Tag: covid-19 Vaccine

  • ಮೂಗಿನ ಮೂಲಕ ನೀಡುವ ಭಾರತದ ಮೊದಲ ಕೋವಿಡ್-19 ಲಸಿಕೆಗೆ ಡಿಸಿಜಿಐ ಅನುಮೋದನೆ

    ಮೂಗಿನ ಮೂಲಕ ನೀಡುವ ಭಾರತದ ಮೊದಲ ಕೋವಿಡ್-19 ಲಸಿಕೆಗೆ ಡಿಸಿಜಿಐ ಅನುಮೋದನೆ

    ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ನೀಡುವ ಕೋವಿಡ್‌ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧಿ ನಿಯಂತ್ರಕ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ.

    ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಮೂಗಿನ ಮೂಲಕ ನೀಡುವ ಮೊದಲ ಕೋವಿಡ್-19 ಲಸಿಕೆ ಇದಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು, ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಇದು ದೊಡ್ಡ ಉತ್ತೇಜನ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮನೆಗೆ ನೀರು ನುಗ್ಗಿ ನಷ್ಟವಾದರೆ ಅದಕ್ಕೆ ಕಾರ್ಪೊರೇಷನ್ ಹೊಣೆ – 9 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಸೂಚನೆ

    COVID

    ಈ ಹೆಜ್ಜೆಯು ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಜ್ಞಾನ ಮತ್ತು ಮಾನವ ಸಂಪನ್ಮೂಲಗಳನ್ನು COVID-19 ವಿರುದ್ಧದ ಹೋರಾಟದಲ್ಲಿ ಬಳಸಿಕೊಂಡಿದೆ ಎಂದು ಮಾಂಡವಿಯಾ ಅವರು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

    ವಿಜ್ಞಾನ ಆಧಾರಿತ ವಿಧಾನ ಮತ್ತು ಸಬ್‌ಕಾ ಪ್ರಯಾಸ್‌ ಘೋಷಣೆಗೆ ಬದ್ಧರಾಗಿ ನಾವು ಕೋವಿಡ್ -19 ಅನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಆನೆಗಳ ರೌಂಡ್ಸ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

    ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

    ನವದೆಹಲಿ: ಕೋವಿಡ್-19 ಎರಡನೇ ಲಸಿಕೆ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು 9 ರಿಂದ 6 ತಿಂಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ.

    corona

    ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹ ಸ್ಥಾಯಿ ತಾಂತ್ರಿಕ ಉಪ ಸಮಿತಿ (ಎನ್‍ಟಿಜಿಐ) ಕೋವಿಡ್-19 ಎರಡನೇ ಲಸಿಕೆ ಮತ್ತು ಬೂಸ್ಟರ್ ಡೋಸ್‍ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಕಳೆದ ತಿಂಗಳು ಶಿಫಾರಸ್ಸು ಮಾಡಿತ್ತು. ಬಳಿಕ ಇದೀಗ ಎನ್‍ಟಿಜಿಐ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ

    ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅವದಿಯನ್ನು 9 ರಿಂದ 6 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಬಹುದು ಮತ್ತು ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಚಾರ ಮಾಡಬಹುದು. 18-59 ವರ್ಷ ವಯಸ್ಸಿನ ಎಲ್ಲಾ ಫಲಾನುಭವಿಗಳು ಎರಡನೇ ಡೋಸ್ ಪಡೆದ ಬಳಿಕ ಬೂಸ್ಟರ್ ಡೋಸ್ ಆರು ತಿಂಗಳು ಅಥವಾ 26 ವಾರ ಕಳೆದ ನಂತರ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಪಡೆಯಲು ಅರ್ಹರು ಎಂದರು. ಇದನ್ನೂ ಓದಿ: ದೇವರು ಒಂದು ಅವಕಾಶ ಕೊಟ್ಟಿದ್ದಾನೆ- ರಾಜ್ಯಸಭೆ ನಾಮನಿರ್ದೇಶನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆ ಸಂತಸ

    ಇದೀಗ 18-59 ವರ್ಷದೊಳಗಿನವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದಾಗಿದೆ. ಖಾಸಗಿ ಲಸಿಕಾ ಕೇಂದ್ರಗಳಲ್ಲಿ ನಿಗದಿತ ಹಣವನ್ನು ಪಾವತಿಸಿ ಲಸಿಕೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಂದು ವರ್ಷದಲ್ಲಿ 11 ಬಾರಿ ಕೊರೊನಾ ಲಸಿಕೆ ಪಡೆದ ವೃದ್ಧನ ವಿರುದ್ಧ FIR

    ಒಂದು ವರ್ಷದಲ್ಲಿ 11 ಬಾರಿ ಕೊರೊನಾ ಲಸಿಕೆ ಪಡೆದ ವೃದ್ಧನ ವಿರುದ್ಧ FIR

    ಪಾಟ್ನಾ: ಕಳೆದ ಒಂದು ವರ್ಷದಲ್ಲಿ 11 ಬಾರಿ ಕೋವಿಡ್-19 ಲಸಿಕೆಯನ್ನು ಪಡೆದುಕೊಂಡ ವೃದ್ಧನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಬಿಹಾರದ ಮಾಧೇಪುರ ಜಿಲ್ಲೆಯ ನಿವಾಸಿ ಬ್ರಹ್ಮದೇವ್ ಮಂಡಲ್ ವಿರುದ್ಧ ಪುರೈನಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅಸಹಕಾರ), 419 (ವ್ಯಕ್ತಿತ್ವದಿಂದ ವಂಚನೆ), ಮತ್ತು 420 (ವಂಚನೆ) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಈ ವಾರದ ಆರಂಭದಲ್ಲಿ ಹನ್ನೆರಡನೇ ಬಾರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಬ್ರಹ್ಮದೇವ್ ಮಂಡಲ್ ಅವರು ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದಿದ್ದಾರೆ. ನಂತರ ತನಿಖೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡ ಬ್ರಹ್ಮದೇವ್ ಮಂಡಲ್ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಬಳಸಿ 11 ಬಾರಿ ಲಸಿಕೆ ಪಡೆದುಕೊಂಡಿರುವ ವಿಚಾರ ಬಹಿರಂಗಪಡಿಸಿದ್ದಾರೆ. ಅಲ್ಲದೇ 11 ಬಾರಿ ಲಸಿಕೆ ಸ್ವೀಕರಿಸಿದ್ದರಿಂದ ತಾನು ಹೊಂದಿದ್ದ ಕಾಯಿಲೆಗಳಿಂದ ಗುಣಮುಖರಾಗಿರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

    ಬ್ರಹ್ಮದೇವ್ ಮಂಡಲ್ ಅವರು ಅಂಚೆ ಇಲಾಖೆಯ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಕಳೆದ ಒಂದು ವರ್ಷದಲ್ಲಿ 11 ಬಾರಿ ಕೋವಿಡ್ -19 ಲಸಿಕೆಯನ್ನು ತೆಗೆದುಕೊಂಡ ರೀತಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಬ್ರಹ್ಮದೇವ್ ಅವರನ್ನು ಬಂಧಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಆದರೆ ವಯಸ್ಸಾಗಿರುವ ಕಾರಣ ಬ್ರಹ್ಮದೇವ್ ಜಾಮೀನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ವಾಮಾಚಾರ ನಡೆಸಿ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿಗಾಗಿ ಶೋಧ – ಇಬ್ಬರ ಬಂಧನ

  • ಲಸಿಕೆ ಹಾಕಿಸಿಕೊಳ್ಳದೇ ಹೊರಗಡೆ ಓಡಾಡಿದ್ರೆ ಅರೆಸ್ಟ್‌!

    ಲಸಿಕೆ ಹಾಕಿಸಿಕೊಳ್ಳದೇ ಹೊರಗಡೆ ಓಡಾಡಿದ್ರೆ ಅರೆಸ್ಟ್‌!

    ಮನಿಲಾ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ತಡೆಗಟ್ಟಲು ವಿಶ್ವದೆಲ್ಲೆಡೆ ಕೋವಿಡ್‌ ಲಸಿಕೆ ಅಭಿಯಾನಗಳು ನಡೆಯುತ್ತಿವೆ. ಜನರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ನಾನಾ ದೇಶಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಅಂತೆಯೇ ಫಿಲಿಪೈನ್ಸ್‌ ರಾಷ್ಟ್ರ ಕೂಡ ತನ್ನ ನಾಗರಿಕರು ಕೊರೊನಾ ಲಸಿಕೆ ಪಡೆಯುವಂತೆ ತಿಳಿಸಿ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೊಳಿಸಿದೆ.

    ಕೋವಿಡ್‌ ಲಸಿಕೆ ಪಡೆಯದವರು ಮನೆಯಿಂದ ಹೊರಗಡೆ ಬರುವಂತಿಲ್ಲ. ಒಂದು ವೇಳೆ ಹೊರಗಡೆ ಓಡಾಡಿದರೆ ಅಂತಹವರನ್ನು ಬಂಧಿಸಲಾಗುವುದು ಎಂದು ಫಿಲಿಪೈನ್ಸ್‌ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಲು ಬಿಡಲ್ಲ – ಮಕ್ಕಳನ್ನೇ ಕಿಡ್ನ್ಯಾಪ್‌ಗೈದ ತಾಯಿ ವಿರುದ್ಧ ಮಾಜಿ ಪತಿ ದೂರು

    ಕೋವಿಡ್‌ ಲಸಿಕೆ ಪಡೆಯದವರು ಮನೆಯಲ್ಲಿಯೇ ಇದ್ದಾರಾ ಎಂಬ ಬಗ್ಗೆ ಸಮುದಾಯ ನಾಯಕರು ಗಮನಹರಿಸಬೇಕು. ಯಾರಾದರೂ ಮನೆಯಲ್ಲಿರಲು ನಿರಾಕರಿಸಿ ಹೊರಗಡೆ ಓಡಾಡುತ್ತಿದ್ದರೆ ಅಂತಹವರನ್ನು ಬಂಧಿಸಿ ಎಂದು ಸೂಚನೆ ನೀಡಿದ್ದಾರೆ.

    ದೇಶದ ಜನತೆಯ ಆರೋಗ್ಯದ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕಾಗಿ ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾದ ನಟಿ ಕಿಮ್ ಮಿ ಸೂ ನಿಧನ – ನಟಿ ಸಾವಿನ ಬಗ್ಗೆ ಅನುಮಾನ

    ಕಳೆದ ವರ್ಷದ ಕೊನೆ ವೇಳೆಗೆ ದೇಶದಲ್ಲಿ 4.9 ಕೋಟಿ ಮಂದಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.45 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆಯದವರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

    ಫಿಲಿಪೈನ್ಸ್‌ನಲ್ಲಿ ಇಲ್ಲಿಯವರೆಗೆ 43 ಓಮಿಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಮುಂದಾಗಿದೆ.

  • ಓಮಿಕ್ರಾನ್ ಭೀತಿ – ಲಸಿಕೆ ಪಡೆಯುವಂತೆ ಜನರಿಗೆ ಸಿಎಂ ಸ್ಟಾಲಿನ್ ಒತ್ತಾಯ

    ಓಮಿಕ್ರಾನ್ ಭೀತಿ – ಲಸಿಕೆ ಪಡೆಯುವಂತೆ ಜನರಿಗೆ ಸಿಎಂ ಸ್ಟಾಲಿನ್ ಒತ್ತಾಯ

    ಚೆನ್ನೈ: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಜನರಿಗೆ ಕೋವಿಡ್-19 ಲಸಿಕೆ ಪಡೆಯುವಂತೆ ಮತ್ತು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.

    ಲಸಿಕೆ ಪಡೆದವರಿಗಿಂತ ಲಸಿಕೆ ಪಡೆಯದೇ ಇರುವ ಜನರು ಹೆಚ್ಚಾಗಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಜನರು ಲಸಿಕೆ ಪಡೆಯಬೇಕು. ಅದರಲ್ಲಿಯೂ 60 ಚರ್ಷಕ್ಕಿಂತ ಮೇಲ್ಪಟ್ಟವರು ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ವೈರಲ್ ಫೀವರ್​ನಂತಿದೆ: ಯೋಗಿ ಆದಿತ್ಯನಾಥ್

    ಡೆಲ್ಟಾ ವೈರಸ್‍ಗೆ ಹೋಲಿಸಿದರೆ ಓಮಿಕ್ರಾನ್ ವೈರಸ್ ಅತಿ ವೇಗವಾಗಿ ಹರಡುತ್ತಿದೆ. ಓಮಿಕ್ರಾನ್‍ನಿಂದ ಹೊಸ ಭೀತಿ ಎದುರಾಗುತ್ತಿದೆ. ಪ್ರತಿಯೊಬ್ಬರು ಕೊರೊನಾ ವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ತಜ್ಞರು ಲಸಿಕೆ ಪಡೆದವರಲ್ಲಿ ಓಮಿಕ್ರಾನ್ ಸೋಂಕಿನ ಗುಣಲಕ್ಷಣಗಳು ಕಡಿಮೆ ಇದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ನಿಮ್ಮ ಮನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿದ್ದರೆ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

    ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ 33 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಜನವರಿ 2 ರಂದು 50,000 ಶಿಬಿರಗಳ ಮೂಲಕ ಮೆಗಾ ಲಸಿಕಾ ಶಿಬಿರವನ್ನು ನಡೆಸಲಾಗುತ್ತಿದೆ. ಇದರಲ್ಲಿ 94 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಸರ್ಕಾರಹೊಂದಿದೆ ಎಂದು ತಿಳಿಸಿದ್ದಾರೆ.