Tag: court

  • ತೀರ್ಪು ಬಂದ್ರೂ ಹಿಜಬ್ ವಿಚಾರ ಇಲ್ಲಿಗೆ ನಿಲ್ಲಲ್ಲ: ಸಿ.ಎಂ ಇಬ್ರಾಹಿಂ

    ತೀರ್ಪು ಬಂದ್ರೂ ಹಿಜಬ್ ವಿಚಾರ ಇಲ್ಲಿಗೆ ನಿಲ್ಲಲ್ಲ: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಹಿಜಬ್ ತೀರ್ಪಿನ ವಿಚಾರ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಸುಪ್ರೀಂ ಕೋರ್ಟ್‍ಗೆ ಹೋಗುತ್ತೇವೆ ಎಂದು ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ತಿಳಿಸಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ತೀರ್ಪು ವಿಚಾರವಾಗಿ ಇವತ್ತು ನ್ಯಾಯಲಯದ ತೀರ್ಪು ಬಂದಿದೆ. ಇದರಲ್ಲಿ ಮೂಲಭೂತವಾಗಿ ಧರ್ಮಕ್ಕೆ ಅಡಚಣೆ ಇಲ್ಲ ಎಂದಿದ್ದಾರೆ. ಇದರ ಮೇಲೆ ಸುಪ್ರೀಂಗೆ ಹೋಗಲು ಇವತ್ತು ಸಮಾಜದ ಮುಖಂಡರ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಧರ್ಮದ ದೃಷ್ಠಿಯ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು ಎಂದು ತಿಳಿಸಿದರು.

    ಇಂದು ತಿಲಕ, ವಿಭೂತಿ, ಬಿಂದಿ ಇಟ್ಕೊಳ್ಳೋದು ಚಾಯ್ಸ್ ಇದೆಯೋ, ಅದೇ ರೀತಿ ಹಿಜಬ್ ಕೂಡ ಆಗಿದೆ. ನಮ್ಮ ತಾಯಂದಿರು ಸೆರಗು ಹಾಕ್ತಾರೆ, ನಾಳೆ ಸೆರಗು ಹಾಕಿಕೊಳ್ಳೋದು ಬೇಡ ಎಂದು ನ್ಯಾಯಾಲಯ ಹೇಳಿದರೆ ಅದನ್ನ ಸುಪ್ರಿಂ ಕೋರ್ಟ್‍ನಲ್ಲಿ ನಿರ್ಧರಿಸಬೇಕಾಗುತ್ತದೆ. ಅದೇ ರೀತಿ ಇದು ಆಗಿದೆ. ಯಾರು ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ. ನಾವು ಒಗ್ಗಟ್ಟಾಗಿ ಸುಪ್ರೀಂಕೋರ್ಟ್‍ಗೆ ಹೋಗಲು ಪ್ರಯತ್ನ ಪಡ್ತಿದ್ದೇವೆ ಎಂದು ಭರವಸೆ ನೀಡಿದರು. ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

    ಮುಂಬೈನ ಖ್ಯಾತ ವಕೀಲರ ಜೊತೆ ಕೂಡ ನಾನು ಮಾತನಾಡಿದ್ದೇನೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ನಾಳೆ ಜೀನ್ಸ್ ಪ್ಯಾಂಟ್ ಹಾಕಬಾರದು ಅಂತಾರೆ. ಅದು ಕೂಡ ಇದೇ ರೀತಿ ಆದರೆ ಏನು. ಕೂಡಲೇ ಈ ಎಲ್ಲಾ ವಿಚಾರದ ಬಗ್ಗೆ ಸಿಎಂ ತೀರ್ಮಾನ ಮಾಡಬೇಕು ಎಂದು ಹೇಳಿದರು. ಶಾಲೆಲಿ ಎಲ್ರೂ ಪ್ರೀತಿ ವಿಶ್ವಾಸದಿಂದ ಇರಿ, ಬೇರೆಯದಕ್ಕೆ ಅವಕಾಶ ನೀಡ್ಬೇಡಿ: ಸಿದ್ದಗಂಗಾ ಶ್ರೀ

  • ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಬೆಂಗಳೂರು: ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಕೋರ್ಟ್ ತೀರ್ಪು ನೀಡಿದ ನಂತರ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಈ ಮೂಲಕ ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡುಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಇದು ಒಂದು ಮಹತ್ವದ ತೀರ್ಪು ಆಗಿದೆ ಎಂದು ಸ್ವಾಗತಿಸಿದ್ದಾರೆ.

  • ಲಾರಿ, ಬೈಕ್ ಅಪಘಾತ- ಲಾರಿ ಚಾಲಕನಿಗೆ 9 ವರ್ಷದ ನಂತರ ಶಿಕ್ಷೆ

    ಲಾರಿ, ಬೈಕ್ ಅಪಘಾತ- ಲಾರಿ ಚಾಲಕನಿಗೆ 9 ವರ್ಷದ ನಂತರ ಶಿಕ್ಷೆ

    ಧಾರವಾಡ: 2013ರಲ್ಲಿ ನಡೆದ ಲಾರಿ, ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಲಾರಿ ಚಾಲಕನಿಗೆ ಒಂದು ವರ್ಷದ 6 ತಿಂಗಳ ಕಾಲ ಶಿಕ್ಷೆ ಹಾಗೂ 11 ಸಾವಿರ ದಂಡ ವಿಧಿಸಿದೆ.

    ಮಂಜುನಾಥ್ ಖಜ್ಜಿಡೊಣಿ ಶಿಕ್ಷೆಗೆ ಒಳಗಾದ ಲಾರಿ ಚಾಲಕ. ಮಂಜುನಾಥ್ ಅವರ ನಿರ್ಲಕ್ಷ್ಯದಿಂದ 2013ರಲ್ಲಿ ಬೈಕ್ ಸವಾರ ಕೀರ್ತವಂತ ಕಳ್ಳಿಮನಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದ. ಕೀರ್ತವಂತ ಹುಬ್ಬಳ್ಳಿ, ಧಾರವಾಡ ಬೈಪಾಸ್ ಮಧ್ಯೆ ಬರುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಮಂಜುನಾಥ್ ಬೆಳಗಾವಿ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಲಾರಿ ಚಾಲಕ ಮಂಜುನಾಥ್‌, ಬೈಕ್ ಸವಾರ ಕಿರ್ತವಂತ ಕಳ್ಳಿಮನಿಗೆ ಡಿಕ್ಕಿ ಹೊಡೆದಿದ್ದರಿಂದ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅಪಘಾತ ಪಡಿಸಿದ ಲಾರಿ ಚಾಲಕನಿಗೆ ಧಾರವಾಡದ ಎರಡನೇ ಜೆಎಂಎಫ್‍ಸಿ ನ್ಯಾಯಾಲಯ ಒಂದು ವರ್ಷ 6 ತಿಂಗಳ ಕಾಲ ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಮಾರ್ಚ್ ಅಂತ್ಯಕ್ಕೆ 100 ಕೃಷಿ ಸಂಜೀವಿನಿ ವಾಹನಗಳು ಲೋಕಾರ್ಪಣೆ: ಬಿ.ಸಿ ಪಾಟೀಲ್

    ಅಪಘಾತದ ತನಿಖೆ ನಡೆಸಿದ್ದ ಪೊಲೀಸರು, ಲಾರಿ ಚಾಲಕನ ಮೇಲೆ ಗಂಭೀರ ಆರೋಪ ಕಂಡು ಬಂದ ಕಾರಣ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ಮಾಡಿದ ನ್ಯಾಯಾಲಯ ಲಾರಿ ಚಾಲಕನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷ 6 ತಿಂಗಳ ಶಿಕ್ಷ ವಿಧಿಸಿ ಆದೇಶಿಸಿದೆ. ಅಲ್ಲದೇ 11 ಸಾವಿರ ದಂಡ ಕೂಡಾ ಆ ಲಾರಿ ಚಾಲಕನಿಗೆ ವಿಧಿಸಿ ಆದೇಶಿಸಿದೆ. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

  • ಕಲಂ 371ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ – ಮಾರ್ಚ್ 7 ರಾಯಚೂರು ಬಂದ್

    ಕಲಂ 371ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ – ಮಾರ್ಚ್ 7 ರಾಯಚೂರು ಬಂದ್

    ರಾಯಚೂರು: ನಗರದ ನವೋದಯ ಶಿಕ್ಷಣ ಸಂಸ್ಥೆ ಕಲಂ 371 ಜೆ ಅನುಷ್ಠಾನಕ್ಕೆ ಅಡ್ಡಿಯಾಗುವ ನಿಲುವನ್ನು ತಳಿದಿದ್ದು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಹಿನ್ನೆಲೆ ಅರ್ಜಿ ವಾಪಸ್ ಪಡೆಯುವಂತೆ ಆಗ್ರಹಿಸಿ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಒಂದಾಗಿ ಕಲಂ 371ಜೆ ಅನುಷ್ಠಾನ ಸಮಿತಿ ಅಡಿಯಲ್ಲಿ ರಾಯಚೂರು ನಗರ ಬಂದ್‍ಗೆ ಕರೆ ನೀಡಲಾಗಿದೆ. ಮಾರ್ಚ್ 7 ರಂದು ರಾಯಚೂರು ನಗರ ಬಂದ್ ಮಾಡಲು ನಿರ್ಧರಿಸಲಾಗಿದೆ.

    Raichuru

     

    ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಬಂದ್ ನಡೆಯಲಿದೆ. ನವೋದಯ ಶಿಕ್ಷಣ ಸಂಸ್ಥೆ ನಿಲುವಿನ ವಿರುದ್ಧ ವಿವಿಧ ಸಂಘಟನೆಗಳು ಹೋರಾಟ ಮುಂದುವರೆಸಿವೆ. ಸಂಸ್ಥೆಗೆ ಕಲಂ 371ಜೆ ಅನ್ವಯಿಸದಂತೆ ಕೋರ್ಟ್ ಮೊರೆ ಹೋದ ಹಿನ್ನೆಲೆ ಬಂದ್ ಕರೆ ನೀಡಲಾಗಿದೆ. ಇದನ್ನೂ ಓದಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ತಂಙಳ್ ನಿಧನ

    Raichuru

    ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ವರ್ಷ 106 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್ ಕೈ ತಪ್ಪುತ್ತಿತ್ತು. ಮೊದಲೇ ಸೀಟ್ ಹಂಚಿಕೆ ಹಿನ್ನೆಲೆ ಕಲಂ 371ಜೆ ಅಡಿ ಸೀಟ್ ಕೊಟ್ಟಿದ್ದಾರೆ. ಮುಂದಿನ ವರ್ಷ ವಿಶೇಷ ಸ್ಥಾನಮಾನದ ಅಡಿ ಮೆಡಿಕಲ್ ಸೀಟ್ ನೀಡದಿರಲು ಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಯಚೂರು ಬಂದ್‍ಗೆ ಕರೆ ನೀಡಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ಇದನ್ನೂ ಓದಿ:  ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

  • 5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ  ಹೋಟೆಲ್ ಮಾಲೀಕ

    5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ ಹೋಟೆಲ್ ಮಾಲೀಕ

    ಹೈದರಾಬಾದ್: ಹೋಟೆಲ್ ಮಾಲೀಕನೊಬ್ಬ 5 ರೂಪಾಯಿಗೆ ಗ್ರಾಹಕನ ಜೊತೆಗೆ ಗಲಾಟೆ ಮಾಡಿ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯ, ಹೈದರಾಬಾದ್‍ನ ತಿಲಕ್ ನಗರದ ಹೋಟೆಲ್‍ಗೆ ದಂಡ ವಿಧಿಸಿದೆ.

    ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ವಂಶಿ ತನ್ನ ಸ್ನೇಹಿತರ ಜೊತೆಗೆ ಬಿರಿಯಾನಿ ಹೌಸ್‍ವೊಂದಕ್ಕೆ ಹೋಗಿದ್ದರು. ಊಟ ಮಾಡಿದ ಬಳಿಕ ಜಿಎಸ್‍ಟಿ ಎಲ್ಲಾ ಸೇರಿ 1,127 ರೂಪಾಯಿ ಬಿಲ್ ಆಗಿದೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5 ರೂಪಾಯಿ ಬಿಲ್ ಮಾಡಿದ ವಿಚಾರ ತಿಳಿದ ವಂಶಿ ಹೋಟೆಲ್ ಮಾಲೀಕರಿಗೆ ಪ್ರಶ್ನೆ ಮಾಡಿದ್ದಾಳೆ. ಆಗ ದೊಡ್ಡ ಜಗಳವೇ ಆಗಿದೆ.

    MONEY

    ನಂತರ ವಂಶಿ, ಹೋಟೆಲ್ ಮ್ಯಾನೇಜ್‍ಮೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5.50 ರೂಪಾಯಿ ವಿಧಿಸಿದ್ದಲ್ಲದೆ, ಎಲ್ಲರೆದುರು ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಇದಾದ ಬಳಿಕ ಜಿಲ್ಲಾ ಗ್ರಾಹಕ ಆಯೋಗದ 2ನೇ ಪೀಠದ ಮುಖ್ಯಸ್ಥ ವಕ್ಕಂತಿ ನರಸಿಂಹ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಹೋಟೆಲ್ ಸಿಬ್ಬಂದಿ ಅಶ್ಲೀಲ ಪದ ಬಳಸಿ ನಿಂದಿಸಿ, ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲವಾಗಿರುವುದು ಮತ್ತು ಹೆಚ್ಚುವರಿ 5.50 ರೂಪಾಯಿ ಬಿಲ್ ಮಾಡಿರುವುದು ಸಾಬೀತಾಗಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

    ಹೆಚ್ಚುವರಿ 5.50 ರೂಪಾಯಿಗೆ ಶೇ.10 ರಷ್ಟು ಬಡ್ಡಿ ಸೇರಿಸಿ 5000 ರೂಪಾಯಿಯನ್ನು ಗ್ರಾಹಕ ವಂಶಿಗೆ ನೀಡಬೇಕು. ಜಿಲ್ಲಾ ಗ್ರಾಹಕ ರಕ್ಷಣಾ ಮಂಡಳಿಯ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ 50 ಸಾವಿರ ರೂಪಾಯಿ ದಂಡವನ್ನು 45 ದಿನದ ಒಳಗೆ ಕಟ್ಟಬೇಕು. ಮತ್ತೊಮ್ಮೆ ಈ ತಪ್ಪು ಮಾಡದಂತೆ ನ್ಯಾಯಾಲಯ ಆದೇಶಿದೆ.

  • ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

    ಕೋರ್ಟ್ ಮೆಟ್ಟಿಲೇರಿದ ಟಿವಿ ವ್ಯಾಲ್ಯೂಮ್ ವಿವಾದ..!

    ಕೋಲಾರ: ಟಿವಿ ವ್ಯಾಲ್ಯೂಮ್ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.

    ಟಿವಿ ವ್ಯಾಲ್ಯೂಮ್ ಜಾಸ್ತಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದ ಮಹಿಳೆ ಹಾಗೂ ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಇನ್ನೂ ಈ ಗಲಾಟೆಯು ಮನೆಯ ಬಳಿ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರ ಎದುರೇ ವ್ಯಕ್ತಿಯಿಂದ ಹಲ್ಲೆಗೆ ಯತ್ನ ನಡೆದಿದೆ.

    ಕೋಲಾರ ನಗರದ ಪಿಸಿ ಬಡಾವಣೆಯಲ್ಲಿ ಕಳೆದ 2 ದಿನಗಳ ಹಿಂದೆ ಈ ಗಲಾಟೆ ನಡೆದಿದ್ದು, ಪರಸ್ಪರ ದೂರು ಪ್ರತಿ ದೂರು ದಾಖಲಾಗಿದೆ. ಇನ್ನೂ ಇದೆ 22 ರಂದು ಪಿ.ಸಿ ಬಡವಾಣೆಯ ರೋಹಿತ್ ಮನೆಯಲ್ಲಿ ಟಿವಿ ವ್ಯಾಲ್ಯೂಮ್ ಹೆಚ್ಚಾಗಿದ್ದನ್ನು ಪಕ್ಕದ ಮನೆಯ ಮಂಜುಳಾ ಎಂಬವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

    ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್‍ಗೂ ಹಾನಿ ಮಾಡಿರುವ ರೋಹಿತ್ ವೀಡಿಯೋ ಸದ್ಯ ವೈರಲ್ ಆಗಿದೆ. ರೋಹಿತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಲ್ಲೆ ಮಾಡಿದ್ದಾನೆ. ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಹಲ್ಲೆಗೆ ಯತ್ನ ನಡೆಸಿರುವ ವೀಡಿಯೋ ಕೂಡ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

    ಕೋಲಾರ ನಗರ ಠಾಣೆ ಪೊಲೀಸರು ರೋಗಿತ್ ಹಾಗೂ ಪತ್ನಿ ದಿವ್ಯಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಂಜುಳಾ ಹಾಗೂ ತಂದೆ-ತಾಯಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

    ಮುಂಬೈ: ಬಾಲಿವುಡ್ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ. ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬ್ಯುಸಿಯಾಗಿದ್ದರೆ, ಇತ್ತ ಕಡೆ ಸುಪ್ರೀಂ ಕೋರ್ಟ್ ಸಲಹೆಯೊಂದನ್ನು ನೀಡಿ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಿನಿಮಾದ ಕುರಿತಾಗಿ ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಿನಿಮಾ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಚಿತ್ರತಂಡಕ್ಕೆ ಸಲಹೆ ನೀಡಿದೆ.

    ಹೆಸರು ಬದಲಾಯಿಸುವುದರ ಜತೆಗೆ ಸಿನಿಮಾದ ಕಥೆಯೇ ಬಗ್ಗೆಯೇ ಆಕ್ಷೇಪ ವ್ಯಕ್ತ ಪಡಿಸಿ, ಗಂಗೂಬಾಯಿ ಅವರ ದತ್ತು ಪುತ್ರ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅಲ್ಲದೇ, ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಲು ಕೋರಿ ನ್ಯಾಯಾಲಯಗಳ ಮುಂದೆ ಹಲವಾರು ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ. ಬನ್ಸಾಲಿ ಪ್ರೊಡಕ್ಷನ್ಸ್‍ನ ವಕೀಲ ಸಿದ್ಧಾರ್ಥ ದವೆ ಅವರು ಸಲಹೆಯ ಬಗ್ಗೆ ತಮ್ಮ ಕಕ್ಷಿದಾರ ಜೊತೆ ಮಾತನಾಡಿ ಸೂಚನೆಗಳನ್ನು ಪಡೆಯುವುದಾಗಿ ಇಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಚಾರವಾಗಿ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ‘ಗಂಗೂಬಾಯಿ ಕಾಠಿಯಾವಾಡಿ’ ಮುಂಬೈನ ಕಾಮಾಠಿಪುರ ಲೈಂಗಿಕ ಕಾರ್ಯಕರ್ತೆಯಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಉತ್ತಮ ಜೀವನ ನಡೆಸುತ್ತಿದ್ದರು. ಈ ನಿಜವಾದ ಘಟನೆಯನ್ನು ತೆಗದುಕೊಂಡು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ಮಾಡಲಾಗಿದೆ. ಈ ಹಿನ್ನೆಲೆ ಗಂಗೂಬಾಯಿಯ ದತ್ತುಪುತ್ರ ಬಾಬು ರಾವ್ಜಿ ಶಾ ಸಹ ಸಿನಿಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಲ್ಲಿ ಅವರು, ನನ್ನ ತಾಯಿಯನ್ನು ಈ ಸಿನಿಮಾದಲ್ಲಿ ಮಾನಹಾನಿ ಮಾಡಲಾಗಿದೆ. ಅದಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದರು.

    ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

    ‘ಗಂಗೂಬಾಯಿ ಕಾಠಿಯಾವಾಡಿ’ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ. ಅಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.

  • ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ: ವಿನೋದ್ ಕುಲಕರ್ಣಿ

    ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ: ವಿನೋದ್ ಕುಲಕರ್ಣಿ

    ಬೆಂಗಳೂರು: ಹಿಜಜ್ ವಿವಾದದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ಕೂಡ ನಡೆಸಿದ್ದು, ಮತ್ತೆ ನಾಳೆ 2:30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.

    ಹಿಜಬ್ ವಿವಾದದ 5ನೇ ದಿನದ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಅರ್ಜಿದಾರರ ಪರವಾಗಿ ಕೆಲವೊಂದು ವಾದವನ್ನು ಆಲಿಸಿತು. ಆದರೆ ಎರಡು ಪಿಎಎಲ್‍ಗಳ ವಿಚಾರಣೆ ನಡೆಸುವಾಗ ಒಂದು ಅರ್ಜಿಯನ್ನು ವಜಾ ಮಾಡಿದೆ. ಸರಿಯಾದ ನಿಯಮಾನುಸಾರ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದು ವಜಾ ಮಾಡಿದ ತ್ರಿಸದಸ್ಯ ಪೀಠ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದೆ.

    ಮತ್ತೊಂದು ಪಿಎಎಲ್ ಪರವಾಗಿ ವಾದ ಮಂಡಿಸಿದ ವಕೀಲ ವಿನೋದ್ ಕುಲಕರ್ಣಿ ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದರು. ಜೊತೆಗೆ ಇವತ್ತೆ ಮಧ್ಯಂತರ ಆದೇಶ ನೀಡುವಂತೆ ಮನವಿ ಮಾಡಿಕೊಂಡರು. ಇಷ್ಟೆಲ್ಲಾ ಪ್ರತಿವಾದದ ಬಳಿಕ ಸರ್ಕಾರದ ಪರವಾಗಿ ವಾದ ಮಂಡಿಸಲು ತ್ರಿಸದಸ್ಯ ಪೀಠ ಸೂಚನೆ ನೀಡಿತ್ತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್: ಡಾ.ಕೆ ಸುಧಾಕರ್

    ಆದರೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ನಾಳೆ ವಾದ ಮಂಡನೆ ಮಾಡುವುದರ ಜೊತೆಗೆ ಮಧ್ಯಂತರ ಅರ್ಜಿಗೆ ಆಕ್ಷೇಪ ಸಲ್ಲಿಕೆ ಮಾಡುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಈ ಸಂದರ್ಭದಲ್ಲಿ ವಕೀಲರೊಬ್ಬರು ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಆಗ ತ್ರಿಸದಸ್ಯ ಪೀಠ ಸರ್ಕಾರ ಮತ್ತು ಅರ್ಜಿದಾರರು ಒಪ್ಪಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಅಭಿಪ್ರಾಯ ನೀಡಿತು. ಇದನ್ನೂ ಓದಿ: ನಿಮಗೆ ಗುಂಡಿ ಮುಚ್ಚೋದಕ್ಕೆ ಆಗದಿದ್ರೆ ಮಿಲಿಟರಿ ಕರೆಸ್ತೇನೆ – ಹೈಕೋರ್ಟ್ ಗರಂ

  • ಕಲಬುರಗಿ ಡಿಸಿ ಸರ್ಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ!

    ಕಲಬುರಗಿ ಡಿಸಿ ಸರ್ಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ!

    ಕಲಬುರಗಿ: ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಕಲಬುರಗಿ ಜಿಲ್ಲಾಧಿಕಾರಿ ಸರ್ಕಾರಿ ವಾಹನ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

    ಭೀಮಾ ಏತ ನೀರಾವರಿ ಯೋಜನೆ ಅಡಿಯಲ್ಲಿ ರೈತನ ಜಮೀನು ಮುಳುಗಡೆಯಾಗಿತ್ತು. ಜಮೀನು ಮುಳಗಡೆಯಾಗಿ ಬರೋಬ್ಬರಿ ಹತ್ತು ವರ್ಷಗಳೆ ಕಳೆದು ಹೋಗಿದೆ. ಜಮೀನು ಮುಳುಗಡೆ ಪರಿಹಾರ ಕೊಡಬೇಕಿದ್ದ ನೀರಾವರಿ ಇಲಾಖೆ ಇದುವರೆಗೂ ಪರಿಹಾರ ನೀಡಿರಲಿಲ್ಲ. ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ರೈತ ಕೋರ್ಟ್ ಮೊರೆ ಹೋಗಿದ್ದ. ರೈತನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಇದನ್ನೂ ಓದಿ: ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆ ಸದಾ ಸಿದ್ಧ: ರಾಜವಂಶಸ್ಥ ಯದುವೀರ್ ಒಡೆಯರ್

    ನ್ಯಾಯಾಲಯದ ಆದೇಶದ ಕಾಪಿಯನ್ನು ತೆಗೆದುಕೊಂಡು ಬಂದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡುವುದಕ್ಕೆ ಮುಂದಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲೆಶ್ ಮೇತ್ರೆ ಅವರ 33 ಗುಂಟೆ ಜಮೀನು 2010 ರಲ್ಲಿ ಭೀಮಾ ಏತ ನೀರವಾರಿ ಯೋಜನೆ ಅಡಿಯಲ್ಲಿ ಮುಳುಗಡೆಯಾಗಿತ್ತು. ಜಮೀನು ಮುಳುಗಡೆಯಾದ ಹಿನ್ನೆಲೆ ಪರಿಹಾರ ರೂಪದಲ್ಲಿ 7 ಲಕ್ಷ 41 ಸಾವಿರ ರೂಪಾಯಿ ನೀಡಬೇಕಿತ್ತು. ಆದರೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕಾರಣ ರೈತ ಕೋರ್ಟ್ ಮೊರೆ ಹೋಗಿದ್ದ.

    ಜಮೀನು ಮುಳುಗಡೆಯಾದ ಬಳಿಕ ಕೆಎನ್‌ಎನ್‌ಎಲ್‌ ಅಧಿಕಾರಿಗಳು ಪರಿಹಾರ ನೀಡಿದ್ದರು. ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರೈತ ಕೋರ್ಟ್ ಮೊರೆ ಹೋಗಿದ್ದ. ರೈತ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚುವರಿ ಮೊತ್ತವನ್ನು ನೀಡುವಂತೆ 2018 ರಲ್ಲಿ ಆದೇಶ ಮಾಡಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರು. ರೈತ ಪರಿಹಾರಕ್ಕಾಗಿ ಸರ್ಕಾರಿ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ. ಹಾಗಾಗಿ ರೈತ ಮತ್ತೆ ಕೋರ್ಟ್ ಮೊರೆ ಹೋದ. ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯ ಮೊರೆ ಹೋಗಿದ್ದ. ಕೋರ್ಟ್ ಇದೀಗ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಆದೇಶ ಹೊರಿಡಿಸಿದ ಹಿನ್ನಲೆ ಕೋರ್ಟ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರು ಜಪ್ತಿಗೆ ಮುಂದಾಗಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಕಾರು ಕೀ ನೀಡದ ಕಾರಣ ಮಧ್ಯಾಹ್ನ ಎರಡು ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೋರ್ಟ್ ಸಿಬ್ಬಂದಿ, ರೈತ ಮತ್ತು ವಕೀಲರು ಕಾಯುವಂತಾಯಿತು. ಬಳಿಕ ಕಚೇರಿಯಿಂದ ಹೊರ ಬಂದ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಮ್ಮ ಕಾರನ್ನು ತೆಗೆದುಕೊಂಡು ಹೋದರು. ಇದನ್ನೂ ಓದಿ: ರೈಲು ಹಳಿಗೆ ಬಿದ್ದಿದ್ದ ಬಾಲಕಿಯನ್ನ ರಕ್ಷಿಸಿದ ಲೋಕೋ ಪೈಲಟ್..!

    ರೈತನಿಗೆ ಬಾಕಿ ಉಳಿಸಿಕೊಂಡಿರುವ ಪರಿಹಾರದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯಶವಂತ್, ಪರಿಹಾರದ ಮೊತ್ತವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಎನ್‌ಎನ್‌ಎಲ್‌ ನಿಗಮದ ಅಧಿಕಾರಿ ಜಿಲ್ಲೆಯಲ್ಲಿ ಇರದ ಕಾರಣ ನಾಳೆ ಕೋರ್ಟ್ ಮುಖಾಂತರ ಚೆಕ್ ಪಾವತಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

  • ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

    ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

    ರಾಂಚಿ: ಡೊರಾಂಡಾ ಮೇವು ಹಗರಣದ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡಾ ದೋಷಿ ಎಂದು ಘೋಷಿಸಲಾಗಿದೆ. ಜಾರ್ಖಂಡ್ ರಾಜಧಾನಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಿದೆ.

    ಪ್ರಕರಣದಲ್ಲಿ 36 ಮಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಮುಖ ಆರೋಪಿ ಲಾಲೂ ಪ್ರಸಾದ್ ಯಾದವ್ ಶಿಕ್ಷೆಯನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್ ಹೇಳಿದೆ. ನ್ಯಾಯಾಲಯವು ಲಾಲೂ ದೋಷಿ ಎಂದು ಘೋಷಿಸಿದ ಬೆನ್ನಲ್ಲೇ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸುವ ಬದಲು ರಿಮ್ಸ್‌ಗೆ ಕಳುಹಿಸುವಂತೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ

    ಏನಿದು ಪ್ರಕರಣ?
    ಈ ಪ್ರಕರಣವು ಡೊರಾಂಡಾ ಖಜಾನೆಯಿಂದ 139 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದೆ. 1990-92ರ ನಡುವೆ ಈ ಹಗರಣ ನಡೆದಿದ್ದು ಇದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ. ಹರಿಯಾಣ ಮತ್ತು ದೆಹಲಿಯಿಂದ ರಾಂಚಿಗೆ 400 ಗೂಳಿಗಳನ್ನು ತರಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಇದಕ್ಕೆ ಬಳಸಿದ ವಾಹನಗಳ ಸಂಖ್ಯೆಯನ್ನು ಅಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇದಕ್ಕೆ ಬಳಸಿದ ಬಹುತೇಕ ವಾಹನಗಳು ಮೋಟರ್ ಬೈಕ್‍ಗಳದಾಗಿತ್ತು. ಇಷ್ಟು ಮಾತ್ರವಲ್ಲದೇ ಬೈಕ್‍ಗಳ ನಂಬರ್ ನೀಡಿ, ಆ ವಾಹನಗಳ ಮೂಲಕ ಜಾನುವಾರುಗಳಿಗೆ ಮೇವು ತರಲಾಗಿದೆ ಎಂದು ತಿಳಿಸಲಾಗಿತ್ತು.

    ಇದರ ತನಿಖೆ ನಡೆಸಿದ್ದ ಸಿಬಿಐ, ಇದೊಂದು ಬೃಹತ್ ಹಗರಣ ಎಂದು ಹೇಳಿತ್ತು. ರಾಜ್ಯ ಮುಖಂಡರು, ನೌಕರರು, ಉದ್ಯಮಿಗಳು ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಅಧಿಕಾರಿಗಳು, ಈ ಪ್ರಕರಣದಲ್ಲಿ ಬಿಹಾರದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿದಂತೆ ರಾಜ್ಯದ ಹಲವು ಸಚಿವರನ್ನು ಬಂಧಿಸಿತ್ತು. ಇದನ್ನೂ ಓದಿ: ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

    ನಾಲ್ಕು ಪ್ರಕರಣಗಳಲ್ಲಿ ಲಾಲುಗೆ ಶಿಕ್ಷೆ
    ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಐದು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್‍ಗೆ ಇದುವರೆಗೆ ಶಿಕ್ಷೆಯಾಗಿದೆ. ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್‍ಗೆ ಜಾಮೀನು ನೀಡಲಾಗಿದೆ.