Tag: court

  • ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಫೆಬ್ರವರಿ 19ರ ವರೆಗೆ ವಿಸ್ತರಣೆ

    ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಫೆಬ್ರವರಿ 19ರ ವರೆಗೆ ವಿಸ್ತರಣೆ

    ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಜನವರಿ 22ರ ವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

    ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ಮತ್ತೆ ಬಂಧನದ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ. ವಿನಯ್ ಕುಲಕರ್ಣಿ ಕಳೆದ 3 ತಿಂಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದು, ಜಾಮೀನು ಅರ್ಜಿ ಸಹ ಧಾರವಾಡ ಹೈಕೋರ್ಟ್ ನಲ್ಲಿ ತಿರಸ್ಕಾರಗೊಂಡಿದೆ.

    ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನ ಸಹ ಫೆಬ್ರವರಿ 10ಕ್ಕೆ ವಿಸ್ತರಣೆ ಮಾಡಿ ಸಿಬಿಐ ನ್ಯಾಯಾಲಯ ಆದೇಶ ಮಾಡಿದೆ. ಈಗಾಗಲೇ ಸಿಬಿಐ ವಿನಯ್ ಕುಲಕರ್ಣಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ವಿನಯ್ ಪರ ವಕೀಲರು ಸುಪ್ರೀಂ ಕೊರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಧಾರವಾಡ ಸಿಬಿಐ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆದ ಕಾರಣ ಇಲ್ಲೇ ಜಾಮೀನು ಅರ್ಜಿ ಹಾಕುವ ಸಾಧ್ಯತೆ ಇದೆ.

  • ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ – ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

    ಎಟಿಎಂನಲ್ಲಿ ಮಚ್ಚಿನಿಂದ ಹಲ್ಲೆ – ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

    – 2013 ರಲ್ಲಿ ನಡೆದಿದ್ದ ಕೃತ್ಯ
    – ಸಿ ರಿಪೋರ್ಟ್‌ ಸಲ್ಲಿಕೆಯಾದ ಬಳಿಕ ಅರೆಸ್ಟ್‌

    ಬೆಂಗಳೂರು: ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಮಧುಕರ್‌ ರೆಡ್ಡಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. 10 ಸಾವಿರ ದಂಡದ ಜೊತೆಗೆ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್‍ಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.

    ಬೆಂಗಳೂರಿನ ಕಾರ್ಪೊರೇಷನ್‌ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಅವರ ಮೇಲೆ ಮಧುಕರ್‌ ರೆಡ್ಡಿ ಭೀಕರ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ. ಸೋಮವಾರ 65ನೇ ಸೆಷನ್ಸ್‌ ನ್ಯಾಯಾಲಯ ಮಧುಕರ ರೆಡ್ಡಿ ದೋಷಿ ಎಂದು ಹೇಳಿ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    ಈ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ರಾಜೇಶ್ವರ ಅವರು, ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ದೋಷಿ ಎಂದು ತೀರ್ಪು ನೀಡಿದ್ದರು. ಪ್ರಾಸಿಕ್ಯೂಷನ್‌ ಪರವಾಗಿ ಎಂ.ವಿ.ತ್ಯಾಗರಾಜ್‌ ವಾದ ಮಂಡಿಸಿದ್ದರು.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು.

    4 ಲಕ್ಷ ರೂ. ಖರ್ಚು ಮಾಡಿ ಪ್ರಯತ್ನ ನಡೆಸಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಹಿಂದೆ ‘ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸ್‌ ಇಲಾಖೆಯು ಸುಳಿವು ನೀಡಿದವರಿಗೆ 12 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

    ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರು 2017ರ ಫೆಬ್ರವರಿ ಕೊನೆ ವಾರದಲ್ಲಿ ಮಧುಕರ್‌ ರೆಡ್ಡಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಆಂಧ್ರ ಮತ್ತು ತೆಲಂಗಾಣದಲ್ಲಿ ನಡೆದ ಮೂರು ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಕರ್‌ ಆಗಾಗ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ. ಇದನ್ನೂ ಓದಿ: ಎಟಿಂ ಹಲ್ಲೆಕೋರ ಮಧುಕರ್‌ ರೆಡ್ಡಿಗೆ ಮೂರು ರಾಜ್ಯಗಳ ಪೈಪೋಟಿ

     

    ಹೈದರಾಬಾದ್‌, ಕಡಪ, ಅನಂತಪುರ, ಕೇರಳ ಹೀಗೆ ಐದಾರು ತಿಂಗಳಿಗೆ ಒಮ್ಮೆ ಸ್ಥಾನ ಬದಲಿಸುತ್ತಿದ್ದ. ಅಂತಿಮವಾಗಿ ಮದನಪಲ್ಲಿ ಪೊಲೀಸರ ಕೈಗೆ ಸೆರೆಯಾಗಿದ್ದ. ಸಿಸಿಟಿವಿ ಫೋಟೋ ಹೋಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೆಡ್ಡಿಯನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಜ್ಯೋತಿ ಉದಯ್‌ ಅವರ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದ. ವಿಚಾರಣೆಯ ಅಗತ್ಯವಿಲ್ಲ. ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದು, ಆದಷ್ಟುಬೇಗ ವಾಪಸ್‌ ಹೋಗಬೇಕು. ನನ್ನ ತಪ್ಪಿಗೆ ಶಿಕ್ಷೆ ನೀಡಿ ಎಂದು ತನಿಖಾಧಿಗಳಲ್ಲಿ ಮನವಿ ಮಾಡಿದ್ದ.

    ಏನಿದು ಪ್ರಕರಣ?
    ಮಗಳ ಜನ್ಮ ದಿನಾಚರಣೆಗಾಗಿ ಹಣ ತೆಗೆದು ಕೊಳ್ಳಲು ಜ್ಯೋತಿ ಉದಯ್‌ 2013ರ ನವೆಂಬರ್‌ 19ರ ಬೆಳಗ್ಗೆ 7ರ ಸುಮಾರಿಗೆ ಕಾರ್ಪೊರೇಷನ್‌ ಸರ್ಕಲ್‌ನಲ್ಲಿರುವ ಬ್ಯಾಂಕ್‌ ಎಟಿಎಂಗೆ ಬಂದಿದ್ದರು. ಈ ವೇಳೆ ಒಳ ನುಗ್ಗಿದ್ದ ಮಧುಕರ್‌ ರೆಡ್ಡಿ ಜ್ಯೋತಿ ಉದಯ್‌ ಮೇಲೆ ಹಣ ನೀಡುವಂತೆ ಬೆದರಿಸಿದ್ದ. ಇದಕ್ಕೆ ನಿರಾಕರಿಸಿದಾಗ ಭೀಕರವಾಗಿ ಮಚ್ಚಿನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಈ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ಜಾಮೀನು ಸಿಕ್ಕಿ ಎರಡು ದಿನಗಳ ಬಳಿಕ ಇಂದು ನಟಿ ರಾಗಿಣಿ ರಿಲೀಸ್

    ಜಾಮೀನು ಸಿಕ್ಕಿ ಎರಡು ದಿನಗಳ ಬಳಿಕ ಇಂದು ನಟಿ ರಾಗಿಣಿ ರಿಲೀಸ್

    – ಮಧ್ಯಾಹ್ನದ ನಂತ್ರ ಜೈಲಿಂದ ಬಿಡುಗಡೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟು ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ 140 ದಿನಗಳ ಬಳಿಕ ಇಂದು ಮಧ್ಯಾಹ್ನದ ಪರಪ್ಪನ ಅಗ್ರಾಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಗುರುವಾರ ಜಾಮೀನು ಮಂಜೂರಾಗಿದೆ. ಬೇಲ್ ಸಿಕ್ಕ ಎರಡು ದಿನಗಳ ಬಳಿಕ ಅಂದ್ರೆ ಇಂದು ರಾಗಿಣಿಗೆ ಜೈಲಿನಿಂದ ರಿಲೀಸ್ ಭಾಗ್ಯ ದೊರೆಯಲಿದೆ.

    ಪ್ರಕರಣದ ಹಿನ್ನೆಲೆ:
    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ರಾಗಿಣಿಗೆ ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

    ರಾಗಿಣಿ ಕಳೆದ 140 ದಿನಗಳಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಯಾವುದೇ ಬೆಳವಣಿಗೆಗಳಿಲ್ಲ. ರಾಗಿಣಿ ಮನೆಯಲ್ಲಿ ಯಾವುದೇ ಡ್ರಗ್ ವಶಪಡಿಸಿಕೊಂಡಿಲ್ಲ ಮತ್ತು ಸೇವಿಸಿಲ್ಲ. ಕೇವಲ ಆರೋಪಿ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿಯನ್ನು ಬಂಧಿಸಲಾಗಿತ್ತು. ಈಗಾಗಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಜಾಮೀನು ಸಿಕ್ಕಿದೆ. ಹಾಗಾಗಿ ಜಾಮೀನು ನೀಡಬೇಕೆಂದು ರಾಗಿಣಿ ಪರ ವಕೀಲ ಸಿದಾರ್ಥ ಲೂಥ್ರಾ ವಾದ ಮಂಡಿಸಿದ್ದರು.

    ಡ್ರಗ್ ಪತ್ತೆಹಚ್ಚಲು ಲ್ಯಾಬ್ ಫಲಿತಾಂಶಗಳನ್ನು ಹಾಳುಮಾಡುವ ಪ್ರಯತ್ನದಲ್ಲಿ ದ್ವಿವೇದಿ ನೀರನ್ನು ಮೂತ್ರದ ಮಾದರಿಯೊಂದಿಗೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಪ್ರಕರಣ ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ ಎಂಬ ಅಂಶಗಳು ಲೂಥ್ರಾ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

  • ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಚಿಕ್ಕಪ್ಪ, ಸಹೋದರನಿಗೆ ಗಲ್ಲು ಶಿಕ್ಷೆ

    ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಚಿಕ್ಕಪ್ಪ, ಸಹೋದರನಿಗೆ ಗಲ್ಲು ಶಿಕ್ಷೆ

    ಭೋಪಾಲ್: ಅಪರೂಪದ ಪ್ರಕರಣವೊಂದರಲ್ಲಿ ಮಧ್ಯ ಪ್ರದೇಶ ನ್ಯಾಯಾಲಯ 21 ವರ್ಷದ ಯುವಕ ಹಾಗೂ 42 ವರ್ಷದ ಚಿಕ್ಕಪ್ಪನಿಗೆ ಗಲ್ಲು ಶಿಕ್ಷೆ ವಿಧಿಸಿದೆ. 12 ವರ್ಷದ ಬಾಲಕಿ ಮೇಲೆ ಈ ಇಬ್ಬರು ಕಾಮುಕರು ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಕ್ಕೆ ಕೋರ್ಟ್ ಈ ಕಠಿಣ ಶಿಕ್ಷೆ ವಿಧಿಸಿದೆ.

    ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಮರಣದಂಡನೆಗಿಂತ ಕಡಿಮೆ ಶಿಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಉಮಾಶಂಕರ್ ಅಗರ್ವಾಲ್ ಅವರು 12 ವರ್ಷದ ಬಲಕಿಯ ಚಿಕ್ಕಪ್ಪ ಹಾಗೂ ಸಹೋದರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಕ್ಕೆ ಕೋರ್ಟ್ ಈ ಕಠಿಣ ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 376-ಎ(ಅತ್ಯಾಚಾರ) ಹಾಗೂ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಾಗಿತ್ತು.

    ಮಾರ್ಚ್ 13, 2019 ರಂದು ಬಾಲಕಿ ಕಾಣೆಯಾದ ಮರುದಿನ ಹೊಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಆಕೆಯ ಸಹೋದರ ಬಲಕಿಯನ್ನು ಅಪಹರಿಸಿ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದ ಬಳಿಕ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ತಿಳಿದು ಬಂದಿದೆ.

    ಅತ್ಯಾಚಾರ ನಡೆಸಿದ ಬಳಿಕ ಪಾಪಿಗಳು ಬಾಲಕಿಯನ್ನು ಕೊಡಲಿಯಿಂದ ಶಿರಚ್ಛೇದ ಮಾಡಿದ್ದರು. ಅಲ್ಲದೆ ಕೊಲ್ಲುವ ಮುನ್ನ ಸೊಡೊಮೈಸ್ಡ್ ಮಾಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಮನೆಯಿಂದ ಕುಡಗೋಲು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 29 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಡಿಎನ್‍ಎ ಹಾಗೂ ಮರಣೋತ್ತರ ಪರೀಕ್ಷೆ ವರದಿಯು ಆರೋಪಗಳನ್ನು ದೃಢಪಡಿಸಿವೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಾಹಿರ್ ಖಾನ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

    ರಕ್ಷಾ ಬಂಧನದಂದು ಬಾಲಕಿ ಸಹೋದರನಿಗೆ ರಾಖಿ ಕಟ್ಟುತ್ತಿದ್ದಳು. ಆದರೆ ಸಹೋದರ ಅಕೆಯ ಮೇಲೆಯೇ ಅತ್ಯಾಚಾರ ಎಸಗುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾನೆ ಎಂದು ಖಾನ್ ಕೋರ್ಟ್‍ಗೆ ತಿಳಿಸಿದ್ದಾರೆ.

