Tag: covid center

  • ಮಂಡ್ಯ ಕೋವಿಡ್ ಕೇರ್ ಸೆಂಟರ್ ವಿಚಾರಕ್ಕೆ ಶಾಸಕ, ಸಚಿವರ ಮಧ್ಯೆ ಜಟಾಪಟಿ

    ಮಂಡ್ಯ ಕೋವಿಡ್ ಕೇರ್ ಸೆಂಟರ್ ವಿಚಾರಕ್ಕೆ ಶಾಸಕ, ಸಚಿವರ ಮಧ್ಯೆ ಜಟಾಪಟಿ

    ಮಂಡ್ಯ: ಕೋವಿಡ್ ಕೇರ್ ಸೆಂಟರ್ ನಲ್ಲಿ ಮೂಲಭೂತ ಸೌಕರ್ಯದ ವಿಚಾರಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಸಚಿವ ನಾರಾಯಣಗೌಡ ನಡುವೆ ಜಟಾಪಟಿ ನಡೆದಿದೆ.

    ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಕೊರೊನಾ ವಿಚಾರಕ್ಕೆ ಸಂಬಂಧಿಸಿ ಸಚಿವರ ವಿರುದ್ಧ ವಾಗ್ದಾಳಿ ನಡಸಿದ್ದರು. ಇದಕ್ಕೆ ತಿರಗೇಟು ನೀಡಿದ ಸಚಿವ ನಾರಾಯಣಗೌಡ ಅವರು, ಒಬ್ಬ ಶಾಸಕನಾಗಿ ಏನೇನು ಕೆಲಸ ಮಾಡಬೇಕು ಎಂದು ಟ್ರೈನಿಂಗ್ ತೆಗೆದುಕೊಳ್ಳಲಿ. ನಾನು 3 ಬಾರಿ ಗೆದ್ದಿದ್ದೀನಿ ಎಂದರೆ 15 ವರ್ಷದ ಅನುಭವ ಇದೆ. ಅನುಭವನೂ ಕೌಂಟ್ ಆಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ಹಣ ಲೂಟಿ ಮಾಡಿದರೇ ಅದಕ್ಕೆ ಸಾಕ್ಷಿ ಕೊಡಿ. ನನ್ನ ಬಗ್ಗೆ ಟೀಕೆ ಮಾಡಿದರೆ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಬೇಕಾಗುತ್ತದೆ. ನನ್ನ ಮೇಲೆ ಕೊಚ್ಚೆ ಹಾರಿಸಿದರೆ ನಿಮ್ಮ ಮೇಲಿನ ಆರೋಪದ ಬಗ್ಗೆ ಮಾತಾಡುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

    ನಿನ್ನೆ ಸುದ್ದಿಗಾರರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನಾರಾಯಣಗೌರ ಮನೆಯಲ್ಲಿ 50 ಮಂದಿ ಒಂದೇ ಬಾತ್ ರೂಂ ಬಳಸುತ್ತಾರಾ?. ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ವೈಫಲ್ಯ ಎದ್ದು ಕಾಣುತ್ತಿದೆ. ಸಚಿವ ನಾರಾಯಣ ಗೌಡರು 3 ಬಾರಿ ಶಾಸಕರಾಗಿದ್ದಾರೆ. ಆದರೆ ಅರ್ಹತೆ ಮೇಲೆ ಗೆಲ್ಲುವುದು ಬೇರೆ, ಅದೃಷ್ಟದ ಮೇಲೆ ರಾಜಕಾರಣ ಮಾಡೋದೇ ಬೇರೆಯಾಗಿದೆ. ಅವರು ಮೇಲ್ಮನೆಯಲ್ಲಿ ಸಚಿವರ ಯೋಗ್ಯತೆ ಹರಾಜು ಹಾಕಿದ್ದಾರೆ. ನಾರಾಯಣಗೌಡ ಮಂಡ್ಯ ಜಿಲ್ಲೆಯ ಮರ್ಯಾದೆ ತೆಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

  • ಲಾಕ್‍ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತೆ : ಮಾಧುಸ್ವಾಮಿ

    ಲಾಕ್‍ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತೆ : ಮಾಧುಸ್ವಾಮಿ

    ಚಾಮರಾಜನಗರ: ಲಾಕ್‍ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

    ಏತ ನೀರಾವರಿ ಮೂಲಕ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಕುರಿತು ಚಾಮರಾಜನಗರದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

    ಕೊರೊನಾ ನಿಯಂತ್ರಣಕ್ಕೆ ನೈಟ್ ಕಫ್ರ್ಯೂ ಮಾಡಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮ ಬೀರುತ್ತಿದೆ. ಜೀವನ, ಜೀವ ಎರಡು ನೋಡಬೇಕಿದೆ. ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು, ಲಾಕ್ ಡೌನ್ ಮಾಡಿದ್ರೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ. ಕಳೆದ ಬಾರಿ ಲಾಕ್ ಡೌನ್ ಮಾಡಿ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಸುಬುದಾರರಿಗೆ ಕೆಲಸ ನಿಲ್ಲಿಸಿ ಅಂದ್ರೆ ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಸಿಎಂ ಹಣಕಾಸು ಸಚಿವಾಲಯದ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕು. ಲಾಕ್ ಡೌನ್ ಮಾಡಿ ಎಂದು ಹೇಳುತ್ತಾರೆ. ಆದರೆ ಇಂಡಸ್ಟ್ರಿ, ಆಟೋ ಡ್ರೈವರ್ ಕೆಲಸ ನಿಲ್ಲಿಸಿದ್ರೆ ತುಂಬಾ ತೊಂದರೆಯಾಗುತ್ತೆ. ಇದೆಲ್ಲಾ ಯೋಚಿಸಿ ನಿರ್ಧಾರ ಮಾಡಬೇಕಿದೆ ಎಂದು ಲಾಕ್‍ಡೌನ್ ನಿರ್ಧಾರವನ್ನು ಸಚಿವ ಮಾಧುಸ್ವಾಮಿ ತಳ್ಳಿ ಹಾಕಿದ್ದಾರೆ.

    ರಾಜ್ಯದಲ್ಲಿ ಬೆಡ್ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಇರುವ 50 ಬೆಡ್ ಕೊಟ್ಟಿದ್ದೇವೆ. ಜಿಲ್ಲಾ ಮಟ್ಟದಲ್ಲಿ 200 ರಿಂದ 400 ಬೆಡ್ ಇದೆ. ಎಲ್ಲಾ ತಾಲೂಕುಗಳಲ್ಲಿ 5 ರಿಂದ 6 ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಮಕ್ಕಳು ಈ ಬಾರಿ ಹಾಸ್ಟೆಲ್‍ನಲ್ಲಿದ್ದಾರೆ. ಅವರ ಪರೀಕ್ಷೆ ಯಾವಾಗ ನಡೆಯುತ್ತದೆ ಎಂದು ಗೊತ್ತಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಕೋವಿಡ್ ಸೆಂಟರ್, ಎಕ್ಸ್ಟ್ರಾ ಕೋವಿಡ್ ಸೆಂಟರ್ ಮಾಡಲೂ ಈ ಬಾರಿ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ಕೊಡಲಾಗಿದೆ. ಕಳೆದ ಬಾರಿ ಹಾಸ್ಟೆಲ್ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡಿದ್ದೆವು. ಮೇ-ಜೂನ್ ನಲ್ಲಿ ಪರೀಕ್ಷೆ ಮುಗಿದರೆ ಹಾಸ್ಟೆಲ್ ಸುಪರ್ದಿಗೆ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡುತ್ತೇವೆ ಎಂದರು.

    ಇನ್ನು ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಬೆಂಗಳೂರಲ್ಲಿ ಕಷ್ಟವಾಗಿತ್ತು. ನಿನ್ನೆ, ಮೊನ್ನೆಯಿಂದ ಪ್ರೈವೆಟ್ ಹಾಸ್ಪಿಟಲ್ ಈ ವಿಚಾರವಾಗಿ ಸಹಕರಿಸಿರಲಿಲ್ಲ. ಕೊರೋನಾ ರೋಗಿಗಳಿಗೆ 50% ಬೆಡ್ ಕೊಡಲೇಬೇಕು ಎಂದು ತಿಳಿಸಿದ್ದೇವೆ. ಬೆಡ್ ಕೊಡುವ ವಿಚಾರವನ್ನು ಕಾನೂನು ಬದ್ಧವಾಗಿ ಮಾಡುತ್ತೇವೆ ಎಂದು ಹೇಳಿದರು.

  • ಚಾಮರಾಜನಗರದಲ್ಲಿ ಮತ್ತೊಂದು ಕೋವಿಡ್ ಕೇರ್ ಸೆಂಟರ್: ಕೊರೊನಾ ವಾರಿಯರ್ಸ್‍ಗೆ 50 ಬೆಡ್ ಮೀಸಲು

    ಚಾಮರಾಜನಗರದಲ್ಲಿ ಮತ್ತೊಂದು ಕೋವಿಡ್ ಕೇರ್ ಸೆಂಟರ್: ಕೊರೊನಾ ವಾರಿಯರ್ಸ್‍ಗೆ 50 ಬೆಡ್ ಮೀಸಲು

    – ಕೋವಿಡ್ ಕೇಂದ್ರಗಳಲ್ಲಿ ಟಿವಿ, ಮಕ್ಕಳಿಗೆ ಆಟಿಕೆ ವ್ಯವಸ್ಥೆ

    ಚಾಮರಾಜನಗರ: ಜಿಲ್ಲೆಯಲ್ಲಿ ಇನ್ನೊಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500 ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ದೆತೆ ನಡೆಸಿದೆ.

    ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಹಾಗೂ ಚಾಮರಾಜನಗರ ಪಟ್ಟಣದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರಿದ್ದಾರೆ. ಮುಂದಿನ ಒಂದು ವಾರದಲ್ಲಿ ಕರೊನಾ ಪ್ರಕರಣಗಳು 500 ಗಡಿ ದಾಟಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 250 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಕೇಂದ್ರವನ್ನು ಸಜ್ಜುಗೊಳಿಸುತ್ತಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಲ್ಲಿ ಮೊದಲು ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿಕೊಂಡು, ಆರೋಗ್ಯ ಸುಧಾರಣೆಯಾಗಿರುವ ಹಾಗೂ ರೋಗಲಕ್ಷಣಗಳಿಲ್ಲದವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಕೊರೊನಾ ವಿರುದ್ದ ಹೋರಾಡುತ್ತಿರುವ 27 ಕೊರೊನಾ ವಾರಿಯರ್ಸ್ ಗಳಿಗೆ ಸೋಂಕು ಧೃಡ ಪಟ್ಟಿದೆ. ಕರೊನಾ ವಾರಿಯರ್ಸ್ ಗೆ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಬ್ಲಾಕ್ ನಲ್ಲಿ 150 ಹಾಸಿಗೆಗಳು ಹಾಗೂ ಸಿವಿಲ್ ಬ್ಲಾಕ್ ನಲ್ಲಿ 100 ಹಾಸಿಗೆಗಳನ್ನ ಮೀಸಲಿಡಲಾಗಿದೆ.

    ಕೋವಿಡ್ ಕೇರ್ ಸೆಂಟರ್ ನಲ್ಲಿ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಮರಂಜನೆಗಾಗಿ ದೊಡ್ಡ ಟಿವಿಗಳನ್ನು ಅಳವಡಿಸಿ ಮಕ್ಕಳಿಗೆ ಬೇಸರವಾಗದಂತೆ ಕಾಲಕಳೆಯಲು ಆಟಿಕೆಗಳನ್ನ ನೀಡಿ, ದಿನಪತ್ರಿಕೆ ಇಡುವ ವ್ಯವಸ್ಥೆ ಮಾಡಲಾಗಿದೆ. ಕರೊನಾ ಸೋಂಕಿತರಿಗೆ ಉತ್ತಮ ಗುಣ ಮಟ್ಟ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ನೀಡಲು ಕಟ್ಟು ನೀಟ್ಟಿನ ಸೂಚನೆ ನೀಡಲಾಗಿದೆ.

    ಜಿಲ್ಲೆಯಲ್ಲಿ ಒಟ್ಟು 346 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, 143 ಕೊರೊನಾ ಸಕ್ರೀಯ ಪ್ರಕರಣಗಳಿದ್ದು, 199 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ್ರೆ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

    ಕೋವಿಡ್-19 ಚಿಕಿತ್ಸೆಗೆ ಯಾವುದೇ ಹಣದ ಕೊರತೆ ಇಲ್ಲ. ಸರ್ಕಾರ 6.15 ಕೋಟಿ ರೂಪಾಯಿ ವೆಚ್ಚಕ್ಕೆ ಅನುಮೋದನೆ ನೀಡಿದೆ. ಪ್ರಸ್ತುತ ಈ ಹಣವನ್ನು ಬಳಸಲಾಗುತ್ತಿದೆ. ಎಸ್.ಡಿ.ಆರ್.ಎಫ್ ಫಂಡ್ ನಲ್ಲಿ 11 ಕೋಟಿ ರೂಪಾಯಿ ಇದೆ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ 3 ಕೋಟಿ ರೂಪಾಯಿ ಇದೆ. ಕೊರೊನಾ ನಿರ್ವಹಣೆಯನ್ನು ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಲಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

  • ಕೊಡಗಿನ ಗಡಿದಾಟಿದ್ರೆ ಕೋವಿಡ್ ಸೆಂಟರೇ ಗತಿ: ಡಿಸಿ ವಾರ್ನಿಂಗ್

    ಕೊಡಗಿನ ಗಡಿದಾಟಿದ್ರೆ ಕೋವಿಡ್ ಸೆಂಟರೇ ಗತಿ: ಡಿಸಿ ವಾರ್ನಿಂಗ್

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಕೊಡಗು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಿರುವಾಗ ಯಾರಾದ್ರೂ ನಿಯಮವನ್ನು ಮೀರಿ ಕರ್ನಾಟಕದ ಕೊಡಗಿಗೆ ಅಥವಾ ಕೊಡಗಿನಿಂದ ಕೇರಳಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಪರಿಶೀಲನೆಯನ್ನೂ ಮಾಡದೇ 14 ದಿನಗಳ ಕಾಲ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.

    ಗಡಿ ದಾಟಿ ಬಂದವರು ವಿದೇಶದಿಂದ ವಾಪಸ್ ಆಗಿರುವ ಇತಿಹಾಸ ಇಲ್ಲದಿದ್ದರೂ ನೇರವಾಗಿ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ಕೇರಳದಿಂದ ಬಂದ ಇಬ್ಬರನ್ನು ಕೊಡಗಿನಲ್ಲಿರುವ ಕೋವಿಡ್ ಸೆಂಟರಿಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ವಿದೇಶದಿಂದ ಬಂದು ಹೋಂ ಕ್ವಾರಂಟೈನ್‍ನಲ್ಲಿ ಇರುವವರು ನಿಯಮ ಮೀರಿ ಹೊರಗೆ ಓಡಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗೆ ಶಿಕ್ಷೆಗೆ ಒಳಗಾದವರ ಪಾಸ್‍ಪೋರ್ಟ್ ಅಥವಾ ವೀಸಾಗಳಿಗೆ ಸಮಸ್ಯೆಯಾಗಲಿದ್ದು, ನಂತರ ಪುನಃ ನೀವು ವಿದೇಶಕ್ಕೆ ತೆರಳು ಸಮಸ್ಯೆಯಾಗುತ್ತೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿದ್ದಾರೆ.