Tag: court

  • ಪ್ರೀತ್ಸೆ ಎಂದು ಲೈಂಗಿಕ ದೌರ್ಜನ್ಯ- ಕಾಮುಕ ಪ್ರೇಮಿಗೆ ಒಂದು ವರ್ಷ ಜೈಲು

    ಪ್ರೀತ್ಸೆ ಎಂದು ಲೈಂಗಿಕ ದೌರ್ಜನ್ಯ- ಕಾಮುಕ ಪ್ರೇಮಿಗೆ ಒಂದು ವರ್ಷ ಜೈಲು

    ಚಾಮರಾಜನಗರ: ಪ್ರೀತ್ಸೆ ಎಂದು ಅಪ್ರಾಪ್ರ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಪ್ರೇಮಿಗೆ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್ ಪುರಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

    ಪ್ರಸಾದ್ ಕುಮಾರ್(20) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಈತ ಚಾಮರಾಜನಗರ ತಾಲೂಕಿನ ಲಿಂಗರಾಜಪುರ ಗ್ರಾಮದವನಾಗಿದ್ದಾನೆ. 2019ರ ಮೇ 27 ರಂದು ಅದೇ ಗ್ರಾಮದ 16 ವರ್ಷದ ಬಾಲಕಿಯೊಬ್ಬಳು ಮನೆ ಮುಂದೆ ನಿಂತಿದ್ದ ವೇಳೆ ಬಲವಂತದಿಂದ ಆಕೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ತಾನು ಪ್ರೀತಿಸುತ್ತಿದ್ದು, ನೀನು ಪ್ರೀತಿಸಬೇಕೆಂದು ಒತ್ತಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದನ್ನೂ ಓದಿ: ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

     

    ಈ ಸಂಬಂಧ ಬಾಲಕಿ ತಂದೆ ಚಾಮರಾಜನಗರ ಪೂರ್ವ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆದು ಪ್ರಸಾದ್ ಕುಮಾರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಒಂದು ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಎರಡು ತಿಂಗಳು ಸೆರೆವಾಸದ ಶಿಕ್ಷೆ ನೀಡಿದ್ದಾರೆ. ಸರ್ಕಾರದ ಪರವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ರಜೆ ಮಂಜೂರಿಗೆ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಾರಿಗೆ ಅಧಿಕಾರಿ

  • ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

    ಸಲಿಂಗಿಗಳಿಗೆ ಜೊತೆಯಾಗಿ ವಾಸಿಸಲು ಅನುಮತಿ ನೀಡಿದ ಯುಪಿ ಕೋರ್ಟ್

    ಲಕ್ನೋ: ರಾಂಪುರ ನ್ಯಾಯಾಲಯವು ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರಿಗೂ ಜೊತೆಯಾಗಿ ವಾಸಿಸಲು ಅನುಮತಿ ನೀಡಿದೆ.

    ಸುಮಾರು 20 ವರ್ಷ ಆಸುಪಾಸಿನ ಯುವತಿ ರಾಂಪುರದ ಶಹಬಾದ್ ಪ್ರದೇಶದಲ್ಲಿರುವ ತನ್ನ ಗೆಳತಿಯೊಂದಿಗೆ ತಂಗಿದ್ದಳು. ಈ ಕುರಿತಂತೆ ಯುವತಿಯ ಪೋಷಕರು ಜುಲೈನಲ್ಲಿ ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಯುವತಿ ಇತ್ತೀಚೆಗಷ್ಟೇ ತನ್ನ ಸ್ನೇಹಿತೆಯೊಂದಿಗೆ ಶಹಬಾದ್‍ನ ಮನೆಯಲ್ಲಿ ಕಾಣಿಸಿಕೊಂಡಿದ್ದು, ತಾನು ತನ್ನ ಸ್ನೇಹಿತೆಯೊಂದಿಗೆ ಇರಲು ಬಯಸಿ ಮನೆಯನ್ನು ಸ್ವಇಚ್ಛೆಯಿಂದ ತೊರೆದು ಬಂದಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ:ಕಾರು, ಬೈಕ್ ಮಧ್ಯೆ ಅಪಘಾತ- ಮೂವರು ಸ್ಥಳದಲ್ಲೇ ಸಾವು

    ಇಬ್ಬರು 18 ವರ್ಷ ಮೇಲ್ಪಟ್ಟವರಾಗಿರುವುದರಿಂದ ಹಾಗೂ ಯುವತಿ ತನ್ನ ಸ್ವಇಚ್ಛೆಯಿಂದ ಮನೆ ಬಿಟ್ಟು ಬಂದಿರುವುದರಿಂದ, ಇಬ್ಬರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು. ನಂತರ ಇಬ್ಬರಿಗೂ ಜೊತೆಯಾಗಿ ಬದುಕಲು ಅನುಮತಿ ನೀಡಲಾಯಿತು ಎಂದು ಅಧಿಕಾರಿ ಧರಂ ಸಿಂಗ್ ಮಾರ್ಚಲ್ ಹೇಳಿದ್ದಾರೆ.

    ಈ ಮುನ್ನ ಯುವತಿ ಪೋಷಕರು, ಆಕೆ ಇನ್ನೂ ಅಪ್ರಾಪ್ತ ವಯಸ್ಕಳು ಎಂದು ತಿಳಿಸಿದ್ದರು. ಆದರೆ ಯುವತಿ ತನ್ನ ಪ್ರೌಢ ಶಾಲೆಯ ಪ್ರಮಾಣ ಪತ್ರವನ್ನು ತೋರಿಸಿದ್ದಳು. ಈ ವೇಳೆ ಯುವತಿಗೆ 20 ವರ್ಷವಾಗಿದ್ದು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ನಂತರ ಯುವತಿ ಹಾಗೂ ಆಕೆಯ ಕುಟುಂಬದವರು ಒಟ್ಟಿಗೆ ಕುಳಿತು ಸಮಾಲೋಚನೆ ನಡೆಸಿದ್ದಾರೆ. ಆದರೂ ಹಠ ಬಿಡದೇ ಯುವತಿ ಒಟ್ಟಿಗೆ ವಾಸಿಸುವುದಾಗಿ ತಿಳಿಸಿದ್ದು, ತನ್ನ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅರ್ಹಳು ಎಂದು ಹೇಳಿದ್ದಾಳೆ. ಇದನ್ನೂ ಓದಿ:ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

  • 2 ಡೋಸ್ ಲಸಿಕೆ ಪಡೆದ ವ್ಯಕ್ತಿ ಮತ್ತೆ ವ್ಯಾಕ್ಸಿನ್‍ಗಾಗಿ ಕೋರ್ಟ್ ಮೊರೆ!

    2 ಡೋಸ್ ಲಸಿಕೆ ಪಡೆದ ವ್ಯಕ್ತಿ ಮತ್ತೆ ವ್ಯಾಕ್ಸಿನ್‍ಗಾಗಿ ಕೋರ್ಟ್ ಮೊರೆ!

    ತಿರುವನಂತಪುರಂ: ಎರಡು ಡೋಸ್ ಕೊವೀಡ್ ಲಸಿಕೆ ಪಡೆದರೂ ಮತ್ತೆ ವ್ಯಾಕ್ಸಿನ್ ಬೇಕೆಂದು ಕೇರಳದ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.

    ಕೇರಳದಲ್ಲಿ ಕೋವ್ಯಾಕ್ಸಿನ್ 2 ಡೋಸ್ ಪಡೆದ ವ್ಯಕ್ತಿಯೋರ್ವ ತನಗೆ ಮತ್ತೊಮ್ಮೆ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಕೇರಳದ 50 ವರ್ಷದ ಗಿರಿಕುಮಾರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

    ನನಗೆ ಕೊವ್ಯಾಕ್ಸಿನ್ ಲಸಿಕೆಯಿಂದ ಆರೋಗ್ಯ ಸುಧಾರಿಸಿಲ್ಲ. ಸೌದಿ ಅರೇಬಿಯಾದಲ್ಲಿ ಕೆಲಸದಲ್ಲಿರುವ ನಾನು ಆಗಸ್ಟ್ 30ರೊಳಗೆ ಅಲ್ಲಿಗೆ ವಾಪಸ್ ಹೋಗಬೇಕು. ಇಲ್ಲವಾದರೆ ನನ್ನ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಸೌದಿ ಅರೇಬಿಯಾದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಇಲ್ಲದ ಕಾರಣ ನನಗೆ ಕೋವಿಶೀಲ್ಡ್ ಲಸಿಕೆ ಹಾಕಿ ಎಂದು ಕೋರ್ಟ್ ನಲ್ಲಿ ಅವರು ಮನವಿ ಮಾಡಿದ್ದಾರೆ.

    ಯಾವುದೇ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಾಗಲೂ ಎರಡನೇ ಡೋಸ್ ಕೂಡ ಅದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂಬ ನಿಯಮವಿದೆ. ಒಮ್ಮೆ ಕೋವಿಶೀಲ್ಡ್ ಮತ್ತೊಮ್ಮೆ ಕೋವ್ಯಾಕ್ಸಿನ್ ಹಾಕಿಸಿಕೊಳ್ಳಲು ಅವಕಾಶವಿಲ್ಲ. ಕೇರಳದಲ್ಲಿ ಕೋವ್ಯಾಕ್ಸಿನ್ 2 ಡೋಸ್ ಪಡೆದ ವ್ಯಕ್ತಿಯೋರ್ವ ತನಗೆ ಮತ್ತೊಮ್ಮೆ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆದರೆ ಈಗಾಗಲೇ ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.

    ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡರೂ ಆ ವ್ಯಕ್ತಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗಿತ್ತು. ಹೀಗಾಗಿ ಆತ ಕೋವ್ಯಾಕ್ಸಿನ್ ಲಸಿಕೆಯಿಂದ ಏನೂ ಪ್ರಯೋಜನವಾಗಿಲ್ಲ ಎಂದು ಮತ್ತೆ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಹಾಕಬೇಕೆಂದು ಒತ್ತಾಯಿಸಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಓರ್ವ ವ್ಯಕ್ತಿಗೆ ಎರಡು ಡೋಸ್‍ಗಿಂತ ಹೆಚ್ಚು ಕೊರೊನಾ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿರುವುದರಿಂದ ಆತನಿಗೆ ನಿರಾಸೆಯಾಗಿದೆ.  ಇದನ್ನೂ ಓದಿ:  ಭಾರತದಲ್ಲಿ ಹಿಂದೂ ಟೆರರ್ ಇದೆ ಅಂದವರಿಗೆ ಪ್ರಣಿತಾ ತಿರುಗೇಟು

    ಎರಡಕ್ಕಿಂತ ಹೆಚ್ಚು ಡೋಸ್ ಕೊರೊನಾ ಲಸಿಕೆಯನ್ನು ಪಡೆಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತ್ತೊಮ್ಮೆ ಕೊರೊನಾ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇರಳದ 50 ವರ್ಷದ ಗಿರಿಕುಮಾರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದವರು. ನನಗೆ ಕೋವ್ಯಾಕ್ಸಿನ್ ಲಸಿಕೆಯಿಂದ ಆರೋಗ್ಯ ಸುಧಾರಿಸಿಲ್ಲ ಎಂದು ಮನವಿ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಸೌದಿ ಅರೇಬಿಯಾದಿಂದ ಕೇರಳಕ್ಕೆ ಬಂದಿದ್ದ ಗಿರಿ ಕುಮಾರ್ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಆದರೆ ಸೌದಿಯಲ್ಲಿ ಕೋವ್ಯಾಕ್ಸಿನ್‍ಗೆ ಮಾನ್ಯತೆ ಇಲ್ಲ ಎಂದು ಗೊತ್ತಾದ ಬಳಿಕ ಚಿಂತಿತರಾದ ಅವರು ಕೋವಿಶೀಲ್ಡ್ ಹಾಕಿಸಿಕೊಳ್ಳಲು ಮುಂದಾಗಿದ್ದರು.

  • ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

    ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

    ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ದೊಡ್ಡ ರಿಲೀಫ್ ಸಿಕ್ಕಿದೆ. ದೆಹಲಿಯ ರೌಸ್ ಅವೆನ್ಯೂ ಸ್ಪೆಷಲ್ ಕೋರ್ಟ್ ಬುಧವಾರ ಸುನಂದಾ ಪುಷ್ಕರ್ ಮರಣ ಪ್ರಕರಣದಿಂದ ಶಶಿ ತರೂರ್ ಅವರನ್ನು ಖುಲಾಸೆಗೊಳಿಸಿದೆ. .

    2014ರಲ್ಲಿ ದೆಹಲಿ ಹೋಟೆಲ್ ನಲ್ಲಿ ಸುನಂದಾ ಅವರ ಮೃತದೇಹ ಪತ್ತೆಯಾಗಿತ್ತು. ಸುನಂದಾ ಮರಣಕ್ಕೆ ಶಶಿ ತರೂರ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳು ಕೇಳಿ ಬಂದಿದ್ದವು.

    ಬುಧವಾರ ತೀರ್ಪು ಪ್ರಕಟವಾದ ಬಳಿಕ ಶಶಿ ತರೂರ್ ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ಏಳು ವರ್ಷಗಳ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ತರೂರ್ ಗೆ ಅಕ್ರಮ ಸಂಬಂಧ-ಸುನಂದಾ ಗೆಳತಿ ಹೇಳಿಕೆ:
    ಸುನಂದಾ ಪುಷ್ಕರ್ ಗೆಳತಿ, ಪತ್ರಕರ್ತೆ ನಳಿನಿ ಸಿಂಗ್ ಹೇಳಿಕೆ ಈ ಪ್ರಕರಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಮೆಹರ್ ತರಾರ್ ಎಂಬ ಮಹಿಳೆ ಜೊತೆ ಶಶಿ ತರೂರ್ ಅಕ್ರಮ ಸಂಬಂಧ ಹೊಂದಿದ್ದರು. ಒಮ್ಮೆ ಶಶಿ ತರೂರ್ ಮತ್ತು ಮೆಹರ್ ದುಬೈನ ಹೋಟೆಲ್ ನಲ್ಲಿ ಮೂರು ದಿನ ಉಳಿದುಕೊಂಡಿದ್ದರು ಎಂದು ಸುನಂದಾ ನನ್ನ ಮುಂದೆ ಹೇಳಿಕೊಂಡಿದ್ದರು. ಒಮ್ಮೆ ಸುನಂದಾ ನನಗೆ ಫೋನ್ ಮಾಡಿದಾಗ ದುಃಖದಲ್ಲಿದ್ದರು. ತರೂರ್ ಮತ್ತು ಮೆಹರ್ ನಡುವೆ ಮೆಸೇಜ್ ಮೂಲಕ ಸಂಪರ್ಕ ಹೊಂದಿದ್ದರು. ಚುನಾವಣೆ ಬಳಿಕ ಸುನಂದಾಗೆ ವಿಚ್ಛೇದನ ನೀಡುವದಾಗಿ ತರೂರ್ ಮೆಸೇಜ್ ಮಾಡಿದ್ದರು ಎಂದು ನಳಿನಿ ಸಿಂಗ್ ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ: ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

