Tag: court

  • ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ

    ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ

    ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನಲ್ಲಿ ನಾಲ್ಕನೇ ದಿನದ ವಿಚಾರಣೆ ಇಂದು ನಡೆಯಿತು. ಐದು ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ, ಸುದೀರ್ಘ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು.

    ಇಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ರು. ವಿದ್ಯಾರ್ಥಿನಿಯರು ಹಿಜಬ್ ಧರಿಸುವುದು ಧಾರ್ಮಿಕ ಹಕ್ಕು ಅಲ್ಲ ಎಂದು ಸರ್ಕಾರ ಹೇಳಿರೋದು ತಪ್ಪು. ಸರ್ಕಾರಕ್ಕೆ ಈ ರೀತಿ ಹೇಳಲು ಯಾವುದೇ ಹಕ್ಕಿಲ್ಲ. ಧಾರ್ಮಿಕ ನಂಬಿಕೆಗಳನ್ನು ಪಾಲನೆ ಮಾಡುವವರ ಭಾವನೆಗಳಿಗೆ ಸರ್ಕಾರ ಬೆಲೆಯೇ ಕೊಡುತ್ತಿಲ್ಲ. ವಿದ್ಯಾರ್ಥಿನಿಯರು ಕಳೆದ ಹಲವು ವರ್ಷಗಳಿಂದ ಹಿಜನ್ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದಾರೆ. ಆಡಳಿತ ಮಂಡಳಿಯೂ ಈ ಹಿಂದೆ ಪ್ರಶ್ನೆ ಮಾಡಿರಲಿಲ್ಲ. ಹಿಜಬ್ ಬ್ಯಾನ್ ಮಾಡಿರೋದು ಕಾಲೇಜು ಅಭಿವೃದ್ಧಿ ಸಮಿತಿ ಅಲ್ಲ. ಇದು ಎಂಎಲ್‍ಎ ಸಮಿತಿ. ಸರ್ಕಾರದ ಆದೇಶ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ ಅನ್ನೋದಾದ್ರೆ ಈ ಆದೇಶವನ್ನು ತಕ್ಷಣವೇ ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ: ಮೋದಿ

    ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ಧಕ್ಕೆ ತಂದರೆ ಮೂಲಭೂತ ಆಚರಣೆಗಳನ್ನು ನಿರ್ಬಂಧಿಸಲು ಅವಕಾಶ ಇದೆ. ಆದರೆ ಧಾರ್ಮಿಕತೆ, ನೈತಿಕತೆಯ ಕಾರಣ ನೀಡಿ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವಂತಿಲ್ಲ. ಕುರಾನ್‍ನಲ್ಲಿ ಹಿಜಬ್ ಬಗ್ಗೆ ವಿವರಣೆ ಇದೆ. ತಲೆ, ಕತ್ತು ಮುಚ್ಚಿಕೊಳ್ಳಬೇಕೆಂದು ಹೇಳಲಾಗಿದೆ. ಯೂನಿಫಾರಂ ಬಣ್ಣದ ಹಿಜಬ್ ಧರಿಸಿದ್ರೆ ಸಮಸ್ಯೆ ಆಗಲ್ಲ. ಧಾರ್ಮಿಕ ಹಕ್ಕುಗಳನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದು ವಾದ ಮಂಡನೆ ಮಾಡಿದ್ರು. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    ಹಿಜಬ್ ಮೂಲಭೂತ ಆಚರಣೆ ಎಂದು ಕೇರಳ, ಮದ್ರಾಸ್ ಹೈಕೋರ್ಟ್ ತೀರ್ಪಲ್ಲಿ ಹೇಳಲಾಗಿದೆ. ಶಿರೂರು ಮಠಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪು, ಆಹಾರ ಧಾರ್ಮಿಕ ಮೂಲಭೂತ ಹಕ್ಕಿನ ಭಾಗ ಎಂದು ಸುಪ್ರೀಂಕೋರ್ಟ್ ಹೇಳಿದೆ. ಧಾರ್ಮಿಕ ಆಚರಣೆಯನ್ನು ನಿರ್ಧರಿಸುವುದು ಹೊರಗಿನವರ ಹಕ್ಕಲ್ಲ. ಕೇರಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಹಿಜಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಸಿಬಿಎಸ್‍ಇ ಶಾಲೆಗಳಲ್ಲಿಯೂ ಹಿಜಬ್ ಧರಿಸಲು ಅವಕಾಶ ಇದೆ. ಇಲ್ಲಿಯೂ ಮೂಲಭೂತ ಹಕ್ಕಿನ ರಕ್ಷಣೆ ಆಗಬೇಕು ಎಂದು ದೇವದತ್ ಕಾಮತ್ ವಾದ ಮಂಡಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ

    ಈ ಮಧ್ಯೆ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಮೂಲಭೂತ ಆಚರಣೆಯನ್ನು ನಿರ್ಬಂಧಿಸಬಹುದೇ..? ಮೂಲಭೂತ ಧಾರ್ಮಿಕ ಆಚರಣೆಗಳು ಪರಮೋಚ್ಛವೇ..? ಅಥವಾ ಆ ಆಚರಣೆಗಳ ಮೇಲೆ ನಿರ್ಬಂಧ ಹೇರಬಹುದೇ..? ಎಂದು ನ್ಯಾಯಪೀಠ ಕೇಳಿತು. ಸರ್ಕಾರ ಹಿಜಬ್ ನಿರ್ಬಂಧಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡಿದೆಯೇ…? ಸರ್ಕಾರ ಹಾಗೆಂದು ಹೇಳಿದರೆ ನಿಮ್ಮ ವಾದ ಪರಿಶೀಲಿಸುತ್ತೇವೆ ಎಂದ ನ್ಯಾಯಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಇದನ್ನೂ ಓದಿ: ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್

  • ಸುಪ್ರೀಂಗೆ ಹೋಗೋರು ಹೋಗ್ಲಿ, ನಮ್ಮದೇನು ಅಭ್ಯಂತರ ಇಲ್ಲ: ಬಿಸಿ ನಾಗೇಶ್

    ಸುಪ್ರೀಂಗೆ ಹೋಗೋರು ಹೋಗ್ಲಿ, ನಮ್ಮದೇನು ಅಭ್ಯಂತರ ಇಲ್ಲ: ಬಿಸಿ ನಾಗೇಶ್

    ಬೆಂಗಳೂರು: ಹಿಜಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂಗೆ ಹೋಗೋರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಾಯರ್‍ಗಳನ್ನ ಇಟ್ಟು ಕೋರ್ಟ್‍ನಲ್ಲಿ ವಾದ ಮಾಡೋ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ಹುಡುಗೀರಿಗೂ ಅ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.

    ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸ್ತಾ ಇದ್ದಾರೆ. ಸುಪ್ರೀಂಗೆ ಹೋಗೋರು ಹೋಗಲಿ… ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಕಾಲೇಜ್‍ಗೆ ಎಂಟ್ರಿ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ

    ಕೋರ್ಟ್ ನಲ್ಲಿ ವಾದ ಮಾಡ್ತಿರೋರು ಕಾಂಗ್ರೆಸ್ ನ ಪ್ರಮುಖರು. ಕಪಿಲ್ ಸಿಬಲ್ ಯಾರು? ಕಾಮತ್ ಯಾರು? ಹೆಗ್ಡೆ ಯಾರು? ಇವೆಲ್ಲ ನೋಡಿದರೆ ಅನುಮಾನ ಬರೋದು ಸಹಜ. ಹೀಗಾಗಿ ಇದರ ಹಿಂದೆ ಕಾಂಗ್ರೆಸ್ ಇದೆ ಅಂತ ನನಗೆ ಅನುಮಾನ ಬರುತ್ತಿದೆ ಎಮದು ಹೇಳಿದರು. ಇದನ್ನೂ ಓದಿ: ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

    ಸಿಎಫ್‍ಐ ಸಂಘಟನೆ ಅಜೆಂಡಾ ಈಡೇರಿದ ಹಾಗೆ ಇಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ವಿರೋಧ ಮಾಡುತ್ತಿದ್ದಾರೆ. ಈ ಸಂಘಟನೆಯೇ ಇದರ ಹಿಂದೆ ಇದ್ದು ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಹೇಳಿದರು.

  • ಹಿಜಬ್‌ ಬಗ್ಗೆ ಯಾರೂ ಬಹಿರಂಗ ಚರ್ಚೆ ಮಾಡಬಾರದು: ಡಿಕೆಶಿ

    ಹಿಜಬ್‌ ಬಗ್ಗೆ ಯಾರೂ ಬಹಿರಂಗ ಚರ್ಚೆ ಮಾಡಬಾರದು: ಡಿಕೆಶಿ

    ಬೆಂಗಳೂರು: ಹಿಜಬ್‌(Hijab) ಬಗ್ಗೆ ಪಕ್ಷದಲ್ಲಿ ಯಾರೂ ಬಹಿರಂಗ ಚರ್ಚೆ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

    ಹಿಜಬ್‌ ಧರಿಸುವುದು ಮೂಲಭೂತ ಹಕ್ಕು. ಅದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸುವುದು ಮೂಲಭೂತ ಹಕ್ಕು. ವಿದ್ಯಾರ್ಥಿನಿಯರನ್ನು ತಡೆದ ಪ್ರಿನ್ಸಿಪಾಲನ್ನು ಸಸ್ಪೆಂಡ್‌ ಮಾಡಬೇಕು: ಸಿದ್ದರಾಮಯ್ಯ

    ಈಗಾಗಲೇ ಪ್ರಕರಣ ಕೋರ್ಟ್‍ನಲ್ಲಿದೆ. ಕೋರ್ಟ್‍ನಲ್ಲಿ ಇರುವಾಗ ಪಕ್ಷದ ಅಧ್ಯಕ್ಷನಾಗಿ ಅಭಿಪ್ರಾಯ ಹೇರುವುದಕ್ಕೆ ಆಗುವುದಿಲ್ಲ. ಇದು ಬಹಿರಂಗ ಚರ್ಚೆ ವಿಚಾರ ಅಲ್ಲ. ನಮ್ಮ ಚೌಕಟ್ಟಿನಲ್ಲಿ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಮವಸ್ತ್ರದ ಆದೇಶ ಪಾಲಿಸದಿದ್ದರೆ ಕಾಲೇಜಿನಿಂದಲೇ ಡಿಬಾರ್

    ಹಿಜಬ್‌, ಕೇಸರಿ ಘರ್ಷಣೆ ವಿಚಾರವನ್ನು ನಮ್ಮ ಸ್ಥಳೀಯ ನಾಯಕರ ಜೊತೆ ಚರ್ಚಿಸಬೇಕು. ಅವರ ಜೀವನ, ಸಂಸ್ಕೃತಿ ಬಗ್ಗೆ ಚರ್ಚಿಸಬೇಕು. ಪದ್ಧತಿಗಳು ಮುಂದುವರೆದುಕೊಂಡು ಬಂದಿವೆ. ಇದು ಮಕ್ಕಳ ಸೂಕ್ಷ್ಮ ವಿಚಾರವಾದ ಕಾರಣ ಚರ್ಚೆ ಮಾಡಿ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸಿದರು.

  • ಸೇನಾ ಸಮವಸ್ತ್ರ ಧರಿಸಿದ್ದ ಮೋದಿಗೆ ಯುಪಿ ಕೋರ್ಟ್‍ನಿಂದ ನೋಟಿಸ್

    ಸೇನಾ ಸಮವಸ್ತ್ರ ಧರಿಸಿದ್ದ ಮೋದಿಗೆ ಯುಪಿ ಕೋರ್ಟ್‍ನಿಂದ ನೋಟಿಸ್

    ನವದೆಹಲಿ: ಸೇನಾ ಸಮವಸ್ತ್ರ ಧರಿಸಿ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಯುಪಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ನರೇಂದ್ರ ಮೋದಿ ಅವರು 2020-21ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಸೇನಾ ಸಮವಸ್ತ್ರ ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ನ್ಯಾಯಾಲಯ ಮೋದಿ ಅವರ ಕಚೇರಿಗೆ ನೋಟೀಸ್ ಜಾರಿ ಮಾಡಿದೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ನೌಶೆರಾ ವಲಯದಲ್ಲಿ ಸೈನಿಕರ ಜೊತೆಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ಅವರು ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದರು. ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಹಬ್ಬ ಶುಭ ಕೋರಿದ್ದರು.

    ಭೂಸೇನೆ, ನೌಕಾಪಡೆ, ವಾಯುಪಡೆ ಯೋಧರ ಸಮವಸ್ತ್ರ ಧರಿಸುವುದು ಮತ್ತು ಆರ್ಮಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಬೇರೆಯವರು ಕೊಂಡೊಯ್ಯುವುದು, ಭಾರತೀಯ ದಂಡಸಂಹಿತೆ 140ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ವಕೀಲ ರಾಕೇಶ್‍ನಾಥ್ ಪಾಂಡೆಯ ಪ್ರಯಾಗ್ ರಾಜ್‍ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾತ್ಸವ್ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ಕಳಿಸಿದ್ದಾರೆ.

    ವಕೀಲ ಪಾಂಡೆಯವರು ಮೊದಲು 2021ರ ಡಿಸೆಂಬರ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಾಂಗ ಮೆಜಿಸ್ಟ್ರೇಟ್ ಹರೇಂದ್ರ ನಾಥ್ ಈ ಅರ್ಜಿಯನ್ನು ತಿರಸ್ಕರಿಸಿ, ಇದು ನಮ್ಮ ಕೋರ್ಟ್‍ನ ನ್ಯಯಾಂಗ ಆಡಳಿತದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಿಷಯ ವಿಚಾರಣೆ ಮಾಡುವ ಅಧಿಕಾರ ವ್ಯಾಪ್ತಿ ಹೊಂದಿರುವ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವುದು ಒಳಿತು ಎಂದು ಹೇಳಿದ್ದರು. ಪಿಎಂಗೆ ಯಾವುದೇ ನೋಟಿಸ್ ಕೊಟ್ಟಿರಲಿಲ್ಲ. ಇದೀಗ ಪ್ರಯಾಗ್ ರಾಜ್ ನ್ಯಾಯಾಲಯ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್ ಕೊಟ್ಟಿದ್ದು, ಮಾರ್ಚ್ 2ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

  • ಸ್ವಘೋಷಿತ ದೇವಮಾನವನಿಗೆ ಮಗಳನ್ನೇ ದಾನ ಮಾಡಿದ ತಂದೆ -ಛೀಮಾರಿ ಹಾಕಿದ ಕೋರ್ಟ್

    ಸ್ವಘೋಷಿತ ದೇವಮಾನವನಿಗೆ ಮಗಳನ್ನೇ ದಾನ ಮಾಡಿದ ತಂದೆ -ಛೀಮಾರಿ ಹಾಕಿದ ಕೋರ್ಟ್

    ಮುಂಬೈ: ಹೆಣ್ಣು ಮಗು ದಾನ ಮಾಡಬಹುದಾದ ಆಸ್ತಿಯಲ್ಲ ಎಂದು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಹೇಳಿದೆ.

    ಏನಿದು ಪ್ರಕರಣ?: ಬಾಲಕಿಯೊಬ್ಬಳು ಆಕೆಯ ತಂದೆಯೊಂದಿಗೆ ಜಲ್ನಾ ಜಿಲ್ಲೆಯ ಬದ್ನಾಪುರದ ದೇವಸ್ಥಾನದಲ್ಲಿ ವಾಸಿಸುತ್ತಿದ್ದಳು. ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರ ವಿರುದ್ಧ ಬಾಲಕಿಯು ಆಗಸ್ಟ್ 2021ರಲ್ಲಿ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಸ್ವಘೋಷಿತ ದೇವಮಾನವ ಶಂಕೇಶ್ವರ ಧಾಕ್ನೆ ಮತ್ತು ಅವರ ಶಿಷ್ಯ ಸೋಪಾನ್ ಆರೋಪಿಗಳನ್ನು ಬಂಧಿಸಲಾಗಿತ್ತು. ಇದನ್ನೂ ಓದಿ:  ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ಬಾಲಕಿಯ ತಂದೆ ಸ್ವಯಂಘೋಷಿತ ದೇವಮಾನವನಿಗೆ ತನ್ನ 17 ವರ್ಷದ ಮಗಳನ್ನು ದಾನ ಮಾಡಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಬಾಲಕಿಯನ್ನು ಸ್ವಯಂಘೋಷಿತ ದೇವಮಾನವನಿಗೆ 2018ರಲ್ಲಿ ದಾನವಾಗಿ ನೀಡಿರುವ ದಾನಪತ್ರವನ್ನು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಗಮನಿಸಿದರು. 100 ಛಾಪಾ ಕಾಗದದಲ್ಲಿ ಬಾಲಕಿಯನ್ನು ದಾನವಾಗಿ ನೀಡಿರುವುದಾಗಿ ಉಲ್ಲೇಖಿಸಲಾಗಿತ್ತು. ಹುಡುಗಿಯ ತಂದೆ ತನ್ನ ಮಗಳನ್ನು ದಾನವಾಗಿ ಬಾಬಾಗೆ ನೀಡಿದ್ದಾನೆ ಎಂದು ಹೇಳಲಾಗಿದೆ. ದೇವರ ಸನ್ನಿಧಿಯಲ್ಲಿ ಕನ್ಯಾದಾನವನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

    ಹುಡುಗಿ ಅಪ್ರಾಪ್ತಳಾಗಿರುವಾಗ, ತಂದೆ ಅದ್ಹೇಗೆ ದಾನ ಮಾಡಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು. ದಾನ ಮಾಡಲು ಹೆಣ್ಣು ಒಂದು ಆಸ್ತಿಯಲ್ಲ ಎಂದು ನ್ಯಾಯಮೂರ್ತಿ ಕಂಕಣವಾಡಿ ಹೇಳಿದರು. ನ್ಯಾಯಾಲಯ ಕಣ್ಮುಚ್ಚಿ ಕುಳಿತಿಲ್ಲ. ಅಪ್ರಾಪ್ತ ಬಾಲಕಿಯ ಭವಿಷ್ಯದ ಬಗ್ಗೆ ಚಿಂತಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.

  • ಪ್ರವಾದಿಯ ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ

    ಪ್ರವಾದಿಯ ವ್ಯಂಗ್ಯಚಿತ್ರ ಕಳುಹಿಸಿದ್ದಕ್ಕೆ ಮಹಿಳೆಗೆ ಗಲ್ಲು ಶಿಕ್ಷೆ

    ಇಸ್ಲಾಮಾಬಾದ್: ಪ್ರವಾದಿಯ ವ್ಯಂಗ್ಯಚಿತ್ರವನ್ನು ವಾಟ್ಸಪ್‌ನಲ್ಲಿ ತನ್ನ ಸ್ನೇಹಿತನಿಗೆ ಕಳುಹಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಪಾಕಿಸ್ತಾನ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ.

    2020ರಲ್ಲಿ ಫಾರೂಕ್ ಹಸನಾತ್ ಎಂಬಾತ ಮಹಿಳೆ ಅನಿಕಾ ಅಟಿಕ್ ಎಂಬಾಕೆಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿದ್ದ. ಇದೀಗ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

    ಅನಿಕಾ ಹಾಗೂ ಫಾರೂಕ್ ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ನಂತರ ಅನಿಕಾ ವಾಟ್ಸಪ್‌ನಲ್ಲಿ ಧರ್ಮನಿಂದನೆಯ ಸಂದೇಶವನ್ನು ಫಾರೂಕ್‌ಗೆ ಕಳುಹಿಸಿದ್ದಳು.

    ಅನಿಕಾ ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಂ ಧರ್ಮದ ಅವಮಾನ ಹಾಗೂ ಸೈಬರ್ ಕ್ರೈಂ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಾಕ್ಷ್ಯಗಳೊಂದಿಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ತಾಲಿಬಾನ್ ಆಡಳಿತ – ಉದ್ಯೋಗ ಕಳೆದುಕೊಂಡು 5 ಲಕ್ಷ ಅಫ್ಘಾನಿಸ್ತಾನಿಯರು ಕಂಗಾಲು

    ಫಾರೂಕ್ ಅನಿಕಾಳ ಸಂದೇಶವನ್ನು ಅಳಿಸುವಂತೆ ಹಾಗೂ ಕ್ಷಮೆ ಯಾಚಿಸುವಂತೆ ಹೇಳಿದ್ದ. ಆದರೆ ಅನಿಕಾ ನಿರಾಕರಿಸಿದ್ದರಿಂದ ಫಾರೂಕ್ ಆಕೆಯ ಮೇಲೆ ಕೇಸ್ ದಾಖಲಿಸಿದ್ದರು.

    jail

    ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು. ನ್ಯಾಯಾಲಯ ವಿಚಾರಣೆಯ ವೇಳೆ ಆಕೆ ಫಾರೂಕ್ ಉದ್ದೇಶಪೂರ್ವಕವಾಗಿ ಹೀಗೆ ಆರೋಪ ಹೊರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಇದನ್ನೂ ಓದಿ: ಕಳ್ಳತನ ಮಾಡಿದ್ದೇನೆಂದು ನಿದ್ರೆಯಲ್ಲಿದ್ದಾಗ ಕನವರಿಸಿದ ಪತ್ನಿ – ಪೊಲೀಸರಿಗೆ ದೂರು ನೀಡಿದ ಪತಿ!

    ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಯಾರನ್ನೂ ಇಲ್ಲಿಯವರೆಗೆ ಗಲ್ಲಿಗೇರಿಸಿಲ್ಲ. ಆದರೆ ಆರೋಪ ಹೊತ್ತ ಹಲವರು ಹತ್ಯೆಯಾಗಿದ್ದಾರೆ. ಕಳೆದ ವರ್ಷವೂ ಶ್ರೀಲಂಕಾ ಮೂಲದ ವ್ಯಕ್ತಿಯ ಮೇಲೆ ಧರ್ಮನಿಂದನೆಯ ಆರೋಪ ಹೊರಿಸಿ ಪಾಕಿಸ್ತಾನಿ ಗುಂಪೊಂದು ಆತನನ್ನು ಕೊಲೆ ಮಾಡಿತ್ತು.

  • ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

    ಹಾರೆಯಿಂದ ಹೊಡೆದು ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

    ಕಲಬುರಗಿ: ನಗರದ ಹೀರಾಪುರ ಬಡಾವಣೆಯ ಮನೆಯಲ್ಲಿ ತನ್ನ ಪತ್ನಿಯನ್ನು ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ನಗರದ 3ನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

    ಶಿಕ್ಷೆಗೆ ಗುರಿಯಾಗಿರುವ ಪತಿಯನ್ನು ಅಫಜಲಪುರ ತಾಲೂಕಿನ ರೇವೂರ್ ಸಂತೋಷ ಅಣ್ಣಾರಾಯ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿ ಹೀರಾಪುರ ಬಾಡಿಗೆ ಮನೆಯಲ್ಲಿ ಪತ್ನಿ ಸವಿತಾಳಿಗೆ ಹಾರೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯ ಪಿಐ ವಾಜೀದ್ ಪಟೇಲ್ ತನಿಖೆ ಮಾಡಿ ದೋಷಾರೋಪಣೆ ವರದಿ ಸಲ್ಲಿಸಿದ್ದರು. ಇದನ್ನೂ ಓದಿ: ಪುತ್ತೂರಿನಲ್ಲಿ ಪೈಶಾಚಿಕ ಕೃತ್ಯ – ಮಗನಿಂದಲೇ ತಾಯಿಯ ಮೇಲೆ ರೇಪ್‌

    ಈ ಕುರಿತು ವಿಚಾರಣೆ ಮಾಡಿದ 3ನೇಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಗದೀಶ್ ವಿ.ಎನ್ ಅವರು, ಕಲಂ 302, 504ರ ಅಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ಮೃತಳ ಮಕ್ಕಳು ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಗುರುಲಿಂಗಪ್ಪ ಶ್ರೀಮಂತ ತೇಲಿ, ವಾದ ಮಂಡಿಸಿದ್ದರು.  ಇದನ್ನೂ ಓದಿ: ಒಳ ಉಡುಪು, ಗುಪ್ತಾಂಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ಮೂವರು ಮಹಿಳೆಯರು ಅರೆಸ್ಟ್

  • ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ

    ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ

    ಮುಂಬೈ: ಡ್ರಗ್ ಆರೋಪಿಯೋರ್ವನಿಗೆ ಮದುವೆ ಮಾಡಿಕೊಳ್ಳಲು ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಕೋರ್ಟ್ ಅನುಮತಿ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಡ್ರಗ್ ಆರೋಪಿ ಕೋರ್ಟ್ ಗೆ ತನ್ನ ಮದುವೆ ಆಮಂತ್ರಣದ ಜೊತೆಗೆ, ನನ್ನ ಮದುವೆ ಹೈದರಾಬಾದ್ ನಲ್ಲಿದೆ. ಒಂದು ವಾರ ನನ್ನ ಮದುವೆಗೆ ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾನೆ. ಈ ಸಂಬಂಧ ನ್ಯಾಯಾಲಯವು, ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನಂತರ ನ್ಯಾಯಾಲಯದ ಅನುಮತಿ ಕೇಳುತ್ತಿರುವುದು ಅವಹೇಳನ ಕೃತ್ಯವಾಗಿದೆ. ಆದರೆ ಆರೋಪಿ ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಮನವಿಯನ್ನು ಅನುಮತಿಸುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಕೆಸರೆಚಿದವನ ಕೈಯಲ್ಲೇ ಪ್ಯಾಂಟ್ ಕ್ಲೀನ್ ಮಾಡಿಸಿ ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್

    ಯಾರಿದು?
    ಆರೋಪಿ ಆರಿಫ್ ಖಾನ್ ವಿರುದ್ಧ ಮುಂಬೈ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟಾನ್ಸ್(ಎನ್‍ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‍ನಲ್ಲಿ ಆತನಿಗೆ ಜಾಮೀನು ಸಹ ನೀಡಲಾಗಿತ್ತು. ಆದರೆ ಆರಿಫ್ ಖಾನ್‍ಗೆ ಕೆಲವು ಷರತ್ತುಗಳು ವಿಧಿಸಲಾಗಿತ್ತು. ಈ ಪ್ರಕರಣ ಆರೋಪಿ ಪ್ರಕರಣದ ಬಗ್ಗೆ ಪೂರ್ತಿ ಚಿತ್ರಣ ಸಿಗುವವರೆಗೂ ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿತ್ತು.

    ಆರಿಫ್ ಖಾನ್‍ಗೆ ಮದುವೆ ಫಿಕ್ಸ್ ಆಗಿದ್ದು, ಮದುವೆ ಹೈದರಾಬಾದ್ ನಲ್ಲಿತ್ತು. ಈ ಸಂಬಂಧ ಆರಿಫ್ ಖಾನ್ ಒಂದು ವಾರ ಮುಂಬೈಯಿಂದ ತನ್ನ ಮದುವೆಗಾಗಿ ಹೈದರಾಬಾದ್‍ಗೆ ಪ್ರಯಾಣಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದರು. ಈ ವೇಳೆ ಆತ ಅರ್ಜಿಯೊಂದಿಗೆ ಮದುವೆಯ ಆಮಂತ್ರಣ ಪತ್ರವನ್ನು ಲಗತ್ತಿಸಿರುವುದು ಸ್ಪಷ್ಟವಾಗಿದೆ.

    POLICE JEEP

    ಈ ಅರ್ಜಿ ನೋಡಿದ ನ್ಯಾಯಾಲಯ ಮದುವೆ ಕಾರ್ಡ್ ಮೊದಲೇ ಮುದ್ರಿಸಿ ನಂತರ ನ್ಯಾಯಾಲಯಕ್ಕೆ ಅರ್ಜಿ ಅಲ್ಲಿಸಿರುವುದು ಅತ್ಯಂತ ಅವಹೇಳನ ಕೃತ್ಯ. ಮದುವೆಯ ಕಾರ್ಡ್‍ಗಳನ್ನು ಈಗಾಗಲೇ ಮುದ್ರಿಸಿ, ನ್ಯಾಯಾಲಯವು ತನ್ನ ಅರ್ಜಿಯನ್ನು ಅಗತ್ಯವಾಗಿ ಅನುಮತಿಸುತ್ತದೆ ಎಂದು ಅರ್ಜಿದಾರನು ಹೇಗೆ ಭಾವಿಸಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆಯ ಸದ್ಬುದ್ಧಿ ಕೊಡಲಿ: ಪ್ರೀತಂಗೌಡ 

    ಆರೋಪಿಯ ಈ ಕೃತ್ಯವನ್ನು ‘ಅತ್ಯಂತ ಅವಹೇಳನವಾಗಿದೆ’ ಆದರೆ ಅವನು ಮದುವೆಯಾಗಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಷರತ್ತುಗಳೊಂದಿಗೆ ಅವನ ಮನವಿಯನ್ನು ಅನುಮತಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

  • ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗ್ತಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯ ಕೊಂದೇ ಬಿಟ್ರು!

    ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗ್ತಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯ ಕೊಂದೇ ಬಿಟ್ರು!

    ಆನೇಕಲ್: ಕೋರ್ಟ್ ಗೆ ಹಾಜರಾಗಿ ಮನೆಯತ್ತ ತೆರಳುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಬಿ.ಟಿ.ಎಂ.ನಿವಾಸಿ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಜಮೀನಿನ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಆನೇಕಲ್ ಕೋರ್ಟಿಗೆ ಹಾಜರಾಗಿ ನಿವಾಸದತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

    ಆನೇಕಲ್ ಪಟ್ಟಣದಲ್ಲಿರುವ ಕೇಂದ್ರ ಸರ್ಕಾರದ ಮಂತ್ರಿ ಎ ನಾರಾಯಣಸ್ವಾಮಿ ನಿವಾಸದ ಮುಂದೆ ರಾಜಶೇಖರ್ ರೆಡ್ಡಿ ತನ್ನ ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ನಂತರ ಮೊದಲಿಗೆ ಗನ್ ಮೂಲಕ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೂಷಕರ್ಮಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಈ ರಾಜ್ಯದ ಆಸ್ತಿ: ಕೆ.ಎಸ್‌.ಈಶ್ವರಪ್ಪ

  • ಆಸ್ಟ್ರೇಲಿಯಾ ಪ್ರಜೆ 8 ಸಾವಿರ ವರ್ಷ ಇಸ್ರೇಲ್ ತೊರೆಯುವಂತಿಲ್ಲ!

    ಆಸ್ಟ್ರೇಲಿಯಾ ಪ್ರಜೆ 8 ಸಾವಿರ ವರ್ಷ ಇಸ್ರೇಲ್ ತೊರೆಯುವಂತಿಲ್ಲ!

    ಜೆರುಸಲೇಮ್: ಆಸ್ಟ್ರೇಲಿಯಾದ ಪ್ರಜೆಗೆ 8,000 ವರ್ಷಗಳ ವರೆಗಿನ ಪ್ರಯಾಣದ ಹಕ್ಕನ್ನು ಇಸ್ರೇಲ್ ನ್ಯಾಯಾಲಯ ಕಸಿದುಕೊಂಡಿದೆ. ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದ ಆಸ್ಟ್ರೇಲಿಯಾದ ಪ್ರಜೆ ನೋಮ್ ಹಪ್ಪರ್ಟ್(44)ಗೆ ಬರೋಬ್ಬರಿ 8,000 ವರ್ಷಗಳ ವರೆಗೆ ಇಸ್ರೇಲ್ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಕಾರಣ ಕೇಳಿದರೆ ನೀವೂ ದಂಗಾಗುತ್ತೀರಿ.

    ಹಪ್ಪರ್ಟ್‍ನ ಮಾಜಿ ಪತ್ನಿ ಮಕ್ಕಳನ್ನು ಸಾಕಲು ಮಾಜಿ ಪತಿಯಿಂದ ಹಣವನ್ನು ಕೇಳಲು ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ. ಆಗ 1.8 ಮಿಲಿಯನ್ ಪೌಂಡ್(ಸುಮಾರು 18 ಕೋಟಿ ರೂ.) ಹಣವನ್ನು ನೀಡುವಂತೆ ಕೋರ್ಟ್ ವ್ಯಕ್ತಿಗೆ ಆದೇಶಿಸಿತ್ತು. ಈ ಮೊತ್ತವನ್ನು ಆತ ಭರಿಸದೇ ಹೋದಲ್ಲಿ ಬರೋಬ್ಬರಿ 8,000 ವರ್ಷಗಳ ವರೆಗೆ ಆತ ದೇಶ ತೊರೆಯದಂತಹ ಕಟ್ಟುಪಾಡು ವಿಧಿಸಿದೆ.

    ಆಸ್ಟ್ರೇಲಿಯಾ ಮೂಲದ ನೋಮ್ ಹಪ್ಪರ್ಟ್ 2012 ರಿಂದ ಇಸ್ರೇಲ್‍ನಲ್ಲಿ ವಾಸಿಸುತ್ತಿದ್ದು, ಆತನ ಮಾಜಿ ಪತ್ನಿ ಇಸ್ರೇಲ್‍ನ ಪ್ರಜೆಯಾಗಿದ್ದಾರೆ. ಹಪ್ಪಟ್ 8 ವರ್ಷಗಳಿಂದ ಇಸ್ರೇಲ್‍ನಲ್ಲಿ ಬಂಧಿಯಾಗಿದ್ದು, ತನ್ನ ಮಕ್ಕಳ ಬೆಂಬಲ ಹಣವನ್ನು ಸಂಪೂರ್ಣವಾಗಿ ಭರಿಸದೇ ಮರಳದಂತಹ ಸ್ಥಿತಿಗೆ ಬಂದಿದ್ದಾನೆ. ಇದನ್ನೂ ಓದಿ: ಹೊಸೂರು ರೋಡ್ ಮರ್ಡರ್‌ಗೆ ಟ್ವಿಸ್ಟ್ – 3 ಮದ್ವೆಯಾಗಿದ್ದ ಅರ್ಚನಾ ಆಸ್ತಿ ಮೇಲೆ ಕಣ್ಣು
    ಹಪ್ಪರ್ಟ್ ತನ್ನ ಇಬ್ಬರು ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 1,200 ಪೌಂಡ್(1.2ಲಕ್ಷ ರೂ.) ನೀಡಬೆಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಪ್ಪರ್ಟ್ ಇಲ್ಲಿಯವರೆಗೆ ನೀಡಿರುವ ಪಾವತಿಯ ದಾಖಲೆ ಹಾಗೂ ಸಂಪೂರ್ಣ ಮೊತ್ತವನ್ನು ಒಮ್ಮೆಲೆ ಭರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

    ಅಸಲಿಗೆ ಈ ನೀತಿ ಚಾಲ್ತಿಯಲ್ಲಿರುವುದು ಆನ್‍ಲೈನ್ ವ್ಯವಸ್ಥೆಯಲ್ಲಿ ನೀಡಿರುವ ಗರಿಷ್ಠ ದಿನಾಂಕದಿಂದಾಗಿ. ಈ ನೀತಿಗೆ ಕೊನೆಯ ದಿನಾಂಕವನ್ನು ಆನ್‍ಲೈನ್‍ನಲ್ಲಿ 9999ರ ಡಿಸೆಂಬರ್ 31ಕ್ಕೆ ಕೊನೆಯದಾಗಿಸಿದೆ. ಹೀಗಾಗಿ ಹಪ್ಪರ್ಟ್ ತನ್ನ ತವರಿಗೆ ತೆರಳಲು ಅಥವಾ ಇಸ್ರೇಲ್ ಅನ್ನು ತೊರೆಯಲು 8,000 ವರ್ಷ ಕಾಯಬೇಕಾಗಿದೆ. ಇದನ್ನೂ ಓದಿ: ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI