Tag: Covid vaccine

  • ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

    ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

    ಬೆಂಗಳೂರು: ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ (Heart attack) ನೇರ ಕಾರಣ ಅಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ (Dinesh Gundurao) ಹೇಳಿದ್ದಾರೆ.

    ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಸ್‌ ಲಸಿಕೆಯಿಂದ (Covid Vaccine) ಹೃದಯಾಘಾತ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ.

    ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ.

    ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಅನುಮಾನ
    ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಅನುಮಾನ ಇದೆ. ಆದ್ರೆ ನಮ್ಮ ದೇಶದಲ್ಲಿ ಯಾರೂ ಈ ಲಸಿಕೆ ತೆಗೆದುಕೊಂಡಿಲ್ಲ. ನಮ್ಮ ಅಧ್ಯಯನದಲ್ಲಿ ಇದು ಬಯಲಾಗಿಲ್ಲ ವಿಶ್ವಮಟ್ಟದ ಅಧ್ಯಯನದಲ್ಲಿ ಬಯಲಾಗಿದೆ ಎಂದು ವಿವರಿಸಿದ್ದಾರೆ.

    ಕೋವಿಡ್‌ ಬಂದು ಹೋದವರಲ್ಲೇ ಹೆಚ್ಚು ಹೃದಯಾಘಾತ
    ಹೃದಯಾಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೆಲವು ತಿಂಗಳ ಹಿಂದೆ ಸಿಎಂ ಅವರು ತನಿಖೆಗೆ ಸೂಚಿಸಿದ್ರು. ತಜ್ಞರ ಸಮಿತಿ ಮಾಡಿ ವರದಿಗೆ ಆದೇಶ ಮಾಡಿದ್ರು. ಕೊವಿಡ್ ಅಥವಾ ಕೊವಿಡ್ ಲಸಿಕೆ ಅಡ್ಡ ಪರಿಣಾಮಗಳು ಏನು? ಸಾವು ಹೇಗೆ ಅಂತಾ ತನಿಖೆ ಮಾಡೋಕೆ ಹೇಳಿದ್ರು. ಮುಖ್ಯ ಕಾರ್ಯದರ್ಶಿ ಸಮಿತಿ ರಚನೆ ಮಾಡಿ ಜಯದೇವ ನಿರ್ದೇಶಕರು ಸೇರಿದಂತೆ ಹಲವು ತಜ್ಞರು ಇದ್ದರು. ಅದರಂತೆ ವಿಶ್ವ ಮಟ್ಟದಲ್ಲಿ ಏನು ತನಿಖೆ ಆಗಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ ಜೊತೆಗೆ ಜಯದೇವ ಆಸ್ಫತ್ರೆಯಲ್ಲೂ ತನಿಖೆ ಮಾಡಿದ್ದಾರೆ. ಈ ವರದಿಯಲ್ಲಿ ಕೊವಿಡ್ ಯಾರಿಗೆ ಆಗಿತ್ತು ಅವರಿಗೆ ಹೃದಯಾಘಾತ ಹೆಚ್ಚಾಗಿ ಆಗಿರೋದು ಅನ್ನೋದು ಕಂಡುಬಂದಿದೆ. ಕೊವಿಡ್ ಬಂದವರಿಗೆ ಹೃದಯಾಘಾತ ಆಗಿರೋದು ವರದಿ ಬಹಿರಂಗ ಆಗಿದೆ ಎಂದು ತಿಳಿಸಿದ್ದಾರೆ.

    ಇದರೊಂದಿಗೆ ಕೆಲವು ಸಲಹೆಗಳನ್ನ ಸಮಿತಿ ಮಾಡಿದೆ. ಹಠಾತ್ ಮರಣಗಳ ತಡೆಗೆ ಸಲಹೆ ನೀಡಿದೆ, 45 ವರ್ಷದ ಒಳಗಿರೋರು ದಿಢೀರ್ ಸಾವು ಆಗ್ತಾ ಇದ್ದು, ಅದರ ತಡೆಗೂ ಹೆಚ್ಚು ಗಮನ ಕೊಡಿ ಅಂತ ಸಮಿತಿ ಹೇಳಿದೆ. ಅದರಂತೆ ಕೆಲವೊಂದು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಆಸ್ಪತ್ರೆಗೆ ಹೊರಗಡೆ ತೀರಿ ಕೊಂಡರೆ ಅಧಿಸೂಚಿತ ಮರಣ ಅಂತ ಘೋಷಣೆ ಮಾಡುತ್ತೇವೆ. ಯಾಕ್ ತೀರಿ ಹೋದರು ಅಂತ ಗೊತ್ತಾಗಬೇಕು. ಹಠಾತ್ ಮರಣ ಹೊಂದಿದ್ರೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲು ನಿರ್ಣಯ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

    ಅಲ್ಲದೇ ಶಾಲೆಗಳಲ್ಲಿ 15 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ತಮ್ಮ ಇಲಾಖೆಯಿಂದ ತಪಾಸಣೆ ಮಾಡುವ ನಿರ್ಣಯ ಮಾಡ್ತೇವೆ. ಹುಟ್ಟಿನಿಂದ ಬಂದ ಸಮಸ್ಯೆ ಗೊತ್ತಾಗಲ್ಲ. ಕಾರ್ಡಿಯಾಕ್ ಸ್ಕ್ತೀನಿಂಗ್ ಮಾಡೋ ನಿರ್ಣಯ ಆಗಿದೆ. ಪಠ್ಯ ಪುಸ್ತಕದಲ್ಲಿ ಹೃದಯಾಘಾತದ ಬಗ್ಗೆ ಪಠ್ಯ ಕ್ರಮದಲ್ಲಿ ಅಳವಡಿಸಲು ನಾವು ಕಳಿಸಿದ್ದೇವೆ. ಈಗಾಗಲೇ ಕರ್ಕ್ರೂಲಮ್‌ನಲ್ಲಿ ಅಳವಡಿಸಲು ಸೂಚಿಸಿದ್ದೇವೆ. ಮುಂದಿನ ವರ್ಷದ ಪಠ್ಯದಲ್ಲಿ ಅಳವಡಿಕೆ ಮಾಡ್ತಾರೆ. ಮಧು ಬಂಗಾರಪ್ಪ ಅಳವಡಿಕೆಗೆ ಒಪ್ಪಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಿಪಿಆರ್ ಮಾಡೋಕೆ ನಿರ್ಣಯ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ತಾಲ್ಲೂಕು ಆಸ್ಫತ್ರೆಗಳಿಗೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಕಾರ್ಯಕ್ರಮ ವಿಸ್ತರಣೆ ಮಾಡ್ತೆವೆ. ಎಇಡಿ ಅಳವಡಿಕೆಗೆ ಎಲ್ಲೆಲ್ಲಿ ಸಾಧ್ಯ ಇದೆ ಅಲ್ಲಿ ಅಳವಡಿಸುತ್ತೇವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಿರ್ದಿಷ್ಟ ಸಿಬ್ಬಂದಿ ಇರುವ ಕಡೆ ಮಾಡ್ತೆವೆ. ತಪಾಸಣೆ ಅನ್ನ ಸರ್ಕಾರ ಮಟ್ಟದಲ್ಲಿ ನೌಕರರಿಗೆ ವರ್ಷಕ್ಕೋಮ್ಮೆ ಕನಿಷ್ಟ ತಪಾಸಣೆ ಮಾಡ್ತೆವೆ. ಖಾಸಗಿ ಕಂಪನಿ, ಉದ್ದಿಮೆದಾರರು ಅವರವರ ಕಂಪನಿಗಳು ಉದ್ಯೋಗಿಗಳಿಗೆ ವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಬೇಕು ಅಂತ ನಿರ್ದೇಶನ ಮಾಡ್ತೆವೆ ಎಂದು ತಿಳಿಸಿದಾರೆ.

  • ಕೋವಿಡ್‌ ಲಸಿಕೆಯಿಂದ ಹೃದಯಾಘಾತ ಸಂಭವಿಸಿಲ್ಲ – ಸರ್ಕಾರಕ್ಕೆ ಸಲ್ಲಿಸಲು ತಜ್ಞರ ವರದಿ ಸಿದ್ಧ

    ಕೋವಿಡ್‌ ಲಸಿಕೆಯಿಂದ ಹೃದಯಾಘಾತ ಸಂಭವಿಸಿಲ್ಲ – ಸರ್ಕಾರಕ್ಕೆ ಸಲ್ಲಿಸಲು ತಜ್ಞರ ವರದಿ ಸಿದ್ಧ

    – 251 ಜನರ ಪೈಕಿ 87 ಮಂದಿಗೆ ಶುಗರ್‌

    ಬೆಂಗಳೂರು: ಕೋವಿಡ್ ಲಸಿಕೆಯಿಂದ ಹೃದಯಾಘಾತ (Heart Attack) ಸಂಭವಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡುವ ತಜ್ಞರ ಸಮಿತಿಯ (Experts Committee Studies) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧವಾಗಿದೆ.

    ಇಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಜೊತೆ ವರ್ಚುವಲ್ ಮೀಟಿಂಗ್ ನಡೆಸಿದ ನಂತರ ಸೋಮವಾರ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು

    ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ, ಸರ್ಕಾರ ತಜ್ಞರ ಸಮಿತಿಗೆ ಅಧ್ಯಯನ ನಡೆಸುವಂತೆ ಸೂಚನೆ ನೀಡಿತ್ತು. ಬೆಂಗಳೂರಿನ ಜಯದೇವ ಹೃದ್ರೋಗ (Heart Related Issues) ಸಂಸ್ಥೆಯ ನಿರ್ದೇಶಕರ ನೇತೃತ್ವದಲ್ಲಿ 12 ಸದಸ್ಯರ ತಜ್ಞರ ತಂಡ ಈ ಅಧ್ಯಯನ ನಡೆಸಿದ್ದು, ಕೋವಿಡ್ ಲಸಿಕೆ ಪಡೆದ 250 ಮಂದಿಯ ಮೇಲೆ ಅಧ್ಯಯನ ನಡೆಸಲಾಗಿದೆ. 30 ವರ್ಷದೊಳಗಿನ 12 ಜನ, 31 ರಿಂದ 40ರ ಒಳಗಿನ 60 ಜನ, 41 ರಿಂದ 45ರ ಒಳಗಿನ 172 ಜನರನ್ನ ತನಿಖೆಗೆ ಒಳಪಡಿಸಲಾಗಿತ್ತು. ಕೊವೀಡ್‌ಗೂ ಮುನ್ನ ಮತ್ತು ಕೋವಿಡ್ ನಂತರ ಪರಿಸ್ಥಿತಿಯ ಬಗ್ಗೆ ತನಿಖೆ ಮಾಡಿ ವರದಿ ಸಿದ್ಧಪಡಿಸಲಾಗಿದೆ.

