Tag: covid-19 Rules

  • ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    ಬೀಜಿಂಗ್: ಕೋವಿಡ್‌-19 ಕಾರಣದಿಂದಾಗಿ ಶಾಂಘೈನಲ್ಲಿ ತೀವ್ರ ಲಾಕ್‌ಡೌನ್‌ನಲ್ಲಿರುವ ಸ್ಥಳೀಯರು ಕಠಿಣ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

    ಚೀನಾದಲ್ಲಿ ಮತ್ತೆ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು, ಶಾಂಘೈ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಲ್ಲಿ ದೈನಂದಿನ ಸೋಂಕಿನ ಪ್ರಮಾಣವು ಕುಸಿದಿದ್ದರೂ, ಇತರ ದೇಶಗಳಿಗೆ ಹೋಲಿಸಿದರೆ ಇದು ಇನ್ನೂ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ನಗರದ 26 ಮಿಲಿಯನ್ (2.6 ಕೋಟಿ) ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: 26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    ಕೋವಿಡ್‌ ನಿಯಮಗಳ ಪಾಲನೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮೆಗಾಫೋನ್‌ಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅನೌನ್ಸ್‌ ಮಾಡುತ್ತಿದ್ದಾರೆ. ʼಇಂದಿನಿಂದ ದಂಪತಿ ಪ್ರತ್ಯೇಕವಾಗಿ ಮಲಗಬೇಕು. ಪರಸ್ಪರರನ್ನು ಆಲಿಂಗನ ಮಾಡುವುದು, ಚುಂಬಿಸುವುದಕ್ಕೆ ಅವಕಾಶವಿಲ್ಲ. ಉಪಾಹಾರ, ಊಟ ಸೇವನೆಯೂ ಪ್ರತ್ಯೇಕವಾಗಿ ಆಗಬೇಕು. ನಿಮ್ಮ ಸಹಕಾರಕ್ಕೆ ಧನ್ಯವಾದಗಳುʼ ಎಂದು ಅನೌನ್ಸ್‌ ಮಾಡುತ್ತಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಕೊರೊನಾ ಹರಡುವುದನ್ನು ತಡೆಯಲು ನಗರವು ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ಚೀನಾದ ಆರ್ಥಿಕ ಕೇಂದ್ರಗಳು ಸ್ತಬ್ಧವಾಗಿವೆ. ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು, ವಿತರಣಾ ಸಿಬ್ಬಂದಿ, ವಿಶೇಷ ಅನುಮತಿ ಹೊಂದಿರುವ ಜನರನ್ನು ಮಾತ್ರ ಬೀದಿಗಳಲ್ಲಿ ಓಡಾಡಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ಅಕ್ಕಿ, ಮಾಂಸ ದಾಸ್ತಾನಿದೆ. ಲಾಕ್‌ಡೌನ್‌ ವಿಧಿಸಿರುವ ವಲಯಗಳಲ್ಲಿ ಡೆಲಿವರಿ ಸಿಬ್ಬಂದಿ ಮೂಲಕ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಇನ್ನುಳಿದ ಕಡೆಗಳಲ್ಲಿ ಸಗಟು ಮಾರುಕಟ್ಟೆ, ಆಹಾರ ಮಳಿಗೆಗಳನ್ನು ತೆರೆಯಲು ಪ್ರಯತ್ನಿಸಲಾಗುವುದು ಎಂದು ಶಾಂಘೈ ಉಪ ಮೇಯರ್‌ ಚೆನ್‌ ಕಾಂಗ್‌ ತಿಳಿಸಿದ್ದಾರೆ.

  • ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ – ಬಿಜೆಪಿ ಶಾಸಕ ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಬ್ಯುಸಿ

    ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ – ಬಿಜೆಪಿ ಶಾಸಕ ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಬ್ಯುಸಿ

    ಬೆಂಗಳೂರು: ಯಾವುದೇ ಸಭೆ, ಸಮಾರಂಭ, ಪಾದಯಾತ್ರೆ, ಸ್ಪರ್ಧೆ, ಜಾತ್ರೆಗಳಿಗೆ ಅವಕಾಶ ನೀಡ್ಬಾರ್ದು. ಇನ್ನಾದ್ರು ಪಕ್ಷಪಾತದ ಧೋರಣೆ ನಿಲ್ಲಿಸಿ ಎಂದು ಸರ್ಕಾರಕ್ಕೆ ನಿನ್ನೆಯಷ್ಟೇ ಹೈಕೋರ್ಟ್ ಬುದ್ದಿವಾದ ಹೇಳಿತ್ತು. ಆದ್ರೆ, ಇದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಯಾಕಂದ್ರೆ, ವೀಕೆಂಡ್ ಕರ್ಫ್ಯೂ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಬೆಳಗಾವಿಯ ಬಿಜೆಪಿ ಶಾಸಕ ಅನಿಲ್ ಬೆನಕೆ, ಎಮ್ಮೆ ಓಡಿಸುವ ಸ್ಪರ್ಧೆ ನಡೆಸಿದ್ದಾರೆ.

    ಈ ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ರು. ಮಕರ ಸಂಕ್ರಮಣ ನಿಮಿತ್ತ ಎಮ್ಮೆ ಓಡಿಸುವ ಸ್ಪರ್ಧೆಗೆ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದರು. ನಿನ್ನೆ ಸಂಜೆ ಚವ್ಹಾಟ್ ಗಲ್ಲಿಯಲ್ಲಿ ಚವಾಟ ಯುವಕ ಸಂಘಟನೆ, ಪಂಚ ಸಮಿತಿ, ಗವಳಿ ಸಮಾಜ ಸಹಯೋಗದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ನಡೆಯಿತು. ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನೂರಾರು ಜನರು ಭಾಗಿಯಾಗಿದ್ದರು. ಬೆಳಗಾವಿಯಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ ಅನಿಲ್ ಬೆನಕೆ ಬೇಜವಾಬ್ದಾರಿತನ ತೋರಿದರು. ಜನರನ್ನು ಎಚ್ಚರಿಸಿ ತಿಳುವಳಿಕೆ ನೀಡಬೇಕಿದ್ದ ಆಡಳಿತಾರೂಢ ಶಾಸಕನಿಂದಲೇ ನಿರ್ಲಕ್ಷ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಕ್ರಮ ಜರುಗಿಸಬೇಕಾಗಿದ್ದ ಜಿಲ್ಲಾಡಳಿತ ಸೈಲೆಂಟಾಗಿದೆ. ಇದನ್ನೂ ಓದಿ: ಉಡುಪಿ ಪೇಟೆಯಲ್ಲಿ ಓಮಿಕ್ರಾನ್ ಓಡಾಟ – ಜನಜಾಗೃತಿ ಮೂಡಿಸಿದ ಪಬ್ಲಿಕ್ ಹೀರೋ

    ಇನ್ನೂ ರಾಯಭಾಗದ ಮುಗಳ್‍ಖೋಡದಲ್ಲಿ ಯಲ್ಲಮ್ಮನ ಜಾತ್ರೆ ಭರ್ಜರಿಯಾಗಿ ನಡೆದಿದೆ. ಗಂಗಾವತಿಯ ಚನ್ನಬಸವ ತಾತನವರ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಬನ್ನಪ್ಪ ಪಾರ್ಕ್ ಬಳಿಯ ಮಹಾಗಣಪತಿ ದೇಗುಲ ತುಂಬಿ ತುಳುಕ್ತಾ ಇತ್ತು. ಬಾಗಲಕೋಟೆ ಇಳಕಲ್‍ನಲ್ಲಿ ಬನಶಂಕರಿ ಭಕ್ತರು ವೀಕೆಂಡ್ ಕರ್ಫ್ಯೂಗೆ ಡೋಂಟ್ ಕೇರ್ ಅಂದ್ರು. ಬದಾಮಿ ಬನಶಂಕರಿ ದೇಗುಲದವರೆಗೆ ಸಾವಿರಾರು ಮಂದಿ ಪಾದಯಾತ್ರೆ ನಡೆಸಿದ್ದಾರೆ. ಎಲ್ಲಾ ಕಡೆ ರೂಲ್ಸ್ ಬ್ರೇಕ್ ಆಗ್ತಿದ್ರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದನ್ನೂ ಓದಿ: ತುರ್ತು ಚಿಕಿತ್ಸೆ ಹೊರತುಪಡಿಸಿ ಇತರೆ ರೋಗಿಗಳು ಆಸ್ಪತ್ರೆಗೆ ಬರುವಂತಿಲ್ಲ: ಸರ್ಕಾರ ಸೂಚನೆ

