ನವದೆಹಲಿ: ಅರ್ಜಿ ಸಲ್ಲಿಕೆಯಾದ 10 ದಿನಗಳೊಳಗೆ ಕೋವಿಡ್ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕೊರೊನಾ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ಪಾವತಿಗೆ ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೋರ್ಟ್ ಸಲಹೆ ನೀಡಿದೆ. ಇದನ್ನೂ ಓದಿ: ಕೋವಿಡ್‍ನಿಂದ ಕೆಲಸ ಕಳೆದುಕೊಂಡವರಿಗೆ ಚುನಾವಣೆ ಆಸರೆ
ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, ಇಂದಿನಿಂದ ಒಂದು ವಾರದೊಳಗೆ ಎಸ್‌ಎಲ್‌ಎಸ್‌ಎಗೆ ಹೆಸರು, ವಿಳಾಸ ಮತ್ತು ಮರಣ ಪ್ರಮಾಣ ಪತ್ರದಂತಹ ಸಂಪೂರ್ಣ ವಿವರಗಳನ್ನು ಹಾಗೂ ಅನಾಥರಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಪರಿಹಾರ ಕೋರಿ ಬಂದಿರುವ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸಬಾರದು. ಯಾವುದೇ ತಾಂತ್ರಿಕ ದೋಷ ಕಂಡುಬಂದರೂ, ಸಂತ್ರಸ್ತರಿಗೆ ಸಾಂತ್ವನ ಮತ್ತು ಪರಿಹಾರವನ್ನು ಒದಗಿಸುವುದು ಕಲ್ಯಾಣ ರಾಜ್ಯದ ಅಂತಿಮ ಗುರಿಯಾಗಿದೆ. ಹೀಗಾಗಿ ದೋಷಗಳನ್ನು ಸರಿಪಡಿಸಲು ಅವರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಕಾರಿನಲ್ಲಿ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್ ಅಗತ್ಯ ಇಲ್ಲ – ದೆಹಲಿಯಲ್ಲಿ ವಿನಾಯಿತಿ
ಯಾದಗಿರಿ: ಸರ್ಕಾರದ ಕೋವಿಡ್ ಪರಿಹಾರ ಚೆಕ್ ಬೌನ್ಸ್ ಆಗಿರುವ ಘಟನೆಯೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಕೊರೊನಾ 2ನೇ ಅಲೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 1 ಲಕ್ಷ ರೂ. ಚೆಕ್ ನೀಡಿತ್ತು. ಆದರೆ ಇದು ನಗದೀಕರಣವೇ ಆಗುತ್ತಿಲ್ಲ. ಈ ಮೂಲಕ ನಾಮ್ಕಾವಾಸ್ತೆಗೆ ಕೋವಿಡ್ ಪರಿಹಾರ ನೀಡುತ್ತಿದೆಯೇ ಸರ್ಕಾರ ಎಂಬ ಪ್ರಶ್ನೆ ಎದ್ದಿದೆ.
ಬ್ಯಾಂಕ್ ಖಾತೆಗೆ ಚೆಕ್ ಹಣ ಜಮೆಯಾಗಿಲ್ಲ ಎಂದು ಕಾರಣ ಹೇಳಿ ಪರಿಹಾರದ ಚೆಕ್ ಅನ್ನು ಕೆಲವು ಬ್ಯಾಂಕ್ ಗಳು ಮರಳಿಸುತ್ತಿವೆ. ಹೀಗಾಗಿ ಫಲಾನುಭವಿಗಳು ಕೋವಿಡ್ ಪರಿಹಾರ ಹಣಕ್ಕಾಗಿ ಅಲೆದು ಅಲೆದು ಸಸ್ತಾಗಿದ್ದಾರೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಸಣ್ಣಗೌಡ ಎಂಬವರು ಕೋವಿಡ್ ನಿಂದ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಬಸಣ್ಣಗೌಡ ಮಗಳು ಅನಿತಾ ಎಲ್ಲಾ ದಾಖಲೆಗಳು ಸಲ್ಲಿಸಿದ್ದಳು. ಅರ್ಜಿದಾರರಿಗೆ 2021ರ ಡಿಸೆಂಬರ್ 17 ರಂದು ಸುರಪುರ ಶಾಸಕ ರಾಜೂಗೌಡ ಅವರೇ ಚೆಕ್ ವಿತರಿಸಿದ್ದರು. ಅನಿತಾ ಅವರಿಗೆ SBI ಶಾಖೆಯ 1 ಲಕ್ಷ ರೂ. ನೀಡಲಾಗಿತ್ತು. 406164 ಸಂಖ್ಯೆಯ ಅಕೌಂಟ್ ನಂಬರ್ ನಿಂದ 8 ಡಿ.2021 ರಂದು ನೀಡಲಾಗಿತ್ತು. ಈ ಚೆಕ್ ಅನ್ನು ಸುರಪುರ SBIಗೆ ನಗದೀಕರಣಕ್ಕಾಗಿ ಅನಿತಾ ಕಾಯುತ್ತಿದ್ದರು. ಆದರೆ ನಗದೀಕರಣ ಆಗಲ್ಲ, ಯಾದಗಿರಿಗೆ ಹೋಗುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!
