Tag: Covid vaccine

  • ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    ನವದೆಹಲಿ: ಕೋವಾಕ್ಸಿನ್‌ ಲಸಿಕೆ ಅಭಿವೃದ್ಧಿ ಪಡಿಸಿದ ಹೈದರಾಬಾದ್‌ನ ಭಾರತ್ ಬಯೋಟೆಕ್‌ನ(Bharat Biotech) ಇಂಟ್ರಾನಾಸಲ್ ಕೋವಿಡ್ ಲಸಿಕೆಯ(Intranasal Covid Vaccine) ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್(Booster Dose) ಆಗಿ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲು ಸರ್ಕಾರ  ಅನುಮೋದಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಿಳಿಸಿದ್ದಾರೆ.

    ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ತೆಗೆದುಕೊಂಡವರು iNCOVACC ಮೂಗಿನ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು. ಸೂಜಿ ರಹಿತವಾಗಿರುವ ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ  ಲಭ್ಯವಿರುತ್ತದೆ. ಇದನ್ನೂ ಓದಿ: ಕೊರೊನಾ ಆತಂಕ, ಖಾಸಗಿ ಆಸ್ಪತ್ರೆಗಳು ಆ್ಯಕ್ಟಿವ್ – ಕಳೆದ ಬಾರಿಯ ಬಿಲ್ ಕ್ಲಿಯರ್ ಮಾಡಲು ಸರ್ಕಾರಕ್ಕೆ ಮನವಿ

     

    ಶುಕ್ರವಾರ ಸಂಜೆ ಕೋ-ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎರಡು-ಡ್ರಾಪ್‌ ಲಸಿಕೆಯನ್ನು ಹಾಕಲಾಗುತ್ತದೆ. ಒಂದು ಲಸಿಕೆಯನ್ನು ಪಡೆದ 4 ವಾರಗಳ ಬಳಿಕ ಇನ್ನೊಂದು ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ.

    ನವೆಂಬರ್‌ನಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ನಂತೆ iNCOVACC ಲಸಿಕೆ ನೀಡಬಹುದು ಎಂದು ಅನುಮೋದನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್‌ ವಿರುದ್ಧ ದೆಹಲಿ ಹೈಕೋರ್ಟ್‌ ಕಿಡಿ

    ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್‌ ವಿರುದ್ಧ ದೆಹಲಿ ಹೈಕೋರ್ಟ್‌ ಕಿಡಿ

    ನವದೆಹಲಿ: ಅಧಿಕೃತ ಎನ್ನುವುದಕ್ಕಿಂತ ಹೆಚ್ಚಿನದ್ದನ್ನು ಅಥವಾ ಅಧಿಕೃತವಲ್ಲದ್ದನ್ನು ಹೇಳಿ ಜನರ ದಾರಿ ತಪ್ಪಿಸಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್‌ ಅವರನ್ನು ದೆಹಲಿ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

    ಈ ಹಿಂದೆ ಅಲೋಪತಿ ವಿರುದ್ಧ ರಾಮದೇವ್‌ ಹೇಳಿಕೆ ನೀಡಿದ್ದರು. ವಿವಿಧ ವೈದ್ಯರ ಸಂಘಗಳು ಅವರ ವಿರುದ್ಧ ಮೊಕದ್ದಮೆ ಸಲ್ಲಿಸಿವೆ. ಇದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಭಂಬಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಲಸಿಕೆ ಹಾಕಿಸಿಕೊಂಡಿದ್ದರೂ ಕೋವಿಡ್-19 ಪಾಸಿಟಿವ್ ಬಂದಿದೆ. ಇದು ವೈದ್ಯಕೀಯ ವಿಜ್ಞಾನದ ವೈಫಲ್ಯವಾಗಿದೆ ಎಂಬ ಯೋಗ ಗುರು ಬಾಬಾ ರಾಮದೇವ್ ಅವರ ಇತ್ತೀಚಿನ ಹೇಳಿಕೆ ನೀಡಿದ್ದರು. ಇದನ್ನು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ. ಇದನ್ನೂ ಓದಿ: ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

    ಆಯುರ್ವೇದಕ್ಕಿದ್ದ ಒಳ್ಳೆಯ ಹೆಸರು ಈಗ ಕುಂದುತ್ತಿರುವ ಬಗ್ಗೆ ನನಗೆ ಕಾಳಜಿ ಇದೆ. ನಾನು ಅದರ ಬಗ್ಗೆ ಚಿಂತಿಸುತ್ತಿದ್ದೇನೆ. ಆಯುರ್ವೇದವು ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಆಯುರ್ವೇದದ ಒಳ್ಳೆಯ ಹೆಸರಿಗೆ ಧಕ್ಕೆ ತರುವಂತಹ ಕೆಲಸವನ್ನು ನಾವು ಮಾಡಬಾರದು ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಬಾನಿ ಹೇಳಿದ್ದಾರೆ.

    ಕೆಲವೊಮ್ಮೆ ವಿದೇಶಿ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗುತ್ತಿದೆ. ಇದು ವಿದೇಶಗಳೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ : ಯೂಟರ್ನ್‌ ಹೊಡೆದ ಕೇಂದ್ರ

    Live Tv
    [brid partner=56869869 player=32851 video=960834 autoplay=true]

  • 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ

    ನವದೆಹಲಿ: 18ರಿಂದ 59 ವಯೋಮಾನದವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

    ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದೆ. 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ ಬೂಸ್ಟರ್‌ ಡೋಸ್‌ನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಜು.15ರಿಂದ 75 ದಿನಗಳ ವರೆಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು RSS, SDPIನಿಂದ ಸಾಧ್ಯವಿಲ್ಲ: ಪಿಣರಾಯಿ ವಿಜಯನ್

    18-59 ವಯೋಮಾನದ 77 ಕೋಟಿ ಜನಸಂಖ್ಯೆ ದೇಶದಲ್ಲಿದ್ದು, ಈ ಪೈಕಿ ಕೇವಲ ಶೇ.1 ಕ್ಕಿಂತ ಕಡಿಮೆ ಮಂದಿ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದಾರೆ. 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅಂದಾಜು 16 ಕೋಟಿ ಜನರ ಪೈಕಿ ಶೇ.26 ಮಂದಿ ಸೇರಿದಂತೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ.

    ಸರ್ಕಾರವು 75 ದಿನಗಳ ಕಾಲ ಲಸಿಕೆ ನೀಡಿಕೆಯ ವಿಶೇಷ ಆಂದೋಲನವನ್ನು ಪ್ರಾರಂಭಿಸಲು ಯೋಜಿಸಿದೆ. ಈ ಅವಧಿಯಲ್ಲಿ 18 ರಿಂದ 59 ವರ್ಷ ವಯಸ್ಸಿನವರಿಗೆ ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು. ಇದನ್ನೂ ಓದಿ: ಉತ್ತರ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ – ತಡೆ ನೀಡಲ್ಲ ಎಂದ ಸುಪ್ರೀಂ

    ಕೋವಿಡ್‌ ಲಸಿಕೆಯ ಎರಡನೇ ಡೋಸ್ ಮತ್ತು ಬೂಸ್ಟರ್‌ ಡೋಸ್‌ ನಡುವಿನ ಅಂತರವನ್ನು 9ರಿಂದ 6 ತಿಂಗಳಿಗೆ ಇಳಿಸಲಾಗಿದೆ. ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಶಿಫಾರಸನ್ನು ಆಧರಿಸಿ ಅಂತರವನ್ನು ಕಡಿತಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 12-17 ವರ್ಷದೊಳಗಿನ ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆಗೆ ಅನುಮೋದನೆ

    12-17 ವರ್ಷದೊಳಗಿನ ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆಗೆ ಅನುಮೋದನೆ

    ನವದೆಹಲಿ: 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಭಾರತದ ಸೇರಂ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿರುವ ಕೋವಿಡ್ ಲಸಿಕೆ ಕೋವೊವ್ಯಾಕ್ಸ್ ನೀಡಲು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (NTAGI) ಅನುಮೋದನೆ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ.

    ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಜ್ಞರು ಸೇರಂ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿರುವ ಕೋವೊವ್ಯಾಕ್ಸ್ ಲಸಿಕೆಯನ್ನು ತುರ್ತು ಬಳಕೆಗೆ ಈ ಮೊದಲೇ ಅನುಮತಿ ನೀಡಿದ್ದರು. ಇದೀಗ ಎಲ್ಲಾ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ನೀಡಿರುವ ಬಗ್ಗೆ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಐಐಟಿಯಲ್ಲೂ ಹೆಚ್ಚಿದ ಸೋಂಕು

    ಕೋವೊವ್ಯಾಕ್ಸ್ ಲಸಿಕೆ 12 ವರ್ಷದಿಂದ ಮೇಲ್ಪಟ್ಟ ಮಕ್ಕಳಿಗೆ ನೀಡುವ ಕುರಿತಾಗಿ ಕೇಂದ್ರ ಆರೋಗ್ಯ ಇಲಾಖೆ ಚಿಂತನೆ ನಡೆಸಿತ್ತು. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ 900 ರೂ. ಒಂದು ಡೋಸ್ ಲಸಿಕೆಗೆ ದರ ನಿಗದಿ ಪಡಿಸಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ದರ ನಿಗದಿಯಾಗಿಲ್ಲ. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ಈ ಹಿಂದೆ ನೋವೊವ್ಯಾಕ್ಸ್ ಲಸಿಕೆ ಮಕ್ಕಳಿಗೆ 80% ಪರಿಣಾಮಕಾರಿ ಎಂದು ವರದಿಯಾಗಿತ್ತು. ಇದೀಗ ಕೊನೆಯ ಹಂತದ ಟೆಸ್ಟ್ ನಡೆಯುತ್ತಿದೆ. ಈ ಮಧ್ಯೆ ಇದೀಗ ಕೋವೊವ್ಯಾಕ್ಸ್ ಲಸಿಕೆಗೆ ಅನುಮತಿ ದೊರೆತಿದೆ.

  • ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ನವದೆಹಲಿ: ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸುದೀರ್ಘ ಮಾತುಕತೆ ನಡೆಸಿದರು. ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರ ವಿಸ್ತರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.

    ಇದೇ ವೇಳೆ ಮಾತನಾಡಿರುವ ಅವರು, ನನ್ನ ಕೈಯ್ಯಲ್ಲಿ ಭಾರತದ ಲಸಿಕೆಯಿದೆ. ಅದು ನನಗೆ ಒಳ್ಳೆಯದನ್ನು ಮಾಡಿದೆ. ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ವಿಶೇಷ ಗೆಳಯ ಪ್ರಧಾನಿ ನರೇಂದ್ರಮೋದಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

    MODI MET BORIS

    ನಾವು ರಕ್ಷಣಾ ಪಾಲುದಾರಿಕೆಯೊಂದಿಗೆ ಆರೋಗ್ಯ ಪಾಲುದಾರಿಕೆಯ ಬಗ್ಗೆಯೂ ಚರ್ಚಿಸಿದ್ದೇವೆ. ಉದಾಹರಣೆಗೆ ಅಸ್ಟ್ರಾಜೆನಿಕಾ ಸೀರಂ ಸಂಸ್ಥೆಯು ಕೋವಿಡ್ ವಿರುದ್ಧ ಹೋರಾಡಲು ಶತಕೋಟಿ ಜನರಿಗೆ ಲಸಿಕೆ ನೀಡಿದೆ. ಅಲ್ಲದೆ, ಅದು ಭಾರತಕ್ಕೂ ಸಹಾಯ ಮಾಡಿದೆ. ಅದಕ್ಕಾಗಿ ವಿಶ್ವದ ಅತಿದೊಡ್ಡ ಲಸಿಕಾ ತಯಾರಕರಾದ ಸೀರಂ ಇನ್‌ಸ್ಟಿಟ್ಯೂಟ್ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸ್ವೀಡಿಷ್ ಅಸ್ಟ್ರಾಜೆನಿಕ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರ್ಮ ಸಂಸತ್‍ನಲ್ಲಿ ದ್ವೇಷ ಭಾಷಣ – ದೆಹಲಿ ಪೊಲೀಸ್ ಸಲ್ಲಿಸಿದ್ದ ಅಫಿಡವಿಟ್‍ಗೆ ಸುಪ್ರೀಂ ಅಸಮಾಧಾನ

    PM MEET

    ಅಲ್ಲದೆ, ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆ ಸಾಮಗ್ರಿಗಳ ಕ್ಷಿಪ್ರ ಪೂರೈಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಸಹಕಾರ ನೀಡಲು ಬ್ರಿಟನ್ ಮುಂದಾಗಿದೆ. ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ರಷ್ಯಾದಿಂದ ಪೂರೈಕೆಯಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಅಪಾಯಗಳನ್ನು ಎದುರಿಸಲು ಅಗತ್ಯವಿರುವ ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್ ಹೈ ಕಮಿಷನ್ ಹೇಳಿದೆ ಎನ್ನಲಾಗಿದೆ.

    ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಅನುವಾಗುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ (OGEL) ಒದಗಿಸುವುದಾಗಿ ತಿಳಿಸಿದೆ. ಇದರಿಂದಾಗಿ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿತಗೊಳ್ಳಲಿದೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು

    ‘ಹವಾಮಾನ ಬದಲಾವಣೆಯಿಂದ ಹಿಡಿದು ಇಂಧನ, ಭದ್ರತೆ ಹಾಗೂ ರಕ್ಷಣಾ ವಲಯಗಳಲ್ಲಿ ನಮ್ಮ ಪಾಲುದಾರಿಗೆ ಉಭಯ ರಾಷ್ಟ್ರಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಗೆಳೆಯ ನಿಮ್ಮನ್ನು ಭಾರತದಲ್ಲಿ ಕಂಡು ಪುಳಕಿತನಾಗಿರುವೆ…’ ಎಂದು ಪ್ರಧಾನಿ ಮೋದಿ ಅವರು ಬೋರಿಸ್ ಅವರನ್ನು ಭೇಟಿಯಾದ ಚಿತ್ರದೊಂದಿ ಟ್ವೀಟ್ ಮಾಡಿದ್ದಾರೆ.

  • ಕೋವಿಡ್‌ ಲಸಿಕೆ ಕಡ್ಡಾಯವಲ್ಲ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

    ಕೋವಿಡ್‌ ಲಸಿಕೆ ಕಡ್ಡಾಯವಲ್ಲ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

    ನವದೆಹಲಿ: ಕೋವಿಡ್-19 ಲಸಿಕೆಗಳನ್ನು ಕಡ್ಡಾಯಗೊಳಿಸಿಲ್ಲ. ಆದರೆ ಶೇ.100 ರಷ್ಟು ಲಸಿಕೆ ನೀಡಬೇಕೆಂದು ಹೇಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಶೇ.100 ರಷ್ಟು ಜನರು ಕೋವಿಡ್‌ ಲಸಿಕೆಯನ್ನು ಪಡೆಯಲೇಬೇಕು ಎಂದು ಕೇಂದ್ರ ಸರ್ಕಾರವು ಆದೇಶ ನೀಡಿದೆ ಎಂದು ತಮಿಳುನಾಡು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠಕ್ಕೆ ತಿಳಿಸಿದ್ದರು. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು – ದೆಹಲಿಯ ಏಮ್ಸ್‌ಗೆ ಶಿಫ್ಟ್‌

    SUPREME COURT

    ಕೋವಿಡ್‌ ಲಸಿಕೆಯನ್ನು ಶೇ.100ರಷ್ಟು ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದರಿಂದ ಕಡ್ಡಾಯಗೊಳಿಸಿದ್ದೇವೆ ಎಂದು ತಮಿಳುನಾಡು ತಿಳಿಸಿದೆ. ಶೇ.100ರಷ್ಟು ಲಸಿಕೀಕರಣ ಆಗಬೇಕು ಎಂಬ ನಿಲುವನ್ನು ಕೇಂದ್ರ ವ್ಯಕ್ತಪಡಿಸಿದೆ. ಆದರೆ ಇದು ಆದೇಶವಲ್ಲ ಎಂದು ಮೆಹ್ತಾ ತಿಳಿಸಿದ್ದಾರೆ.

    ಜನಸಂಖ್ಯೆಯಲ್ಲಿ ಗಂಭೀರ ರೋಗವನ್ನು ತಡೆಗಟ್ಟಲು ಕೋವಿಡ್ ವಿರುದ್ಧ ವ್ಯಾಕ್ಸಿನೇಷನ್ ಅತ್ಯಗತ್ಯ ಎಂಬ ಕಾರಣಕ್ಕಾಗಿ ತಮಿಳುನಾಡು ಲಸಿಕೆ ಆದೇಶವನ್ನು ಹೊರತಂದಿದೆ ಎಂದು ಸುಪ್ರೀಂಗೆ ತಿವಾರಿ ವರದಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ನಾನು ತಜ್ಞರ ವರದಿಗಳನ್ನು ಸಲ್ಲಿಸಿದ್ದೇನೆ. ಲಸಿಕೆ ಪಡೆಯದ ಜನರು ವೈರಸ್‌ಗಳ ರೂಪಾಂತರಕ್ಕೆ ಕಾರಣರಾಗಿದ್ದಾರೆ. ಇತರರಿಗೆ ಸೋಂಕು ತಗುಲುವ ಅಥವಾ ಹರಡುವ ಸಾಧ್ಯತೆಯಿದ್ದರೆ ಅಂತಹ ಆದೇಶಗಳನ್ನು ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ. ಲಸಿಕೆಗಳು ಗಂಭೀರ ರೋಗವನ್ನು ತಡೆಗಟ್ಟುತ್ತವೆ ಎಂದು ತೋರಿಸಲು ಸಾಕಷ್ಟು ಪುರಾವೆಗಳಿವೆ ಎಂದು ತಿವಾರಿ ತಿಳಿಸಿದ್ದಾರೆ.

    ರೋಗ ಹರಡುವುದನ್ನು ತಡೆಯಲು ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿಬಂಧನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇರಲ್ಲ: ನಿತಿನ್‌ ಗಡ್ಕರಿ

    ಕೋವಿಡ್ ಲಸಿಕೆಗಳ ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರ, ಐಸಿಎಂಆರ್‌, ಭಾರತ್‌ ಬಯೊಟೆಕ್‌ ಹಾಗೂ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ ನೋಟಿಸ್‌ ನೀಡಿತ್ತು.

  • ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

    ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

    ನವದೆಹಲಿ: ಭಾರತ ತನ್ನ ಎಲ್ಲಾ ವಯಸ್ಕ ಪ್ರಜೆಗಳಿಗೂ ಬೂಸ್ಟರ್ ಡೋಸ್‌ಗೆ ಅರ್ಹತೆ ನೀಡಲು ಚಿಂತನೆ ನಡೆಸುತ್ತಿದೆ.