  • ಕೋವಿಡ್ ನಿಯಮ ಉಲ್ಲಂಘನೆ – 70 ಲಕ್ಷ ವಸೂಲಿ ಮಾಡಿದ ಹು-ದಾ ಪಾಲಿಕೆ

    ಕೋವಿಡ್ ನಿಯಮ ಉಲ್ಲಂಘನೆ – 70 ಲಕ್ಷ ವಸೂಲಿ ಮಾಡಿದ ಹು-ದಾ ಪಾಲಿಕೆ

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ 244 ಜನರಿಗೆ ಗುರುವಾರ 48,200 ರೂಪಾಯಿ ದಂಡ ವಿಧಿಸಲಾಗಿದೆ.

    ಕೋವಿಡ್ ನಿಯಮಗಳ ಪಾಲನೆಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾರ್ಷಲ್‍ಗಳನ್ನು ನೇಮಕ ಮಾಡಿದ್ದು, ಮಾರ್ಷಲ್‍ಗಳು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರು ಮಾಸ್ಕ್ ಧರಿಸದೇ ಓಡಾಡುವುದು. ಸಾಮಾಜಿಕ ಅಂತರ ಕಾಪಾಡದೇ ವ್ಯಾಪಾರ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ. ಇದನ್ನೂ ಓದಿ:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಿಲ್ಲ

    ಕೋವಿಡ್ ನಿಯಮಗಳನ್ನು ಪಾಲಿಸದ ಜನರಿಂದ ಪಾಲಿಕೆ ಇಲ್ಲಿಯವರೆಗೆ ಒಟ್ಟು 70,56,350 ರೂಪಾಯಿ ದಂಡ ವಸೂಲಿ ಮಾಡಿದ್ದು, ಪಾಲಿಕೆಯ ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಮಾರ್ಷಲ್‍ಗಳು, ಪರಿಸರ ಅಭಿಯಂತರು, ಆರೋಗ್ಯ ನಿರೀಕ್ಷಕರು ಮಾಸ್ಕ್ ಹಾಕಿಕೊಳ್ಳದ ಜನರಿಗೆ ದಂಡ ವಿಧಿಸಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

    ಗುರುವಾರ ಸಹ 38 ಜನರ ಮೇಲೆ ಪ್ರಕರಣ ದಾಖಲಿಸಿ 2,500 ರೂಪಾಯಿ ದಂಡ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 181 ಜನರ ಮೇಲೆ ಪ್ರಕರಣ ದಾಖಲಿಸಿ 36,200 ರೂ. ದಂಡ ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಗುಳಿದ 25 ಜನರ ವಿರುದ್ಧ ಪ್ರಕರಣ ದಾಖಲಿಸಿ 2,500 ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಕೂಡಲೇ ಉಪ ನೋಂದಣಾಧಿಕಾರಿಗಳನ್ನು ವರ್ಗಾಯಿಸಿ – ಅಶೋಕ್‍ಗೆ ಶೆಟ್ಟರ್ ಪತ್ರ