರಸ್ B.1.1.529 ರೂಪಾಂತರಿ ತಳಿ ಜಗತ್ತಿನ ಕಳವಳಕ್ಕೆ ಕಾರಣವಾಗಿದೆ.

    ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಗಳ ಬಗ್ಗೆ ವಿಶ್ವಾದ್ಯಂತ ಕಳವಳ ವ್ಯಕ್ತವಾಗುತ್ತಿದ್ದು, ಇದು ಇಲ್ಲಿಯವರೆಗಿನ ಅತಿ ಹೆಚ್ಚು ರೂಪಾಂತರವನ್ನು ಹೊಂದಿರುವ ರೂಪಾಂತರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (New Covid Variant B.1.1529). ಅದರಲ್ಲಿ ಹಲವಾರು ರೂಪಾಂತರಗಳಿದ್ದು, ಇದನ್ನು ವಿಜ್ಞಾನಿಗಳು ಭಯಾನಕ ಎಂದು ಕರೆದಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಹೊಸ ರೂಪಾಂತರ ವೈರಸ್‌ ಚೀನಾದ ವುಹಾನ್‌ನಲ್ಲಿ ಕಂಡುಬಂದಿದ್ದ ಮೂಲ ವೈರಸ್‌ಗಿಂತ ಸಾಕಷ್ಟು ಭಿನ್ನವಾಗಿದ್ದು, ಇದುವರೆಗಿನ ಮೂಲ ವೈರಸ್ ಅನ್ನು ಗಮನದಲ್ಲಿಟ್ಟುಕೊಂಡು ಲಸಿಕೆಯನ್ನು ತಯಾರಿಸಲಾಗಿದೆ. ಆದರೆ, ಈ ರೂಪಾಂತರಿಗೆ  ಲಸಿಕೆ ಎಷ್ಟು ಪರಿಣಾಮಕಾರಿ ಎಂದು ಹೇಳಲು ತಜ್ಞರಿಗೆ ಕೂಡ ಆಗುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರತಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾ, ಬೋಟ್ಸ್ ವಾನಾ ಸೇರಿ ಆಫ್ರಿಕಾದ ನಾಲ್ಕು ರಾಷ್ಟ್ರಗಳ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸಿ, ಲಸಿಕೆ ತಗೊಂಡಿದ್ದರೂ ಸಾಮಾಜಿಕ ಅಂತರ, ಮಾಸ್ಕ್ ಮರೆಯದಿರಿ ಎಂದಿದೆ. ಇನ್ನು, ಎರಡು ವರ್ಷಗಳ ಬಳಿಕ ಅಂದರೆ ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    ಕೋವಿಡ್ ಹೆಚ್ಚಿರುವ 14 ದೇಶಗಳಿಂದ ಬರುವ ವಿಮಾನಗಳಿಂದ ಬಯೋ ಬಬಲ್ ಪದ್ಧತಿ ಅನುಸರಿಸುವುದಾಗಿ ಭಾರತ ಸರ್ಕಾರ ತಿಳಿಸಿದೆ. ಈ ಮಧ್ಯೆ, ಯುರೋಪ್‍ನಲ್ಲಿ 5-11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಫೈಜರ್ ಸಂಸ್ಥೆಗೆ ಅನುಮತಿಸಲಾಗಿದೆ. ಈಗಾಗಲೇ ಆಸ್ಟ್ರೀಯಾದಲ್ಲಿ ಚಿಕ್ಕ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ)  ಅನುಮತಿ ನೀಡಿದೆ. ಭಾರತದಲ್ಲಿ ಬೂಸ್ಟರ್ ಡೋಸ್ ನೀಡುವ ಸಂಬಂಧ ಕೇಂದ್ರದ ನಿಲುವೇನು ಎಂದು ದೆಹಲಿ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.

  • ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

    ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

    ವಾಷಿಂಗ್ಟನ್‌: ಸಾಕುಪ್ರಾಣಿಗಳು ಸಹ ಕೊರೊನಾ ವೈರಸ್‌ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗಬಹುದು ಎಂಬ ಮಾಹಿತಿಯನ್ನು ವೆಟರ್ನರಿ ರೆಕಾರ್ಡ್‌ನಲ್ಲಿನ ಹೊಸ ಅಧ್ಯಯನವು ಬಹಿರಂಗಪಡಿಸಿದೆ.

    ಆಲ್ಫಾ ಸೋಂಕು ಮೊದಲ ಬಾರಿಗೆ ಆಗ್ನೇಯ ಇಂಗ್ಲೆಂಡ್‌ನಲ್ಲಿ ಪತ್ತೆಯಾಯಿತು. ಹೀಗಾಗಿ ಇದನ್ನು ಯುಕೆ ರೂಪಾಂತರ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಇಂಗ್ಲೆಂಡ್‌ನಲ್ಲಿ ಎರಡು ಬೆಕ್ಕು ಹಾಗೂ ಒಂದು ಶ್ವಾನಕ್ಕೆ ಆಲ್ಫಾ ಸೋಂಕು ತಗುಲಿರುವುದು ಪಿಸಿಆರ್‌ ಪರೀಕ್ಷೆಯಿಂದ ದೃಢಪಟ್ಟಿದೆ.

    COVID

    ಮಾಲೀಕರು ತಮ್ಮ ಸಾಕುಪ್ರಾಣಿಗಳು ಉಸಿರಾಟ ಸಮಸ್ಯೆ ಸೇರಿದಂತೆ ಕೆಲವು ರೋಗಲಕ್ಷಣಗಳಿಂದ ಬಳಲುತ್ತಿದ್ದುದನ್ನು ಗುರುತಿಸಿ ಅವುಗಳಿಗೆ ಕೋವಿಡ್‌-19 ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಅವುಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿರುವುದೂ ಬೆಳಕಿಗೆ ಬಂತು.

    ಬೆಕ್ಕು ಹಾಗೂ ಶ್ವಾನದಂತಹ ಸಾಕುಪ್ರಾಣಿಗಳು ಕೊರೊನಾ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗುವುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಸಾಕುಪ್ರಾಣಿಗಳಿಗೂ ಸಾರ್ಸ್‌-ಕೋವ್‌-2 ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ಈಗ ದಟ್ಟೈಸಿದೆ ಎಂದು ರಾಲ್ಫ್‌ ವೆಟರ್ನರಿ ರೆಫೆರಲ್‌ ಸೆಂಟರ್‌ನ ಲೀಡ್‌ ಆಥರ್‌ ಲುಖ ಫೆರಸಿನ್‌ ತಿಳಿಸಿದ್ದಾರೆ. ಇದನ್ನೂ ಓದಿ: ‘ಅಪ್ಪು’ ನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

    ಕೋವಿಡ್‌ ಪೀಡಿತರಲ್ಲಿ ಹೆಚ್ಚು ಕಂಡುಬರುವ ಹೃದಯ ಸಂಬಂಧಿ ಸಮಸ್ಯೆಗಳನ್ನು ನಾವು ವರದಿ ಮಾಡಿದ್ದೇವೆ. ಜೊತೆಗೆ ಕೋವಿಡ್‌ ಪಾಸಿಟಿವ್‌ ಮನುಷ್ಯರಿಂದ ಸಾಕುಪ್ರಾಣಿಗಳಿಗೂ ಹರಡಬಹುದು ಎಂಬುದು ಸಹ ನಮ್ಮ ಅಧ್ಯಯನದಿಂದ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.