Tag: Cousin

  • ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆಯನ್ನೇ ಕಡಿದ್ರು – ಸೆಲ್ಫಿ ತೆಗೆದು ವಿಕೃತಿ ಮೆರೆದ್ರು

    ರಾಂಚಿ: ಆಸ್ತಿ (Property) ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯ (Cousin) ತಲೆಯನ್ನೇ ಕಡಿದು (beheading) ಹತ್ಯೆ ಮಾಡಿದ್ದಲ್ಲದೇ (Murder) ಆತನ ತಲೆಯನ್ನು ಹಿಡಿದುಕೊಂಡು ಸೆಲ್ಫಿಯನ್ನೂ (Selfie) ತೆಗೆದು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ (Jharkhand) ಖುಂಟಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವ್ಯಕ್ತಿ, ಆತನ ಪತ್ನಿ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    20 ವರ್ಷದ ವ್ಯಕ್ತಿ ಸೋದರ ಸಂಬಂಧಿಯ ತಲೆ ಕಡಿದಿದ್ದಾನೆ. ಬಳಿಕ ಆ ತಲೆಯನ್ನು ಹಿಡಿದುಕೊಂಡು ಆತನ ಸ್ನೇಹಿತರು ಸೆಲ್ಫಿ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ವ್ಯಕ್ತಿಯ ತಂದೆ ದೇಸಾಯಿ ಮುಂಡಾ ತನ್ನ ಮಗ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಅವರು ಡಿಸೆಂಬರ್ 1 ರಂದು ಭತ್ತದ ಗದ್ದೆಯಲ್ಲಿ ಕೆಲಸಕ್ಕೆಂದು ಹೋಗಿದ್ದು, ತಮ್ಮ ಮಗ ಮನೆಯಲ್ಲಿ ಒಬ್ಬನೇ ಇದ್ದ. ಮನೆಗೆ ಹಿಂದಿರುಗಿದಾಗ ಮಗನನ್ನು ಅಪಹರಿಸಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ ಹುಡುಕಾಡಿದರೂ ಮಗ ಎಲ್ಲಿಯೂ ಸಿಗದ ಹಿನ್ನೆಲೆ ದೇಸಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ಎಫ್‌ಐಆರ್ ದಾಖಲಿಸಿಕೊಂಡ ಖುಂಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿ ಸಾಗರ್ ಮುಂಡಾನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದ ಅರಣ್ಯದಲ್ಲಿ ಮೃತ ವ್ಯಕ್ತಿಯ ತಲೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    crime

    ಮೃತನ ಕುಟುಂಬ ಹಾಗೂ ಆರೋಪಿಗಳ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದಲೇ ಕಲಹವಿತ್ತು. ಈ ಕಾರಣಕ್ಕೆ ಆರೋಪಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸರು 6 ಮೊಬೈಲ್ ಫೋನ್‌ಗಳು, 2 ಹರಿತವಾದ ರಕ್ತಸಿಕ್ತ ಆಯುಧಗಳು, 1 ಕೊಡಲಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ನಾಯಿಗೆ ಆಹಾರ ಹಾಕಿಲ್ಲ ಎಂದು ಕ್ರೂರವಾಗಿ ಸಹೋದರನನ್ನು ಥಳಿಸಿ ಕೊಂದ

    ನಾಯಿಗೆ ಆಹಾರ ಹಾಕಿಲ್ಲ ಎಂದು ಕ್ರೂರವಾಗಿ ಸಹೋದರನನ್ನು ಥಳಿಸಿ ಕೊಂದ

    ತಿರುವನಂತಪುರಂ: ನಾಯಿಗೆ (Dog) ಆಹಾರ (Food) ಹಾಕಿಲ್ಲ ಎಂದು ಸಹೋದರನನ್ನು (Cousin) ಯುವಕನೊಬ್ಬ ಕೊಲೆ ಮಾಡಿದ ಘಟನೆ ಕೇರಳದ ಪಾಲಕ್ಕಾಡ್‍ನಲ್ಲಿ ನಡೆದಿದೆ.

    ಹರ್ಷದ್(21)ನನ್ನು ಆತನ ಸಹೋದರ ಹಕೀಂ (27) ಎಂಬಾತ ಪಾಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ. ಹರ್ಷದ್ ಮತ್ತು ಹಕೀಂ ಪೆರುಮತ್ತೋಡಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ಇದ್ದರು. ಅಷ್ಟೇ ಅಲ್ಲದೇ ಇಬ್ಬರು ಕೇಬಲ್ ವರ್ಕ್ ಮಾಡುತ್ತಿದ್ದರು.

    crime

    ಹಕೀಂ ಅಲ್ಲಿ ಒಂದು ನಾಯಿಯನ್ನು ಸಾಕಿದ್ದ. ಆ ನಾಯಿಗೆ ಆಹಾರವನ್ನು ನೀಡಿಲ್ಲ ಎಂದು ಹರ್ಷದ್‍ಗೆ ನಾಯಿ ಬೆಲ್ಟ್ ಹಾಗೂ ಮರದ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಹರ್ಷದ್‍ಗೆ ಗಂಭೀರ ಗಾಯವಾಗಿದೆ.

    ಈ ಹಿನ್ನೆಲೆಯಲ್ಲಿ ಹೆದರಿದ ಹಕೀಂ ಹಾಗೂ ಆತನ ಸ್ನೇಹಿತರಿಬ್ಬರು ಹರ್ಷದ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಬಳಿಕ ಹಕೀಂ ಆಸ್ಪತ್ರೆ ವೈದ್ಯರ ಬಳಿ ಹರ್ಷದ್ ಮೇಲ್ಛಾವಣಿಯಿಂದ ಬಿದ್ದಿದ್ದರಿಂದ ಈ ರೀತಿ ಆಗಿದೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಗಂಭೀರಗಾಯಗೊಂಡಿದ್ದ ಹರ್ಷದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಕೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡ ಹಕ್ಕಿಂನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕ್ವಾರಂಟೈನ್ ಮುಗಿಸಿ ಬೇಟೆ ಆರಂಭಿಸಿದ ಚೀತಾಗಳು – ಮೋದಿ ಸಂತಸ

    Live Tv
    [brid partner=56869869 player=32851 video=960834 autoplay=true]

  • ವಿವಾಹಿತೆಯೊಂದಿಗಿನ ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಂದ ಮಗ

    ವಿವಾಹಿತೆಯೊಂದಿಗಿನ ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಂದ ಮಗ

    ಮುಂಬೈ: ಮದುವೆಯಾಗಿದ್ದ ತನ್ನ ಸೋದರಸಂಬಂಧಿ ಜೊತೆಗೆ ಹೊಂದಿದ್ದ ಅಕ್ರಮ ಸಂಬಂಧವನ್ನು ತಿರಸ್ಕರಿಸಿದ ತಾಯಿಯನ್ನು ಮಗನೇ ಹತ್ಯೆಗೈದಿರುವ ಘಟನೆ ಭಿವಂಡಿಯ ಕಲ್ಹೇರ್ ಪ್ರದೇಶದಲ್ಲಿ ನಡೆದಿದೆ.

    ಸೆಪ್ಟೆಂಬರ್ 20ರ ಮಂಗಳವಾರದಂದು ಈ ಘಟನೆ ನಡೆದಿದ್ದು, ಆರೋಪಿಗಳನ್ನು ಕೃಷ್ಣ ಅಂಬಿಕಾಪ್ರಸಾದ್ ಯಾದವ್ (29)  ಮತ್ತು ಬಬಿತಾ ಯಾದವ್ ಎಂದು ಗುರುತಿಸಲಾಗಿದೆ. ನಿದ್ದೆ ಮಾಡುತ್ತಿದ್ದಾಗ ವ್ಯಕ್ತಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ (Narpoli police station) ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಭಿವಂಡಿ ಮದನ್ ಬಲ್ಲಾಳ್  ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಳಿಕ ಈಗ ಜಿಲ್ಲೆಗಳಿಗೂ ನುಗ್ಗಿದ ಬುಲ್ಡೋಜರ್‌ – ವಿಜಯನಗರದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

    ಅಮರಾವತಿ ಯಾದವ್ (58) (Amravati Yadav) ಮೃತ ಮಹಿಳೆ. ಅಮರಾವತಿ ಯಾದವ್ ಮಲಗಿದ್ದ ವೇಳೆ ರೂಮ್‍ಗೆ ಏಕಾಏಕಿ ನುಗ್ಗಿದ ಆರೋಪಿ ಮತ್ತು ಆತನ ಪ್ರಿಯತಮೆ ಬಬಿತಾ ಬೆಲ್ಟ್‌ನಿಂದ ಕತ್ತು ಹಿಸುಕಿ ಮಹಿಳೆಯ ಹತ್ಯೆಗೈದಿದ್ದಾರೆ. ನಂತರ ಶವವನ್ನು ರೂಮ್‍ನ ಬಾತ್‍ರೂಂನಲ್ಲಿ ಇರಿಸಿದ್ದರು. ಆದರೆ ಕಟ್ಟಡದಿಂದ ಜಿಗಿದು ಶವವನ್ನು ಹೊರಗೆ ಎಸೆಯುವಂತೆ ಪ್ರಿಯತಮೆ ತಿಳಿಸಿದ್ದು, ಆರೋಪಿ ಶವವನ್ನು ಕಟ್ಟಡದಿಂದ ಹೊರಗೆ ಎಸೆಯುತ್ತಿದ್ದಂತೆ ಸ್ಥಳಕ್ಕೆ ಆತನ ತಂದೆ ಆಗಮಿಸಿದ್ದಾರೆ. ಈ ವೇಳೆ ಆರೋಪಿ ಪ್ರಜ್ಞೆ ತಪ್ಪಿದಂತೆ ನಟಿಸಿದ್ದಾನೆ. ನಂತರ ಆತನ ತಂದೆ ಮತ್ತು ಕಿರಿಯ ಸಹೋದರ ಶವವನ್ನು ಮನೆಗೆ ತಂದು, ಈ ಬಗ್ಗೆ ಪ್ರಶ್ನಿಸಿದಾಗ, ಕಳ್ಳರ ಗ್ಯಾಂಗ್ ದರೋಡೆ ಮಾಡಲು ಮನೆಗೆ ನುಗ್ಗಿದ್ದರು. ಈ ವೇಳೆ ಗಲಾಟೆಯಲ್ಲಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಥೆ ಕಟ್ಟಿದ್ದಾನೆ.

    crime

    ಬಳಿಕ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹಿಳೆಯ ಕುತ್ತಿಗೆಯ ಸುತ್ತಾ ಗಾಯವಾಗಿರುವುದು ಕಂಡು ಬಂದಿದೆ. ಅಲ್ಲದೇ ಹಣೆಯ ಮೇಲೂ ಹೊಡೆದಿರುವ ಗಾಯದ ಗುರುತುಗಳು ಪತ್ತೆಯಾಗಿದೆ. ಇದರಿಂದ ಕೃಷ್ಣ ಯಾದವ್‍ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲೆಂದು ಮೂರ್ನಾಲ್ಕು ಜನರು ಬಂದಾಗ ಅಡ್ಡಿಪಡಿಸಿದ ತನ್ನ ತಾಯಿಯನ್ನು ಕೊಂದಿದ್ದಾರೆ ಎಂದು ಹೇಳಿದ್ದಾನೆ.

