Tag: Covid Testing

  • ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ BBMP ಪಣ – 500 ಸಿಬ್ಬಂದಿ ನೇಮಕ

    ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ BBMP ಪಣ – 500 ಸಿಬ್ಬಂದಿ ನೇಮಕ

    ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಳಿತವಾಗಿ ಸಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 108 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ 10,566 ಟೆಸ್ಟಿಂಗ್ ನಡೆಸಲಾಗಿದ್ದು, 1,780 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.

    COVID HIKE 2

    ಈ ಬೆನ್ನಲ್ಲೇ ಕೊವಿಡ್ ನಿಯಂತ್ರಣಕ್ಕೆ ತರಲು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾಗಿದೆ. ನಗರದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಪಾಲಿಕೆಯಿಂದ 500 ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರ – ಧರೆಗುರುಳಿದ ಭಾರೀ ಮರಗಳು

    COVID
    ಸಾಂದರ್ಭಿಕ ಚಿತ್ರ

    ಕಳೆದ ಬಾರಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಮಾರ್ಚ್ನಲ್ಲಿ ಕೈಬಿಡಲಾಗಿತ್ತು. ಇದೀಗ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಹಾಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣ: ಓರ್ವ ಪೊಲೀಸ್ ಪೇದೆ ಸೇರಿ ಬಂಧಿತರ ಸಂಖ್ಯೆ 39ಕ್ಕೆ ಏರಿಕೆ

    ನಗರದಲ್ಲಿ ಸರ್ಕಾರ 10 ಸಾವಿರ ಟೆಸ್ಟಿಂಗ್ ಗುರಿ ತಲುಪಲು ಟಾರ್ಗೆಟ್ ನೀಡಿದೆ. ಈಗಾಗಲೇ 200 ಸ್ವಾಬ್ ಕಲೆಕ್ಟರ್, 200 ಡೇಟಾ ಆಪರೇಟರ್ ಹಾಗೂ 100 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.