Tag: Covid 19 Karnataka Report 7

  • ಸೋಂಕಿತರ ಸಂಖ್ಯೆ ಇಳಿಕೆ –  ಇಂದು 7,542 ಪಾಸಿಟಿವ್‌, 8,580 ಡಿಸ್ಚಾರ್ಜ್‌

    ಸೋಂಕಿತರ ಸಂಖ್ಯೆ ಇಳಿಕೆ – ಇಂದು 7,542 ಪಾಸಿಟಿವ್‌, 8,580 ಡಿಸ್ಚಾರ್ಜ್‌

    ಬೆಂಗಳೂರು: ಶುಭ ಸುದ್ದಿ ಎಂಬಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು ಇಂದು 7,542 ಮಂದಿಗೆ ಸೋಂಕು ಬಂದಿದೆ. ಆಸ್ಪತ್ರೆಯಿಂದ 8,580 ಮಂದಿ ಇಳಿಕೆಯಾಗಿದ್ದು, 73 ಮಂದಿ ಮೃತಪಟ್ಟಿದ್ದಾರೆ.

    ಬುಧವಾರ 9,265, ಗುರುವಾರ 8,477 ಮಂದಿಗೆ ಸೋಂಕು ಬಂದಿತ್ತು ಒಟ್ಟು ಇಲ್ಲಿಯವರೆಗೆ 7,51,390 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 1,12,427 ಸಕ್ರಿಯ ಪ್ರಕರಣಗಳಿದ್ದರೆ 6,28,588 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಇಲ್ಲಿಯವರೆಗೆ 10,356 ಮಂದಿ ಮೃತಪಟ್ಟಿದ್ದು, 946 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 27,961 ಆಂಟಿಜನ್‌ ಟೆಸ್ಟ್‌, 77,930 ಪಿಸಿಆರ್‌ ಸೇರಿದಂತೆ ಒಟ್ಟು 1,05,891 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 64,61,694 ಕೋವಿಡ್‌ 19 ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 3,441, ಮೈಸೂರು 404, ಬೆಂಗಳೂರು ಗ್ರಾಮಾಂತರ 345, ಬೆಳಗಾವಿ 289 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 359, ಧಾರವಾಡ 80, ಬಳ್ಳಾರಿ 75, ಹಾಸನ 51 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.