Tag: COVAXIN

  • ಕೋವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್: ಬನಾರಸ್ ಹಿಂದೂ ಯೂನಿವರ್ಸಿಟಿ

    ಕೋವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್: ಬನಾರಸ್ ಹಿಂದೂ ಯೂನಿವರ್ಸಿಟಿ

    ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ (Bharat Biotech) ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ (Covaxin) ಲಸಿಕೆಯ ಅಡ್ಡಪರಿಣಾಮಗಳ (Side Effect) ಬಗ್ಗೆ ವರದಿ ಬಂದಿದೆ. ಈ ಲಸಿಕೆ ಪಡೆದ ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್ ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿವಿ (Banaras Hindu University) ನಡೆಸಿದ ಅಧ್ಯಯನ ತಿಳಿಸಿದೆ.

    ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚಿಗೆ ಮೇಲಿಂದ ಮೇಲೆ ವರದಿಗಳು ಬರುತ್ತಿವೆ. ಎರಡು ವಾರಗಳ ಹಿಂದಷ್ಟೇ ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ವರದಿ ಆಗಿತ್ತು. ಇದೀಗ ಕೋವ್ಯಾಕ್ಸಿನ್ ಸರದಿ. ಈ ವರದಿ ಪ್ರಕಾರ ಕೋವ್ಯಾಕ್ಸಿನ್ ಪಡೆದ ಹದಿಹರೆಯದವರು ಮತ್ತು ಯುವಕರಲ್ಲಿ ಹೆಚ್ಚು ಅಡ್ಡಪರಿಣಾಮ ಕಂಡುಬಂದಿದೆ. ಇದನ್ನೂ ಓದಿ: ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ಒಟ್ಟು 1,024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 48% ರಷ್ಟು ಮಂದಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿರೋದು ಕಂಡುಬಂದಿದೆ. ಅಲ್ಲದೇ, ನರ ಸಂಬಂಧಿ ಕಾಯಿಲೆ, ಸ್ನಾಯು ಸೆಳೆತ, ಕೀಲುನೋವು, ಚರ್ಮ ರೋಗಗಳು ಕೂಡ ಕಂಡುಬಂದಿವೆ. 4.6% ರಷ್ಟು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಕೂಡ ಕಂಡುಬಂದಿದೆ. ಇದೆಲ್ಲಾ ಇತರೆ ಲಸಿಕೆಗಳ ಅಡ್ಡಪರಿಣಾಮಗಳಿಗಿಂತ ಭಿನ್ನ ಎನ್ನಲಾಗಿದ್ದು, ಮತ್ತಷ್ಟು ಆಳ ಅಧ್ಯಯನ ಮುಂದುವರೆದಿದೆ. ಇದನ್ನೂ ಓದಿ: SSLCಯಲ್ಲಿ 99% ಅಂಕ ತೆಗೆದ ವಿದ್ಯಾರ್ಥಿನಿಯ ಮೆದುಳಿನಲ್ಲಿ ರಕ್ತಸ್ರಾವವಾಗಿ ದುರ್ಮರಣ

  • ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಹೇಳಿಕೆ

    ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಹೇಳಿಕೆ

    – ಕೋವಿಶೀಲ್ಡ್‌ ಲಸಿಕೆ ಅಪರೂಪದ ಅಡ್ಡಪರಿಣಾಮ ವರದಿ ಬೆನ್ನಲ್ಲೇ ಪ್ರತಿಕ್ರಿಯೆ

    ನವದೆಹಲಿ: ಯಾವುದೇ ಲಸಿಕೆಯ ಏಕಮಾತ್ರ ಆದ್ಯತೆ ಸುರಕ್ಷತೆ. ಆ ಉದ್ದೇಶದಿಂದಲೇ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಕೋವ್ಯಾಕ್ಸಿನ್‌ (Covaxin) ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಸ್ಪಷ್ಟಪಡಿಸಿದೆ.

