Tag: court

  • ರಾಜ್ಯಾದ್ಯಂತ ಮಾ.8 ರಂದು ರಾಷ್ಟ್ರೀಯ ಲೋಕ-ಅದಾಲತ್

    ರಾಜ್ಯಾದ್ಯಂತ ಮಾ.8 ರಂದು ರಾಷ್ಟ್ರೀಯ ಲೋಕ-ಅದಾಲತ್

    ಮಂಡ್ಯ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಜ್ಯಾದ್ಯಂತ ಮಾ. 08ರಂದು ರಾಷ್ಟ್ರೀಯ ಲೋಕ-ಅದಾಲತ್ (Lok Adalat) ನಡೆಯಲಿದೆ.

    ಈ ಹಿನ್ನೆಲೆಯಲ್ಲಿ ಮಂಡ್ಯ (Mandya) ಜಿಲ್ಲೆಯ 7 ತಾಲೂಕುಗಳಲ್ಲಿಯೂ ಸಹ ಲೋಕ-ಅದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಆನಂದ್ ಎಂ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗೋದಲ್ಲಿ ನಿಗೂಢ `ಅಳುವ ರೋಗ’ಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ – 400 ಮಂದಿಗೆ ಸೋಂಕು

    ರಾಷ್ಟ್ರೀಯ ಲೋಕ-ಅದಾಲತ್‌ನಲ್ಲಿ ಆಸ್ತಿ ವಿವಾದಗಳನ್ನು ಒಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ವಿಭಾಗ ದಾವೆಗಳು, ಹಣ ವಸೂಲಾತಿ ದಾವೆಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳು ಮೋಟಾರ್ ವಾಹನಗಳ ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ರಾಜಿ ಆಗಬಹುದಾತಂತಹ ಕ್ರಿಮಿನಲ್ ಪ್ರಕರಣಗಳು ಮತ್ತು ಚೇಕ್ ಬೌನ್ಸ್ ಪ್ರಕರಣಗಳು ಎಲ್ಲವನ್ನೂ ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಲಯಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು. ಇದನ್ನೂ ಓದಿ: ಉಡುಪಿ| ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ ಕೇಸ್ – ಇಬ್ಬರ ಬಂಧನ

    ಲೋಕ-ಅದಾಲತ್ ನ್ಯಾಯಾಲಯಗಳಲ್ಲಿ ಬಾಕಿ ಇರುವಂತಹ ಪ್ರಕರಣಗಳ ಜೊತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ, ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷದವರಿಗೆ ನೋಟಿಸ್ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ತಾವೇ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದು. ಇದನ್ನೂ ಓದಿ:  ದಾಖಲೆಯ ಮಹಾ ಕುಂಭಮೇಳಕ್ಕೆ ವಿದ್ಯುಕ್ತ ತೆರೆ – ತ್ರಿವೇಣಿ ಸಂಗಮದಲ್ಲಿ ಶುರುವಾಯ್ತು ಸ್ವಚ್ಛತಾ ಕಾರ್ಯ

    ಜನಸಾಮಾನ್ಯರು ಹಾಗೂ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಂಡು ಲೋಕ-ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಲೋಕ-ಅದಾಲತನ್ನು ಯಶಸ್ವಿಗೊಳಿಸಿಕೊಳ್ಳುವಂತೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಕೋರಿದ್ದಾರೆ.

  • ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಬೆಂಗಳೂರು: ನವಜಾತ ಶಿಶು ಕಿಡ್ನ್ಯಾಪ್‌ ಪ್ರಕರಣದ ಅಪರಾಧಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

    ಅಪರಾಧಿ ರಶ್ಮಿ, 5 ವರ್ಷಗಳ ಹಿಂದೆ ವಾಣಿ ವಿಲಾಸ ಆಸ್ಪತ್ರೆಯಿಂದ (Vani Vilas Hospital) ಆಗ ತಾನೆ ಹುಟ್ಟಿದ್ದ ನವಾಜಾತ ಶಿಶುವನ್ನ ಕಿಡ್ನ್ಯಾಪ್‌ ಮಾಡಿದ್ದಳು. ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಸಿಸಿಹೆಚ್ 51ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ತಲೆಮರೆಸಿಕೊಂಡಿದ್ದ ರಶ್ಮಿಯನ್ನು 1 ವರ್ಷದ ಬಳಿಕ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಮೀನಾಕ್ಷಿ ಮತ್ತು ಅವರ ತಂಡ ಬಂಧಿಸಿ, ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3

    ಸರ್ಕಾರದ ಪರವಾಗಿ ಪಿ.ಪಿ.ಬಿ.ಹೆಚ್.ಭಾಸ್ಕರ್ ವಾದ ಮಂಡಿಸಿದ್ದರು.

  • ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

    ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

    ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌ (Darshan) ಹಾಗೂ ಪವಿತ್ರಾಗೌಡ (Pavithra Gowda) ಇಂದು (ಫೆ.25) ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್ ನಲ್ಲಿ ದೂರ ದೂರ ನಿಂತಿದ್ದರು.

    ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಕೋರ್ಟ್ ಕಲಾಪಕ್ಕೂ 10 ನಿಮಿಷ ಮೊದಲೇ ಕೋರ್ಟ್‌ನಲ್ಲಿ ಹಾಜರಾಗಿದ್ದರು. ದರ್ಶನ್ ಬರುವುದು ತಡವಾದ ಹಿನ್ನೆಲೆ 10 ನಿಮಿಷ ಕಲಾಪ ಮುಂದೂಡುವಂತೆ ದರ್ಶನ್ ಪರ ವಕೀಲರು ‌ಮನವಿ ಮಾಡಿದರು. ದರ್ಶನ್ ಬರುತ್ತಿದ್ದಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು, ಎಲ್ಲರ ಹಾಜರಾತಿಯನ್ನ ಖಾತರಿಪಡಿಸಿಕೊಂಡ್ರು. ಪ್ರಕರಣದ ಆರೋಪಿಗಳಾದ ನಿಖಿಲ್ ಮತ್ತು ಕೇಶವಮೂರ್ತಿ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಕೋರ್ಟ್‌ನಲ್ಲಿ ಹಾಜರಿದ್ದರು. ಇದನ್ನೂ ಓದಿ:

    ಬೆನ್ನು ನೋವು ಶಮನವಾಗದ ಹಿನ್ನೆಲೆ ಕುಂಟುತ್ತಲೇ ಕೋರ್ಟ್ ಹಾಲ್‌ಗೆ ದರ್ಶನ್ ಬಂದಿದ್ದಾರೆ. ಈ ವೇಳೆ ಪವಿತ್ರಾಗೌಡ, ದರ್ಶನ್ ಕಡೆ ನೋಡಿದರೂ, ದರ್ಶನ್ ಅವರ ಕಡೆ ನೋಡಲೇ ಇಲ್ಲ. ಅಲ್ಲದೇ ಕೋರ್ಟ್‌ನಲ್ಲಿ ಬೇರೆ ಕಡೆ ಕುಳಿತುಕೊಂಡ್ರು. ಇತರ ಆರೋಪಿಗಳ ಜೊತೆ ಮಾತನಾಡಿದ ದರ್ಶನ್, ಪವಿತ್ರಾಗೌಡಳನ್ನ ಮಾತನಾಡಿಸಲೇ ಇಲ್ಲ. ಈ ಮೂಲಕ ಅಂತರವನ್ನು ಕಾಯ್ದುಕೊಳ್ಳುವ ಯತ್ನವನ್ನು ದರ್ಶನ್ ಮಾಡಿದ್ರು. ಕೋರ್ಟ್ ವಿಚಾರಣೆ ಮುಗಿದ ಬಳಿಕ ಪವಿತ್ರಾ ಹೋಗುವವರೆಗೂ ದರ್ಶನ್ ಕೋರ್ಟ್ ಹಾಲ್‌ನಲ್ಲಿಯೇ ಇದ್ದು, ಬಳಿಕ ಕೋರ್ಟ್ ಹಾಲ್‌ನಿಂದ ಹೋಗಿದ್ದಾರೆ. ಇನ್ನೂ ಪವಿತ್ರಾಗೌಡ ಅಳುತ್ತಾ ಕೋರ್ಟ್‌ನಿಂದ ಮನೆ ಕಡೆ ಹೊರಟಿದ್ದಾರೆ.

    ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲ ಸುನೀಲ್, ಪೊಲೀಸರು ಪ್ರಕರಣದ ಇತರ ಆರೋಪಿಗಳನ್ನು ಮಾಫಿ ಸಾಕ್ಷಿಯಾಗುವಂತೆ, ಒತ್ತಡ ಬೆದರಿಕೆ ಹಾಕ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಪ್ರಮುಖವಾಗಿ ನಾಲ್ವರು ಆರೋಪಿಗಳನ್ನು ಮಾಫಿ ಸಾಕ್ಷಿಯಾಗುವಂತೆ ಬೆದರಿಕೆ ಹಾಕ್ತಿದ್ದಾರೆ. ಸಾಕಷ್ಟು ಸಾಕ್ಷಿಗಳಿದ್ದು, ಮಾಫಿ ಸಾಕ್ಷಿಯಾದ್ರೆ ಕೇಸ್‌ನಿಂದ ಖುಲಾಸೆ ಮಾಡಿಕೊಡೊದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ರು. ಪ್ರತ್ಯೇಕ ಅರ್ಜಿ ಹಾಕಿದರೆ ವಾದಕ್ಕೆ ಅವಕಾಶ ಮಾಡಿಕೊಡೋದಾಗಿ ತಿಳಿಸಿ, ಮಾ.8ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು. ಇದನ್ನೂ ಓದಿ: ಪಂಜಾಬ್‌ನ ಆಪ್‌ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ

  • ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ದರ್ಶನ್ & ಗ್ಯಾಂಗ್

    ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ದರ್ಶನ್ & ಗ್ಯಾಂಗ್

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ (Darshan) ಆ್ಯಂಡ್ ಗ್ಯಾಂಗ್ ಇಂದು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.

    ಬೆಂಗಳೂರಿನ (Bengaluru) 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಪವಿತ್ರಾಗೌಡ, ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಕೋರ್ಟ್‌ಗೆ ಹಾಜರಾಗಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ

    ಆರ್.ಆರ್. ನಗರದ ದರ್ಶನ್ ಮನೆ ಮುಂದೆ ಅಂಗರಕ್ಷಕರು ಜಮಾಯಿಸಿದ್ದು, ಮನೆ ಮುಂದೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದ್ದರಿಂದ ಆರ್.ಆರ್. ನಗರದ ಮನೆಯಲ್ಲಿಯೇ ದರ್ಶನ್ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಬಸ್ ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ ‘ಜೈ ಕರ್ನಾಟಕ’ ಎಂದು ಕೂಗಿಸಿದ ಕನ್ನಡಿಗರು

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ, ನಟ ದರ್ಶನ್ ಸೇರಿ 17 ಆರೋಪಿಗಳು ಜೈಲು ಸೇರಿದ್ದರು. ಜಾಮೀನಿನ ಮೂಲಕ ಹೊರಬಂದಿರುವ ಡಿ ಗ್ಯಾಂಗ್ ಇಂದು ಕೋರ್ಟ್ ವಿಚಾರಣೆ ಎದುರಿಸಲಿದ್ದಾರೆ. ಇದನ್ನೂ ಓದಿ: ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್

    ನಟ ದರ್ಶನ್‌ ಹಾಗೂ ಪವಿತ್ರಾಗೌಡ ಈಗಾಗಲೇ ಕೋರ್ಟ್‌ನತ್ತ ಸಾಗುತ್ತಿದ್ದಾರೆ.

  • ಶಿರೂರು ಗುಡ್ಡ ಕುಸಿತ ದುರಂತ: ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

    ಶಿರೂರು ಗುಡ್ಡ ಕುಸಿತ ದುರಂತ: ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜು.16 ರಂದು 11 ಜನರ ಸಾವಿಗೆ ಕಾರಣವಾಗಿದ್ದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

    ಶಿರೂರು ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಕಂಪನಿಯೇ ಹೊಣೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.

    ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದರಿಂದ ಅವಘಡ ಸಂಭವಿಸಿದೆ. ಅವಘಡ ನಡೆಯಬಹುದು ಎಂಬ ಅರಿವಿದ್ದರೂ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಕ್ಕೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವಂತೆ ವಾದ ಮಂಡಿಸಲಾಗಿತ್ತು. ಇದನ್ನು ಪುರಸ್ಕರಿಸಿದ ಕೋರ್ಟ್ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 101ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದೆ.

