Tag: court

  • ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ

    ಅಸ್ತಿ ವಿಸರ್ಜನೆಯಿಂದ ಕಾವೇರಿ ನದಿ ಮಲಿನ – ವೈಜ್ಞಾನಿಕವಾಗಿ ಅಸ್ತಿ ಬಿಡಲು ಯೋಜನೆ ರೂಪಿಸುವಂತೆ ಕೋರ್ಟ್ ನಿರ್ದೇಶನ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ (Srirangapatna Cauvery River) ಪಾತ್ರದಲ್ಲಿ ಸಾರ್ವಜನಿಕರು ಅವೈಜ್ಞಾನಿಕವಾಗಿ ಅಸ್ತಿ ವಿಸರ್ಜನೆ ಮಾಡುತ್ತಿರುವುದರಿಂದ ನದಿ ಕಲುಷಿತವಾಗುತ್ತಿದ್ದು, ಇದನ್ನು ಸರಿಪಡಿಸಲು ಯೋಜನೆ ರೂಪಿಸಿ ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನವಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ.

    ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಡಿಸಿ ಡಾ.ಕುಮಾರ್, ಕಾವೇರಿ ನದಿಯಲ್ಲಿ ಕೋರ್ಟ್ ನಿರ್ದೇಶನದ ಬಗ್ಗೆ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಅವೈಜ್ಞಾನಿಕವಾಗಿ ಅಸ್ತಿ ಬಿಡುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ ವೈಜ್ಞಾನಿಕವಾಗಿ ವಿಸರ್ಜನೆ ಮಾಡುವ ಕುರಿತು ಅಧಿಕಾರಿಗಳ ಸಮಿತಿ ರಚಿಸಿದ್ದು, ನೈಸರ್ಗಿಕವಾಗಿ ವಿಘಟವಾಗುವ ರೀತಿ ಅಸ್ತಿ ವಿಸರ್ಜನೆಗೆ ಬೇಕಿರುವ ಯಂತ್ರಗಳ ಕುರಿತಂತೆ ತಾಂತ್ರಿಕ ತಜ್ಙರಿಂದ ವರದಿ ಪಡೆದು ಡಿ.ಪಿ.ಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

  • ಮಸಾಜ್ ಪಾರ್ಲರ್ ಮೇಲೆ ದಾಳಿ – ರಾಮ್ ಸೇನಾ ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ

    ಮಸಾಜ್ ಪಾರ್ಲರ್ ಮೇಲೆ ದಾಳಿ – ರಾಮ್ ಸೇನಾ ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ

    ಮಂಗಳೂರು: ಮಸಾಜ್ ಪಾರ್ಲರ್ (Massage Parlor) ಮೇಲೆ ದಾಳಿ ನಡೆಸಿದ್ದ ಆರೋಪಿಗಳಿಗೆ ಮಂಗಳೂರು (Mangaluru) ಜೆಎಂಎಫ್‍ಸಿ 6ನೇ ಕೋರ್ಟ್ (Court) 14 ದಿನಗಳ ಕಾಲ (ಫೆ.7ರ ವರೆಗೆ) ನ್ಯಾಯಾಂಗ ಬಂಧನ ವಿಧಿಸಿದೆ.

    ರಾಮ್ ಸೇನಾ (Ram Sena) ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 14 ಆರೋಪಿಗಳನ್ನು ಬರ್ಕೆ ಪೊಲೀಸರು ಇಂದು (ಶುಕ್ರವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ಮಸಾಜ್ ಪಾರ್ಲರ್ ಮೇಲೆ ರಾಮ್ ಸೇನಾ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದರು. ಈ ವೇಳೆ ಮಸಾಜ್ ಪಾರ್ಲರ್‌ನಲ್ಲಿ ಮೂವರು ಯುವತಿಯರು ಹಾಗೂ ಓರ್ವ ಯುವಕ ಇದ್ದರು. ಯುವಕನ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿ, ಪೀಠೋಪಕರಣ ಧ್ವಂಸ ಮಾಡಿದ್ದರು.

    ಈ ಸಂಬಂಧ ಸಂಘಟನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಸೇರಿದಂತೆ ಕಾರ್ಯಕರ್ತರಾದ ಹರ್ಷ ರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇಶ್, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್ ಮತ್ತು ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು.

    ಆರೋಪಿಗಳ ವಿರುದ್ಧ ಬಿಎನ್‍ಎಸ್ ಆಕ್ಟ್ 329(2), 324(5), 74, 351(3), 115(2), 109, 352, 190 ಅಡಿ ಪ್ರಕರಣ ದಾಖಲಾಗಿದೆ.

  • ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ: ಪ್ರೀತಿಸುವಂತೆ (Love) ಯುವತಿಗೆ ಪೀಡಿಸಿದ್ದ ಯುವಕನಿಗೆ ದಾವಣಗೆರೆಯ (Davangere) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

    ನಗರದ ಎಸ್‌ಓಜಿ ಕಾಲನಿ ಸಿ ಬ್ಲಾಕ್ ನಿವಾಸಿಯಾದ ನವೀನ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 2021ರ ಜೂ.19 ರಂದು ಹದಡಿ ರಸ್ತೆಯ ಮಾಲ್ ಮುಂಭಾಗ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದ ಯುವತಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಅವಾಜ್‌ ಹಾಕಿದ್ದ. ಅಲ್ಲದೇ ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ಲಾಂಗ್‌ನಿಂದ ಹಲ್ಲೆ ಮಾಡಿದ್ದ. ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಳು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನವೀನ್‌ ವಿರುದ್ಧ ದೂರು ದಾಖಲಾಗಿತ್ತು.

    ಪೊಲೀಸ್‌ ಅಧಿಕಾರಿ ರೂಪಾ ತೆಂಬದ್ ತನಿಖೆ ಮಾಡಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಅಪರಾಧಿಗೆ 3 ತಿಂಗಳು ಜೈಲು ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ತೀಪು ನೀಡಿದ್ದಾರೆ.

    ಆರೋಪಿಯು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಈ ಬಂಧನದ ಅವಧಿಯನ್ನು ಪರಿಗಣಿಸಿ, ಶಿಕ್ಷಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಅಪರಾಧಿಯಿಂದ ವಸೂಲು ಮಾಡಿದ 10 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರ ನೀಡಲು, ಉಳಿದ 5 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ.

    ಸರ್ಕಾರದ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು.

  • ಕೋಲ್ಕತ್ತಾ ರೇಪ್‌ ಕೇಸ್‌ | ಮಗನನ್ನು ಗಲ್ಲಿಗೇರಿಸಿದ್ರೂ ಬೇಸರ ಇಲ್ಲ: ಸಂಜಯ್ ತಾಯಿ

    ಕೋಲ್ಕತ್ತಾ ರೇಪ್‌ ಕೇಸ್‌ | ಮಗನನ್ನು ಗಲ್ಲಿಗೇರಿಸಿದ್ರೂ ಬೇಸರ ಇಲ್ಲ: ಸಂಜಯ್ ತಾಯಿ

    ಕೋಲ್ಕತ್ತಾ: ಆರ್‌ಜಿ ಕರ್ (RG Kar Case) ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್‌ನ ತಾಯಿ ಮಾಲತಿ ರಾಯ್ ಭಾನುವಾರ ತಮ್ಮ ಮಗ ತಪ್ಪಿತಸ್ಥನಾಗಿದ್ದರೆ ಗಲ್ಲಿಗೆ ಏರಿಸಿದರೂ ಬೇಸರ ಇಲ್ಲ ಎಂದು ಹೇಳಿದ್ದಾರೆ.

    ಸೀಲ್ಡಾ ನ್ಯಾಯಾಲಯವು (Court) ಸಂಜಯ್‌ನನ್ನು ದೋಷಿ ಎಂದು ತೀರ್ಪು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವೇಳೆ, ನಾನು ಒಂಟಿಯಾಗಿದ್ದಾಗ ಅಳುತ್ತೇನೆ, ಆದರೆ ಅವನ ಶಿಕ್ಷೆಯನ್ನು ವಿಧಿ ಎಂದು ಸ್ವೀಕರಿಸುತ್ತೇನೆ. ಮಹಿಳೆಯಾಗಿ ಮತ್ತು ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ನನ್ನ ಮಗಳಂತಿರುವ ಮಹಿಳಾ ವೈದ್ಯೆಯ ತಾಯಿಯ ಯಾತನೆ ಮತ್ತು ನೋವನ್ನು ನಾನು ಅನುಭವಿಸಬಲ್ಲೆ. ಅವನ ಅಪರಾಧವು ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿರುವುದರಿಂದ ನನಗೆ ಯಾವುದೇ ಆಕ್ಷೇಪವಿಲ್ಲ ಎಂದಿದ್ದಾರೆ.

    ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಜೈಲಿನಲ್ಲಿ ಮಗನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ, ಇಲ್ಲ, ನಾನು ಏಕೆ ಭೇಟಿ ಮಾಡಬೇಕು? ಆರೋಪಗಳು ಸುಳ್ಳು ಎಂದು ಕಂಡುಬಂದಿದ್ದರೆ ನಾನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ.

    ಸಂಜಯ್‌ ಸಹೋದರಿ ಪ್ರತಿಕ್ರಿಯಿಸಿ, ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನು ಅವನಿಗೆ ಶಿಕ್ಷೆ ನೀಡಲಿ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಿದ್ದಾರೆ.

    ಏನಿದು ಪ್ರಕರಣ?
    ಕಳೆದ ಆಗಸ್ಟ್‌ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4 ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

  • ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಚಿಕ್ಕಮಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು ಶರಣಾದ ಆರು ಜನ ನಕ್ಸಲರನ್ನು (Naxalites) ಚಿಕ್ಕಮಗಳೂರು (Chikkamagaluru) ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ (Health) ತಪಾಸಣೆಗೆ ಒಳಪಡಿಸಲಾಗಿದೆ.

    ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಆರೂ ಮಂದಿ ನಕ್ಸಲರನ್ನು ಗುರುವಾರ ರಾತ್ರಿಯೇ ನಗರಕ್ಕೆ ಕರೆತರಲಾಗಿತ್ತು. ಅವರನ್ನು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್‌ಪಿ ಡಾ.ವಿಕ್ರಮ್ ಅಮಟೆ ಅವರು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಅವರನ್ನು ಎಸ್‌ಪಿ ಅವರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

    ಆರೋಗ್ಯ ತಪಾಸಣೆ ವೇಳೆ ಸಣ್ಣಪುಟ್ಟ ನೋವುಗಳ ಬಗ್ಗೆ ವೈದ್ಯರ ಬಳಿ ನಕ್ಸಲರು ಹೇಳಿಕೊಂಡಿದ್ದಾರೆ. ಮುಂಡಗಾರು ಲತಾಗೆ ಥೈರಾಯ್ಡ್ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾರೆ. ಇನ್ನೊಬ್ಬರಿಗೆ ಕೈ ಮೇಲೆ ಗನ್ ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿಪಿ, ಶುಗರ್ ಇರುವುದು ಕೂಡ ಪತ್ತೆಯಾಗಿದೆ.

    ನಕ್ಸಲರ ವಿಚಾರಣೆ ನಡೆಸುವ ಹಿನ್ನೆಲೆ ಎನ್ಐಎ ಕೋರ್ಟ್‌ನಿಂದ ಅನುಮತಿ ಪಡೆದು ನಗರಕ್ಕೆ ಕರೆತರಲಾಗಿದೆ. ಶರಣಾದವರ ಪೈಕಿ ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ ನಾಲ್ವರ ಮೇಲೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಮುಂಡಗಾರು ಲತಾ ವಿರುದ್ಧ 33, ವನಜಾಕ್ಷಿ ವಿರುದ್ಧ 15 ಹಾಗೂ ಸುಂದರಿ ಮತ್ತು ಜಯಣ್ಣ ವಿರುದ್ಧ ತಲಾ 3 ಪ್ರಕರಣಗಳಿವೆ.

    ವಸಂತ್ ಹಾಗೂ ಜಿಶಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ತನಿಖಾಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಹೋಗದಿರುವ ಹಿನ್ನೆಲೆಯಲ್ಲಿ ಆರೂ ಮಂದಿ ಡಿಆರ್ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. 14 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ನಕ್ಸಲರ ವಿರುದ್ಧದ ಪ್ರಕರಣಗಳ ಬಗ್ಗೆ ನಗರದಲ್ಲಿಯೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಅಕ್ರಮ ಬಂದೂಕಿನ ಪ್ರಕರಣದ ವಿಚಾರಣೆ ಇಲ್ಲ
    ಜಯಪುರ ಸಮೀಪ ಕಿತ್ತಲೆಗಂಡಿ ಅರಣ್ಯದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದ ಬಂದೂಕುಗಳ ಬಗ್ಗೆ ಈಗ ಯಾವುದೇ ವಿಚಾರಣೆ ನಡೆಯುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಬಂದೂಕುಗಳ ಕುರಿತು ತನಿಖೆ ನಡೆಯುತ್ತದೆ ಎನ್ನಲಾಗುತ್ತಿದೆ. ಬಂದೂಕು, ಮದ್ದುಗುಂಡುಗಳು ಪತ್ತೆಯಾದಾಗ ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

  • ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್‌ ರೇವಣ್ಣ

    ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್‌ ರೇವಣ್ಣ

    ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ (Rape Case) ಸಂಬಂಧಿಸಿದಂತೆ ಮುಚ್ಚಿದ ಕೋರ್ಟ್‌ನಲ್ಲಿ ಇಂದು (ಜ.18) ಹಾಸನದ ಮಾಜಿ ಸಂಸದ  ಪ್ರಜ್ವಲ್‌ ರೇವಣ್ಣ (Prajal Revanna), ಪ್ರಜ್ವಲ್‌ ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.

    ಇಂದು ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ (Special Courts for MP/MLA) ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ಅವರನ್ನು ಪೊಲೀಸರು ಕರೆ ತಂದ ಬಳಿಕ ವಿಚಾರಣೆ ಆರಂಭವಾಯಿತು. ಈ ವೇಳೆ ಮಾಧ್ಯಮದವರಿಗೆ ಸುದ್ದಿಗಳನ್ನು ಪ್ರಕಟ ಮಾಡದಂತೆ ನಿರ್ದೇಶಿಸಬೇಕೆಂದು ಪ್ರಜ್ವಲ್‌ ಪರ ವಕೀಲ ಅರುಣ್ ಮನವಿ ಮಾಡಿದರು.

    ಇದಕ್ಕೆ ನ್ಯಾಯಧೀಶರು ಮಾಧ್ಯಮವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಎಸ್‌ಪಿಪಿ ಮೀಡಿಯಾದವರು ಇಂಜಕ್ಷನ್‌ ತಂದಿರುವ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

    court order law

    ನಂತರ ತಾಂತ್ರಿಕ ತಜ್ಞರು ಬಂದಿಲ್ಲ. ಹೀಗಾಗಿ ವಿಡಿಯೋ ವೀಕ್ಷಣೆಗೆ ಮತ್ತೊಂದು ದಿನಾಂಕ ನೀಡಬೇಕೆಂದು ಪ್ರಜ್ವಲ್‌ ಪರ‌ ವಕೀಲ ಅರುಣ್ ಮನವಿ ಮಾಡಿದರು. ಇದಕ್ಕೆ ಗರಂ ಆದ ಜಡ್ಜ್‌, ಸಮಯ ವಿಸ್ತರಣೆ ಮಾಡಲು ಏನು ಮಾಡಬೇಕು ಅದನ್ನು ಮಾಡುತ್ತಾ ಇದ್ದೀರಿ. ಬೇಕಾದರೆ ಮಹಿಳಾ ನ್ಯಾಯಾಧೀಶರು ಬೇಕು ಎಂದು ಅರ್ಜಿ ಹಾಕಿ ನನ್ನದೇನು ಅಭ್ಯಂತರವಿಲ್ಲ ಎಂದರು. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    ಕೊನೆಗೆ ಪ್ರಜ್ವಲ್‌ ರೇವಣ್ಣ, ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ಮುಚ್ಚಿದ ಕೋರ್ಟ್‌ನಲ್ಲಿ ವಿಡಿಯೋವನ್ನು ವೀಕ್ಷಣೆ ಮಾಡಲು ತೆರಳಿದರು.  ಈ ವೇಳೆ ಎಸ್‌ಪಿಪಿ, ಪ್ರಕರಣದ ತನಿಖಾಧಿಕಾರಿ ಹೊರತು ಪಡಿಸಿ ಬೇರೆ ಯಾರಿಗೂ  ಮುಚ್ಚಿದ ಕೋರ್ಟ್‌ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ.

    ತನ್ನ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,000 ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಹಾಗೂ ಪ್ರಕರಣದಿಂದ ತನ್ನನ್ನು ಖುಲಾಸೆ ಮಾಡುವಂತೆ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌, ಇತರೇ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು ಎಂದು ಅಭಿಪ್ರಾಯಪಟ್ಟು ಚಾಟಿ ಬೀಸಿತ್ತು.

    ಮೊಬೈಲ್ ಕೊಡಲಾಗುವುದಿಲ್ಲ. ಆದರೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್‌ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ ಎಂದು ಕೋರ್ಟ್‌ ಸೂಚಿಸಿತ್ತು. ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಈ ಅರ್ಜಿಯನ್ನು ಇತ್ಯರ್ಥ ಮಾಡಿತ್ತು.

     

  • ನಾಜಿ ಸಿದ್ಧಾಂತದ ಸರ್ಕಾರಕ್ಕಾಗಿ ಶ್ವೇತಭವನದ ಮೇಲೆ ದಾಳಿ – ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು

    ನಾಜಿ ಸಿದ್ಧಾಂತದ ಸರ್ಕಾರಕ್ಕಾಗಿ ಶ್ವೇತಭವನದ ಮೇಲೆ ದಾಳಿ – ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು

    ವಾಷಿಂಗ್ಟನ್: ಶ್ವೇತಭವನದ (White House) ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪದ ಮೇಲೆ ಗುರುವಾರ ಭಾರತೀಯ ಮೂಲದ ಸಾಯಿ ವರ್ಷಿತ್ ಕಂದುಲಾ (20) ಎಂಬಾತನಿಗೆ ಅಮೆರಿಕದ (America) ನ್ಯಾಯಾಲಯ (Court) 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    2023 ರ ಮೇ 22 ರಂದು ಸಾಯಿ ವರ್ಷಿತ್‌ ಬಾಡಿಗೆ ಟ್ರಕ್ ಬಳಸಿ ಶ್ವೇತಭವನದ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಚುನಾಯಿತ ಅಮೇರಿಕನ್ ಸರ್ಕಾರವನ್ನು ಉರುಳಿಸಿ, ನಾಜಿ ಸಿದ್ಧಾಂತದ ಸರ್ವಾಧಿಕಾರವನ್ನು ಸ್ಥಾಪಿಸುವುದು ಈ ದಾಳಿಯ ಗುರಿಯಾಗಿದೆ. ಅಲ್ಲದೇ ಆತ ಸರ್ಕಾರಿ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದ ಎಂದು ಆತನ ಮೇಲೆ ಆರೋಪಿಸಲಾಗಿತ್ತು. ಆತ 2024ರ ಮೇ 13 ರಂದು ತಪ್ಪೊಪ್ಪಿಕೊಂಡಿದ್ದ.

    ನ್ಯಾಯಾಲಯದ ದಾಖಲೆಗಳ ಪ್ರಕಾರ, 2023ರ ಮೇ 22 ರಂದು ಮಧ್ಯಾಹ್ನ ಮಿಸೌರಿಯ ಸೇಂಟ್ ಲೂಯಿಸ್‌ನಿಂದ ವಾಷಿಂಗ್ಟನ್ ಡಿ.ಸಿ.ಗೆ ವಾಣಿಜ್ಯ ವಿಮಾನದಲ್ಲಿ ವರ್ಷಿತ್ ಬಂದಿದ್ದ. ಅಲ್ಲಿ ಸಂಜೆ 6:30 ಕ್ಕೆ ಟ್ರಕ್ ಬಾಡಿಗೆಗೆ ಪಡೆದಿದ್ದ. ಅಲ್ಲಿಂದ ಶ್ವೇತಭವನದ ಬಳಿ ಹೋಗಿ ತಡೆಗೋಡೆಗೆ ಡಿಕ್ಕಿ ಹೊಡೆಸಿ ದಾಂಧಲೆ ನಡೆಸಿದ್ದ. ಕೂಡಲೇ ಆತನನ್ನು ಬಂಧಿಸಲಾಗಿತ್ತು.

    ಭಾರತದ ಚಂದನಗರದಲ್ಲಿ ವರ್ಷಿತ್ ಜನಿಸಿದ್ದ. ಆತ ಗ್ರೀನ್ ಕಾರ್ಡ್ ಹೊಂದಿರುವ ಯುಎಸ್‌ನ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿದ್ದ.

  • ಜಾಮೀನಿಗೆ ಮೇಲ್ಮನವಿ ಬಳಿಕ ದರ್ಶನ್‌ಗೆ ಬೆಂಗಳೂರು ಪೊಲೀಸರಿಂದ ಮತ್ತೊಂದು ಶಾಕ್‌!

    ಜಾಮೀನಿಗೆ ಮೇಲ್ಮನವಿ ಬಳಿಕ ದರ್ಶನ್‌ಗೆ ಬೆಂಗಳೂರು ಪೊಲೀಸರಿಂದ ಮತ್ತೊಂದು ಶಾಕ್‌!

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ (Darshan) ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಒಂದೊಂದೇ ಸಂಕಷ್ಟಗಳು ಎದುರಾಗುತ್ತಿವೆ. ಈಗಾಗಲೇ ಜಾಮೀನು ರದ್ದುಗೊಳಿಸುವಂತೆ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ದರ್ಶನ್‌ ಬಳಿಯಿರುವ ಗನ್‌ ಲೈಸೆನ್ಸ್‌ ರದ್ದು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ.

    ತಮ್ಮ ಬಳಿಯಿರುವ ಗನ್‌ ಲೈಸೆನ್ಸ್‌ (Gun license) ಬಗ್ಗೆ 1 ವಾರದಲ್ಲಿ ಸ್ಪಷ್ಟನೆ ನೀಡುವಂತೆ ಡಿಸಿಪಿ ಪದ್ಮಿನಿ ಸಾಹು ನೋಟಿಸ್‌ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್- ಸೀಜ್ ಮಾಡಿದ್ದ 40.40 ಲಕ್ಷ ಹಣ ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ದರ್ಶನ್ ಅರ್ಜಿ

    ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್‌ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್‌ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ದರ್ಶನ್‌, ದೆಹಲಿಗೆ ಪವಿತ್ರಾ – ಕೋರ್ಟ್‌ನಿಂದ ಅನುಮತಿ

    40.40 ಲಕ್ಷ ಹಣ ವಾಪಸ್‌ಗೆ ಮನವಿ:
    ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಸೀಜ್ ಮಾಡಿದ್ದ 40.40 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ನಟ ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ 57ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ನಿವಾಸ, ಪ್ರದೂಷ್ ನಿವಾಸ ಹಾಗೂ ವಿಜಯಲಕ್ಷ್ಮಿ ಅವರಿಂದ ಹಣ ವಶಕ್ಕೆ ಪಡೆಯಲಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷ್ಯ ನಾಶಕ್ಕಾಗಿ ಹಣ ಸಂಗ್ರಹ ಮಾಡಿರುವ ಆರೋಪ ಹೊರಿಸಲಾಗಿತ್ತು.

  • ಮೈಸೂರಿಗೆ ದರ್ಶನ್‌, ದೆಹಲಿಗೆ ಪವಿತ್ರಾ – ಕೋರ್ಟ್‌ನಿಂದ ಅನುಮತಿ

    ಮೈಸೂರಿಗೆ ದರ್ಶನ್‌, ದೆಹಲಿಗೆ ಪವಿತ್ರಾ – ಕೋರ್ಟ್‌ನಿಂದ ಅನುಮತಿ

    ಬೆಂಗಳೂರು: ಮೈಸೂರಿಗೆ ದರ್ಶನ್‌ (Darshan) ತೆರಳಲು ಮತ್ತು ಪವಿತ್ರಾ ಗೌಡಗೆ (Pavithra Gowda) ಹೊರ ರಾಜ್ಯಕ್ಕೆ ಹೋಗಲು ಕೋರ್ಟ್‌ (Court) ಅನುಮತಿ ನೀಡಿದೆ.

    57ನೇ ಸಿಸಿಹೆಚ್‌ ನ್ಯಾಯಾಧೀಶರ ಮುಂದೆ ದರ್ಶನ್‌ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಕೇಳಿದ್ದರು. ಪವಿತ್ರಾ ಗೌಡ ಪರ ವಕೀಲರು ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.

    ಈ ಎರಡು ಅರ್ಜಿಗಳನ್ನು ಕೋರ್ಟ್‌ ಮಾನ್ಯ ಮಾಡಿದೆ. ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿದೆ. ಹೀಗಾಗಿ ಈ ಬಾರಿ ಸಂಕ್ರಾಂತಿಯನ್ನು ಮೈಸೂರಿನಲ್ಲಿ ದರ್ಶನ್‌ ಆಚರಿಸಲಿದ್ದಾರೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್‌

    ಕೋರ್ಟ್‌ ಮುಂಬೈ ಮತ್ತು ದೆಹಲಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ನೀಡಿದೆ. ದೇವಸ್ಥಾನ ಮತ್ತು ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು.

    ಆರ್ ಆರ್ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಶೋ ರೂಂಗೆ ಸಂಬಂಧಿಸಿದಂತೆ ವಸ್ತುಗಳನ್ನು ತರಲು ಅವಕಾಶ ನೀಡುವಂತೆ ಪವಿತ್ರಾ ಗೌಡ ಅರ್ಜಿಯಲ್ಲಿ ಮನವಿ ಮಾಡಿದ್ದರು.

    ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್‌ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು (Bengaluru) ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.

    ಇಂದು ಏನಾಯ್ತು?
    ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಎಲ್ಲಾ 17 ಆರೋಪಿಗಳು ಹಾಲ್‌ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು. ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ ಬಳಿಕ ಪವಿತ್ರಾ ಗೌಡ ಮತ್ತು ದರ್ಶನ್‌ ಕೋರ್ಟ್‌ನಿಂದ ಒಟ್ಟಿಗೆ ಹೊರಬಂದು ಪ್ರತ್ಯೇಕ ಕಾರಿನಲ್ಲಿ ತೆರಳಿದರು.

  • ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್‌

    ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್‌

    ಬೆಂಗಳೂರು: ಕೋರ್ಟ್‌ನಲ್ಲಿ ದರ್ಶನ್‌ (Darshan) ಅವರನ್ನು ನೋಡಿ ಪವಿತ್ರಾ ಗೌಡ (Pavithra Gowda) ಭಾವುಕರಾದ ಪ್ರಸಂಗ ಇಂದು ನಡೆಯಿತು.

    ಇಂದು 57ನೇ ಸಿಸಿಹೆಚ್‌ ಕೋರ್ಟ್‌ಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. 6 ತಿಂಗಳ ನಂತರ ಕೋರ್ಟ್‌ನಲ್ಲಿ ದರ್ಶನ್‌ ಅವರನ್ನು ನೋಡಿದ ಪವಿತ್ರಾ ಗೌಡ ಭಾವುಕರಾದರು.

    ಹಾಲ್‌ನಲ್ಲಿ ಪವಿತ್ರಗೌಡಗೆ ಪದೇ ಪದೇ ದರ್ಶನ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದರು. ಈ ವೇಳೆ ದರ್ಶನ್‌ ಬೆನ್ನುತಟ್ಟಿ ಪವಿತ್ರಾ ಅವರನ್ನು ಸಂತೈಸಿ ಕೆಲ ಕ್ಷಣ ಮಾತನಾಡಿದರು.

     

    ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು.  ಎಲ್ಲಾ ಆರೋಪಿಗಳು ಹಾಲ್‌ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು.  ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ ಬಳಿಕ ಪವಿತ್ರಾ ಗೌಡ ಮತ್ತು ದರ್ಶನ್‌ ಕೋರ್ಟ್‌ನಿಂದ ಒಟ್ಟಿಗೆ ಹೊರಬಂದು ಪ್ರತ್ಯೇಕ ಕಾರಿನಲ್ಲಿ ತೆರಳಿದರು.

    ಜಾಮೀನು ಸಿಕ್ಕಿದರೂ ಇಲ್ಲಿಯವರೆಗೆ ಪವಿತ್ರಾಗೌಡ- ದರ್ಶನ್ ಭೇಟಿಯಾಗಿಲ್ಲ. ಈ ಹಿಂದೆ ಕೋರ್ಟ್‌ (Court) ವಿಚಾರಣೆಯ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮುಖಾಮುಖಿಯಾಗಿದ್ದೇ ಕೊನೆ. ಅದಾದ ಬಳಿಕ ದರ್ಶನ್ ಹಾಗೂ ಪವಿತ್ರಾ ದೂರವಾಗಿದ್ದರು.

    ದರ್ಶನ್‌ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್‌ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು (Bengaluru) ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.