Tag: court

  • ಹೊಳೆನರಸೀಪುರ‌ ರೇಪ್ ಕೇಸ್ – 2ನೇ ಬಾರಿಯೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಹೊಳೆನರಸೀಪುರ‌ ರೇಪ್ ಕೇಸ್ – 2ನೇ ಬಾರಿಯೂ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

    ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಹೊಳೆನರಸೀಪುರ (Holenarasipura) ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಜಾಮೀನು ಅರ್ಜಿ ವಜಾಗೊಂಡಿದೆ.

    ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಸೂಚನೆ ಮೇರೆಗೆ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್‌ ರೇವಣ್ಣ

    ಈ ಪ್ರಕರಣದಲ್ಲಿ  ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ ಮೊದಲ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಬಳಿಕ ಪ್ರಜ್ವಲ್‌ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಪ್ರಜ್ವಲ್‌ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಅತ್ಯಾಚಾರ ಕೇಸ್‌- ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಜಾ

  • ಮಾತುಕತೆಗೆ ಕರೆಸಿ ಸಿನಿಮಾ ಸ್ಟೈಲ್‌ಲ್ಲಿ ಗನ್ ತೋರಿಸಿ ಕಿಡ್ನ್ಯಾಪ್ – ಲಾಯರ್ & ಗ್ಯಾಂಗ್‍ನಿಂದ ಕೃತ್ಯ!

    ಮಾತುಕತೆಗೆ ಕರೆಸಿ ಸಿನಿಮಾ ಸ್ಟೈಲ್‌ಲ್ಲಿ ಗನ್ ತೋರಿಸಿ ಕಿಡ್ನ್ಯಾಪ್ – ಲಾಯರ್ & ಗ್ಯಾಂಗ್‍ನಿಂದ ಕೃತ್ಯ!

    ಬೆಂಗಳೂರು: ಗನ್ ತೋರಿಸಿ ಸಿನಿಮಾ ಸ್ಟೈಲ್‍ನಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ (Kidnap) ಮಾಡಿದ ಘಟನೆ ಆನೇಕಲ್ (Anekal) ಕೋರ್ಟ್ (Court) ಬಳಿ ನಡೆದಿದೆ.

    ವಾಬಸಂದ್ರ ನಿವಾಸಿ ಶ್ರೀನಿಧಿ (29) ಕಿಡ್ನ್ಯಾಪ್ ಆದ ವ್ಯಕ್ತಿ. ಆನೇಕಲ್ ಕೋರ್ಟ್ ಬಳಿಯ ವಕೀಲ ನಂದೀಶ್ ಕಛೇರಿ ಬಳಿ ಅಪಹರಣವಾಗಿದೆ. ಜು.4 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಆಸ್ತಿ ವಿವಾದ ಸಂಬಂಧ ಮಾತುಕತೆಗೆ ವಕೀಲ ನಂದೀಶ್, ಶ್ರೀನಿಧಿಯವರನ್ನು ಕರೆಸಿದ್ದರು. ಮಾತುಕತೆ ಮುಗಿಸಿ ಹೊರ ಬರುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿ ಅವರನ್ನು ಅಪಹರಿಸಲಾಗಿತ್ತು. ಅಪಹರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌ – 6 ಮಾವೋವಾದಿಗಳ ಹತ್ಯೆ

    ಕಣ್ಣಿಗೆ ಬಟ್ಟೆ ಕಟ್ಟಿ ಬಡಾವಣೆಯೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಅಲ್ಲದೇ ಗನ್ ತೋರಿಸಿ ನಿನ್ನ ಜಮೀನನ್ನು ಪದ್ಮನಾಭ ರಾವ್‍ಗೆ ರಿಜಿಸ್ಟರ್ ಮಾಡಬೇಕು. ಇಲ್ಲದಿದ್ದರೆ ನಿನ್ನ ಮತ್ತು ತಂದೆ ರಾಮಣ್ಣನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಜೀವ ಭಯದಿಂದ ರಿಜಿಸ್ಟರ್ ಮಾಡಿಕೊಡಲು ಒಪ್ಪಿಕೊಂಡಿದ್ದರು. ಇತ್ತ ಸರ್ಜಾಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ತನ್ನದೇ ಅಕೌಂಟ್ ನಿಂದ ಹಣ ಪಾವತಿಸಿ ವಕೀಲ ನಂದೀಶ್ ರಿಜಿಸ್ಟರ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದ.

    ತನ್ನ ಮೇಲ್ ಐಡಿಯಿಂದ ದಾಖಲೆಗಳನ್ನು ಅಪ್ಲೋಡ್ ಮಾಡಿ, ಕಿಡ್ನ್ಯಾಪರ್ಸ್‍ಗಾಗಿ ನಂದೀಶ್ & ಗ್ಯಾಂಗ್ ಕಾಯುತ್ತಿತ್ತು. ಶ್ರೀನಿಧಿಯವರನ್ನು ಕರೆತರುತ್ತಿದ್ದಂತೆ ತುಟಿ ಬಿಚ್ಚದೇ ಜಮೀನು ರಿಜಿಸ್ಟರ್ ಮಾಡುವಂತೆ ತಾಕೀತು ಮಾಡಿದ್ದರು. ಸಬ್ ರಿಜಿಸ್ಟರ್ ಒಳ ಹೋಗುತ್ತಿದ್ದಂತೆ ಕ್ಲರ್ಕ್ ಕೊಠಡಿಗೆ ಹೋಗಿ ನನ್ನನ್ನು ಕಿಡ್ನಾಪ್ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಎಂದು ಶ್ರಿನಿಧಿ ಕಿರುಚಾಡಿದ್ದಾರೆ.

    ಪೊಲೀಸರು ಬರುತ್ತಿದ್ದಂತೆ ವಕೀಲ ನಂದೀಶ್ & ಗ್ಯಾಂಗ್ ಪರಾರಿಯಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪ್ರವಾಸಿ ಬಸ್‌ ಪಲ್ಟಿ – 25 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

  • ‌ಕೇರಳ | ಅಪ್ರಾಪ್ತ ಮಗಳ ಮೇಲೆ 3 ವರ್ಷ ನಿರಂತರ ಲೈಂಗಿಕ ದೌರ್ಜನ್ಯ – ಪಾಪಿಗೆ 3 ಜೀವಾವಧಿ ಶಿಕ್ಷೆ

    ‌ಕೇರಳ | ಅಪ್ರಾಪ್ತ ಮಗಳ ಮೇಲೆ 3 ವರ್ಷ ನಿರಂತರ ಲೈಂಗಿಕ ದೌರ್ಜನ್ಯ – ಪಾಪಿಗೆ 3 ಜೀವಾವಧಿ ಶಿಕ್ಷೆ

    ತಿರುವನಂತಪುರಂ: ತನ್ನ ಅಪ್ರಾಪ್ತ ಮಗಳ ಮೇಲೆ 5 ವರ್ಷದವಳಿದ್ದಾಗಿನಿಂದ 8 ವರ್ಷದ ತನಕ ಸತತ ಮೂರು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಕೇರಳದ ಇಡುಕ್ಕಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ. ಅದರ ಜೊತೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಕರಿಮನೂರ್ ಬಳಿಯ ಬಾಡಿಗೆ ಮನೆಯಲ್ಲಿದ್ದಾಗ ಅಪರಾಧಿ ಈ ಕೃತ್ಯ ಎಸಗಿದ್ದ. 2020 ರಲ್ಲಿ ಈ ಕೃತ್ಯ ಬೆಳಕಿಗೆ ಬಂದಿತ್ತು. ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗೆ ಕರೆತಂದಾಗ, ತಂದೆಯ ಕೃತ್ಯಗಳಿಂದ ನನಗೆ ಈ ಸಮಸ್ಯೆ ಆಗಿದೆಯೇ ಎಂದು ತಾಯಿಯ ಬಳಿ ಪ್ರಶ್ನಿಸಿತ್ತು. ಏನಾಯಿತು ಎಂದು ತಾಯಿ ವಿವರವಾಗಿ ಕೇಳಿದ ನಂತರ ಮತ್ತು ನಂತರದ ಕೌನ್ಸೆಲಿಂಗ್ ಸಮಯದಲ್ಲಿ ಮಗು ತನ್ನ ತಂದೆಯ ಕೃತ್ಯವನ್ನು ಹೇಳಿತ್ತು. ಇದನ್ನೂ ಓದಿ: ಹೆಚ್‍ಡಿಕೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ತಡೆ

     

    ಬಳಿಕ ಕರಿಮನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ 3 ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಶಿಜೋಮನ್ ಜೋಸೆಫ್, ಅಪರಾಧಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಅಪರಾಧಿಗೆ ವಿಧಿಸಿದ ದಂಡವನ್ನು ದೌರ್ಜನ್ಯಕ್ಕೊಳಗಾದ ಬಾಲಕಿಗೆ ಕೊಡಬೇಕು. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಬೇಲ್‌ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ

  • ಹೆಚ್‍ಡಿಕೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ತಡೆ

    ಹೆಚ್‍ಡಿಕೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ತಡೆ

    ನವದೆಹಲಿ: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ವಿಚಾರವಾಗಿ (Kethaganahalli Land Grab Case) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಮುಂದಿನ ಆದೇಶದವರೆಗೂ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಇದನ್ನೂ ಓದಿ: ʻಕೈʼ ಶಾಸಕ ನಂಜೇಗೌಡಗೆ ಬಿಗ್ ಶಾಕ್ – ಇ.ಡಿಯಿಂದ ಆಸ್ತಿ ಮುಟ್ಟುಗೋಲು

    ಪೀಠವು ಸಮಾಜ ಪರಿವರ್ತನ ಸಮುದಾಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಲೋಕಾಯುಕ್ತ ತನಿಖೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ನ್ಯಾಯಾಂಗ ನಿಂದನೆ ವಿಚಾರಣೆ ಮುಂದುವರಿಸುವುದರ ಹಿಂದಿನ ತಾರ್ಕಿಕತೆಯನ್ನು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿದೆ. ಹೆಚ್‍ಡಿಕೆ ಮತ್ತು ಅವರ ಸಂಬಂಧಿಗಳು ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು 2020ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿಗೊಳಿಸಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‍ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗಲು ಕುಮಾರಸ್ವಾಮಿಐವರಿಗೆ ಅನುಮತಿ ನೀಡಿತ್ತು.

    ಇದೇ ವೇಳೆ, ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದ್ದರು. ನ್ಯಾಯಾಂಗ ನಿಂದನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಅವರು ಹೈಕೋರ್ಟ್‍ಗೆ ಮನವಿ ಮಾಡಿದ್ದರು. ಮಾ.27ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು.

    ಕೇತಗಾನಗಳ್ಳಿಯ ವಿವಿಧ ಸರ್ವೇ ನಂಬರ್‍ಗಳನ್ನು ಒಳಗೊಂಡ 14 ಎಕರೆ ಜಮೀನಿನ ಮಾಲೀಕತ್ವದ ಕುರಿತಂತೆ ವಿಚಾರಣೆ ನಡೆಸಲು ಐಎಎಸ್ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ 2025ರ ಜನವರಿ 28ರಂದು ಎಸ್‍ಐಟಿ ರಚಿಸಿ ಆದೇಶಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿಗರಿಗೆ ಸರ್ಕಾರ ಗುಡ್‌ ನ್ಯೂಸ್‌ – ಎ ಖಾತಾದಂತೆ ಬಿ ಖಾತೆಗಳಿಗೂ ಅಧಿಕೃತ ಮಾನ್ಯತೆ

  • ತುಳಸಿ ಗಿಡಕ್ಕೆ ನೀರು ಹಾಕಿ ದರ್ಶನ್‌ ನಮಸ್ಕಾರ

    ತುಳಸಿ ಗಿಡಕ್ಕೆ ನೀರು ಹಾಕಿ ದರ್ಶನ್‌ ನಮಸ್ಕಾರ

    ಸಾಮಾನ್ಯವಾಗಿ ಮಹಿಳೆಯರು ತುಳಸಿಗೆ ನೀರು ಹಾಕಿ ಪೂಜೆ (Tulasi Pooja) ಮಾಡೋ ಪದ್ಧತಿ ಫಾಲೋ ಮಾಡ್ತಾರೆ. ಪುರುಷರು ತುಳಸಿಗೆ ನೀರು ಹಾಕುವುದು ವಿರಳ. ಆದರೆ ದರ್ಶನ್ (Darshan) ಇಂದು ಮನೆಯ ಮುಂದಿರುವ ತುಳಸಿ ಗಿಡಕ್ಕೆ ದರ್ಶನ್ ನೀರೆರೆದು ಕೈಮುಗಿದಿದ್ದಾರೆ.

    ಮನೆಯ ಮುಂದೆ ತುಳಸಿ ಗಿಡ ಬೆಳೆಸುವುದು ವಾಡಿಕೆ. ಅದರಂತೆ ದರ್ಶನ್ ಅವರ ಬೆಂಗಳೂರಿನ ಆರ್ ಆರ್ ನಗರ ನಿವಾಸದ ಬಾಗಿಲ ಮುಂದೆಯೇ ಬೃಹತ್ ತುಳಸಿ ಕಟ್ಟೆ ಇದೆ. ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ದರ್ಶನ್ ಮನೆಯಿಂದ ಹೊರಡುವ ಮೊದಲು ಮನೆಯ ನೀರತುಂಬಿದ ಲೋಟ ಹಿಡಿದು ಮುಖ್ಯ ದ್ವಾರದಿಂದ ಹೊರಬಂದು ತುಳಸಿಗಿಡಕ್ಕೆ ನೀರು ಹಾಕಿದ್ದಾರೆ. ಮನೆಯ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ಹೊರಬಂದು ಅಭಿಮಾನಿಗಳನ್ನ ಭೇಟಿಯಾಗಿ ಕೋರ್ಟ್‌ನತ್ತ ಸಾಗಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

     

    ಪ್ರತಿನಿತ್ಯ ಕೆಲವರು ಬೆಳಗ್ಗೆ ತುಳಸಿಗೆ ನೀರು ಹಾಕುವ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತಾರೆ. ಅದರಂತೆ ದರ್ಶನ್ ಕೂಡ ನೀರು ಹಾಕಿ ಕೈ ಮುಗಿಯುತ್ತಾರೆ ಎನ್ನಲಾಗುತ್ತೆ. ಅದರಲ್ಲೂ ಗುರುವಾರ ತುಳಸಿಗೆ ಪೂಜೆ ಮಾಡಿದರೆ ವಿಶೇಷ ಫಲಗಳು ದೊರಕುತ್ತವೆ ಎಂಬ ನಂಬಿಕೆ ಇದೆ. ಅದರಂತೆ ಗುರುವಾರ ತುಳಿಸಿಗೆ ಪೂಜೆ ಮಾಡುವಾಗಲೇ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಇದನ್ನೂ ಓದಿ: ಹೆಣ್ಣು ಯಾವ ಬಟ್ಟೆ ಹಾಕ್ಬೇಕು, ಹೇಗೆ ತಾಯಿ ಆಗ್ಬೇಕು ಅನ್ನೋದು ಅವಳ ಆಯ್ಕೆ ಭಾವನರನ್ನು ಬೆಂಬಲಿಸಿದ ರಾಗಿಣಿ

  • ಪತ್ನಿಯನ್ನು ಕೊಂದು ಬಸ್‌ನಲ್ಲಿ ಪಾರ್ಸೆಲ್‌ – 20 ವರ್ಷ ತಲೆಮರೆಸಿಕೊಂಡಿದ್ದವನಿಗೆ ಜೀವಾವಧಿ ಶಿಕ್ಷೆ

    ಪತ್ನಿಯನ್ನು ಕೊಂದು ಬಸ್‌ನಲ್ಲಿ ಪಾರ್ಸೆಲ್‌ – 20 ವರ್ಷ ತಲೆಮರೆಸಿಕೊಂಡಿದ್ದವನಿಗೆ ಜೀವಾವಧಿ ಶಿಕ್ಷೆ

    ಕೊಪ್ಪಳ: ಪತ್ನಿಯನ್ನು (Wife) ಕೊಲೆ ಮಾಡಿ 20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿಗೆ ನ್ಯಾಯಾಲಯ (Court) ಜೀವಾವಧಿ ಶಿಕ್ಷೆ ವಿಧಿಸಿದೆ.

    ಅಪರಾಧಿ ಹನುಮಂತ 2002 ರಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿ ಆಕೆಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ. ಆತನನ್ನು ಗಂಗಾವತಿ (Gangavati) ನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: 3ನೇ ಪತ್ನಿಯ ಹತ್ಯೆಗೈದು ಗೋಣಿ ಚೀಲದಲ್ಲಿ ಪ್ಯಾಕ್ – ಲಗೇಜ್ ಎಂದು ಸರ್ಕಾರಿ ಬಸ್ಸಲ್ಲಿ ಕಳುಹಿಸಿದ್ದವ 24 ವರ್ಷಗಳ ಬಳಿಕ ಅರೆಸ್ಟ್

    ಏನಿದು ಪ್ರಕರಣ?
    ಹನುಮಂತ ಪತ್ನಿಯ ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮೃತದೇಹವನ್ನು ಚೀಲದಲ್ಲಿ ತುಂಬಿ ಕಂಪ್ಲಿಗೆ ಹೋಗುವ ಸಾರಿಗೆ ಬಸನಲ್ಲಿ ಲಗೇಜು ಎಂದು ಹಾಕಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ಬಸ್ ನಿರ್ವಾಹಕ ಚೀಲದಲ್ಲಿ ಮೃತದೇಹ ಇರುವುದು ಕಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಡುಕಾಟ ನಡೆಸಿದ ಪೊಲೀಸರು 20 ವರ್ಷಗಳ ನಂತರ ರಾಯಚೂರ ಜಿಲ್ಲೆಯ ಸಿರವಾರ್ ತಾಲೂಕಿನ ಆತನೂರ ಗ್ರಾಮದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದರು. ವಿಚಾರಣೆಗೆ ಹಾಜರುಪಡಿಸಿದ್ದ ವೇಳೆ ಅಪರಾಧಿ ಎಂದು ಪರಿಗಣಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿದೆ. ಇದನ್ನೂ ಓದಿ: ಕೆಆರ್‌ಎಸ್ ಬಳಿ ಮನರಂಜನಾ ಪಾರ್ಕ್ ಕಾಮಗಾರಿ – ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

  • ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕರಾದ ಧರ್ಮರಾಜ್ ಚಡಚಣ ಹಾಗೂ ಆತನ ಸಹೋದರ ಗಂಗಾಧರನ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ವಿಜಯಪುರ (Vijayapura) ಜಿಲ್ಲಾ ನ್ಯಾಯಾಲಯ ಜು.1ಕ್ಕೆ ಮುಂದೂಡಿದೆ.

    ಸೋಮವಾರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಆರೋಪಿಗಳಾದ ಮಹಾದೇವ ಭೈರಗೊಂಡ ಹಾಗೂ ಇತರೆ 16 ಜನರು ಹಾಜರಿದ್ದರು.ಇದನ್ನೂ ಓದಿ: 2028ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ: ಲಕ್ಷ್ಮಣ್ ಸವದಿ

    ಹಂತಕ ಧರ್ಮರಾಜ್ ನಕಲಿ ಎನ್‌ಕೌಂಟರ್ ನಡೆಸಿದ್ದು, ಆಗಿನ ಚಡಚಣ ಪಿಎಸ್‌ಐ ಆಗಿ ಇದೇ ಗೋಪಾಲ್ ಹಳ್ಳೂರ್ ಕಾರ್ಯನಿರ್ವಹಿಸುತ್ತಿದ್ದರು. ಈ ಇಬ್ಬರು ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದಾರೆ. ಈ ಇಬ್ಬರು ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಜು.1ಕ್ಕೆ ಮುಂದೂಡಿದರು. ಭೀಮಾತೀರದ ನಟೋರಿಯಸ್‌ಗಳ ವಿಚಾರಣೆ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿತ್ತು.ಇದನ್ನೂ ಓದಿ: ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

  • ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್

    ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್

    ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ (Darshan) ವಿದೇಶಕ್ಕೆ ತೆರಳಲು 57ನೇ ಸಿಸಿಹೆಚ್ ಕೋರ್ಟ್ ಅನುಮತಿ ನೀಡಿದೆ.

    ಜೂನ್ 1ರಿಂದ 25ರವರೆಗೆ ವಿದೇಶದಲ್ಲಿ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ನಟ ದರ್ಶನ್ 57ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಡೆವಿಲ್ (Devil) ಸಿನಿಮಾದ ಶೂಟಿಂಗ್‌ಗೆ ದುಬೈ ಮತ್ತು ಯೂರೋಪ್ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?

    ಮೇ 28ರಂದು ಕೋರ್ಟ್ ವಿಚಾರಣೆಯಲ್ಲಿ ದರ್ಶನ್ ವಿದೇಶಕ್ಕೆ ತೆರಳಿದರೆ ಭಾರತಕ್ಕೆ ಮತ್ತೆ ವಾಪಸ್ ಬರುವುದು ಅನುಮಾನ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ವಿದೇಶಕ್ಕೆ ತೆರಳಲು ಅನುಮತಿ ನೀಡದಂತೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಆಕ್ಷೇಪಣೆ ಸಲ್ಲಿಸಿದ್ದರು. ಇದನ್ನೂ ಓದಿ: ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನತ್ತ ಸಂಜನಾ ಆನಂದ್

    ನ್ಯಾಯಾಧೀಶ ಐ ಪಿ ನಾಯ್ಕ್ ಅವರು ವಾದ-ಪ್ರತಿವಾದ ಆಲಿಸಿ ಮೇ 30ಕ್ಕೆ ಆದೇಶ ಕಾಯ್ದಿರಿಸಿದ್ದರು. ಇದೀಗ ನ್ಯಾಯಾಧೀಶರು, ದರ್ಶನ್‌ಗೆ ಜೂನ್ 1ರಿಂದ 25ರವರೆಗೆ ಡೆವಿಲ್ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಿದ್ದಾರೆ.

  • ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

    ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

    ಬೆಂಗಳೂರು/ಮೈಸೂರು: ಕಾನೂನು ಬಾಹಿರವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಿದ್ದಕ್ಕೆ ನಟ ದರ್ಶನ್‌ (Darshan) ಮತ್ತು ವಿಜಯಲಕ್ಷ್ಮಿ (Vijayalakshmi) ವಿರುದ್ಧ ದೂರು ದಾಖಲಾಗಿದ್ದು ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

    ನಿಷೇಧಿತ ಬಾತುಕೋಳಿಗಳನ್ನ ಕೂಡಿಹಾಕಿದ ಆರೋಪದ ಆಡಿ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು.

    ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯ ವಿಜಯಲಕ್ಷ್ಮೀ ಮಾಲೀಕತ್ವದ ಜಾಗದಲ್ಲಿರುವ ತೂಗುದೀಪ ಫಾರಂ ಹೌಸ್‌ನಲ್ಲಿ ಅಕ್ರಮವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

    ಬೆಳಕಿಗೆ ಬಂದಿದ್ದು ಹೇಗೆ?
    ದರ್ಶನ್‌ ಅವರು ಯೂಟ್ಯೂಬ್‌ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಫಾರಂ ಹೌಸ್‌ನಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಿಸಿದ್ದರು. ಮಂಗೋಲಿಯಾ, ರಷ್ಯಾ, ಚೀನಾದಲ್ಲಿ ಕಾಣಿಸಿಕೊಳ್ಳುವ Bar-headed goose ಬಾತುಕೋಳಿಯ ಬಗ್ಗೆ ದರ್ಶನ್‌ ಮಾತನಾಡಿದ್ದರು. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌

    ಸಂದರ್ಶನ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ಚರ್ಚೆಗೆ ಕಾರಣವಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್‌ ಮೇಲೆ ದಾಳಿ ನಡೆಸಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಬಳಿಕ ವರದಿ ಸಮೇತ ಖಾಸಗಿ ದೂರು ನೀಡಿದ್ದರು.

    ಬಾರ್‌ ಹೆಡೆಡ್‌ ಗೂಸ್‌ ಬಾತುಕೋಳಿಗಳು – ಸಾಂದರ್ಭಿಕ ಚಿತ್ರ

    ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಕಾರಣ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಜುಲೈ 4 ರಂದು ದರ್ಶನ್‌, ವಿಜಯಲಕ್ಷ್ಮಿ ಮತ್ತು ನಾಗರಾಜ್‌ಗೆ ಖದ್ದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಇದನ್ನೂ ಓದಿ: ‘ಮುದ್ದು ರಾಕ್ಷಸಿ’ ಹಾಡಿಗೆ ಪತ್ನಿ ಕೈಹಿಡಿದು ದರ್ಶನ್ ರೊಮ್ಯಾಂಟಿಕ್ ಡ್ಯಾನ್ಸ್

    ದಾಳಿ ವೇಳೆ ಬಾರ್‌ ಹೆಡೆಡ್‌ ಗೂಸ್‌ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು ವಲಸೆ ಬಂದಿದ್ದವು. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವಾಗಿದೆ. ಅರಣ್ಯ ಅಧಿಕಾರಿಗಳು ಪ್ರಶ್ನಿಸಿದಾಗ ಈ ಬಾತುಕೋಳಿಗಳನ್ನು ಸ್ನೇಹಿತರು ನೀಡಿದ್ದರು ಎಂಬ ಉತ್ತರ ದರ್ಶನ್‌ ಕಡೆಯಿಂದ ಬಂದಿತ್ತು.

  • ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    – ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾರಾವ್‌ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ranya rao 4

    ಜೊತೆಗೆ ಪ್ರಕರಣದ 2ನೇ ಆರೋಪಿ ತರುಣ್‌ ಕೊಂಡರಾಜುಗೂ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ. 60 ದಿನ ಕಳೆದರೂ ಡಿಆರ್‌ಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

    ranya rao 6

     ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಅಲ್ಲದೇ ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದಂತೆ ಹಾಗೂ ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದೆ. ರನ್ಯಾರಾವ್ ಪರವಾಗಿ ವಕೀಲ ಗಿರೀಶ್ ವಾದ ಮಂಡಿಸಿದರು.

    ಆದ್ರೆ, ರನ್ಯಾರಾವ್ ಜಾಮೀನು ಪಡೆದುಕೊಂಡ್ರು ಕೂಡ ಬಿಡುಗಡೆಯ ಭಾಗ್ಯ ಇಲ್ಲ. ಕಾಫೆಪೋಸಾ ಹಾಕಿರೋ ಹಿನ್ನೆಲೆಯಲ್ಲಿ ರನ್ಯಾ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

    12 ಕೋಟಿ ರೂ. ಮೌಲ್ಯದ 14 ಕೆ.ಜಿ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ (Bengaluru) ತಂದು ನಟಿ ರನ್ಯಾ ರಾವ್‌ ಬಂಧನಕ್ಕೆ ಒಳಗಾಗಿದ್ದರು. ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ತಿಸ್ಕರಿಸಿತ್ತು.