    ಕೋವಿಶೀಲ್ಡ್‌ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮಗಳು ಬೀರಬಹುದು ಎಂದು ನ್ಯಾಯಾಲಯದ ಮುಂದೆ ಅಸ್ಟ್ರಾಜೆನೆಕಾ (AstraZeneca) ಹೇಳಿಕೆ ನೀಡಿತ್ತು. ಈ ವಿಚಾರವಾಗಿ ಸಾಕಷ್ಟು ವರದಿಗಳು ಬಂದವು. ಅದರ ಬೆನ್ನಲ್ಲೇ ಭಾರತ್‌ ಬಯೋಟಿಕ್‌ (Bharat Biotech) ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

    ಭಾರತದಲ್ಲಿ ಪರಿಣಾಮಕಾರಿತ್ವದ ಪ್ರಯೋಗಗಳನ್ನು ನಡೆಸಿದ ಭಾರತ ಸರ್ಕಾರದ COVID-19 ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಕೋವಾಕ್ಸಿನ್ ‘ಏಕೈಕ ಕೋವಿಡ್ ಲಸಿಕೆ’ ಎಂದು ತಿಳಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಭಾರತ್‌ ಬಯೋಟೆಕ್‌, ಸುರಕ್ಷತೆಯನ್ನೇ ಗಮನದಲ್ಲಿಟ್ಟುಕೊಂಡು ಕೋವ್ಯಾಕ್ಸಿನ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ದಕ್ಷತೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು: ನಿಜ ಒಪ್ಪಿಕೊಂಡ ಅಸ್ಟ್ರಾಜೆನೆಕಾ

    ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಭಾರತದಲ್ಲಿ ಪ್ರಾಥಮಿಕವಾಗಿ ನಿರ್ವಹಿಸಲಾಯಿತು.

    ಭಾರತ್ ಬಯೋಟೆಕ್, ಅದರ ಪರವಾನಗಿ ಪ್ರಕ್ರಿಯೆಯ ಭಾಗವಾಗಿ ಕೋವ್ಯಾಕ್ಸಿನ್ ಅನ್ನು 27,000 ಕ್ಕೂ ಹೆಚ್ಚು ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ ನಿರ್ಬಂಧಿತ ಬಳಕೆಯ ಅಡಿಯಲ್ಲಿ ಇದು ಪರವಾನಗಿ ಪಡೆದಿದೆ.

  • ಮಕ್ಕಳಿಗೆ ಲಸಿಕೆ – ಒಂದೇ ದಿನ 3 ಲಸಿಕೆಗಳಿಗೆ ಅನುಮತಿ

    ಮಕ್ಕಳಿಗೆ ಲಸಿಕೆ – ಒಂದೇ ದಿನ 3 ಲಸಿಕೆಗಳಿಗೆ ಅನುಮತಿ

    ನವದೆಹಲಿ: ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಹಾದಿ ಸುಗಮವಾಗಿದೆ. ಒಂದೇ ದಿನ ಮೂರು ಲಸಿಕೆಗೆ ಅನುಮತಿ ಸಿಕ್ಕಿದೆ

    ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು 6 ರಿಂದ 12 ವರ್ಷದ ಮಕ್ಕಳಿಗೆ ನೀಡಲು ಭಾರತ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ತುರ್ತು ಅನುಮತಿ ನೀಡಿದೆ.

    5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯೊಲಾಜಿಕಲ್-ಇ ಸಂಸ್ಥೆ ತಯಾರಿಸಿದ ಕಾರ್ಬೇವ್ಯಾಕ್ಸ್ ಲಸಿಕೆ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜೈಡಸ್ ಕ್ಯಾಡಿಲ್ಲಾ ಅಭಿವೃದ್ಧಿಪಡಿಸಿರುವ ಜೈಕೋವ್ ಡಿ ಲಸಿಕೆಯ ತುರ್ತು ಬಳಕೆಗೂ ಡಿಸಿಜಿಐ ಅನುಮೋದನೆ ನೀಡಿದೆ. ಇದನ್ನೂ ಓದಿ: ಚೀನಿಯರನ್ನು ಗುರಿಯಾಗಿಸಿ ಕರಾಚಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು

    ಮೂರು ಸಂಸ್ಥೆಗಳಿಗೂ ಡಿಸಿಜಿಐ ಕೆಲ ಷರತ್ತುಗಳನ್ನು ವಿಧಿಸಿದೆ. ಲಸಿಕೆ ಹಂಚಿಕೆಯಾದ ನಂತರ ಮೊದಲ ಎರಡು ತಿಂಗಳು ಪ್ರತಿ 15 ದಿನಕ್ಕೊಮ್ಮೆ ಭದ್ರತಾ ದತ್ತಾಂಶಗಳನ್ನು ಡಿಸಿಜಿಐಗೆ ಸಲ್ಲಿಸಬೇಕು. ಆ ನಂತರ ಐದು ತಿಂಗಳಿಗೊಮ್ಮೆ ವಿವರಗಳನ್ನು ನೀಡಬೇಕು ಎಂದು ಸೂಚಿಸಿದೆ. ಶೀಘ್ರವೇ ಕೇಂದ್ರ ಸರ್ಕಾರ, ಲಸಿಕೆ ಹಂಚಿಕೆಗೂ ಗ್ರೀನ್ ಸಿಗ್ನಲ್ ನೀಡುವ ಸಂಭವ ಹೆಚ್ಚಿವೆ.

  • ಜಪಾನ್ ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ

    ಜಪಾನ್ ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ

    ಹೊಸದಿಲ್ಲಿ: ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಜಪಾನ್ ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದೆ. ಇದು ಉಭಯ ದೇಶಗಳ ನಡುವಿನ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ.

    ಜಪಾನ್ ಸರ್ಕಾರವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಿದ್ದು, ಏಪ್ರಿಲ್ 10ರಿಂದ ಭಾರತದಿಂದ ಜಪಾನ್‌ಗೆ ಪ್ರಯಾಣಿಸಲು ಮತ್ತಷ್ಟು ಅನುಕೂಲವಾಗುತ್ತದೆ ಎಂದು ಭಾರತ್ ಬಯೋಟೆಕ್ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

    ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳೂ ಪ್ರಯಾಣಕ್ಕೆ ಅನುಕೂಲವಾಗುವಂತೆ ಕೋವ್ಯಾಕ್ಸಿನ್ ಗುರುತಿಸಿವೆ ಎನ್ನಲಾಗಿದೆ.

  • ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

    ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ WHO

    ಜಿನೇವಾ: ಕೊರೊನಾ ಮಹಾಮಾರಿ ವಿರುದ್ಧ ಹೈದರಾಬಾದ್ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್-19 ಲಸಿಕೆ ಕೋವಾಕ್ಸಿನ್ ಪೂರೈಕೆಯನ್ನು ಸ್ಥಗಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ನಿರ್ಧರಿಸಿದೆ.

    ಲಸಿಕೆ ತಯಾರಾಗುತ್ತಿರುವ ಸ್ಥಳಗಳಲ್ಲಿ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ವಿಶ್ವಸಂಸ್ಥೆಯ ಮೂಲಕ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಬ್ಲ್ಯೂಎಚ್‍ಒ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಭಾರತದಲ್ಲಿ ಕೊವಿಶೀಲ್ಡ್, ಕೋವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

    ಕೊರೊನಾ ವಿರುದ್ಧ ಈಗಾಗಲೇ ನೀಡಲಾಗಿರುವ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ. ಯಾವುದೇ ಸುರಕ್ಷತೆಯ ಬಗ್ಗೆ ಭಯ ಬೇಡ. ಲಸಿಕೆ ತೆಗೆದುಕೊಳ್ಳುವ ದೇಶಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಆದರೆ, ಸೂಕ್ತ ಕ್ರಮ ಏನು ಎಂಬುದನ್ನು ನಿರ್ಧರಿಸಿಲ್ಲ. ಪ್ರಸ್ತುತ ರಫ್ತಿಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರಿಂದ ಕೋವ್ಯಾಕ್ಸಿನ್ ಪೂರೈಕೆಗೆ ಅಡ್ಡಿಯಾಗುತ್ತದೆ. ಮಾರ್ಚ್ 14 ರಿಂದ 22 ರವರೆಗೆ ಪೋಸ್ಟ್ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್ (EUL) ತಪಾಸಣೆಯ ನಂತರ ಅಮಾನತು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಭಾರತ್ ಬಯೋಟೆಕ್, ಕೋವ್ಯಾಕ್ಸಿನ್ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಬಗ್ಗೆ ಯಾವುದೇ ಭಯ ಬೇಡ. ಈವರೆಗೆ ಲಕ್ಷಾಂತರ ಮಂದಿ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ಪಡೆದವರ ಪ್ರಮಾಣ ಪತ್ರ ಮಾನ್ಯತೆ ಹೊಂದಿದೆ ಎಂದು ಮಾಹಿತಿಹಂಚಿಕೊಂಡಿದೆ. ಇದನ್ನೂ ಓದಿ: ಮತ್ತೆ ಶಾಕ್‌ ಕೊಟ್ಟ ಕೋವಿಡ್-‌ ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ

    ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಪುಷ್ಟಿ ಎಂಬಂತೆ ಐಸಿಎಂಆರ್ ಸಹಯೋಗದಲ್ಲಿ ಹೈದ್ರಾಬಾದ್‍ನ ಶಮೀರ್‍ಪೇಟ್‍ನ ಜಿನೋಂ ವ್ಯಾಲಿಯಲ್ಲಿ ಸ್ವದೇಶಿ ಲಸಿಕೆ ಸಿದ್ಧವಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ನವೆಂಬರ್ ಮಧ್ಯಭಾಗದಿಂದ 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಸುರಕ್ಷತೆ, ಪರಿಣಾಮಕಾರಿ ಬಗ್ಗೆ ಸದ್ಯಕ್ಕೆ ಅಸ್ಪಷ್ಟವಾಗಿದ್ದು, ಅಗತ್ಯ 26 ಸಾವಿರ ಅಭ್ಯರ್ಥಿಗಳ ಪೈಕಿ 23 ಸಾವಿರ ಜನರ ಮೇಲೆ ಪ್ರಯೋಗ ನಡೆಸಿದ ಬಳಿಕ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಷರತ್ತು ಬದ್ಧ ಅನುಮತಿ ನೀಡಿತ್ತು. 2021ರ ಮಾರ್ಚ್‍ನಲ್ಲಿ ಲಸಿಕೆ ಬಳಕೆಗೆ ಗೀನ್ ಸಿಗ್ನಲ್ ಸಿಕ್ಕ ಬಳಿಕ ಭಾರತ ಸೇರಿದಂತೆ ಹಲವು ದೇಶಗಳು ಕೋವ್ಯಾಕ್ಸಿನ್‍ಗೆ ಅನುಮೋದನೆ ನೀಡಿದ್ದವು.

  • ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ನವದೆಹಲಿ: ಕೋವ್ಯಾಕ್ಸಿನ್ ಲಸಿಕೆಯ ತಯಾರಕ ಕಂಪನಿ ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ ಬೂಸ್ಟರ್ ಡೋಸ್‌ನ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆ ನೀಡಿದೆ.

    ಕೋವ್ಯಾಕ್ಸಿನ್‌ನ ಎರಡು ಡೋಸ್ ಪಡೆದವರು ಮೂರನೇ ಲಸಿಕೆಯಾಗಿ ಇಂಟ್ರಾನಾಸಲ್(ಮೂಗಿನ ಮೂಲಕ ನೀಡಲಾಗುವ ಲಸಿಕೆ) ಬೂಸ್ಟರ್ ಡೋಸ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಮೂರನೇ ಹಂತದ ವ್ಯಾಕ್ಸಿನ್‌ಗೆ ಚಾಲನೆ ನೀಡಿದ್ದು, ದೇಶದ 9 ಸ್ಥಳಗಳಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಇದನ್ನೂ ಓದಿ: SC/ST ಬಡ್ತಿ ಮೀಸಲಾತಿ: ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ

    ಇಂಟ್ರಾನಾಸಲ್ ಲಸಿಕೆ ಚುಚ್ಚು ಮದ್ದು ನೀಡುವ ವಿಧಾನಕ್ಕಿಂತಲೂ ಸುಲಭವಾದುದು. ಈ ವಿಧಾನದ ಲಸಿಕೆಗೆ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿಯ ಅಗತ್ಯ ಇಲ್ಲ ಎಂದು ಕಂಪನಿ ತಿಳಿಸಿದೆ.

    ಇಂಟ್ರಾನಾಸಲ್ ಬೂಸ್ಟರ್ ಡೋಸ್ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಕಳೆದ ತಿಂಗಳು ಮೂಗಿನ ಲಸಿಕೆಯನ್ನು ನೀಡುವ ಪ್ರಯೋಗದ ಬಗ್ಗೆ ಕಂಪನಿ ಸರ್ಕಾರಕ್ಕೆ ಅನುಮತಿ ಕೋರಿತ್ತು. ಇದನ್ನೂ ಓದಿ: 500 ರೂಪಾಯಿಗೆ ಖರೀದಿಸಿದ್ದ ಕುರ್ಚಿ 16 ಲಕ್ಷಕ್ಕೆ ಹರಾಜು

  • ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

    ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

    ನವದೆಹಲಿ: ಭಾರತ ಔಷಧ ನಿಯಂತ್ರಕದಿಂದ ಕೋವಿಡ್‌ ವಿರೋಧಿ ಲಸಿಕೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.

    ಈ ಲಸಿಕೆಗಳ ಮಾರುಕಟ್ಟೆ ಮಾರಾಟವನ್ನು ʻಹೊಸ ಔಷಧಗಳು ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮಗಳು, 2019’ರ ಅಡಿಯಲ್ಲಿ ಅನುಮೋದಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವೆಂದ ಮಾತ್ರಕ್ಕೆ ಅಂಗಡಿಗಳಲ್ಲೆಲ್ಲ ಸಿಗುತ್ತೆ ಎಂದರ್ಧವಲ್ಲ. ಈ ಎರಡೂ ಲಸಿಕೆಗಳು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 185 ಓಮಿಕ್ರಾನ್ ಕೇಸ್ ಪತ್ತೆ – ಒಟ್ಟು ಪ್ರಕರಣಗಳ ಸಂಖ್ಯೆ 1,115ಕ್ಕೆ ಏರಿಕೆ

    ಕೋವ್ಯಾಕ್ಸಿನ್‌ ತಯಾರಕಾ ಸಂಸ್ಥೆ ಭಾರತ್‌ ಬಯೋಟೆಕ್‌ ಮತ್ತು ಕೋವಿಶೀಲ್ಡ್‌ ತಯಾರಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಕ್ಲಿನಿಕಲ್‌ ಪ್ರಯೋಗಕ್ಕೆ ಸಂಬಂಧಿಸಿದ ಡೇಟಾವನ್ನು ಭಾರತ ಔಷಧ ನಿಯಂತ್ರಕಕ್ಕೆ ಸಲ್ಲಿಸಿವೆ. ಕೋವಿಡ್-‌19 ವಿಷಯ ತಜ್ಞರ ಸಮಿತಿಯು ಜ.19 ರಂದು ಅನುಮೋದನೆಯನ್ನು ಶಿಫಾರಸು ಮಾಡಿದ ನಂತರ ಮಾರುಕಟ್ಟೆಗೆ ಮಾರಾಟಕ್ಕೆ ಅನುಮತಿಸಲಾಗಿದೆ.

    ಕೋವಿಶೀಲ್ಡ್‌ಗೆ ನಿಯಮಿತ ಮಾರುಕಟ್ಟೆ ಅಧಿಕಾರವನ್ನು ಕೋರಿ ಅ.25 ರಂದು ಡಿಸಿಜಿಐಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ಕೋವ್ಯಾಕ್ಸಿನ್‌ಗೆ ನಿಯಮಿತ ಮಾರುಕಟ್ಟೆ ಅನುಮೋದನೆಗೆ ಭಾರತ್‌ ಬಯೋಟೆಕ್‌ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಕೊರೊನಾ ನಿಯಮ ಮರೆತು ಕ್ರಿಕೆಟ್ ಪಂದ್ಯಾಟ – ಬ್ಯಾಟ್‍ಬೀಸಿ ಸಂಭ್ರಮಿಸಿದ ಜಮೀರ್

    ಭಾರತದಲ್ಲಿ ಈವರೆಗೆ ಕೋವಿಡ್‌ ಲಸಿಕೆ ಅಭಿಯಾನದಲ್ಲಿ 163.84 ಕೋಟಿ ಡೋಸ್‌ ನೀಡಲಾಗಿದೆ. ದೇಶದಲ್ಲಿ ಶೇ.72 ರಷ್ಟು ವಯಸ್ಕರು ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. 15-18 ವಯಸ್ಸಿನ ಮಕ್ಕಳಲ್ಲಿ ಶೇ.52 ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

  • ಕೋವ್ಯಾಕ್ಸಿನ್‌ ಲಸಿಕೆ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸಿಟಮಲ್‌ ಮಾತ್ರೆ ನೀಡಲ್ಲ: ಭಾರತ್‌ ಬಯೋಟೆಕ್‌

    ಕೋವ್ಯಾಕ್ಸಿನ್‌ ಲಸಿಕೆ ಪಡೆದ ಮಕ್ಕಳಿಗೆ ನೋವು ನಿವಾರಕ, ಪ್ಯಾರಸಿಟಮಲ್‌ ಮಾತ್ರೆ ನೀಡಲ್ಲ: ಭಾರತ್‌ ಬಯೋಟೆಕ್‌

    ನವದೆಹಲಿ: ಕೋವಿಡ್‌-19 ವಿರುದ್ಧದ ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರ ಮಕ್ಕಳಿಗೆ ನೋವು ನಿವಾರಕ ಅಥವಾ ಪ್ಯಾರಸಿಟಮಲ್‌ ಮಾತ್ರೆಯನ್ನು ನೀಡುವುದಿಲ್ಲ ಎಂದು ಲಸಿಕಾ ತಯಾರಿಕೆ ಕಂಪನಿ ಭಾರತ್‌ ಬಯೋಟೆಕ್‌ ಬುಧವಾರ ತಿಳಿಸಿದೆ.

    ಕೆಲವು ರೋಗನಿರೋಧಕ ಕೇಂದ್ರಗಳು, ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಿದ ನಂತರ ಜೊತೆಯಲ್ಲಿ 500 ಮಿ.ಗ್ರಾಂ. ಪ್ಯಾರಸಿಟಮಲ್‌ ಮಾತ್ರೆಯನ್ನು ನೀಡುವಂತೆ ಶಿಫಾರಸು ಮಾಡಿವೆ. ಆದರೆ ಅಂತಹ ಕ್ರಮ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ. ಇದನ್ನೂ ಓದಿ: 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

    ಈ ಕುರಿತು ಟ್ವೀಟ್‌ ಮಾಡಿರುವ ಭಾರತ್‌ ಬಯೋಟೆಕ್‌, ಕೋವಿಡ್‌ ವಿರುದ್ಧದ ಇತರೆ ಲಸಿಕೆಗಳನ್ನು ಪಡೆದರೆ ಪ್ಯಾರಸಿಟಮಲ್‌ ಮಾತ್ರೆ ಅಗತ್ಯವಿರಬಹುದು. ಆದರೆ ಕೋವ್ಯಾಕ್ಸಿನ್‌ ಪಡೆದವರಿಗೆ ಮಾತ್ರೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    30,000 ಮಂದಿಯನ್ನು ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಲಸಿಕೆ ಪಡೆದ ನಂತರ ಶೇ.10-20 ರಷ್ಟು ಮಾತ್ರ ದೇಹದಲ್ಲಿ ಅಡ್ಡಪರಿಣಾಮ ಬೀರಬಹುದು. ಅದು ಕೂಡ ಸೌಮ್ಯವಾಗಿದ್ದು, ಒಂದೆರಡು ದಿನದಲ್ಲಿ ಸರಿಯಾಗುತ್ತದೆ. ಅದಕ್ಕಾಗಿ ಔಷಧದ ಅಗತ್ಯವಿಲ್ಲ. ಒಂದು ವೇಳೆ ವೈದ್ಯರನ್ನು ಸಂಪರ್ಕಿಸುವ ಸಂದರ್ಭ ಬಂದರೆ ಮಾತ್ರ ಅವರು ಔಷಧ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ ಎಂದು ಹೇಳಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 4,246 ಪಾಸಿಟಿವ್, ಇಬ್ಬರು ಬಲಿ

    12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಬಹುದು ಎಂದು ಕಳೆದ ತಿಂಗಳು ಡಿಸಿಜಿಐ ಅನುಮೋದನೆ ನೀಡಿತ್ತು. ಇದಾದ ಬಳಿಕೆ ಪ್ರಧಾನಿ ನರೇಂದ್ರ ಮೋದಿ ಅವರು, ಜ.3ರಿಂದ 15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ವಿರುದ್ಧದ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಈವರೆಗೆ 85 ಲಕ್ಷ ಮಕ್ಕಳು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

  • ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

    ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

    ಹೈದರಾಬಾದ್: ಕೋವ್ಯಾಕ್ಸಿನ್, ಕೋವಿಶೀಲ್ಡ್ 2 ವಿಧದ ಲಸಿಕೆ ಪಡೆಯುವುದು ಕೊರೊನಾ ಸೋಂಕಿನ ವಿರುದ್ಧ 4 ಪಟ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ತಿಳಿಸಿದೆ.

    2 ಲಸಿಕೆಗಳನ್ನು ಪಡೆಯುವುದರಿಂದ ಭಾರೀ ಪ್ರತಿಕಾಯ ಶಕ್ತಿ ವೃದ್ಧಿ ಆಗುತ್ತದೆ. ಹೈದರಾಬಾದ್ ಮೂಲದ ಎಜಿಐ ಆಸ್ಪತ್ರೆ ಮತ್ತು ಏಷ್ಯನ್ ಹೆಲ್ತ್‍ಕೇರ್ ಫೌಂಡೇಶನ್ ಸಂಶೋಧಕರು ನಡೆಸಿದ ಜಂಟಿ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್

    ಕೋವಿಡ್ ಲಸಿಕೆ ಪಡೆಯದ, ಸೋಂಕು ಇಲ್ಲದ 330 ಜನರ ಮೇಲೆ ಈ ಪ್ರಯೋಗ ನಡೆಸಲಾಗಿತ್ತು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯ ಒಂದೊಂದು ಡೋಸ್ ಆಗಿ ನೀಡುವುದು ಸುರಕ್ಷಿತವೇ, ಮಿಕ್ಸಿಂಗ್ ಲಸಿಕೆ ಪರಿಣಾಮ ಏನು? ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿದೆ.

    ಒಂದೇ ಲಸಿಕೆಯನ್ನು ಎರಡು-ಡೋಸ್‍ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಅಧ್ಯಯನದಲ್ಲಿ ತೊಡಗಿರುವ ಸಂಶೋಧಕರಲ್ಲಿ ಒಬ್ಬರಾಗಿರುವ ಡಾ. ರೆಡ್ಡಿ ಹೇಳಿದ್ದಾರೆ.

  • ದೇಶಾದ್ಯಂತ ಮೊದಲ ದಿನ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ

    ದೇಶಾದ್ಯಂತ ಮೊದಲ ದಿನ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ

    ನವದೆಹಲಿ: ಇಡೀ ದೇಶದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಜನವರಿ 3 ರಂದು ಕೋವ್ಯಾಕ್ಸಿನ್ ಮೊದಲ ಡೋಸ್ ನೀಡಲು ಪ್ರಾರಂಭಿಸಲಾಗಿದೆ. 15 ರಿಂದ 18 ವರ್ಷದ ಮಕ್ಕಳಿಗೆ ಸೋಮವಾರ ಲಸಿಕೆಗೆ ಚಾಲನೆ ನೀಡಲಾಗಿತ್ತು.

    ಮೊದಲ ದಿನದಂದೇ 40 ಲಕ್ಷಕ್ಕೂ ಅಧಿಕ ಮಕ್ಕಳು ಲಸಿಕೆಯನ್ನು ಪಡೆದಿದ್ದಾರೆ ಎಂದು ಕೋವಿನ್ ಪೋರ್ಟಲ್‌ನಲ್ಲಿ ವರದಿಯಾಗಿದೆ. ಮೊದಲ ದಿನ 39.88 ಲಕ್ಷ ಮಕ್ಕಳು ಸೋಮವಾರ ಮಧ್ಯಾಹ್ನದವರೆಗೆ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ತೀವ್ರವಾಗಿ ಹರಡುತ್ತಿರುವ ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿಯಿಂದಾಗಿ 15 ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಯಿತು. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಕರ್ನಾಟಕದಲ್ಲಿ ಮೊದಲ ದಿನ 4 ಲಕ್ಷಕ್ಕೂ ಹೆಚ್ಚು ಮಕ್ಕಳು ಲಸಿಕೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಮೊದಲ ದಿನ 6.3 ಲಕ್ಷ ಮಕ್ಕಳಿಗೆ ಲಸಿಕೆಯನ್ನು ನೀಡುವ ಗುರಿ ಹೊಂದಿತ್ತು. ಇದರಲ್ಲಿ ಶೇ.65 ಮಕ್ಕಳು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣಕ್ಕೆ ಕೊರೊನಾತಂಕ – ಓಂ ಶಕ್ತಿ ದೇಗುಲಕ್ಕೆ ಹೋಗಿ ಬಂದ 30 ಮಂದಿಗೆ ಪಾಸಿಟಿವ್