Tag: Covid Cases

  • ಮನೆಯಿಂದ ಹೊರ ಬರುವಂತಿಲ್ಲ – ಮತ್ತೆ ಚೀನಾದಲ್ಲಿ ಕಠಿಣ ಲಾಕ್‍ಡೌನ್ ಜಾರಿ

    ಮನೆಯಿಂದ ಹೊರ ಬರುವಂತಿಲ್ಲ – ಮತ್ತೆ ಚೀನಾದಲ್ಲಿ ಕಠಿಣ ಲಾಕ್‍ಡೌನ್ ಜಾರಿ

    ಬೀಜಿಂಗ್: ಚೀನಾದಲ್ಲಿ ಕೊರೊನಾ ಹಾವಳಿ ಮತ್ತೆ ಮುಂದುವರಿದಿದೆ. ಪರಿಣಾಮವಾಗಿ 40 ಲಕ್ಷ ಜನರಿರುವ ನಗರಕ್ಕೆ ಲಾಕ್‍ಡೌನ್ ವಿಧಿಸಿ ಚೀನಾ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಗಡೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    2019ರಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಹುಬೆ ಗಡಿಭಾಗಗಳನ್ನು ಬಂದ್ ಮಾಡಿ ನಿಯಂತ್ರಣ ಹೇರಲಾಗಿತ್ತು. ನಂತರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿತ್ತು.

    CHINA CORONA

    ಸೋಂಕು ಪ್ರಕರಣಗಳು ಕ್ಷೀಣಿಸುತ್ತಿರುವಂತೆ ಇಡೀ ವಿಶ್ವ ವ್ಯಾಪಾರ-ವಹಿವಾಟು, ಸಾರಿಗೆ ಎಲ್ಲ ಮಾದರಿಯ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಕೊರೊನಾ ವೈರಸ್‍ನೊಂದಿಗೆಯೇ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಯೋಚಿಸುತ್ತಿದೆ. ಇದೇ ಹೊತ್ತಿನಲ್ಲಿ ಶೂನ್ಯ-ಕೋವಿಡ್ ಸ್ಥಿತಿಗೆ ದೇಶವನ್ನು ಕೊಂಡೊಯ್ಯಬೇಕು ಎಂದು ಚೀನಾ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟೇ ಪ್ರಕರಣಗಳಿರುವ ಪ್ರದೇಶಗಳಲ್ಲೂ ಕಠಿಣ ಲಾಕ್‍ಡೌನ್ ವಿಧಿಸಲು ಚೀನಾ ಮುಂದಾಗಿದೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ದೇಶದ ವಾಯುವ್ಯದಲ್ಲಿರುವ ಗನ್ಸು ಪ್ರಾಂತ್ಯದ ರಾಜಧಾನಿ ಲಾನ್‍ಝೌನಲ್ಲಿ 29 ಹೊಸ ಸೋಂಕು ಪ್ರಕರಣಗಳು ವರದಿಯಾದ ಪರಿಣಾಮ ಹೊಸ ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ. ಅ.17ರಿಂದ ಈವರೆಗೆ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ ಪ್ರಕರಣಗಳ ಸಂಖ್ಯೆ 198ಕ್ಕೆ ಏರಿಕೆಯಾಗಿದೆ. ಅದರಲ್ಲಿ 39 ಪ್ರಕರಣಗಳು ಲಾನ್‍ಝೌನಲ್ಲಿ ಪತ್ತೆಯಾಗಿವೆ.

    CORONA-VIRUS.

    ಸ್ಥಳೀಯ ನಿವಾಸಿಗಳು ಮನೆಗಳಲ್ಲೇ ಇರಬೇಕು. ಹೊರಗಡೆ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ತುರ್ತು ಹಾಗೂ ವೈದ್ಯಕೀಯ ಕಾರ್ಯಗಳಿಗಷ್ಟೇ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ- ವಿವಿಧ ಚಟುವಟಿಕೆ ಸ್ಥಗಿತ, ಲಾಕ್‍ಡೌನ್‍ಗೆ ಚಿಂತನೆ

    ನಗರದಲ್ಲಿ ಬಸ್ ಹಾಗೂ ಟ್ಯಾಕ್ಸಿ ಸಂಚಾರ ಸ್ಥಗಿತಗೊಳಿಸಲಾಗಿದೆ. 70 ರೈಲುಗಳು ಸಂಚಾರ ನಿಲ್ಲಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    CHINA TRAIN

    ಬೀಜಿಂಗ್‍ನ ಡ್ಯಾಕ್ಸಿಂಗ್ ಏರ್‍ಪೋರ್ಟ್‍ನಿಂದ ಲಾನ್‍ಝೌಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ದಕ್ಷಿಣ ಏರ್‍ಲೈನ್ಸ್ ಪ್ರತಿನಿಧಿ ತಿಳಿಸಿದ್ದಾರೆ.

  • ರಾಜ್ಯದಲ್ಲಿಂದು 310 ಕೇಸ್, 6 ಸಾವು

    ರಾಜ್ಯದಲ್ಲಿಂದು 310 ಕೇಸ್, 6 ಸಾವು

    – ಪಾಸಿಟಿವಿಟಿ ರೇಟ್ 0.26%ಕ್ಕೆ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು ಇಂದು ಐನೂರು ಒಳಗಡೆ ಕೇಸ್ ದಾಖಲಾಗಿದೆ.

    ಇಂದು ಕೂಡ ರಾಜ್ಯದಲ್ಲಿ 310 ಕೋವಿಡ್ ಕೇಸ್ ದಾಖಲಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ಇನ್ನೂ ಪಾಸಿಟಿವಿಟಿ ರೇಟ್ 0.26% ಗೆ ಇಳಿಕೆಯಾಗಿದೆ. 100 ಜನರಿಗೆ ಟೆಸ್ಟ್ ಮಾಡಿದರೆ ಒಬ್ಬರಿಗೆ ಪಾಸಿಟಿವ್ ಬರುತ್ತಿದೆ.

    ಬೆಂಗಳೂರಿನಲ್ಲಿ ಕೂಡ ಕೇಸ್ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 148 ಕೇಸ್ ದಾಖಲಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಡೆತ್ ಕಂಟ್ರೋಲ್ ಗೆ ಬಂದಿದೆ. ಜೊತೆಗೆ ರಾಜ್ಯದಲ್ಲಿ ಇಂದು 347 ಜನ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 82 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಟಿಪ್ಪು ಇಲ್ಲದ ಮೈಸೂರು ದಸರಾ, ಸರ್ಕಾರದಿಂದ ಕೋಮುವಾದಿ ನಡೆ – ಪಿಎಫ್‍ಐ ಕಿಡಿ

    ರಾಜ್ಯದಲ್ಲಿ 9,578 ಸಕ್ರೀಯ ಪ್ರಕರಣಗಳಿವೆ. ಇಂದು ಕೂಡ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಆಗಿದೆ. 1,14,947 ಕೋವಿಡ್ ಟೆಸ್ಟ್ ಆಗಿದ್ದು, 310 ಪಾಸಿಟಿವ್ ಆಗಿರೋದು ಕೊರೊನಾ ಕಂಟ್ರೋಲ್ ನಲ್ಲಿ ಇರೋದು ತಿಳಿಯುತ್ತದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 148, ಬೀದರ್ 3, ಚಾಮರಾಜನಗರ 4, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 5, ಚಿತ್ರದುರ್ಗ 2, ದಕ್ಷಿಣ ಕನ್ನಡ 40, ದಾವಣಗೆರೆ 3, ಧಾರವಾಡ 1, ಹಾಸನ 15, ಹಾವೇರಿ 2, ಕೊಡಗು 8, ಕೋಲಾರ 1, ಮಂಡ್ಯ 5, ಮೈಸೂರು 27, ರಾಯಚೂರು 1, ಶಿವಮೊಗ್ಗ 4, ತುಮಕೂರು 8, ಉಡುಪಿ 7, ಉತ್ತರ ಕನ್ನಡ 10, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ರಾಮನಗರ, ಗದಗ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲ್ಲಿದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಸುನೀಲ್ ಕುಮಾರ್