Tag: court

  • ಆ.14 ರಂದು ಚಿಕ್ಕೋಡಿಯಲ್ಲಿ ಬೃಹತ್ ಲೋಕ ಅದಾಲತ್

    ಆ.14 ರಂದು ಚಿಕ್ಕೋಡಿಯಲ್ಲಿ ಬೃಹತ್ ಲೋಕ ಅದಾಲತ್

    ಚಿಕ್ಕೋಡಿ: ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ. ಈ ಲೋಕ ಅದಾಲತ್‍ನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್ ಚವ್ಹಾಣ್ ಅವರು ಕರೆ ನೀಡಿದ್ದಾರೆ.

    ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಆಗಸ್ಟ್ 14 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ.

    ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚವ್ಹಾಣ್ ಅವರು, ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳು ನಡೆಯದೇ ಅನೇಕ ವ್ಯಾಜ್ಯಗಳು ಇತ್ಯರ್ಥ ಆಗದೇ ಉಳಿದುಕೊಂಡಿವೆ. ಹೀಗಾಗಿ ಲೋಕ ಅದಾಲತ್, ನೆನೆಗುದಿಗೆ ಬಿದ್ದಿರುವ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಲೋಕ ಅದಾಲತ್ ಮೂಲಕ ಸಾರ್ವಜನಿಕರು, ಕಕ್ಷಿದಾರರು, ಬ್ಯಾಂಕ್ ಮತ್ತು ವಿವಿಧ ಸಂಸ್ಥೆಗಳು ತಮ್ಮ ವ್ಯಾಜ್ಯಗಳಿಂದ ರಾಜೀಯಾಗಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದೇಶದ್ರೋಹ ಕಾನೂನು ಈಗಲೂ ಅಸ್ತಿತ್ವದಲ್ಲಿರಬೇಕೆ? – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಲೋಕ ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಅಂದರೆ ಚೆಕ್ ಅಮಾನ್ಯ ಪ್ರಕರಣ, ವಾಹನ ಅಪಘಾತ ಪರಿಹಾರ, ಸಾಲ ವಸೂಲಾತಿ, ಕೌಟುಂಬಿಕ ಮತ್ತು ಜೀವನಾಂಶ (ವಿಚ್ಛೇದನ ಹೊರತುಪಡಿಸಿ) ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಅದಾಲತ್ ಒಂದು ಸುವರ್ಣ ಅವಕಾಶ ಆಗಿರುತ್ತದೆ. ಸಾರ್ವಜನಿಕರು ಲೋಕ ಅದಾಲತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಟಿ.ಶ್ರೀಕಾಂತ್, ವಿಜಯ ಕುಮಾರ್ ಬಾಗಡೆ, ಆಶೋಕ ಆರ್.ಎಚ್, ನಾಗರ ಪಾಟೀಲ್, ಸರಕಾರಿ ಅಭಿಯೋಜಕ ವೈ.ಜಿ.ತುಂಗಳ, ಎಜೆಪಿ ಆರ್.ಐ.ಖೋತ, ಎಲ್.ವಿ.ಬೋರನ್ನವರ ಭಾಗಿಯಾಗಿದ್ದರು.

  • ಸಿಎಂ, ವಿಜಯೇಂದ್ರ ಸೇರಿದಂತೆ 9 ಮಂದಿಗೆ ಬಿಗ್ ರಿಲೀಫ್

    ಸಿಎಂ, ವಿಜಯೇಂದ್ರ ಸೇರಿದಂತೆ 9 ಮಂದಿಗೆ ಬಿಗ್ ರಿಲೀಫ್

    ಬೆಂಗಳೂರು: ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಲಂಚ ಆರೋಪ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಇಂದು ಬಿಗ್ ರಿಲೀಫ್ ಸಿಕ್ಕಿದೆ.

    ಯಡಿಯೂರಪ್ಪ ಮತ್ತು ಅವರ ಕುಟುಂಬದ 9 ಸದಸ್ಯರ ವಿರುದ್ಧ ಎಫ್‍ಐಆರ್ ದಾಖಲಿಸಲು ಕೋರಿ ಸಲ್ಲಿಕೆಯಾಗಿದ್ದ ಖಾಸಗಿ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ. ಇದನ್ನೂ ಓದಿ : ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

    ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ, ಕೋರ್ಟ್ ಮೊರೆ ಹೋಗಿದ್ದರು.