    ಇದೇ ವೇಳೆ ಪ್ರಕರಣ ದಾಖಲಿಸದಂತೆ ಕಂಪನಿ ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲ ಸುಭಾಷ್ ಕೈರನ್ನ ತಿಳಿಸಿದ್ದಾರೆ.

  • ಉದಯಗಿರಿ ದಾಂಧಲೆ ಕೇಸ್- ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಗೆ ನ್ಯಾಯಾಂಗ ಬಂಧನ

    ಉದಯಗಿರಿ ದಾಂಧಲೆ ಕೇಸ್- ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಗೆ ನ್ಯಾಯಾಂಗ ಬಂಧನ

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ದಾಂಧಲೆ ಪ್ರಕರಣ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ (Moulvi) ಮುಸ್ತಾಕ್ ಮಕ್ಬೋಲಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ನೀಡಿದೆ.

    2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಆರೋಪಿಯನ್ನು ಸಿಸಿಬಿ ಪೊಲೀಸರು ಮೈಸೂರು ಜೈಲಿನತ್ತ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪುತಿನ, ಕೆಎಸ್‌ನ ಟ್ರಸ್ಟ್‌ಗಳ ಚಟುವಟಿಕೆಗಳಿಗೆ ಸರ್ಕಾರದ ನೆರವು: ಸಚಿವ ಚಲುವರಾಯಸ್ವಾಮಿ

    ಫೆ. 10ರಂದು ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು. ಇದಕ್ಕೂ ಮುನ್ನ ಆರೋಪಿ ಮೌಲ್ವಿ ಮುಫ್ತಿ ಮಕ್ಬೋಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಸ್ಟಾರ್ಕ್‌ ದಾಖಲೆ ಉಡೀಸ್‌ – ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ ಪಡೆದು ಶಮಿ ರೆಕಾರ್ಡ್‌

    ಪ್ರಕರಣ ನಡೆದ 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲ್ಯಾಕ್ ಪೇಪರ್ ಬಿಡುಗಡೆ: ಬೊಮ್ಮಾಯಿ

  • 2018 ರಿಂದ ನೇಮಕಗೊಂಡ 698 ಮಂದಿ ನ್ಯಾಯಧೀಶರಲ್ಲಿ 108 ಮಹಿಳೆಯರು – ಮೇಘವಾಲ್

    2018 ರಿಂದ ನೇಮಕಗೊಂಡ 698 ಮಂದಿ ನ್ಯಾಯಧೀಶರಲ್ಲಿ 108 ಮಹಿಳೆಯರು – ಮೇಘವಾಲ್

    ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರಾಗಿ 2018 ರಿಂದ ನೇಮಕಗೊಂಡ 698 ಮಂದಿಯಲ್ಲಿ 108 ಮಹಿಳೆಯರಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

    ಈ ಅವಧಿಯಲ್ಲಿ 22 ಮಂದಿ ಎಸ್‌ಸಿ ಸಮುದಾಯಕ್ಕೆ ಸೇರಿದವರು, 15 ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದವರು, 87 ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯದವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ದೇಶದಾದ್ಯಂತ ನ್ಯಾಯಾಲಯಗಳಲ್ಲಿ ನೇಮಕಗೊಂಡ ಒಟ್ಟು ನ್ಯಾಯಾಧೀಶರಲ್ಲಿ ಎಸ್‌ಸಿ/ಎಸ್‌ಟಿ ನ್ಯಾಯಾಧೀಶರ ಶೇಕಡಾವಾರು ಪ್ರಮಾಣ ಮತ್ತು ಹೈಕೋರ್ಟ್‌ಗಳಲ್ಲಿ ಹೆಚ್ಚಿನ ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ನ್ಯಾಯಾಧೀಶರನ್ನು ನೇಮಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸಂಸದ ನೀರಜ್ ಡಾಂಗಿ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ.

    ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ನೇಮಕದ ಬಗ್ಗೆ ಕೇಂದ್ರೀಯವಾಗಿ ನಿರ್ವಹಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಇನ್ನು 2018 ರಿಂದ, ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿದವರು ತಮ್ಮ ಸಾಮಾಜಿಕ ಹಿನ್ನೆಲೆಯ ಬಗ್ಗೆ ವಿವರಗಳನ್ನು ನಿಗದಿಪಡಿಸಲಾಗಿದೆ ನಮೂನೆಯಲ್ಲಿ ಒದಗಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

    ಕಾನೂನು ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 20,466 ನ್ಯಾಯಾಧೀಶರಲ್ಲಿ, 3,871 ನ್ಯಾಯಾಧೀಶರು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದರೆ, ಒಟ್ಟು ಬಲದ ಶೇ. 19 ರಷ್ಟಿದ್ದಾರೆ.

  • ಏಡ್ಸ್‌ ಸೋಂಕಿಗೆ ಒಳಗಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಬಡ್ತಿ ನಿರಾಕರಣೆ – ತಾರತಮ್ಯದ ಸ್ಪಷ್ಟ ನಿದರ್ಶನ ಎಂದ ಹೈಕೋರ್ಟ್‌

    ಏಡ್ಸ್‌ ಸೋಂಕಿಗೆ ಒಳಗಾದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಬಡ್ತಿ ನಿರಾಕರಣೆ – ತಾರತಮ್ಯದ ಸ್ಪಷ್ಟ ನಿದರ್ಶನ ಎಂದ ಹೈಕೋರ್ಟ್‌

    ಅಹಮದಾಬಾದ್: ಹೆಚ್‌ಐವಿ ಏಡ್ಸ್‌ (HIV AIDS) ಸೋಂಕಿಗೆ ಒಳಗಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮಹಿಳಾ ಸಿಬ್ಬಂದಿಗೆ ಉನ್ನತ ಹುದ್ದೆಗೆ ಬಡ್ತಿ ನಿರಾಕರಿಸುವುದು ತಾರತಮ್ಯದ ಸ್ಪಷ್ಟ ನಿದರ್ಶನವಾಗಿದೆ ಎಂದು ಗುಜರಾತ್ ಹೈಕೋರ್ಟ್ (Gujarat High Court) ಅಸಮಾಧಾನ ಹೊರಹಾಕಿದೆ.

    ಏಡ್ಸ್‌ನಿಂದ ಬಳಲುತ್ತಿರುವ ಕಾರಣ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೂ ಬಡ್ತಿ ನಿರಾಕರಿಸಲಾಗುತ್ತಿದೆ ಎಂದು CRPF ಮಹಿಳಾ ಸಿಬ್ಬಂದಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

    ಈ ವಿಷಯವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಗಮನಕ್ಕೆ ತರುವಂತೆ ನ್ಯಾಯಾಲಯವು ನಿರ್ದೇಶಿಸಿತು. ಮಾರ್ಚ್ 6 ರಂದು ಮುಂದಿನ ವಿಚಾರಣೆ ನಡೆಸಲಾಗುತ್ತದೆ. ಆ ದಿನ ಕಾನೂನು ಅಧಿಕಾರಿ ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

    ಪ್ರತಿವಾದಿಗಳ ಪರವಾಗಿ ಹಾಜರಾದ ವಕೀಲರು CRPF ಮತ್ತು CRPF ಕಮಾಂಡೆಂಟ್ ನಿಯಮದ ಪ್ರಕಾರ ಆದೇಶವನ್ನು ನೀಡಲಾಗಿದೆ ಎಂದು ವಾದಿಸಿದರು. ಅರ್ಜಿದಾರರ ಪರ ವಕೀಲರು, ಅವರು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ಅರ್ಹರಾಗಿದ್ದರೂ ಉನ್ನತ ಹುದ್ದೆಗಳಿಗೆ ಬಡ್ತಿ ನೀಡಲು ನಿರಂತರವಾಗಿ ನಿರಾಕರಿಸಲಾಗಿದೆ ಎಂದು ವಾದಿಸಿದರು.

    ಈ ವೇಳೆ, ನ್ಯಾಯಾಲಯ, ಈ ಪ್ರಕರಣವು ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಹೆಚ್‌ಐವಿ-ಏಡ್ಸ್‌ನಿಂದ ಬಳಲುತ್ತಿರುವ ಸಿಬ್ಬಂದಿಗೆ ಮಾಡುತ್ತಿರುವ ತಾರತಮ್ಯದ ಸ್ಪಷ್ಟ ನಿದರ್ಶನಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ.

  • ಶುಕ್ರವಾರ ಸಿದ್ದರಾಮಯ್ಯ, ಬಿಎಸ್‌ವೈಗೆ ಬಿಗ್‌ ಡೇ!

    ಶುಕ್ರವಾರ ಸಿದ್ದರಾಮಯ್ಯ, ಬಿಎಸ್‌ವೈಗೆ ಬಿಗ್‌ ಡೇ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮುಡಾ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಬದಲು ಸಿಬಿಐಗೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಆದೇಶ ಶುಕ್ರವಾರ ಹೊರಬೀಳಲಿದೆ. ಅದೇ ರೀತಿ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ (B.S.Yediyurappa) ವಿರುದ್ಧದ ಪೋಕ್ಸೋ ಕೇಸ್‌ (POCSO Case) ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ಆದೇಶ ಸಹ ಹೊರ ಬೀಳಲಿದೆ.

    ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ್ದ ಧಾರವಾಡ ಹೈಕೋರ್ಟ್‌ ಪೀಠ ಆದೇಶವನ್ನು ಫೆ7ರ ಬೆಳಗ್ಗೆ 10:30ಕ್ಕೆ ಕಾಯ್ದಿರಿಸಿತ್ತು. ಪ್ರತಿ ಹಂತದಲ್ಲೂ ಲೋಕಾಯುಕ್ತದ ತನಿಖಾ ವರದಿಯನ್ನು ಪಡೆದಿರೋ ಹೈಕೋರ್ಟ್, ಎಲ್ಲವನ್ನೂ ಪರಿಶಿಲಿಸಿದೆ.

    ಹೈಕೋರ್ಟ್ ನೀಡಲಿರುವ ಆದೇಶ ಸಾಕಷ್ಟು ಕುತೂಹಲ ಕೆರಳಿಸಿದ್ದು, ಒಂದೊಮ್ಮೆ ಸ್ನೇಹಮಯಿ ಕೃಷ್ಣ ಅರ್ಜಿ ಊರ್ಜಿತವಾಗಿ ಪ್ರಕರಣ ಸಿಬಿಐಗೆ ವರ್ಗಾವಣೆ ಆದರೆ ಸಿಎಂ ಸಿದ್ದರಾಮಯ್ಯಗೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ.

    ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ದು ಕೋರಿದ್ದ ಅರ್ಜಿ ಆದೇಶ ನ್ಯಾ.ನಾಗಪ್ರಸನ್ನ ಅವರಿರುವ ಏಕಸದಸ್ಯ ಪೀಠದಿಂದ ತೀರ್ಪು ಪ್ರಕಟವಾಗಲಿದೆ. ಬಿಎಸ್‌ವೈ ಅರ್ಜಿ ತಿರಸ್ಕೃತವಾದರೆ ಅವರಿಗೂ ಸಹ ಸಂಕಷ್ಟ ಎದುರಾಗಲಿದೆ.

  • ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನವದೆಹಲಿ: ವಿದೇಶಿಯರು (Foreigners) ಎಂದು ಘೋಷಿತರಾದ ವ್ಯಕ್ತಿಗಳನ್ನು ಗಡಿಪಾರು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಸ್ಸಾಂ (Assam) ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

    ವಿಚಾರಣೆಗೆ ವರ್ಚುವಲ್ ವಿಧಾನದ ಮೂಲಕ ಹಾಜರಿದ್ದ ಅಸ್ಸಾಂನ ಮುಖ್ಯ ಕಾರ್ಯದರ್ಶಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ, ವಿಳಾಸವಿಲ್ಲದಿದ್ದರೂ ಅವರನ್ನು ಗಡೀಪಾರು ಮಾಡಬಹುದು, ಅನಿರ್ದಿಷ್ಟವಾಗಿ ಅವರನ್ನು ಬಂಧಿಸಿಟ್ಟುಕೊಂಡಿರುವಂತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪಗೆ ಪಕ್ಷದ ಸಿದ್ದಾಂತ ಗೊತ್ತಿಲ್ಲ – ವೆಂಕಟೇಶ್ ಮೌರ್ಯ

    ಒಮ್ಮೆ ಅವರನ್ನು ವಿದೇಶಿಯರೆಂದು ಪರಿಗಣಿಸಿದ ನಂತರ, ಅವರನ್ನು ತಕ್ಷಣವೇ ಗಡಿಪಾರು ಮಾಡಬೇಕು. ಅವರ ಪೌರತ್ವದ ಸ್ಥಿತಿ ನಿಮಗೆ ತಿಳಿದಿದೆ. ಹಾಗಾದರೆ ಅವರ ವಿಳಾಸ ಸಿಗುವವರೆಗೆ ನೀವೇಕೆ ಕಾಯುತ್ತೀರಿ? ಅವರು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸುವುದು ಉಳಿದ ದೇಶಕ್ಕೆ ಬಿಟ್ಟದ್ದು ಎಂದಿತು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಹೆಸರಲ್ಲಿ ಕಿರುಕುಳ ಕೊಡುವವರಿಗೆ ಬಿಸಿ ಮುಟ್ಟಿಸಲು ಶಿಕ್ಷೆ ಪ್ರಮಾಣ ಹೆಚ್ಚಳ – ಪರಮೇಶ್ವರ್

    ವಿಳಾಸವಿಲ್ಲದೇ ಹೋದಲ್ಲಿ ಆ ಜನರನ್ನು ಎಲ್ಲಿಗೆ ಗಡೀಪಾರು ಮಾಡಬೇಕೆಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯವನ್ನು ಕೇಳಿದರು. ಆಗ ನ್ಯಾಯಮೂರ್ತಿ ಓಕಾ, ನೀವು ಅವರನ್ನು ಸಂಬಂಧಪಟ್ಟ ದೇಶದ ರಾಜಧಾನಿಗೆ ಗಡಿಪಾರು ಮಾಡಿ. ಆ ವ್ಯಕ್ತಿ ಪಾಕಿಸ್ತಾನದವನಾಗಿದ್ದರೆ ನಿಮಗೆ ಪಾಕಿಸ್ತಾನದ ರಾಜಧಾನಿ ತಿಳಿದಿದೆಯೇ? ಅವರ ವಿದೇಶಿ ವಿಳಾಸ ತಿಳಿಯದೇ ಇದ್ದರೆ ಅವರನ್ನು ಇಲ್ಲಿ ಬಂಧಿಸಿದ್ದಾದರೂ ಹೇಗೆ? ಪರಿಶೀಲನಾ ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ ದಿನಾಂಕವನ್ನು ಏಕೆ ಉಲ್ಲೇಖಿಸಿಲ್ಲ? ಎಂದು ಕಿಡಿಕಾರಿದರು. ಇದನ್ನೂ ಓದಿ: ಏರೋ ಇಂಡಿಯಾ 2025 – ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ

    ಈ ಕುರಿತು ಸೂಕ್ತ ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದರು. ಆದರೆ ನ್ಯಾಯಾಲಯ ನಾವು ಅಸ್ಸಾಂ ಸರ್ಕಾರ ಸುಳ್ಳು ಸಾಕ್ಷ್ಯದ ನೋಟಿಸ್ ಜಾರಿ ಮಾಡುತ್ತೇವೆ. ಒಂದು ರಾಜ್ಯ ಸರ್ಕಾರವಾಗಿ, ನೀವು ಆರೋಪ ಮುಕ್ತರಾಗಬೇಕು ಎಂದು ಎಚ್ಚರಿಕೆ ನೀಡಿತು. ವಿಚಾರಣೆಯ ಒಂದು ಹಂತದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣ ರಾಜ್ಯಪಟ್ಟಿಗೆ ಬಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಇದನ್ನೂ ಓದಿ: ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

    ವಿದೇಶಿ ವಿಳಾಸಗಳಿಲ್ಲದಿದ್ದರೂ ಸಹ, ಗಡಿಪಾರು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ನ್ಯಾಯಾಲಯ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಷ್ಟ್ರೀಯತೆ ಪರಿಶೀಲನಾ ಪ್ರಕ್ರಿಯೆಯ ಕುರಿತು ಎರಡು ವಾರಗಳಲ್ಲಿ ದಿನಾಂಕವನ್ನೂ ಒಳಗೊಂಡಂತೆ ತೆಗೆದುಕೊಂಡ ಕ್ರಮಗಳ ವಿವರವಾದ ಅಫಿಡವಿಟ್ ಸಲ್ಲಿಸುವಂತೆಯೂ ಸರ್ಕಾರಕ್ಕೆ ಸೂಚಿಸಿತು. ದೇಶಗಳೇ ಇಲ್ಲದ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಇದನ್ನೂ ಓದಿ: ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!