    ದೆಹಲಿಯ ಹೋಟೆಲ್‍ನಲ್ಲಿ ಶವ:
    ಜುಲೈ 17, 2014ರಂದು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಶವ ಪತ್ತೆಯಾಗಿತ್ತು. ಲಕ್ಷುರಿ ಕೋಣೆಯ ಬೆಡ್ ಮೇಲೆ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸುನಂದಾ ಮರಣದ ಬಳಿಕ ಶಶಿ ತರೂರ್ ಆರೋಪಗಳು ಕೇಳಿ ಬಂದ ಹಿನ್ನೆಲೆ ದೆಹಲಿ ಪೊಲೀಸರು ಐಪಿಸಿ 498ಎ ಮತ್ತು 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿತ್ತು?
    * ಸುನಂದಾ ದೇಹದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿಲ್ಲ.
    * ಸುನಂದಾ ಅವರ ಮುಖ ಮತ್ತು ಕೈಗಳ ಮೇಲೆ 10ಕ್ಕೂ ಹೆಚ್ಚು ಪರಿಚಿದ ರೀತಿಯ ಗುರುತು ಕಂಡು ಬಂದಿದ್ದವು. ಆದ್ರೆ ಇದು ಪ್ರಾಣಕ್ಕೆ ಅಪಾಯ ತಂದಿದೆ ಅಂತ ಹೇಳಲು ಸಾಧ್ಯವಿಲ್ಲ.
    * ವರದಿ ಪ್ರಕಾರ ಸುನಂದಾ ಅವರದ್ದು ಸಹಜ ಸಾವಲ್ಲ.
    * ಸುನಂದಾ ಮರಣಕ್ಕೆ ಪ್ರಮುಖ ಕಾರಣ ಖಿನ್ನತೆಗೆ ತೆಗೆದುಕೊಳ್ಳುತ್ತಿದ್ದ ಅಲ್ಪ್ರಾಜೋಲಮ್ ಔಷಧಿಯ ಓವರ್ ಡೋಸ್ ಆಗಿರುವ ಸಾಧ್ಯತೆ.
    * ತಜ್ಞರ ಪ್ರಕಾರ ಅಲ್ಪ್ರಾಜೋಲಮ್ ಔಷಧಿ ಓವರ್ ಡೋಸ್ ಮೆದುಳಿನ ಕಾರ್ಯನಿರ್ವಹಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಮೂರ್ಛೆ ಹೋಗಬಹುದು ಅಥವಾ ಸಾವು ಸಂಭವಿಸಬಹುದು.

    * ಪೊಲೀಸರು ಸುನಂದಾ ಅವರಿದ್ದ ಕೋಣೆಯಿಂದ ಅಲ್ಪ್ರಾಜೋಲಮ್ ಔಷಧಿಯ ಎರಡು ಖಾಲಿ ಬಾಟೆಲ್ ವಶಕ್ಕೆ ಪಡೆದುಕೊಂಡಿದ್ದರು. ಅಂದು ಅವರು ಸುಮಾರು ಅಲ್ಪ್ರಾಜೋಲಮ್ 27 ಮಾತ್ರೆ ಸೇವಿಸಿದ್ದರು. ಇದನ್ನೂ ಓದಿ: ಒಂದು ಕೇಸ್ ಪತ್ತೆ- ಮೂರು ದಿನ ನ್ಯೂಜಿಲೆಂಡ್ ಲಾಕ್‍ಡೌನ್

    * ಸುನಂದಾ ಅವರ ಮರಣಕ್ಕೆ ವಿಷವೇ ಕಾರಣ. ಆದ್ರೆ ಮರಣೋತ್ತರ ವರದಿ ಇದನ್ನು ಆತ್ಮಹತ್ಯೆ ಎಂದು ದೃಢಪಡಿಸಿಲ್ಲ ಮತ್ತು ಇದರ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಿಲ್ಲ. ಆದ್ರೆ ವೈದ್ಯರು ಸುನಂದಾ ದೇಹದಲ್ಲಿದ್ದ ವಿಷ ಅಂಶದ ಮೂಲವನ್ನು ಖಚಿತಪಡಿಸಿಲ್ಲ.
    * ಸುನಂದಾ ಅವರ ಸಾವು ಸಂಜೆ ನಾಲ್ಕರಿಂದ ಏಳು ಗಂಟೆ ಮಧ್ಯೆ ಸಂಭವಿಸಿದೆ.

    * ಸುನಂದಾ ಪುಷ್ಕರ್ ಸಾವು ಉದ್ದೇಶಪೂರ್ವಕವಾಗಿ ಓವರ್ ಡೋಸ್ ತೆಗೆದುಕೊಂಡಿದಲ್ಲ. ಅವರ ಮಾತ್ರೆಗಳನ್ನು ಉದ್ದೇಶಪೂರ್ವಕವಾಗಿ ಓವರ್ ಡೋಸ್ ಮಾಡಲಾಗಿತ್ತು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿತ್ತು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

  • ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

    ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ಆರೋಪಿಗಳಾದ ಸಾಗರ್ ತಾಪ, ಶ್ರೀಧರ್ ಮತ್ತು ನವೀನ್ ಎಂಬ ಮೂವರನ್ನು ಬಂಧಿಸಿದ್ದ ಪೊಲೀಸರು, ಶನಿವಾರ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ತನಿಖೆ ಮುಂದುವೆಸಿದ ಪೊಲೀಸರು ಘಟನೆ ಸಂಬಂಧ ಶಾಸಕ ಸತೀಶ್ ರೆಡ್ಡಿ ಹೇಳಿಕೆ ಪಡೆದುಕೊಂಡಿದ್ದರು. ಈ ವೇಳೆ ಶಾಸಕರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಸದ್ಯ ಆರೋಪಿಗಳು ಹೇಳಿರುವ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ನನ್ನ ಮನೆಯ ಬಳಿಯಿದ್ದ ಕಾರುಗಳಿಗೆ ಬೆಂಕಿ ಹಾಕಿದ್ದರ ಹಿಂದೆ ಕೆಲ ಕಾಣದ ಕೈಗಳ ಕೈವಾಡ ಇದೆ. ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಬೆಂಕಿ ಹಾಕಲಾಗಿದೆ ಅನ್ನೋ ಹೇಳಿಕೆ ಸುಳ್ಳು. ಪೊಲೀಸರು ಸರಿಯಾದ ತನಿಖೆ ನಡೆಸಬೇಕು. ಆಗ ಆಸಲಿ ಕಾರಣ ತಿಳಿಯಲಿದೆ ಅಂತಾ ಪೊಲೀಸರ ಮುಂದೆ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳನ್ನು ಮತ್ತೆ ಬಾಡಿ ವಾರೆಂಟ್ ಮೇಲೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿ ಪಕ್ಕದ ರಸ್ತೆಯಲ್ಲೇ ಕಿಡಿಗೇಡಿಗಳ ಓಡಾಟ!

    ಶಾಸಕರ ಭೇಟಿಗೆ ಅವಕಾಶ ಕೊಟ್ಟಿಲ್ಲ, ಕೆಲಸವಿಲ್ಲದೇ ಬಡತನದ ಕಾರಣಕ್ಕೆ ಬೇಸತ್ತು ಕೃತ್ಯವೆಸಗಿದ್ದಾರಾ? ಅಥವಾ ಬೇರೆ ಏನಾದರೂ ಕಾರಣ ಇದೆಯಾ? ಆರೋಪಿಗಳ ಬೆನ್ನಿಗೆ ಯಾರಾದರೂ ಇದ್ದಾರಾ ಅನ್ನೋ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

  • ಸುಪ್ರೀಂಕೋರ್ಟ್ ಮುಂಭಾಗದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು

    ಸುಪ್ರೀಂಕೋರ್ಟ್ ಮುಂಭಾಗದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು

    ನವದೆಹಲಿ: ಸುಪ್ರೀಂಕೋರ್ಟ್ ಮುಂಭಾಗದಲ್ಲಿಯೇ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ನಡೆದಿದೆ. ಕೋರ್ಟ್ ಗೇಟ್ ‘ಡಿ’ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ.

    ಇಬ್ಬರು ಸುಪ್ರೀಂಕೋರ್ಟ್ ಆವರಣ ಪ್ರವೇಶಿಸಲು ಮುಂದಾಗಿದ್ದರು. ಆದ್ರೆ ಭದ್ರತಾ ಸಿಬ್ಬಂದಿ ಗುರುತಿನ ಚೀಟಿ ಇಲ್ಲದ ಹಿನ್ನೆಲೆ ಇಬ್ಬರನ್ನು ತಡೆದಿದ್ದರು. ಈ ಸಮಯದಲ್ಲಿ ಗೇಟ್ ಮುಂಭಾಗದಲ್ಲಿ ನಿಂತಿದ್ದ ಇಬ್ಬರು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದರು. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಮತು ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪುರುಷನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

    ಇಬ್ಬರು ಸಂಸದ ಅತುಲ್ ರಾಯ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಲು ನ್ಯಾಯಾಲಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಯುವತಿ ಗೆಳೆಯನ ಜೊತೆ ನ್ಯಾಯಾಲಯಕ್ಕೆ ಆಗಮಿಸಿದ್ದಾಗ ಸಿಬ್ಬಂದಿ ಪ್ರವೇಶ ನೀಡದ ಹಿನ್ನೆಲೆ ಈ ನಿರ್ಧಾರಕ್ಕೆ ಬಂದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಸದ್ಯ ಅತುಲ್ ರಾಯ್ ರೇಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    – 4,950 ಕೇಸ್ ಇತ್ಯರ್ಥ

    ಗದಗ: ಜಿಲ್ಲೆಯಲ್ಲಿ ಭಾನುವಾರ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಈ ಬಾರಿಯ ಅದಾಲತ್‍ಗೆ 6,124 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.

    39 ಮೋಟಾರು ಅಪಘಾತ ಪ್ರಕರಣಗಳು, 123 ಚೆಕ್‍ಬೌನ್ಸ್, 72 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 257 ಅಸಲು ದಾವೆ, 24 ಭೂಸ್ವಾಧೀನ ದರಖಾಸ್ತು, 4,230 ಇತರೆ ಕ್ರಿಮಿನಲ್, 58 ಎಂಎಂಆರ್‍ಡಿ, 5 ವೈವಾಹಿಕ ಪ್ರಕರಣಗಳು, 14 ವಿದ್ಯುಚ್ಛಕ್ತಿ ಪ್ರಕರಣಗಳು, 1 ಕಾರ್ಮಿಕ ಪ್ರಕರಣ, ಎರಡು ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 4,823 ಚಾಲ್ತಿ ಪ್ರಕರಣಗಳನ್ನು 9,79,71,050 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು. ಅದೇ ರೀತಿ, 127 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು 1,40,38,435 ರಾಜಿ ಸಂಧಾನ ಮಾಡಲಾಯಿತು. ಹೀಗೆ ಒಟ್ಟು 4,950 ಪ್ರಕರಣಗಳನ್ನು 11,20,09,485 ರೂ.ಗೆ ರಾಜಿ ಸಂಧಾನಗೊಳಿಸಲಾಯಿತು.

    ಸಾವಿರಾರು ಜನರ ಮಧ್ಯೆ ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು ತಾಳಿಕಟ್ಟಿ ಜೀವನ ನಡೆಸುತ್ತಿದ್ದ ಜೋಡಿಗಳು ದೂರವಾಗಿದ್ದರು. ವಿರಹ ವೇದನೆಯಿಂದ ನಾನೊಂದು ತೀರ, ನೀನೊಂದು ತೀರ ಅಂತಿದ್ದ ಜೋಡಿಗಳು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಈಗ ಕೋರ್ಟ್‍ನಲ್ಲಿ ತಿಳುವಳಿಕೆ ಹೇಳಿ ರಾಜಿ ಮಾಡಿಸಿರುವುದರಿಂದ ಗದಗ ಜಿಲ್ಲೆಯ 5 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಅವರಿಗೆ ಒಬ್ಬರಿಗೊಬ್ಬರು ಹಾರ ಬದಲಾಯಿಸಿ, ಸಿಹಿ ತಿನಿಸಿದರು. ನೆರೆದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಸಂಬಂಧಿ ಎಲ್ಲರೂ ಪುಷ್ಪ ಎರಚುವ ಮೂಲಕ ಶುಭ ಹಾರೈಸಿದರು. ಜೋಡಿಗಳ ಮತ್ತೆ ನಗುವಿನ ಚೆಲುವು ಚಿಮ್ಮಿ ಒಂದಾದರು.

    ಮೆಗಾ ಲೋಕ್ ಅದಾಲತ್‍ನಲ್ಲಿ ಪ್ರಧಾನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನರಶಿಂಸಾ ಎಂ.ವಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರಪ್ಪ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ್, ಜಂಟಿ ಕಾರ್ಯದರ್ಶಿ ಕುಮಾರ್ ಜಿ.ವಿ. ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದರು. ಎಲ್ಲ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು ಕೂಡ ಆಯಾ ತಾಲೂಕು ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‍ದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ಪ್ರವಾಸದ ಹೆಸರಲ್ಲಿ ದರೋಡೆ – 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಪ್ರವಾಸದ ಹೆಸರಲ್ಲಿ ದರೋಡೆ – 8 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಹುಬ್ಬಳ್ಳಿ: ಮಾಗೋಡು ಜಲಪಾತ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಕಾರು ಬಾಡಿಗೆ ಪಡೆದು, ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರ್ಸ್, ಮೊಬೈಲ್, ವಾಹನ ದೋಚಿಕೊಂಡು ಹೋಗಿದ್ದ ಮೂವರಿಗೆ ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 20,000 ರೂ. ದಂಡ ವಿಧಿಸಿದೆ.

    ಪ್ರವಾಸದ ನೆಪದಲ್ಲಿ ಅಹ್ಮದ್ ಪಣಿಬಂದ, ಅವಿನಾಶ್ ಪವಾರ, ಮಂಜುನಾರ್ ಪವಾರ ಎಂಬವರು ಗಿರಣಿಚಾಳ ನಿವಾಸಿ ಗಣೇಶ ಜುಮ್ಹಾಪುರ 2014ರ ಜುಲೈ 5ರಂದು ಚನ್ನಮ್ಮ ವೃತ್ತದ ಬಳಿ ಇದ್ಗಾ ಮೈದಾನದಲ್ಲಿ ಬಾಡಿಗೆ ಕಾರು ನಿಲ್ಲಿಸಿದ್ದರು. ಈ ವೇಳೆ ಓರ್ವ ಯುವತಿಯೊಂದಿಗೆ ಬಂದ ಸಿರಾಜ್ ಪಣಿಬಂದ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತಕ್ಕೆ ತೆರಳಲು ಬಾಡಿಗೆಗೆ ಮಾತನಾಡಿದ್ದನು. ಬಳಿಕ ಇಬ್ಬರೂ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯ ಹಳೇ ಹುಬ್ಬಳ್ಳಿ ಶಿಮ್ಲಾ ನಗರದ ಬಳಿ ಸಿರಾಜ್ ತನ್ನ ಸಹಚರರಾದ ಅವಿನಾಶ್ ಪವಾರ, ಮಂಜುನಾಥ್ ಪವಾರ ಹಾಗೂ ಓರ್ವ ನನ್ನು ಹತ್ತಿಸಿಕೊಂಡಿದ್ದನು.

    ಮಾಗೋಡು ಫಾಲ್ಸ್ 10 ಕಿ.ಮೀ. ದೂರ ಇದ್ದಾಗ ಕಾರು ನಿಲ್ಲಿಸಲು ಸೂಚಿಸಿದ್ದರು. ಕಾರು ನಿಲ್ಲಿಸುತ್ತಿದ್ದಂತೆ ಚಾಲಕ ಗಣೇಶನ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ ಹಿಂದಿನ ಸೀಟಿನಲ್ಲಿ ಹಾಕಿದ್ದರು. ಬಳಿಕ ಕಾರು ಚಲಾಯಿಸಿಕೊಂಡು ಹುಬ್ಬಳ್ಳಿ ಸಮೀಪ ಅಂಚಟಗೇರಿ ಬಳಿ ಬಂದು, ಚಾಲಕ ಗಣೇಶನನ್ನು ಹೊರಕ್ಕೆ ಎಸೆದು ವಾಹನ ಸಮೇತ ಪರಾರಿಯಾಗಿದ್ದರು.

    ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಸ್ಪೆಕ್ಟರ್ ಸಚಿನ್ ಚಲವಾದಿ ತನಿಖೆ ನಡೆಸಿದ್ದರು. 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

    ದಂಡದ ಮೊತ್ತದಲ್ಲಿ 50 ಸಾವಿರ ರೂ. ಚಾಲಕ ಗಣೇಶನಿಗೆ, 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು. ಇದನ್ನೂ ಓದಿ:ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯ – ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

  • ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್

    ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್

    ಮುಂಬೈ: ನನ್ನ ಕುಟುಂಬದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಮಾಧ್ಯಮ ಪ್ರಕಟಿಸುತ್ತಿವೆ ಎಂದು ಕೋರ್ಟ್ ಮೊರೆ ಹೋಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ಮಾಧ್ಯಮಗಳು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಖಾಸಗಿತನಕ್ಕೆ ಚ್ಯುತಿ ತರುತ್ತಿವೆ ಎಂದು ಕೋರ್ಟ್‍ಗೆ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಶಿಲ್ಪಾ ಶೆಟ್ಟಿ ಉಲ್ಲೇಖ ಮಾಡಿದ್ದರು. ಅಲ್ಲದೆ, ತಮಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ.18 ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಕೋರಿದ್ದರು. ಈ ಕುರಿತಾಗಿ ಕೋರ್ಟ್ ಶಿಲ್ಪಾ ಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

    ನ್ಯಾಯಮೂರ್ತಿ ಜಿಎಸ್ ಪಟೇಲ್ ಅವರು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡರು. ಓದುಗರನ್ನು ಸೆಳೆಯಲು ತಪ್ಪಾದ ಸುದ್ದಿ ಪ್ರಕಟ ಮಾಡಲಾಗಿದೆ ಎಂದು ಶಿಲ್ಪಾ ಶೆಟ್ಟಿ ಪರ ವಕೀಲರು ವಾದ ಮಂಡಿಸಿದರು. ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು? ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದು ಅವರ ಜೀವನದ ಒಂದು ಭಾಗ. ಈ ಹಿಂದೆ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಹಲವು ತೀರ್ಪು ನೀಡಲಾಗಿತ್ತು. ಎಷ್ಟು ಬಾರಿ ಇದನ್ನೇ ಹೇಳಬೇಕು ಪೊಲೀಸ್ ಮೂಲಗಳು ಹೇಳಿವೆ ಎಂದು ವರದಿಯಾದರೆ ಅದು ಎಂದಿಗೂ ಮಾನಹಾನಿಯಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ? ಎಂದು ನ್ಯಾಯಮೂರ್ತಿ ಜಿಎಸ್ ಪಟೇಲ್ ಅವರು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ರಬ್ಬರ್‌ ಸ್ಟಾಂಪ್ ಮುಖ್ಯಮಂತ್ರಿ: ಸಿದ್ದರಾಮಯ್ಯ

    ರಾಜ್ ಕುಂದ್ರಾ ಅವರ ಅಶ್ಲೀಲ ಸಿನಿಮಾ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು. ಇವರ ಬಗ್ಗೆ ನಾನಾ ಸುದ್ದಿಗಳು ಪ್ರಸಾರಗೊಂಡವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಲ್ಪಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಮಾನನಷ್ಟ ಮೊಕದ್ದಮೆ ಸಲ್ಲಿಕೆ ಮಾಡಿದ್ದಾರೆ.  ಇದನ್ನೂ ಓದಿ:ಅಶ್ಲೀಲ ಸಿನಿಮಾ ಅಲ್ಲ, ಅದು ಸಾಫ್ಟ್ ಪೋರ್ನ್: ರಾಜ್ ಕುಂದ್ರಾ ಮಾಜಿ ಉದ್ಯೋಗಿ ತನ್ವೀರ್

  • ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ

    ಸಚಿವಾಕಾಂಕ್ಷಿ ರೇಣುಕಾಚಾರ್ಯಗೆ ಮತ್ತೆ ಸಿ.ಡಿ ಭಯ- ಕೋರ್ಟ್ ಮೊರೆ

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಬದಲಾವಣೆ ಆದ ಬಳಿಕ ಸಚಿವ ಸ್ಥಾನ ಗಿಟ್ಟಿಸಿಕೊಳ್ಳೋದಕ್ಕೆ ಸತತ ಪ್ರಯತ್ನ ಮಾಡ್ತಾ ಇರೋ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಈಗ ಸಿಡಿ ಶುರುವಾಗಿದೆ. ಇದೀಗ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

    ರೇಣುಕಾಚಾರ್ಯ ವಿರುದ್ಧ ಯಾವುದೇ ಸಿಡಿಯನ್ನು ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ರೇಣುಕಾಚಾರ್ಯ ಮಾನಹಾನಿಯಾಗುವಂತಹ ಯಾವುದೇ ಸಿಡಿಯನ್ನು ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡಿದೆ.

    ಆದರೆ ಹದಿನೈದು ದಿನಗಳ ಹಿಂದೆ ಸಿಡಿ ವಿಚಾರ ಕೇಳಿದಾಗ ನನಗೇನೂ ಗೊತ್ತಿಲ್ಲ. ನನ್ನದು ಯಾವುದೇ ಸಿಡಿ ಇಲ್ಲ ಅಂತ ಮಾಧ್ಯಮಗಳ ಜೊತೆ ವಾದ ಮಾಡಿದ್ದರು. ಇದೀಗ ಸೈಲೆಂಟ್ ಆಗಿ ಕೋರ್ಟ್ ಗೆ ಹೋಗಿ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಗ್ರಾಫಿಕ್ಸ್‌ನಲ್ಲಿ ಏನು ಬೇಕಾದರೂ ಮಾಡಬಹುದು: ರೇಣುಕಾಚಾರ್ಯ

    ವಾರದ ಹಿಂದೆ ರೇಣುಕಾಚಾರ್ಯ ಅವರು ದಿಢೀರ್ ದೆಹಲಿಗೆ ತೆರಳಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರು. ಈ ವೇಳೆ ಸಿಡಿ ಸಂಬಂಧ ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, ಸಿಡಿ ಬಗ್ಗೆ ನಂಗೇನೂ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಭೇಟಿ ಮಾಡುವಷ್ಟು ದೊಡ್ಡವನಲ್ಲ. ಕ್ಷೇತ್ರದ ಕಾರ್ಯಕ್ಕೆ ದೆಹಲಿಗೆ ಬಂದಿದ್ದೇನೆ. ನಂಗೇ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಆದರೆ ರೇಣುಕಾಚಾರ್ಯ ಅವರು ಹೈಕಮಾಂಡ್ ನಾಯಕರಿಂದ ಸಿಡಿ ಬಿಡುಗಡೆ ತಡೆ ತರಲು ಪ್ಲ್ಯಾನ್ ಮಾಡಿಕೊಂಡು ದೆಹಲಿಗೆ ಹೋಗಿದ್ದರು. ಬಿಜೆಪಿ ನಾಯಕರ ಬಳಿಯೇ ಸಿ.ಡಿ ಇರುವ ಬಗ್ಗೆ ಮಾಹಿತಿ ಇದ್ದು, ಹೈಕಮಾಂಡ್ ಮೂಲಕ ಒತ್ತಡ ಹಾಕಿ ಸಿ.ಡಿ ವಿಚಾರಕ್ಕೆ ಬ್ರೇಕ್ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.