ಇತ್ತ ಯಾದಗಿರಿ SBI ಶಾಖೆಗೆ ಬಂದು ವಿಚಾರಿಸಿದರೂ ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿಲ್ಲ. ಕೆಲವು ದಿನಗಳ ನಂತರ ಇತರೆ ಕಾರಣ ನೀಡಿ, ಏಉಃ ಬ್ಯಾಂಕ್ ನಿಂದ ಚೆಕ್ ಸಮೇತ ಚೀಟಿ ಬಂದಿದೆ. ಇತ್ತ ಮಹಾದೇವಿ ಎಂಬವರಿಗೆ ಸಹ ಇದೇ ರೀತಿ ಬ್ಯಾಂಕಿವರು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ಹಣ ಜನರ ಕೈ ಸೇರದೇ ಕಂಗಾಲಾಗಿದ್ದಾರೆ.
ಬೆಂಗಳೂರು: ಎಲ್ಲ ಸಂದರ್ಭದಲ್ಲೂ ನಮ್ಮ ಸರ್ಕಾರ ರಾಜ್ಯದ ಜನರ ಜೊತೆಗಿರುತ್ತದೆ. ಕುಟುಂಬದವರನ್ನು ಕಳೆದುಕೊಂಡು ದಿಕ್ಕಿಲ್ಲದೇ ಇರುವವರಿಗೆ ಅನುಕೂಲ ಆಗಲಿ. ಅವರು ಎಲ್ಲರಂತೆ ಬದುಕಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೋವಿಡ್ನಿಂದ ಎಷ್ಟೋ ಕುಟುಂಬಗಳಲ್ಲಿ ದುಡಿದು ಮನೆ ನಡೆಸುವವರೇ ಸತ್ತಿದ್ದಾರೆ. ಹಲವಾರು ಕುಟುಂಬಕ್ಕೆ ದಿಕ್ಕೇ ಇಲ್ಲದಂತಾಗಿದೆ. ಅಂತವರಿಗೆ ನೆರವಿಗೆ ಸರ್ಕಾರ ಇರಬೇಕು ಎನ್ನುವ ಕಾರಣಕ್ಕೆ ಈ ಯೋಜನೆ ಜಾರಿಗೆ ತಂದಿದ್ದೇವೆ. ಬಿಪಿಎಲ್ ಕುಟುಂಬದ ಸದಸ್ಯರು ಕೋವಿಡ್‌ನಿಂದ ಮೃತಪಟ್ಟರೆ ರಾಜ್ಯ ಸರ್ಕಾರ 1 ಲಕ್ಷ ರೂ. ಮತ್ತು ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರ 50 ಸಾವಿರ ಹಣ ನೀಡುತ್ತದೆ. ಕುಟುಂಬದವರನ್ನು ಕಳೆದುಕೊಂಡು ದಿಕ್ಕಿಲ್ಲದೇ ಇರುವವರಿಗೆ ಅನುಕೂಲ ಆಗಲಿ. ಅವರು ಎಲ್ಲರಂತೆ ಬದುಕಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ರಾಜ್ಯ ಸರ್ಕಾರ ಕೋವಿಡ್ ಪರಿಹಾರ ವಿತರಣೆಗೆ 400 ಕೋಟಿ ಹಣ ಮೀಸಲಿರಿಸಿದೆ. 11,982 ಬಿಪಿಎಲ್ ಕುಟುಂಬಗಳಿಗೆ ಚೆಕ್ ವಿತರಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪರಿಹಾರ ಯೊಜನೆಯಡಿ 22,879 ಕುಟುಂಬಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 2,601 ಕುಟುಂಬಗಳಿಗೆ ಈವರೆಗೆ 1 ಲಕ್ಷ ರೂ. ನೀಡಿದ್ದೇವೆ. ಕೇಂದ್ರದ ಪರಿಹಾರ ಅಡಿಯಲ್ಲಿ 7,262 ಕುಟುಂಬಕ್ಕೆ 50 ಸಾವಿರ ರೂಪಾಯಿಗಳನ್ನು ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಸಿಂಪಲ್ ಸಿಎಂ ಬೊಮ್ಮಾಯಿ!: ಜನಪ್ರಿಯ ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ತಮ್ಮ ಸರಳತನದಿಂದಲೇ ಜನರಿಗೆ ಅಚ್ಚುಮೆಚ್ಚಿನ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಬೇಕು ಎನ್ನುವುದು ಅವರ ಆಶಯ. ಸರ್ಕಾರದ ಎಲ್ಲ ಯೋಜನೆಗಳು ಜನರಿಗೆ ಸರಿಯಾಗಿ ತಲುಪಬೇಕು. ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂದು ಹಂಬಲಿಸುವ ಸಿಂಪಲ್ ಮುಖ್ಯಮಂತ್ರಿ ಎನ್ನುವುದು ನಮ್ಮ ಹೆಮ್ಮೆ ಎಂದು ಹೇಳಿದರು. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು
ಇತ್ತೀಚೆಗೆ ಸುರಿದ ಮಳೆಯಿಂದ ರಾಜ್ಯಾದ್ಯಂತ ಬೆಳೆ ಹಾನಿ, ಮನೆ ಹಾನಿ ಸಂಭವಿಸಿತ್ತು. ಮೊದಲೆಲ್ಲ ಪರಿಹಾರ ಪಡೆಯಲು ರೈತರು 6-9 ತಿಂಗಳು ಕಾಯಬೇಕಿತ್ತು. ಈಗ ಹಾಗಿಲ್ಲ ಒಂದು ತಿಂಗಳು ಒಳಗಾಗಿ 15.4೦ ಲಕ್ಷ ರೈತರಿಗೆ 1003.5 ಕೋಟಿ ರೂ ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದೇವೆ. ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿದ್ದ ಸಮಸ್ಯೆಯನ್ನು ನಿವಾರಿಸಿದ್ದೇವೆ. ಇಷ್ಟು ಬೇಗ ಪರಿಹಾರ ನೀಡಿದ ದಾಖಲೆಯೇ ನಮ್ಮಲ್ಲಿ ಇರಲಿಲ್ಲ ಎಂದರು.
ಸಾಮಾಜಿಕ ಭದ್ರತೆ ಅಡಿಯಲ್ಲಿ 69.82 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದೇವೆ. ಪ್ರಸಕ್ತ ವರ್ಷದಲ್ಲಿ 4.01 ಲಕ್ಷ ನೂತನ ಫಲಾನುಭವಿಗಳಿದ್ದಾರೆ. ವರ್ಷಾಂತ್ಯದಲ್ಲಿ 7 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡುವ ಗುರಿ ಇದೆ. ಮನೆಬಾಗಿಲಿಗೆ ಮಾಸಾಶನ ಯೋಜನೆಯಡಿಯಲ್ಲಿ ಸುಮಾರು 30 ಸಾವಿರ ಜನರಿಗೆ ಪಿಂಚಣಿ ಮಂಜೂರಾತಿ ಆಗಿದೆ. ನಮ್ಮದು ಜನರ ಸರ್ಕಾರ, ಜನಪರ ಸರ್ಕಾರ, ಜನಸ್ನೇಹಿ ಸರ್ಕಾರ. ಜನವರಿಯಿಂದ ರಾಜ್ಯದ 45 ಲಕ್ಷ ರೈತರಿಗೆ ಪಹಣಿ, ಖಾತೆ, RTC, ನಕ್ಷೆ ಇವುಗಳನ್ನು ಅಧಿಕಾರಿಗಳು ಮನೆಗೇ ತಲುಪಿಸಲು ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.