Tag: Covid Self Test Kit

  • ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

    ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

    ಮುಂಬೈ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಜನರು ಆಧಾರ್ ಕಾರ್ಡ್ ವಿವರವನ್ನು ಒದಗಿಸಬೇಕಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರ್ ಪಡ್ನೇಕರ್ ಶನಿವಾರ ತಿಳಿಸಿದ್ದಾರೆ.

    ಯಾರಿಗಾದರೂ ಕೋವಿಡ್-19 ಪಾಸಿಟಿವ್ ಬಂದರೆ ಈ ಕುರಿತ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಆನ್‌ಲೈನ್‌ ಅಪ್‌ಡೇಟ್‌ ಮಾಡಲಾಗುವುದು. ಎಲ್ಲಾ ದತ್ತಾಂಶ ಒಂದು ಕಡೆ ಸಂಗ್ರಹವಾಗಲು ಈ ವಿಧಾನ ನೆರವಾಗುತ್ತದೆ ಎಂದಿದ್ದಾರೆ ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

    ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸುವ ಪ್ರತಿಯೊಬ್ಬರೂ, ಪರೀಕ್ಷೆಯ ನಂತರ ವರದಿ ಏನು ಬಂದಿರುತ್ತದೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಬೇಕು. ಅದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವೆಬ್‍ಸೈಟ್‍ನಲ್ಲಿ ಕಡ್ಡಾಯವಾಗಿ ಅಪ್‍ಲೋಡ್ ಮಾಡಲಾಗುತ್ತದೆ. ನೆಗೆಟಿವ್ ಅಥವಾ ಪಾಸಿಟಿವ್ ಯಾವುದೇ ವರದಿ ಬಂದಿದ್ದರೂ ಅಪ್‍ಡೇಟ್ ಮಾಡಬೇಕೆಂದು ನಾಗರಿಕ ಸಂಸ್ಥೆ ತಿಳಿಸಿದೆ.

    ಐಸಿಎಂಆರ್ ಇದುವರೆಗೂ ಏಳು ಕೋವಿಡ್ ಸ್ವಯಂ ಪರೀಕ್ಷೆ ಕಿಟ್‍ಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಲ್ಲಿ ಮೈಲ್ಯಾಬ್‍ನಿಂದ ಕೋವಿಸೆಲ್ಫ್ ಮತ್ತು ಮೆರಿಲ್ ಡಯಾಗ್ನೋಸ್ಟಿಕ್ಸ್‌ನ ಕೋವಿಫೈಂಡ್ ಸೇರಿದಂತೆ ಇನ್ನೂ ಹಲವಾರು ಇವೆ. ಇದನ್ನೂ ಓದಿ:  ವಿಕಲಾಂಗರು, ಗರ್ಭಿಣಿಯರಿಗೆ ವರ್ಕ್‌ ಫ್ರಮ್‌ ಹೋಮ್‌ – ದೆಹಲಿ ಸರ್ಕಾರ ಆದೇಶ

    CORONA-VIRUS.

    ಬಿಎಂಸಿಯ ಸ್ಥಳೀಯ ವಾರ್ಡ್ ವಾರ್ ರೂಮ್‍ಗಳು, ಕೋವಿಡ್ ಸ್ವಯಂ ಪರೀಕ್ಷೆ ಕಿಟ್‍ಗಳನ್ನು ಖರೀದಿಸಿದವರ ಟೆಸ್ಟ್ ವರದಿಗಳನ್ನು ಪಡೆಯಲು ಅವರನ್ನು ಸಂಪರ್ಕಿಸುತ್ತದೆ. ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಖರೀದಿದಾರರ ನಿವಾಸಕ್ಕೆ ಭೇಟಿ ನೀಡುತ್ತಾರೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ.