Tag: covid centre

  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಮನರಂಜನೆಗೆ ಮನಸೋತ ಸೋಂಕಿತರು

    ಕೋವಿಡ್ ಕೇರ್ ಸೆಂಟರ್‌ನಲ್ಲಿ ಮನರಂಜನೆಗೆ ಮನಸೋತ ಸೋಂಕಿತರು

    ಗದಗ: ರಾಜ್ಯದೆಲ್ಲೆಡೆ ಕೋವಿಡ್ ಸೋಂಕಿತರು ಮಾನಸಿಕ ಹಾಗೂ ಭಯದ ಆತಂಕದ ನಡುವೆ ತಮ್ಮ ಉಸಿರು ಚೆಲ್ಲುತ್ತಿದ್ದಾರೆ. ಅವರಲ್ಲಿ ಕೊಂಚ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲೆ ಮುಂಡರಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು.

    ಜಾನಪದ ಕಲಾವಿದ ಗವಿಶಿದ್ದಯ್ಯ ಹಳ್ಳಿಕೇರಿಮಠ ಕಲಾ ಬಳಗದವರು ಸೋಂಕಿತರಿಗೆ ಸಂಗೀತದ ರಸದೌತನ ನೀಡಿದ್ರು. ಜಾನಪದ, ತತ್ವ ಪದ, ಗೀಗೀ ಪದ, ಸಂತ ಶಿಶುನಾಳ ಶರೀಫರ್ ಗೀತೆಗಳನ್ನ ಹಾಡುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಲಾಯಿತು.

    ಜಾನಪದ ಹಾಡುಗಳಿಗೆ ಧ್ವನಿಗೂಡಿಸಿದ ಕೊರೊನಾ ಸೋಂಕಿತರು, ಹಾಡುಗಳ ತಾಳಕ್ಕೆ ಚಪ್ಪಾಳೆ ಹಾಕುವ ಮೂಲಕ ತಮಗೆ ಖಾಯಿಲೆ ಇದೆ ಅನ್ನೋದನ್ನ ಮರೆತು ಸಂಗೀತದಲ್ಲಿ ಮೈಮರೆತಂತಿತ್ತು. ”ಒಳಿತು ಮಾಡು ಮನುಷ್ಯ ನೀ ಇರೋದು ಮೂರು ದಿವಸ. ಉಸಿರು ನಿಂತ ಮ್ಯಾಲೆ ನಿನ್ನ ಹೆಸರು ಹೇಳುತಾರಾ, ಹೆಣಾ ಅನ್ನುತಾರ” ಎಂಬ ಹಾಡಿಗೆ ಕೆಲವು ಸೋಂಕಿತ ತಮ್ಮ ಜೀವನದ ಅನುಭವ ನೆನಪಿಸಿಕೊಂಡು ಕಣ್ಣೀರಿಟ್ಟರು. ಇದನ್ನೂ ಓದಿ: ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಸಿನಿಮಾ ಹಾಡಿಗಿಂತ ಕೆಲವು ಜಾನಪದ ಹಾಡುಗಳನ್ನು ಕೇಳಿ ಮತ್ತೊಮ್ಮೆ ಹಾಡಿ, ಮತ್ತೊಮ್ಮೆ ಹಾಡಿ ಅಂತ ಸೋಂಕಿತರು ದುಂಬಾಲು ಬಿದ್ದರು. ಕೆಲವು ಸೋಂಕಿತರು ಮತ್ತೊಮ್ಮೆ ಕೇಳಲೆಂದು ತಮ್ಮ ಮೊಬೈಲ್‍ನಲ್ಲಿ ಚಿತ್ರಿಕರಿಸಿಕೊಂಡರು. ಇವರಲ್ಲಿರುವ ಸಂಗೀತದ ಉತ್ಸಾಹ ಕಂಡ ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಖುಷಿಪಟ್ಟರು.

    ಸೋಂಕಿರಲ್ಲಿರುವ ಮಾನಸಿಕ ಕಿನ್ನಲೆ, ಕಿಳರುಮೆ ನಿಜಕ್ಕೂ ಕಡಿಮೆ ಆದಂತಿದೆ ಎಂದು ಹೆಮ್ಮೆ ಪಡುವಂತಾಯಿತು. ಈ ಕಾರ್ಯಕ್ರಮದಲ್ಲಿ ಮುಂಡರಗಿ ವೈದ್ಯಕೀಯ ಸಿಬ್ಬಂದಿ, ತಹಶೀಲ್ದಾರ್, ತಾ.ಪಂ ಅಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅನೇಕ ಸಿಬ್ಬಂದಿ ಪಾಲ್ಗೊಂಡಿದ್ದರು.  ಇದನ್ನೂ ಓದಿ: ಕೊರೊನಾ ಕೇರ್ ಸೆಂಟರ್‌ನಲ್ಲಿ ಸಂಗೀತ ರಸಮಂಜರಿ

  • ಕೋವಿಡ್ ಸೆಂಟರ್‌ನಲ್ಲಿರೋ ಸೋಂಕಿತರಿಗೆ ಯೋಗ ಹೇಳಿಕೊಟ್ಟ ಶಾಸಕ ಅಪ್ಪಚ್ಚು ರಂಜನ್

    ಕೋವಿಡ್ ಸೆಂಟರ್‌ನಲ್ಲಿರೋ ಸೋಂಕಿತರಿಗೆ ಯೋಗ ಹೇಳಿಕೊಟ್ಟ ಶಾಸಕ ಅಪ್ಪಚ್ಚು ರಂಜನ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳು ದಿನ ಕಳೆದಂತೆ ಕೊಂಚ ಇಳಿಮುಖಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಸೋಂಕಿತರ ಯೋಗಕ್ಷೇಮ ವಿಚಾರಿಸಲು ತೆರಳಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಮಡಿಕೇರಿ ಸಮೀಪ ಇರುವ ನವೋದಯದ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಯೋಗ ಹೇಳಿಕೊಟ್ಟರು. ಇತ್ತೀಚಿನ ದಿನಗಳಲ್ಲಿ ಸೋಂಕಿತರು ಉಸಿರಾಟದ ತೊಂದರೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದರು.

    ಅಲ್ಲದೆ ಕೋವಿಡ್ 19 ಮಹಾಮಾರಿ ಇಂದಿಗೆ-ನಾಳೆಗೆ ತೊಲಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು ಇತರೆ ತೊಂದರೆ ಉಂಟಾದಲ್ಲಿ ತಕ್ಷಣವೇ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಪರೀಕ್ಷಿಕೊಳ್ಳಬೇಕು. ಆದರೆ ಆತಂಕಕ್ಕೆ ತುತ್ತಾಗಬಾರದು ಎಂದರು.

    ಪ್ರತಿಯೊಬ್ಬರೂ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ಕೋವಿಡ್ 19 ದೂರ ಇರಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರ ವಹಿಸುವುದು ಅಗತ್ಯ, ಸೋಂಕಿತರು ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಔಷಧಿ ಪಡೆಯಬೇಕು. ಧೈರ್ಯವಾಗಿರಬೇಕು, ವಾಕ್ (ನಡಿಗೆ) ಮತ್ತು ವ್ಯಾಯಾಮ ಮಾಡಬೇಕು, ಬಿಸಿಯಾದ ಆಹಾರ ಸೇವಿಸಬೇಕು. ಬಿಸಿ ನೀರು ಕುಡಿಯಬೇಕು ಎಂದು ಶಾಸಕರು ಸಲಹೆ ಮಾಡಿದರು.

    ಬಳಿಕ ನವೋದಯ ಶಾಲೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸರಸ್ವತಿ ಡಿಇಡಿ ಕಾಲೇಜಿನಿಂದ ಪೂರೈಕೆಯಾಗುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು, ಇಲ್ಲಿನ ಸ್ವಚ್ಚತೆ, ಅಡುಗೆ ತಯಾರಿ ಮಾಡುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ ರೇಣುಕಾಚಾರ್ಯ

    ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ ರೇಣುಕಾಚಾರ್ಯ

    ದಾವಣಗೆರೆ: ಕೊರೊನಾ ಸೋಂಕು ತಗುಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಗಣಪತಿ ಹಬ್ಬ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಇಂದು ಕೋವಿಡ್ ಕೇಸ್ ಸೆಂಟರ್ ನಲ್ಲಿ ಗಣಪತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.

    ದಾವಣಗೆರೆಯ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ 150ಕ್ಕೂ ಹೆಚ್ಚು ಪಾಸಿಟಿವ್ ಬಂದಿರುವ ಜನರಿದ್ದು, ರೇಣುಕಾಚಾರ್ಯ ಕುಟುಂಬದ ಹಾಗೂ ಆಪ್ತರ ಜೊತೆ ಸೇರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವವರಿಗೆ ಹೋಳಿಗೆ ಊಟ ನೀಡಿದ್ದಾರೆ.

    ಸ್ವತಃ ಶಾಸಕರೇ ತೆರಳಿ ಹೋಳಿಗೆ ಮಾಡಿ ಅಲ್ಲಿರುವ ಸಿಬ್ಬಂದಿಗೆ ಹಾಗೂ ಸೋಂಕಿತರಿಗೆ ಬಡಿಸಿದ್ದಾರೆ. ಅಲ್ಲದೆ ಅಲ್ಲಿರುವ ಸೋಂಕಿತರಿಗೆ ಧೈರ್ಯ ತುಂಬಿ ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದರು. ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡಿದ್ದ ಹಿನ್ನೆಲೆಯಲ್ಲಿ ಅಂತಹ ಮನೆಗಳಿಗೆ ರೇಷನ್ ಕಿಟ್ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಎಂದು ಗ್ರಾಮಸ್ಥರಿಗೆ ಪ್ರತಿನಿತ್ಯ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

  • ಗದಗ ಕೋವಿಡ್ ಕೇರ್ ಕೇಂದ್ರದಲ್ಲಿ ಡೋಂಟ್ ಕೇರ್

    ಗದಗ ಕೋವಿಡ್ ಕೇರ್ ಕೇಂದ್ರದಲ್ಲಿ ಡೋಂಟ್ ಕೇರ್

    ಗದಗ: ಕೋವಿಡ್ ಕೇರ್ ಕೇಂದ್ರದಲ್ಲಿನ ಅವ್ಯವಸ್ಥೆಯಿಂದ ಸೋಂಕಿತರು ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆ ನರಗುಂದ ತಾಲೂಕಿನ ಬೆನಕೊಪ್ಪ ಕೋವಿಡ್ ಕೇಂದ್ರದಲ್ಲಿ ಕಂಡುಬಂದಿದೆ.

    ಜಿಲ್ಲೆಯ ಅನೇಕ ತಾಲೂಕು ಕೋವಿಡ್ ಕೇಂದ್ರಗಳು ಅವ್ಯವಸ್ಥೆ ಆಗರವಾಗಿದ್ದು, ಸೋಂಕಿತರನ್ನು ಸರ್ಕಾರ ಅಮಾನವೀಯವಾಗಿ ನೋಡಿಕೊಳ್ಳುತ್ತಿಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರಿಯಾದ ಊಟ, ಉಪಹಾರ, ನೀರು, ಬೆಡ್ ವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ ಕಾರಣ ಸೋಂಕಿತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ಬಗ್ಗೆ ನರಗುಂದ ತಹಶೀಲ್ದಾರ್ ಗಮನಕ್ಕೆ ತಂದ್ರೂ ಡೋಂಟ್ ಕೇರ್ ಅಂತಿದ್ದಾರೆ ಎಂಬ ಆರೋಪ ಸೋಂಕಿತರದ್ದಾಗಿದೆ. ಬಾತ್ ರೂಮ್, ಟಾಯ್ಲೆಟ್ ಗೆ ಬಾಗಿಲುಗಳೇ ಇಲ್ಲ. ಮಹಿಳೆಯರ ಪರಸ್ಥಿತಿಯಂತೂ ಇಲ್ಲಿ ಕೆಳತಿರದು. ಕೇರ್ ಇಲ್ಲದ ಕೇರ್ ಸೆಂಟರ್ ಗಳ ಅವ್ಯವಸ್ಥೆಯಿಂದ ಸೋಂಕಿತರು ಗುಣಮುಖ ಆಗೋದಾದ್ರೂ ಹೇಗೆ ಅಂತ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದರು.

    ನರಗುಂದ ತಾಲೂಕಿನ ಬೆನಕೊಪ್ಪ ಕೋವಿಡ್ ಕೇರ್ ಕೇಂದ್ರದ ಅವ್ಯವಸ್ಥೆ ವಿಡಿಯೋ ಮಾಡಿ ಸಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.