    ಇದರಿಂದ ಅನುಮಾನಗೊಂಡ ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ ಕೃಷ್ಣ ಯಾದವ್ ತನ್ನ ಸಂಬಂಧಿ ಬಬಿತಾ ಪಲ್ತುರಾಮ್ ಯಾದವ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ತಿಳಿದು ಬಂದಿದೆ. ನಂತರ ಪೊಲೀಸರು ತಮ್ಮ ಸ್ಟೈಲ್‍ನಲ್ಲಿಯೇ ತನಿಖೆ ಆರಂಭಿಸಿದಾಗ ಕೃಷ್ಣ ಯಾದವ್ ತಾನೇ ತನ್ನ ತಾಯಿಯ ಹತ್ಯೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಗ್ಯಾಂಗ್‌ಸ್ಟಾರ್‌ ವಿರುದ್ಧ ಜೆಸಿಬಿ ಘರ್ಜನೆ – 4 ಕೋಟಿ ಮೌಲ್ಯದ 4 ಮಹಡಿಯ ಮನೆ ನೆಲಸಮ

    ಇದೀಗ ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಂಬಂಧಿ ಸಾವಿನಿಂದ ಮನನೊಂದು ಚಿತೆಗೆ ಹಾರಿ ಪ್ರಾಣ ಕಳ್ಕೊಂಡ

    ಸಂಬಂಧಿ ಸಾವಿನಿಂದ ಮನನೊಂದು ಚಿತೆಗೆ ಹಾರಿ ಪ್ರಾಣ ಕಳ್ಕೊಂಡ

    ಭೋಪಾಲ್: ತನ್ನ ಸೋದರ ಸಂಬಂಧಿಯ ಸಾವಿನಿಂದ ಮನನೊಂದ ವ್ಯಕ್ತಿಯೋರ್ವ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಶುಕ್ರವಾರ ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆ ಬಾವಿಗೆ ಜಾರಿ ಸಾವನ್ನಪ್ಪಿದ್ದಾರೆ. ಆಕೆಯ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು. ಚಿತೆಗೆ ಬೆಂಕಿ ಹಚ್ಚಿದ ನಂತರ ಸಂಬಂಧಿಕರು ತಮ್ಮ, ತಮ್ಮ ಮನೆಗಳಿಗೆ ತೆರಳಿದರು. ಸ್ವಲ್ಪ ಸಮಯದ ನಂತರ ಸ್ಮಶಾನಕ್ಕೆ ಸೋದರಸಂಬಂಧಿ ಕರಣ್(21) ಆಗಮಿಸಿದರು. ಇದನ್ನು ಕಂಡ ಕೂಡಲೇ ಗ್ರಾಮಸ್ಥರು ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕರಣ್ ಚಿತೆಗೆ ಹಾರಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: UP ಸಿಎಂ ಅಲಹಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ: ಓವೈಸಿ ಕಿಡಿ

    ಭಾನುವಾರ ಬೆಳಗ್ಗೆ ಕರಣ್ ಅಂತ್ಯ ಸಂಸ್ಕಾರವನ್ನು ಜ್ಯೋತಿ ಚಿತಾಗಾರದ ಬಳಿ ನೆರವೇರಿಸಲಾಯಿತು. ಇದೀಗ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಬಹೇರಿಯಾ ಪೊಲೀಸ್ ಠಾಣೆಯ ಇನ್‍ಚಾರ್ಜ್ ದಿವ್ಯಾ ಪ್ರಕಾಶ್ ತ್ರಿಪಾಠಿ ತಿಳಿದ್ದಾರೆ. ಇದನ್ನೂ ಓದಿ:  ಡ್ರಗ್ಸ್ ಕೇಸ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ನಟ ಸಿದ್ಧಾಂತ್ ಕಪೂರ್ ಬಂಧನ

  • ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ವಿಡಿಯೋ ತೋರಿಸಿ ಅಪ್ರಾಪ್ತೆ ಮೇಲೆ 4 ವರ್ಷ ಅತ್ಯಾಚಾರ ಮಾಡಿದ್ರು..!

