Tag: courts

  • ಮಹಿಳೆಯರು ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ – ಕಲಾಪಕ್ಕೆ ಅಡ್ಡಿಯಾಗುತ್ತೆ ಎಂದ ಕೋರ್ಟ್

    ಮಹಿಳೆಯರು ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ – ಕಲಾಪಕ್ಕೆ ಅಡ್ಡಿಯಾಗುತ್ತೆ ಎಂದ ಕೋರ್ಟ್

    ಮುಂಬೈ: ಮಹಿಳಾ ವಕೀಲರು ಮುಕ್ತ ನ್ಯಾಯಾಲಯದಲ್ಲಿ (Open Court) ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳದಿರಿ. ಇದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ ಎಂಬ ವಿಲಕ್ಷಣ ಪ್ರಕಟಣೆಯೊಂದನ್ನು ಪುಣೆ ಜಿಲ್ಲಾ ನ್ಯಾಯಾಲಯ (Pune District Court) ಹೊರಡಿಸಿತ್ತು.

    ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆದಿದೆ. ಮಹಿಳಾ ವಕೀಲರು (Women Advocates) ಓಪನ್ ಕೋರ್ಟ್‌ನಲ್ಲಿ ಪದೇಪದೆ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು

    ನ್ಯಾಯಾಲಯದ ಸೌಹಾರ್ದತೆಯನ್ನು ಕಾಪಾಡಲು ಮಾತ್ರ ನೋಟಿಸ್ ನೀಡಲಾಗಿದೆಯೇ ಹೊರತು ಯಾರನ್ನೂ ನೋಯಿಸಲು ಮಾಡಿಲ್ಲ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನೋಟಿಸ್ ಹಿಂಪಡೆದಿರುವುದಾಗಿ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಅವರಿಗೆ ಗಂಡೆದೆ ಇದೆ – ಆರ್.ಅಶೋಕ್

    Law

    ಪ್ರಕಟಣೆ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ `ವಾವ್, ಈಗ ಇಲ್ಲಿ ನೋಡಿ, ಮಹಿಳಾ ವಕೀಲರಿಂದ ಯಾರು ವಿಚಲಿತರಾಗಿದ್ದಾರೆ’ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಮೋದಿ ಕರೆ

    ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಮೋದಿ ಕರೆ

    ನವದೆಹಲಿ: ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಬೇಕು. ಇದು ನ್ಯಾಯಾಂಗ ವ್ಯವಸ್ಥೆ ಮೇಲೆ ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

    ಜೈಲುಗಳಲ್ಲೇ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡಿ ಕಾನೂನು ಪ್ರಕಾರ, ಮಾನವ ಸಂವೇದನೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮೋದಿ ಮನವಿ ಮಾಡಿದರು. ನ್ಯಾಯಾಂಗ ಸುಧಾರಣೆ ಕೇವಲ ನೀತಿ ವಿಷಯವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

    MODi

    ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿದ್ದು, ಈ ಪ್ರಕರಣಗಳನ್ನು ಪರಿಶೀಲಿಸಬಹುದು. ಸಾಧ್ಯವಾದಲ್ಲೆಲ್ಲ ಅಂತಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದಾರೆ.

    “2015 ರಲ್ಲಿ, ನಾವು ಅಪ್ರಸ್ತುತವಾದ ಸುಮಾರು 1,800 ಕಾನೂನುಗಳನ್ನು ಗುರುತಿಸಿದ್ದೇವೆ. ಇವುಗಳಲ್ಲಿ ಕೇಂದ್ರಕ್ಕೆ ಸಂಬಂಧಿಸಿದ 1,450 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಅಂತಹ 75 ಕಾನೂನುಗಳನ್ನು ಮಾತ್ರ ರಾಜ್ಯಗಳು ರದ್ದುಪಡಿಸಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ವಿದ್ಯುತ್ ಸಮಸ್ಯೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ: ಚಿದಂಬರಂ ವ್ಯಂಗ್ಯ

    court order law

    ನಮ್ಮ ದೇಶದಲ್ಲಿ, ನ್ಯಾಯಾಂಗದ ಪಾತ್ರವು ಸಂವಿಧಾನದ ರಕ್ಷಕನದ್ದಾಗಿದೆ. ಶಾಸಕಾಂಗವು ನಾಗರಿಕರ ಆಶಯಗಳನ್ನು ಪ್ರತಿನಿಧಿಸುತ್ತದೆ. ಇವೆರಡರ ಸಂಗಮವು ದೇಶದಲ್ಲಿ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ನವದೆಹಲಿ: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯಿಸಿದ್ದಾರೆ.

    ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮೊದಲನೆಯದಾಗಿ ಇದು ಕುರಾನ್‌ ಪ್ರಕಾರ ಧಾರ್ಮಿಕ ಆಚರಣೆಯಲ್ಲ. ಎರಡನೆಯದಾಗಿ, ವಿದ್ಯಾರ್ಥಿಯು ಸಂಸ್ಥೆಯನ್ನು ಪ್ರವೇಶಿಸಿದಾಗ ಅಲ್ಲಿನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ನಾನು ಮಹಿಳಾ ಹಕ್ಕುಗಳ ಕಟ್ಟಾ ಬೆಂಬಲಿಗಳಾಗಿದ್ದೇನೆ. ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು. ಆದರೆ ಸಂಸ್ಥೆಯಲ್ಲಿ ಏಕರೂಪದ ಸಂಹಿತೆ ಇದ್ದರೆ, ಅದನ್ನು ಅನುಸರಿಸಬೇಕು ಎಂಬುದನ್ನು ನಾನು ಬಲವಾಗಿ ಪ್ರತಿಪಾದಿಸುತ್ತೇನೆ. ವಿದ್ಯಾರ್ಥಿಗಳನ್ನು ಧರ್ಮ, ಜಾತಿ, ಪಂಥ ಎಂದು ವಿಂಗಡಿಸಬಾರದು. ಪ್ರತಿಭಟನಾನಿರತ ವಿದ್ಯಾರ್ಥಿಗಳು ತರಗತಿಗಳಿಗೆ ಹಿಂತಿರುಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಹಿಜಬ್‌ ವಿವಾದ ಕುರಿತು ಹೈಕೋರ್ಟ್‌ ತೀರ್ಪಿನ ಬಗ್ಗೆ ಎಲ್ಲೆಡೆ ಪರ-ವಿರೋಧದ ಚರ್ಚೆ ಎದ್ದಿದೆ. ಅನೇಕರು ತೀರ್ಪನ್ನು ಬೆಂಬಲಿಸಿಯೂ ಇನ್ನೂ ಅನೇಕರು ತೀರ್ಪಿನ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ವಕ್ಫ್‌ ಬೋರ್ಡ್‌ ಹಾಗೂ ಇತರೆ ಸಂಘಟನೆಗಳು ಮುಂದಾಗಿವೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