    ದೂರಿನಲ್ಲಿ ಏನಿತ್ತು?
    ಕೋಲ್ಕತ್ತಾ  ಮೂಲದ ಶೆಲ್ ಕಂಪನಿಗಳಲ್ಲಿ ಯಡಿಯೂರಪ್ಪ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಮ್ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

    ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್ ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

  • ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವನಿಗೆ 10 ವರ್ಷ ಜೈಲು ಶಿಕ್ಷೆ

    ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವನಿಗೆ 10 ವರ್ಷ ಜೈಲು ಶಿಕ್ಷೆ

    ಶಿವಮೊಗ್ಗ: ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ಬಳಿಕ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದ ಆರೋಪಿಗೆ ನ್ಯಾಯಾಲಯ ದಂಡ ವಿಧಿಸಿ, ಜೈಲು ಶಿಕ್ಷೆ ನೀಡಿದೆ.

    ಪ್ರಕರಣದ ಬಗ್ಗೆ 4 ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ದಯಾನಂದ ಅವರು ಆರೋಪಿ ಬೀರೇಶ್(30)ಗೆ 10 ಸಾವಿರ ರೂ.ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

    ಶಿವಮೊಗ್ಗದ ಯಲವಟ್ಟಿ ತಾಂಡಾದ ಬೀರೇಶ್(30) 17 ವರ್ಷದ ಅಪ್ರಾಪ್ತೆಯೊಂದಿಗೆ ಪ್ರೀತಿ ನಾಟಕವಾಡಿದ್ದ. ನಂತರ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬಾಲಕಿ ಗರ್ಭಿಣಿಯಾಗಲು ಕಾರಣನಾಗಿದ್ದ. ಬಾಲಕಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ 2017ರ ಜೂನ್ 28ರಂದು ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ.

    ಅಪ್ರಾಪ್ತೆ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ನಂತರ ಮದುವೆ ಆಗಿದ್ದಾನೆ ಎಂದು ಬಾಲಕಿ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಹಾಗೂ ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

  • ಭಟ್ಕಳದ ನ್ಯಾಯಾಲಯದಲ್ಲಿ ಬೆಂಕಿ ಅವಘಡ – ಸುಟ್ಟು ಕರಕಲಾದ ದಾಖಲೆಗಳು

    ಭಟ್ಕಳದ ನ್ಯಾಯಾಲಯದಲ್ಲಿ ಬೆಂಕಿ ಅವಘಡ – ಸುಟ್ಟು ಕರಕಲಾದ ದಾಖಲೆಗಳು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ರಂಗಿನಕಟ್ಟೆಯಲ್ಲಿರುವ ಜೆ.ಎಂ.ಎಫ್.ಸಿ ನ್ಯಾಯಾಲಯ ಕಟ್ಟಡದಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ನ್ಯಾಯಾಲಯದ ಮುಂದಿನ ಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವುದಾಗಿ ಪ್ರಥಮ ಮಾಹಿತಿಯನ್ನು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಬೆಳಗ್ಗೆ 4:15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹಲವು ತಾಸುಗಳ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ.  ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಕೈಗಳಿಗೆ ಪುಸ್ತಕ ನೀಡಿದ ಶಿಕ್ಷಣ ಇಲಾಖೆ

    ಕಡತಗಳಿಗೆ ಹಾನಿ
    ನ್ಯಾಯಾಲಯದಲ್ಲಿದ್ದ ಸಾವಿರಾರು ಕೇಸುಗಳ ಕಡತಗಳು ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಟ್ಟುಹೋಗಿದೆ. ಕಾಗದಕ್ಕೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸಾಕಷ್ಟು ಕಡತಗಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದು ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ್ ಶಿವಪೂಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐಐಎಸ್‍ಸಿ ಶೂಟೌಟ್ ಕೇಸ್ – 7ನೇ ಆರೋಪಿ ಬಿಡುಗಡೆ

    ಐಐಎಸ್‍ಸಿ ಶೂಟೌಟ್ ಕೇಸ್ – 7ನೇ ಆರೋಪಿ ಬಿಡುಗಡೆ

    ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ) ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ 7ನೇ ಆರೋಪಿಯನ್ನು ಬೆಂಗಳೂರಿನ ಎನ್‍ಐಎ ಕೋರ್ಟ್ ಬಿಡುಗಡೆ ಮಾಡಿದೆ.

    2005ರಲ್ಲಿ ಐಐಎಸ್‍ಸಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷದ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ತ್ರಿಪುರ ಮೂಲದ ಮೊಹಮ್ಮದ್ ಹಬೀಬ್‍ನನ್ನು(40) ಬಂಧಿಸಿತ್ತು.

    7ನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದ ಮೊಹಮ್ಮದ್ ಹಬೀಬ್ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲವೆಂದು ಅಭಿಪ್ರಾಯಪಟ್ಟು ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ- ಒಂದು ಮೊಬೈಲ್‍ನಿಂದ ಇಡೀ ಕೃತ್ಯದ ಮಾಹಿತಿ ಬಹಿರಂಗ

    ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೊದಲನೇ ಆರೋಪಿ ಶಹಾಬುದ್ದೀನ್ ಅಹ್ಮದ್ 2008ರ ಪೊಲೀಸರ ತನಿಖೆಯಲ್ಲಿ ಹಬೀಬ್ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಿದ್ದ. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹೊಂದಿದ್ದ ಆರೋಪ ಹಬೀಬ್ ಮೇಲಿತ್ತು.

    ಏನಿದು ಪ್ರಕರಣ?
    2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೂಟೌಟ್ ಪ್ರಕರಣ ನಡೆದಿತ್ತು. ಘಟನೆಯಲ್ಲಿ ದೆಹಲಿಯ ಅತಿಥಿ ಪ್ರೊಫೆಸರ್ ಎಂಸಿ ಪುರಿ ಮೃತಪಟ್ಟರೆ ಅನೇಕ ಮಂದಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಮೊದಲು ಸದಾಶಿವ ನಗರ ಠಾಣೆಯಲ್ಲಿ ಎಫ್‍ಐಆರ್ ಆಗಿತ್ತು. ನಂತರ ಕೇಸ್ ಎನ್‍ಐಎಗೆ ವರ್ಗಾವಣೆಯಾಗಿತ್ತು.

    ಈ ಕೇಸ್ ನಲ್ಲಿ 4 ವರ್ಷಗಳ ಹಿಂದೆ ಅರೆಸ್ಟ್ ಆಗಿದ್ದ ಹಬೀಬ್ ಜೈಲು ಸೇರಿದ್ದರೂ ಕೂಡ ಒಮ್ಮೆಯೂ ವಿಚಾರಣೆ ನಡೆಸಿರಲಿಲ್ಲ. ಇತ್ತಿಚೆಗೆ ಪ್ರಕರಣದಿಂದ ಬಿಡುಗಡೆ ಮಾಡುವಂತೆ ಸಿಆರ್ಪಿಸಿ ಸೆಕ್ಷನ್ 227ರ ಅಡಿ ಅರ್ಜಿ ಸಲ್ಲಿಸಿದ್ದ.

  • ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ಮುಂಬೈ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆಯ ವಿರುದ್ಧ ನಟಿ, ಪರಿಸರವಾದಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಮತ್ತೆ ಜೂಹಿ ಚಾವ್ಲಾ ಈ ಕುರಿತು ಮಾತನಾಡಿದ್ದಾರೆ. ನಾನು 5ಜಿ ವಿರೋಧಿಯಲ್ಲ ಆದರೆ ಇದರಿಂದ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕೆಂದು ಹೇಳಿಕೊಂಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡಿದ ಜೂಹಿ ಚಾವ್ಲಾ, ನಾನು 5ಜಿ ತಂತ್ರಜ್ಞಾನದ ವಿರೋಧಿಯಲ್ಲ. ಆದರೆ ಇದರಿಂದ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು. ಮತ್ತು ಪ್ರತೀಯೊಬ್ಬರಿಗೂ ಇದು ಸುರಕ್ಷಿತ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. 5ಜಿ ವಿಕಿರಣದಿಂದ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿವೆ ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ಅರ್ಜಿ ವಜಾಗೊಳಿಸಿದ್ದು ಏಕೆ?:
    5ಜಿ ತಂತ್ರಜ್ಞಾನ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಜೂಹಿ ಚಾವ್ಲಾ 5ಜಿ ತಂತ್ರಜ್ಞಾನ ಜಾರಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಆದರೆ ಜೂಹಿ ಚಾವ್ಲಾ ಅವರ ಈ ಅರ್ಜಿಯನ್ನು ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ 20 ಲಕ್ಷ ರೂ ದಂಡ ವಿಧಿಸಿತ್ತು. ಅದಲ್ಲದೇ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿದಾರರ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ಲಿಂಕ್‍ನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿತ್ತು. ಅದಲ್ಲದೇ ಅಭಿಮಾಯೋರ್ವ ನಟಿಯ ಹಾಡು ಹಾಡಿ ವಿಚಾರಣೆಗೆ ಅಡ್ಡಿ ಪಡಿಸಿದ್ದು, ಆತನ ವಿರುದ್ಧವು ಕಾನೂನು ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿತ್ತು.

    ಈ ಎಲ್ಲಾ ಬೆಳವಣಿಗೆಯಿಂದ ಜೂಹಿ ಚಾವ್ಲಾ ತೀವ್ರ ಮುಜುಗರಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಜೂಹಿ ಚಾವ್ಲಾ ವಿರುದ್ಧ ವ್ಯಾಪಕ ಟೀಕೆ ಮತ್ತು ಟ್ರೋಲ್‍ಗಳು ಹರಿದಾಡುತ್ತಿತ್ತು. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಮತ್ತೆ 5ಜಿ ವಿರುದ್ಧ ಸಮರ ಸಾರಿದ್ದಾರೆ. ಇದನ್ನೂ ಓದಿ: 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್

    ದೂರಿನಲ್ಲಿ ಏನಿದೆ?
    ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.

    5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

    5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

  • ಜಾರಕಿಹೊಳಿ ಕೇಸ್ ಆರೋಪಿಗಳಿಗೆ ಜಾಮೀನು

    ಜಾರಕಿಹೊಳಿ ಕೇಸ್ ಆರೋಪಿಗಳಿಗೆ ಜಾಮೀನು

    ಬೆಂಗಳೂರು: ರಮೇಶ್ ಜಾರಕಿಹೊಳಿ ಬ್ಲಾಕ್ ಮೇಲ್ ಕೇಸ್ ನ ಇಬ್ಬರು ಆರೋಪಿಗಳಿಗೆ ಸಿಟಿ ಸಿವಿಲ್ ಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಇಬ್ಬರು ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಬಂಧನದಿಂದ ಬಚಾವ್ ಆಗಿದ್ದಾರೆ.

    ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು

    ಆರೋಪಿಗಳು ಇದುವರೆಗೂ ವಿಚಾರಣೆಗೆ ಹಾಜರಾಗಿಲ್ಲ ಎಂದು ವಾದ ಮಾಡಿದ್ದ ಎಸ್‍ಐಟಿಗೆ ಈ ಆದೇಶದಿಂದ ಹಿನ್ನಡೆಯಾಗಿದೆ. ಅಲ್ಲದೇ ಆದೇಶ ನೀಡಿದ ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.

  • ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಮೂವರಿಗೆ ಸಾಯುವವರೆಗೆ ಜೈಲು ಶಿಕ್ಷೆ

    ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಮೂವರಿಗೆ ಸಾಯುವವರೆಗೆ ಜೈಲು ಶಿಕ್ಷೆ

    ಉಡುಪಿ:ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂವರು ಆರೋಪಿಗಳು ದೋಷಿಗಳು ಎಂದಿರುವ  ಜಿಲ್ಲಾ ನ್ಯಾಯಾಲಯ, ದೋಷಿಗಳು ಜೀವಿತಾವಧಿ ಕಂಬಿ ಹಿಂದೆ ಇರಬೇಕು ಎಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    2016 ರ ಜುಲೈ 28 ರಂದು ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ ನವನೀತ್ ಶೆಟ್ಟಿ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ರಾಜೇಶ್ವರಿ ಗೆಳೆಯ ನಿರಂಜನ ಭಟ್ ಜೊತೆ ಸೇರಿ ನಂದಳಿಕೆಯ ಮನೆಯಲ್ಲಿ ಇರುವ ಹೋಮಕುಂಡದಲ್ಲಿ ಸುಟ್ಟು ಹಾಕಿದ್ದರು.

    ಎಲುಬು ಮತ್ತು ಮೂಳೆ ಪಕ್ಕದ ಹೊಳೆಗೆ ಎಸೆದು ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲಾಗಿತ್ತು. ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ತನ್ನ ಮಗ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಪತ್ನಿ ಪುತ್ರನ ವಿಚಾರಣೆಗೊಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಿಐಡಿ ತನಿಖೆ ಕೂಡ ಆಗಿತ್ತು. ನಾಲ್ಕು ವರ್ಷ 11 ತಿಂಗಳುಗಳ ಕಾಲ ಸುದೀರ್ಘ ವಾದ-ಪ್ರತಿವಾದ ನಡೆದು ಎಂದು ಕೋರ್ಟು ತೀರ್ಪು ಪ್ರಕಟಿಸಿದೆ.

     

    ಪ್ರಮುಖ ಆರೋಪಿಗಳಾಗಿರುವ ಪತ್ನಿ ರಾಜೇಶ್ವರಿ ಪುತ್ರ ನವನೀತ್ ಶೆಟ್ಟಿ ರಾಜೇಶ್ವರಿ ಗೆಳೆಯ ನಿರಂಜನ ದೋಷಿ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಭಾಸ್ಕರ ಶೆಟ್ಟಿ ಕುಟುಂಬದ ಪರ ವಾದ ಮಂಡಿಸಿದ್ದರು.

  • ಗ್ಯಾಂಗ್ ರೇಪ್ ಪ್ರಕರಣ- ಮೂವರು ಆರೋಪಿಗಳು ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಗ್ಯಾಂಗ್ ರೇಪ್ ಪ್ರಕರಣ- ಮೂವರು ಆರೋಪಿಗಳು ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವತಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹದಿನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

    ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ವಸಂತ ನಗರದ ವರ್ಚುವಲ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಪ್ರಕರಣದ ಗಂಭೀರತೆ, ಆರೋಪಿಗಳಿಂದ ಇನ್ನೂ ಸಾಕಷ್ಟು ಮಾಹಿತಿ ಕಲೆಹಾಕುವ ದೃಷ್ಟಿಯಿಂದ ಮೂವರನ್ನು ಹದಿನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡಿ ಹತ್ತನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಇದೇ ವೇಳೆ ಮತ್ತೋರ್ವ ಆರೋಪಿ ಕೊರೊನಾ ಪಾಸಿಟಿವ್ ಆಗಿದೆ ಅಂತಾ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದ. ಹಾಗಾಗಿ ಆ ಆರೋಪಿಗೆ ಠಾಣೆಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

    ಇದೇ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡುವ ವೇಳೆ ಪ್ರಮುಖ ಇಬ್ಬರು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಾಲಿಗೆ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಸದ್ಯ ಯುವತಿ ಮೇಲೆ ಗ್ಯಾಂಗ್‍ರೇಪ್ ಸಂಬಂಧ ಇಬ್ಬರು ಮಹಿಳೆಯರು ಸೇರಿ ಆರು ಜನರನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ನಂತರ ಯುವತಿ ಕೇರಳದ ಸಂಬಂಧಿಕರ ಮನೆಯಲ್ಲಿ ವಾಸವಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ತಂಡ ಸಂತ್ರಸ್ತ ಯುವತಿಯ ಬಳಿ ಹೇಳಿಕೆ ಪಡೆಯಲು ಮುಂದಾಗಿದೆ.

    ಏನಿದು ಪ್ರಕರಣ?
    ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ಕಾಮುಕರು ವಿಕೃತಿ ಮರೆದಿದ್ದಾರೆ. ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು

    ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಅಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಸ್ಸಾಂ ರಾಜ್ಯದ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ವೀಡಿಯೋದಲ್ಲಿ ಬಾಂಗ್ಲಾ ಪ್ರಜೆಗಳು ಭಾಗಿಯಾಗಿದ್ದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿ ರವಾನಿಸಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರನ್ನ ಪತ್ತೆ ಮಾಡಿದ್ದಾರೆ. ಆ ನಂತರ ಘಟನೆ ಬೆಂಗಳೂರಿನಲ್ಲಿ ನಡೆದಿರೋದು ಬಗ್ಗೆ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!

  • ನನ್ನ ಬಳಿ ಹಣವಿಲ್ಲ, ಲಾಯರ್ ಫೀಸ್ ಕಟ್ಟಲು 7.8 ಕೋಟಿ ಕೊಡಿ- ಲಂಡನ್ ಕೋರ್ಟ್‍ಗೆ ಮಲ್ಯ ಮನವಿ

    ನನ್ನ ಬಳಿ ಹಣವಿಲ್ಲ, ಲಾಯರ್ ಫೀಸ್ ಕಟ್ಟಲು 7.8 ಕೋಟಿ ಕೊಡಿ- ಲಂಡನ್ ಕೋರ್ಟ್‍ಗೆ ಮಲ್ಯ ಮನವಿ

    ಲಂಡನ್: ಬ್ಯಾಂಕುಗಳಿಗೆ ವಂಚನೆ ಪ್ರಕರಣದಲ್ಲಿ ಅಪರಾಧಿಯಾಗಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಲಾಯರ್ ಫೀಸ್ ಕಟ್ಟಲು ಮತ್ತೆ ಬ್ರಿಟಿಷ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ವಿಜಯ್ ಮಲ್ಯ, ಭಾರತದಲ್ಲಿನ ವಕೀಲರಿಗೆ ನೀಡಲು ನನ್ನ ಬಳಿ ಹಣವಿಲ್ಲ. ವಕೀಲರಿಗೆ ಹಣ ನೀಡಲು ಲಂಡನ್‍ನ ಕೋರ್ಟ್ ಫಂಡ್ಸ್ ಆಫೀಸ್‍ನಿಂದ 7.8 ಕೋಟಿ ರೂ. ಕೊಡಿ ಎಂದು ಮನವಿ ಮಾಡಿದ್ದಾರೆ.

    ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ನನ್ನ ಬಳಿ ಹಣವಿಲ್ಲ, ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಹೀಗಾಗಿ ಭಾರತದಲ್ಲಿನ ವಕೀಲರ ಶುಲ್ಕವನ್ನು ಭರಿಸಲು ನನ್ನಿಂದ ಆಗುತ್ತಿಲ್ಲ. ವಕೀಲರ ಶುಲ್ಕ ಪಾವತಿಸಲು 7.8 ಕೋಟಿ ರೂ. ನೀಡಿ ಎಂದು ಮಲ್ಯ ಮೇಲ್ಮನವಿ ಸಲ್ಲಿಸಿದ್ದಾರೆ.

    ಫೆಬ್ರವರಿಯಲ್ಲಿ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ ಆದೇಶವನ್ನು ಪ್ರಶ್ನಿಸಿ ವಿಜಯ್ ಮಲ್ಯ ಇದೀಗ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾರ್ನೆಟ್ ಅವರು, ಭವಿಷ್ಯದ ಕಾನೂನು ಶುಲ್ಕ ಹಾಗೂ ತನ್ನ ಜೀವನ ಸಾಗಿಸಲು ಮಾಸಿಕ 23 ಲಕ್ಷ ರೂ.ಗಳನ್ನು ಕೋರ್ಟ್ ಫಂಡ್ಸ್ ಆಫೀಸ್‍ನಿಂದ ನೀಡಲು ಅನುಮತಿಸಿದ್ದರು. ಆದರೆ ಇದರಲ್ಲಿ ಭಾರತದಲ್ಲಿನ ವಕೀಲರಿಗೆ ನೀಡುವ ಹಣವನ್ನು ಸೇರಿಸಿರಲಿಲ್ಲ. ಹೀಗಾಗಿ ಇದೀಗ ಭಾರತದಲ್ಲಿನ ವಕೀಲರ ಶುಲ್ಕವನ್ನು ಸಹ ಕೋಟ್ರ್ಸ್ ಫಂಡ್ಸ್ ಆಫೀಸ್‍ನಿಂದ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 12 ಕೋಟಿ ರೂ. ಆಸ್ತಿಯನ್ನು ಬಳಸಲು ಮಲ್ಯಗೆ ಬರ್ನೆಟ್ ಅವರು ಆಗ ಅನುಮತಿ ನೀಡಿದ್ದರು.

    ಈಗಾಗಲೇ ಮಲ್ಯ ಭಾರತದಲ್ಲಿನ ಕಾನೂನು ಸಂಸ್ಥೆಗಳಿಗೆ ನೀಡುವ 5.7 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿನ ಭವಿಷ್ಯದ ಕಾನೂನು ವೆಚ್ಚಗಳಿಗಾಗಿ ಅವರಿಗೆ ಇನ್ನೂ 2 ಕೋಟಿ ರೂ. ಅಗತ್ಯವಿದೆ ಎಂದು ಬ್ರಿಟಿಷ್ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

    ಮಲ್ಯ ಪರ ವಕೀಲ ಫಿಲಿಪ್ ಮಾರ್ಷಲ್ ಕ್ಯೂಸಿ ಅವರು ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದು, ನನ್ನ ಕಕ್ಷಿದಾರ ಈ ಪ್ರಕರಣಗಳಿಗೆ ಸ್ವತಃ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ‘ಜೈಲುವಾಸ ಅನುಭವಿಸುತ್ತಿದ್ದಾರೆ’. ವಿಜಯ್ ಮಲ್ಯ ಅವರ ರಾಜಿ ಇತ್ಯರ್ಥದ 3 ಪ್ರೊಸಿಡಿಂಗ್ಸ್‍ಗಳು ಭಾರತದ ಸುಪ್ರೀಂ ಕೋರ್ಟ್ ಮುಂದಿವೆ. ತೀರ್ಪಿನ ಸಾಲದ ಮೇಲೆ ವಿಧಿಸಲಾಗುತ್ತಿರುವ ಶೇ.11.5 ಬಡ್ಡಿ ಹಾಗೂ ‘ಪರಾರಿಯಾದ ಆರ್ಥಿಕ ಅಪರಾಧಿ’ ಹಣೆಪಟ್ಟಿ ಕುರಿತು ಮೂರು ಸೆಟ್‍ಗಳ ವಿಚಾರಣೆಗಳು ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ನಡೆಯುತ್ತಿವೆ ಎಂದು ಅವರು ಹೇಳಿದರು.

    ಬಡ್ಡಿದರ ಪಾವತಿಸುವ ಸವಾಲಿನಲ್ಲಿ ಮಲ್ಯ ಯಶಸ್ವಿಯಾದರೆ, ತೀರ್ಪಿನ ಸಾಲವನ್ನು 5,851 ಕೋಟಿ ರೂ.ಗೆ ಇಳಿಸಲಾಗುತ್ತದೆ. ಉಳಿದ ಹಣವನ್ನು ಆಸ್ತಿಗಳ ಮೂಲಕ ಪೂರೈಸಬಹುದು. ಅವರ ಆಸ್ತಿಗಳು ಮೂರನೇ ವ್ಯಕ್ತಿಗಳ ಕೊಡುಗೆಗಳಾಗಿವೆ. ರಾಜಿ ಇತ್ಯರ್ಥಕ್ಕೆ ಅನುಮೋದನೆ ನೀಡಿದರೆ ತೀರ್ಪಿನ ಸಂಪೂರ್ಣ ಸಾಲವನ್ನು ತೀರಿಸಲಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.

    ಭಾರತದಲ್ಲಿನ ವಕೀಲರಿಗೆ ಸೂಚನೆ ನೀಡಲು ಅವಕಾಶ ನೀಡದಿರುವುದು ಆಕ್ರಮಣಕಾರಿ. ಅಲ್ಲದೆ ಭಾರತದಲ್ಲಿ ಈ ಪ್ರಕರಣಗಳು ಪ್ರಗತಿ ಸಾಧಿಸುತ್ತಿಲ್ಲ. ವಿಚಾರಣೆಗಳು ಪ್ರಗತಿ ಸಾಧಿಸದಿರಲು ಹಣದ ಕೊರತೆ ಹಾಗೂ ಕೊರೊನಾ ಪರಿಸ್ಥಿತಿ ಕಾರಣ ಎಂದು ಮಲ್ಯ ಪರ ವಕೀಲ ಮಾರ್ಷಲ್ ಅವರು ಕೋರ್ಟ್‍ಗೆ ತಿಳಿಸಿದ್ದಾರೆ.