    ವರದಿಯಲ್ಲಿ ಕೊವಿಡ್ ಗಿಂತ ಮುಂಚೆ 13.9% ನಷ್ಟಿದ್ದ ಡಯಾಬಿಟಿಸ್, ಕೊವೀಡ್ (Covid) ನಂತರ 20.5%ಗೆ ಏರಿಕೆಯಾಗಿದೆ. ಕೊವೀಡ್‌ಗೂ ಮುನ್ನ ಹೈಪರ್ ಟೆನ್ಷನ್ 13.9% ಇದ್ದದ್ದು ಕೊವೀಡ್ ನಂತರ 17.6%ಗೆ ಏರಿಕೆಯಾಗಿದೆ. ಕೊಲೆಸ್ಟ್ರಾಲ್ 34.8% ಇದ್ದದ್ದು, ಕೊವೀಡ್ ನಂತರ 44.1% ಏರಿಕೆಯಾಗಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ

    ವರದಿ ಸಾರಾಂಶವೇನು?
    * ಕರ್ನಾಟಕ ಸರ್ಕಾರವು ರಚಿಸಿದ ತಜ್ಞರ ಸಮಿತಿ ಯುವ ವಯಸ್ಕರಲ್ಲಿ ಹಠಾತ್ ಹೃದಯ ಸಂಬಂಧಿ ಘಟನೆಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯ ಸವಾಲನ್ನು ಎತ್ತಿ ತೋರಿಸುತ್ತದೆ.

    * ಅಧಿಕ ರಕ್ತದೊತ್ತಡ, ಮಧುಮೇಹ, ಡಿಸ್ಲಿಪಿಡೆಮಿಯಾ ಮತ್ತು ಧೂಮಪಾನದಂತಹ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳು
    ಬಹುಪಾಲು ರೋಗಿಗಳಲ್ಲಿ ಪ್ರಚಲಿತವಾಗಿದ್ದರೂ, ಗಮನಾರ್ಹ ಅಲ್ಪಸಂಖ್ಯಾತ ರೋಗಿಗಳು ಇವುಗಳಲ್ಲಿ ಯಾವುದನ್ನೂ ಹೊಂದಿಲ್ಲ.

    * ಜಯದೇವ ಆಸ್ಪತ್ರೆಯಲ್ಲಿ ನಡೆಸಿದ ವೀಕ್ಷಣಾ ಅಧ್ಯಯನವು ಅಕಾಲಿಕ ಹೃದಯ ಸಂಬಂಧಿ ಕಾಯಿಲೆ ಮತ್ತು ಕೋವಿಡ್ 19 ಸೋಂಕು ಅಥವಾ ಕೋವಿಡ್ ವ್ಯಾಕ್ಸಿನೇಷನ್‌ನ ಹಿಂದಿನ ಇತಿಹಾಸದ ನಡುವೆ ಯಾವುದೇ ಸಂಬಂಧವನ್ನು ಕಂಡುಕೊಂಡಿಲ್ಲ

    * ವಿಶ್ವದ ಉಳಿದ ಭಾಗಗಳಲ್ಲಿ ಪ್ರಕಟವಾದ ಹೆಚ್ಚಿನ ಅಧ್ಯಯನಗಳು/ವರದಿಗಳು ಕೋವಿಡ್ ವ್ಯಾಕ್ಸಿನೇಷನ್ ಮತ್ತು ಹಠಾತ್ ಹೃದಯ ಸಂಬಂಧಿ ಘಟನೆಗಳ ನಡುವೆ ಯಾವುದೇ ಸಾಂದರ್ಭಿಕ ಸಂಬಂಧವನ್ನು ಕಂಡುಕೊಂಡಿಲ್ಲ.ಇದಕ್ಕೆ ವಿರುದ್ಧವಾಗಿ, ಕೋವಿಡ್ ವ್ಯಾಕ್ಸಿನೇಷನ್ ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಘಟನೆಗಳ ವಿರುದ್ಧ ರಕ್ಷಣಾತ್ಮಕವಾಗಿದೆ ಎಂದು ತೋರಿಸಲಾಗಿದೆ.

    * ಹಠಾತ್ ಸಾವುಗಳ ಹೆಚ್ಚಳಕ್ಕೆ ಒಂದೇ ಕಾರಣವಿಲ್ಲ. ಬದಲಾಗಿ, ಇದು ವರ್ತನೆಯ, ಆನುವಂಶಿಕ ಮತ್ತು ಪರಿಸರ ಅಪಾಯಗಳೊಂದಿಗೆ ಬಹು-ಅಂಶಗಳ ಸಮಸ್ಯೆಯಾಗಿ ಕಂಡುಬರುತ್ತದೆ.

    * ಸಾಂಕ್ರಾಮಿಕ ರೋಗವು ಕೊನೆಗೊಂಡು ಮೂರು ವರ್ಷಗಳು ಕಳೆದಿವೆ. ಯುವಜನರಲ್ಲಿ ಹಠಾತ್ ಹೃದಯರಕ್ತನಾಳದ ಘಟನೆಗಳ ಹೆಚ್ಚಳಕ್ಕೆ “ದೀರ್ಘಕಾಲದ ಕೋವಿಡ್” ಕಾರಣವಾಗಿದೆ ಎಂಬ ನಂಬಿಕೆಯನ್ನು ಪ್ರಸ್ತುತ ದತ್ತಾಂಶವು ಬೆಂಬಲಿಸುವುದಿಲ್ಲ. ಬದಲಾಗಿ, ಸಿವಿಡಿಗೆ ಕಾರಣವಾಗುವ ಸಾಮಾನ್ಯ ಅಪಾಯಕಾರಿ ಅಂಶಗಳ (ಉದಾ: ಹೆಚ್‌ಡಿ, ಡಿಎಂ, ಧೂಮಪಾನ, ಡಿಸ್ಲಿಪಿಡೆಮಿಯಾ) ಹರಡುವಿಕೆಯ ಹೆಚ್ಚಳವು ಹಠಾತ್ ಹೃದಯರಕ್ತನಾಳದ ಘಟನೆಗಳ ಹೆಚ್ಚಳಕ್ಕೆ ಉತ್ತಮ ವಿವರಣೆಯಾಗಿದೆ.

    ಈ ಸಂಶೋಧನೆಗಳ ಬೆಳಕಿನಲ್ಲಿ, ಬಹುಮುಖಿ ಸಾರ್ವಜನಿಕ ಆರೋಗ್ಯ ಕಾರ್ಯತಂತ್ರವು ಅತ್ಯಗತ್ಯ. ಇದರಲ್ಲಿ ಹಠಾತ್ ಹೃದಯ ಸಾವುಗಳಿಗೆ, ವಿಶೇಷವಾಗಿ ಯುವ ವಯಸ್ಕರಲ್ಲಿ, ದೃಢವಾದ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವುದು, ಶವಪರೀಕ್ಷೆ ಆಧಾರಿತ ನೋಂದಣಿ ಕಾರ್ಯಗತಗೊಳಿಸುವುದು ಮತ್ತು ಶಾಲಾ ಮಟ್ಟದಲ್ಲಿ ಆರಂಭಿಕ ಹೃದಯರಕ್ತನಾಳದ ತಪಾಸಣೆ ಸಂಯೋಜಿಸುವುದು ಸೇರಿವೆ. ಮುಖ್ಯವಾಗಿ ಕೋವಿಡ್‌ 19 ಸೋಂಕು ಮತ್ತು ವ್ಯಾಕ್ಸಿನೇಷನ್ ಎರಡರ ದೀರ್ಘಕಾಲೀನ ಹೃದಯ ರಕ್ತನಾಳದ ಪರಿಣಾಮಗಳನ್ನು ಉತ್ತಮವಾಗಿ ವಿವರಿಸಲು ದೊಡ್ಡ ಪ್ರಮಾಣದ, ನಿರೀಕ್ಷಿತ, ಬಹುಕೇಂದ್ರಿತ ಅಧ್ಯಯನಗಳು ಅಗತ್ಯವಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ರಾಜಕೀಯ ಬೇಡ, ಹೆಚ್‌ಡಿಕೆ ಸಹಕಾರ ಕೊಡಲಿ: ಎಂ.ಬಿ.ಪಾಟೀಲ್  

  • ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು

    ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು

    – ಹೃದಯಾಘಾತದಿಂದ ಮೃತಪಟ್ಟ 250 ಮಂದಿಯ ಮೇಲೆ ಅಧ್ಯಯನ

    ಬೆಂಗಳೂರು: ಒಂದೇ ತಿಂಗಳಲ್ಲಿ ಹಾಸನ (Hassan) ಜಿಲ್ಲೆಯ 13 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ (Covid Vaccine) ಕಾರಣ ಎನ್ನುವ ಸಂಶಯ ಮೂಡಿತ್ತು. ಈ ಹಿನ್ನೆಲೆ ವೈದ್ಯರ ತಂಡವೊಂದು ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವ ವ್ಯಕ್ತಿಗಳ ಮೇಲೆ ತನಿಖೆ ನಡೆಸಿ ಸಾವಿಗೆ ನಿಖರವಾದ ಕಾರಣವೇನು ಎನ್ನುವುದನ್ನು ಬಯಲಿಗೆಳೆದಿದ್ದಾರೆ.

    ಹೌದು, ಒಂದೇ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯ ಬೇರೆ ಬೇರೆ ಭಾಗಗಳ ಯುವಕ-ಯುವತಿಯರು ಸೇರಿ ಒಟ್ಟು 13 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: 22 ಲಕ್ಷ ವಂಚನೆ ಆರೋಪ – ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಕೊಡಲು ಮುಂದಾದ ಶಬರೀಶ್

    ಸಾವನ್ನಪ್ಪಿದ್ದ 13 ಜನರು ಯಾರು?
    ಒಂದೇ ತಿಂಗಳಲ್ಲಿ 13 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಮೇ 28ರಂದು ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಮೇ 28ರಂದು ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದ ಕವನ(20), ಜೂ.11ರಂದು ಹೊಳೆನರಸೀಪುರ ಪಟ್ಟಣದ ನಿಶಾಂತ್ (20), ಜೂ 12ರಂದು ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಜೂ.13ರಂದು ಹಾಸನ ಹೊರವಲಯದ ರಾಜಘಟ್ಟ ಬಳಿ ಕಾರಿನಲ್ಲೇ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಜೂ.14ರಂದು ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಹೀಗೆ ಸರಣಿ ಸಾವಾಗುತ್ತಿರುವುದಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂದು ಸಂಶಯ ಮೂಡಿತ್ತು. ಹೀಗಾಗಿ ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

    ಮನವಿಯನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಬಳಿಕ 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.

    ಸಾವಿಗೆ ಕಾರಣವೇನು?
    1. ಧೂಮಪಾನ
    2. ಮದ್ಯಪಾನ
    3. ಕುಟುಂಬದಲ್ಲಿನ ಅನುವಂಶಿಯ ಖಾಯಿಲೆಗಳು ಹೃದಯಾಘಾತಕ್ಕೆ ಕಾರಣ
    4. ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಾ ಇದ್ದದ್ದು ಹೃದಯಾಘಾತಕ್ಕೆ ಕಾರಣ
    5. ವಿಮಲ್, ಗುಟ್ಕಾ ಸೇವನೆ

    ಹೃದಯಾಘಾತಕ್ಕೆ ಯುವಕರು ಬಲಿಯಾಗಲು ಕೋವಿಡ್ ಲಸಿಕೆ ಕಾರಣ ಅಲ್ಲ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ಸದ್ಯ ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಮೃತಪಟ್ಟವರ ಪ್ರತಿಯೊಂದು ಮೆಡಿಕಲ್ ರಿಪೋರ್ಟ್ ಅನ್ನು ಸಂಗ್ರಹ ಮಾಡಿ, ಕುಟುಂಬಸ್ಥರ ಹೇಳಿಕೆ ಸಂಗ್ರಹಿಸಿ, ವರದಿ ತಯಾರು ಮಾಡಿದ್ದಾರೆ.ಇದನ್ನೂ ಓದಿ: ಇರಾನ್‌ ನಿರ್ಧಾರದಿಂದ ಕಚ್ಚಾ ತೈಲ ದರ ದಿಢೀರ್‌ ಭಾರೀ ಏರಿಕೆ

  • ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದ ಅಸ್ಟ್ರಾಜೆನೆಕಾ

    ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದ ಅಸ್ಟ್ರಾಜೆನೆಕಾ

    ನವದೆಹಲಿ: ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಬಳಿಕ ಕೋವಿಡ್‌ ಲಸಿಕೆಯನ್ನು (Covid Vaccine) ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ (AstraZeneca) ಆರಂಭಿಸಿದೆ.

    ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ. ಲಸಿಕೆಯನ್ನು ಇನ್ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ನಾಳೆ ಭಾರತಕ್ಕೆ ಭೇಟಿ

    ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಾಗಿ ಲಭ್ಯವಿದೆ. ಇದು ಲಸಿಕೆಗೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯು ತನ್ನ ಮಾರ್ಕೆಟಿಂಗ್ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಲಸಿಕೆಯನ್ನು ಇನ್ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಹಿಂಪಡೆಯಲು ಅರ್ಜಿಯನ್ನು ಮಾರ್ಚ್ 5 ರಂದು ಸಲ್ಲಿಸಲಾಗಿತ್ತು. ಮಂಗಳವಾರದಿಂದ (ಮಾ.7) ಜಾರಿಗೆ ಬಂದಿದೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ವ್ಯಾಕ್ಸಿವ್ರಿಯಾ (Vaxzervria Vaccine) ಎಂದು ಕರೆಯಲ್ಪಡುವ ಲಸಿಕೆಯನ್ನು ಈ ಹಿಂದೆ ಅನುಮೋದಿಸಿರುವ ಇತರ ದೇಶಗಳಲ್ಲಿಯೂ ಹಿಂತೆಗೆದುಕೊಳ್ಳಲು ಕಂಪನಿ ಅರ್ಜಿ ಸಲ್ಲಿಸಲಿದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್‌ಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ವ್ಯಾಕ್ಸೆವ್ರಿಯಾ ಲಸಿಕೆಯು ಜಾಗತಿಕ ಪರಿಶೀಲನೆಯಲ್ಲಿದೆ. ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ, ಲಸಿಕೆ ಅಪರೂಪದ ಸಂದರ್ಭಗಳಲ್ಲಿ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡಿತ್ತು.

  • ಕೋವಿಡ್ ಲಸಿಕೆ ಪಡೆದ ಯುವಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ: ಪ್ರಿಯಾಂಕಾ ಆತಂಕ

    ಕೋವಿಡ್ ಲಸಿಕೆ ಪಡೆದ ಯುವಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ: ಪ್ರಿಯಾಂಕಾ ಆತಂಕ

    – ಮೋದಿಜೀಗೆ 51 ಸಾವಿರ ಕೋಟಿ ದೇಣಿಗೆ ಕೊಟ್ಟಿದ್ದ ಕಂಪನಿ ತಯಾರಿಸಿದ ಲಸಿಕೆ ಇದು
    – ಲೈಂಗಿಕ ದೌರ್ಜನ್ಯ ಆರೋಪಿಯೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ವಾಗ್ದಾಳಿ

    ದಾವಣಗೆರೆ: ಕೋವಿಡ್ ಲಸಿಕೆ (Covid Vaccine) ಪಡೆದ ಅನೇಕ ಯುವಜನರಿಂದು ಯಾವುದೇ ಅನಾರೋಗ್ಯವಿಲ್ಲದೇ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಕಿಡಿ ಕಾರಿದ್ದಾರೆ.

    ದಾವಣಗೆರೆಯಲ್ಲಿ (Davanagere) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆದ ಯುವಜನರು ಯಾವುದೇ ಅನಾರೋಗ್ಯವಿಲ್ಲದಿದ್ದರೂ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಏಕೆಂದರೆ ಇದು ಮೋದಿಜೀಗೆ (PM Modi) 51 ಸಾವಿರ ಕೋಟಿ ದೇಣಿಗೆ ನೀಡಿದ ಬಾಂಡ್ (Electoral Bonds) ಖರೀದಿಸಿದ ಕಂಪನಿ ತಯಾರಿಸಿದ್ದ ಲಸಿಕೆ. ಲಸಿಕೆ ಪ್ರಮಾಣ ಪತ್ರದಲ್ಲಿ ಯಾರ ಫೋಟೋ ಇತ್ತು ನೆನಪಿದೆಯಾ? ಮೋದಿ ಫೋಟೋ ಇತ್ತು ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

    covid vaccine

    ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದು ಒಂದು ಕಡೆಯಾದರೆ, ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆಯುತ್ತಿದ್ದದ್ದು ಮತ್ತೊಂದು ಕಡೆಯಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಪ್ರಜ್ವಲ್‌ ರೇವಣ್ಣ ಶರಣಾಗ್ತಾರಾ?

