Tag: court

  • ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್‍ಡಿಪಿಐ

    ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಪೂರ್ವ ನಿಯೋಜಿತ ಸಂಚು, ನ್ಯಾಯಾಂಗ ತನಿಖೆ ನಡೆಯಲಿ: ಎಸ್‍ಡಿಪಿಐ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆ ನಡೆಸುವ ಏಕೈಕ ಉದ್ದೇಶದೊಂದಿಗೆ ಸಂಘ ಪರಿವಾರದ ಕಿಡಿಗೇಡಿಯೊಬ್ಬ ಕೋಮುಪ್ರಚೋದನಕಾರಿ ಪೋಸ್ಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು, ಇನ್ನೊಂದು ಸಮುದಾಯ ಕೆರಳುವಂತೆ ಮಾಡಿದ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹೇಳಿದೆ.

    ಬಿಜೆಪಿ ಸರ್ಕಾರದ ಸಾಲು ಸಾಲು ಭ್ರಷ್ಟಾಚಾರದ ವಿಚಾರವನ್ನು ಮತ್ತು 40% ಲಂಚಕ್ಕೆ ಸಂತೋಷ್ ಪಾಟೀಲ್ ಬಲಿ ಪಡೆದು ರಾಜೀನಾಮೆ ನೀಡಿರುವ ಈಶ್ವರಪ್ಪನವರ ಬಂಧನದ ಬೇಡಿಕೆ ವಿಚಾರವನ್ನು ವಿಷಯಾಂತರ ಮಾಡಲು ಈ ಗಲಭೆ ಸೃಷ್ಟಿಸಿರುವ ಸಾಧ್ಯತೆ ಇದೆ. ಹಾಗಾಗಿ ಈ ಇಡೀ ಘಟನೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಗೆ ಎಸ್‍ಡಿಪಿಐ ಒತ್ತಾಯಿಸುತ್ತಿದೆ. ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್

    ಪ್ರಚೋದನಾಕಾರಿ ಪೋಸ್ಟನ್ನು ಹರಿಬಿಟ್ಟ ಕಿಡಿಗೇಡಿಯನ್ನು ಮತ್ತು ಆ ಕೃತ್ಯವನ್ನು ಮಾಡಲು ಪ್ರಚೋದಿಸಿದ ಕಾಣದ ಕೈಗಳಿಗೆ ಕಾನೂನಿನ ಬೇಡಿಯನ್ನು ಹಾಕುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ನಡೆಸಿದ ಶಾಂತಿಯುತ ಪ್ರತಿಭಟನೆಯ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು ಪ್ರತಿಭಟನೆಯ ದಿಕ್ಕು ತಪ್ಪಿಸಲಾಗಿದೆ ಎಂದರು. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

    ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಮದ್ಯದಲ್ಲಿ ಕೆಲವು ಅಪರಿಚಿತರು ನುಸುಳಿ ಕಲ್ಲು ತೂರಾಟ ನಡೆಸಿ ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಕೆಲ ಮಾಧ್ಯಮಗಳಲ್ಲಿ ಪ್ರತಿಭಟನಕಾರರನ್ನು ವಿಲನ್‍ಗಳಾಗಿ ಬಿಂಬಿಸುತ್ತಿರುವುದು ಅತ್ಯಂತ ಖೇದಕರ ಎಂದು ಅವರು ಅಭಿಪ್ರಾಯಪಟ್ಟರು.

    ಪೊಲೀಸ್ ಇಲಾಖೆ ಘಟನೆಗೆ ಕಾರಣಕರ್ತರಾದ ನೈಜ ಕಿಡಿಗೇಡಿಗಳನ್ನು ಬಂಧಿಸದೆ ಮುಸ್ಲಿಂ ಸಮುದಾಯದ ಅಮಾಯಕ ಯುವಕರನ್ನು ಬಂಧಿಸುತ್ತಿರುವುದು ಗಮನಿಸಿದರೆ, ಇದು ಎಂದಿನಂತೆ ಪೊಲೀಸ್ ಇಲಾಖೆಯ ಪೂರ್ವಗ್ರಹ ಪೀಡಿತ ಕ್ರಮದ ಮುಂದುವರಿದ ಭಾಗವಾಗಿದೆ. ಘಟನೆಯ ನೆಪವೊಡ್ಡಿಕೊಂಡು ರಾತ್ರಿ ಹೊತ್ತು ಅಮಾಯಕರ ಮನೆಗಳಿಗೆ ಪೊಲೀಸರು ನುಗ್ಗಿ ವೃದ್ಧರು, ಮಹಿಳೆಯರು, ಮಕ್ಕಳಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    Hubballi Riot

    ಸಮಾಜದಲ್ಲಿ ಸ್ವಾಸ್ಥ್ಯ ಕದಡುತ್ತಿರುವ ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವ ನೈಜ ಕಿಡಿಗೇಡಿಗಳನ್ನು ಹುಡುಕಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಹುಬ್ಬಳ್ಳಿ ಜನತೆ ಶಾಂತಿ ಸೌಹಾರ್ದತೆ ಕಾಪಾಡಲು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಎಂದು ಎಸ್‍ಡಿಪಿಐ ವಿನಂತಿಸುತ್ತದೆ. ಅದೇ ರೀತಿ ಪೊಲೀಸ್ ಅಧಿಕಾರಿಗಳು ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ನಿಸ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಬ್ದುಲ್ ಹನ್ನಾನ್ ವಿನಂತಿಸಿದ್ದಾರೆ.

  • ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಬೆಳಗಾವಿ: ಕಳೆದ ಜುಲೈ 2021ರಲ್ಲಿ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಫೋಕ್ಸೋ ಪ್ರಕರಣದ ಪ್ರಮುಖ ಆರೋಪಿಗೆ ಹೈಕೋರ್ಟ್ ಹಾಗೂ ಸ್ಥಳೀಯ ಕೋರ್ಟ್‍ನಲ್ಲಿ ಜಾಮೀನು ನಿರಾಕರಿಸಲಾಗಿದೆ.

    ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ರೋಷನ್ ಡಿಕ್ರೋಜ್‍ಗೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಆರೋಪಿ ತಪ್ಪು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಆರೋಪಿಯ ಜಾಮೀನನ್ನು ಕೋರ್ಟ್ ನಿರಾಕರಿಸಿದೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ 

    STOP RAPE

    ಸಂತ್ರಸ್ತ ಕುಟುಂಬದ ಪರವಾಗಿ ಹೈಕೋರ್ಟ್ ವಕೀಲರಾದ ವಾಕರ್ ಅಹ್ಮದ್ ಶಹಾಪುರಿ ಹಾಗೂ ತಂಡದವರು ವಾದ ಮಂಡಿಸುತ್ತಿದ್ದರು. ಸದ್ಯ ಸಂತ್ರಸ್ತರಿಗೆ ನ್ಯಾಯ ಕೊಡಿಸುವವರಿಗೂ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

  • ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

    ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ಗೆ 14 ದಿನ ನ್ಯಾಯಾಂಗ ಬಂಧನ

    ಹುಬ್ಬಳ್ಳಿ: ವಿವಾದಿತ ಪೋಸ್ಟ್ ಮಾಡಿ ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್‍ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಹುಬ್ಬಳ್ಳಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

    ವಿವಾದಿತ ಪೋಸ್ಟ್ ಮಾಡಿದ್ದ ಅಭಿಷೇಕ್ ಹಿರೇಮಠ ಪರ ವಕೀಲರ ಸಂಜಯ ಬಡಾಸಕರ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಭಿಷೇಕ್‍ನನ್ನು ಏಪ್ರಿಲ್ 30 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ನಾಳೆ ಸರ್ಕಾರದ ಪರ ವಕೀಲರು ಜಾಮೀನಿಗೆ ತಕರಾರು ಸಲ್ಲಿಸಲಿದ್ದಾರೆ.

    ಅಭಿಷೇಕ್ ಪಿಯುಸಿ 2 ನೇ ವರ್ಷದ ಪರೀಕ್ಷೆ ಬರೆಯಲಿರುವ ಕಾರಣ ನ್ಯಾಯಾಲಯದ ಗಮನಕ್ಕೆ ತಂದಿದ್ದೆವೆ, ನಾಳೆ ಈ ಬಗ್ಗೆ ಅರ್ಜಿ ಕೂಡ ಕೊಡಲಿದ್ದೇವೆ ಎಂದು ವಕೀಲರು ತಿಳಿಸಿದರು. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು

    Hubballi Riot

    ಗಲಭೆ ಪ್ರಕರಣ ಸಂಬಂಧ ಖಾಕಿ ತನಿಖೆ ಇಂದು ಮತ್ತಷ್ಟು ಚುರುಕಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಗಲಾಟೆ ಮಾಡಿ ಎಸ್ಕೇಪ್ ಆಗಿದ್ದವರ ಹೆಡೆಮುರಿ ಕಟ್ಟೋಕೆ ಎರಡೂ ಟೀಂಗಳು ಕಾರ್ಯಾಚರಣೆ ನಡೆಸಿವೆ. ಗಲಭೆ ಮಾಡಿದ್ದ ಕೆಲ ಪುಂಡರು ಎಸ್ಕೇಪ್ ಆದ ಹಿನ್ನೆಲೆಯಲ್ಲಿ ಅವರ ಪತ್ತೆ ಕಾರ್ಯ ಚುರುಕಾಗಿದೆ.

  • ಮಹಿಳಾ ರೋಗಿಗಳಿಗೆ ಕಿಸ್‌, ಹಗ್‌ ಮಾಡಿ ಲೈಂಗಿಕ ಅಪರಾಧ- ಭಾರತ ಮೂಲದ ವೃದ್ಧ ವೈದ್ಯನಿಗೆ ಶಿಕ್ಷೆ

    ಮಹಿಳಾ ರೋಗಿಗಳಿಗೆ ಕಿಸ್‌, ಹಗ್‌ ಮಾಡಿ ಲೈಂಗಿಕ ಅಪರಾಧ- ಭಾರತ ಮೂಲದ ವೃದ್ಧ ವೈದ್ಯನಿಗೆ ಶಿಕ್ಷೆ

    ಲಂಡನ್:‌ ಸ್ಕಾಟ್ಲ್ಯಾಂಡ್‌ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವೈದ್ಯನೊಬ್ಬ 48 ಮಹಿಳಾ ರೋಗಿಗಳ ಲೈಂಗಿಕ ಅಪರಾಧ ಎಸಗಿದ್ದು, ತಪ್ಪಿತಸ್ಥ ಎಂದು ಸಾಬೀತಾಗಿದೆ.

    72 ವಯಸ್ಸಿನ ವೈದ್ಯ ಕೃಷ್ಣ ಸಿಂಗ್ ಮೇಲೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಬರುವ ಮಹಿಳಾ ರೋಗಿಗಳಿಗೆ ಚುಂಬಿಸುವುದು, ತಬ್ಬಿಕೊಳ್ಳುವುದು, ಪರೀಕ್ಷೆ ಹೆಸರಿನಲ್ಲಿ ಅನುಚಿತವಾಗಿ ವರ್ತಿಸುವುದು, ಅಶ್ಲೀಲ ಪದ ಬಳಕೆ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಶಾಂಘೈ ಜನ – ಸಾಕು ಪ್ರಾಣಿಗಳ ಮಾರಣಹೋಮ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಲಾಸ್ಗೋದಲ್ಲಿನ ಹೈಕೋರ್ಟ್‌ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ವೈದ್ಯ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ರೋಗಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ವಾದಿಸಿದ್ದರು.

    ಡಾ. ಸಿಂಗ್‌ ಅವರು ಮಹಿಳೆಯರ ಮೇಲೆ ಅಪರಾಧ ಎಸಗುವ ಕೆಲಸಗಳನ್ನು ಮಾಡುತ್ತಿದ್ದರು. ಲೈಂಗಿಕ ಅಪರಾಧವು ಅವರ ವೃತ್ತಿ ಜೀವನದ ಭಾಗವೇ ಆಗಿತ್ತು ಎಂದು ಪ್ರಾಸಿಕ್ಯೂಟರ್‌ ಏಂಜೆಲಾ ಗ್ರೇ ಕೋರ್ಟ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

    ಸಿಂಗ್ ಅವರು ಗೌರವಾನ್ವಿತ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ವೈದ್ಯಕೀಯ ಕ್ಷೇತ್ರಕ್ಕೆ ಅವರ ಕೊಡುಗೆಗಾಗಿ ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವವನ್ನು ಸಹ ನೀಡಲಾಗಿತ್ತು. ಆದರೆ 2018 ರಲ್ಲಿ ಮಹಿಳೆಯೊಬ್ಬರು ದೂರು ನೀಡಿದ ನಂತರ ಅವರ ನಡವಳಿಕೆಯ ಬಗ್ಗೆ ತನಿಖೆ ಪ್ರಾರಂಭಿಸಲಾಯಿತು.

    ಡಾ. ಸಿಂಗ್‌ ಒಟ್ಟು 54 ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಂದಿನ ತಿಂಗಳವರೆಗೆ ಶಿಕ್ಷೆಯನ್ನು ಮುಂದೂಡಿದ್ದಾರೆ. ಸಿಂಗ್ ಅವರ ಪಾಸ್‌ಪೋರ್ಟ್ ಒಪ್ಪಿಸುವ ಷರತ್ತಿನ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

  • ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ನಾನು ಅಧಿಕಾರದಲ್ಲಿದ್ದಾಗ ಅಪಾಯಕಾರಿಯಾಗಿರಲಿಲ್ಲ, ಆದ್ರೆ ಈಗ ಆಗಿದ್ದೇನೆ: ಇಮ್ರಾನ್ ಖಾನ್

    ಇಸ್ಲಾಮಾಬಾದ್: ಅಧಿಕಾರದಲ್ಲಿದ್ದಾಗ ನಾನು ಅಪಾಯಕಾರಿ ಆಗಿರಲಿಲ್ಲ. ಆದರೆ ಈಗ ನಾನು ಅಪಾಯಕಾರಿಯಾಗಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದರು.

    ಪಾಕಿಸ್ತಾನದ ಪೇಶಾವರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ತನ್ನ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೊದಲು ಮಧ್ಯರಾತ್ರಿಯಲ್ಲಿ ನ್ಯಾಯಾಲಯಗಳನ್ನು ಏಕೆ ತೆರೆಯಲಾಯಿತು, ನಾನು ಯಾವುದಾದರೂ ಕಾನೂನು ಉಲಂಘಿಸಿದ್ದೇನೆಯೇ ಎಂದು ಪ್ರಶ್ನಿಸಿದ ಅವರು, ನ್ಯಾಯಾಗವು ಸ್ವತಂತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಪ್ರತಿ ಬಾರಿ ನಾಯಕರನ್ನು ಪದಚ್ಯುತಗೊಳಿಸಿದಾಗ ಜನರು ಸಂಭ್ರಮಾಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬೃಹತ್ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು. ಇದನ್ನೂ ಓದಿ: ಗಿಫ್ಟ್‌ ಆಗಿ ಬಂದ ನೆಕ್ಲೆಸ್‌ನ್ನು 18 ಕೋಟಿಗೆ ಮಾರಿದ್ದಕ್ಕೆ ಇಮ್ರಾನ್‌ ಖಾನ್‌ ವಿರುದ್ಧ ತನಿಖೆ

    ಪಾಕಿಸ್ತಾನದಲ್ಲಿ ತನ್ನ ಸರ್ಕಾರವನ್ನು ತೆಗೆದುಹಾಕುವಲ್ಲಿ ವಿದೇಶಿ ರಾಷ್ಟ್ರಗಳು ಭಾಗಿಯಾಗಿದ್ದು, ಅಮೆರಿಕವು ಈ ಡಕಾಯಿತರನ್ನು (ಹೊಸ ಸರ್ಕಾರ) ನಮ್ಮ ಮೇಲೆ ಹೇರುವ ಮೂಲಕ ಪಾಕಿಸ್ತಾನವನ್ನು ಅವಮಾನಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥರಿಗೆ ಅವಮಾನ – ಇಮ್ರಾನ್ ಖಾನ್ ಸಾಮಾಜಿಕ ಮಾಧ್ಯಮ ತಂಡ ಅರೆಸ್ಟ್

  • ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

    ಗುವಾಹಟಿ: ಅಸ್ಸಾಂನ ಹೈಲಕಂಡಿ ಜಿಲ್ಲೆಯ ನ್ಯಾಯಾಲಯವೊಂದು 11 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

    ಹೈಲಕಂಡಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ವಿಶೇಷ ನ್ಯಾಯಾಧೀಶ) ಸಂಜೋಯ್ ಹಜಾರಿಕಾ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅನೈಸರ್ಗಿಕ ಅತ್ಯಾಚಾರ) ಅಡಿಯಲ್ಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20,000 ರೂ. ದಂಡವನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    BRIBE

    ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

    2018ರ ಜೂನ್ 5ರಂದು ಲಾಲಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅಪರಾಧಿ ಆಗ 21 ವರ್ಷ ವಯಸ್ಸಿನವನಾಗಿದ್ದನು. ಅವನು ಇಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ಬಾಲಕನನ್ನು ಲಾಲಾ ರೂರಲ್ ಕಾಲೇಜು ಆವರಣದಲ್ಲಿರುವ ಶೌಚಾಲಯಕ್ಕೆ ಬಲವಂತವಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದನು.

    ನಂತರ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪೊಲೀಸರು ಕಳೆದ ವರ್ಷ ಚಾರ್ಜ್ ಶೀಟ್ ಸಲ್ಲಿಸಿದ್ದರು.

  • ದ್ವೇಷ ಭಾಷಣ ಕೇಸ್‌ – ಅಕ್ಬರುದ್ದೀನ್‌ ಓವೈಸಿ ಖುಲಾಸೆ

    ದ್ವೇಷ ಭಾಷಣ ಕೇಸ್‌ – ಅಕ್ಬರುದ್ದೀನ್‌ ಓವೈಸಿ ಖುಲಾಸೆ

    ಹೈದರಾಬಾದ್‌: ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಎಐಎಂಎಂ ನಾಯಕ ಅಕ್ಬರುದ್ದೀನ್‌ ಓವೈಸಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

    ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ 2012ರ ಡಿಸೆಂಬರ್‌ನಲ್ಲಿ ನಿರ್ಮಲ್ ಮತ್ತು ನಿಜಾಮಾಬಾದ್ ಜಿಲ್ಲೆಯಲ್ಲಿ ಅಕ್ಬರುದ್ದೀನ್‌ ಓವೈಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಾಗಿತ್ತು. ವಾದ, ಪ್ರತಿವಾದ ಆಲಿಸಿದ್ದ ಕೋರ್ಟ್‌ ಇಂದು ತೀರ್ಪು ನೀಡುವುದಾಗಿ ಪ್ರಕಟಿಸಿತ್ತು.

    ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ವಿರುದ್ಧ ಒಂದು ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಐಪಿಸಿಯ ವಿವಿಧ ಸೆಕ್ಷನ್‌ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು.

    ಕೇಸ್‌ ದಾಖಲಾದ ಬಳಿಕ ಬಂಧನಕ್ಕೆ ಒಳಗಾಗಿದ್ದ ಅಕ್ಬರುದ್ದೀನ್‌ ಓವೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ

    ಸಿಐಡಿ ಪೊಲೀಸರು 2016ರಲ್ಲಿ ನಿಜಾಮಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರೆ ಅದೇ ವರ್ಷ ನಿರ್ಮಲ್‌ ಜಿಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ನಿಜಾಮಾಬಾದ್ ಪ್ರಕರಣದಲ್ಲಿ ಒಟ್ಟು 41 ಸಾಕ್ಷಿಗಳು, ನಿರ್ಮಲ್‌ ಪ್ರಕರಣದಲ್ಲಿ 33 ಜನರನ್ನು ವಿಚಾರಣೆ ನಡೆಸಲಾಗಿತ್ತು.

  • 20 ಸಾವಿರ ಲಂಚ – ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ

    20 ಸಾವಿರ ಲಂಚ – ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ

    ಬೆಂಗಳೂರು: ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಚಿಕ್ಕಪೇಟೆ ವಾರ್ಡ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ನಾಗೇಂದ್ರ ಜೈಲು ಶಿಕ್ಷೆಗೆ ಒಳಗಾದ ಅಧಿಕಾರಿ. 2017 ರಲ್ಲಿ 20 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    BRIBE

    ನಾಗೇಂದ್ರ ಬೇಗೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದನು. ಬಿಬಿಎಂಪಿ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ಹಿನ್ನೆಲೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು.

    20 ಸಾವಿರ ಲಂಚ ಪಡೆಯುವಾಗ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಆರೋಪ ಸಾಬೀತಾದ ಹಿನ್ನಲೆ ನ್ಯಾಯಾಲಯವು ನಾಗೇಂದ್ರನಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

  • ತಾಯಿ ಆಗಬೇಕು ಎಂದಿದ್ದಕ್ಕೆ ಆಕೆ ಗಂಡನಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    ತಾಯಿ ಆಗಬೇಕು ಎಂದಿದ್ದಕ್ಕೆ ಆಕೆ ಗಂಡನಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    ಜೈಪುರ್: ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ರಾಜಸ್ಥಾನ ಹೈಕೋರ್ಟ್ 15 ದಿನಗಳ ಪೆರೋಲ್ (ತಾತ್ಕಾಲಿಕ ಬಿಡುಗಡೆ) ನೀಡಿದೆ. ಈ ಪರೋಲ್ ಒಬ್ಬ ಹೆಣ್ಣಿನ ತಾಯ್ತನಕ್ಕೆ ಕೋರ್ಟ್ ಕೊಟ್ಟ ಗೌರವ ಎನ್ನುವುದು ಮೆಚ್ಚುಗೆಯ ಸಂಗತಿಯಾಗಿದೆ.

    ಒಬ್ಬ ಹೆಣ್ಣಿನ ತಾಯ್ತನಕ್ಕೆ ಕೋರ್ಟ್ ಕೊಟ್ಟ ಗೌರವ: ತನ್ನ ಆದೇಶದಲ್ಲಿ ನ್ಯಾಯಾಲಯವು ಧಾರ್ಮಿಕ ಪಠ್ಯಗಳನ್ನು ಉಲ್ಲೇಖಿಸಿದೆ. ವಿವಾಹಿತ ಮಹಿಳೆಗೆ, ಹೆಣ್ತನವನ್ನು ಪೂರ್ಣಗೊಳಿಸಲು ಮಗುವಿಗೆ ಜನ್ಮ ನೀಡುವ ಅಗತ್ಯವಿದೆ ಎಂದು ಗಮನಿಸಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಫಜರ್ಂದ್ ಅಲಿ ಅವರಿದ್ದ ದ್ವಿಪೀಠವು ಏಪ್ರಿಲ್ 5 ರಂದು ಅಜ್ಮೀರ್‍ನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭಿಲ್ವಾರಾ ಜಿಲ್ಲೆಯ ನಿವಾಸಿ ನಂದ್ ಲಾಲ್ (34)ಗೆ ಪೆರೋಲ್ ನೀಡಿದೆ.

    ಕೋರ್ಟ್ ಹೇಳಿದ್ದೇನು?: ಅಪರಾಧಿ-ಕೈದಿ ವಿವಾಹಿತನಾಗಿದ್ದಾನೆ. ದಂಪತಿ ತಮ್ಮ ಮದುವೆಯಾದಾಗಿನಿಂದ ಇಲ್ಲಿಯವರೆಗೆ ಅವರ ವಿವಾಹದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸಂತತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಧಾರ್ಮಿಕ ತತ್ವಗಳು, ಭಾರತೀಯ ಸಂಸ್ಕೃತಿ ಮತ್ತು ವಿವಿಧ ನ್ಯಾಯಾಂಗ ಘೋಷಣೆಗಳ ಮೂಲಕ ಗುರುತಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ

    ಅಪರಾಧಿಯ ಹಕ್ಕಿಗೆ ಸಂಬಂಧಿಸಿದಂತೆ, ಹಿಂದೂ ತತ್ತ್ವಶಾಸ್ತ್ರದೊಂದಿಗೆ ಅದೇ ಸಂಪರ್ಕವನ್ನು ಕಲ್ಪಿಸುತ್ತದೆ. ನಾಲ್ಕು ಪುರುಷಾರ್ಥಗಳಿವೆ, ಮಾನವ ಅನ್ವೇಷಣೆಯ ವಸ್ತು, ಇದು ನಾಲ್ಕು ಸರಿಯಾದ ಗುರಿಗಳು ಅಥವಾ ಮಾನವ ಜೀವನದ ಗುರಿಗಳನ್ನು ಉಲ್ಲೇಖಿಸುತ್ತದೆ. ನಾಲ್ಕು ಪುರುಷಾರ್ಥಗಳು ಧರ್ಮ (ಸದಾಚಾರ, ನೈತಿಕ ಮೌಲ್ಯಗಳು) ಅರ್ಥ (ಸಮೃದ್ಧಿ, ಆರ್ಥಿಕ ಮೌಲ್ಯಗಳು), ಕಾಮ (ಆನಂದ, ಪ್ರೀತಿ, ಮಾನಸಿಕ ಮೌಲ್ಯಗಳು) ಮತ್ತು ಮೋಕ್ಷ (ವಿಮೋಚನೆ, ಆಧ್ಯಾತ್ಮಿಕ ಮೌಲ್ಯಗಳು, ಸ್ವಯಂ ವಾಸ್ತವೀಕರಣ) ಎಂದು ನ್ಯಾಯಾಲಯ ಹೇಳಿದೆ.

    ಒಬ್ಬ ಅಪರಾಧಿ ಜೈಲಿನಲ್ಲಿ ಬದುಕಲು ನರಳುತ್ತಿರುವಾಗ, ಅವನು ಅವಳ ಮೇಲೆ ತಿಳಿಸಲಾದ ಪುರುಷಾರ್ಥಗಳನ್ನು ನಿರ್ವಹಿಸಲು ವಂಚಿತನಾಗುತ್ತಾನೆ. ಅವುಗಳಲ್ಲಿ ಮೂರು ನಾಲ್ಕು ಪುರುಷಾರ್ಥಗಳು, ಅಂದರೆ ಧರ್ಮ, ಅರ್ಥ ಮತ್ತು ಮೋಕ್ಷಗಳನ್ನು ಏಕಾಂಗಿಯಾಗಿ ನಿರ್ವಹಿಸಬೇಕು. ನಾಲ್ಕನೇ ಪುರುಷಾರ್ಥವನ್ನು ನಿರ್ವಹಿಸಲು, ಅನುಸರಿಸಲು, ಅಪರಾಧಿಯು ಅವನು, ಅವಳು ಮದುವೆಯಾಗಿದ್ದರೆ ಅವನ, ಅವಳ ಸಂಗಾತಿಯ ಮೇಲೆ ಅವಲಂಬಿತನಾಗಿರುತ್ತಾನೆ.

    ಅಪರಾಧಿಯ ಸಂಗಾತಿ ತಾಯಿಯಾಗಲು ಬಯಸಿದರೆ, ವಿವಾಹಿತ ಮಹಿಳೆಗೆ ರಾಜ್ಯದ ಜವಾಬ್ದಾರಿಯು ಹೆಚ್ಚು ಮುಖ್ಯವಾಗಿದೆ. ಹೆಣ್ತನವನ್ನು ಪೂರ್ಣಗೊಳಿಸಲು ಮಗುವಿಗೆ ಜನ್ಮ ನೀಡುವ ಅಗತ್ಯವಿದೆ. ಅವಳು ತಾಯಿಯಾದ ಮೇಲೆ ಅವಳ ಹೆಣ್ತನ ಮತ್ತಷ್ಟು ಹೆಚ್ಚುತ್ತದೆ. ಆಕೆಯ ಇಮೇಜ್ ವೈಭವೀಕರಿಸುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಚ್ಚು ಗೌರವವನ್ನು ಪಡೆಯುತ್ತಾರೆ ಎಂದು ನ್ಯಾಯಾಲಯದ ಅಭಿಪ್ರಾಯಪಟ್ಟಿದೆ.

  • ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್

    ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್

    ನವದೆಹಲಿ: ಜನಕಲ್ಯಾಣ ಯೋಜನೆ ಅಥವಾ ಕಾನೂನುಗಳನ್ನು ರೂಪಿಸುವಾಗ ಸರ್ಕಾರಗಳು ರಾಜ್ಯದ ಬೊಕ್ಕಸದ ಮೇಲೆ ಬೀರಬಹುದಾದ ಆರ್ಥಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಯೋಜನೆಗಳಿಗೆ ಬಜೆಟ್ ಅನುದಾನವನ್ನು ಮಿತಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

    ಈ ವಿಚಾರದಲ್ಲಿ ದೂರದೃಷ್ಟಿ ಇಲ್ಲದೇ ಇರುವುದಕ್ಕೆ ಉತ್ತಮ ಉದಾಹರಣೆ ಶಿಕ್ಷಣ ಹಕ್ಕು ಕಾಯ್ದೆ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಶಿಕ್ಷಣದ ಹಕ್ಕು ಒಳ್ಳೆಯ ಉದಾಹರಣೆ ಕಾಯ್ದೆಯಾಗಿ ರೂಪಿಸಲಾಗಿದೆ. ಆದರೆ ಶಾಲೆಗಳು ಎಲ್ಲಿವೆ? ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಎಲ್ಲಿಂದ ದೊರೆಯಬೇಕು? ಸಿಬ್ಬಂದಿಯನ್ನು ರೂಪಿಸುವುದು ಹೇಗೆ? ಎಂಬುದನ್ನೂ ತಿಳಿದಕೊಳ್ಳಬೇಕು ಕಿವಿಮಾತು ಹೇಳಿದೆ. ಇದನ್ನೂ ಓದಿ: ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    VIDHANASAUDHA

    ಇದನ್ನು ಇಡಿಯಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಇದು ಕೇವಲ ಬಾಯಿಮಾತಿನ ಕೆಲಸವಾಗುತ್ತದೆ ಎಂದು ಲಲಿತ್ ಸಲಹೆ ನೀಡಿದ್ದಾರೆ. ಕೆಲವು ರಾಜ್ಯಗಳಲ್ಲಿ, ರಾಜ್ಯದ ಭೌಗೋಳಿಕ ಪ್ರಸರಣ ಮತ್ತು ವಿಶಾಲತೆಗೆ ಹೋಲಿಸಿದರೆ ರಕ್ಷಣಾ ಅಧಿಕಾರಿಗಳ ಸಂಖ್ಯೆಯು ಕಡಿಮೆಯಾಗಿದೆ. ಹಾಗಾಗಿ ಮೊದಲು, ದತ್ತಾಂಶವನ್ನು ಪಡೆದುಕೊಳ್ಳಬೇಕು. ನಂತರ ರಾಜ್ಯಕ್ಕೆ ಎಷ್ಟು ಸಿಬ್ಬಂದಿ ಅಗತ್ಯವಿದೆ? ಎಂಬ ಅಂಕಿ-ಅಂಶಗಳನ್ನು ಅಭಿವೃದ್ಧಿಪಡಿಸಬೇಕು. ನಂತರ ಅವರಿಗೆ ಮಾದರಿಗಳನ್ನು ನೀಡಿ ಅಗತ್ಯವಿರುವ ಹಣವನ್ನು ನೀಡಬೇಕು ಎಂದು ನ್ಯಾಯಮೂರ್ತಿ ಭಟ್ ವಿವರಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ, ವೋಟರ್‌ ಐಡಿ, ಆಧಾರ್‌ ನೀಡಿ: ಸುಪ್ರೀಂ ಕೋರ್ಟ್‌

    ಅಲ್ಲದೆ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರಿಗೆ ಪರಿಣಾಮಕಾರಿ ಕಾನೂನು ನೆರವು ನೀಡಲು ದೇಶಾದ್ಯಂತ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ರೂಪಿಸಲಾಗಿದ್ದು, ಇದರ ಅಡಿಯಲ್ಲಿ ಒದಗಿಸಲಾದ ಮೂಲಸೌಕರ್ಯದ ಕೊರತೆ ನೀಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕಾಯ್ದೆ ಅಡಿಯಲ್ಲಿ ಸಲ್ಲಿಸಿದ್ದ ಮಹಿಳೆಯರು ವಾಸಿಸಲು ರಕ್ಷಣಾ ಗೃಹಗಳನ್ನು ನಿರ್ಮಾಣ ಮಾಡಿಕೊಡುವಂತೆ ಕೋರಿದ್ದರು.