Tag: Covid Test

  • ಟ್ರೋಲ್ ಆಯ್ತು ನೀತು ಕಪೂರ್ ಕೊರೊನಾ ಟೆಸ್ಟ್ ವೀಡಿಯೋ

    ಟ್ರೋಲ್ ಆಯ್ತು ನೀತು ಕಪೂರ್ ಕೊರೊನಾ ಟೆಸ್ಟ್ ವೀಡಿಯೋ

    – ಕೆಲವೇ ಕ್ಷಣಗಳಲ್ಲಿ ವೀಡಿಯೋ ಡಿಲೀಟ್

    ಮುಂಬೈ: ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಕೊರೊನಾ ಟೆಸ್ಟ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಇದು ಯಾವ ರೀತಿಯ ಕೊರೊನ ಪರೀಕ್ಷೆ ಎಂದು ಪ್ರಶ್ನೆ ಮಾಡಲಾರಂಭಿಸಿದ್ದರು.

    ಅನ್‍ಲಾಕ್ ಬಳಿಕ ಸಿನಿಮಾ ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರತಂಡಗಳು ಸರ್ಕಾರ ಸೂಚಿಸಿರುವ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಚಿತ್ರೀಕರಣಕ್ಕೆ ಹಾಜರಾಗುವ ಪ್ರತಿ ಕಲಾವಿದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಧರ್ಮ ಪ್ರೊಡೆಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ‘ಜುಗ್ ಜುಗ್ ಜಿಯೋ’ ಸಿನಿಮಾದಲ್ಲಿ ನೀತು ಕಪೂರ್ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರೀಕರಣಕ್ಕೆ ತೆರಳುವ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತ ನೀತು ಕಪೂರ್ ವೀಡಿಯೋ ಡಿಲೀಟ್ ಮಾಡಿಕೊಂಡಿದ್ದಾರೆ.

    ಟ್ರೋಲ್ ಆಗಿದ್ದೇಕೆ?: ಕೊರೊನಾ ಪರೀಕ್ಷೆ ವೇಳೆ ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವಾಗ ಗಂಟಲಿನ ಆಳಕ್ಕೆ ಕಾಟನ್ ಸ್ಟಿಕ್ ಹಾಕಲಾಗುತ್ತದೆ. ಹಾಗೆ ಮೂಗಿನೊಳಗೆ ಕಡ್ಡಿ ಹಾಕಿ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ಆದ್ರೆ ವೀಡಿಯೋದಲ್ಲಿ ಕೊರೊನಾ ವಾರಿಯರ್ ಸ್ಯಾಂಪಲ್ ತೆಗೆದುಕೊಳ್ಳುವಾಗ ಸರಿಯಾಗಿ ಸ್ಯಾಂಪಲ್ ಕಲೆಕ್ಟ್ ಮಾಡಿರಲಿಲ್ಲ.

     

    View this post on Instagram

     

    A post shared by Voompla (@voompla)

    ವೀಡಿಯೋ ನೋಡಿದ ನೆಟ್ಟಿಗರು ಇದೇನಾ ಕೊರೊನಾ ಟೆಸ್ಟ್ ಎಂದು ಪ್ರಶ್ನೆ ಮಾಡಲಾರಂಭಿಸಿದ್ದರು. ಈ ರೀತಿ ಪರೀಕ್ಷೆ ಮಾಡಿಸಿದ್ರೆ ಸೋಂಕಿತನಿಗೂ ಪಾಸಿಟಿವ್ ವರದಿ ಬರಲ್ಲ. ನೀತುಜೀ, ನಿಮ್ಮ ಸ್ವ್ಯಾಬ್ ಸ್ಯಾಂಪಲ್ ಸರಿಯಾಗಿ ಸಿಕ್ಕಿಲ್ಲ. ಹಾಗಾಗಿ ಇನ್ನೊಮ್ಮೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು.