    ಇದೇ ವೇಳೆ ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿದು (Morbi bridge collapse) ನೂರಾರು ಜನ ಸಾವನ್ನಪ್ಪಿದ್ದ ಪ್ರಕರಣ ಉಲ್ಲೇಖಿಸಿದ ಪ್ರಿಯಾಂಕಾ, ಗುಜರಾತ್‌ನಲ್ಲಿ ಬೀಳುವಂತಹ ತೂಗು ಸೇತುವೆ ಕಟ್ಟಿದವನಿಂದ, ಕೋವಿಡ್ ಲಸಿಕೆ ತಯಾರಿಸಿದವರಿಂದಲೂ ಚುನಾವಣಾ ಬಾಂಡ್ ಮೂಲಕ ಹಣ ಪೀಕಿದೆ. ಇದೆಲ್ಲವೂ ಹೊರಗೆ ಬರಬಾರದು ಅಂತಾ ಮೋದಿ ಸ್ನೇಹಿತರು ಮಾಧ್ಯಮಗಳ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಯಾರು ಇವರ ವಿರುದ್ಧ ಮಾತನಾಡುತ್ತಾರೋ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದ್ದಾರೆ.

    ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವನ ಜೊತೆ ಮೋದಿ ವೇದಿಕೆ ಹಂಚಿಕೊಂಡಿದ್ದಾರೆ. ಅವರ ಕೈಹಿಡಿದು ಮತಯಾಚನೆ ಮಾಡಿದ್ದಾರೆ. ಗೊತ್ತಿದ್ದರೂ ಗೊತ್ತಿಲ್ಲದ ಹಾಗೇ ಗೃಹ ಸಚಿವರು ಇದ್ದಾರೆ. ದೇಶಬಿಟ್ಟು ಪರಾರಿಯಾದರೂ ಮಾಹಿತಿ ಇಲ್ಲ ಎಂದು ನಾಟಕ ಆಡುತ್ತಿದ್ದಾರೆ ಎಂದು ಹೆಸರು ಹೇಳದೇ ಪ್ರಜ್ವಲ್ ರೇವಣ್ಣ ಪ್ರಕರಣ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SC-ST ಸಮುದಾಯಗಳಿಗೆ ಸೇರಬೇಕಿದ್ದ 11,000 ಕೋಟಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ: ಮೋದಿ ಕೆಂಡ

    ಬಿಜೆಪಿಯವರು ಬಿಜೆಪಿಯವರು ಚುನಾವಣೆ ಬಂದ ತಕ್ಷಣ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ಎಲ್ಲಿ ನಡೆಯುತ್ತಿದೆ ಅಲ್ಲಿಯ ಬಗ್ಗೆ ಮಾತನಾಡಬೇಕು. ಈಗ ಸಂದರ್ಭ ಬಂದಿದೆ ಹೊಸ ಪ್ರಧಾನಿ ಆಯ್ಕೆ ಮಾಡಿ, ಕೇಂದ್ರದಲ್ಲಿ ಬದಲಾವಣೆ ತೆಗೆದುಕೊಂಡು ಬನ್ನಿ. ಈ ದೇಶ ಯಾವ ಧಿಕ್ಕಿನಲ್ಲಿ ನಡೆಯಬೇಕು ಎಂದು ನೀವು ನಿರ್ಣಯ ಮಾಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.

  • ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ನವದೆಹಲಿ: ಕೋವಿಶೀಲ್ಡ್‌ (Covishield) ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟಿಷ್‌ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಇದಾಗಿದೆ.

    ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದ ದಾಖಲೆಗಳಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಪ್ರಾಧಿಕಾರದಿಂದ 14 ಪತಂಜಲಿ ಉತ್ಪನ್ನಗಳ ಲೈಸನ್ಸ್‌ ರದ್ದು

    ಇಡೀ ಜಗತ್ತನ್ನು ಕಾಡಿದ ಕೋವಿಡ್‌ ಸಾಂಕ್ರಾಮಿಕ ತಡೆಗೆ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು. ದೇಶದಲ್ಲಿ ವ್ಯಾಪಕವಾಗಿ ನಿರ್ವಹಿಸಲ್ಪಟ್ಟಿತು.

    ಯುಕೆಯಲ್ಲಿ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವು ಮತ್ತು ತೀವ್ರತರವಾದ ಗಾಯಗಳಿಗೆ ಕಾರಣವಾದ ಆರೋಪದ ಮೇಲೆ ಅಸ್ಟ್ರಾಜೆನೆಕಾ ಮೊಕದ್ದಮೆ ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್‌ ಪೌಂಡ್‌ಗಳವರೆಗೆ ಪರಿಹಾರ ಬಯಸಿದ್ದಾರೆ. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

  • JN.1 ಸೋಂಕಿನಿಂದ ಪ್ರಾಣಾಪಾಯವಿಲ್ಲ – ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

    JN.1 ಸೋಂಕಿನಿಂದ ಪ್ರಾಣಾಪಾಯವಿಲ್ಲ – ಆತಂಕಕ್ಕೆ ಒಳಗಾಗದೇ ಮುನ್ನೆಚ್ಚರಿಕೆ ವಹಿಸಿ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

    – ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆ ಮೀಸಲಿಡುವಂತೆ ಸೂಚನೆ
    – ವೈದ್ಯಕೀಯ ಇಲಾಖಾ ಅಧಿಕಾರಿಗಳ ಜೊತೆ ಮಹತ್ವದ ಸಭೆ
    – 60 ವರ್ಷ ಮೇಲ್ಪಟ್ಟವರು ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಲಸಿಕೆ ಪಡೆಯುವಂತೆ ಸಲಹೆ
    – ಕೋವಿಡ್‌ ನಿಂದ ಸಾವಾಗಿಲ್ಲ – ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟನೆ

    ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್‌ ರೂಪಾಂತರಿ JN.1 (JN.1) ಸೋಂಕು ಕಾಣಿಸಿಕೊಂಡಿದ್ದರೂ ಜನ ಆತಂಕಕ್ಕೆ ಒಳಗಾಗದೇ, ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Sharanprakash Patil) ಸಲಹೆ ನೀಡಿದರು.

    ಮಂಗಳವಾರ ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    ರೂಪಾಂತರಿ ಜೆಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈ ಮರೆಯದೇ, ಕೆಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋವಿಡ್ ವ್ಯಾಕ್ಸಿನ್ (Covid Vaccine) ಬಂದಿದೆ. ಇದರ ಕೊರತೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಕೇಸ್‌ – ಬುಧವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

    60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‌ ಪಡೆಯಿರಿ:
    ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಕೋವಿಡ್‌ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಲಸಿಕೆಯನ್ನು (ಕೋವ್ಯಾಕ್ಸಿನ್‌ ಅಥವಾ ಕೋವಿಶೀಲ್ಡ್) ನೀಡಲಾಗಿತ್ತೋ ಅದೇ ಲಸಿಕೆ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.


    JN.1 ಬಹುಬೇಗ ಹರಡುತ್ತದೆ:
    ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್.1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದು. ಜನದಟ್ಟಣೆ ಮತ್ತಿತರ ಕಡೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ ಧರಿಸುವುದು ಉತ್ತಮ. ಆದ್ರೆ ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕೆಂಬ ಆದೇಶ ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ಸಲಹೆ ನೀಡಿದರು.

    ಇದೇ ವೇಳೆ ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಸಧ್ಯಕ್ಕೆ ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ICUಗೆ ದಾಖಲಿಸುವಂತಿಲ್ಲ- ಕೇಂದ್ರದಿಂದ ಆಸ್ಪತ್ರೆಗಳಿಗೆ ಹೊಸ ರೂಲ್ಸ್‌

    ಕೋವಿಡ್‍ನಿಂದ ಸಾವಾಗಿಲ್ಲ:
    ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಸಾವನ್ನಪ್ಪಿದ್ದರು. ಇದು ಕೋವಿಡ್ ಕಾರಣದಿಂದಾಗಿ ಮೃತಪಟ್ಟಿಲ್ಲ. ಅವರು ವಿವಿಧ ಆರೋಗ್ಯಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‍ಗೂ ಸಂಬಂಧವೇ ಇಲ್ಲ. ಅವರಿಗೆ ಸೋಂಕಿನ ಜೊತೆಗೆ ಇತರ ಬೇರೆ-ಬೇರೆ ಆರೋಗ್ಯದ ಸಮಸ್ಯೆಗಳಿದ್ದವು. ಮೃತಪಟ್ಟವರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಶ್ರೀರಾಮನ ಗುಣ ಇದೆಯಾ? – ಸಿ.ಟಿ ರವಿ ವ್ಯಂಗ್ಯ

    ಮುಖ್ಯಾಂಶಗಳು

    • ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆಗಳನ್ನ ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
    • ವೈದ್ಯಕೀಯ ಕಾಲೇಜಿನಲ್ಲಿ 18,141 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಲಭ್ಯವಿವೆ.
    • ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರಿ ಜೆಎನ್-1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದೇವೆ.
    • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಲ್ಲಿರುವ ಕೋವಿಡ್ ವಾರಿಯರ್ಸ್‌ ಫ್ಲೂ-ಲಸಿಕೆಯನ್ನು ಪಡೆಯಬೇಕು.
    • ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ.
    • ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜೊತೆ ಚರ್ಚೆ ನಡೆಸಲಾಗಿದೆ.
    • ಎಲ್ಲಾ ಸರ್ಕಾರಿ ಕಾಲೇಜುಗಳಲ್ಲೂ ಪ್ರತ್ಯೇಕ ಆಕ್ಸಿಜನ್ ಬೆಡ್ ಮತ್ತು ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮಾನವ ಸಂಪನ್ಮೂಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
    • 30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರು, ಮುಂಜಾಗ್ರತಾ ಲಸಿಕೆಯನ್ನಾಗಿ ತೆಗೆದುಕೊಳ್ಳುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.

  • ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ

    ನವದೆಹಲಿ: ಕೋವಿನ್ (CoWIN) ಪೋರ್ಟಲ್‌ನಿಂದ ಡೇಟಾ ಸೋರಿಕೆ (Date Leak) ಆರೋಪದ ಮೇಲೆ ಬಿಹಾರ ಮೂಲದ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

    ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಸಂಬಂಧಿಸಿದ ಮಾಹಿತಿಗಳು ಕೋವಿನ್ ಪೋರ್ಟಲ್‌ನಲ್ಲಿ ಸೋರಿಕೆಯಾಗಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಜನರ ಡೇಟಾ ಸೋರಿಕೆಯನ್ನು ಟೆಲಿಗ್ರಾಂ ಆ್ಯಪ್ ಬಳಸಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ನಾಗರಿಕರ ಡೇಟಾ ಸೋರಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಕೇಳಿಕೊಂಡಿವೆ. ಆದರೆ ಸರ್ಕಾರ ಕೋವಿನ್ ಪೋರ್ಟಲ್‌ನಲ್ಲಿ ಡೇಟಾ ಗೌಪ್ಯತೆಗೆ ಸಾಕಷ್ಟು ಸುರಕ್ಷತೆಯಿದ್ದು, ಅಂತಹ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಈ ವಿಷಯವನ್ನು ದೇಶದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್ ಪರಿಶೀಲನೆಗೆ ಕಳುಹಿಸಿದ್ದು, ಅದು ತನ್ನ ಆರಂಭಿಕ ವರದಿಯಲ್ಲಿ ಡೇಟಾ ಸೋರಿಕೆ ಟೆಲಿಗ್ರಾಂ ಆ್ಯಪ್ ಮೂಲಕ ಮಾಡಲಾಗಿದೆ ಎಂಬುದನ್ನು ತಿಳಿಸಿದೆ. ಇದೀಗ ಕೋವಿನ್ ಡೇಟಾ ಲೀಕ್ ಆರೋಪದ ಮೇಲೆ ಬಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ 16,200 KG ಅಕ್ಕಿ ವಶಕ್ಕೆ

  • ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

    ಕೋವಿನ್ ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

    ನವದೆಹಲಿ: ಕೋವಿನ್ ಪೋರ್ಟಲ್‍ (CoWin Portal) ನಿಂದ ಅತ್ಯಂತ ಸೂಕ್ಷ್ಮ ದತ್ತಾಂಶ ಸೋರಿಕೆ ಆಗಿವೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ (Central Govt) ತಳ್ಳಿ ಹಾಕಿದೆ.