    ಚೀನಾ ಹಾಗೂ ಕೊರಿಯಾದಂತಹ ಕೆಲವು ರಾಷ್ಟ್ರಗಳಲ್ಲಿ ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಷ್ಟದ ದಿನಗಳನ್ನು ಅನುಭವಿಸುತ್ತಿದೆ. ಅಷ್ಟ ಅಲ್ಲದೇ ಜನರು 3ನೇ ಲಸಿಕೆ ಪಡೆಯದೇ ವಿದೇಶಗಳಿಗೆ ಪ್ರಯಾಣಿಸಲು ಕಷ್ಟಪಡುವಂತಾಗಿದೆ. ಹೀಗಾಗಿ ಸರ್ಕಾರ ಇದೀಗ ಬೂಸ್ಟರ್ ಡೋಸ್ ಬಗ್ಗೆ ಹೊಸದಾಗಿ ಚಿಂತನೆ ನಡೆಸುತ್ತಿದೆ. ಇದನ್ನೂ ಓದಿ: ಕಡ್ಡಾಯ ಮಾಸ್ಕ್‌ ನಿಯಮ ಕೈಬಿಡಿ – ಸರ್ಕಾರಕ್ಕೆ ತಜ್ಞರ ಸಲಹೆ

    ಭಾರತದಲ್ಲಿ ಸದ್ಯ ಮುಂಚೂಣಿಯ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಬೂಸ್ಟರ್ ಡೋಸ್ ನೀಡಲು ಸರ್ಕಾರ ಅನುಮತಿ ನೀಡಿದೆ. ಇದೀಗ ವಯಸ್ಕರಿಗೂ ಬೂಸ್ಟರ್ ಡೋಸ್ ಕೊಡಲು ನಿರ್ಧರಿಸುತ್ತಿರುವುದರಿಂದ ಕೋವಿಡ್ ಸೋಂಕಿನ ಭೀತಿ ಸ್ವಲ್ಪ ಮಟ್ಟಿಗೆ ತಗ್ಗುವ ಸಾಧ್ಯತೆಯೂ ಇದೆ.

    ಏಷ್ಯಾ, ಯುರೋಪ್ ದೇಶಗಳಲ್ಲಿ ಕೋವಿಡ್ ಏರಿಕೆ ಆಗುತ್ತಿದ್ದು ಇದೀಗ ಕೇಂದ್ರ ಸರ್ಕಾರ ಕಟ್ಟೆಚ್ಚರವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಆದರೆ ಸಾಂಕ್ರಾಮಿಕ ರೋಗಗಳ ತಜ್ಞರು ದೇಶದಲ್ಲಿ ಕೋವಿಡ್ ಸೋಂಕಿಗೆ ಇನ್ನೂ ಹೆದರಿ ಬದುಕುವುದು ಬೇಡ. ನಾವಿನ್ನು ಮುಂದುವರಿದು ಮಾಸ್ಕ್ ಕಡ್ಡಾಯವನ್ನು ಕೈ ಬಿಡುವ ಯೋಚನೆ ಮಾಡಬೇಕೆಂದು ಸಲಹೆ ನೀಡಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,549 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 31 ಜನರು ಸಾವನ್ನಪ್ಪಿದ್ದಾರೆ.

  • ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಒಟ್ಟಾವಾ: ಲಸಿಕೆ ಆದೇಶಗಳು ಸೇರಿದಂತೆ ಕೋವಿಡ್‌ ಸಂಬಂಧಿತ ಕ್ರಮಗಳ ವಿರುದ್ಧ ನಡೆಯುತ್ತಿರುವ ಟ್ರಕ್‌ ಚಾಲಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಡೊ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ನಾವು ಕಾನೂನು ಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ. ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ರಾಜಧಾನಿಯಲ್ಲಿ ತಿಳಿಸಿದ್ದಾರೆ. ತಕ್ಷಣದಿಂದಲೇ ತುರ್ತು ಪರಿಸ್ಥಿತಿ ಆದೇಶ ಜಾರಿಗೆ ಬಂದಿದ್ದು, 30 ದಿನಗಳವರೆಗೆ ಇರಲಿದೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    ಪ್ರತಿಭಟನಾಕಾರರ ಕೂಟಗಳನ್ನು ಚದುರಿಸಲು ಕಾನೂನು ಜಾರಿಗಾಗಿ ಕ್ರಮ ವಹಿಸಲಾಗುವುದು. ಪ್ರತಿಭಟನಾನಿರತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾತೆಗಳನ್ನು ಬಂದ್‌ ಮಾಡಲು ಹಣಕಾಸು ಸಂಸ್ಥೆಗಳಿಗೆ ತಿಳಿಸಲಾಗಿದೆ. ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಪ್ರಧಾಣಿ ನಿರಾಕರಿಸಿದ್ದಾರೆ.

    ಕೆನಡಾ ಮತ್ತು ಯುಎಸ್‌ ಅನ್ನು ಸಂಪರ್ಕಿಸುವ ಒಂಟಾರಿಯೊದ ವಿಂಡ್ಸರ್‌ ಮತ್ತು ಮಿಚಿಗನ್‌ನ ಡೆಟ್ರಾಯಿಟ್‌ ನಡುವಿನ ರಾಯಭಾರಿ ಸೇತುವೆಯನ್ನು ಪ್ರತಿಭಟನಾಕಾರರಿಂದ ಪೊಲೀಸರು ತೆರವುಗೊಳಿಸಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಜನವರಿ ಮಧ್ಯ ಭಾಗದಲ್ಲಿ ಗಡಿಯಾಚೆಗಿನ ಟ್ರಕ್‌ ಚಾಲಕರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆನಡಾ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಆದೇಶವನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮಕೈಗೊಂಡಿಲ್ಲ.

  • ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ನವದೆಹಲಿ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ವಯಸ್ಕರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಲಸಿಕಾ ಅಭಿಯಾನಕ್ಕೆ ಸಹಕರಿಸಿದ ದೇಶದ ನಾಯಕರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ.

    ದೇಶದ ಶೇ.75 ವಯಸ್ಕರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಮಹತ್ವದ ಸಾಧನೆಗಾಗಿ ನಮ್ಮ ನಾಗಕರಿಕರಿಗೆ ಅಭಿನಂದನೆಗಳು. ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ಎಲ್ಲರ ಬಗ್ಗೆಯೂ ಹೆಮ್ಮೆಯಿದೆ ಎಂದು ಮೋದಿ ಅವರು ಟ್ವೀಟ್‌ ಮಾಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

    ಕೇಂದ್ರ ಸರ್ಕಾರದ ಸಾಧನೆ ಕುರಿತು ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಟ್ವೀಟ್‌ ಮಾಡಿದ್ದು, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಆಶಯದೊಂದಿಗೆ ಭಾರತದ ವಯಸ್ಕ ಜನತೆಗೆ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ನೀಡಿಕೆಯು ಶೇ.75ರಷ್ಟು ಆಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಬಲಶಾಲಿಗಳಾಗುತ್ತಿದ್ದೇವೆ. ನಾವು ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಆದಷ್ಟು ಬೇಗ ದೇಶದ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆಯನ್ನು ಪಡೆಯಬೇಕು ಎಂದು ಕರೆ ನೀಡಿದ್ದಾರೆ.

    12.43 ಕೋಟಿಗಿಂತ ಹೆಚ್ಚು ಕೋವಿಡ್‌ ಲಸಿಕೆಗಳು ಬಳಕೆಯಾಗದೇ ವಿವಿಧ ರಾಜ್ಯಗಳಲ್ಲಿ ಹಾಗೇ ಉಳಿದಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಭಾನುವಾರ ದೇಶದಲ್ಲಿ ಕೋವಿಡ್‌ನ 2,34,281 ಹೊಸ ಪ್ರಕರಣಗಳು ದೃಢಪಟ್ಟಿವೆ. ಸದ್ಯ 18,84,937 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ 1,65,70,60,692 ಡೋಸ್‌ ಲಸಿಕೆ ನೀಡಲಾಗಿದೆ.

  • ಕೋವಿಡ್‌ ಲಸಿಕೆ ಪಡೆದಿಲ್ಲ – ರೋಗಿಗೆ ಹೃದಯ ಕಸಿ ಮಾಡಲ್ಲ ಎಂದ ವೈದ್ಯರು!

    ಕೋವಿಡ್‌ ಲಸಿಕೆ ಪಡೆದಿಲ್ಲ – ರೋಗಿಗೆ ಹೃದಯ ಕಸಿ ಮಾಡಲ್ಲ ಎಂದ ವೈದ್ಯರು!

    ವಾಷಿಂಗ್ಟನ್‌: ರೋಗಿಯೊಬ್ಬ ಕೋವಿಡ್‌-19 ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್‌ ಆಸ್ಪತ್ರೆ ವೈದ್ಯರು ನಿರಾಕರಿಸಿರುವ ಪ್ರಸಂಗ ನಡೆದಿದೆ.

    ಅಂಗಾಂಗ ಕಸಿಗೆ ಒಳಗಾಗುವವರಿಗೆ ಕೊರೊನಾ ವೈರಸ್‌ ವಿರುದ್ಧದ ಲಸಿಕೆ ಅಗತ್ಯವಿದೆ ಎಂದು ಬ್ರಿಗಮ್‌ ಮತ್ತು ಮಹಿಳಾ ಆಸ್ಪತ್ರೆಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    31 ವರ್ಷ ವಯಸ್ಸಿನ ನನ್ನ ಪುತ್ರ ಸಾವಿನ ಅಂಚಿನಲ್ಲಿದ್ದಾನೆ. ಆತನಿಗೆ ಆದಷ್ಟು ಬೇಗ ಹೃದಯ ಕಸಿ ಆಗಬೇಕಿದೆ. ಆದರೆ ಆತ ಲಸಿಕೆ ಪಡೆದುಕೊಂಡಿಲ್ಲ ಎಂದು ವೈದ್ಯರು ನಿರಾಕರಿಸುತ್ತಿದ್ದಾರೆ. ಇದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ರೋಗಿಯ ತಂದೆ ಡೇವಿಡ್‌ ಫರ್ಗುಸನ್‌ ಅಳಲು ತೋಡಿಕೊಂಡಿದ್ದಾರೆ.

    ಕಸಿಗೆ ಒಳಗಾಗುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯಾಗಿ ನಡೆಸಲು ಹಾಗೂ ರೋಗಿ ಬದುಕುಳಿಯುವುದನ್ನು ಹೆಚ್ಚು ದೃಢಪಡಿಸಲು ಈಗಿನ ಸಂದರ್ಭದಲ್ಲಿ ಪ್ರತಿಕಾಯದ ಅಗತ್ಯತೆ ಇದೆ. ಯಾವುದೇ ಕಸಿ ನಂತರ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಕಡಿತಗೊಳ್ಳುತ್ತದೆ. ಆಗ ಕೋವಿಡ್‌ ಅಂತಹ ರೋಗಿಗಳನ್ನು ಕೊಲ್ಲಬಹುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಅಂಗಗಳು ವಿರಳವಾಗಿವೆ. ಕೋವಿಡ್‌ ಲಸಿಕೆ ಪಡೆದವರಿಗೆ ಕಸಿ ಮಾಡಿದರೆ, ಶಸ್ತ್ರ ಚಿಕಿತ್ಸೆ ನಂತರ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಕಸಿ ನಂತರ ಬದುಕುಳಿಯುವ ಸಾಧ್ಯತೆ ಕಡಿಮೆ ಇರುವವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ನನ್ನ ಮಗನನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಯೋಜಿಸಿದ್ದೇನೆ. ಆದರೆ ಸಮಯ ಮೀರುತ್ತಿದೆ ಎಂದು ರೋಗಿಯ ತಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಈವರೆಗೆ ಶೇ.62 ಮಂದಿ ಮಾತ್ರ ಲಸಿಕೆ ಎರಡೂ ಡೋಸ್‌ ಪಡೆದುಕೊಂಡಿದ್ದಾರೆ.