  • ಜ. 27ರಂದು ಬೆಳಗ್ಗೆಯೇ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆ

    ಜ. 27ರಂದು ಬೆಳಗ್ಗೆಯೇ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆ

    ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ಹಾಗೂ ದಿವಂಗತ ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಜನವರಿ 27 ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

    2014 ರಲ್ಲಿ ಅಪಾರ ಸಂಪತ್ತು, ಅಕ್ರಮ ಆಸ್ತಿ ಹೊಂದಿರುವುದಕ್ಕಾಗಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಈ ವಿಚಾರವಾಗಿ ದಿವಂಗತ ಜೆ. ಜಯಲಲಿತಾ ಸೇರಿದಂತೆ ನಾಲ್ವರಿಗೆ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ, ಜನವರಿ 27 ರಂದು ಬಿಡುಗಡೆಯಾಗಲಿದ್ದಾರೆ ಎಂದು ಶಶಿಕಲಾ ಪರ ವಕೀಲ ಎನ್ ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ.

    2017 ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ 2017 ಫೆಬ್ರವರಿ 15 ರಂದು ಶಶಿಕಲಾ ಕಾರಾಗೃಹ ಅಧಿಕಾರಿಗಳ ಎದುರು ಹಾಜರಾಗಿದ್ದರು. ಈ ವೇಳೆ ಶಶಿಕಲಾ ನೀಡಬೇಕಾದ ದಂಡವನ್ನು ನೀಡಿದರೆ ಇದೇ ತಿಂಗಳ 27 ರಂದು ಬಿಡುಗಡೆ ಮಾಡುತ್ತೆವೆ ಎಂದು ನ್ಯಾಯಾಲಯ ತಿಳಿಸಿತ್ತು. ಅದರಂತೆ ಅವರ ಕುಟುಂಬ 10 ಕೋಟಿ ರೂಪಾಯಿಗಳನ್ನು ನ್ಯಾಯಾಲಯಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.

    ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗಿ ಬರುತ್ತಿರುವ ಶಶಿಕಲಾ ಅವರಿಗೆ ಉಳಿದುಕೊಳ್ಳಲು ಅವರ ಕುಟುಂಬ ವ್ಯವಸ್ಥೆಯನ್ನು ಮಾಡಿದೆ. ಚೆನ್ನೈನಲ್ಲಿ 2 ಬಂಗಲೆಯನ್ನು ಈಗಾಗಲೇ ಹುಡುಕಿಟ್ಟಿದೆ ಎಂದು ತಿಳಿಸಿದ್ದಾರೆ.

     

     

  • ವಿದ್ಯಾರ್ಥಿ ಜೊತೆ ಹಾಸಿಗೆ ಹಂಚ್ಕೊಂಡ ಟೀಚರ್ – ಸೆಕ್ಸ್ ಬಳಿಕ ಕರಾಳ ಅಸಹ್ಯ ಸತ್ಯ ಬಿಚ್ಚಿಟ್ಟ ಬಾಲಕ

    ವಿದ್ಯಾರ್ಥಿ ಜೊತೆ ಹಾಸಿಗೆ ಹಂಚ್ಕೊಂಡ ಟೀಚರ್ – ಸೆಕ್ಸ್ ಬಳಿಕ ಕರಾಳ ಅಸಹ್ಯ ಸತ್ಯ ಬಿಚ್ಚಿಟ್ಟ ಬಾಲಕ

    – 15ರ ಬಾಲಕನಿಗೆ ಸೆಕ್ಸ್ ಗೆ ಅಹ್ವಾನಿಸಿದ್ದ 35ರ ಶಿಕ್ಷಕಿ

    ಲಂಡನ್: 35 ವರ್ಷದ ಶಿಕ್ಷಕಿ ತನ್ನ 15 ವರ್ಷದ ಅಪ್ರಾಪ್ತನ ಜೊತೆ ಹಾಸಿಗೆ ಹಂಚಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿದ್ಯಾರ್ಥಿ ಸೆಕ್ಸ್ ಬಳಿಕ ಭಯಾನಕ ಮತ್ತು ಅಸಹ್ಯಕರವಾದ ಸತ್ಯವನ್ನ ನ್ಯಾಯಲಯದ ಮುಂದೆ ವೀಡಿಯೋ ಸಂದರ್ಶನದಲ್ಲಿ ಹೊರ ಹಾಕಿದ್ದಾನೆ.

    2018ರಲ್ಲಿ 35 ವರ್ಷದ ಶಿಕ್ಷಕಿ ಕ್ಯಾಂಡೈಸ್ ಬಾರ್ಬರ್ ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಹೊಂದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಆರೋಪಗಳನ್ನ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ಕೆಲಸದಿಂದ ವಜಾ ಮಾಡಿತ್ತು. ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಶಿಕ್ಷಕಿ ಶಿಕ್ಷೆಗೂ ಸಹ ಗುರಿಯಾಗಿದ್ದಳು. ಆದರೆ ನ್ಯಾಯಾಲಯ ವಿದ್ಯಾರ್ಥಿ ಜೊತೆ ಅಶ್ಲೀಲ ಫೋಟೋ ಹಂಚಿಕೊಂಡ ಪ್ರಕರಣದಿಂದ ಶಿಕ್ಷಕಿಯನ್ನ ಖುಲಾಸೆಗೊಳಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಕೆಯಾದ ಹಿನ್ನೆಲೆ ಎರಡನೇ ಬಾರಿ ವಿಚಾರಣೆ ನಡೆಸಲಾಗುತ್ತಿದೆ.

    ಟಾಪ್‍ಲೆಸ್ ಫೋಟೋ ಕಳುಹಿಸಿದ್ಳು: ಎರಡೂವರೆ ವರ್ಷಗಳ ಹಿಂದೆ ವಿದ್ಯಾರ್ಥಿಯ ಫೋನ್ ಪಡೆದ ಕ್ಯಾಂಡೈಸ್, ಸ್ನ್ಯಾಪ್ ಚಾಟ್ ಇನ್‍ಸ್ಟಾಲ್ ಮಾಡಿದ್ದಾಳೆ. ಆರಂಭದಲ್ಲಿ ವಿದ್ಯಾರ್ಥಿ ಜೊತೆ ಸಹಜವಾಗಿ ಚಾಟ್ ಮಾಡುತ್ತಿದ್ದಳು. ದಿನ ಕಳೆದಂತೆ ಅಶ್ಲೀಲ ಸಂದೇಶ, ಲೈಂಗಿಕತೆ ಪ್ರಚೋದಿಸುವ ಫೋಟೋಗಳನ್ನ ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಕ್ಯಾಂಡೈನ್ ತನ್ನದೇ ಟಾಪ್‍ಲೆಸ್ ಫೋಟೋಗಳನ್ನ ಕಳಿಸಿ ಸೆಕ್ಸ್ ಗೆ ಆಹ್ವಾನಿಸಿದ್ದಳು.

    ಬಾಲಕ ಹೇಳಿದ ಸತ್ಯ: ಶಿಕ್ಷಕಿಯ ಜೊತೆ ಸೆಕ್ಸ್ ನಂತರ ಶಾಲೆಯಲ್ಲಿಯೂ ಆಕೆ ನನಗೆ ಮುಜುಗರ ಉಂಟು ಮಾಡುತ್ತಿದ್ದಳು. ಶಾಲೆಯಲ್ಲಿಯೂ ಕಾಂಡೈಸ್ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಳು. ಹಾಗೆ ನಮ್ಮಿಬ್ಬರ ಸಂಬಂಧದ ಬಗ್ಗೆ ಕೆಲ ವದಂತಿಗಳು ಶಾಲೆಯಲ್ಲಿ ಹರಡಿದವು. ಈ ಬಗ್ಗೆ ಗೆಳೆಯರ ಜೊತೆ ಹೇಳಿದಾಗ ಅವರಾರು ನನ್ನ ಮಾತುಗಳನ್ನ ನಂಬಲಿಲ್ಲ. ಕಾರಣ ಅವರೆಲ್ಲರೂ ಶಿಕ್ಷಕಿ ಕ್ಯಾಂಡೈಸ್ ಳನ್ನು ಗೌರವದಿಂದ ಕಾಣುತ್ತಿದ್ದರು ಎಂದು ಹೇಳಿದ್ದಾನೆ.

    ಬೆದರಿಕೆ ಹಾಕಿದ ನೀಚ ಹೆಂಗಸು: ಇನ್ನು ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಯಾರಿಗಾದರೂ ಹೇಳಿದರೆ ಪರಿಣಾಮ ಚೆನ್ನಾಗಿರಲಿಲ್ಲ. ನಿನ್ನ ಮುಂದಿನ ಶೈಕ್ಷಣಿಕ ಭವಿಷ್ಯ ಹಾಳಾಗಲಿದೆ ಎಂದು ಕ್ಯಾಂಡೈಸ್ ಬೆದರಿಕೆ ಹಾಕಿದ್ದಳು ಎಂದು ಬಾಲಕ ತಿಳಿಸಿದ್ದಾನೆ.

    ಗೌರವಯುತವಾದ ಸ್ಥಾನದಲ್ಲಿರುವ ಶಿಕ್ಷಕಿ ಮಕ್ಕಳ ಜೊತೆ ಈ ರೀತಿ ವರ್ತಿಸುವುದು ಅಪರಾಧ. ಅಸಹ್ಯ ಫೋಟೋಗಳನ್ನ ಕಳುಹಿಸಿ ಅಪ್ರಾಪ್ತರನ್ನ ಲೈಂಗಿಕತೆಗೆ ಪ್ರಚೋಧಿಸುವುದು ತಪ್ಪು. ಶಿಕ್ಷಕಿ ವಿರುದ್ಧದ ಮೂರು ಪ್ರಕರಣ ಸಂಬಂಧ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಿಚರ್ಡ್ ಮಿಲ್ನೆ ಮಾಹಿತಿ ನೀಡಿದ್ದಾರೆ.

  • ಬೀದಿ ನಾಯಿ ಮೇಲೆ ಅತ್ಯಾಚಾರ- ವಿಕೃತ ಕಾಮಿಗೆ 6 ತಿಂಗಳು ಜೈಲು ಶಿಕ್ಷೆ

    ಬೀದಿ ನಾಯಿ ಮೇಲೆ ಅತ್ಯಾಚಾರ- ವಿಕೃತ ಕಾಮಿಗೆ 6 ತಿಂಗಳು ಜೈಲು ಶಿಕ್ಷೆ

    – ಪಾಸ್‍ಪೋರ್ಟ್ ಕಚೇರಿ ಬಳಿ ಇದ್ದ ನಾಯಿ ಮೇಲೆ ಅತ್ಯಾಚಾರ

    ಮುಂಬೈ: ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ವ್ಯಕ್ತಿಗೆ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿದೆ.

    ಕಳೆದ ಜುಲೈನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ಇದೀಗ ಥಾಣೆ ಜಿಲ್ಲಾ ನ್ಯಾಯಾಲಯ ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಪರಾಧಿಯನ್ನು ವಿಜಯ್ ಚಾಕ್ಲೆ(40) ಎಂದು ಗುರುತಿಸಲಾಗಿದ್ದು, ವಾಗ್ಲೆ ಎಸ್ಟೇಟ್ ನಿವಾಸಿಯಾಗಿದ್ದಾನೆ. ಈತ ಇತರೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದ. ಮುಖ್ಯವಾಗಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದ. ಅಲ್ಲದೆ ಡ್ರಗ್ ವ್ಯಸನಿಯಾಗಿದ್ದ ಎಂದು ವರದಿಯಾಗಿದೆ.

    ಪ್ರಥಮ ದರ್ಜೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ವಿ.ಪಿ.ಖಂಡಾರೆ ಅವರು ತೀರ್ಪು ಪ್ರಕಟಿಸಿದ್ದಾರೆ. ಐಪಿಸಿ ಸೆಕ್ಷನ್ 377(ಅಸ್ವಾಭಾವಿಕ ಲೈಂಗಿಕತೆ) ಅಡಿ ಆರೋಪ ಸಾಬೀತಾಗಿದ್ದರಿಂದ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವಿಕೆ ಅಡಿ 1,050 ರೂ.ದಂಡವನ್ನು ಸಹ ವಿಧಿಸಿದ್ದಾರೆ.

    ಬೀದಿ ನಾಯಿ ಥಾಣೆಯ ಹಳೆ ಪಾಸ್‍ಪೋರ್ಟ್ ಕಚೇರಿ ಬಳಿ ಇದ್ದಾಗ ಪ್ರಕರಣ ನಡೆದಿದೆ. ಕೆಲ ಸ್ಥಳೀಯರು ಬೀದಿ ನಾಯಿಗಳಿಗೆ ಆಹಾರ ನೀಡಲು ಹೋದಾಗ ನಾಯಿ ಮೇಲೆ ಅತ್ಯಾಚಾರ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಪ್ರಾಣಿ ದಯಾ ಸಂಘದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನೆ ಕುರಿತು ಪೊಲೀಸರಿಗೆ ತಿಳಿಸಲಾಗಿದೆ. ಶ್ರೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಮತ್ತೊಮ್ಮೆ ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರಾಣಿ ದಯಾ ಸಂಘದವರು ಮನವಿ ಮಾಡಿದ್ದರು. ಅದರಂತೆ ಕೋರ್ಟ್ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದೆ.

  • ಸಲಿಂಗ ಕಾಮಕ್ಕಾಗಿ ಬಾಲಕರನ್ನ ಅಪಹರಿಸಿದ್ದವನಿಗೆ 10 ವರ್ಷ ಜೈಲು

    ಸಲಿಂಗ ಕಾಮಕ್ಕಾಗಿ ಬಾಲಕರನ್ನ ಅಪಹರಿಸಿದ್ದವನಿಗೆ 10 ವರ್ಷ ಜೈಲು

    – ಕೊಪ್ಪಳದ ಹಾಸ್ಟೆಲ್ ನಿಂದ ಬಾಲಕನ ಕಿಡ್ನ್ಯಾಪ್

    ಕೊಪ್ಪಳ: ಸಲಿಂಗ ಕಾಮಕ್ಕಾಗಿ ವಸತಿ ನಿಲಯದ ವಿದ್ಯಾರ್ಥಿಗಳನ್ನ ಅಪಹರಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದ ವ್ಯಕ್ತಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿದೆ.

    2018ರಲ್ಲಿ ದೋಷಿ ವಿದ್ಯಾರ್ಥಿಗಳನ್ನ ಅಪಹರಿಸಿದ್ದನು. ಅದರಲ್ಲಿ ಕೊಪ್ಪಳದ ವಸತಿ ನಿಲಯದ ವಿದ್ಯಾರ್ಥಿ ಸಹ ಒಬ್ಬನಿದ್ದನು. ಬಾಲಕರಿಗೆ ಮೊಬೈಲ್ ಆಮಿಷ ತೋರಿಸಿ ಬೆಂಗಳೂರು, ತಿರುಪತಿ, ರಾಯಚೂರು, ಗದಗ, ಕಲಬುರಗಿ ಸೇರಿದಂತೆ ಹಲವು ಊರುಗಳಿಗೆ ಬಾಲಕರ ಜೊತೆ ತಿರುಗಾಡಿದ್ದನು. ಈ ವೇಳೆ ಬಾಲಕರನ್ನ ಸಲಿಂಗಕಾಮಕ್ಕಾಗಿ ಬಳಸಿಕೊಂಡಿದ್ದನು.

    ಬೆಂಗಳೂರಿನಲ್ಲಿ ಸಿಕ್ಕ ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಕೊಪ್ಪಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಸ್.ಎಂ.ಜಲವಾದಿಯವರುಪ್ರಕರಣದ ವಿಚಾರಣೆ ನಡೆಸಿದ್ದರು. ಕೋರ್ಟ್‌ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗ ಶಿಕ್ಷೆಯನ್ನು ಪ್ರಕಟಿಸಲಾಗಿದೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಗಲ್ಲು ಶಿಕ್ಷೆ

    ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಗಲ್ಲು ಶಿಕ್ಷೆ

    ಹಾವೇರಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಹಾವೇರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ಅಪರಾಧಿ ಮಂಜುನಾಥಗೌಡ ಪಾಟೀಲಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಆಗಸ್ಟ್ 6, 2018 ರಂದು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಗ್ರಾಮದಿಂದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ, ವರದಾ ನದಿ ಬ್ರಿಡ್ಜ್ ಕೆಳಗೆ ಮೃತದೇಹ ಎಸೆದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಪರಾಧಿ ಪರಾರಿ ಆಗಿದ್ದ.

    ಹಾವೇರಿ ಜಿಲ್ಲೆಯ ಜನರು ಈ ಪ್ರಕರಣದಿಂದ ಬೆಚ್ಚಿ ಬಿದ್ದಿದ್ದರು. ಕಾಲೇಜಗೆ ಹೋದ ಅಪ್ರಾಪ್ತೆ ಮಗಳು ಮನೆಗೆ ವಾಪಸ್ ಬಾರದ್ದಕ್ಕೆ ಪೋಷಕರು ತೀವ್ರ ಆತಂಕಗೊಂಡಿದ್ದರು. ಕೊಲೆಯಾಗಿ ಎರಡ್ಮೂರು ದಿನಗಳ ಬಳಿಕ ಮಗಳ ಮೃತದೇಹದ ಪತ್ತೆಯಾಗಿತ್ತು. ಬಳಿಕ ಜಿಲ್ಲೆಯ ಪೋಲಿಸರು ಅಪರಾಧಿಯನ್ನ ಪತ್ತೆ ಮಾಡಿದ್ದರು.

    ಎರಡು ವರ್ಷಗಳ ಕಾಲ ನಿರಂತರವಾಗಿ ವಾದ-ವಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶರು ಈ.ರಾಜುಗೌಡ ಮರಣದಂಡನೆ ತೀರ್ಪು ಪ್ರಕಟಣೆ ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿನಾಯಕ ಪಾಟೀಲ್ ವಾದ ಮಂಡಿಸಿದ್ದಾರೆ.

  • ಪಾತಕಿ ಛೋಟಾ ರಾಜನ್‍ಗೆ 2 ವರ್ಷ ಜೈಲು

    ಪಾತಕಿ ಛೋಟಾ ರಾಜನ್‍ಗೆ 2 ವರ್ಷ ಜೈಲು

    ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಮತ್ತು ಅವನ ಸಹಚರರಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ.

    ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛೋಟಾ ರಾಜನ್ ಮತ್ತು ಅವನ ಮೂವರು ಸಹಚರರಿಗೆ ಮುಂಬೈ ಸೆಷನ್ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಛೋಟಾ ರಾಜನ್‍ನನ್ನು 2015ರ ಅಕ್ಟೋಬರ್‍ನಲ್ಲಿ ಇಂಡೊನೇಷ್ಯಾದಲ್ಲಿ ಭಾರತದ ಅಧಿಕಾರಿಗಳು ಬಂಧಿಸಿದ್ದರು. ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. 75 ಅಪರಾಧಗಳ ಪೈಕಿ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಮಹರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ 20 ಕ್ಕೂ ಹೆಚ್ಚು ಪ್ರಕರಣಗಳು ರಾಜನ್ ವಿರುದ್ಧ ದಾಖಲಾಗಿದೆ.

    ಏನಿದು ಪ್ರಕರಣ:
    ನಂದು ವಾಜೆಕರ್ ಎಂಬ ಬಿಲ್ಡರ್ 2015 ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದನು. ಪರಮಾನಂದ ಠಕ್ಕರ್ ಎಂಬ ಏಜೆಂಟನಿಗೆ 2 ಕೋಟಿ ಕೊಡಬೇಕಾಗಿತ್ತು. ಆದರೆ ಪರಮಾನಂದ ಠಕ್ಕರ್ ಹೆಚ್ಚಿನ ಹಣವನ್ನು ಬೇಡಿಕೆಯಿಟ್ಟಿದ್ದಾನೆ. ಈ ಬೇಡಿಕೆಗೆ ವಾಜೇಕರ್ ಒಪ್ಪಲಿಲ್ಲ. ನಂತರ ಪರಮಾನಂದ ಠಕ್ಕರ್ ಛೋಟಾ ರಾಜನ್‍ನನ್ನು ಸಂಪರ್ಕಿಸಿ ಈ ಡೀಲ್ ಮಾಡುವಂತೆ ಹೇಳಿದ್ದನು. ನಂತರ ಛೋಟಾ ರಾಜನ್ ಬಿಲ್ಡರ್ ನಂದು ವಾಜೆಕರ್‍ಗೆ 26 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದನು. ಹಣವನ್ನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಛೋಟಾ ರಾಜನ್ ಹಿನ್ನೆಲೆ:
    ರಾಜೇಂದ್ರ ನಿಕಲಾಜೆಯಾಗಿದ್ದವನು ಭೂಗತ ಲೋಕಕ್ಕೆ ಪ್ರವೇಶಿಸುತ್ತಿದ್ದಂತೆ ಛೋಟಾ ರಾಜನ್ ಆಗಿ ಬದಲಾದನು. 1970ರಲ್ಲಿ ಚೇಂಬೂರ್ ಬಳಿಯ ಚಿತ್ರಮಂದಿರಗಳ ಮುಂದೆ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದನು. ಸಣ್ಣಪುಟ್ಟ ವ್ಯಾಪಾರ, ಕಳ್ಳಬಟ್ಟಿ ತಯಾರಿಕೆ ಹಾಗೂ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದನು. ಹೀಗೆ ದಾವೂದ್ ಗ್ಯಾಂಗ್ ಸೇರಿಕೊಂಡ ನಂತರ ಛೋಟಾ ರಾಜನ್ ಎಂದು ಕುಖ್ಯಾತನಾದನು.

    ಛೋಟಾ ರಾಜನ್ ವಿದೇಶದಲ್ಲಿದ್ದುಕೊಂಡು ಭೂಗತ ಲೋಕದ ವ್ಯವಹಾರಗಳನ್ನು ನಿಂಯತ್ರಿಸುತ್ತಿದ್ದನು. ಮತ್ತೊಬ್ಬ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂಗೂ ಮುಂಬೈ ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸುತ್ತಿದ್ದರು. ಈ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿತ್ತು.