    ಯಾವುದೇ ಆಧಾರಗಳು ಇಲ್ಲದೇ ಡಾಟಾ ಲೀಕ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಒಟಿಪಿ (OTP) ಇಲ್ಲದೆ ಡೇಟಾವನ್ನು ಹೊರಗೆಳೆಯುವ ಯಾವುದೇ ಸಾರ್ವಜನಿಕ ಅಪ್ಲಿಕೇಶನ್‍ಗಳಿಲ್ಲ. ಕೋವಿನ್ ಪೋರ್ಟಲ್‍ನಲ್ಲಿ ಎಲ್ಲಾ ದತ್ತಾಂಶಗಳು ಅತ್ಯಂತ ಸೇಫ್ ಆಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಸಿಇಆರ್ ಟಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

    ಕೋವಿಡ್ ವ್ಯಾಕ್ಸಿನ್ (Covid Vaccine) ಹಾಕಿಸಿಕೊಂಡವರ ಆಧಾರ್ ಕಾರ್ಡ್, ಫೋನ್ ನಂಬರ್ ಗಳು, ಎಲ್ಲೆಲ್ಲಿ ಎಷ್ಟು ಬಾರಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಟೆಲಿಗ್ರಾಮ್‍ನಲ್ಲಿ ಲೀಕ್ ಆಗಿದೆ. ಯಾವುದೇ ವ್ಯಕ್ತಿಯ ಫೋನ್ ನಂಬರ್ ಇಲ್ಲವೇ ಆಧಾರ್ ನಂಬರ್ ನಮೂದಿಸಿದ್ರೆ ಅವರ ಎಲ್ಲಾ ಮಾಹಿತಿ ಲಭ್ಯವಾಗುತ್ತಿದೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯ, ಈ ವರದಿ ಆಧಾರರಹಿತ. ಜನರನ್ನು ತಪ್ಪಿಸುವುದಾಗಿದೆ ಎಂದಿದೆ. ಈ ಹಿಂದೆಯೂ ದತ್ತಾಂಶ ಸೋರಿಕೆ ಆಪಾದನೆ ಕೇಳಿಬಂದಿತ್ತು.

    ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡುತ್ತಾ, ಕೋವಿನ್ ಪೋರ್ಟಲ್‍ಗಾಗಿ ತೆಗೆದುಕೊಂಡ ಭದ್ರತಾ ಕ್ರಮಗಳ ಬಗ್ಗೆಯೂ ಆರೋಗ್ಯ ಸಚಿವಾಲಯ ವಿವರಣೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಕೋವಿಡ್ 19 ವಿರುದ್ಧ ಲಸಿಕೆಯನ್ನು ಪಡೆದ ಫಲಾನುಭವಿಗಳ ಎಲ್ಲಾ ಡೇಟಾದ ಭಂಡಾರವಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (CERT-In) ತಿಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  • ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಕೊವೀಡ್ ಲಸಿಕೆ ಸಂಶೋಧಿಸಿದ್ದ ವಿಜ್ಞಾನಿಯ ಹತ್ಯೆ

    ಮಾಸ್ಕೋ: ರಷ್ಯಾದ ಕೋವಿಡ್-19 ಲಸಿಕೆ (Covid Vaccine) ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಕರಿಸಿದ ವಿಜ್ಞಾನಿ (Russian Scientist) ಆಂಡ್ರೆ ಬೊಟಿಕೋವ್ ಅವರನ್ನ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಮಾಸ್ಕೋದ ಅಪಾರ್ಟ್ಮೆಂಟ್‌ನಲ್ಲಿ ಅವರನ್ನ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.

    ಬೊಟಿಕೋವ್ (47) ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿದವರು ಪಾಶ್ಚಿಮಾತ್ಯರು – ಪರೋಕ್ಷವಾಗಿ ಅಮೆರಿಕ ದೂಷಿಸಿದ ಪುಟಿನ್

    Vladimir Putin

    ಕೊಲೆಯು ಕೌಟುಂಬಿಕ ಸಂಘರ್ಷದ ಕಾರಣಗಳಿಂದ ನಡೆದಿದೆ ಎನ್ನಲಾಗಿದ್ದು, 29 ವರ್ಷದ ವ್ಯಕ್ತಿಯು ಬೊಟಿಕೋವ್ ಕತ್ತಿಗೆ ಬೆಲ್ಟ್‌ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ವಿಚಾರಣೆ ವೇಳೆ ಆರೋಪಿಯೇ ಸ್ವತಃ ಇದನ್ನ ಒಪ್ಪಿಕೊಂಡಿದ್ದಾನೆ. ಆರೋಪಿ ಈ ಹಿಂದೆಯೂ ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ರೋಮ್ಯಾನ್ಸ್ -ಗ್ರಾಮಸ್ಥರು ಆಕ್ರೋಶ

    2020 ರಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು. 2021 ರಲ್ಲಿ ಕೋವಿಡ್ ಲಸಿಕೆಯಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನೀಡಿ ಗೌರವಿಸಿದ್ದರು.