    ಹೈದರಾಬಾದ್: ಅತ್ಯಚಾರವೆಸೆಗಿದ ವಿಡಿಯೋ ತೋರಿಸಿ ಆರೋಪಿಗಳು 16 ವರ್ಷದ ಬಾಲಕಿಯೊಬ್ಬಳ ಮೇಲೆ 4 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಹೈದರಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    4 ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಸಂಬಂಧಿಕನೊಬ್ಬ ಅತ್ಯಚಾರವೆಸೆಗಿದ್ದ. ಅಲ್ಲದೆ ಆ ದೃಶ್ಯಗಳನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ. ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಬಾಲಕಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಆದ್ರೆ ಈ ಯಾವ ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿರಲಿಲ್ಲ.

    ಆ ವಿಡಿಯೋವೊಂದನ್ನೇ ಇಟ್ಟುಕೊಂಡು ಪಾಪಿಗಳು ಬಾಲಕಿ ಮೇಲೆ ಸತತ 4 ವರ್ಷಗಳಿಂದ ಅತ್ಯಚಾರ ಎಸಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಕಿರುಕುಳ ತಾಳಲಾರದೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಬಾಲಕಿ, ತನ್ನ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟನು. ಬಳಿಕ ತನ್ನ ಮೇಲೆ ಅತ್ಯಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ತನ್ನ ಮೇಲೆ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆ ಅಂತ ಹೇಳಿದ್ದಾಳೆ.

    ಈ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆ ಮನೆಯವರು ಪ್ರತಿಭಟನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಕೇವಲ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರದಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 16 ಬಾಲೆಯ ಮೇಲೆ ತಂದೆ, ಆತನ ಸಹೋದರನಿಂದ ಗ್ಯಾಂಗ್ ರೇಪ್

    16 ಬಾಲೆಯ ಮೇಲೆ ತಂದೆ, ಆತನ ಸಹೋದರನಿಂದ ಗ್ಯಾಂಗ್ ರೇಪ್

    ಲಕ್ನೋ: 16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂಧ್ಲಾ ಪಟ್ಟಣದಲ್ಲಿ ನಡೆದಿದೆ.

    ಕಂಧ್ಲಾ ನಿವಾಸಿಗಳಾದ ವಾಸೀಮ್ ಹಾಗೂ ತನ್ವೀರ್ ಅತ್ಯಾಚಾರ ಎಸಗಿದ ಆರೋಪಿಗಳು. ಬಾಲಕಿಯ ಮೇಲೆ ಇಬ್ಬರು ಸೇರಿ ಶನಿವಾರ ಅತ್ಯಾಚಾರ ಎಸಗಿ ಪರಾರಿಯಗಿದ್ದಾರೆ. ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.

    ಏನಿದು ಪ್ರಕರಣ?:
    ದೂರು ನೀಡಿದ ಮಹಿಳೆಯ ಪತಿ 2018ರ ಅಕ್ಟೋಬರ್ ನಲ್ಲಿ ನಿಧರಾಗಿದ್ದರು. ಬಳಿಕ ವಾಸೀಮ್ ಜೊತೆಗೆ ಮದುವೆಯಾಗಿದ್ದ ಆಕೆಯು 16 ವರ್ಷದ ಮಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಳು. ಆರೋಪಿಗಳಾದ ವಾಸೀಮ್ ಮತ್ತು ತನ್ವೀರ್ ಇಬ್ಬರು ಸೇರಿ ನಿನ್ನೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.

    ಅತ್ಯಾಚಾರ ಮಾಡಿರುವ ಕುರಿತು ಯಾರಿಗೂ ಹೇಳದಂತೆ ಮಗಳಿಗೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಅಂತ ಆರೋಪಿಗಳು ಹೇಳಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಆರಂಭವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv