Tag: Covid Fourth Wave

  • ಭಾರತದಲ್ಲಿ ಕೋವಿಡ್-‌19 ನಾಲ್ಕನೇ ಅಲೆ ಪ್ರಾಬಲ್ಯ ತುಂಬಾ ಕಡಿಮೆ: ವೈರಾಣು ತಜ್ಞ

    ಭಾರತದಲ್ಲಿ ಕೋವಿಡ್-‌19 ನಾಲ್ಕನೇ ಅಲೆ ಪ್ರಾಬಲ್ಯ ತುಂಬಾ ಕಡಿಮೆ: ವೈರಾಣು ತಜ್ಞ

    ನವದೆಹಲಿ: ಭಾರತದಲ್ಲಿ ಕೋವಿಡ್-‌19 ನಾಲ್ಕನೇ ಅಲೆಯ ಪ್ರಾಬಲ್ಯ ತುಂಬಾ ಕಡಿಮೆ ಇರಲಿದೆ ಎಂದು ಪ್ರಖ್ಯಾತ ವೈರಾಣು ತಜ್ಞ ವೆಲ್ಲೂರ್‌ ಪ್ರೊ. ಟಿ.ಜಾಕೇಬ್‌ ಜಾಬ್‌ ಹೇಳಿದ್ದಾರೆ.

    ಕಳೆದ ಎರಡರಿಂದ ಮೂರು ವಾರಗಳಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಕೋವಿಡ್ ಸಂಖ್ಯೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಆದರೆ ಹೆಚ್ಚಳವನ್ನು ಅದೇ ಪ್ರಮಾಣದಲ್ಲಿ ಉಳಿಸಿಕೊಳ್ಳಲಾಗುತ್ತಿಲ್ಲ. ಯಾವುದೇ ರಾಜ್ಯವು ಕೋವಿಡ್-‌19 ಪ್ರಕರಣಗಳಲ್ಲಿ ಉಲ್ಬಣವನ್ನು ವರದಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಯಾವುದೇ ರಾಜ್ಯವು ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯನ್ನು ವರದಿ ಮಾಡುತ್ತಿಲ್ಲ. ಭಾರತವು ಇಲ್ಲಿಯವರೆಗೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಡಿಮೆ ಮತ್ತು ಸ್ಥಿರ ಸಂಖ್ಯೆಗಳೊಂದಿಗೆ ಉಳಿದಿದೆ ಎಂದು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: 4ನೇ ಅಲೆ ತಡೆಯೋದು ನಮ್ಮ ಕೈಯಲ್ಲಿಯೇ ಇದೆ: ತಜ್ಞ ವೈದ್ಯರು

    ಮಾಸ್ಕ್‌ ಧರಿಸುವ ಕುರಿತು ಮಾತನಾಡಿದ ಅವರು, ಮಾಸ್ಕ್ ಬಳಸದಿರುವವರು ನಂಬರ್ ಒನ್ ಅಪರಾಧಿ. ಮಾಸ್ಕ್‌ ಧರಿಸುವುದರ ಅಗಾಧ ಮೌಲ್ಯವನ್ನು ಜನರಿಗೆ ತಿಳಿಸುವಲ್ಲಿ ಪರಿಣತರು ಮತ್ತು ನೀತಿ ನಾಯಕರು ಸೋತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    covid

    ಎಲ್ಲೆಲ್ಲಿ ಏರಿಕೆಯಿದೆಯೋ, ಅಲ್ಲಲ್ಲಿ ಇಳಿತವೂ ಇದೆ. ಏರಿಳಿತಗಳು ಸಂಪೂರ್ಣವಾಗಿ ಉಳಿಯುವುದಿಲ್ಲ ಎಂದು ಹೊಸ ರೂಪಾಂತರಿಗಳ ಕುರಿತು ಜಾಬ್‌ ತಿಳಿಸಿದ್ದಾರೆ. ಇದನ್ನೂ ಓದಿ: 4ನೇ ಅಲೆ ಆತಂಕ, ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಬೇಕು: ಸುಧಾಕರ್

  • ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

    ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

    ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲಿವೆ ಎಂದು ಕೋವಿಡ್ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತಕ್ಕೆ ಈಗಾಗಲೇ ಕೊರೊನಾ 4ನೇ ಅಲೆ ಬಂದಿದ್ದು, ದೆಹಲಿ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯಕ್ಕೂ ಕೋವಿಡ್ 4ನೇ ಅಲೆ ಕಾಲಿಟ್ಟಿದೆ. ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಗುಣವಾದವರಿಗೆ ಕ್ಷಯ ರೋಗ: ಸುಧಾಕರ್

    COVID HIKE 2

    ಕೋವಿಡ್ 2, 3ನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿರುತ್ತೋ 4ನೇ ಅಲೆಯಲ್ಲೂ ಅದೇ ರೀತಿ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಪೀಡಿತರು, ಕ್ಯಾನ್ಸರ್ ರೊಗಿಗಳು, ನಿಶ್ಯಕ್ತಿಯುಳ್ಳವರು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದವರು, ಅಸ್ತಮಾ ರೋಗಿಗಳು ಹಾಗೂ ಇತರೇ ಕಾಯಿಲೆ ಇರುವವರು ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

    CORONA

    ಕೊರೊನಾ ರೂಪಾಂತರವಾಗೋದು ಅದರ ಸಹಜ ಗುಣ, ಸ್ವಭಾವ ಕೂಡ. ಈಗ ಪತ್ತೆಯಾಗಿರುವ BA2.10, BA2.12 ಹೊಸ ತಳಿಯೇನಲ್ಲ. ಇದು ಮೊದಲಿನಿಂದಲೂ ಕಾಲಕಾಲಕ್ಕೆ ಬದಲಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 40-50ರ ಆಸುಪಾಸಿನಲ್ಲಿದ್ದ ಪ್ರಕರಣಗಳು 100ರ ಗಡಿ ದಾಟುತ್ತಿವೆ. ರಾಜ್ಯಕ್ಕೆ ಈಗಾಗಲೇ BA2.10, BA2.12 ವೈರಸ್ ಕಾಲಿಟ್ಟಿರುವ ಸಾಧ್ಯತೆಗಳಿವೆ. ಈ ಉಪತಳಿಗಳ ಗುಣಲಕ್ಷಣಗಳನ್ನು ತಿಳಿಯಲು ಅಧ್ಯಯನಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್‌ ಕೇಸ್‌ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45

    corona

    ಕೋವಿಡ್ 4ನೇ ಅಲೆ ತಡೆಗೆ ಮಾಸ್ಕ್ ಅತ್ಯಗತ್ಯ, ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು. ಲಸಿಕೆ ಪೂರ್ಣವಾಗಿದೆ ಎಂದು ನಿರ್ಲಕ್ಷ್ಯ ಮನೋಭಾವ ತೋರಬಾರದು. ಜ್ವರ, ಕೆಮ್ಮು, ನೆಗಡಿಯಾದರೆ ನಿರ್ಲಕ್ಷ್ಯ ಮಾಡದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಮುಂದಿನ ವಾರಗಳಲ್ಲಿ 4ನೇ ಅಲೆ ಇರಲಿದ್ದು, ನಂತರ ಸಹಜವಾಗಿ ಕ್ಷೀಣಿಸುತ್ತದೆ ಎಂದು ಹೇಳಿದ್ದಾರೆ.