  • ಚಾಮರಾಜನಗರ ಪ್ರವಾಸಿ ತಾಣದಲ್ಲಿ ಇನ್ಮುಂದೆ ನಡೆಯಲಿದೆ ಕೋವಿಡ್ ಟೆಸ್ಟ್

    ಚಾಮರಾಜನಗರ ಪ್ರವಾಸಿ ತಾಣದಲ್ಲಿ ಇನ್ಮುಂದೆ ನಡೆಯಲಿದೆ ಕೋವಿಡ್ ಟೆಸ್ಟ್

    ಚಾಮರಾಜನಗರ: ವೀಕೆಂಡ್, ರಜಾದಿನ ಬಂದರೆ ಸಾಕು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಆದರೆ ಇದೀಗ ಪ್ರವಾಸಕ್ಕೆ ಬಂದವರಿಗೆ ಪ್ರವಾಸಿ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಹೆಚ್ಚು ಕೋವಿಡ್ ಟೆಸ್ಟ್ ಮಾಡಿ, ಸೋಂಕಿತರ ಪತ್ತೆ ಹಚ್ಚುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಲಾಕ್‍ಡೌನ್ ಸಡಿಲಿಕೆಯಿಂದ ಪ್ರವಾಸಿಗರ ಸ್ವರ್ಗದಂತಿರುವ ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರು ದಂಡೆ ಹರಿದು ಬರುತ್ತಿದೆ.

    ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬಿಆರ್ ಟಿ, ಮಲೆ ಮಹದೇಶ್ವರ ಬೆಟ್ಟ, ಮಲೆಹದೇಶ್ವರ ವನ್ಯಧಾಮ, ಭರಚುಕ್ಕಿ ಸೇರಿದಂತೆ ಹಲವು ಪ್ರವಾಸಿ ತಾಣಗಳ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯದಿಂದಲು ಸಾಕಷ್ಟು ಜನರು ಬರುತ್ತಿದ್ದಾರೆ. ಅದರಲ್ಲಿಯೂ ವಾರಾಂತ್ಯದ ದಿನಗಳು ಹಾಗೂ ರಜೆ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳು ಕಿಕ್ಕಿರಿದು ತುಂಬಿರುತ್ತವೆ. ಇದರಿಂದ ಹೊಸ ಚಿಂತನೆ ಮಾಡಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಪ್ರವಾಸಿ ಸ್ಥಳಗಳಲ್ಲೇ ಕೋವಿಡ್ ಟೆಸ್ಟ್ ಮಾಡಲು ತೀರ್ಮಾನ ಮಾಡಿದೆ. ಈ ಕುರಿತು ಚಾಮರಾಜನಗರ ಡಿಎಚ್‍ಒ ಡಾ.ರವಿ ಅವರು ಮಾಹಿತಿ ನೀಡಿದ್ದಾರೆ.

    ರ‍್ಯಾಪಿಡ್ ಮತ್ತು ಆರ್ ಟಿಪಿಸಿಆರ್ ಸ್ವಾಬ್ ಕಲೆಕ್ಷನ್ ಎರಡು ರೀತಿ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ರೋಗ ಲಕ್ಷಣವಿರುವ ಹಾಗೂ ವಯಸ್ಸಾಗಿರುವ ಪ್ರವಾಸಿಗರನ್ನು ರ‍್ಯಾಪಿಡ್ ಟೆಸ್ಟ್ ಗೆ ಒಳಪಡಿಸುತ್ತೇವೆ. ಬಳಿಕ ಆರ್ ಟಿಪಿಸಿಆರ್ ಟೆಸ್ಟ್ ಮಾಡುತ್ತೇವೆ. ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿ ಎಂದು ನಾವು ಒತ್ತಾಯ ಮಾಡಲು ಕೂಡ ಸಾಧ್ಯವಿಲ್ಲ. ಆದರೆ ಎಲ್ಲರನ್ನು ಮನವೊಲಿಸಿ ಕೋವಿಡ್ ಟೆಸ್ಟ್ ಮಾಡಿಸಲು ಪ್ರಯತ್ನಿಸುತ್ತೇವೆ. ಅದು ಅವರ ಮತ್ತು ಅವರ ಸುತ್ತಲಿನವರ ಆರೋಗ್ಯ ದೃಷ್ಟಿಯಿಂದ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿರುವುದು ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಪ್ರವಾಸಿಗರು ಎಷ್ಟರ ಮಟ್ಟಿಗೆ ಜಿಲ್ಲಾಡಳಿತದ ತೀರ್ಮಾನಕ್ಕೆ ಬೆಂಬಲ ನೀಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುತ್ತಾರೆ ಕಾದು ನೋಡಬೇಕಿದೆ.

  • ಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ಬೋಪಯ್ಯ

    ಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ಬೋಪಯ್ಯ

    – ಹೊರ ಜಿಲ್ಲೆ, ರಾಜ್ಯದವರಿಗೆ ಕೊರೊನಾ ಪರೀಕ್ಷೆ
    – ಸರ್ಟಿಫಿಕೇಟ್ ತಂದ್ರೆ ಮಾತ್ರ ಕ್ಷೇತ್ರಕ್ಕೆ ಬರಲು ಅವಕಾಶ

    ಮಡಿಕೇರಿ: ಇದೇ ಅಕ್ಟೋಬರ್ 17 ರಂದು ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಹೀಗಾಗಿ ಕಾವೇರಿ ಪವಿತ್ರ ತೀರ್ಥೊದ್ಬವ ವೀಕ್ಷಿಸಲು ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬರುವ ಭಕ್ತದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಭಕ್ತರು ಕೋವಿಡ್ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್ ತಂದರೆ ಮಾತ್ರ ಕ್ಷೇತ್ರಕ್ಕೆ ಬರಲು ಅವಕಾಶ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಸ್ಥಳೀಯರು ತೀರ್ಥೋದ್ಭವ ಸಂದರ್ಭ ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂನಿಯಂತ್ರಣ ಮಾಡಿಕೊಂಡು ಕಾವೇರಿ ದರ್ಶನ ಮಾಡಬೇಕು. ಅಷ್ಟೇ ಅಲ್ಲದೆ ಈ ಬಾರಿ ಹೆಚ್ಚು ಜನದಟ್ಟಣೆಗೆ ಅವಕಾಶವಿಲ್ಲದಂತೆ ತೀರ್ಥೋದ್ಭವಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

    ಪೂಜಾ ವಿಧಿವಿಧಾನಗಳು, ಕಾವೇರಿ ಕ್ಷೇತ್ರದ ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿಬಾರದಂತೆ ತೀರ್ಥೋದ್ಭವ ಸಂದರ್ಭದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾಧಿಗಳ ಆರೋಗ್ಯ, ಹಿತರಕ್ಷಣೆಗೂ ಆದ್ಯತೆ ನೀಡಲಾಗುತ್ತದೆ ಎಂದರು.

    ಕಾವೇರಿ ಕ್ಷೇತ್ರಕ್ಕೆ ಬಂದವರಿಂದ ಕೊರೊನಾ ಸೋಂಕು ವ್ಯಾಪಿಸದಂತೆ ಹಾಗೂ ಯಾವುದೇ ಸಮಸ್ಯೆಗೆ ಕಾರಣವಾಗದಂತೆ ಕ್ಷೇತ್ರದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಈ ಬಾರಿ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವತಿಯಿಂದ ಕೈಗೊಳ್ಳಲಿದೆ. ಜನರು ಕೂಡ ಸಹಕಾರ ನೀಡುವಂತೆ ಶಾಸಕ ಬೋಪಯ್ಯ ಮನವಿ ಮಾಡಿಕೊಂದರು.

  • ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ?

    ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ?

    ಬೆಂಗಳೂರು: ರಾಜ್ಯ ಸರ್ಕಾರ ಇಷ್ಟು ದಿನ ಮೈಮರೆತು ಕುಳಿತಿದ್ದ ಕಾರಣ ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೆ ರಾಜ್ಯದಲ್ಲಿ ಮಾತ್ರ ಕಳೆದ ಮೂರು ವಾರಗಳಿಂದ ತೀವ್ರತೆ ಶೇ.39ರಷ್ಟು ಹೆಚ್ಚಾಗಿದೆ. ಹೀಗಾಗಿ, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಕೊರೋನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ.

    ಮೊನ್ನೆಯಷ್ಟೇ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದ ಪ್ರಮಾಣವನ್ನು 1 ಸಾವಿರ ರೂಪಾಯಿಗೆ ಹೆಚ್ಚಿಸಿದ್ದ ಬಿಎಸ್‍ವೈ ಸರ್ಕಾರ, ಇದೀಗ ಕೊರೋನಾ ಟೆಸ್ಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಐಎಲ್‍ಐ, ಸಾರಿ ಕೇಸ್‍ಗಳು.., ಸೋಂಕಿತರ ಸಂಪರ್ಕದಲ್ಲಿರುವವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ.

    ಇನ್ಮುಂದೆ ಕೊರೊನಾ ಟೆಸ್ಟಿಂಗ್‍ಗೆ ಯಾರೂ ನಿರಾಕರಿಸುವಂತೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರವಾಸ ತಾಣಗಳಿಗೆ ಹೆಚ್ಚು ಪ್ರವಾಸಿಗಳು ಭೇಟಿ ನೀಡುತ್ತಿರುವ ಕಾರಣ ಕೊರೊನಾ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

    ಹೋಟೆಲ್, ಹೋಂ ಸ್ಟೇಗಳಲ್ಲಿ ಉಳಿಯುವವರು ಕೋವಿಡ್ ಟೆಸ್ಟ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಅಲ್ಲದೇ, ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆ ಚೆಕ್ ಪೋಸ್ಟ್ ಸ್ಥಾಪಿಸಿ, ಪ್ರವಾಸಿಗರ ಗಂಟಲು ದ್ರವ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಇನ್ನು ಕೋವಿಡ್ ನಿಯಂತ್ರಣ ಸಂಬಂಧ ಇದೇ ಗುರುವಾರ 11 ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ.. ?
    * ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು
    * ಜ್ವರದ ಲಕ್ಷಣ ಇರುವವವರು
    * ಉಸಿರಾಟ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರು
    * ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ
    * ಕಂಟೈನ್ಮೆಂಟ್ ಝೋನ್, ಬಫರ್ ಝೋನ್‍ನಲ್ಲಿ ಇರುವವರು
    * ಆರೋಗ್ಯ ಸಿಬ್ಬಂದಿಯಿಂದ ಗುರುತಿಸಲ್ಪಟ್ಟ ಯಾವುದೇ ವ್ಯಕ್ತಿ
    * ಇನ್ಮುಂದೆ ಕೋವಿಡ್ ಟೆಸ್ಟ್ ನಿರಾಕರಿಸುವಂತೆಯೇ ಇಲ್ಲ

  • ಕಾಂಗ್ರೆಸ್ಸಿನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ಸಿನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ಪಾಸಿಟಿವ್

    ಗದಗ: ಕಾಂಗ್ರೆಸ್‍ನ ಹಿರಿಯ ಶಾಸಕ ಎಚ್.ಕೆ.ಪಾಟೀಲ್‍ಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ.

    ಗದಗ ಮತಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್ ಸದ್ಯಕ್ಕೆ ಬೆಂಗಳೂರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಾ ಕ್ವಾರಂಟೈನ್ ಆಗಿದ್ದಾರೆ. ಎಚ್.ಕೆ.ಪಾಟೀಲ್ ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಮಹಾರಾಷ್ಟ್ರದ ಮುಂಬೈ ಪ್ರವಾಸ ನಂಟಿನಿಂದ ಕೊರೊನಾ ಬಂದಿರಬಹುದು ಎಂದು ಶಂಕಿಸಲಾಗಿದೆ.

    ಸದ್ಯಕ್ಕೆ ಎಚ್.ಕೆ.ಪಾಟೀಲ್ 10 ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ತಮಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜೊತೆಗೆ ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

    “ನಾನು ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ನನಗೆ ಯಾವುದೇ ಕೊರೊನಾ ರೋಗಲಕ್ಷಣಗಳಿಲ್ಲ. ಆದರೂ 10 ದಿನಗಳ ಕಾಲ ಕಾರಂಟೈನ್ ಆಗಿರಲು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿಯಿಂದ ನಾನು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ ಅಂತ ಭರವಸೆ ಇದೆ” ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೇ ಕಳೆದ ಎರಡು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಮುನ್ನಚ್ಚರಿಕೆಯಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳವಂತೆ ವಿನಂತಿಸಿಕೊಂಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಸುರಕ್ಷಿತರಾಗಿರಿ ಎಂದು ಹೇಳಿದ್ದಾರೆ.

  • ಇಂದು 7,339 ಮಂದಿಗೆ ಕೊರೊನಾ – 9,925 ಡಿಸ್ಚಾರ್ಜ್

    ಇಂದು 7,339 ಮಂದಿಗೆ ಕೊರೊನಾ – 9,925 ಡಿಸ್ಚಾರ್ಜ್

    – ಬೆಂಗ್ಳೂರಿನಲ್ಲಿ 2,886 ಮಂದಿಗೆ ಸೋಂಕು

    ಬೆಂಗಳೂರು: ಇಂದು ಹೊಸದಾಗಿ 7,339 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, 122 ಮಂದಿ ಕೋವಿಡ್-19ಗೆ ಬಲಿಯಾಗಿದ್ದಾರೆ.

    ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ 7,339 ಮಂದಿಗೆ ಸೋಂಕು ಬಂದಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,26,876ಕ್ಕೆ ಏರಿಕೆಯಾಗಿದೆ. ಈ ಪೈಕಿ 95,335 ಸಕ್ರಿಯ ಪ್ರಕರಣಗಳಿದ್ದು, 4,23,377 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇಂದು 9,925 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಇಂದು 122 ಮಂದಿ ಸಾವನ್ನಪ್ಪುವ ಮೂಲಕ ಇಲ್ಲಿಯವರೆಗೆ 8,145 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 809 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5,35,556 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಇಂದು 42,691 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 42,82,735 ಮಂದಿಗೆ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ 2,886 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 1,97,646ಕ್ಕೆ ಏರಿಕೆ ಆಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ 32 ಮಂದಿ ಕೊರೊನಾಗೆ ಬಲಿಯಾಗಿದ್ದು, 3,536 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಮೈಸೂರಿನಲ್ಲಿ 524, ದಕ್ಷಿಣ ಕನ್ನಡದಲ್ಲಿ 233, ಕೊಪ್ಪಳ 155, ಧಾರವಾಡ 130, ಚಿತ್ರದುರ್ಗ 326, ಹಾಸನ 268, ತುಮಕೂರು 300, ಶಿವಮೊಗ್ಗ 348, ಉಡುಪಿ 231 ಮಂದಿಗೆ ಸೋಂಕು ಬಂದಿದೆ.

  • ಒಂದೇ ದಿನ 92,605 ಮಂದಿಗೆ ಕೊರೊನಾ – ಇದುವರೆಗೂ 43 ಲಕ್ಷ ಮಂದಿ ಗುಣಮುಖ

    ಒಂದೇ ದಿನ 92,605 ಮಂದಿಗೆ ಕೊರೊನಾ – ಇದುವರೆಗೂ 43 ಲಕ್ಷ ಮಂದಿ ಗುಣಮುಖ

    – 24 ಗಂಟೆಯಲ್ಲಿ 1,133 ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಒಂದೇ ದಿನ 92,605 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ.

    24 ಗಂಟೆಯಲ್ಲಿ 92,605 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,00,620ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ ಕೊರೊನಾಗೆ 1,133 ಮಂದಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    54,00,620ರ ಪೈಕಿ 10,10,824 ಸಕ್ರಿಯ ಪ್ರಕರಣಗಳಿದ್ದು, 43,03,044 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 24 ಗಂಟೆಯಲ್ಲಿ 1,133 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಕೊರೊನಾಗೆ 86,752 ಮಂದಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಚೇತರಿಕೆ ಸಂಖ್ಯೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಈ ವಿಚಾರದಲ್ಲಿ ಅಮೆರಿಕಾವನ್ನು ಮೀರಿಸಿ ನಿಂತು ಭಾರತ ನಂಬರ್ ಒನ್ ಆಗಿದೆ. 43 ಲಕ್ಷಕ್ಕೂ ಹೆಚ್ಚು ಮಂದಿ ನಮ್ಮಲ್ಲಿ ಚೇತರಿಸಿಕೊಂಡಿದ್ದರೆ, ಅಮೆರಿಕಾದಲ್ಲಿ ಇದರ ಪ್ರಮಾಣ 41.91 ಲಕ್ಷ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ನಡುವೆ ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 3 ಕೋಟಿ ದಾಟಿದೆ.

    ಶನಿವಾರ 12,06,806 ಮಂದಿಯ ಮಾದರಿಯನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಇದುವರೆಗೂ ದೇಶದಲ್ಲಿ 6,36,61,060 ಜನರಿಗೆ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

  • 24 ಗಂಟೆಯಲ್ಲಿ 1,174 ಮಂದಿ ಬಲಿ – 96,424 ಮಂದಿಗೆ ಕೊರೊನಾ

    24 ಗಂಟೆಯಲ್ಲಿ 1,174 ಮಂದಿ ಬಲಿ – 96,424 ಮಂದಿಗೆ ಕೊರೊನಾ

    ನವದೆಹಲಿ: ದೇಶದಲ್ಲಿ ಕೊರೊನಾ ತಾಂಡವ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 96,424 ಪ್ರಕರಣಗಳು ವರದಿ ಆಗಿದೆ.

    ಒಂದೇ ದಿನ ದೇಶದಲ್ಲಿ 96,424 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 52,14,678ಕ್ಕೆ ಏರಿಕೆಯಾಗಿದೆ. ಇನ್ನೂ 24 ಗಂಟೆಯಲ್ಲಿ 1,174 ಮಂದಿ ಕೊರೊನಾ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    52,14,678ರ ಪೈಕಿ 10,17,754 ಪ್ರಕ್ರಿಯ ಪ್ರಕರಣಗಳಿದ್ದು, 41,12,552 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ 1,174 ಮಂದಿ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 84,372ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಗುರುವಾರ 10,06,915 ಮಂದಿಯನ್ನು ಕೋವಿಡ್ 19 ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಇದುವರೆಗೂ 6,15,72,343 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ರಾಜ್ಯಸಭೆಯಲ್ಲಿ ಕೊರೊನಾ ಬಗ್ಗೆ ಮಾತನಾಡಿದ್ದ ಆರೋಗ್ಯ ಮಂತ್ರಿ ಹರ್ಷವರ್ಧನ್, ದೇಶದಲ್ಲಿ ಮರಣ ಪ್ರಮಾಣ ಸದ್ಯ ಶೇ.1.64ರಷ್ಟಿದೆ. ಇದನ್ನು ಒಂದಕ್ಕಿಂತ ಕಡಿಮೆಗೆ ತರುವುದು ಕೇಂದ್ರದ ಗುರಿಯಾಗಿದೆ. ಚೇತರಿಕೆ ಪ್ರಮಾಣ ಸಹ ಭಾರತದಲ್ಲಿ ಹೆಚ್ಚು ಎಂದು ಹೇಳಿದ್ದಾರೆ.

  • ಒಂದೇ ದಿನ 1,054 ಮಂದಿ ಕೊರೊನಾಗೆ ಬಲಿ – 38.59 ಲಕ್ಷ ಮಂದಿ ಡಿಸ್ಚಾರ್ಜ್

    ಒಂದೇ ದಿನ 1,054 ಮಂದಿ ಕೊರೊನಾಗೆ ಬಲಿ – 38.59 ಲಕ್ಷ ಮಂದಿ ಡಿಸ್ಚಾರ್ಜ್

    ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,809 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಒಟ್ಟ ಸೋಂಕಿತರ ಸಂಖ್ಯೆ 49 ಲಕ್ಷ ದಾಟಿದೆ.

    ಒಂದೇ ದಿನ ದೇಶದಲ್ಲಿ 83,809 ಮಂದಿಗೆ ಸೋಂಕು ಬಂದಿದ್ದು, 1,054 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ಒಟ್ಟು ಕೊರೊನಾ ಸೋಂಕಿತ ಸಂಖ್ಯೆ 49,30,237ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    49,30,237ರ ಪೈಕಿ 9,90,061 ಸಕ್ರಿಯ ಪ್ರಕರಣಗಳಿದ್ದು, 38,59,400 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ 1,054 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಹೆಮ್ಮಾರಿಯಿಂದ ಸಾವನ್ನಪ್ಪಿದವರ ಸಂಖ್ಯೆ 80,776ಕ್ಕೆ ಏರಿಕೆ ಆಗಿದೆ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

    ದೇಶದಲ್ಲಿ ಸೋಮವಾರ 10,72,845 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,83,12,273 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

  • ಸೋಂಕಿತರ ಸಂಖ್ಯೆ 47.54 ಲಕ್ಷಕ್ಕೆ ಏರಿಕೆ – 37 ಲಕ್ಷ ಮಂದಿ ಗುಣಮುಖ

    ಸೋಂಕಿತರ ಸಂಖ್ಯೆ 47.54 ಲಕ್ಷಕ್ಕೆ ಏರಿಕೆ – 37 ಲಕ್ಷ ಮಂದಿ ಗುಣಮುಖ

    – ಒಂದೇ ದಿನ 94 ಸಾವಿರ ಮಂದಿಗೆ ಕೊರೊನಾ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 94,372 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

    ಒಂದೇ ದಿನದಲ್ಲಿ 94,372 ಮಂದಿಗೆ ಸೋಂಕು ದೃಢವಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 47,54,357ಕ್ಕೆ ಏರಿಕೆ ಆಗಿದೆ. ಅಲ್ಲದೇ 24 ಗಂಟೆಯಲ್ಲಿ 1,114 ಮಂದಿ ಕೊರೊನಾದಿಂದ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    47,54,357 ಪೈಕಿ 9,73,175 ಸಕ್ರಿಯ ಪ್ರಕರಣಗಳಿದ್ದು, 37,02,596 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಒಂದೇ ದಿನ ಕೊರೊನಾದಿಂದ 1,114 ಮಂದಿ ಮೃತಪಟ್ಟಿದ್ದು, ಇದುವರೆಗೂ ದೇಶದಲ್ಲಿ 78,586 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ದೇಶದಲ್ಲಿ ಶನಿವಾರ 10,71,702 ಮಂದಿಯನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಈ ಮೂಲಕ ಇದುವರೆಗೂ 5,62,60,928 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

    ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 77.77 ದಾಟಿದೆ. ಶನಿವಾರ ಮಹಾರಾಷ್ಟ್ರದಲ್ಲಿ ಬರೋಬ್ಬರಿ 24,886 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ.